ಪುಟ:Mysore-University-Encyclopaedia-Vol-2-Part-2.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಈಥರ್(ಭೌತವಿಜೌನದಲ್ಲಿ)

ವ್ಯತ್ಯಾಸವಾದರೆ ವಿದ್ಯುತ್ ಷ್ರೇರೇಪಿಸಲ್ಪಡುವುದೆಂದು ಫ್ಯಾರಡೆ ೧೮೩೨ರಲ್ಲಿ ತೋರಿಸಿದ.ಆದ್ದರಿಂದ ಕಾಂತ ಮತ್ತು ವಿದ್ಯುತ್ ಪರಸ್ಪರ ಅವಲಂಬಿಸಿವೆ.ವಿದ್ಯುತ್ ಪ್ರವಾಹವನ್ನು ಕಾಂತಮಾನದಲ್ಲಿ ಅಥಾವ ವಿದ್ಯುನ್ಮದಲ್ಲಿ ಅಳೆಯಬಹುದು.ಇವೆರಡರ ಮಾನದ ಭಾಗಲಬ್ಧ.ಈ ನಿಯತಾಂಕದ ಪ್ರಮಾಣದಿಂದ ಆತಿ ಮಹತ್ತರವಾದ ವಿಷೆಯಗಳು ಹೊರಬರಲು ಸಾಧ್ಯವಾಯಿತು.ಬೆಳಕು ತಂತಿಯ ಸಹಾಯವಿಲ್ಲದೆ ಹರಿಯಬಲ್ಲುದೆ,ಹಾಗಾದರೆ ಅದರ ಚಲನೆಯವೇಗವೆಷ್ಟು,ಈ ವಿಷಯಗಳನ್ನು ಮ್ಯಾಕ್ಸವೆಲ್ ಕೂಲಂಕಷವಾಗಿ ವಿಚಾರ ಮಾಡಿ ವಿದ್ಯುತ್ ತರಂಗಗಳು ಹೊರವಲಯದಲ್ಲಿ ಬೆಳಕಿನ ವೇಗದಷ್ಟೇ ವೇಗದಲ್ಲಿ ಪ್ರಸಾರವಾಗುವುದೆಂದು ನಿಯಮಗಳಿಂದ ತೋರಿಸಿದ.ಈ ವಿಷಯವನ್ನು ಪ್ರಾಯೋಗಿಕವಾಗಿ ಹಟ್ಸ್೯ ನಿದಶಿ೯ಸಿದ.

ಈಥರ್ ಸೆಳೆತದ ಪ್ರಯೋಗ:ಭೂಮಿ ಈಥರ್ ಮೂಲಕ ಚಲಿಸುವಾಗ ಈಥರ್ ಸ್ಥಿರವಾಗಿಯೇ ಇರುದೆಂದು ತಿಳಿದರೆ ಬೆಳಕಿನ ದಿಕ್ಪಲ್ಲಟವನ್ನು ತರಂಗ ಸಿದ್ದಾಂತದಿಂದ ಸುಲಭವಾಗಿ ಸಮಥಿ೯ಬಹುದೆಂದು ಯಂಗ್ ತೋರಿಸಿದ.ಎಲ್ಲ್ ವಸ್ತುಗಳನ್ನೂ ಈಥರ್ ಆಕ್ರಮಿಸಿದೆ.ಇಲ್ಲದಿದ್ದ್ಲಲ್ಲಿ ಪಾರದಶ೯ಕ ವಸ್ತುವಿನಲ್ಲಿ ಈಥರ್ ಸಾಂದ್ರತೆ ಹೊರವಲಯದಲ್ಲಿನ ಸಾಂದ್ರತೆಗಿಂತ ಹೆಚ್ಚಾಗಿರಬೇಕು.ಇಲ್ಲದಿದ್ದಲ್ಲಿ ಬೆಳೆಕಿನ ವಕ್ರೀಭವನ ಆಗಲ್ಲು ಸಾಧ್ಯವಾಗುವುದಿಲ್ಲ.ಚಲಿಸುವ ವಸ್ತುವಿನಲ್ಲಿ ಇರುವ ಈಥರ್ ತಾನೂ ಚಲಿಸುತ್ತ ಇರಬೇಕು.ಇದರ ಚಲನೆಯ ವೇಗ ವಸ್ತುವಿನ ವೇಗಕ್ಕಿಂತ ಕಡಿಮೆಯಾಗಿರಬೇಕು. ವಸ್ತುವಿನ ಮುಂಭಾಗದಿಂದ ಈಥರ್ ಪ್ರವೇಶಿಸಿ ಹಿಂಭಾಗದಿಂದ ಹೊರಬರಬೇಕು.ವಸ್ತುವಿನಲ್ಲಿದ್ದಾಗ ಹೆಚ್ಚು ಸಂಮದ೯ ಹೊಂದಿರಬೇಕು.ಈಥರ್ ಮತ್ತು ವಸ್ತುವಿನ ಚಲನವೇಗಗಳ ಪ್ರಮಾಣಕ್ಕೆ ಫ್ರೆಸ್ನೆಲ್ ಎಳೆತದ ಗುಣಾಂಕ ಎಂದು ಹೆಸರು.ಇದನ್ನು ವಕ್ರೀಭವನದ ಗುಣಾಂಕದಿಂದ ಕಂಡುಹಿಡಿಯಬಹುದು.ವಸ್ತುವಿನಲ್ಲಿ ಸಂಮದ೯ದಿಂದ ಇರುವ ಈಥರ್ ಇದರ ಮೂಲಕ ಪ್ರಸಾರವಾಗುವ ಬೆಳಕಿನ ವೇಗದ ಪ್ರಮಾಣವನ್ನು ವ್ಯತ್ಯಾಸ ಮಾಡಬೇಕು.ಹರಿಯುವ ನೀರಿನಲ್ಲಿ ಬೆಳಕಿನ ವೇಗವನ್ನು ಫಿಸು ಎಂಬಾತ ಪ್ರಯೋಗದಿಂದ ತೋರಿಸಿದ.ಆದರೆ ಕಣಸಿದ್ದಾಂತರ ಪ್ರಕಾರ ನೀರಿನಲ್ಲಿ ಬೆಲಕಿನ ವೇಗ ಹೊರವಲಯದಲ್ಲಿನ ವೇಗಕ್ಕಿಂತ ಹೆಚ್ಚಾಗುವುದರಿಂದ ನ್ಯೂಟನ್ನಿನ ಕಣಸಿದ್ಧಾಂತಕ್ಕೆ ಸಂಪೂಣ೯ ಸೋಲುಂಟಾಯಿತು.

ಯಂಗನ ಸಿದ್ದಾಂತ ಸ್ವಲ್ಪ ವಷ೯ಗಳಲ್ಲಿ ಬುಡಮೇಲಾಯಿತು.ಭೂಮಿಯ ಸುತ್ತಲೂ ಇರುವ ಈಥರ್ ಭೂಮಿಯ ಪರಿಭ್ರಮಣದಲ್ಲಿ ಪಾಲ್ಗೊಳ್ಳದಿದ್ದರೆ ಬೆಳಕಿನ ಚಲನವೇಗ ಭೂಮಿಯ ಚಲನ ದಿಕ್ಕನ್ನು ಅವಲಂಬಿಸಿದೆ.ಭೂಮಿಯ ಚಲನ ದಿಕ್ಕಿನಲ್ಲಿ ಪ್ರಸಾರವಾದರೆ ಭೂಮಿ ಬೆಳಕಿನ ಕಡೆಗೆ ಓಡುವುದರಿಂದ ಬೆಳಕಿನ ಪ್ರಸಾರವೇಗ ಕಡಿಮೆಯಾದಂತೆ ತೋರುವುದು.ಇದಕ್ಕೆ ವಿರುದ್ದವಾಗಿ ಬೆಳಕು ಪ್ರಸಾರವಾದರೆ ಅದರ ಚಲನವೇಗ ಹೆಚ್ಚಾದಂತೆ ತೋರುವುದು.ಸ್ಥಿರವಾಗಿರುವ ಈಥರಿನಲ್ಲಿ ಭೂಮಿಯ ಚಲನವೇಗ V ಇರಲಿ.ಭೂಮಿಯ ಮೇಲೆ ಸ್ಥಿರವಾಗಿರುವ ಉಗಮ ಬೆಳಕನ್ನು ಪ್ರಸಾರ ಮಾಡುತ್ತಿದೆಯೆಂದು ಭಾವಿಸೋಣ.ಈಥರ್ ಮುಖಾಂತರ ಪ್ರಸಾರವಾಗುವ ಬೆಳಕಿನ ವೇಗ C ಇರಲಿ.ಭೂಮಿ ಚಲಿಸುತ್ತಿರುವ ದಿಕ್ಕಿನಲ್ಲಿ ಬೆಳಕು ಪ್ರಸಾರವಾದರೆ ಸಾಪೇಕ್ಷ ವೇಗ C-V.ಬೆಳಕು ಇದಕ್ಕೆ ವಿರುಧ್ದವಾಗಿ ಪ್ರಸಾರವಾದರೆ ಸಾಪೇಕ್ಷೆ ವೇಗ C+V.

ಭೂಮಿಯ ಚಲನೆಯ ದಿಕ್ಕಿನಲ್ಲಿ ಬೆಳಕು L ದೂರ ಹೋಗಲು ಬೇಕಾಗುವ ಕಾಲ L/C-V.ಇದಕ್ಕೆ ಎದುರು ದಿಕ್ಕಿನಲ್ಲಿ ಅದೇ ದೂರ ಚಲಿಸಲು ಬೆಳಕು ತೆಗೆದುಕೊಳ್ಳುವ ಕಾಲ L/C+V.ಆದ್ದರಿಂದ ಬೆಳಕು ಭೂಮಿಯ ಚಲನೆಯ ದಿಕ್ಕಿನಲ್ಲಿ L ದೂರ ಹೋಗಿ ಪ್ರತಿಫಲನ ಹೊಂದಿ ಅದೇ L ದೂರ ಹಿಂತಿರುಗಿ ಬರಲು ಬೇಕಾಗುವ ಒಟ್ಟು ಕಾಲ

ಈಗ ಭೂಮಿಯ ಚಲನೆಗೆ ಲಂಬವಾಗಿ ಬೆಳಕು ಪ್ರಸಾರವಾಗುತ್ತಿದೆಯೆಂದು ತಿಳಿಯೋಣ.ಬೆಳಕಿನ ಕಿರಣ AB=L ದೂರ ಚಲಿಸಿದಾಗ ಭೂಮಿ A ಯಿಂದ A′ ವರೆಗೆ ಚಲಿಸಿರುತ್ತದೆ. BB′=AA′ ಬೆಳಕು ಚಲಿಸುವ ದಿಕ್ಕು AB′ಆಗುತ್ತದೆ.ಈ ಚಲನೆ ಕಾಲದಲ್ಲಿ ನಡೆದರೆ AB′=C ಮತ್ತು AA′=VT.

ಬೆಳಕು AB′ದೂರ ಹೋಗಿ ಪ್ರತಿಫಲನ ಹೊಂದಿದ ಮೇಲೆ BA ಮಾಗ೯ವಾಗಿ ಹಿಂತಿರುಗುವುದು.ಆದ್ದರಿಂದ ಬೆಳಕು ಭೂಮಿಯ ಚಲನೆಯ ದಿಕ್ಕಿಗೆ ಲಂಬವಾಗಿ L ದೂರ ಹೋಗಿ ಹೊಂದಿ ಆದೇ ದೂರ ಹಿಂತಿರುಗಿ ಬರಲು ಬೇಕಾಗುವ ಒಟ್ಟು ಕಾಲ

ಆದ್ದರಿಂದ ಇವೆರಡು ಕಾಲಗಳ ಪ್ರಮಾಣ

ಭೂಮಿಯ ಕಕ್ಷಾವೇಗ ೩೦ ಕಿ.ಮೀ.ಸೆಕೆಂಡ್.ಬೆಳಕಿನ ವೇಗ ೩*೧೦ ಕಿ.ಮೀ ಸೆಕೆಂಡ್

ಮೈಕೆಲನ್-ಮಾಲಿ೯ ಪ್ರಯೋಗ : ಮೇಲಿನ ತಕ೯ದಿಂದ ಬಂದ ಅಂಶವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಈ ವಿಜೌನಿಗಳು ಒಂದು ಉಪಕರಣವನ್ನು ರಜಿಸಿದರು.ಇಲ್ಲಿಂದ ಹೊರಟ ಬೆಳಕು ಅಧ೯ ಪಾದರಸ ಲೇಪಿತ P ಗಾಜಿನ ತಟ್ಟೆಯ ಮೇಲೆ ಬಿದ್ದಾಗ ಎರಡು ಭಾಗವಾಗುತ್ತದೆ.ಒಂದು ಭಾಗ P ಮೂಲಕ ಹೊರಗೆ ಬಂದು S1 ಕನ್ನಡಿಯ ಮೇಲೆ ಲಂಬವಾಗಿ ಬಿದ್ದು ಅದೇ ದಿಕ್ಕಿನಲ್ಲಿ ಹಿಂತಿರುಗಿ P ಯಲ್ಲಿ ಪ್ರತಿಫಲನ ಹೊಂದುವುದು.ಇನ್ನೊಂದು ಭಾಗ Pಯ ಮೇಲೈನಲ್ಲಿ ಪ್ರತಿಭಟನ ಹೊಂದಿ ಲಂಬವಾಗಿ ತಿರುಗಿ ಕನ್ನಡಿಯ ಮೇಲೆ ಬಿದ್ದು ಅದೇ ದಿಕ್ಕಿನಲ್ಲಿ ಹೊಂದುವುದು.ಈ ರೀತಿ ಹಿಂತಿರುಗಿ P ಮೂಲಕ ಹೊರಗೆ ಬರುವುದು .ಆದ್ದರಿಂದ ದಿಕ್ಕಿನಲ್ಲಿ ಈ ಎರಡು ಭಾಗಗಳೂ ಪ್ರಸಾರವಾಗಿ Fನಲ್ಲಿರುವ ದೂರದಶ೯ಕ.