ಪುಟ:Mysore-University-Encyclopaedia-Vol-2-Part-2.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಜು ದೇಹದ ವಿನ್ಯಾಸವನ್ನೇ ಮನುಷ್ಯನೂ ಅನುಕರಿಸಲು ತೊಡಗಿದ್ದು ಈ ಕಾರಣದಿಂದಾಗಿರ ಬಹುದು. ಅಂದಿನ ಮೋದಲ ಪಾಠದ ಅಸ್ಪಷ್ಟತೆಯಿಂದ ಇಂದಿನ ವೈಜ್ಞಾನಿಕ ವಿಧಾನಗಳ ನಿದಿಷ್ಟತೆ ಮತ್ತು ಸ್ಪಷ್ಟತೆಗಳವರೆಗೆ ಈಜುವಿಕೆಯ ತಂತ್ರದಲ್ಲಿ ಆಗಿರುವ ಬದಲಾವಣೆಗಳು ಹಲವಾರು. ಈಜುವಿಕೆಯಲ್ಲಿ ಅತ್ಯಂತ ಸರಳವಾದ ವಿನ್ಯಾಸ ನಾಯಿಯಂತೆ ಹುಟ್ಟು ಹಾಕುವಿಕೆ (ಡಾಗ್ ಪ್ಯಾಡಲ್). ಇದು ಭೂಮಿಯ ಮೇಲೆ ಒಂದು ನಾಯಿ ಸಹಜ ಸ್ಥಿತಿಯಲ್ಲಿ ಇದ್ದಾಗ ಹೇಗೋ ಅಂಥ ನಿಲುವ-ತಲೆಯನ್ನು ಮೇಲೆತ್ತಿ ಕೈಗಳನ್ನು ಹೋಟ್ಟೆಯ ಕಡೆಗೆ ಎಳೆದುಕೋಳ್ಳುತ್ತ ಕಾಲುಗಳನ್ನು ಒಂದಾದ ಮೇಲೋಂದರಂತೆ ಬಡಿಯುವುದು. ಮೋದಮೋದಲು ಇಲ್ಲಿ ಗಲಭೆ, ಶ್ರಮ ಜಾಸ್ತಿ ಕಡಿಮೆ, ಕೈಕಾಲು ಬಡಿತಗಳ ತೀವ್ರತೆ, ನೀರಿನ ತಳದೆ ಕ್ಷೋಭೆ ಇವುಗಳಿಂದ ಕಲಿಯುವವ ಬೇಗನೆ ದಣಿದುಹೋಗುತ್ತಾನೆ. ಇಲ್ಲಿ ಮುಳುಗದೇ ಇರಲು ಮಾಡಬೇಕಾದ ಪ್ರಯತ್ನವೇ ಅಧಿಕವಾದ್ದರಿಂದ ಚಲನೆ ವಿಶೇಷವಾಗಿರುವುದಿಲ್ಲ. ಮುಂದೆ ಹೆಚ್ಚು ಹೆಚ್ಚು ಅಭ್ಯಾಸವಾದ ಹಾಗೆ ಪ್ರಯತ್ನ ಸಫಲವಾಗುತ್ತದೆ. ಮುಂಚಲನೆ ಗಮನಾಹವಾಗಿ ಏರುತ್ತದೆ. ಇದೇ ಕ್ರಮದಲ್ಲಿ ಸುಧಾರಣೆ ಮಾಡಿ ತ್ಓಳು ಬಡಿತದ ಇಲವು (ಓವರ್ ಆಮ್ ಸ್ಟ್ರೋಕ್) ಸಾಧ್ಯವಾಯಿತು. ಇಲ್ಲಿ ತೋಳುಗಳನ್ನು ಮೇಲಕ್ಕೇತಿ ಹಿಂದಿನಿಂದ ಮುಂದಕ್ಕೆ ಬೀಸಿ ನೀರಿನೋಳಗಿಂದ ಹೋಟ್ಟೆಯ ಕಡೆಗೆ ಎಳೆದುಕ್ಓಂಡು ನೀರನ್ನು ಹಿಂದಕ್ಕೆ ತಳ್ಳಿದಾಗ ದೇಹ ಮುಂದಕ್ಕೆ ಚಲಿಸುತ್ತದೆ. ತೋಳುಗಳ ಬಡಿತ ದೇಹವನ್ನು ಸಮತೋಲದಲ್ಲಿ ಇಟ್ಟಿರುವುದುಃ ಕಾಲುಗಳ ಬಡಿತ ಅದನ್ನು ಮುನ್ನೂಕುವುದು; ತೋಳುಗಳ ಬೀಸುವಿಕೆ ಚಲನೆಯನ್ನು ಪ್ಓಷಿಸುತ್ತದೆ. ದಿಕ್ಕನ್ನು ನಿಯಂತ್ರಿಸುತ್ತದೆ. ಈ ನಿಲುವುಗಳು ಕ್ರಮೇಣ ಇನ್ನೂ ಸುಧಾರಿಸಿದುವು. ಈಜು ಸುಖಕರವಾಗುವಂತೆ ಮಾಪಾಟಾಗಿ ತೆವಳುಬಡಿತ (ಕ್ರಾಲ್ ಸ್ಪ್ರೋಕ್). ಎದೆಬಡಿತ (ಬ್ರೆಸ್ಟ್ ಸ್ಟ್ರೋಕ್). ಹಿಂಬಡಿತ (ಬ್ಯಾಕ್ ಸ್ಟ್ರೋಕ್), ಚಿಟ್ಟೆ ಬಡಿತಗಳು (ಬಟರೆ ಪ್ಲೈಸ್ಟ್ರೋಕ್ಸ್) ರೂಪುಗೋಂಡವು. ಬೇರೆ ಬೇರೆ ಸಂದಭಗಳಿಗೆ ತಕ್ಕ ಹಾಗೆ ಬೇರೆ ಬೇರೆ ವೇಗದಲ್ಲಿ ಈಜುವುದು ಸಾಧ್ಯಾವಾಯಿತು. ಇವುಗಳಲ್ಲಿ ಯಾವುದೇ ಒಂದು ಬಗೆಯ ಬಡಿತವನ್ನು ಚೆನ್ನಾಗಿ ಕಲಿತರೆ ಉಳಿದವನ್ನು ಸುಲಭವಾಗಿ ತಿಳಿಯಬಹುದು. ಈ ತರದಲ್ಲಿ ಈಜು ಒಂದು ತಂತ್ರವಾಗಿ ಬೆಳೆಯಿತು. ಅದರ ವೈಜ್ಞಾನಿಕ ವಿಶ್ಲೇಷಣೆ, ಅಭ್ಯಾಸ ಸಾಧ್ಯವಾಯಿತು. ವೈಜ್ಞಾನಿಕವಾದ ಈಜಿನಲ್ಲಿ ಅತ್ಯಲ್ಪ ಶ್ರಮ ಅತ್ಯಧಿಕ ವೇಗ ಲಭಿಸುತ್ತವೆ. ಬಡಿತದ ವಿಧಾನಗಳಲ್ಲೆಲ್ಲ ತೆವಳು ಬಡಿತವೇ ತುಂಬ ವೇಗವಾಗಿ ಅಭ್ಯಾಸ ಮಾಡಬಹುದಾದಂಥದು. ಇದರಲ್ಲಿ ದೇಹ ನೀರಿನ ಮೇಲೆ ಕವುಚಿ ಮಲಗಿರುತ್ತದೆ. ತಲೆ ಕೆಳಮೋಗವಾಗಿದ್ದು ನೀರಿನಲ್ಲಿ ಮುಳುಗಿರುತ್ತದೆ. ಈಜುಗಾರ ೨೫-೩೦ ಗಳಿಗೋಂದು ಸಲ ತಲೆಯನ್ನು ಉಸಿರಾಟಕ್ಕಾಗಿ ಮೇಲೆತ್ತುತ್ತಾನೆ. ತೋಳುಗಳನ್ನು ನೀರಿನೋಳಕ್ಕೆ ಸೆಳೆಯುತ್ತಾನೆ. ಆಮೇಲೆ ಕಾಲುಬಡಿತದ ಅಭ್ಯಾಸ ಇಲ್ಲಿ ಚಲನೆ ಸೋಂಟದಿಂದ ಪ್ರಾರಂಭವಾಗಿ ಮಂಡಿಗಳು ನೇರವಾಗಿದ್ದು ಅಥವಾ ಸ್ವಲ್ಪವೇ ಬಾಗಿದ್ದು ಕಾಲುಗಳ ಚಲನೆ ಕತ್ತರಿಯ ಹಾಗಿರುತ್ತದೆ. ಕಾಲು ಬೆರಳುಗಳು ನೇರವಾಗಿರುತ್ತವೆ. ಅಂಗಾಲುಗಳು ಸ್ವಲ್ಪ ಒಳಬದಿಗೆ ಬಾಗಿದ್ದು, ತಿರುಗು ಚಲನೆಯನ್ನು ಉಂಟುಮಾಡುತ್ತವೆ. ಸದ್ಯದಲ್ಲಿ ಇದೇ ಅತ್ಯಂತ ವೇಗವಾದ ಬಡಿತ. ಈ ವಿಧಾನದಿಂದ ಒಂದು ಗಂಟೆಗೆ ನಾಲ್ಕು ಮೈಲಿ ಒಂದು ಫಲಾಂಗಿನಷ್ಟು ದೂರ ಚಲಿಸುವುದು ಸಾದ್ಯ. ಕ್ರೀಡೆಗಳು: ಚೆನ್ನಾಗಿ ಈಜು ಕಲಿತ ಮೇಲೆ ತಮಾಷೆಗಾಗಿ ಅಥವಾ ವಿನೋದಕ್ಕಾಗಿ ಚಿತ್ರವಿಚಿತ್ರವಾದ ನಿಲುವುಗಳನ್ನು ಅಭ್ಯಾಸ ಮಾಡಬಹುದು-ರೋಲಿಂಗ್ ಲಾಗ್, ಸ್ಪನ್ನಿಂಗ್ ಟಾಷ್, ಮೇಲು ಮೇಲಾಗಿ ಗರಗರ ಸುತ್ತುವುದು, ವಿವಿಧ ಕಸರತ್ತುಗಳು ಇತ್ಯಾದಿ. ಇವನ್ನು ಮಾಡುವುದು ನೋಟಕನಿಗೂ ಮಾಡುವವನಿಗೂ ನಿಜವಾದ ಮನರಂಜನೆಯೂ ಹೌದು, ಕ್ರೀಡೆಯೂ ಹೌದು. ಉಳಿದೆಲ್ಲ ಕ್ರೀಡೆಗಳಂತೆಯೇ ಈಜುವಿಕೆಯಲ್ಲೂ ಸ್ಪಧೆಗಳನ್ನು ಏಪಡಿಸಲಾಗುತ್ತದೆ. ಬೇರೆ ಬೇರೆ ಶೈಲಿಗಳಲ್ಲಿ ವೇಗವಾಗಿ ಈಜುವುದು-ದೀಘವಾದ ಮತ್ತು ಸಮೀಪದ ದೂರಗಳಲ್ಲಿ, ವಾಟರ್ ಪೋಲೋ ಆಟ ಮುಂತಾದ ಸ್ಫಧೆಗಳು ನಡೆಯುತ್ತವೆ. ವೇಗವಾಗಿ ಮುಳುಗೇಳುವುದು (ಡೈವಿಂಗ್) ಈಜುವಿಕೆಯ ಒಂದು ವಿಶಿಷ್ಟ ಅಂಗ. ಇದು ಒಂದು ಕಲೆಯೂ ಹೌದು. ಎಲ್ಲ ಈಜುಬಲ್ಲರು. ದೇಹದ ಮೇಲೆ ಸಂಪೂಣವಾದ ಹತೋಟಿ ಮತ್ತು ಸದಾ ಎಚ್ಚರಿಕೆಯ ಮನಸ್ಸು ಮುಳುಗೇಳುವವರಿಗೆ ಅತ್ಯಗತ್ಯ. ಇದರಲ್ಲಿ ಮುಮ್ಮಖನಾಗಿ ಮುಳುಗೇಳುವುದು, ಹಿಮ್ಮುಖನಾಗಿ ಬೀಳುವುದು, ಗಾಳಿಯಲ್ಲಿ ತಿರುಗುವುದು, ಚಿತ್ರ ವಿಚಿತ್ರ ಸಾಹಸ ಮುಂತಾದ ಅನೇಕ ಬಗೆಗಳಿವೆ. ಮುಳುಗೇಳುವವ ನೀರಿಗೆ ದುಮ್ಮಿಕ್ಕುವ ಮುನ್ನ ವೇದಿಕೆಯ ಅಂಚಿಗೆ ಬರಬೇಕು. ಇದು ದುಮುಕು ಹಲಗೆ (ಡೈವಿಂಗ್ ಬೋಡ್). ಹಲಗೆ ಇರಬೇಕಾದ ಎತ್ತರ ಕಿರಿಯರ ಸ್ಪಧೆಯಲ್ಲಿ ಒಂದು ಮೀಟರ್, ಹೇಮಗಸರ ಸ್ಪಧೆಯಲ್ಲಿ ಮೂರು ಮೀಟರ್, ಅಂತಾರಾಷ್ಟೀಯ ಮತ್ತು ಪರಿಣತರ ಸ್ಪಧೆಗಳಲ್ಲಿ ಐದು ಮತ್ತು ಹತ್ತು ಮೀಟರ್. ಹತ್ತು ಮೀಟರ್ ಎತ್ತರದ ದುಮುಕು ಹಲಗೆ ಇದ್ದಾಗ ಅಲ್ಲಿ ನೀರಿನ ಆಳ ೪ ರಿಂದ ೪.೫ ಮೀ. ಇರುತ್ತದೆ. ಪ್ರಪಂಚದ ಅತ್ಯಂತ ಶ್ರೇಷ್ಠವಾದ ಈಜುಕೋಳಗಳು ೪.೫ ಮೀ. ಗಿಂತ ಹೆಚ್ಚು ಆಳವಾಗಿಲ್ಲ. ಈಜು ಸ್ಪಧೆ: ಈಜಿನಲ್ಲಿ ನಮಗೆ ತಿಳಿದಿರುವಂತೆ ಮೋದಲನೆಯ ಸ್ಪಧೆ ನಡೆದದ್ದು ೧೫೦ ವಷಗಳ ಹಿಂದೆ. ಅದೇ ಲಂಡನ್ನಿನ ಥೇಮ್ಸ್ ನದಿಯಲ್ಲಿ ೧೦೦ ಗಜಗಳ ದೂರದ ಸ್ಪಧೆ. ವಿನ್ಯಾಸ ನಾಯಿಯ ಕ್ರಮದ್ದು (ಡಾಗ್ ಪ್ಯಾಡಲ್). ಆಗ ದಾಖಲಾದ ಕಾಲ ೨ ಮಿನಿಟ್ ೧೬ ಸೆಕೆಂಡುಗಳು. ಇಂದು ಈ ದಾಖಲೆ ಮುರಿದಿದೆ. ಅದೇ ದೂರಕ್ಕೆ ೫೩ ಸೆಕೆಂಡುಗಳಾಗಿದೆ. ಈಗ ಇನ್ನೂ ದೀಘವಾದ ದೂರದ ಸ್ಪಧೆಗಳು ಏಪಾಟಾಗುತ್ತಿವೆ. ಅವುಗಳಲ್ಲೋಂದು, ಕ್ರಮವಾಗಿ ನಡೆಯುವ ಇಂಗ್ಲಿಷ್ ಕಡಲ್ಗಾಲುವೆಯ ಈಜು ಸ್ಪಧೆ. ಇದು ೨೧ ಭೂಮೈಲಿಗಳ ಉದ್ದವಿದೆ. ಪ್ರಪಂಚದ ಎಲ್ಲ ಭಾಗಗಳ, ಸ್ತ್ರೀಪುರುಷರೂ ಇದರಲ್ಲಿ ಭಾಗವಹಿಸುತ್ತಾರೆ. ಈಜಿನ ಇತಿಹಾಸದಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಮೋತ್ತಮೂದಲು ದಾಟಿದವ ಇಪ್ಪತ್ತೆಂಟು ವಷ ವಯಸ್ಸಿನ ಕ್ಯಾಪ್ಟನ್ ವೆಬ್ಸ್. ಅವನು ಇಂಗ್ಲೆಂಡಿನಿಂದ ಪ್ರಾನ್ಸಿಗೆ ಇ ಕಾಲುವೆಯನ್ನು ೨೧ ಗಂಟೆ ೪೩ ನಿಮಿಷಗಳಲ್ಲಿ ದಾಟಿದ. (೨೪ನೆಯ ಆಗಸ್ಟ್ ೧೮೭೫, ಸೋಮವಾರ). ಈ ದಾಖಲೆ ೪೮ ವಷಗಳು ದೀಘಕಾಲ