ಪುಟ:Mysore-University-Encyclopaedia-Vol-2-Part-2.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿತ್ರ ೬ ಎ. ಹಿಂತೆವಳಿಕೆ : ಎಡಬಾಹುವಿನಿಂದ ತೊಡಗಿದ್ದ ದೇಹ ಮಟ್ಟಸವಾಗಿದೆ. ಬಾಹುಗಳ ಕ್ರಮ ಬದ್ಧ ಚಲನೆ ಮತ್ತು ಕಾಲುಗಳ ಪೂರಕಬಡಿತ ಈಜನ್ನು ಸಾಧ್ಯವಾಗಿಸುತ್ತದೆ. ದೇಹದ ಅನುಕ್ರಮ ಭಿನ್ನಭಂಗಿಗಳನ್ನು ಇಲ್ಲಿ ತೋರಿಸಿದೆ.

ಬಿ. ಎದೆ ಬಡಿತ : ದೇಹ ನೀರಿನ ಮೇಲೆ ಸೆಟೆದೆ ಮಲಗಿದೆ. ಬಾಹುಗಳ ಕ್ರಮಬದ್ಧ ಚಲನೆ ಮತ್ತು ಕಾಲುಗಳ ಪೂರಕ ಚಲನೆ ಈಜನ್ನು ಸಾಧ್ಯವಾಗಿಸುತ್ತದೆ. ಚಲನವಲನಗಳು ಎದೆಯ ಭಾಗದಲ್ಲಿ ವಿಶೇಷವಾಗಿ ಸಾಂದ್ರೀಕರಿಸುತ್ತವೆ. ದೇಹದ ಅನುಕ್ರಮ ಭಿನ್ನಭಂಗಿಗಳನ್ನು ಇಲ್ಲಿ ತೋರಿಸಿದೆ.

ಸಿ. ಡಾಲ್ಫಿನ್ ಬಡಿತ: ಡಾಲ್ಫಿನ್ ಮೀನಿನ ಚಲನೆಯಿಂದ ಪ್ರಭಾವಿತವಾದ ಈಜು. ಬಾಹುಗಳ ಬಡಿತದೊಡನೆ ಕಾಲುಗಳ ಒದೆತವೂ ಚಲನೆಯನ್ನು ಪ್ರೇರಿಸುವುವು. ದೇಹದ ಅನುಕ್ರಮ ಭಿನ್ನಭಂಗಿಗಳನ್ನು ಇಲ್ಲಿ ತೋರಿಸಿದೆ.

ಡಿ. ತವಳಿಕೆ: ದೇಹ ನೀರಿನೊಳಗೆ ಮಟ್ಟಸವಾಗಿದೆ. ಬಲ ಬಾಹುವಿನಿಂದ ತೊಡಗಿದ ಎಡಬಾಹುವಿನಿಂದ ಪೂರ್ಣಗೊಂಡ ಬಾಹುಗಳ ಕ್ರಮಬದ್ಧ ಚಲನೆ ಮತ್ತು ಕಾಲುಗಳ ಪೂರಕಬಡಿತ ಈಜನ್ನು ಸಾಧ್ಯವಾಗಿಸುತ್ತವೆ. ದೇಹದ ಅನುಕ್ರಮ ಭಿನ್ನಭಂಗಿಗಳನ್ನು ಇಲ್ಲಿ ತೋರಿಸಿದೆ.

ಮುರಿದಿದೆ ಉಳಿಯಿತು. ಹಾಗಾಗಿ ಕ್ಯಾಪ್ಟನ್ ವೆಬ್ಸ್ ನ ಹೆಸರು ಸುಪ್ರಸಿದ್ಧವಾಯಿತು. ಆ ಮೇಲಿನ ವರ್ಷಗಳಲ್ಲಿ ಅನೆಕಲ್ ಫ್ರೆಂಚರು, ಜರ್ಮನರು, ಇಂಗ್ಲೀಷರು ಆ ಸಾಹಸಕ್ಕೆ ಪ್ರಯತ್ನಿಸಿದರು. ಅಂಥ ಮೊದಲನೆಯ ತೀವ್ರ ಪ್ರಯತ್ನಕ್ಕೆ ಕೈ ಹಾಕಿದವಳೆಂದರೆ ಮಹಾಂ ಇಸಾಸೆಸ್ಕಸ್ ಎಂಬ ಒಬ್ಬ ಮಹಿಳೆ (೧೯೦೦) ೧೯೦೫ ರಲ್ಲಿ ಮಿಸ್ ಕೆಲೆರಮನ್ ಎಂಬಾಕೆ ಮತ್ತೆ ಪ್ರಯತ್ನಿಸಿದಳು. ಆದರೆ ಎರಡು ಪ್ರಯತ್ನಗಳೂ ನಿಷ್ಫಲವಾದುವು. ಕೊನೆಗೆ ೧೯೨೬ ರಲ್ಲಿ ಮಿಸ್ ಜಿ. ಎಡೆರ್ಲೇ ಎಂಬ ಅಮೇರಿಕ ಹದಿನಾಲ್ಕು ವರ್ಷದ ಬಾಲಿಕೆ ಇಂಗ್ಲೀಷ ಕಾಲುವೆಯನ್ನು ೧೪ ಗಂಟೆ ೩೪ ನಿಮಿಷಗಳಲ್ಲಿ ದಾಟಿದಳು. ಉದ್ದಕ್ಕೂ ತೆವಳು ಬಡಿತದ ವಿನ್ಯಾಸವನ್ನು ಅವಳಿಉ ಅನುಸರಿಸಿದ್ದಳು. ಇಂಗ್ಲೀಷ್ ಕಾಲುವೆಯನ್ನು ಈಜಿ ದಾಟಿದ ಮೊದಲನೆಯ ಹೆಂಗಸು ಈ ಹುಡುಗಿಯೇ. ಎರಡನೆಯ ಹೆಂಗಸು ದಕ್ಷಿಣ ಆಫ್ರೀಕದ ಮಿಸ್ ಡಂಕನ್. ಇವರು ದಾಟಿದುದು ೧೯೩೦ ರಲ್ಲಿ . ೧೯೫೧ ರಲ್ಲಿ ಇಂಗ್ಲೇಡಿನ ಡಬ್ಲ್ಯುಇ ಬಾರ್ನಿ ಎಂಬಾತ ಕಾಲುವೆಯ ಈ ಕಡೆಯಿಂದ ಆ ಕಡೆಗೆ ಮತ್ತು ಆ ಕಡೆಯಿಂದ ಈ ಕಡೆಗೆ ದಾಟಿ ದಾಖಲೆ ಸ್ಥಾಪಿಸಿದ. ಆ ಕಾಲಕ್ಕೆ ಅತ್ಯಂತ ಯಶಸ್ವಿಯಾದ ಈಜುಗಾರನೆಂದು ಅವನನ್ನು ಸನ್ಮಾನಿಸಲಾಯಿತು. ಆಗ ಅವನಿಗೆ ಐವತೈದು ವರ್ಷ ಯವಸ್ಸು. ಅದೇ ವರ್ಷದಲ್ಲಿ ಅಮೇರಿಕದ ಮಿಸ್ ಫ್ಲಾರೆನ್ಸ್ ಜಾಡ್ವಿಕ್ ಕಾಲುವೆಯ ಎರಡು ಕಡೆಗೆ ಈಜಿದ ಪ್ರಥಮ ಮಹಿಳೆಯಾದಳು. ೧೯೫೦ರಲ್ಲಿ ಈಜಿಫ್ಟಿನ ಅಬ್ದುಲ್ ರಹೀಮ್ ಕಾಲುವಯನ್ನು ೧೦ ಗಂಟೆ ೫೦ ಮಿನಿಟುಗಳಲ್ಲಿ ಈಜಿದ. ಅತ್ಯಂತ ದೀರ್ಘವಾದ ದೂರವನ್ನು ಈಜಿದ ದಾಖಲೆ ೧೯೪೦ ರಲ್ಲಿ ಜಾನ್ ವಿ. ಸಿಗ್ಮಂಡನದು. ಅವನು ಮಿಸಿಸಿಪಿ ನದಿಯಲ್ಲಿ ನಿರಂತರವಾಗಿ ೮೯ ಗಂಟೆ ೪೮ ಮಿನಿಟು ಈಜಿ ಒಟ್ಟು ೨೯೨ ಮೈಲಿಗಳನ್ನು ಶ್ರಮಿಸಿದ. ಕೊನೆಯನ್ನು ಅವನು ಅರೆಪ್ರಜ್ಞೆ ಸ್ಥಿತಿಯಲ್ಲಿದ್ದ. ನದಿಯ ಸೆಳವು ಗಂಟೆಗೆ ಎರಡು ಮೈಲಿಯಷ್ಟಿದ್ದರೂ ಅವನದು ಅತ್ಯಂತ ಉತ್ಕೃಷ್ಟವಾದ ಕೆಲಸವಾಗಿತ್ತು. ಇದು ಅದ್ಭುತ ಸಾಧನೆಯೇ ಸರಿ.

ಉಪಯೋಗಗಳು: ಈಜಿನ ಅಗತ್ಯ ಮತ್ತು ಅನುಕೂಲಗಳ ವಿಷಯದಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಯೇ ಇಲ್ಲ. ಪ್ರತಿಯೊಂದು ರಾಷ್ಟ್ರವೂ ಉತ್ತಮ ಆರೋಗ್ಯ ಮತ್ತು ಸಾಮಾನ್ಯ ದೇಹದಾರ್ಡ್ಯಕ್ಕಾಗಿ ಈಜನ್ನು ಪುರಸ್ಕರಿಸುತ್ತದೆ. ಜೀವ ಉಳಿಸಿಕೊಳ್ಳುವುದು ಪ್ರತಿಯೊಬ್ಬನಿಗೂ ಅತ್ಯಂತ ಮುಖ್ಯವಾದ ಅಂಶ. ವರ್ತಮಾನ ಪತ್ರಿಕೆಗಳಲ್ಲಿ ಈಜುಬಾರದೆ ಜನ ಮುಳುಗಿ ಸತ್ತುಹೋದ ವರದಿಗಳನ್ನು ಓದುತ್ತೆವೆ. ಮುಳುಗಿಹೋಗದಂತೆ ಮನುಷ್ಯ ಮಾಡಿಕೊಳ್ಳಬಹುದಾದ ವಿಮೆಯೆಂದರೆ ಈಜು ಕಲಿಯುವುದೊಂದೇ. ಅನೇಕ ವೈದ್ಯರು ನರ ದೌರ್ಬಲ್ಯಕ್ಕೆ ತಣ್ಣೀರಿನ ಉಪಚಾರವನ್ನು ವಿಧಿಸುತ್ತಾರೆ. ಬೇರೆ ಯಾವುದೇ ಕ್ರೀಡೆಗಿಂತ ಮಿಗಿಲಾಗಿ ಈಜುವುದರಲ್ಲಿ ದೇಹದ ಎಲ್ಲಾ ಮಾಂಸಖಂಡಗಳೂ ಹಗುರಗೊಳ್ಳುತ್ತವೆ. ಹಾಗೆ ಲಘುವಾದ ಮಾಂಸಖಂಡಗಳನ್ನು ಶುಚಿಗೊಳಿಸಿಕೊಂಡು ಅವಕ್ಕೆ ಹೊಸ ಆಹಾರವನ್ನು ಸಮರ್ಪಕವಾಗಿ ಒದಗಿಸಬಹುದು. ಆಗ ಆ ಮಾಂಸಖಂಡಗಳೊಂದಿಗೆ ದಟ್ಟವಾಗಿ ಹೆಣೆದುಕೊಂಡಿರುವ ನರಗಳೂ ಉತ್ತಮ ವಿಶ್ರಾಂತಿಯನ್ನು ಪಡೆಯುತ್ತವೆ. ಈಜುವುದು ಕ್ಷೇತ್ರಿಯವಾಗಿದೆ. ಆದರಿಂದ ಇಡೀ ದೇಹವನ್ನೇ ನೀರಿನ ಒತ್ತಡದಿಂದ ಉಜ್ಜಿದಂತಾಗಿ ರಕ್ತಪರಿಚಲನೆ ಉತ್ತಮಗೊಳ್ಳುವುದು. ಹಾಗೆಯೇ ಹೃದಯದ ಬಳಲಿಕೆಯನ್ನೂ ಪಾದಗಳಿಗೆ ಬೀಳುವ ಭಾರವನ್ನೂ ಇಳಿಸಿದಂತಾಗುವುದು ಮಾಂಸಖಂಡ, ಮೂಳೆಗಳಿಗೆ ಸಂಬಂಧಿಸಿದ