ಪುಟ:Mysore-University-Encyclopaedia-Vol-2-Part-2.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಯಕಿ ಮಾನಸಿಕ ದೌರ್ಬಲ್ಯದಿಂದ ವಿಪರೀತವಾಗಿ ಆಡುವ ಆಧುನಿಕ ಸ್ತ್ರೀಯರ ಪ್ರತಿನಿಧಿ. ನಿಪುಣ ನಿರ್ಮಾಪಕ (ದಿ ಮಾಸ್ಟರ್ ಬಿಲ್ಡರ್) ಕಲೆಗಾರರ ಸ್ಥಿತಿಗತಿಗಳ ಮತ್ತು ಆದರ್ಶಗಳ ಸಾಂಕೇತಿಕ ಚಿತ್ರಣ, ಪುಟ್ಟ ಇಯೋಲ್ಫ್(ಲಿಟ್ಲ್ ಇಯೋಲ್ಫ್ 1894) ಮಕ್ಕಳ ವಿಷಯದಲ್ಲಿ ತಂದೆತಾಯಿಗಳ ಹೊಣೆಯನ್ನು ಕುರಿತದ್ದು.ಜಾನ್ ಗೇಬ್ರಿಯಲ್ ಬಾರ್ಕಮನ್ ಮತ್ತು ಸತ್ತವರು ನಾವು ಎಚ್ಚೆತ್ತಾಗ(ವೆನ್ ವಿ ಡೆಡ್ ಅವೇಕ್) ಇಬ್ಸೆನ್ನನ ಕೊನೆಯ ನಾಟಕಗಳು.ಮೊದಲನೆಯದು ವಾಸ್ತವಿಕ ವಸ್ತು ಪ್ರತಿಪಾದಕವಾರೆ,ಎರಡನೆಯದು ಸಂಕೇತಪ್ರಧಾನವಾದುದು.ಆದರೆ ಎರಡು ಪ್ರೇಮಶೂನ್ಯತೆಯ ಫಲವಾಗಿ ಹೃದಯ ಬರಿದಾಗಿ ಮೃತಸಮಾನರಾಗುವವರನ್ನು ಚಿತ್ರಿಸುತ್ತವೆ.

ಆಧುನಿಕ ನಾಟಕದ ಮೇಲೆ ಇಬ್ಸೆನ್ನನ ಪ್ರಭಾವ ಮಹತ್ತರವಾದುದು.ಆಧುನಿಕ ನಾಟಕದ ಪಿತಾಮಹನೆಂಬ ಹೆಸರು ಅವನಿಗೆ ಸಂದಿದೆ.ನಾಟಕ ಆದ್ಯಗಮನ ಕೊಡಬೇಕಾದುದು ರಚನೆಗೆ-ಕಲೆಗೆ-ಎಂಬ ಫ್ರೆಂಚ್ ಲೇಖಕರ ವಾದವನ್ನು ಆತ ನಿರಾಕರಿಸಿದ.ಅವನ ನಾಟಕಗಳು ತಂತ್ರದ ದೃಷ್ಟಿಯಿಂದ,ರಂಗಸ್ಥಳದಲ್ಲಿ ಉಂಟುಮಾಡುವ ಪರಿಣಾಮದ ದೃಷ್ಟಿಯಿಂದ ಬಲಹೀನವೆಂದೇನೂ ಅಲ್ಲ.ಬಾಲ್ಯದಿಂದಲು ನಾಟಕಶಾಲೆಗಳ ಮತ್ತು ನಾಟಕಗಳ ವಾತಾವರಣದಲ್ಲಿ ಬೆಳೆದು ದುಡಿದವನ ಕೃತಿಗಳ ರಚನೆ ಸಹಜವಾಗಿಯೇ ಚೆನ್ನಾಗಿರಬೇಕು.ಆದರೆ ಕೇವಲ ಬಾಹ್ಯತಂತ್ರಗಳಿಗಿಂತಲೂ ಹೆಚ್ಚಾಗಿ ಆತ ಗಮನಕೊಟ್ಟದ್ದು ನಾಟಕದ ವಸ್ತುವಿಗೆ.ಅವನಿಗೆ ನಾಟಕ ಪ್ರತಿಪಾದಿಸುವ ವಿಷಯ ಅದರ ಜೀವಾಳ.ತನ್ನ ಕಾಲದ ಸಾಮಾಜಿಕ ಮತ್ತು ಇತರ ಸಮಸ್ಯೆಗಳನೇಕವನ್ನು ಆತ ರಂಗಭೂಮಿಗೆ ತಂದು ತಂತ್ರಕ್ಕಿಂತಲೂ ಹೆಚ್ಚಾಗಿ ಪಾತ್ರಗಳ ಗುಣದೋಷಗಳಿಗೆ ಪ್ರಾಮುಖ್ಯವನ್ನು ಕೊಟ್ಟುದಲ್ಲದೆ ಕುಟುಂಬಗಳಲ್ಲಿ,ಸಮಾಜದಲ್ಲಿ,ನಡೆಯುವ ಮಾನಸಿಕ ಘರ್ಶಣೆಗಳನ್ನು ವಸ್ತುವಾಗಿ ಉಳ್ಳ ನಾಟಕಗಳನ್ನು ಸೃಜಿಸಿದ.ನೀರ್ಗಲ್ಲಾ ಹೊನಲುಗಲೂ ಪೈನ್ ಮರಗಳ ಹೆಗ್ಗಾಡುಗಳು ಇನ್ನು ಸಾಕು.ಇಂದು ನಮಗೆ ಬೇಕಾಗಿರುವುದು ಜನಮನಗಳಲ್ಲಿ ನಡೆಯುತಿರುವ ಮೂಕ ಚಿಂತನೆ-ಇದು ಆತ ತನ್ನ 22ನೆಯ ವಾರ್ಶದಲಿ