ಪುಟ:Mysore-University-Encyclopaedia-Vol-2-Part-2.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಥೇನ್ ಹ್ಯಾಲೋಜಮನ್ನುಳೊಡನೆ ಈಥರುಗಳು ಆತಿನೀಲ ಬೆಳಕಿನಲ್ಲಿ ವರ್ತಿಸಿ ಹ್ಯಾಲೈದುಳನ್ನು ನೀಡುತ್ತವೆ . ಈ ಕ್ರಿಯೆಯಲ್ಲಿ ಆಕ್ಸಿಜನ್ನಿನ ಪಾರ್ಶ್ವದಲ್ಲಿ ಇಂಗಾಲಕ್ಕೆ ಬಂಧಿತವಾಗಿರುವ ಹೈಡ್ರೋಜನ್ ಪಲ್ಲತಗೊಳುತ್ತದೆ .ವಿಶಿಷ್ಟ ಈಥರುಗಳು: ವೃತ್ತ ಈಥರ್ ಅಥವಾ ಎಪಾಕ್ಸೈಡುಗಳನು ಹೆಟೆರೊಸೈಕ್ಲಿಕ್ ಸಂಯುಕ್ತಗಳ ಗುಂಫಿಗೆ ಸೇರಿಸಬಹುದು.ಈ ಬಗೆಯ ಈಥರುಗಳಲ್ಲೀ ಎಥಿಲೀನ್ ಆಕ್ಸೈಡ್,ಢೆಆಕ್ಸೆನ್ ಮತ್ತು ಪೂರಾನ್ ಸಂಯುಕ್ತಗಳ ಮತ್ತು ಅವುಗಳ ಉತ್ಪನಗಳು ಮುಖ್ಯವಾದವು.ಎಪಾಕ್ಸೈದ್ ಪುಂಜಗಳನುಳ್ಳ ಎಪಾಕ್ಸಿ ಅಂಟು ಮತ್ತು ಫ್ಲಾಸ್ಟಿಕ್ಕಗಲು ಹಲವು ವರ್ಶದಿಂದೀಛೆಗೆ ತಮ್ಮ ಅತ್ಯುತ್ತಮ ಅಂಟುಗುಣ ಮತ್ತು ತೀವ್ರ ರಾಸಾಯನಿಕ ಜಡತ್ವದಿಂದ ಪ್ರಾಮುಖ್ಯ ಪಡೆಯುತ್ತಿವೆ . ಈಥರ್ ಪುಂಜಗಳನ್ನು ಒಳಗೊಂಡಿರುವ ಆಲ್ಕೋಹಾಲುಗಳಾದ ಸೆಲೋನಾಲ್ಟುಗಳು ( ಉದಾಹರಣೆಗೆ , ಈಥೈರ್ ಸೆಲ್ಲೊಸಾಲ್ಟ್ ,CH2 CH2-CH2CH2-OH ), ಪಾಲಿಎಥೆಲೀನ್ ಗ್ಲೈಕಾಲುಗಳು ( ಉಧಾಹರಣೆಗೆ , ಡೈ ಎಥೆಲೀನ್ ಗ್ಲೈಕಾಲು HOCH2-CH2 OCH2CH2OH) ಇಂದು ಅನೇಕ ವಿಶಿಷ್ಟ ಸ್ಂಧರ್ಭಗಳಲ್ಲಿ ಲೀನಕಾರಿಹಗಳಾಗಿ ಕೀಲೆಣ್ಣೆಗಳಾಗಿ ಉಪಯೋಗಸಲ್ಪಡುತ್ತಿವೆ .

ಈ ವಿಶಿಷ್ಟ ಈಥರುಗಳನ್ನು ತಯಾರಿಸಲು ಮುಖ್ಯವಾಗಿ ವಿಲಿಯಂಸನ್ ವಿಧಾನವನ್ನು ಅನುಸರಿಸಲಾಗುತ್ತದೆ . ಹ್ಯಾಲೈಡ್ ಪುಂಜ ಮತ್ತು ಆಲ್ಕೊಹಾಲ್ ಪುಂಜ ಇವೆರಡೂ ಇರುವ ಸಂಯುಕ್ತವನ್ನು ಅಂತರ್ಗತ ವಿಲಿಯಂಸನ್ ಕ್ರಿಯೆಗೆ ಒಳಪಡಿಸಿದಾಗ ಎಪಾಕ್ಸೈಡುಗಳು ದೊರೆಯುತ್ತವೆ . ಉಪಯುಕ್ತತೆ : ಆತಿಪರಿಚಿತವಾದ ಡೈ ಈಥೈಲ್ ಮತ್ತು ಇನ್ನೂ ಅನೇಕ ಅಲ್ಪ ಆಣುತೂಕದ ಚ್ವಿಲಿಯಂಸನ್ ಈಥರುಗಳು ಅಗಾಧ ಪಮಾಣದಲ್ಲಿ ಕ್ರಿಯಾಲೀನಕಾರಿಗಳಾಗಿ ( ರೀ ಆಕ್ಶನ್ ಸಾಲ್ವೆಂಟ್ಸ್ ) ಸಂಸ್ಕರಣ ಲೀನಕಾರಿಗಳಾಗಿ ಉಪಯೋಹಗಿಸಲಾಗುತ್ತದೆ . ಈ ಬಗೆಯಾಗಿ ಈಥರುಗಳು ಬಣ್ಣಗಳಲ್ಲಿ , ಔಷಧ ದ್ರವ್ಯಗಳ ತಯಾರಿಕೆಗಳಲ್ಲಿ ಉಪಯೋಗಕ್ಕೆ ಬರುತ್ತವೆ . ಗ್ರೀನರ್ಡ್ ಕ್ರಿಯೆಗೆ ಸಾಮನ್ಯವಾಗಿ ಈಥರುಗಳನ್ನು ಡೈ ಈಥೈಲ್ ಈಥರ್ ಲೀನಾಕಾರಿ . ಡೈ ಫೀನೈಲ್ ಈಥರಿನಂಥ ಹಲವು ಹಿರಿಯ ಅಣುತೂಕದ ಈಥರುಗಳನ್ನು ಶಾಖಪಾತ್ರೆಗಳಲ್ಲಿ ಮಾಧ್ಯಮವಾಗಿ ಉಪಯೋಗಿಸಲಾಗುತ್ತದೆ . ವೈದ್ಯರಲ್ಲಿ ಈಥರ್ : ಅರಿವಳಿಕವಾಗಿ ಬಳಸುವ ಈಥೈಲ್ ಈಥರ್ , ಈಥೈಲ್ ಮದ್ಯನಾರದ ಮೇಲೆ ಸಲ್ಫ್ಯೂರಿಕ್ ಆಮ್ಲ ವರ್ತಿಸುವುದರಿಂದ ದೊರೆಯುತ್ತದೆ . ಸಿಹಿರುಚಿ ಗೊತ್ತಾದ ಬಗೆಯ ವಾಸನೆಯ , ಚುರುಕಾಗಿ ಉರಿವ, ಬಣ್ಣವಿರದ ಆರಿಹೊಗದ ದ್ರವ, ನೀರಿನಲ್ಲಿ ಅಶ್ಟಾಗಿ ಅಲ್ಲದಿದ್ದರು ಮದ್ಯಸಾರ ಕ್ಲೊರೊಫಾರಂ ಮತ್ತು ಎಣ್ಣೆಗಲಲ್ಲಿ ಕರುಗುವುದು . ಅರಿವಳಿಕ ಈಥರ್ ನಲ್ಲಿ ಅಸಿಟಾಲ್ಡಿಹೈಡ್ ಮೀಥೈಲ್ ಮದ್ಯಸಾರ ಪೆರಾಕ್ಸೈಡುಗಳು ಇರಕೂಡದು.ಶಸ್ತ್ರಕ್ರಿಗಾಗಿ ಅರಿವಳಿಸಲು ಇದರಷ್ಟು ಸಾಮನ್ಯವಾಗಿ ಬಳಸುವ ಅಪಾಯಕವಲ್ಲದ ವಸ್ತು ಬೇರೊಂದಿಲ್ಲ ಎನ್ನಬಹುದು . ಶಸ್ತ್ರಕ್ರಿಯೆಗಾಗಿ ಅರಿವಳಿಸುವ , ಮಿದುಳುಕಾಂಡವನ್ನು ಮಾರಕವಾಗಿ ಕುಂದಿಸುವ ಪ್ರಮಾಣಮಟ್ಟಗಳಲ್ಲಿ ಅಪಾರ ವ್ಯತ್ಯಾಸವಿದೆ . ಬೆಂಕಿ ತಗಲಿದರೆ ಉರಿಯುತ್ತದೆ ಸಿಡಿಯುತ್ತದೆ . ಇದರಿಂದ ಅರಿವಳಿಸಲು ಹೆಚ್ಚು ಹೊತ್ತು ಹಿಡಿಯುವುದರಿಂದ ಒಳಗೆ ಳೋಲೆ ಸೇರುತ್ತದೆ . ಈ ಲೋಳೆ ಸುರಿತವನ್ನು ಹಯೋಸೀನ್ , ಆಟೋಪೀನ್ ಮದ್ದುಹಳಿಂದ ತಡೆಯಬಹುದು . ಇದು ಅನುವೇದನಾ ಕೇಂದ್ರಳನ್ನು ಚೋದಿಸುವುದರಿಂದ , ರಕ್ತ ಒತ್ತಡ , ಗುಂಡಿಗೆ ವೇಗ ರಕ್ತ ಸಕ್ಕರಗಳನ್ನು ಹೆಚ್ಚಿಸುಲ್ಲದೆ . ಸ್ನಾಯುಗಳನ್ನು ಸಡಿಲೆಸುವ ಹುಣವೂ ತಕ್ಕಮಟ್ಟಿಗಿದೆ. ಈಥೇನ್ : ಪರ್ಯಾಪ್ತ ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ನುಗಳಾದ ಪ್ಯಾರಫ್ಹಿನ್ ಅಥವಾ ಆಲ್ಕೇನ್ ವರ್ಗಕ್ಕೆ ಸೇರಿದ ಸಂಯುಕ್ತ . ರಚನಾ ಸೂತ್ರ ಕೆಳಕಂಡಂತಿದೆ .


ನೈಸರ್ಗಿಕ ಅನಿಲದಲ್ಲಿ ಶೇ. ೫-೨೦ ರಷ್ಟು ಈಥೇನಿರುತ್ತದೆ . ಮೀಥೇನ್ ತಯಾರಿಸಲು ನಾವು ಬಳಸುವ ಸಾರ್ವತ್ರಿಕ ವಿಧಾನಗಳು ಇದಕ್ಕೂ ಅನ್ವಯಿಸುತ್ತವೆ . ಸೋಡಿಯಂ ಪ್ರೊಪಿಯೊನೇಟನ್ನು ಸೋಡಾ ನುಣ್ಣದೊಡನೆ ಕಾಯಿಸಿ ಈಥೇಲ್ ಪದೆಯಬಹುದು .

ಈಥೈಲ್ ಆಲ್ಕೊಹಾಲಿನ ಸಮ್ಮುಖದಲ್ಲಿ ಸತು ತಾಮ್ರದ ಜೋಡಿಯಿಂದ ಈಥೈಲ್ ಅಯೋಡೈದ್ ಅನ್ನು ಅಪಕರ್ಶಿಸಿದಾಗ ಪರಿಶುದ್ಧ ಈಥೇನ್ ದೊರೆಯುತ್ತದೆ .

ಶುಲ್ಕ ಈಥರ್ ದ್ರಾವಣೆಯಲ್ಲಿ ಮೀಥೈಲ್ ಆಯೊಡೈಡ್ ಮತ್ತು ಶುದ್ಧ ಸೋಡಿಯಂ ಲೋಹ ಪರಸ್ಪರ ವರ್ತಿಸಿದಾಗ ಈಥೇನ್ ಹುಟ್ಟುವುದು .

ವುಸ್ಟ್ ಎಂಬ ಫ಼್ರೆಂಚ್ ರಸಾಯನ ವಿಘ್ನಾನಿ ೧೮೫೫ರಲ್ಲಿ ಈ ಕ್ರಿಯಾವಿಧಾನವನ್ನು ಕಂಡುಹಿಡಿದ . ಆದ್ದರಿಂದ ಇದಕ್ಕೆ ವುರ್ಸ್ಸ ಸಂಯೋಜನೆ ಎಂದು ಹೆಸರಿಡಲಾಗಿದೆ. ಸೋಡಿಯಂ ಅಸಿಟೇಟಿನ ಪ್ರಬಲ ನೀರನ ದ್ರಾವಣವನ್ನು ಪ್ಲ್ಯಾಟಿನಂ ಧನದ್ರುವದ ನೆರವಿನಿಂದ ವಿದ್ಯುದ್ವಿಭಜನೆ ಮಾಡಿದಾಗ ಈಥೇನ್ ಮತ್ತು ಇಂಗಾಲದ ಡೈಆಕ್ಸಾಯ್ಡ್ಗಳು ಮತ್ತು ಹೈಡ್ರೊಜನ್ ಋಣ ಧ್ರುವದಲ್ಲೂ ಬಿಡುಗಡೆಯಾಗುವವು .

೧೮೪೮ರಲ್ಲಿ ಜರ್ಮನ್ ರಸಾಯನ ವಿಜ್ನಾನಿ ಎ.ದಬ್ಲು.ಎಚ್.ಕೋಲ್ಟೆ ಈ ಕ್ರಿಯಾವಿಧಾನ ವನ್ನು ಶೋಧಿಸಿದುದರಿಂದ ಇದಕ್ಕೆ ಕೋಲ್ಟೆ ನಂಯೋಜನೆ ಎಂಬ ಹೆಸರು ಬಂದಿದೆ . ಎಥಿಲೀನ್ ಮತ್ತು ಹೈಡ್ರೊಜನ್ನುಗಳ ಮಿಶ್ರಣ ವನ್ನು ಉನ್ನತ ಉಷ್ಣತೆಯಲ್ಲಿ ಸೂಕ್ಶ್ಮಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವಾರ್ಧಕದ ಮೇಲೆ ಹಾಸಿಯೂ ಈಥೇನ್ ತಯಾರಿಸ ಬಹುದು .

ಈಥೇನ್ ಭ್ಹೌತ ಮತ್ತು ರಾನಾಯನಿಕ ಗುಣಗಳಲ್ಲಿ ಮೀಥೇನನ್ನು ಹೋಲುವುದು. ಇದು ಬಣ್ಣ ವಾಸನೆಗಳಿಲ್ಲದ ಅನಿಲ . ಸೆಂ.ಗ್ರೇ.ಉಷ್ಣತೆ ಮತ್ತು ೪೬ ವಾಯುಭಾರ .