ಪುಟ:Mysore-University-Encyclopaedia-Vol-2-Part-2.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಚ್ಛೆ-ಇಚ್ಛೆ ಚೆನ್ನಾಗಿ ಬೆಳೆದ ನವಿರು ಪುಂಜದಿಂದಲೂ ಭದ್ರವಾಗಿ ಸೇರಿಕೊಂಡಿವೆ.ದೇಹದ ಮುಂಭಾಗ ಅಪೂರ್ಣ ಬೆಳೆವಣಿಗೆ ಪಡೆದಿದೆ.ಇದು ಒಂದೇ ಕಡೆ ನೆಲೆಸಿರುವ ಪ್ರಾಣಿಯಾದ್ದರಿಂದ ನವಿರು ಪುಂಜ ಸಮುದ್ರದ ತಳವನ್ನು ಬಲವಾಗಿ ಹಿಡಿದುಕೊಳ್ಳುಲು ಸಹಾಯ ಮಾಡುತ್ತದೆ.ಚೆನ್ನಾಗಿ ಈಜಬಲ್ಲವು. ಚರ್ಮದ ಹೊರಮಡಿಕೆಯ ಅಂಚುಗಳಲ್ಲಿ ರೂಪಿತವಾದ ಕಣ್ಣುಗಳಿವೆ.

ಚೆನ್ನಾಗಿ ಬೆಳೆದ ನವಿರು ಪುಂಜದಿಂದಲೂ ಭದ್ರವಾಗಿ ಸೇರಿಕೊಂಡಿವೆ.ದೇಹದ ಮುಂಭಾಗ ಅಪೂರ್ಣ ಬೆಳೆವಣಿಗೆ ಪ ಪೆಕ್ಪಿನ್ ಓಪರ್ ಕ್ಯುಲಾರಿಸ್ ಸಾಮಾನ್ಯವಾಗಿ ಬ್ರಿಟಿಷ್ ದ್ವೀಪಗಳ ದಂಡೆಯ ತಳಭಾಗದಲ್ಲಿ, ಚಿಪ್ಪುಗಳ ರಾಶಿಯ ಮಧ್ಯೆ ಸ್ವಲ್ಪ ಮಣ್ಣಿನೊಡನೆ ಬೆರೆತುಕೊಂಡಿರುತ್ತದೆ. ಪೆಕ್ಪಿನ್ ಉಪಜಾತಿಗಳ ಪ್ರತಿನಿಧಿಗಳಾದ ಸೂಡೊಮುಸ್ಸಿಯಂ ಸಮುದ್ರದ ಬಹಳ ಆಳದಲ್ಲಿ ಕಂಡುಬರುತ್ತವೆ.ಉದಾ.ಪೆಕ್ಪಿನ್ ನಿಯೊಸಿಯಾನಿಕಸ್ ಪೆಸಿಫಿಕ್ ಸಗಾರದಲ್ಲಿ ಸುಮಾರು ೬೩೫ ಮೀ ಆಳದಲ್ಲಿ ವಾಸಿಸುತ್ತದೆ.

ಇಚ್ಛೆ:ಬುದ್ಧಿಪೂರ್ವಕವಾಗಿ ತನಗೆ ಹಿತವೆಂದು ಕಂಡುಬಂದ ವಸ್ತುವಿಗೆ ಮಾನವ ತೋರುವ ಮಾನಸಿಕ ಅಪೇಕ್ಷೆ ಎಂದು ತತ್ತಶಾಸ್ತ್ರದಲ್ಲಿ ಹೇಳಿದೆ.ಪ್ರಾಣಿಸಹಜವಾದ ಬಯಕೆಯಲ್ಲಿ,ಇಚ್ಛೆಯಲ್ಲಿ ವಿಚಾರಶಕ್ತಿ ಅಡಗಿದೆ.ಆದ್ದರಿಂದ ನೈತಿಕದೃಷ್ಟಿಯಿಂದ ಮತ್ತು ವ್ಯಕ್ತಿತ್ವದ ದೃಷ್ಟಿಯಿಂದ ಇಚ್ಛೆಗೆ ಪ್ರಾಮುಖ್ಯ ಬಂದಿದೆ. ಇಚ್ಛೆಯಲ್ಲಿ ಸ್ವಭಾವದ ಸತ್ತ್ವವಿದೆ. ಹಸಿವಾದಾಗ ಆಹಾರವನ್ನು ಬಯಸುವುದು ಪ್ರಾಣಿಸಹಜವಾದ ಬಯಕೆ. ಆದರೆ ಮಾನವ ಆಹಾರವನ್ನು ಬಯಸಿದರೂ ಇಚ್ಛಿಸುವುದಿಲ್ಲ.

ಇಚ್ಛೆ ಮಾನವನ ಶೀಲಕ್ಕನುಗುಣವಾಗಿರುತ್ತದೆ. ಅದು ಶೀಲವೆಂಬ ವೃತ್ತದಲ್ಲಿ ಒಂದು ರೇಖೆ. ಆ ವೃತ್ತದ ಆಚೆ ಅದಕ್ಕೆ ಯಾವ ಅರ್ಥವೂ ಇಲ್ಲ. ಒಬ್ಬನ ಇಚ್ಛೆಯಿಂದ ಅವನ ಶೀಲವನ್ನು ತಿಳಿಯಬಹುದು.ಇಚ್ಛೆ ಅವನ ಧ್ಯೇಯವನ್ನು,ದೃಷ್ಟಿಕೋನವನ್ನು ಸೂಚಿಸುತ್ತದೆ.ಆದ್ದರಿಂದ ಇಚ್ಛೆ ಕ್ಷಣಿಕವಾದ ಮಾನಸಿಕ ಕ್ರಿಯೆಯಲ್ಲ.ಸಾಮಾನ್ಯ ಬಯಕೆಗಳಿಗಿಂತ ಅದು ತೀವ್ರವಾದುದು ಮತ್ತು ಅದರ ವ್ಯಾಪ್ತಿ ವಿಶಾಲವಾದುದು.ಮಾನವನ ಧ್ಯೇಯ ಬದಲಾದಾಗ ಅವನ ಇಚ್ಛೆಯ ಸ್ವರೂಪವೂ ಬದಲಾಗುತ್ತದೆ.ಅದಲ್ಲದೆ ಒಬ್ಬನೇ ವ್ಯಕ್ತಿಯಲ್ಲಿ ಅವನ ಸ್ವಭಾವ ವ್ಯತ್ಯಾಸವಾದಂತೆ ಇಚ್ಛೆಯೂ ವ್ಯತ್ಯಾಸವಾಗುತ್ತದೆ.ಬಾಲ್ಯದಲ್ಲಿ,ಯೌವನದಲ್ಲಿ,ಮುಪ್ಪಿನಲ್ಲಿ ಇಚ್ಛೆ ಬೇರೆ ಬೇರೆ ರೀತಿತಾಗಿರುತ್ತದೆ.

ಇಚ್ಛೆಗಳು ಪರಸ್ಪರ ವಿರೋಧಿಗಳಾಗಿ ಒಂದು ವ್ಯಕ್ತಿಯನ್ನು ಧರ್ಮಸಂಕಟಕ್ಕೀಡು ಮಾಡಬಹುದು.ಒಬ್ಬ ದೇಶಪ್ರೇಮಿ ಒಂದು ದೃಷ್ಟಿಯಿಂದ ಶಾಂತಿಯನ್ನೂ ಮತ್ತೊಂದು ದೃಷ್ಟಿಯಿಂದ ಯುದ್ಧವನ್ನೂ ಇಚ್ಛಿಸಬಹುದು.ಇಂಥ ಸಂಧರ್ಬದಲ್ಲಿ ಆತ ಯುಕ್ತಾಯುಕ್ತ ಪರಿಜ್ನಾನದಿಂದ ಒಂದು ಇಚ್ಛೆಗೆ ಮನಸ್ಸುಕೊಟ್ಟು ಮತ್ತೊಂದು ತಳ್ಳಿಹಾಕುತ್ತಾನೆ.ಅವನ ಶೀಲದ ಪ್ರಬಲವಾದ ಪ್ರವೃತ್ತಿಯಂತೆ ಅವನ ಒಂದು ಇಚ್ಛೆ ಗೆಲ್ಲುತ್ತದೆ.ಪ್ರಬಲವಾದ ಇಚ್ಛೆ ಆಕಾಂಕ್ಷೆಯ ರೂಪವನ್ನು ತಾಳುತ್ತದೆ.ಹೀಗೆ ನೈತಿಕ ಜೀವನದಲ್ಲಿ ಇಚ್ಛೆ ಒಂದು ಮೂಖ್ಯ ಅಂಗವಾಗಿದೆ.

ಇಚ್ಛೆ:ಮನಶ್ಶಾಸ್ತ್ರಾದ ರೀತ್ಯಾ ಇಚ್ಛೆಯ(ಡಿಸೈರ್)ವಿಷಯವನ್ನಿಲ್ಲಿ ಪ್ರತಿಪಾದಿಸಲಾಗಿದೆ.ಗುರಿಯ ಸ್ಪಷ್ಟ ತಿಳಿವಳಿಕೆ ಇದ್ದು ಸಾಧಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಮನಃಸ್ಥಿತಿಯನ್ನು ಇಚ್ಛೆ ಎಂದು ಕರೆಯಬಹುದು.ಇಚ್ಛೆಯ ವ್ಯಾಖ್ಯೆಯನ್ನು ಮಾಡುವವರಲ್ಲಿ ಎರಡು ಮುಖ್ಯ ಪಂಗಡಗಳನ್ನು ಗುರುತಿಸಬಹುದು.ಸುಖಯತತ್ತ್ವವಾದಿಗಳದ್ದು ಒಂದು ಗುಂಪು. ಇತರರದ್ದು ಇನ್ನೊಂದು ಗುಂಪು.

ಸುಖತತ್ತ್ವವಾದಿ ಪ್ರಕಾರ,ಇಚ್ಛೆಯ ಸಮಸ್ತ್ ಗುರಿ ಸುಖ.ಅಂದರೆ ಹಿತಕರವಾದ ಅನುಭವಗಳನ್ನು ಅರಸುವುದೂ ಮತ್ತು ಅಹಿತಕರವಾದ ಅನುಭವಗಳಿಂದ ತಪ್ಪಿಸಿಕೊಳ್ಳುವುದೂ ಮನುಷ್ಯನ ಎಲ್ಲ ಇಚ್ಛಾಕ್ರಿಯೆಗಳು ಪರಮ ಉದ್ದೇಶ(ಜೆ.ಎಸ್.ಮಿಲ್).ತಮ್ಮ ಈ ಅಭಿಪ್ರಾಯ ಸಮರ್ಥಿಸಿಕೊಳ್ಳ್ ಲು,ಸುಖತತ್ತ್ವವಾದಿಗಳು,ಪರಿಣಾಮವಾದಿಗಳ ನೆರೆವನ್ನು ಪಡೆಯುತ್ತಾರೆ.ಜೀವಿಯ ಪ್ರತಿಯೊಂದು ಸುಖಾನುಭವವೂ ಜೀವಸತ್ತ್ವವನ್ನು ಅಧಿಕಗೊಳಿಸಿದರೆ ಅದರ ಪ್ರತಿಯೊಂದು ದುಃಖಾನುಭವೂ ಜೀವಸತ್ತ್ವವನ್ನು ಕ್ಷೀಣಿಸುತ್ತದೆ(ಹರ್ಬರ್ಟ್ ಸ್ಪೆನ್ಸ್ ರ್).ಸುಖಾನುಭವ ಜೀವನದ ಅಲೆಯನ್ನು ಉಬ್ಬಿಸಿದರೆ ದುಃಖಾನುಭವ ಅದನ್ನು ಇಳಿಸುತ್ತದೆ. ಜೀವಪ್ರಪಂಚದ ವ್ಯಾಪಾರದಲ್ಲಿ ಈ ನಿಯಮ ಪ್ರಮುಖವಾಗಿರುವುದರಿಂದ,ಪ್ರತಿಯೊಂದು ಜೀವಿಯೂ ದುಃಖವನ್ನು ತಪ್ಪಿಸಿಕೊಂಡು,ಸುಖವನ್ನು ಪಡೆಯಬೇಕೆಂಬ ಇಚ್ಛೆಯಿಂದ ಪ್ರವರ್ತಿಸುತ್ತದೆ.ಹೀಗಿರುವಲ್ಲಿ,ಜೀವಿಯ ಇಚ್ಛೆಯ ಪರಮಧ್ಯೇಯ ಸುಖವಲ್ಲದೆ ಮತ್ತಾವುದೂ ಅಲ್ಲ ಎಂದು ವಾದಿಸುತ್ತಾರೆ,ಸುಖತತ್ತ್ವವಾದಿಗಳು.

ಮೇಲಿನ ಅಭಿಮತವನ್ನು,ಸುಖತತ್ತ್ವವಾದಿಗಳ ವಿರೋಧಿಗಳು ತೀವ್ರವಾಗಿ ಖಂಡಿಸಿದ್ದಾರೆ.ಸೌಖ್ಯವೇ ಇಚ್ಛೆಯ ಪರಮಗುರಿ ಎಂಬುದನ್ನು ಅವರು ಎಂದೂ ಒಪ್ಪುವುದಿಲ್ಲ.ತಮ್ಮ ವಿರೋಧವನ್ನು ಈ ಕಾರಣಗಳಿಂದ ಅ ಚೆನ್ನಾಗಿ ಬೆಳೆದ ನವಿರು ಪುಂಜದಿಂದಲೂ ಭದ್ರವಾಗಿ ಸೇರಿಕೊಂಡಿವೆ.ದೇಹದ ಮುಂಭಾಗ ಅಪೂರ್ಣ ಬೆಳೆವಣಿಗೆ ಪವರು ಸಮರ್ಥಿಸಿಕೊಳ್ಳುತ್ತಾರೆ:೧.ಸಾಮಾನ್ಯವಾಗಿ ನಾವು ಏನನ್ನು ಇಚ್ಚಿಸುತ್ತೇವೋ ಅದು ಸುಖವಲ್ಲ,ಉದಾ:ಸಾಮಾನ್ಯವಾಗಿ ನಾವು ಆಹಾರ ಮತ್ತು ಪಾನೀಯಗಳನ್ನು ಇಚ್ಛಿಸುತ್ತೇವೆ. ಆದರೆ,ಹೊಟ್ಟೆಬಾಕ ಮಾತ್ರ ತಿನ್ನುವ ಮತ್ತು ಕುಡಿಯುವುದರಿಂದುಂಟಾಗುವ ಸುಖವನ್ನು ಇಚ್ಛಿಸುತ್ತಾನೆ.೨.ಕೇವಲ ಸುಖವನ್ನೇ ಪ್ರಮುಖ ಗುರಿಯನ್ನಾಗಿ ಉಳ್ಳ ಇಚ್ಛೆ,ಮನಸ್ಸಿನ ಒಂದು ವಿಕಾರ ಭಾವ;ಅದು ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತದೆ.ಸದಾ ಸುಖವನ್ನು ಅರಸುವವನಿಗೆ,ಸುಖ ಬಿಸಿಲುಗುದರೆಯಗುತ್ತದೆ.ಸುಖವನ್ನು ಹಂಬಲಿಸಿದಷ್ಟೊ ಆತ ಅದರಿಂದ ದೂರವಾಗುತ್ತಾನೆ.ಸುಖಾನ್ವೇಷಿಗಳು ಒಂದು ಅತೃಪ್ತ ತಂಡ ಎಂದು ಹೇಳುವುದುಂಟು.ಎದನ್ನೇ ಸುಖತತ್ತ್ವವಾದ ವಿರೋಧಾಭಾಸ ಎಂಬುದಾಗಿ ಕರೆಯುತ್ತಾರೆ.೩.ಜೀವಶ್ರೇಣಿಯ ಅತ್ಯಂತ ಉನ್ನತಮಟ್ಟದಲ್ಲಿರುವ ಮಾನವ ತನೆಗೆ ಯೋಗ್ಯವೆನಿಸಿದ ವಸ್ತ್ತು,ಅದು ದುಃಖವನ್ನುಂಟು ಮಾಡುವುದಾದರೂ ಅದನ್ನು ಪಡೆಯುವ ಇಚ್ಛೆಯನ್ನು ಹೊಂದಿರಬಹುದು.ಉದಾ.ನೈತಿಕ,ಆಧ್ಯಾತ್ಮಿಕ ಮತ್ತು ಸೌಂದರ್ಯಾತ್ಮಕ ಆದರ್ಶಗಳನ್ನು ಸಾಧಿಸುವ ಇಚ್ಛೆ,ವ್ಯಕ್ತ್ತಿಗೆ ಅನೇಕ ವೇಳೆ ದುಃಖದಾಯಕವಾಗಿದ್ದರೂ ಅವನ್ನು ಪರಮಧ್ಯೇಯಗಳನ್ನಾಗಿ ಪಡೆದಿರುವುದುಂಟು.ತಪಸ್ಸಿನ ಇಚ್ಛೆ ಪ್ರತ್ಯಕ್ಷ ದುಃಖಕ್ಕೆ ಕಾರಣವಾಗುವುದಾದರೂ ಸಾಧಕ ಅದನ್ನು ಬಿಡಲಾರ.

ಆದುದರಿಂದ,ಜೈವಿಕತತ್ತ್ವದ ಬಂಧನದಿಂದ ಹೆಚ್ಚುಕಡಿಮೆ ಮುಕ್ತನಾದ ಮಾನವ ತನ್ನ ಸಂಕಲ್ಪಕ್ಕೆ ಯೋಗ್ಯವೆನಿಸಿದ ಗುರಿಯನ್ನು,ಅದು ಸುಖಕಾರಕವಾಗಲಿ,ದುಃಕಾರಕವಾಗಲಿ,ಬುದ್ಧಿಪೂರ್ವಕವಾಗಲಿ ಆರಿಸಿಕೊಳ್ಳುತ್ತಾನೆ.ಅಂದ ಮೇಲೆ ಮಾನವನ ಇಚ್ಛೆಯಲ್ಲಿ ಗುರಿಯ ಜಾನ ಅಂತರ್ಗವಾಗಿದೆ ಎಂದು ಹೇಳಿದ ಹಾಗಾಯಿತು. ಎಲ್ಲಿ ಜಾನವಿರುವುದಿಲ್ಲವೋಅಲ್ಲಿ ಇಚ್ಛೆಯಿರುವುದಿಲ್ಲ(ಸುಲ್ಲೆ).ಅಂಥ ಜಾನ ಗತಿಸಿದ ಹಾಗೂ ನಾವು ಮತ್ತೆ ಮತ್ತೆ ಅನುಭವಿಸಬಹುದಾದ ತೃಪ್ತಿಯ ಅನುಭವದ ನೆನಪಿನಿಂದ ಕೂಡಿರುತ್ತದೆಯಲ್ಲದೆ,ಭವಿಷ್ಯದಲ್ಲಿ ನಾವು ಪಡೆಯಬಹುದಾದ ಅಂಥ ಅನುಭವಗಳ ಕಲ್ಪನೆಯನ್ನೂ ಒಳಗೊಂದಿರುತ್ತದೆ.

ಕೇವಲ ಸುಖಾನುಭವದಿಂದ ಸಮಸ್ತ್ ಇಚ್ಛೆಯೂ ತೃಪ್ತಿಹೊಂದುವುದಿಲ್ಲ.ಸುಖ ತಾತ್ಕಾಲಿಕವಾದುದಾದರೆ,ಇಚ್ಛೀ ನಿರೀಕ್ಷಾಪ್ರದವಾಗಿರುತ್ತದೆ.ಅಂದರೆ,ಬುದ್ಧಿ ತಾತ್ಕಾಲಿಕ ಇಚ್ಛೆಗಳನ್ನು ಮೀರಿ ನಿಲ್ಲುತ್ತದೆ.ಉದಾ:ದುರಂತವನ್ನು ಪ್ರತಿಪಾದಿಸುವ ಕಲೆಯೊಂದರಲ್ಲಿ,ಸತತವಾಗಿ ಬರುವ ದೂಃಖದ ನಿರೂಪಣೆಯಿದ್ದರೂ ಆ ಕಲೆಯ ಆಸ್ವಾದನೆಯಿಂದ ನಮಗೆ ತೃಪ್ತ್ತಿಯುಂಟಾಗುವುದು ನಿಜ.ಅನೇಕ ವೇಳೆ,ಬೌದ್ಧಿಕ ಪ್ರೇರಣೆಯಿಂದಾಗಿ,ತನ್ನ ಇಚ್ಛೆಯನ್ನು ತೃಪ್ತಿಪಡಿಸಿಕೊಳ್ಳಲೂ ಮಾನವ ಸುಖ ದುಃಖಾನುಭವಗಳನ್ನು ಮೀರಿ ನಿಲ್ಲುತ್ತಾನೆ.

ಮನೋವಿಜ್ನಾನಿಗಳು ಇಚ್ಛೆಗೆ ಒಂದು ನಿರ್ದಿಷ್ಟ್ ಅರ್ಥವನ್ನು ಕೊಡಲು ಯತ್ನ್ನಿಸಿದ್ದಾರೆ.ಗುರಿಯ ಸ್ಪಷ್ಟ ಅರಿವಿರುವ ಮನಃಸ್ಥಿತಿಯೇ ಇಚ್ಛೆ(ಜೇಮ್ಸ್ ಡ್ರೆವರ್).ಇಚ್ಛೆ ಒಂದು ಅಭಿಪ್ರೇರಣೆ(ಮೋಟಿವ್).ಅದು ಗುರಿಯೊಂದರತ್ತ ನಿರ್ದೇಶಿತವಾಗಿರುವ ಮನಃಸ್ಥಿತಿ. ಈ ಸ್ಥಿತಿತಲ್ಲಿ,ಪ್ರಬಲವಾದ ವೇದನಾನುಭವವಿರುವುದರ ಜೊತೆಗೆ,ಗುರಿಗೆ ಸಂಬಂಧಿಸಿದ ಜ್ನಾನವೂ ಇರುತ್ತದೆ(ಆರ್.ಎಸ್.ವುಡ್ ವರ್ತ್):ಯಾವುದಾದರೂ ಗುರಿಯತ್ತ ವ್ಯಕ್ತಿಯ ಪ್ರವರ್ತನೆಯನ್ನು ನಿರ್ದೇಶಿಸುವ ಮತ್ತು ಅತೃಪ್ತಿಯಿಂದ ಕುಡಿರುವ ಭಾವನಾಸ್ಥಿತಿಯೇ ಇಚ್ಛೆ ಈ ಇಚ್ಛೆಯ ದೃಷ್ಟಿಭಾವೀರೂಪವಾಗಿದ್ದು,ತತ್ಕಾಲದ ಸನ್ನಿವೇಶಕ್ಕೆ ಸಂಬಂಧಿಸಿರುವುದಿಲ್ಲ (ಥೌಲೆಸ್).ಒಟ್ಟಿನಲ್ಲಿ,ಇಚ್ಛೆ,ಒಂದು ಜಟಿಲವಾದ ಮತ್ತು ಚಲಾತ್ಮಕವಾದ ಸಮ್ಮಿಶ್ರ್ ಮನಃಸ್ಥಿತಿ.ಅದು ಮೂರು ವಿಧವಾದ ಚಿತ್ತಾಂಶಗಳನ್ನೂ ಒಳಗೊಂಡಿರುತ್ತದೆ:ಜ್ನಾನ(ಕಾಗ್ನಿಷನ್),ಭಾವನೆ(ಅಫೆಕ್ಷನ್)ಮತ್ತು ಪ್ರವರ್ತನೆ.ಇಚ್ಛೆಯಲ್ಲಿ,ಇಚ್ಛಿತ ವಸ್ತುವಿನ ಜ್ಞಾನ ಅಡಕವಾಗಿರುತ್ತದೆ. ಎಚ್ಛೆತ ವಸ್ತು ನಮಗೆ ಚಿರಪರಿಚಿತವಾದುದಾಗಿರಬಹುದು ಅಥವಾ ನೂತನವಾದುದಾಗಿರಬಹುದು. ಎರಡನೆಯದಾಗಿ, ಇಚ್ಛೆಯಲ್ಲಿ, ಸುಖದುಖ್ಃಆನುಭವಗಳ ಅತವ ನಲಿವು ಮತ್ತು ನೋವುಗಳ ನಿರೀಕ್ಷಣೆಯ ಮಿಶ್ರಭಾವವಿರುತ್ತದೆ. ಭವಿಷ್ಯದಲ್ಲಿ ಹಿತಕರವಾದ ವಸ್ತುಗಳ ಸಂಯೋಗವಾಗುವಾಗ ದೊರೆಯಬಹುದಾದ ತೃಪ್ತಿಯ ನಿರೀಕ್ಷಣೆಯಿಂದ ಸುಖಾನುಭವವೂ ನಿಜಸ್ಥಿತಿ ಮತ್ತು ನಿರೀಕ್ಷಿತ ತೃಪ್ತಿ ಇವುಗಳ ನಡುವೆ ಇರುವ ಅಂತರದ ಪ್ರಜ್ಞೆಯಿಂದ ಉಂಟಾಗುವ ದುಃಖಾನುಭವವೂ ಅಂತರ್ಮಿಳಿತವಾಗಿರುತ್ತವೆ. ಅಂದರೆ ಇಚ್ಛೆಯಲ್ಲಿ, ನಿರೀಕ್ಷಣ ಸುಖ ಮತ್ತು ತಾತ್ಕಾಲದ ಅತೃಪ್ತಿಯ ನೋವು ಇವೆರಡೂ ಬೆರೆತಿರುತ್ತವೆ. ಸುಖಾನುಭವ, ಗುರಿಯ ಸಾಧ್ಯತೆಗೆ ಅನುಗುಣವಾಗಿದ್ದರೆ, ದುಃಖಾನುಭವ ಆ ಗುರಿಯ ಸಾಧನೆಯಲ್ಲಿ ಆಗಬಹುದಾದ ವಿಳಂಬ ಮತ್ತು ಉಂಟಾಗಬಹುದಾದ ಅಡೆತಡೆಗಳಿಗೆ ಅನುಗುಣವಾಗಿರುತ್ತದೆ. ಕೊನೆಯದಾಗಿ, ಎಚ್ಛಿತ ವಸ್ತುವನ್ನು ಪಡೆಯುವುದರತ್ತ ಇರುವ ಪ್ರವರ್ತನೆ ಇಚ್ಛೆಯಲ್ಲಿ ಅಡಕವಾಗಿರುವ ಅತ್ಯಂತ ಪ್ರಬಲವಾದ ಚಿತ್ತಪ್ರವೃತ್ತಿ, ವಸ್ತುವಿನತ್ತ ಇರುವ ಆಸಕ್ತಿ ಮತ್ತು ಅದನ್ನು ಸಾಧಿಸುವುದಕ್ಕಾಗಿ ಪಡುವ ಪರಿಶ್ರಮಗಳು ಅದರ ಪ್ರಮುಖ ಅಂಶಗಳು.

ಹೆಲವು ಸ್ವಭಾವ ಸದೃಶ ಚಿತ್ತಪ್ರಕೃತಿಗಳಿಂದ, ಇಚ್ಛೆಯನ್ನು ಬೇರ್ಪಡಿಸುವುದು ಅವಶ್ಯಕ. ಅವುಗಳಲ್ಲಿ ಆಸೆ (ಅಪೆಟೈಟ್) ಆವೇಗ (ಇಂಪಲ್ಸ್) ಮತ್ತು ಅಪೇಕ್ಷೆ (ವಿಷ್)- ಇವು ಪ್ರಮುಕವಾಗಿದೆ. ಶರೀರದ ಯಾವುದಾದರೂ ಬೇಡಿಕೆಯನ್ನು ಈಡೇರಿಸಬೇಕೆಂದಿರುವ ಅಸ್ಪಷ್ಟ ಪ್ರಜ್ಞೆಯೇ ಆಸೆ. ಉದಾ: ಹಸಿವನ್ನು ಅಥವ ಕಾಮವನ್ನು ತೀರಿಸಿಕೊಳ್ಳಲು ಪ್ರಾಣಿಯೊಂದರಲ್ಲಿ ಮೂಡಬಹುದಾದ ಅಸ್ಪಷ್ಟ ಪ್ರಜ್ಞೆ ನಮ್ಮನ್ನು ಗುರಿಯತ್ತ ತಳ್ಳುವ ಚಿತ್ತಪ್ರವೃತ್ತಿಯೇ ಆವೇಗ. ಇದರಲ್ಲಿ ತಾನು ಕಾರ್ಯಪ್ರವೃತ್ತನಾಗುವ ಪ್ರಜ್ಞೆ ವ್ಯಕ್ತಿಗೆ ಇರುವುದಾದರೂ ಅದರ ಆಗುಹೋಗುಗಳ ಅರಿವು ಇರುವುದಿಲ್ಲ. ಆತ ಕಾರ್ಯಂಧನಾಗುತ್ತಾನೆ.