ಪುಟ:Mysore-University-Encyclopaedia-Vol-2-Part-2.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಿಯೊಂದು ಶ್ರೀಮಂತ ಕುಟುಂಬವೂ ಅತ್ಯಂತ ಶ್ರೇಷ್ಠ ಕಲಾವಿದನ ಸೇವೆ ಪಡೆಯಲು ಪೈಪೋಟಿ ನಡೆಸುತ್ತಿದ್ದು, ಅತ್ಯುತ್ಕೃಷ್ಟ ಕಲಾಕೃತಿಗಳನ್ನು ಸಂಗ್ರಹಿಸಲು ಕಾತರವಾಗಿರುತ್ತಿತ್ತು. ಅದ್ದರಿಂದ ಆಗಿನ ಕಾಲದ ಯಾವ ನಗರದಲ್ಲೂ ಕಾಣದಷ್ಟು ಅಸಂಖ್ಯಾತ ಮಂದಿ ಕಲಾವಿದರಿಗೆ ಫ್ಲಾರೆನ್ಸ್ ನಗರ ತವರೂರಾಯಿತು.

ಫ್ಲಾರೆನ್ಸ್ ಹಾಗೂ ರೋಮನಲ್ಲಿ ವಾಸ್ತುಶಿಲ್ಪವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆದಿವು.ಪ್ರಾಚೀನ ಗ್ರೀಕ್, ರೋಮನ್ ವಾಸ್ತುಶಿಲ್ಪಿ ಕೃತಿಗಳನ್ನು ಅಭ್ಯಸಿಸಬೆಕೆಂಬ ಪ್ರೇರಣೆ, ಧೋರಣೆ ಬೆಳೆಯಿತು. ಆ ಕಾಲದ ಶ್ರೇಷ್ಠ ವಾಸ್ತುಶಿಲ್ಪಿಗಳಲ್ಲಿ ಫಿಲಿಪೋ ಬ್ರುನಲೆಶ್ಚಿ(1377-1446) ಅತಂತ್ಯ ಹೆಸರಾದವ. ಆತ ಹಲವು ವರ್ಷ ರೋಮ್ ನಲ್ಲಿದ್ದು ಅಲ್ಲಿನ ಶಿಲ್ಪದ ಭಗ್ನಾಅವೆಶೇಷವನ್ನೆಲ್ಲ ಸತತವಾಗಿ ಅಧ್ಯಯನ ಆಡಿದ. ಫ್ಲಾರೆನ್ಸ್ ಗೆ ಹಿಂತಿರುಗಿ ಹೊಸ ಶೈಲಿಯನ್ನುನುಸರಿಸಿ ಕಟ್ಟಡಗಳನ್ನು ನಿರ್ಮಿಸಲುಕ್ರಮಿಸಿದ. ಗಾಥಿಕ್ ಮಾದರಿಯ ಚೂಪು ಕಮಾನಿನ ಬದಲು ಉರುಟು ರೋಮನ್ ಕಮಾನು ತೋರಣಗಳನ್ನು ನಿರ್ಮಿಸಿದ ಹೆಚ್ಚಾಗಿ ಕೆತ್ತನೆ ಬಳಸದ್ದಿದರೂ ಕಂಬ, ಬೋದಿಗೆಗೆ ಪಾದಕಲ್ಲಿಗಳನ್ನು ಜೋಡಿಸುವುದರಲ್ಲಿ ರೋಮನ್ ಪದ್ಧತಿಯನ್ನೇ ಅನುಕರಿಸಿದ. ಫ್ಲಾರೆನ್ಸ್ ಕೆಥೆಡ್ರಲ್ ಗೋಳಕಗೋಪುರ ಅವನ ಕಲಾಪ್ರೌಢಿಮೆಗೆ ಚಿರಂತನ ಸಾಕ್ಷಿಯಾಗಿದೆ. ಸ್ವಲ್ಪ ಕಾಲದ ಅನಂತರ ಈ ಶಿಲ್ಪ ಶೈಲಿಯನ್ನೇ ಉಪಯೋಗಿಸಿ ಅರಮನೆ ಮತ್ತು ಸಾರ್ವಜನಿಕ ಸೌಧನಗಳನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು. ಫ್ಲಾರೆನ್ಸ್ ನ ಸಂದಿಗೊಂದಿಗೆ ರಸ್ತೆಗಳಲ್ಲಿ, ದಪ್ಪಕಲ್ಲುಗಟ್ಟಿಗಳಿಂದ ಕಟ್ಟಲಾದ ಅರಮನೆಗಳು ಕೋಟೆಗಳಂತೆ ಭವ್ಯವಾಗಿದ್ದವು. ಹೊರಗೆ ನೊಡಲು ದೈತ್ಯಾಕಾರದ ತಖೆದಿದ್ದರೂ ಒಳಭಾಗವನ್ನು ಹಿತಮಿತವಾಗಿ ಸಿಂಗರಿಸಲಾಗುತ್ತಿತು. ಅವುಗಳಲ್ಲಿ ಶಿಲ್ಪಾಕೃತಿಗಳಿಂದ ರಚಿತವಾದ ನೀರಿನ ಕಾರಂಜಿಗಳು, ವಿಸ್ತಾರವಾದ ಕೊಠಡಿಗಳು, ಎತ್ತರದ ಗೋಡೆಗಳಿಂದಾವೃತವಾದ ತೋಟಗಳು, ಲತಾಕುಂಜಗಳು ತುಂಬಿರುತ್ತಿದ್ದವು.

ಮೈಕೆಲೇಂಜಲೊ ಕಟ್ಟಿದ ಮೆಡಿಚಿಯ ಅರಮನೆ ಇಂಥ ಭವ್ಯಕಟ್ಟಡಗಳಲ್ಲಿ ಒಂದು. ಆ ಕಾಲದ ಇನ್ನೊಬ್ಬ ಸುಸಂಸ್ಕೃತ ವಿದ್ವಾಂಸಶಿಲ್ಪಿ ಲಿಯಾನ್ ಬ್ಯಾಟಿಸ್ಟ ಆಲ್ಬರ್ಟಿ ಮುಂದಿನ ವಾಸ್ತುಶಿಲ್ಪ ಪರಂಪರೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಆಡಂಬರ ವೈಭವಗಳಿಂದ ತುಂಬಿದ ರೋಮ್ ನಗರದ ತುಂಬಾ ಫಾರ್ನೀಸ್ ಅರಮನೆಯಂಥ ಭವ್ಯೆಕತ್ಟದಗಳೂ ಶ್ರೀಮಂತರ ಸೌಧಗಳೂ ಚರ್ಚುಗಳೂ ತುಂಬಿದ್ದವು. ಹಲವು ಅಂತಸ್ತಿನ ಕಟ್ಟಡಗಳನ್ನು ಕಟ್ಟುವುದಕ್ಕ್ರೆ ಸುಣ್ಣಕಲ್ಲು ಉಪಯೋಗಿಸುವುದನ್ನು ಪ್ರಾರಂಭಿಸಿದವನೆಂದರೆ ಆಂಟೊನಿಯಾ ಸ್ಯಾಂಗೆಲೊ ಫಾರ್ನೆಸ್ ಅರಮನೆಯನ್ನು ಇವನೇ ಪ್ರಾರಂಭಿಸಿದನೆಂದರೆ ಅದರ ಮೇಲುಗಡೆಯ ಅಂತಸ್ತನ್ನು ರಚಿಸಿದವ ಮೈಕೆಲೋಂಜಲೊ. ಆಗಿನ ಕಾಲದ ಮತ್ತೊಬ್ಬ ಮಾಹಾಶಿಲ್ಪಿ ಮಿಲಾನಿನ ಡೊನಾಟೊ ಬ್ರಮಾಂಟೆ (1444-1514). ಈತ ಮಿಲಾನಿನಿಂದ ದೇಶಭ್ರಷ್ಟನಾಗಿ ರೋಮ್ ಗೆ ಓಡಿಹೋದ. ಅಲ್ಲಿ ಪಡೆದ ಸ್ಫೂರ್ತಿಯಿಂದ ಮೊಂಟಾರಿಯೋದಲ್ಲಿನ ಚರ್ಚಿನ ನಡುವೆ ಕಟ್ಟಿದ ಅನರ್ಘ್ಯರತ್ನದಂಥ ಪುಟಾಣಿ ಮಂದಿರ (ಟೆಂಪಿಯೆಟ್ಟೊ) ಇಟಲಿ ವಾಸ್ತುಶಿಲ್ಪದ ಮಹತ್ ಸಾಧನೆಗೊಂದು ಉದಾಹರಣೆ. ಪೋಪ್ ಎರಡನೆಯ ಜೂಲಿಯಸ್ ಸೇಂಟ್ ಪೀಟರ್ ಮಂದಿರವನ್ನು ಪುನರುಜ್ಜೀವಗೊಳಿಸಲು ಯೋಚಿಸಿ ನಡೆಸಿದ ಶಿಲ್ಪಸ್ಪರ್ಧೆಯಲ್ಲಿ ಬ್ರಮಾಂಟೆ ಯಶಸ್ವಿಯಾದ. ಆತನಿಂದ ಪ್ರಾರಂಭವಾಗಿ ಅನಂತರ ೧೨೦ ವರ್ಷಗಳಾದರೂ ಮುಗಿಯದೆ ಹಾಗೇ ಉಳಿದ ಈ ದೈತ್ಯ ಕಟ್ಟಡವನ್ನು ಮುಗಿಸುವ ಉದ್ದೇಶದಿಂದ ಮೈಕೆಲೇಂಜಲೊ ಸಹ ತನ್ನ ಬಾಳಿನ ಕೊನೆಯ ವರ್ಷಗಳನ್ನು ಆ ಕೆಲಸಕ್ಕೆ ವಿನಿಯೋಗಿಸಿದ. ವೆನಿಸ್ ಅತಂತ್ಯ ಸುಂದರವಾದ ದ್ವೀಪನಗರ, ಪ್ರಶಾಂತ ಪಟ್ಟಣ. ಅಲ್ಲಿ ಸುಂದರ ಗ್ರಂಥಾಲಯವನ್ನು ಕಟ್ಟಿ ಊರಿನ ಮಧ್ಯದಲ್ಲಿರುವ ಚೌಕವನ್ನು ಅತಂತ್ಯ ಮನೋಹರವಾಗಿ ನಿರ್ಮಿಸಿದ ಕೀರ್ತಿ ಶಿಲ್ಪಿ ಜಕೋಪೊ ಸಾನಸೊವಿನೊಗೆ ಸಲ್ಲಬೇಕು. ಗ್ರಾಂಡ್ ಕಾಲುವೆಯ ಮೇಲೆ ಕಟ್ಟಿದ ಅರಮನೆಯಲ್ಲಿ ಸದಾಕಾಲವೂ ನೀರು ಸರಬರಾಜು ನಡೆಯುವಂತೆ ನಿರ್ಮಿಸಿದ ವ್ಯವಸ್ಥೆ ಅಂದಿಗೆ ಅಚ್ಚರಿ ಉಂಟುಮಾಡುವಂಥದು ಸುಂದರವಾದ ಉದ್ಯಾನಗೃಹ (ವಿಲ)ಗಳನ್ನು ನಿರ್ಮಿಸಿದ ಆಂಡ್ರಿಯ ಪೆಲ್ಲೇಡಿಯಾ(1518-80) ಎಂಬಾತ ರೊಟಂಡೋ ಎಂಬ ಅತ್ಯಂತ ಚೆಲುವಾದ ಗೃಹಕಟ್ಟಿದ. ಇವನ ಶಿಲ್ಪಶೈಲಿ ಸುಮಾರು 3೦೦ವರ್ಷ ಇಟಲಿಯ ಶಿಲ್ಪಿಗಳಿಗೆ ಸ್ಫೂರ್ತಿಯಾಗಿ ಉಳಿಯಿತು.

ಎಲ್ಲಕ್ಕಿಂತ ಮಿಗಿಲಾಗಿ ಇತಲಿಯ ಶಿಲ್ಪಿಕಲೆ ಲೋಕಕ್ಕೆ ಚಿರನೂತನ ಮಾದರಿಗಳನ್ನು ಒದಗಿಸಿತು. ಫ್ಲಾರೆನ್ಸ್ ನ ಕೆಥೆಡ್ರಲ್ ಗಾಗಿ ಎರಡು ಭೀಮಾಕಾರದ ಕಂಚಿನ ದ್ವಾರಗಳನ್ನು ಕೆತ್ತಲು ಪ್ರಾರಂಭಿಸಿದ ಲೊರೆನ್ಸೋ ಘಿಬರ್ಟಿ ಅದನ್ನು ಮುಗಿಸಿದ್ದಿ ೨೦ ವರ್ಷಗಳ ಅನಂತರ. ಅದಾದಮೇಲೆ ಪ್ರಾರಂಭಿಸಿದ ಇನ್ನೊಂದು ಜೊತೆ ಬಾಗಿಲುಗಳನ್ನು ಮುಗಿಸಲು ಅವನಿಗೆ ೨೨ ವರ್ಷ ಹಿಡಿಯಿತು. ಬೈಬಲ್ ಕಥೆಯನ್ನು ನಿರೂಪಿಸುವ ಪ್ರತ್ಯೇಕವಾದ ಶಿಲ್ಪಾಕೃತಿಗಳಿಂದ ತುಂಬಿದ ಈ ಮಹಾದ್ವಾರಗಳು ಲೋಕವಿಖ್ಯಾತ ಕೃತಿಗಳು.

ಇಟಲಿಯ ಶಿಲ್ಪಿಗಳಲ್ಲಿ ಅನನ್ಯ ಸೋಪಜ಼್ಣತೆಗೆ ಹೆಸರಾದವನೆಂದರೆ ಡೋನಟೆಲ್ಲೊ, ಪರಸ್ಪೆಕ್ಟಿವ್ ಕಲೆ ಎಂದು ಕರೆಯುವ ಹೊಸ ಶಿಲ್ಪಶೈಲಿಯನ್ನು ಕಂಡುಹಿಡಿದವ ಈತನೇ. ಎಲ್ಲಿಂದ ನೋಡಿದರೂ ಎದ್ದುಕಾಣುವ ಉದ್ದಗಲ, ಘನಾಕೃತಿ ಪಡೆದ ಪ್ರತಿಮೆಗಳನ್ನು ಮೊಟ್ಟಮೊದಲು ಕಡೆದವ ಡೊನಟೆಲ್ಲೊ. ಮಾನವ ಅವಯವಗಳ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಭ್ಯಸಿಸಿ, ಕಲಾತ್ಮಕವಾಗಿ, ಜೀವಂತವಾಗಿ ರೂಪಿಸಿದ ಅಗ್ಗಳಿಕೆ ಇವನದು. ಕಂಚಿನಲ್ಲಿ ಕೆತ್ತಿದ ಡೇವಿಡ್, ಅಮೃತಶಿಲೆಯಲ್ಲಿ ರೂಪಿಸಿದ ಪ್ರಾವಾದಿಗಳು, ಕುದಿರೆಸವಾರ ಗಟಾಮೆಲಾಟೊನ ಚಿತ್ರಪ್ರತಿಮೆ-ಇವು ಜಗತ್ ಪ್ರಸಿದ್ಧ ಕೃತಿಗಳು.

ಪರಿಷ್ಕಾರವಾದ ಜೇಡಿಮಣ್ಣಿನಲ್ಲಿ(ಟೆರ್ರಕೋಟ) ಸುಲಭಸಾದ್ಯವಾದ, ಕಡಿಮೆ ವೆಚ್ಚ ತಗುಲುವ, ಶಿಲ್ಪಾಕೃತಿಗಳನ್ನು ಕಡೆದು ಬಣ್ಣ ಬಣ್ಣಗಳಿಂದ ಸಿಂಗರಿಸಿ, ನಯನಮನೋಹರ ಪ್ರತಿಮೆಗಳನ್ನು ನಿರ್ಮಿಸಿದವ ಲ್ಯೂಕಡೆಲ್ಲಾ ರೊಬ್ಬಿಯೊ.

ಜಗತ್ತಿನಲ್ಲೆಲ್ಲ ಚಿರಂತನ ವಿಖ್ಯಾತಿಹಳಿಸಿದ, ಚಿತ್ರಕಾರ, ಶಿಲ್ಪಿ ಎಂದರೆ ಮೈಕೆಲೇಂಜಲೊ(1475-1564). ಅಮೃತಶಿಲೆಯಲ್ಲಿ ಕೆತ್ತಿದ ಹದಿನೆಂಟು ಅಡಿ ಎತ್ತರದ ಇವನ ಡೇವಿಡ್ ಜಗತ್ತನ್ನೇ ಮೋಹಿಸುವಂಥ ಕೃತಿ.

ಚಿತ್ರಕಲೆ: ಸುಪ್ರಸಿದ್ಧ ಚಿತ್ರಕಾರ ಮಸಾಚಿಯೊ ಮಧ್ಯಯುಗದ ಸಂಪ್ರದಾಯವನ್ನು ಕಿತ್ತೊಗೆದು, ಸುಮಾರು ೨೦೦ ವರ್ಷಗಲವರೆಗೂ ಅಚ್ಚಳಿಯದೆ ನಿಲ್ಲುವಂತ ಹೊಸ ಸಂಪ್ರದಾಯ ಸ್ಥಾಪಿಸಿದ. ಫ್ಲಾರೆನ್ಸ್ ನ ಬ್ರಾಂಕಾಚಿ ಮಂದಿರದಲ್ಲಿ ಈತ ರಚಿಸಿರುವ ಅಮೋಘವಾದ ಭಿತ್ತಿಚಿತ್ರಗಳಲ್ಲಿ ಬೈಬಲ್ ಕಥೆಯ ಪಾತ್ರಗಳು ಜೀವಂತವಾಗಿವೆ. ಈತ ಚಿತ್ರಕಲೆಯಲ್ಲಿ ಪರಸ್ಪೆಕ್ಟಿವ್ (ಈಗ ತ್ರೀ ಡೈಮೆನ್ಷನ್ ಚಿತ್ರ ಎನ್ನುವ) ತಂತ್ರವನ್ನಳವಡಿಸಿಕೊಂಡ. ಇವನ ಶೈಲಿಯನ್ನು ಅನುಸರಿಸಿದರೂ ರೇಖಾಗಣಿತದ ಜಾನವನ್ನು ಉಪಯೋಗಿಸಿ ಸಿಲೆಂಡರ್ ಆಕೃತಿಯ ಚಿತ್ರಗಳನ್ನು ರಚಿಸಿದವನೆಂದರೆ ಫ್ರಾನ್ಸೆಸ್ಕಾ ಎಂಬ ಗಣಿತಶಾಸ್ತ್ರಜ, ಕಾಲವಿದ.

ಹೊಸ ಹುಟ್ಟಿನ ಕಾಲದ ಚಿತ್ರಕಲೆಯಲ್ಲಿ ಅತ್ಯಂತ ನವಿರಾದ ರಮ್ಯಕಾವ್ಯಮಯ ಅಂಶಗಳನ್ನು ರೂಪಿಸಿದವ ಸಾಂದ್ರೊಬೊಟೆಚೆಲ್ಲಿ (1444-1510). ಲಿಯೊನಾರ್ಡೊ ಡವಿಂಚೆ ಹೊಸಹುಟ್ಟಿನ ಕಾಲದ ಸರ್ವತೋಮುಖ ಪ್ರತಿಭೆಯ ಪ್ರತಿನಿಧಿ. ಮಾನವನ ಅಂತರಂಗದ ಗಾಢಭಾವನೆಗಳನ್ನು ಮುಖದ ಭಾವಭಂಗಿಗಳಲ್ಲಿ ಅತ್ಯಂತ ಸೂಕ್ಷ್ಮವೇದಿಯಾಗಿ ಚಿತ್ರಿಸುವುದರಲ್ಲಿ ಅವನಿಗೆ ಸಾಟಿಯಾದ ಕಲಾವಿದರು ಈವರೆಗೆ ಹುಟ್ಟಿಲ್ಲವೆನ್ನುತಾರೆ. ಅವನ ಕಲಾಭಿಜತೆಗೆ ಸಾಕ್ಷಿ ದಿ ಲಾಸ್ಟ್ ಸಪ್ಪರ್ (ಕೊನೆಯ ಔತಣ) ಒಂದೇ ಸಾಕು. ಅವನಂತೆಯೇ ಕೆಸರಾಂತ ವಿಖಾತ ಚಿತ್ರಕಾರ ರ್ರಾಫೆಲ್ ಸ್ಕಾನಜಿಯೊ (1483-1520), ಲಿಯೊನಾರ್ಡೊನಿಂದ ಪ್ರೇರಣೆ ಪಡೆದವ. ರೋಮಿನ ವ್ಯಾಟಿಕನ್ ಮಂದಿರದಲ್ಲಿ ಈತ