ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-2-Part-2.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇರಾಕ್ ಇರಾಂತಿಮಮ್ ಎಲ್ಲೂರಾಡೊ ಪ್ರಭೇದವೂ 2 ಅಡಿ ಎತ್ತರ ಬೆಳೆಯುತ್ತದೆ. ಹಳದಿ ಮಚ್ಚೆ ಮತ್ತು ಹಸಿರು ನಾಳಗಳಿರುವ ಎಲೆಗಳು ಬಹಳ ಸುಂದರವಾಗಿವೆ. ಇರಾಂತಿಮಮ್‌ನೊಬಿಲಿಸ್ ಪ್ರಭೇದ 3-4 ಅಡಿ ಎತ್ತರ ಬೆಳೆಯುತ್ತದೆ. ಅತಿ ಹಸುರಾದ ಎಲೆಗಳಲ್ಲಿ ಹಳದಿಬಣ್ಣದ ನಾಳಗಳಿರುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ. ಇರಾಂತಿಮಮ್ ವರ್‌ಸಿಕೊಲೊ‌ ಪ್ರಭೇದದ ಎಲೆಗಳಲ್ಲಿ ಬಿಳಿಯ ಮತ್ತು ಹಸುರು ಬಣ್ಣದ ಮಚ್ಚೆಗಳಿವೆ. ಇರಾಂತಿಮಮ್‌ ಆಟೊಪರೂರಿಯಮ್ ಪ್ರಭೇದದ ಎಲೆಗಳ ಮೇಲೆ ಕೆಂಚು ಅಥವಾ ಕಡುಗೆಂಪು ಬಣ್ಣದ ಮಚ್ಚೆಗಳಿವೆ. ಇರಾಕ್: ಪಶ್ಚಿಮ ಏಷ್ಯದ ಒಂದು ಪುರಾತನ ಪ್ರದೇಶ. ಇದಕ್ಕೆ ಮೆಸಪೊಟೇಮಿಯ ಅಂದರೆ ನದಿಗಳ ನಡುವಣ ನಾಡು ಎಂಬುದು ಅನ್ವರ್ಥನಾಮ. ಸುಮಾರು ನೂರು ವರ್ಷಗಳಿಂದ ಇಲ್ಲಿ ನಡೆದ ಭೂಶೋಧನೆಗಳಿಂದ ಈ ಪ್ರದೇಶ ಅತ್ಯಂತ ಪ್ರಾಚೀನ ನಾಗರಿಕತೆಗಳ ತೌರು ಮಾತ್ರವಲ್ಲದೆ ಇತಿಹಾಸಪೂರ್ವ ಯುಗದಲ್ಲೂ ಆದಿಮಾನವನ ಕಾರ್ಯರಂಗವಾಗಿದ್ದು ನಾಗರಿಕತೆಯ ತೊಟ್ಟಿಲು ಎನಿಸಿದೆ. ಸಿರಿಯ ಸೌದಿ ಅರೇಬಿಯ ರಾಜಕೀಯ ಭೂಪಟ ಪುರಾತತ್ತ್ವ: ಇರಾಕ್ ದೇಶದಲ್ಲಿ ನಡೆದಿರುವ 6,400 ಕ್ಕಿಂತಲೂ ಹೆಚ್ಚಿನ ಭೂ ಶೋಧನೆಗಳಿಂದ ದೇಶದ ಪುರಾತನ ನಾಗರಿಕತೆ ತಿಳಿದುಬರುತ್ತದೆ. ನವಶಿಲಾಯುಗದಲ್ಲಿ ಕೊರೆದ ಮತ್ತು ಬಣ್ಣಗಳಿಂದ ಚಿತ್ರಿತವಾದ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತ ಒಂದೇ ಸ್ಥಳದಲ್ಲಿ ಸ್ಥಿರಜೀವನ ನಡೆಸುತ್ತಿದ್ದ ಜನರ ಸಂಸ್ಕೃತಿ ಚಿತ್ರ ಟೆಲ್‌ ಹಸನಾದ ಭೂಶೋಧನೆಗಳಿಂದ ಕಂಡು ಬರುತ್ತದೆ. ಟೆಲ್ ಹಲಾಫೆ ಭೂಶೋಧನೆಗಳು ವಿವಿಧ ಬಣ್ಣಬಳಿದ ರಮ್ಯವಾಗಿ ಅಲಂಕೃತವಾದ ಮಣ್ಣಿನ ಪಾತ್ರೆಗಳನ್ನೂ ಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದ ಜನರ ಜೀವನವನ್ನು ನಿರೂಪಿಸುತ್ತವೆ. ತಾಮ್ರ-ಶಿಲಾಯುಗದವರಿಗೆ ಅಂದವಾದ ಬಣ್ಣದ ಮಡಕೆಗಳು, ತಾಮ್ರ ಮೊದಲಾದ ಲೋಹಗಳ ಉಪಯೋಗ ತಿಳಿದಿತ್ತು. ಮೊತ್ತ ಮೊದಲನೆಯ ದೇವಸ್ಥಾನ ಕಟ್ಟಿದ್ದ ಆ ಜನರ ಜೀವನಚಿತ್ರ ಅಲ್ ಉಬೈದ್ ಭೂಶೋಧನೆಗಳಿಂದ ದೊರಕುತ್ತದೆ. ದಕ್ಷಿಣ ಇರಾಕಿನಲ್ಲಿ ಉರುಕ್ ಸಂಸ್ಕೃತಿ ಕಾಲದಲ್ಲಿ ದೊಡ್ಡ ದೊಡ್ಡ ದೇವಾಲಯಗಳೂ ಹೊಸನಗರಗಳೂ ಉರುಳೆಯಾಕಾರದ ಮುದ್ರೆಗಳೂ ಚಿತ್ರಲಿಪಿಯೂ ಇದ್ದುದಕ್ಕೆ ಸಾಕ್ಷಿ ಒದಗಿಸಿವೆ. ಖಫಾಜೆ ಮತ್ತು ಟೆಲ್ ಅಸಮಾರ್ ಭೂಶೋಧನೆಗಳಿಂದ ತಿಳಿದುಬರುವಂತೆ ಪ್ರಾಚೀನರಾಜ್ಯವಂಶದ ಕಾಲದಲ್ಲಿ ದೇಶ ನೀರಾವರಿ ವ್ಯವಸಾಯದಿಂದ ಸಂಪದ್ಯುಕ್ತವಾಗಿದ್ದು, ಇರಾಕ್ ಅಂದಿನ ಪ್ರಪಂಚದ ಧಾನ್ಯ ಕಣಜದಂತಿತ್ತು. ಉರ್ ನಗರದ ಆಳರಸರ ಸ್ಮಶಾನ ಶೋಧನೆಗಳಿಂದ ಆ ಕಾಲದ ಐಶ್ವರ ಮತ್ತು ಸಂಸ್ಕೃತಿಯ ಮಟ್ಟ ತಿಳಿದು ಬರುತ್ತದೆ (ನೋಡಿ-ಉರ್). ಮಾರಿ, ನೂಜಿ, ದುರ್ ಕುರಿಕಾಲುಗಳ ಭೂಶೋಧನೆಗಳಲ್ಲಿ ದೊರೆತ ಜೇಡಿಮಣ್ಣಿನ ಲಿಖಿತ ಫಲಕಗಳಿಂದ ಪ್ರ.ಶ.ಪೂ. 3ನೆಯ ಸಹಸ್ರಾಬ್ಧದ ಇತಿಹಾಸ ತಿಳಿದುಬರುತ್ತದೆ. ಅಪ್ಲೋರ್, ಐಟಿಸಿ, ನಿಮ್ರುಸ್, ನೆಪ‌ ಮುಂಕಾದ ಸ್ಥಳಗಳ ಭೂಶೋಧನೆಗಳಿಂದ ಪ್ರಶ.ಪೂ.3 ರಿಂದ 1ನೆಯ ಸಹಸ್ರಾಬ್ಬಗಳ ಇರಾಕಿ ಸಂಸ್ಕೃತಿಯ ಅನೇಕ ವಿಷಯಗಳು ಗೊತ್ತಾಗಿವೆ. ಇವುಗಳ ಕೆಲವು ವಿವರಗಳಲ್ಲಿ ಸಂಗ್ರಹಿಸಲಾಗಿದೆ. ಉತ್ತರ ಇರಾಕಿನ ಬಾರಾಬಲ್ಯಾ ಎಂಬಲ್ಲಿ ದೊರಕಿರುವ ನಾಜೂಕಿಲ್ಲದ ಕೈ ಕೊಡಲಿ ಮತ್ತು ಕಲ್ಲಿನ ಚಕ್ಕೆಗಳಿಂದ ಮಾಡಲ್ಪಟ್ಟ ಉಪಕರಣಗಳು ಅತ್ಯಂತ ಪುರಾತನವಾದವು. ಇವನ್ನು ಆದಿಹಳೆಶಿಲಾಯುಗದ 228 ಉಪಕರಣಗಳನ್ನು ಹಜರ್‌ ಮರ್ದ್ ಮತ್ತು ಷನಿದಾರ್ ಗುಹೆಗಳಲ್ಲಿ ಕಂಡುಬಂದಿವೆ. ಈ ಪದರಗಳಲ್ಲಿ ಹಳೆಯ ಕೈಕೊಡಲಿಗಳು ಹೊಸರೀತಿಯ ಚಕ್ಕೆ ಉಪಕರಣಗಳ ಜೊತೆಯಲ್ಲಿ ಕಂಡುಬರುವುದರಿಂದ ಇದು ಆದಿ ಮಾನ್ ಸಂಸ್ಕೃತಿಯ ಅವಿಚ್ಛಿನ್ನ ಬೆಳೆವಣಿಗೆಯನ್ನು ಸಾಕ್ಷೀಕರಿಸುತ್ತದೆ. ಹಜರ್‌ಮರ್ದ್, ನಿದಾರ್, ಜರ್ಜಿ ಮತ್ತು ಪಲೇಗಾವ್ರಾ ಎಂಬೆಡೆಗಳಲ್ಲಿ ಅಂತ್ಯ ಹಳೆಶಿಲಾಯುಗದ ಕೂಲಗುಳ್ಳ ಚಕ್ಕೆಗಳೂ ಸೂಕ್ಷ್ಮ ಶಿಲಾಯುಗದ ಉಪಕರಣಗಳ ಬೆರಕೆಯಿದ್ದು ಕಾಲಗಣನೆಯಲ್ಲಿ ಇವು ಯುರೋಪಿನ ಸೂಕ್ಷ್ಮ ಶಿಲಾಯುಧಗಳಿಗಿಂತಲೂ ಹಳೆಯವಾಗಿರುವುವೆಂದೂ ಪಶ್ಚಿಮದ ಏಷ್ಯದಲ್ಲಿ ಈ ಕಾಲದ ಮಾನವ ಹೆಚ್ಚು ಪ್ರಗತಿಪರನಾಗಿದ್ದನೆಂದೂ ಅಂತ್ಯಹಳೆಶಿಲಾಯುಗದ ಯುರೋಪಿನ ಸಂಸ್ಕೃತಿ ಗಳು ಕೂಡ ಇಲ್ಲಿ ಆವಿರ್ಭವಿಸಿ ಅನಂತರ ಯುರೋಪಿಗೆ ಹರಡಿದುವೆಂದೂ ಪಂಡಿತರ ಅಭಿಪ್ರಾಯ. ಇದರ ಮುಂದಿನ ಸಂಸ್ಕೃತಿಗಳ ಅವಶೇಷಗಳು ಇರಾಕಿನಲ್ಲಿ ಹೆಚ್ಚಾಗಿ ದೊರೆತಿಲ್ಲ. ಕೇವಲ ಷನಿದಾರ್ ಗುಹೆಗಳಲ್ಲಿ ಮಾತ್ರ ನಾಗರಿಕತೆಯ ಉಗಮಕಾಲದವರೆಗೂ ಮಾನವ ಅವಿಚ್ಛಿನ್ನವಾಗಿ ವಾಸಿಸಿದ ಮಾಹಿತಿಗಳು ದೊರಕಿವೆ. ಇಲ್ಲಿನ ತಳಮಟ್ಟದ ಪದರಗಳಲ್ಲಿ ಮೊದಮೊದಲು ನವಶಿಲಾಯುಗದ ಅವಶೇಷಗಳೂ ಮೇಲ್ಬಾಗದಲ್ಲಿ ಚರಿತ್ರ ಪೂರ್ವ ಅಕ್ಷರಸ್ಥನಾಗರಿಕತೆಯ ಕುರುಹುಗಳೂ ದೊರಕಿವೆ. ಇರಾಕಿನ ಹೆಚ್ಚಿನ ಅಭಿವೃದ್ಧಿಯು ಮಾಹಿತಿಗಳು ನವ ಶಿಲಾಯುಗದಲ್ಲಿ ದೊರಕುತ್ತವೆ. ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ಮಾನವನ ಪುರೋಗಾಮಿತ್ವ ಮತ್ತು ನಾಗರಿಕತೆಯ ಬೆಳೆವಣಿಗೆಯ ಮೂಲಾಧಾರವಾದ ಆಹಾರೋತ್ಪತ್ತಿಯ ಉದ್ಘಾಟನೆ ನಡೆದದ್ದು ನಿರ್ವಿವಾದ ಸಂಗತಿ. ಇರಾಕಿನ ಚಾವಿ ಷಮಿ ಷನಿದಾರ್, ಕರೀಮ್ ಷಾಹಿರ್, ಮಾಫಾತ್ ಮುಂತಾದ ನೆಲೆಗಳಲ್ಲಿ ಈ ಸಂಸ್ಕೃತಿಯ ಅತ್ಯಂತ ಪ್ರಾಚೀನ ಅವಶೇಷಗಳು ದೊರಕಿವೆ. ಇವು ಪ್ರಶ.ಪೂ.ಸು. 9000 ವರ್ಷಗಳಷ್ಟು ಹಳೆಯವೆಂದು ನಿರ್ಣಯಿಸಲಾಗಿದೆ. ಈ ಸಂಸ್ಕೃತಿಯಲ್ಲಿ ನಯಮಾಡಿದ ಕಲ್ಲಿನ ಕೊಡಲಿಗಳೂ ಅಗೆಯುವ ಕೋಲಿನ ಭಾರದಗುಂಡುಗಳೂ ಅರೆಯುವ ಕಲ್ಲುಗಳೂ ಒರಟಾಗಿ ಕಟ್ಟಿದ ಗುಡಿಸಲ ಅವಶೇಷಗಳೂ ಸಾಕುಪ್ರಾಣಿಯಾದ ಆಡು, ಕುರಿ, ಹಂದಿ ಮತ್ತು ದನಗಳ ಅವಶೇಷಗಳೂ ಸಿಕ್ಕಿವೆಯಾದರೂ ಬೇಟೆಯೇ ಆಹಾರೋತ್ಪತ್ತಿಯ ಮುಖ್ಯ ವಿಧಾನವಾಗಿತ್ತೆಂದು ಹೇಳಲಾಗಿದೆ. ವ್ಯವಸಾಯವನ್ನೇ ಮುಖ್ಯ ಆಹಾರೋತ್ಪತ್ತಿಮಾರ್ಗವಾಗುಳ್ಳ ಜನ ಗ್ರಾಮಗಳಲ್ಲಿ ನೆಲೆನಿಂತು ಉತ್ತರದ ಕುರ್ದಿಸ್ತಾನ್ ಬೆಟ್ಟಗಳ ಬುಡದಲ್ಲಿರುವ ಕಾಲಾತ್ ಚಾರ್ಮ್ ಎಂಬಲ್ಲಿ ದೊರಕಿವೆ. ಇಲ್ಲಿನ ಕ್ರಮಾಗತ 12 ಪದರಗಳಲ್ಲಿ ದೊರಕುವ ಸಾಕ್ಷ್ಯಗಳಲ್ಲೂ ನೂತನ ಶಿಲಾಯುಗಕ್ಕೆ ನೀರಿಗು ನಾದರೂ ಆ ಜನಗಳಿಗೆ ಇನ್ನೂ ಮಣ್ಣಿನ ಪಾತ್ರಗಳನ್ನು ಮಾಡುವ ಕಲೆ ಗೊತ್ತಿರಲಿಲ್ಲ. ಕಲ್ಲಿನ ಆಸ್ತಿಭಾರದ ಮೇಲೆ ಮಣ್ಣಿನಿಂದ ಕಟ್ಟದ ಅನೇಕ ಆಯತಾಕಾರದ ಕೊಠಡಿಗಳಿಂದ ಕೂಡಿದ ಮನೆಗಳು, ಗಾರಿ ಗೋದಿಗಳ ವ್ಯವಸಾಯ ಇವು ಮೊದಲಿನ ಹಂತದಲ್ಲೂ ಸಾಕುಆಡು, ಕುರಿ, ಹಂದಿಗಳು ಮೇಲಿನ ಪದರಗಳಲ್ಲೂ ದೊರಕಿರುವುದು ಈ ಸಂಸ್ಕೃತಿಯ ಮುನ್ನಡೆಗೆ ಸಾಕ್ಷಿ, ಜಮಕಿ ಕಲ್ಲಿನಿಂದ ಮತ್ತು ಪಟ್ಟದ ಮುಖಂನಿಂದ ಉತ್ಸವವಾದ ಅwa ಗಾಜಿನಿಂದ ಮಾಡಿದ ಸೂಕ್ಷ್ಮ ಶಿಲಾಯುಧಗಳು, ನಯಮಾಡಿದ ಕಲ್ಲಿನ ಕೊಡಲಿಗಳು, ಬಾಚಿಗಳು, ಮಣಿಯ ಕೈಗಡಗಳು ಮತ್ತು ಅತಿ ಕೌಶಲದಿಂದ ಮಾಡಲಾದ ಕಲ್ಲಿನ ಪಾತ್ರೆ ಗಳು ಆಗ ಬಳಕೆಯಲ್ಲಿದ್ದವು. ಮಣ್ಣಿನಲ್ಲಿ ಮಾಡಿದ ಬೆತ್ತಲೆ ಗರ್ಭಿಣಿ ಗೊಂಬೆಗಳು ಪೂರ್ವ ಶಿಲಾಯುಗದಿಂದಲೂ ಈ ಜನಗಳಲ್ಲಿ ಬೆಳೆದುಬಂದ ಮಾಂತ್ರಿಕ ಹಾಗೂ ಬಹುಸಂತಾನ ಪಂಥದ ಕುರುಹುಗಳಾಗಿವೆ. ಕಡೆಕಡೆಗೆ ಕೈಯಲ್ಲಿ ಮಾಡಿದ ಮಣ್ಣಿನ ಮಡಕೆಗಳೂ ಬಳಕೆಗೆ ಬಂದಿದ್ದವು. ಈ ಸಂಸ್ಕೃತಿ ಪ್ರ.ಶ.ಪೂ. 6750ರಷ್ಟು ಹಳೆಯದೆಂದು ಇಂಗಾಲ-14ರ ಪ್ರಯೋಗದಿಂದ ಗುರುತಿಸಲಾಗಿದೆ. ಇವರು ಹೊರಗಿನಿಂದ ಬಂದಿರಬಹುದೆಂಬುದಕ್ಕೆ ಅನೇಕ ಸೂಚ್ಯ ಆಧಾರಗಳಿವೆ. ಇದರ ಮುಂದಿನ ಹಂತವೂ ಉತ್ತರ ಇರಾಕಿನ ಟೈಗ್ರಿಸ್ ನದೀತೀರದಲ್ಲಿರುವ ಹಸ್ಸುನಾ ಎಂಬೆಡೆಯಲ್ಲಿ ದೊರಕಿದೆ. ಇದೇ ರೀತಿಯ ಮಾಹಿತಿಗಳು ಮಟಾರಾನಿನವೇ, ಅಪ್ಪಾಚಿಯಾ ಹಾಗೂ ಗಾಮ್ರಾ ಎಂಬ ಎಡೆಗಳಲ್ಲಿ ದೊರಕಿವೆ. ಚಕಮಕಿ ಕಲ್ಲಿನ ಉಪಕರಣಗಳ ಜೊತೆಗೆ ಅಗೆಯುವ ಗುದ್ದಲಿ ಮತ್ತು ಅರೆಯುವ ಕಲ್ಲಿನ ಉಪಕರಣಗಳನ್ನು ಈ ಬೇಟೆಗಾರ ಜನ ಉಪಯೋಗಿಸುತ್ತಿದ್ದರು. ಅವರ ಹಿಂದುಳಿದ ವ್ಯವಸಾಯದ ರೀತಿಗಳು, ವ್ಯವಸಾಯಾತ್ಮಕ ಸಂಸ್ಕೃತಿಯ ಕಡೆಗೆ ಕ್ರಮಕ್ರಮವಾಗಿ ಅವರ ಮುನ್ನಡೆ, ಸ್ವಲ್ಪಮಟ್ಟಿನ ಅಲೆಮಾರಿತನ-ಇವು ಈ ಸಂಸ್ಕೃತಿಯ ಲಕ್ಷಣಗಳೆಂದು ಹೇಳಬಹುದು. ಅವರ ಮಡಕೆ ಕುಡಿಕೆಗಳು ಸಾಮಾನ್ಯವಾಗಿ ಅಲಂಕಾರ ರಹಿತವಾಗಿದ್ದವು. ಕೆಂಪು, ಕಂದು, ಕಪ್ಪು, ಬಣ್ಣಗಳ ಒರಟು ಚಿತ್ರಗಳಿರುವ ಮಡಕೆಗಳೂ ಕೆಲವು ಸಿಕ್ಕಿವೆ. ಇವಲ್ಲದೆ ಮೂಲವಸ್ತು ಒರಟಾದ ಕಪ್ಪು ಮಣ್ಣು. ಶಿಲಾಜಿತು (ಬಿಟ್ಟೂಮೆನ್) ಮತ್ತು ಸುಣ್ಣದಿಂದ ಪಕ್ಕಗಳನ್ನೂ ತಳಭಾಗವನ್ನೂ ಹದಮಾಡಿದ್ದ ಹಳ್ಳಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು ಕಟ್ಟಡಗಳನ್ನು ಕಟ್ಟಲು ಹಸಿ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಬಿದಿರು ಹೆಣಿಗೆ ಮತ್ತು ಬಟ್ಟೆ ನೇಯ್ದೆ ಕ್ರಮಗಳು ಇವರಿಗೆ ತಿಳಿದಿದ್ದಿರಬಹುದು. ಮಕ್ಕಳ ಶವಗಳನ್ನು ಜಾಡಿಗಳಲ್ಲೂ ವಯಸ್ಕರ ಶವಗಳನ್ನು ಹಳ್ಳಗಳಲ್ಲೂ ಹೂಳುತ್ತಿದ್ದರು. ಈ ಸಂಸ್ಕೃತಿಯ ಕಾಲ ಪ್ರಶ.ಪೂ. 5000-4000. ಇದರ ಮುಂದಿನ ಹಲಾಫ್ ಸಂಸ್ಕೃತಿಯ ಜನ ಕೈಯಲ್ಲಿ ಮಾಡಿದ, ವಿವಿಧ ಆಕಾರದ, ವರ್ಣಚಿತ್ರಗಳಿಂದ ಕೂಡಿದ ಮಡಕೆಗಳನ್ನು