ಪುಟ:Mysore-University-Encyclopaedia-Vol-2-Part-2.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಆರ್ ಪಿ . (ಎಂಟರ್‍ಪ್ರೈಸಿಂಗ್ ರಿಸೋಸ್೯ ಪ್ಲಾನಿಂಗ್)-ಇರಾಂತಿಮಮ್ ಇಲ್ಲಿ ಜೀವಿ ಇದ್ಧಿರಬಹುದೇ ಎಂಬ ಸರಂದೇಹ ಆಧಾರ ರಹಿತವೆಂದು ಅವರ ಅಭಿಪ್ರಾಯ.ಮೊದಲೇ ಇದ್ದ ಗೂಡುಗಳಲ್ಲಿ ಕ್ಯಾಲ್ಸೈಟ್ ಮತ್ತು ಸಪೆ೯೦ಟೈನ್ ಖನಿಜ ದ್ರಾವಣಗಳು ಒಳಹರಿದು ನಿಕ್ಷೇಪಗೊಳ್ಳುವಿಕೆಯಿರಿದ ಈ ಪಟ್ಟಿಗಳು ಅಗಿವೆಯೆರಿದು ಕೀಲ್‍ನ ಪ್ರೋಫೆಸರ್ ಮೋಬಿಯಸ್ ಹೇಳಿದ್ಧಾನೆ. ಇಯೋಜೋನ್ ಕೆನೆಡೆನ್ಸಿಸ್ ರೀತಿಯ ವಿನ್ಯಾಸ ಖನಿಜಪ್ರಪಂಚದಲ್ಲಿ ಎಲ್ಲೂ ಕಂಡು ಬಂದಿಲ್ಲದಿರುವುದೇನೋ ನಿಜ. ಆದರೆ ಅಂಥ ಜೀವಯೊಂದು ಇದ್ದಿದ್ದರೆ ಅದರಪಳೆಯುಳಿಕೆ ಅಷ್ಟು ಕಲಕಿ ರೂಪಾಂತರಗೊಂಡಿರುವ ಶಿಲೆಗಳಲ್ಲಿ ಉಳಿದಿರುವ ಅವಕಾಶವಂತೂ ತೀರ ಅಸಂಭಾವ್ಯ ಅದ್ದರಿಂದ ಇಂಥ ಸಂದಭ೯ಗಳಲ್ಲಿ ನಿಖರವಾಗಿ ಜೀವಸಂಬರಿಧದ್ದೇ ಎಂದು ತೋರುವ ವಸ್ತುವನ್ನಲ್ಲದೆ ಬೇರಾವುದನ್ನೂ ಜೀವಾವಶೇಷೆ ಎರಂದು ಅಂಗೀಕರಿಸುವುದು ಸಾಧುವಲ್ಲ. ಪೂರ್ವ ಕೇಂಬ್ರಿಯನ್ ಕಲ್ಪದಲ್ಲಿ ತೀರ ಸರಳ ಜೀವಿಗಳು ಮಾತ್ರವಿದ್ದವು. ಈ ಕಾರಣದಿಂದಲೂ ಇಯೊಜೋನ್ ಕೆನಡೆನ್ಸಿಸ್‍ ಜೀವಾವಶೇಷವಲ್ಲ ಎ೦ದು ತರ್ಕಿಸಬಹುದು. (ಡಿ.ಆರ್.) ಇ ಆರ್ ಪಿ . (ಎಂಟರ್‍ಪ್ರೈಸಿಂಗ್ ರಿಸೋಸ್೯ ಪ್ಲಾನಿಂಗ್): ಉದ್ಯಮ ಮಟ್ಟದಲ್ಲಿ ವಸ್ತು ಸಾಮಗ್ರಿ ಹಣಕಾಸು ಮತ್ತು ಮಾನವ ಸಂಪನ್ಮೂಲದ ಕೇರಿದ್ರಿಕೃತ ಯೋಜನೆ ಅಂದರೆ ಒ೦ದು ಸೆಂಸ್ಥೆಯ ಎಲ್ದಾ ಇಲಾಖೆಗಳು ಮತ್ತು ಕಾರ್ಯಗಳನ್ನು ಒಂದೇ ಗಣಕಯಂತ್ರ ವ್ವವಸ್ಥೆಯಲ್ಲಿ ಕ್ರೋಡೀಕರಿಸಿ ಆಯಾ ಇಲಾಖೆಗಳ ಬೇಡಿಕೆಗಳಿಗೆ ಸೇವೆ ಸಲ್ಲಿಸುವುದು ಇ ಆರ್‍ಪಿ-ಯ ನೈಜ ಗುರಿ. ಇಆರ್‍ಪಿ- ತಂತ್ರಾಂಶ ಹಣಕಾಸಿನ ನುರಿತ ಕೆಲಸಗಾರರಿಗೆ. ಮಾನವ ಸಂಪನ್ಲೂಲದ ಕೆಲಸಗಾರರಿಗೆ ಮತ್ತು ಕೋಠಿಯಕೆಲಸಗಾರರಿಗೂ ಸೇವೆಯನ್ನು ಒದಗಿಸುತ್ತದೆ. ಪ್ರತಿಯೊಂದು ಇಲಾಖೆಯಲ್ಲಿ ತನ್ನದೇ ಆದ ನುರಿತ ಗಣಕಯರಿತ್ರ ವ್ಯವಸ್ಥೆ ಇರಬಹುದು. ಆದರೆ ಇಆರ್‍ಪಿ ಇವೆಲ್ಲವನ್ನೂ ಕ್ರೋಡೀಕರಿಸಿ ಒ೦ದೇ ಏಕೀಕೃತ ತಂತ್ರಾಂಶದಲ್ಲಿ, ಒಂದೇ ದತ್ತಾಂಶದಲ್ಲಿ ಇರಿಸಿ ಎಲ್ಲ ಇಲಾಖೆಗಳು ಸುಲಭವಾಗಿ ಮತ್ತು ತ್ವರಿತಗತಿಯಲ್ಲಿ ಮಾಹಿತಿಯೆನತ್ನಿ ಹಂಚಬಹುದು ಮತ್ತು ಪಡೆಯಬಹುದು. ಇಆರ್‍ಪಿ ಇಲ್ಲದೆ ಕಾಯ೯ ವೈಖರಿ ಸಣ್ಣ ಉದಾಹರಯೆಂದರೆ ಒಬ್ಬ ಗ್ರಾಹಕ ತನ್ನ ಸಾಮಗ್ರಿ ಖರೀದಿಗೆ. ಗ್ರಾಹಕರ ಆದೇಶವನ್ನು ಬಹುಶಃ ಪತ್ರದ ಮುಖಾಂತರ ಅದೇಶಿಸಿ. ಪ್ರತಿ ಇಲಾಖೆಯುಲ್ಲೂ ದಾಖಲಿಸಬೇಕಾಗುತ್ತದೆ.ಇದು ನಿಧಾನಗತಿಯಲ್ಲಿ ಅಥವಾ ಒಂದು ಬಾರಿ ಕಳೆದುಹೇಗುವ ಸಂದರ್ಭಗಳು ಇರುತ್ತವೆ. ಒಂದು ವೇಳೆ ಸಾಮಗ್ರಿ ರವಾನೆಯಾಗಿದೆಯೇ? ಎಂದು ತಿಳಿಯಲು ಯುವ ಇಲಾಖೆಯಲ್ಲೂ ನಿಖರವಾದ ಮಾಹಿತಿ ಲಭ್ಯವಿರುವುದಿಲ್ಲ. ಅಥವಾ ಹಲವಾರು ದಾಖಲಾತಿ ಪುಸ್ತಕಗಳನ್ನು ಹುಡುಕಬೇಕಾಗುತ್ತದೆ. ಇಆರ್‍ಪಿ ವ್ಯವಸ್ಥೆಯಲ್ಲಿ ಒಂದೇ ತಂತ್ರಾಂಶವನ್ನು ಹಲವು ಇಲಾಖೆಗಳು ಅನುಗುಣವಾಗಿ ಹಲವು ತಂತ್ರಾಂಶ ವಿಭಾಗಗಳಾಗಿ (ದಾಖಲು)ಮಾರ್ಪಾಟಾಗಿರುತ್ತದೆ. ಅಂದರೆ ಒಂದು ಇಲಾಖೆಯಲ್ಲಿ ಆ ಗ್ರಾಹಕರ ಆದೇಶವನ್ನು ಪ್ರೋಸೆಸ್ ಮಾಡಿದ ಮೇಲೆ ಮುಂದಿನೆ ಇಲಾಖೆಗೆ ಸ್ಥಯಂ ಆಗಿ ರವಾನೆಯುಗುತ್ತದೆ. ಈ ಎಲ್ಲ ಇಲಾಖೆಗಳ ಉದ್ಯೋಗಿಗಳ ಇಆರ್‍ಪಿ ವ್ಯವಸ್ಥಗೆ ಲಾಗಿನ್ ಆಗಿ, ಆ ಗ್ರಾಹಕರ ಆದೇಶ ಎಲ್ಲಿದೆ. ಯಾವ ಹಂತದಲ್ಲಿದೆ ಎಂದು ತಿಳಿಯಬಹುದು. ಆದೃಷ್ಟವೋ ಎಂಬಂತೆ ಆರ್ಡ‍ರ್‍ಗಳು ಕ್ಷಣಾರ್ಧದಲ್ಲಿ ಸಂಚರಿಸುತ್ತಾ ಗ್ರಾಹಕರಿಗೆ ಶೀಘ್ರದಲ್ಲಿ ಸೇವೆ ಲಭಿಸುವುದು. ಅಂತೆಯೇ ಇಆರ್‍ಪಿ ಇತರ ವ್ಯಪಾರ ವ್ಯವಹಾರದಲ್ಲಿ ಉದ್ಯೋಗಿಗಳ ಲಾಭಾದಾಯ ಅಥವಾ ಹಣಕಾಸಿನ ವರದಿಗಳಲ್ಲಿ ಉಪಯುಕ್ತವಾಗಲಿದೆ. ಇಆರ್‍ಪಿಗೆ ಇಂದು ಹೊಣೆ. ಜವಾದಬ್ದಾರಿತನ ಮತ್ತು ಸಂಪರ್ಕ ಇನ್ನೂ ಹೆಚ್ಚಾಗಿದೆ. ಇಆರ್‍ಪಿ ಇಂದು ನಿತ್ಯೆ ಕೆಲಸಗಳಲ್ಲಿ ಅಂದರೆ ಆದೇಶ ತೆಗೆದುಕೊಳ್ಳುವುದು. ಸಾಮಗ್ರಿ ತೆಯುರಿಸುವುದು. ರವಾನಿಸುವುದು ಮತ್ತುಕ್ರಯ ಮಾಡುವ ಕೆಲಸಗಳ ಗುಣ್ಣಮಟ್ಟವನ್ನು ಹೆಚ್ಚಿಸಿದರೆ ಆ ತಂತ್ರಾಂಶದಿಂದ ಹೆಜ್ಜೆನ ಮೌಲ್ಯ ದೊರೆಯುವುದು. ಉದಾ: ಕೋಠಿಯ ಉದ್ಯೋಗಿ ಇನ್‍ವೆಂಟರಿ ಮಟ್ಟವನ್ನು ಸರಿಯಾಗಿ ತುಂಬದಿದ್ದಲ್ಲಿ. ಕೆಸ್ಟಮರ್ ರೆಪ್ರೆಸೆಂಟೇಟಿವ್ ಗ್ರಾಹಕರಿಗೆ ದಾಸ್ತಾನು ಹೆಚ್ಚಾಗಿ ಅಥವಾ ಕಡಿಮೆ ಹೇಳಿ ಗೊಂದಲಕ್ಕೀಡಾಗಬಹುದು. ಅಂದರೆ ತಂತ್ರಾಂಶ ಅನ್ವಯದ ಜೊತೆಗೆ ಜನರ ಕೆಲಸ ಮಾಡುವ ಶೈಲಿಯರಿ ಬದಲಾಗಬೇಕು. ಸಮನ್ವಯಿಸುವ ಮತ್ತು ಶೇಖರಿಸುವಲ್ಲಿ ಇಆರ್‍ಪಿ ಮುಖ್ಯ ಪಾತ್ರ ನಿವ೯ಹಿಸುತ್ತದೆ. ಇಲ್ಲಿ ಎರಡು ಸಂಸ್ಥೆಗಳು ಭಿನ್ನವಾಗಿ ಬಗೆಯಲ್ಲಿ ಭಿನ್ನವಾದ ತಂತ್ರಾಂಶದಲ್ಲಿ ಕೆಲಸ ಮಾಡುತ್ತಿರು ಇಆರ್‍ಪಿ ಸ್ವಯಂ ನಿಲುವಿನ ಬಗೆಯಿಂದ ಕೆಲವು ಸಾಮಾನ್ಯ ಉತ್ಪದನಾ ವ್ಯವಸ್ಥೆಯನ್ನು ಒಂದುಗೂಡಿಸಬಹುದು.ಕಾರ್ಯವನ್ನು ಸುಧಾರಿಸಿದರೆ ಸಮಯ ಉಳಿತಾಯ ಹೆಚ್ಚಿನ ಉತ್ಪಾದನೆ ಮತ್ತು ಕಡಿಮೆ ಸಂಪನ್ಮೂಲದಿಂದ ಕಾರ್ಯ ನಿವ೯ಹಿಸಬಹುದು. ಇಅರ್‍ಪಿ ಇನ್ನುಳಿದ ಮುಖ್ಯ ಆಂಶಗಳೆಂದರೆ ಹೊಂದಿಕೊಂಡ ಹಣಕಾಸಿನ ಮಾಹಿತಿ. ಇದರಿಂದ ಸಿಇಓ ಸಂಸ್ಥೆಯ ಎಲ್ಲಾ ಇಲಾಖೆಯ ಕಾರ್ಯ ತಿಳಿಯಲು ಅನುಕೂವಾಗುತ್ತದೆ. ಮತ್ತು ಷೇರು ಸದಸ್ಯರಿಗೆ ಒಮ್ಮೆಲೆ ಹಣಕಾಸಿನ ವರದಿಯನ್ನು ಸುಲಭವಾಗಿ ತಿಳಿಸೆಬಹುದು. ಮಾನವ ಸಂಪನ್ಮೂಲ ಮಾಹಿತಿಯನ್ನು ಉತ್ತಮಪಡಿಸಿದರೆ. ಬಹು ದೊದ್ದ ಕಂಪೆನಿಗಳಲ್ಲಿ ಹಲವಾರು ವ್ಯಾಪಾರ ಘಟ್ಟಗಳಲ್ಲಿ ಕೆಲಸ ಮಾಡುವ ಸಮಯ ಮತ್ತು ಸಮರ್ಪಕತೆಯನ್ನು ಇಆರ್‍ಪಿ ಒಂದೇ ವ್ವವಸ್ಥೆ ಯಡಿಯಲ್ಲಿ ಸಹಾಯಮಾಡುತ್ತದೆ.


ಇಆರ್‍ಪಿಯ ಆನುಷ್ಠಾನ ವ್ಯಾಪಾರ ಕ್ರಮದ ಮೇಲೆ ಆವಲಂಬಿತವಾಗಿರುತ್ತದೆ ಸಂಸ್ಥೆಯ ಕಾರ್ಯ‍ವೈಖರಿಗಳು ಬಹಳ ಚೆನ್ನಾಗಿ ನಡೆದರೆ. ಅಂದರೆ ಸಾಮಗ್ರಿಗಳು ಸರಿಯಾದ ಸಮಯಕ್ಕೆ ಸಂಚರಿಸಿದರೆ. ಪ್ರತಿಸ್ಥೆಧಿ೯ಗಳಿಗಿ೦ತೆ ಹೆಚ್ಚಿನ ಉತ್ಪಾದನೆ ಇದ್ದರೆ. ಗ್ರಾಹಕರು ಸಂಪೂರ್ಣವಾಗಿ ಸಂತೃಪ್ತಿ ಹೊಂದಿದ್ದರೆ ಇಆರ್‍ಪಿಯ ಆವತಶ್ಯಕತೆ ಇರುವುದಿಲ್ಲ. ಇಆರ್‍ಪಿ ಕ್ರಮವನ್ನು ಯಶಸ್ವಿಯಾಗಿ ಸಂಸ್ಥೆಯಲ್ಲಿ ಆನುಷ್ಠಾನ ಮಾಡಬೇಕಾದರೆ. ಕ್ರಮ ತರಬೇತಿ ತಂತ್ರಾಂಶದ ತರಬೇತಿಯನ್ನು ಕೊಡಬೇಕಾಗುತ್ತದೆ. ಇದು ಒರಿದು ಬೆಲೆಯಾದರೂ ಹೊಸ ಉನ್ನೆತೆ ವಿಧಾನ ಕಾಯ೯ ನಿರ್ವಹಿಸಿರರೆ ಕಾಲಾನುಕ್ರಮದಲ್ಲಿ ಹೆಚ್ಚೆನ ಮೌಲ್ಯ ವಧಿ೯ತೆ ಬೆಳವಣಿಗೆ ಕಾಣಬಹುದು. ಈ ಇಆರ್‍ಪಿ ಕ್ರಮವನ್ನು ಪರೀಕ್ಷಿಸುವುದು ಇದರ ಅಭಿವೃದ್ಧಿಯಷ್ಟೆ ಮಹತ್ತ್ವದ್ಧಾಗಿರುತ್ತದೆ. ಇದನ್ನು ಕೊನೆಗಯಿಂದ ಕೊನೆಗೆ ಒಳಪರೀಕ್ಷೆ ಮಾಡಬೇಕಾಗುತ್ತದೆ. ಇದಕ್ಕೆ ಜೀವಂತ ವಾತಾವರಣ ಪುಷ್ಟಿಸುವುದು ಒಂದು ದೊಡ್ಡ ಅನುಷ್ಠಾನ ಅಷ್ಟೆ ದೊಡ್ಡ ಸಾಹಸವಾಗಪ್ತದೆ. ವ್ಯವಸ್ಥಿತ ಕ್ರಮದಿಂದ ಹೊಸ ಕ್ರಮಕ್ಕೆ ಬದಲಾಗಲು ಇಆರ್‍ಪಿ ಒಳ ವ್ಯವಸ್ಥೆ ಸಾಪ್ಟವೇರ್ ಆಗಿಯೂ ಕೆಲಸ ನಿರ್ವಹಿಸುತ್ತದೆ.ಇಲ್ಲಿ ಹೆಚ್ಚಾಗಿ ವ್ಯಾಪಾರೀಕರಣ ಮತ್ತು ಇರುವುದರ ಬದಲೀಕರಣ ಮಾಡಬೇಕಾಗುತ್ತದೆ.ಗಿರಾಕಿಗಳ ದಾಖಲೆ, ಒದಗಿಸುವರ ದಾಖಲೆ, ವಸ್ತುರೂಪ ಇವುಗಳ ವ್ಯವಸ್ಥೆಯಿಂದ ಇಆರ್‍ಪಿ ವ್ಯವಸ್ಥೆಗೆ ಬದಲಾಯಿಸಬೆಕಾಗುತ್ತದೆ. ಇಆರ್‍ಪಿ ಮತ್ತು ವಿದ್ಯುನ್ಮಾನ ವಾಣಿಜ್ಯ ನೇರವಾಗಿ ಮತ್ತು ಸುಲಭವಾಗಿ ಒಂದಾಗುವ ಸಾಧ್ಯತೆ ಕಡಿಮೆ. ಇಆರ್‍ಫಿ ಸಂಸ್ಥೆಯ ಒಳಗೆ ಉದ್ಯಮ ಮಟ್ಟದಲ್ಲಿ ಉಕದ್ಯೋಗಿಗಳಿಗೆ ಹೆಚ್ಚಿನ ಮೌಲ್ಯಾಧಾರಿತ ಕೆಲಸಕ್ಕೆ ಆನುಕೂಲವಾದರೆ, ವಿದುನ್ಮಾನ ವಾಣಿಜ್ಯ ಗ್ರಾಹಕರು. ಸೆಂಸ್ಥೆಯ ವಸ್ತು ಮಾಹಿತಿಯನ್ನು ತಿಳಿದು ವ್ಯವಹರಿಸುವಂತಾದ್ದು. ಆದರೆ ಇಂದು ಗ್ರಾಹಕರು ಮತ್ತು ಒದಗಿಸುವರು ಇನ್ನೂ ಹೆಚ್ಚಿನ ಅ೦ದರೆ ಉದ್ಯೋಗಿಗಳಿಗೆ ಸಿಗುವ ಮಾಹಿತಿಯನ್ನು ಬೇಡುತ್ತಲಿದ್ದರೆ ಅಂದರೆ ಆದೇಶದ ಬೆಲೆ,ಹೊಸ ಉತ್ಪಾದನಾ ಮಟ್ಟು,ಬೆಲೆಪಟ್ಟಿ ಹೊಂದಾಣಿಕೆ ಇತ್ಮಾದಿ. ಆಂತೆಯೆ ಇಂದು ಗ್ರಾಹಕರಿಗೆ ಮತ್ತು ಒದಗಿಸುವವರುಗಳಿಗೆ ಎರಡು ತರಹದ ಮಾರ್ಗ ರೂಪಿಸುವ ಅಗತ್ಯವಿರುತ್ತದೆ. ಅಂದರೆ ಗ್ರಾಹಕ ವ್ಯಾಪಾರಕ್ಕೆ (b2c) ಮತ್ತು ವ್ಯಾಪಾರಕ್ಕೆ ವ್ಯಾಪಾರ(b2b). ಮುಂದೆ ಇಂಥ ಮಾರ್ಗಗಳು ಸುಲಭವಾಗಿ ಇಅರ್‍ಪಿ ಮತ್ತು ವಿದ್ಯುನ್ಮಾನ ವಾಣಿಜ್ಯಕ್ಕೆ ಮುಖ್ಯವಾಗಿ ಜೋಡೊಣೆಗಳಾಗುತ್ತವೆ. (ಕೆ.ಎಸ್.ಪಿ) ಇಯೋಲಿತ್: ನೋಡಿ-ಆದಿಶಿಲಾಯುಗ ಇರಂಗೋಳದೇವ: ಚಾಲುಕ್ಯವಂಶದ ಇಮ್ಮಡಿ ಜಗದೇಕಮಲ್ಲ 12ನೆಯೆ ಶತಮಾನ ದಲ್ಲಿ ಕಲ್ಯಾಣವಮ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕಣಾ೯ಟಕ ಸಾಮ್ರಾಜ್ಯವಮ್ನ ಅಳುತ್ತಿದ್ದಾಗ ಮಂಡಲೇಶ್ವರೆನಾದ ಈತ ಅನಂತಪುರ ಜಿಲ್ಲೆಯ ರಾಜ್ಯಭಾಗದಲ್ಲಿ ಗುಯ್ಯಲೂರು ಅಥವಾ ಗೊಯ್ಯದವಾಡಿ ಪಟ್ಟಣವನ್ನು ರಾಜ್ಯಭಾಗದಲ್ಲಿ ಮಾಡಿಕೊಂಡು ಆಳುತ್ತಿದ್ದ. ಇವನಿಗೆ ಹೈಹಯರಾಜೇಂದ್ರಚೋಳನೆಂಬ ಹೆಸೆರೂ ಇದೆ.ಇರಂಗೋಳದೇವನ ಅನೇಕೆ ಶಾಸನಗಳು ಈ ಪ್ರಾಂತ್ಯದಲ್ಲಿ ದೊರಕಿವೆ. ಇರಂಗೋಳನ ಮಗನ ಶಾಸನಗಳು ಪ್ರಶ. 1173, 1181ರಲ್ಲಿ ಲಿಖಿತವಾಗಿವೆ. ಈ ಶಾಸನಗಳಲ್ಲಿ ಇವನನ್ನು ಮಹಾಮಂಡಲೇಶ್ವರ ಇರಂಗೋಳ ಚೋಳ ಮಹಾರಾಜನೆಂದು ಕರೆಯಲಾಗಿದೆ. ಇದು ಪ್ರ ಶ. 1139೦' ಹೃದಯ ಕಾರ್ತವೀರ್ಯನ ವಂಶಜರೆಂದು ಹೇಳೀಕೊಳ್ಳುವ ಚೋಳರ ಇತಿಹಾಸ 1128-1206ರ ಸುಮಾರಿನ ಶಾಸನಗಳಲ್ಲಿ ಲಿಖಿಸಲಾಗಿದೆ. ಮಾಹಿಷ್ಮತೀಪುರಕ್ಕೆ ಅಲಂಕಾರ ಭೂತೆನೂ ಕೋನಮಂಡಲಾಧಿಪತಿಯೂ ಹೈಹಯವರಿಶದ ರಾಜ ಪೆರೇಡುಕುಮಾರನೂ ಎಭುರುದ್ರ ಬಿರುದಾರಿಕಿತೆನೊ ಆದ ರಾಜೇರಿದ್ರೆ ಚೆವೀಳನ ಶಾಸನ ಇವುಗಳಲ್ಲಿ ಪುರಾತನವಾದುದು. ಮಾಹಿಹ್ಮತಿ ಕಾರ್ತವೀಯ೯ನ ವರಿಶಜರಲ್ಲಿ ಒಬ್ಬನಾದ ಪ್ರತೀಪನಿಗ ರಾಜಧಾನಯಾಗಿದ್ದು ರೇವಾನದೀತೀರದಲ್ಲಿದ್ಧರಿತೆ ರಘುವಂಶದಲ್ಲಿ ಹೇಳಿದೆ. ಚಾಲುಕ್ಯ ಚೋಳ ಮತ್ತು ವೆಲನಾಟಚೋಳಿರೆಗೆ ಸೇರಿದ' ಕೋನಮಂಡಲವನ್ನು ಆಳಿದ ರಾಜವಂಶಕ್ಕ ಹೈಹಯವಂಶವೆಂದು ಹೆಸರು. (ಎಂ.ಜಿ.ಎನ್) ಇರಾಂತಿಮಮ್: ಆಕ್ಕಾರಿತೇಸಿ ಕುಟುಬಂಕ್ಕೆ ಸೇರಿದ ಒರಿದು ಸಸ್ಯ ಜಾತಿ, ಉಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇರಾ೦ತಿಮಮ್ಎ೦ದರೆ ಸುಂದರ ಪುಷ್ಟವೆಂದರ್ಥ. ಈ ಸಸ್ಯವನ್ನು ಕೊಂಡ. ಆಂಚು. ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಎಲೆಗಳು ಪ್ತಭೇದಗಳಿಗೆ ಅನುಸಾರವಾಗಿ ಕೆಂಪು, ಹಸಿರಿನ ಮೇಲೆ ಬಿಳುಪು ಹಳದಿ ಮತ್ತು ಇತರ ಬಣ್ಣರ ಮಚ್ಚೆಗಳಿಂದ ಕೂಡಿದ್ದು ಬಹಳ ಸು೦ದರವಾಗಿ ಕಾಣುತ್ತವೆ. ಎಲೆಯ ಆಕಾರ ಕರನೆಯಂತೆ, ನಾಳರಚನೆ ಗರಿರೂಪದ್ದು. ಅಂಚು ನಯ ಇಲ್ಲವೆ ಗರಗಸದ ಹಲ್ಲಿನಂತೆ, ಹೂಗೊಂಚಲು ಸ್ಟ್ಪೈಕ್ ಮಾದರಿಯದು. ಹೂಬಣ್ಣ ನೀಲಿ ಇಲ್ಲವೆ ಕಿತ್ತಳೆ. ಹೂದಳಗಳು ಕೂಡಿವೆ.ಹೂವಿನ ಆಕಾರ ಕೊಳವೆಯೆರಿತೆ. ತುದಿ' ವಿಶಾಲವಾಗಿ ಹರಡಿ ಐದು ಭಾಗಗಳಾಗಿ ಒಡೆದಿದೆ.ಪುಷ್ಟಪತ್ರ ಉಪದಳಗಳಿಂದ ಆವೃತ. ಹೂದಳದ ಮೇಲೆ ಅಂಟಿರುವ ಎರಡು ಕೇಸರಗಳಿವೆ. ದೀಘ೯ವೃತ್ತಾಕಾರ ಅಥವಾ ಆಯತಾಕಾರದ ಮೇಲು ಅಂಡಾಶಯ ನಾಲ್ಕು ಬೀಜವಿರುವ ಕ್ಯಾಪ್ಸೂಲ್ ಮಾದರಿಯದು. ಕಾಂಡದ ತುಂಡುಗಳಿಂದ ಹೊಸ ಗಿಡಗಳನ್ನು ಪಡೆಯಬಹುದು.ಜೌಗಿಲ್ಲದೆ ಒಳ್ಳೆಯೆ ನೆಲದೆಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅದೇ ನೆರಳಿದ್ದರಂತೊ ಇನ್ನೂ ಒಳ್ಳೆಯದು.