ಪುಟ:Mysore-University-Encyclopaedia-Vol-2-Part-2.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಳಸುತ್ತಿದ್ದರು. ಇವರುಗೆ ತಾಮ್ರದ ಕೆಲವು ಆಲಂಕರಣ ಸಾಮಗ್ರಿಗಳ ಪರಿಚಯವಿದ್ದರೂ ಇವರ ಆಯುಧೋಪಕರಣಗಳು ಕಲ್ಲಿನವೇ ಆಗಿದ್ದವು ಕಲ್ಲಿನ ಗುಂಡಿ ಮುದ್ರೆಗಳೂ (ಬಟನ್ ಸೀಲ್ಸ್) ಮಣಿಗಳೂ (ಆಮ್ಯುಲೆಟ್ಸ್) ಮತ್ತು ಸಣ್ಣ ಪಾತ್ರೆಗಳೂ ಬಳಕೆಯಲ್ಲಿದ್ದವು. ಇತರ ವಿಷಯಗಳಲ್ಲಿ ಹಳೆಯ ಸಂಸ್ಕೃತಿಯ ಚಿಹ್ನೆಗಳೇ ಕಂಡು ಬಂದರೂ ಅವು ಹೆಚ್ಚು ಮುಂದುವರಿದಿದ್ದವು.


ಮೇಲೆ ಹೇಳಿದ ಸಂಸ್ಕೃತಿಗಳೆಲ್ಲವೂ ಉತ್ತರ, ಮಧ್ಯ ಇರಾಕಿನಲ್ಲಿ ಮಾತ್ರ ನೆಲೆಸಿದ್ದವು.ದಕ್ಷಿಣ ಪ್ರದೇಶ ಚೌಗುಪ್ರದೇಶೆವಾಗಿದ್ದು ಜನೆವಸತಿಗೆ ಆನುಕೂಲವಾಗಿರಲಿಲ್ಲ. ಸುಮಾರು ಆ ಕಾಲಕ್ಕೆ ಯುಫ್ರೆಟೀಸ್ ಟೈಗ್ರಿಸ್ ನದಿಗಳು ಒತ್ತಳಿದ ಮೆಕ್ಕಲುಮಣ್ಣಿನ ಹರಡುವಿಕೆಯಿರಂದೆ ನೆಲ ವಾಸಯೋಗ್ಯವಾದದ್ಧಲ್ಲದೆ ಬಹಳ ಫಲವತ್ತಾದ ಭೂಮಿಯಾಗಿ ಹೆಚ್ಚು ಬೆಳೆ ಕೊಡುವಂತಾಯಿತು.


ಈ ಸುಮಾರಿಗೆ ಪ್ರಾರಂಭವಾದ ತಾಮ್ರ-ಶಿಲಾಯುಗೆದೆ ಸಂಸ್ಕೃತಿಯ ಅವಶೇಷಗಳು ಇರಾಕಿನ ಎಲ್ಲೆಡೆಗಳಲ್ಲೂ ದೊರಕಿವೆ. ಉಬೈದ್ ಸಂಸ್ಕೃತಿಯ ಮೊದಲ ಹಂತದಲ್ಲಿ ವ್ಯವಸಾಯ ಸುಧಾರಿತವಾಯಿತು. ನೀರಾವರಿ ಕಾಲುವೆಗಳಿಂದ ಉತ್ತಮ ಬೆಳೆಗಳನ್ನು ತೆಗೆಯುತ್ತಿದ್ದರು. ಲೋಹಗಳ ಕೆಲಸ ಉತ್ತಮಮಟ್ಟದ್ಧಾಗಿ ತಾಮ್ರದ ಆಯಧೋಪಕರಣಗಳು ಮಾತ್ರವಲ್ಲದೆ ಮನೆಬಳಕೆ ಪಾತ್ರೆಗಳೂ ರೂಢಿಗೆ ಬಂದಿದ್ದವು. ತಮಗೆ ಅವಶ್ಯಕವಾದ ಕಚ್ಚಾಪರ್ಥಗಳನ್ನು ದೂರ ದೇಶಗಳಿಂದ ವ್ಯಾಪಾರಮುಖೇನ ತರಿಸಿಕೊಳ್ಳುತ್ತಿದ್ದರು. ತಮ್ನ ಬೆಳೆಗಳನ್ನು ಚಕಮಕಿಕಲ್ಲಿನ ಹಲ್ಲುಗಳಿಂದ ಸಜ್ಜಾದ ಕುಡುಗೀಲುಗಳಿಂದ ಕುಯ್ಯುತ್ತಿದ್ದರು ಹುಲ್ಲು ಮತ್ತು ಮಣ್ಣಿನ ಗೋಡೆಗಳನ್ನೂ ನೆಲವನ್ನೂ ಸಗಣಿಯಿಂದ ಹೆದಗೊಳಿಸುತ್ತಿದ್ದರು. ಕೈಯಲ್ಲಿ ಮಾಡಿದ ಮಡಿಕೆಗಳನ್ನು ವಿವಿಧ ಬಣ್ಣಗಳ ಜ್ಯಾಮಿತಿಕ ಆಕಾರಗಳಿಂದ ಚಿತ್ರಿಸುತ್ತಿದ್ದರು ವ್ಯವಸಾಯೋತ್ಪನ್ನವೇ ಮುಖ್ಯ ಆಹಾರವಾದರೂ ಬೇಟೆ ಮೀನುಗಾರಿಕೆಗಳೂ ರೂಢಿಯಲ್ಲಿದ್ದವು. ಗ್ರಾಮಜೀವನದ ಜೊತೆಗೆ ನಗರ ಜೀವನವೂ ಈ ಕಾಲದಲ್ಲೇ ಪ್ರಾರಂಭೆವಾದ ಚೆಹ್ನಗಳು ಕಂಡುಬರುತ್ತೆವೆ. ಈ ಜನ ಮೊತ್ತಮೊದಲಿಗೆ ಸಾಮಾಜಿಕ ಜೀವನದ ಅಂಗವಾಗಿ ದೇವಾಲಯಗಳನ್ನು ನಿಮಿರ್ಸಿಸಿದರು. ಆಬು ಷಹರೀನ್ ಎಂಬಲ್ಲಿ 13ಸಲ ಪುನರನಿರ್ಮಿತವಾದ ದೇವಾಲಯವೊಂದರ ಅವಶೇಷಗಳು ದೊರಕಿವೆ. ಮೊದಲಿಗೆ ಈ ದೇವಾಲಯದಲ್ಲಿ ಆಯತಾಕಾರದ ಒಂದು ಕೊಠಡಿ,ಅದರ ಒಂದು ಮೂಲೆಯಲ್ಲಿ ಬಾಗಿಲು ವೇದಿಕೆ ಮತ್ತು ಬಲಿಪೀಠಗಳಿದ್ದು ಕ್ರಮೇಣ ಮಧ್ಯೆಕೋಣೆಯೆ ಎರಡು ಪಾರ್ಶ್ವಗಳಲ್ಲಿ ಮತ್ತೆರಡು ಕೋಣೆಗಳು ನಿರ್ಮಿತವಾದವು. ಈ ಕಾರಣಗಳಿಂದ ಉಬೈದ್ ಜನ ಇರಾಕಿನ ನಾಗರಿಕತೆ ಆದ್ಯಪ್ರವರ್ತಕರೆನ್ನಬಹುದು.

ಈ ಉಬೈದ್ ಸಂಸ್ಕೃತಿಯ ಅಸ್ತಿಭಾರದ ಮೇಲೆ ಮುಂದಿನ ಹಂತವಾದ ಉರಕ್ ಸಂಸ್ಕೃತಿ ಬೆಳೆಯಿತು. ಪ್ರಾಯಶಃ ಅನಟೋಲಿಯ ಪ್ರಾಂತದಿಂದ ಆಮದಾದ, ಗಟ್ಟಿಮುಟ್ಟಾದ, ವರ್ಣಚಿತ್ರಗಳಿಂದ ಹೊಸರೀತಿಯ ಮಡಕೆಗಳು ಬಳಕೆಗೆ ಬಂದವು. ಇವು ಚಕ್ರಯಂತ್ರದಿಂದ ತೆಯಾರಾದವು. ವಾಸ್ತುಶಿಲ್ಪಕಲೆ ಆಗ ಚೆನ್ನಾಗಿ ಬೆಳೆಯಿತು. ಆ ಕಾಲದ ಅತ್ಯುತ್ತಮವಾದ ಶ್ವೇತದೇವಾಲಯ ಎರಡು ಪಟ್ಟಣದಲ್ಲಿ ನಿರ್ಮಿತವಾಯಿತು. 70 ಮೀ ಉದ್ದ 66 ಮೀ ಅಗಲ ಮತ್ತು 13 ಮೀ ಎತ್ತರದ ಜಗತಿಯ ಮೇಲಿದ್ದ ಈ ದೇವಾಲಯದ ವಿಸೀಣ೯ 22.3x17.5 ಮೀ. ಇರಾಕೀ ಸಂಸ್ಕೃತಿಯ ವಿಶಿಷ್ಟಲಕ್ಷಣಗಳಲ್ಲೊಂದಾದ ಜಿಗ್ಗುರಾಟ್ ಅಥವಾ ಪವಿತ್ರ ಶಿಖರ ಈ ರೀತಿ ಹುಟ್ಟಿಕೊಂಡಿತು. ಇತರ ವಿಶಿಷ್ಟ ಕುರುಹುಗಳಾದ ಉರುಳೆಯಾ ಕಾರದ ಮುದ್ರೆ ಮತ್ತು ಲೇಖನೆಕೆಲೆಗಳೂ ಈ ಕಾಲದಲ್ಲೇ ಪ್ರಾರಂಭವಾದಂತೆ ಕಂಡುಬರುತ್ತದೆ.

ಮುಂದಿನ ಹಂತವಾದ ಜಿಮೆಡೆಟ್ ನಾಸ್ರ್ ಸಂಸ್ಕೃತಿಗೆ ಲೇಖನಪೂರ್ವ ಸಂಸ್ಕೃತಿಯೆಂದೂ ಹೆಸರಿಟ್ಟಿದ್ದಾರೆ. ದೇವಾಲಯಕ್ಕೆ ಅಭಿವೃಧ್ಧಿಹೊಂದಿ ಹಂತ ಹಂತವಾದ ಜಗತಿ ಅಥವಾ ತಾಜಾ ಜಿಗ್ಗುರಾಟ್ ಬೆಳೆದು ಬಂದು ದೊಡ್ಡ ಸ್ತಂಭಗಳಿಂದೊಡಗೂಡಿದ ಮೂರು ಕೋಣೆಗಳುಳ್ಳ ದೇವಾಲಯಗಳು ರೂಡಿಗೆ ಬಂದವು. ಗೋಡೆಗಳಿಗೆ ಸುಟ್ಟ ಮಣ್ಣಿನ, ಬಣ್ಣಬಣ್ಣದ ಶಂಕುವಿನಾಕಾರದ ಕೊಳವೆಗಳ ಅಲಂಕಾರ ಬಳಕೆಗೆ ಬಂತು. ಇವು ಅಲಂಕರಣದ ಜೊತೆಗೆ ಭದ್ರತೆಯನ್ನೂ ಹೆಚ್ಚಿಸಿದವು. ತಾಮ್ರ ಮತ್ತು ಬೆಳ್ಳಿಯ ಪ್ರಾತ್ರೆಗಳು, ಭವ್ಯ ಶಿಲ್ಪಕೃತಿಗಳು ಮತ್ತು ಚಿತ್ರಲಿಪಿ, ದಶಮಾಂಶ ಮತ್ತು ಷಷ್ಠ್ಯಂಶ ಗಣಪದ್ಧತಿಗಳು ಬಳಕೆಗೆ ಬಂದವು. ಈ ಶಿಲ್ಪಗಳಿಗೆ ಶಂಖದ ಕಣ್ಣುಗುಡ್ಡೆಗಳನ್ನಿಡುತ್ತಿದ್ದರು. ಭೂ ಸಾರಿಗೆ ರೂಢಿಗೆ ಬಂತು. ದೇವಾಲಯ ಕೇಂದ್ರಸ್ಥವಾದ ನಾಗರಿಕತೆ ಸರ್ವತೋಮುಖವಾಗಿ ಬೆಳೆದು ಪ್ರಶ.ಪೂ. 3ನೆಯ ಸಹಸ್ರಮಾನದ ಆದಿಯಲ್ಲಿ ಅದು ಇನ್ನೂ ಹೆಚ್ಚಿನ ಮಟ್ಟ ಮುಟಿತು.

ಪ್ರಶ.ಪೂ.3000 ರಿಂದ ಪ್ರಶ 600ರವರೆಗೆ: ಪ್ರಶ.ಪೂ.ನೆಯ ಸಹಸ್ರಮಾನದ ಕೆಲವು ಲಿಖಿತ ದಾಖಲೆಗಳು ಇರಾಕಿನ ಚರಿತ್ರೆಯ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳ ಪ್ರಕಾರ ಇರಾಕಿನಲ್ಲಿ ಯಾವುದೋ ಕಾಲದಲ್ಲಿ ವಿಷಯ ನಂಬಲರ್ಹವಲ್ಲ. ಆದರೆ ಆ ಪ್ರವಾಹಾನಂತರದ ವಿಷಯಗಳ ಬಗ್ಗೆ ಸಿಗುವ ಹೇಳಿಕೆಗಳಲ್ಲು ಪೂರ್ಣವಾಗಿ ನಿರ್ದಿಷ್ಟವಾಗಿಲ್ಲವಾದರೂ ಹೆಚ್ಚು ಕಡಿಮೆ ಸರಿಯಾಗಿದ್ದು, ಭುಶೋಧನೆಗಳಲ್ಲಿ ದೊರಕಿರುವ ಅನೇಕ ಸಾಮಾಗ್ರಿಗಳ ಸಹಾಯದಿಂದ ಒಂದು ಸ್ಪಷ್ಟಚಿತ್ರವನ್ನು ಕಲ್ಪಿಸಿಕೊಳ್ಳಲು ಸಹಾಯ ಮಾಡುತ್ತವೆ.

ಪ್ರವಾಹದ ಅನಂತರ ಅನೇಕ ನಗರರಾಜ್ಯಗಳು ದಕ್ಷಿಣ ಇರಾಕಿನಲ್ಲಿ (ಸುಮೇರಿಯ) ಸ್ಥಾಪಿತವಾದವು. ಅವುಗಳಲ್ಲಿ ಎರಕ್ ಮತ್ತು ಉರ್ ಮುಖ್ಯವಾದವು. ಈ ನಗರರಾಜ್ಯಗಳ ಪ್ರಭಾವ ಬಹುಮಟ್ಟಿಗೆ ಆಯಾ ನಗರಗಳಿಗೆ ಮಾತ್ರ ಸೀಮಿತವಾಗಿರುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಒಂದೆರೆಡು ನಗರರಾಜ್ಯಗಳು ಮಿಕ್ಕಿವುಗಳ ಮೇಲೆ ಮೇಲ್ಗೈಯನ್ನು ಸಾಧಿಸಿಕೊಂಡಿದ್ದುದೂ ಕಂಡುಬರುತ್ತದೆ. ಪ್ರ.ಶ.ಪೂ.2350ರ ಸುಮಾರಿನಲ್ಲಿ ಅಕ್ಕಾಡಿನ ಸಾರಗಾನ್ ಈ ನಗರರಾಜ್ಯಗಳನ್ನೆಲ್ಲ ಮೂಲೆಗೊತ್ತಿ ದೊಡ್ಡ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದ.

ಈ ಸಾಮ್ರಾಜ್ಯ ಆನತಿಕಾಲದಲ್ಲಿ ಆನೇಕ ಜನರ ಧಾಳಿಗಳಿಂದಾಗಿ ಶಿಥಿಲಗೊಂಡು, ಇರಾಕ್ ಪುನಃ ಸಣ್ಣ ರಾಜ್ಯಘಟಕಗಳಾಗಿ ಹಂಚಿಹೋಯಿತು. ಈ ಸಂದರ್ಭದಲ್ಲಿ ಇಸಿನ್ ಮತ್ತು ಲಾಸ ಎಂಬ ಎರಡು ನಗರಗಳಿಲ್ಲಿದ್ದ ರಾಜ್ಯಪಾಲ ಕುಲಗಳು ಬಹಳ ಪ್ರಭಾವ ಬೆಳೆಸಿಕೊಂಡಿದ್ದವು.

ಪ್ರ.ಶ.ಪೂ.18ನೆಯ ಶತಮಾನದಿಂದ ಇರಾಕಿನ ಬ್ಯಾಬಿಲೋನಿಯ ಒಂದು ಮುಖ್ಯ ಸ್ಥಾನವನ್ನಾಕ್ರಮಿಸಿತು. ಇಲ್ಲಿ ಆಳಿದವರಲ್ಲಿ ಪ್ರಸಿದ್ಧ ನ್ಯಾಯವಾದಿ ಹಮ್ಮುರಬಿ (ಪ್ರ.ಶ.ಪೂ.1728-1686) ಮತ್ತು ಅವನ ಮಗ ಶಂಸುಲಿನ್ ಮುಖ್ಯರು. ಆದರೆ ಬ್ಯಾಬಿಲೋನಿಯ ಸಾಮ್ರಾಜ್ಯ