ಪುಟ:Mysore-University-Encyclopaedia-Vol-2-Part-2.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೦

                             ಇಟಲಿಯ ಇತಿಹಾಸ

ಸುಧಾರಣೆಯಾಗಬೇಕೆ೦ದು ವಾದಿಸಿದರು.ಕಾರ್ಮಿಕರು ರಾಜಕೀಯ ರ೦ಗವನ್ನು ಪ್ರವೇಶಿಸುವುದನ್ನು ಅವರು ಬಲವಾಗಿ ವಿರೋಧಿಸಿದರು.೧೯೦೬ರಲ್ಲಿ ಈ ಕಾರ್ಮಿಕ ಯಾಜಮಾನ್ಯವಾದಿಗಳೂ ಬಲಸಮಾಜವಾದಿಗಳೂ ಕೂಡಿ ಕಾರ್ಮಿಕರ ಸಾಮಾನ್ಯ ಸ೦ಯುಕ್ತ ಸ೦ಸ್ಥೆಯನ್ನು(ಜನರಲ್ ಕಾನ್ಫೆಡರೇಷನ್ ಆಫ್ ಲೇಬರ್)ಸ್ಥಾಪಿಸಿದರು.ಇದು ಇಟಲಿಯ ಕಾರ್ಮಿಕ ಚಳವಳಿಯ ಕೇ೦ದ್ರವಾಯಿತೆ೦ದು ಹೇಳಬಹುದು.

೧೯೧೮ರಲ್ಲಿ ಕೆಥೊಲಿಕ್ ಪಾಪ್ಯುಲರ್ ಪಕ್ಷ ಲ್ಯೊಗಿಸ್ಟ್ರುಚೋ ಎ೦ಬ ಪಾದ್ರಿಯ ನಾಯಕತ್ವದಲ್ಲಿ ಇಟಲಿಯ ಕಾರ್ಮಿಕ ಸ೦ಯುಕ್ತ ಸ೦ಸ್ಥೆಯನ್ನು (ಇಟಾಲಿಯನ್ ಕಾನ್ಫೆಡರೆಷನ್ ಆಫ್ ಲೇಬರರ್)ಸ್ಥಾಪಿಸಿತು.ಇದು ಬಹಳ ಬೇಗ ಪ್ರವಧ೯ಮಾನಕ್ಕೆ ಬ೦ತು.

ಫ್ಯಾಸಿಸಂ ಕಾಲದಲ್ಲಿ ಕಾರ್ಮಿಕ ಚಟುವಟಿಕೆಗಳು ನಿರ್ಮೂಲವಾದವು.೧೯೪೪ರಲ್ಲಿ ಮೂರು ಮುಖ್ಯ ಫ್ಯಾಸಿಸ೦ ವಿರೋಧಿ ಪಕ್ಷಗಳ ಕಾರ್ಮಿಕ ಪ್ರತಿನಿಧಿಗಳ ಪ್ರಯತ್ನದಿಂದ ಹೊಸದಾಗಿ ಕಾರ್ಮಿಕರ ಸಾಮಾನ್ಯ ಸಂಯುಕ್ತ ಸಂಸ್ಥೆಯೊಂದು(ಜನರಲ್ ಕಾನ್ಫೆಡರೇಷನ್ ಆಫ್ ಲೇಬರ್) ಸ್ಥಾಪಿತವಾಯಿತು.ಈ ಕಾರ್ಮಿಕ ಮುಖಂಡರ ಕ್ರೈಸ್ತ ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಮರಣಕ್ಕೀಡಾದುದರಿಂದ ಡಿ ವಿಟ್ಟೋರಿಯೊ ಎಂಬ ಕಮ್ಯೂನಿಸ್ಟ್ ಪ್ರತಿನಿಧಿಯೇ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದ.೧೯೪೭ರಲ್ಲಿ ಇದರಲ್ಲಿ ೬೦ಲಕ್ಷ ಸದಸ್ಯರಿದ್ದರು.ಕ್ರಮ ಕ್ರಮವಾಗಿ ಈ ಸಂಸ್ಥೆ ಕಮ್ಯೂನಿಸ್ಟರ ಮತ್ತು ಸಮಾಜವಾದಿಗಳ ಹತೋಟಿಗೊಳಪಟ್ಟಿದ್ದರಿಂದ ಕಮ್ಯೂನಿಸಂ ವಿರೋಧಿಗಳು ಪ್ರತಿಸಂಸ್ಥೆಯೊಂದನ್ನು ರಚಿಸುವ ವಿಚಾರ ನಡೆಸಿದರು.ಆದರೆ ಪ್ರಜಾಪ್ರಭುತ್ವವಾದಿ ಕಾರ್ಮಿಕ ಶಕ್ತಿಗಳು ಒಂದುಗೂಡದೆ ಹೋದದ್ದರಿಂದ ಯಾವ ಪ್ರಬಲ ಸಂಸ್ಥೆಯೂ ಅಸ್ತಿತ್ವಕ್ಕೆ ಬರಲು ಸಾಧ್ಯವಾಗಲಿಲ್ಲ.೧೯೫೦ರಲ್ಲಿ ರಿಪಬ್ಲಿಕನ್ನರೂ ಬಲಸಮಜವಾದಿಗಳು ಕ್ರೈಸ್ತ ಪ್ರಜಾಪ್ರಭುತ್ವವಾದಿಗಳೊಡನೆ ಕೂಡಿ ಸಿ.ಐ.ಎಸ್.ಎಲ್.(ಕಾನ್ಫೆಡರೇಷಿಯೋನೆ ಇಟಾಲಿಯಾನ ಸಿಂಡಿಕೆಟೆ ಲೇಬೊರೇಟರಿ)ಎಂಬ ಸಂಸ್ಥೆಯನ್ನೂ ಇತರ ಪಕ್ಷದವರು ಯು.ಐ.ಎಲ್.(ಯೂನಿಯನ್ ಇಟಾಲಿಯಾನ ಡು ಲೆಬೊರೊ) ಎಂಬ ಸಂಸ್ಥೆಯನ್ನೂ ರಚಿಸಿದರು.ಆದರೆ ಇವುಗಳಿಂದ ಸಿ.ಜಿ.ಐ.ಎಲ್.ನ ಪ್ರಭಾವ ಕಡಿಮೆಯಾಗಲಿಲ್ಲ.ತನ್ನ ಮಾತಿಗೆ ಸರಕಾರವು ಕಟ್ಟು ಬೀಳುವಷ್ಟು ಶಕ್ತಿಯುತವಾಗಿ ಇದು ಬೆಳೆಯಿತು.ಆದರೆ ೧೯೫೪ರ ವೇಳೆಗೆ, ಸರಕಾರದ ಬೆಂಬಲದಿಂದ ಹಾಗೂ ಸ್ವಪ್ರಯತ್ನದಿಂದ ಪ್ರಜಾಪ್ರಭುತ್ವವಾದಿ ಸಂಸ್ಥೆಗಳು ಪ್ರಾಬಲ್ಯ ಹೊಂದಿದವು.ಅವು ರಾಷ್ತ್ರೀಯ ಕೈಗಾರಿಕಾ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಸು.೪೦ ಲಕ್ಷ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೂಲಿ ಇತ್ಯಾದಿ ಲಾಭಗಳನ್ನು ಪಡೆದುಕೊಟ್ಟವು.ಇದರ ಪರಿಣಾಮ ಬಹಳ ತೀವ್ರವಾಯಿತು.ಕಮ್ಯೂನಿಸ್ಟೇತರ ಸಂಸ್ಥೆಗಳಿಗೆ ಬೆಂಬಲ ದೊರೆತು ಅವುಗಳ ಪ್ರಭಾವ ಹೆಚ್ಚಾಯಿತು.

ಇಟಲಿಯ ಇತಿಹಾಸ:ಪ್ರಾಕ್ತನ:ರೋಮ್ ಸಾಮ್ರಾಜ್ಯದ ಹಲವಾರು ಅವಶೇಷಗಳು ಇಟಲಿಯಲ್ಲಿ ವಿಪುಲವಾಗಿ ಸಿಕ್ಕುತ್ತವೆ.೧೪ನೆಯ ಶತಮಾನದಿಂದಲೇ ಅಲ್ಲಿನ ಕಲಾವಿದರು ಮತ್ತು ಕಲಾವಸ್ತು ಸಂಗ್ರಾಹಕರು ಅಲ್ಲಲ್ಲಿ ಕಂಡುಬರುತ್ತಿದ್ದ ರೋಮನ್ನರ ಕಾಲದ ಕಂಚಿನ ಮತ್ತು ಅಮೃತಶಿಲೆಯ ವಿಗ್ರಹಗಳನ್ನು ಸಂಗ್ರಹಿಸುತ್ತಿದ್ದರು.೧೭-೧೮ನೆಯ ಶತಮನದಲ್ಲಿ ಹಲವು ಕಲಾವಸ್ತು ಸಂಗ್ರಾಹಕರು ಇವುಗಳಿಗಾಗಿ ಪುರಾತನ ಪಟ್ಟಣಗಳಲ್ಲಿ ಉತ್ಖನನಗಲಳನ್ನು ನಡೆಸಿದರು.ಇಲ್ಲಿ ಹಲವಾರು ಲ್ಯಾಟಿನ್ ಶಾಸನಗಳು ಸಿಕ್ಕಿದುವು.ಪುರಾತನ ಕಾಲದ ನಾಗರಿಕತೆಗಳ ಬಗ್ಗೆ ಜನರ ಆಸಕ್ತಿ ಬೆಳೆಯಿತು. ಈ ರೀತಿಯಲ್ಲಿ ಇಟಲಿಯ ಕಲಾವಸ್ತು ಸಂಗ್ರಾಹಕರು ನಿಮಿತ್ತದಿಂದ ಪ್ರಾಚೀನ ಸಂಸ್ಕ್ರೃತಿಗಳ ಬಗ್ಗೆ ಆರಂಭವಾದ ಕುತೂಹಲ ಇಂದಿನ ಪುರಾತತ್ತ್ವ ಶಾಸ್ತ್ರದ ಬೆಳವಣಿಗೆಗೆ ನಾಂದಿಯಾಯಿತು.೧೮ನೆಯ ಶತಮಾನದ ಕೊನೆಯ ಹೊತ್ತಿಗೆ ಇಲ್ಲಿನ ಪುರಾತನ ಸಂಸ್ಕೃತಿಗಳ ಅಧ್ಯಯನಕ್ಕಾಗಿ ಸರ್ಕಾರವೂ ಕ್ರೈಸ್ತಪಂಥದ ಗುರುಪೀಠವೂ ಹಲವಾರು ಪ್ರಾಚೀನ ನಿವೇಶನಗಳ ಉತ್ಖನನ ಹಾಗೂ ಸಂರಕ್ಷಣೆಗೆ ಸಹಾಯಮಾಡಿದುವು.ಸರ್ಕಾರವೂ ಹಲವು ದೇಶಗಳ ವಿದ್ಯಾಸಂಸ್ಥೆಗಳೂ ಇಟಲಿಯ ಪುರಾತತ್ತ್ವ ಅಧ್ಯಯನದಲ್ಲಿ ಇಂದಿಗೂ ನಿರತವಾಗಿದೆ. ಯುರೋಪಿನ ಪ್ರಾಚೀನ ಶಿಲಾಯುಗದ ಪೂರ್ವ ಮತ್ತು ಮಧ್ಯಕಾಲದ ಕುರುಹುಗಳು ಇಟಲಿ ಪರ್ಯಾಯದ್ವೀಪದ ಕೆಲವು ಸ್ಥಳಗಳಲ್ಲಿ ಕಂಡುಬಂದಿದೆ.ಉತ್ತರ ಪ್ರಾಚೀನ ಶಿಲಾಯುಗದ ಅವಶೇಷಗಳೂ ಇವುಗಳ ಕರ್ತೃಗಳಾದ ಕ್ರೋಮ್ಯಾಗ್ನನ್,ಗ್ರಿಮಾಲ್ಡಿ ರೀತಿಯ ಜನರ ದೈಹಿಕ ಉಳಿಕೆಗಳೂ ಇಟಲಿಯ ಪರ್ಯಾಯದ್ವೀಪದಲ್ಲಲ್ಲದೆ ಸಾರ್ಡೀನಿಯ ಮತ್ತು ಸಿಸಿಲಿ ದ್ವೀಪಗಳಲ್ಲೂ ಇದ್ದದ್ದು ಕಂಡುಬಂದಿದೆ. ಇಲ್ಲಿನ ನೂತನ ಶಿಲಾಯುಗದ ಕಾಲದಲ್ಲಿ ಮಡಕೆಗಳೂ ಹಲವು ಬಗೆಯ ಕಲೆಗಳೂ ಪ್ರಚಲಿತವಾಗಿದ್ದುವು.ಈ ಕಾಲದಲ್ಲಿ ಮೆಡಿಟರೇನಿಯನ್ ಗುಂಪಿಗೆ ಸೇರಿದ ಲಿಗೂರಿಯನ್ ಜನ ಇಲ್ಲಿ ಪಸರಿಸಿದ್ದರು.ಸ್ವಲ್ಪಕಾಲದ ಅನಂತರ ತಾಮ್ರ ಲೋಹ ಬಳಕೆಗೆ ಬಂತು.ಈ ಕಾಲದಲ್ಲಿ ಕಲ್ಲು ತಾಮ್ರ ಮತ್ತು ಎಲುಬಿನಿಂದ ತಯಾರಿಸಿದ ವಸ್ತುಗಳಲ್ಲದೆ ಉತ್ತಮರೀತಿಯ ಚಿತ್ರಿತ ಮಡಕೆಗಳೂ ಬಳಕೆಯಲ್ಲಿದ್ದವು.ಸರೋವರಗಳಲ್ಲಿ ಕಂಬಗಳನ್ನು ನೆಟ್ಟು ಮೇಲೆ ಮನೆ ಕಟ್ಟುವ ಪದ್ದತಿ ಅನೇಕ ಕಡೆ ರೂಢಿಯಲ್ಲಿತ್ತು.ಜೌಗುನೆಲದಲ್ಲೂ ಈ ಜನ ಸುಮಾರು ಇದೇ ರೀತಿಯಲ್ಲಿ ಗ್ರಾಮ ನಿರ್ಮಾಣಮಾಡಿದ್ದರು.ವ್ಯವಸಾಯ ಈ ಕಾಲದ ಮುಖ್ಯ ಕಸುಬು.ವ್ಯಾಪಾರ ಮತ್ತು ಗಣಿ ಕೆಲಸವೂ ವ್ಯವಸ್ಥಿತವಾಗಿತ್ತು.ಈ ಜನ ಮೃತರನ್ನು ಸುಡುತ್ತಿದ್ದರು.ಇವರು ನೂತನ ಶಿಲಾಯುಗದ ಜನಾಂಗಕ್ಕೇ ಸೇರಿದವರೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರಾದರೂ ಇವರು ಹೊಸದಾಗಿ ಇಲ್ಲಿಗೆ ವಲಸೆ ಬಂದು ಆರ್ಯಭಾಷೆಯನ್ನಾಡುತ್ತಿದ್ದ ಜನರೆಂದು ಇನ್ನು ಕೆಲವು ವಿದ್ವಾಂಸರು ಊಹಿಸುತ್ತಾರೆ. ಪ್ರ.ಶ.ಪೂ. ಸು.೧೦೦೦-೬೦೦ರ ವರೆಗೆ ವಿಲ್ಲನೋವ ಎಂಬ ಕಬ್ಬಿಣಯುಗದ ಸಂಸ್ಕೃತಿ ಇಲ್ಲಿ ಪ್ರಚಲಿತವಾಗಿತ್ತು.ಈ ಕಾಲದ ಕುರುಹುಗಳು ಎಮಿಲಿಯ,ಟಸ್ಕನಿ ಮತ್ತು ಲುಂಬ್ರಿಯ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬಂದಿವೆ.ಎಲ್ಲ ನೋವ ಸಂಸ್ಕೃತಿಯ ಜನ ಆಲ್ಪ್ಸ್ ಪರ್ವತ ಪ್ರದೇಶದಿಂದ ವಲಸೆಬಂದವರಿರಬಹುದೆಂದೂ ಪ್ರಾಯಶಃ ಇಟಾಲಿಕ್ ಭಾಷೆಗಳನ್ನಡುತ್ತಿದ್ದರೆಂದೂ ಹಲವು ವಿದ್ವಾಂಸರ ಅಭಿಪ್ರಾಯ. ಪ್ರ.ಶ.ಪೂ.೧೦-೮ನೆಯ ಶತಮಾನದವರೆಗಿನ ಕಾಲದಲ್ಲಿ ಏಷ್ಯ ಮೈನರ್ ಪ್ರದೇಶದಿಂದ ಇಟಲಿಯ ತೀರಪ್ರದೇಶಗಳಿಗೆ ಇಟ್ರಸ್ಕನ್ ಜನ ವಲಸೆ ಬಂದು ಕ್ರಮೇಣ ದೇಶದ ಇತರ ಭಾಗಗಳಲ್ಲಿ ಹರಡಿ ತಮ್ಮದೇ ಆದ ವಿಶಿಷ್ಟ ಸಂಸ್ಕ್ರೃತಿಯೊಂದನ್ನು ಬೆಳೆಸಿದರು.ಪ್ರ.ಶ.ಪೂ.೯-೮ನೆಯ ಶತಮಾನದ ಹೊತ್ತಿಗೆ ಪೋನೀಷಿಯನ್ ಮತ್ತು ಗ್ರೀಕ್ ವಸಾಹತುಗಳು ಇಟಲಿಯ ಕರಾವಳಿಯಲ್ಲಿ ಸ್ಥಾಪಿತವಾಗಿದ್ದುವು.ಇದರಿಂದ ಪ್ರ.ಶ.ಪೂ.೭ನೆಯ ಶತಮಾನದ ಹೊತ್ತಿಗೆ ಇಟಲಿಯ ಬಹುಭಾಗದಲ್ಲಿ ಗ್ರೀಕ್-ಇಟ್ರಸ್ಕನ್ ಸಂಸ್ಕೃತಿ ಪ್ರಚಲಿತವಾಗಿದ್ದಿತು.ಪ್ರ.ಶ.ಪೂ.೫ನೆಯ ಶತಮಾನದಲ್ಲಿ ಆಲ್ಫ್ಸ್ ಪರ್ವತ ಪ್ರದೇಶದಿಂದ ದಾಳಿ ಮಾಡಿದ ಗಾಲ್ ಜನ ಕ್ರಮೇಣ ದೇಶದ ಇತರೆಡೆಗಳಲ್ಲೂ ಹರಡಿದರು.ಪ್ರ.ಶ.ಪೂ.೫-೪ನೆಯ ಶತಮಾನಗಳಲ್ಲಿ ರೋಮ್ ಪಟ್ಟಣದ ಪ್ರಾಧಾನ್ಯ ಬೆಳೆಯಿತು.ಮುಂದೆ ಇಟಲಿಯ ರಾಜಕೀಯ ಏಕೀಕರಣ(ಪೊಲಿಟಿಕಲ್ ಯೂನಿಫಿಕೇಷನ್) ಆಯಿತು.ವಿಶಿಷ್ಟ ರೋಮನ್ ಸಂಸ್ಕೃತಿ ಬೆಳೆಯಿತು.

ಮಧ್ಯಯುಗದಲ್ಲಿ:ರೋಮ್ ಚಕ್ರಾಧಿಪತ್ಯದ ಪತನಾನಂತರ ಇಟಲಿಯ ಇತಿಹಾಸ ಉತ್ತರದಿಂದ ದೇಶವನ್ನು ಆಕ್ರಮಿಸಿಕೊಂಡು ಬಂದ ಅನಾಗರಿಕ ಜನಾಂಗಗಳ ಚರಿತ್ರೆಯನ್ನು ಅನುಸರಿಸಿದೆ.ಷಾರ್ಲ್ಲ್ಮನ್ನನ ಲಂಬಾರ್ಡಿಯ ದಾಳಿಯಿಂದ ಉತ್ತರ ಇಟಲಿ ಕ್ಯಾರೊಲಿಂಗಿಯನರ ಸಾಮ್ರಾಜ್ಯದ ಭಾಗವಾಯಿತು.ದಕ್ಷಿಣ ಭಾಗ ಸಿಸಿಲಿಯ ಅರಬ್ಬೀ ದಾಳಿಕಾರರು ಹಾಗೂ ಬೈಜಾಂಟಿಯನ್ ಚಕ್ರಾಧಿಪತ್ಯದವರೊಡನೆ ವಿವಾದಕ್ಕೊಳಗಾದ ಪ್ರದೇಶವಾಗಿತ್ತು. ಪಶ್ಚಿಮ ಸಾಮ್ರಾಜ್ಯದ ಪುನಶ್ಚೇತನಃ ೯ನೆಯ ಶತಮಾನದ ಅಂತ್ಯದ ವೇಳೆಗೆ ಇಟಲಿ ವಿಘಟನ ಸ್ಥಿತಿಯಲ್ಲಿತ್ತು.ರಾಷ್ಟ್ರೀಯ ಏಕತೆಯ ಧ್ಯೇಯ ಎರಡನೆಯ ಲೂಯಿಯ ಮರಣದಿಂದ ಕುಸಿದುಬಿತ್ತು.ಉತ್ತರ ಹಾಗೂ ಮಧ್ಯ ಇಟಲಿಯ ಆಳ್ವಿಕೆ ಸ್ಥಳೀಯ ರಾಜರುಗಳ ಕೈವಶವಾಯಿತು.ಗಿಡೋ ಮತ್ತು ಸ್ಟಾಲೆಟೋದ ಲ್ಯಾಂಬರ್ಟೋ ಹಾಗೂ ಐವಾರಾದ ಬೆರೆಂಗಲ್ ಮುಂತಾದ ಮುಖ್ಯರು ಕೆಲವು ಕಾಲ ರಾಜ ಅಥಾವ ಸಾಮ್ರಾಟ್ ಎಂಬ ಬಿರುದು ಪಡೆದಿದ್ದರೂ ಅದರ ವಿಜಯ ಅಲ್ಪಾಯುವಾಗಿತ್ತು. ರೋಮ್ನಲ್ಲಿ ಪೋಪರು ಭೂ ಮಾಲೀಕ ಶ್ರೀಮಂತರ ಸೃಷ್ಟಿಕರ್ತರಾಗಿದ್ದರು.ಬೈಜಾಂಟೈನ್ ಸಾಮ್ರಾಜ್ಯ ದಕ್ಷಿಣ ಇಟಲಿಯಲ್ಲಿ ಮುಖ್ಯವಾದ ಅಧಿಕಾರ ಹೊಂದಿತ್ತಾದರು ಲಂಬಾರ್ಡಿ ರಾಜರೂ ಇಟಲಿಯ ಸಾಗರೋತ್ತರ ವ್ಯಾಪಾರಿ ನಗರಗಳೂ ಇವರ ಅಧಿಕಾರಕ್ಕೊಳಗಗಿರಲಿಲ್ಲ.ಇದರ ಮಧ್ಯದಲ್ಲಿ ಹಂಗರಿಯವರು ಲಂಬಾರ್ಡಿಯ ಮೇಲೆ ಯುದ್ದಕ್ಕೆ ಬಂದರು.ಆಫ್ರಿಕ ಸಿಸಿಲಿಗಳಿಂದ ಸಾರಸಿನರು ಬಂದು ಸಮುದ್ರತೀರಗಳ ಮೇಲೆ ದಾಳಿ ಮಾಡಿದರು.ಆಟೊ ೧ ಎಂಬುವನು ಸಾಮ್ರಾಜ್ಯವನ್ನು ಪುನಶ್ಚೇತನಗೊಳಿಸಿದಾಗ ಇಟಲಿಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಯ ತೆರೆಯಿತು.ಪ್ರಾವೆನ್ಸ್ ನ ಲೊಥೈರ್ ದೊರೆ ಸತ್ತಿದ್ದ.ಉತ್ತರಾಧಿಕಾರಿಯಾಗಿ ಬಂದ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಬೆಕೇಂದು ದಿವಂಗತ ದೊರೆಯ ವಿಧವೆಯಾದ ಅಡಿಲೇಡ್ ಪ್ರಾರ್ಥಿಸಿಕೊಂಡಿದ್ದರಿಂದ ಇಲ್ಲಿಗೆ ಬರಲು ಆಟೋಗೆ ಅನುಕೂಲವಾಯಿತು.ಆತ ಬ್ರೆನ್ನರ್ ಕಣಿವೆಯನ್ನು ೯೫೧ರಲ್ಲಿ ದಾಟಿ, ವಿರೋಧಿಗಳನ್ನು ಸೋಲಿಸಿ, ಅಡಿಲೇಡಳನ್ನು ವಿವಾಹವಾಗಿ ತಾನೆ ಇಟಲಿಯ ರಾಜನಾದ.ಆತ ಉತ್ತರ ಇಟಲಿಗೆ ನೀಡಿದ ಮಹಾ ಕೊಡುಗೆಯೆಂದರೆ ಶಾಂತಿ.ಲೀಚ್ಫೀಲ್ಡಿನ್ನಲ್ಲಿ ಹಂಗರಿಯವರನ್ನು ಪರಾಭವಗೊಳಿಸಿ ಅವರ ಅತ್ಯಾಚಾರವನ್ನು ಆತ ಅಂತ್ಯಗೊಳಿಸಿದ.ಆತನ ಸ್ಥೈರ್ಯ ಸಮಚಿತ್ತಗಳ ಪರಿಣಾಮವಾಗಿ ಅನೇಕ ಶ್ರೀಮಂತರು ಆತನಿಗೆ ವಿಧೇಯರಾದರು.ಇವರು ಅತಿಯಾಗಿ ಹೆಚ್ಚಿಕೊಳ್ಳದಂತೆ ಮಾಡಲು ಇವರ ಅಧಿಕಾರಕ್ಕೆ ಪ್ರತಿಯಾಗಿ ಬಿಷಪ್ಗಳ ಅಧಿಕಾರವನ್ನೂ ಆತ ಹೆಚ್ಚಿಸಿದ.ರೋಮನ್ನರ ಕಾಲದಿಂದಲೂ ತಂತಮ್ಮ ದೇವಾಲಯನಗರಗಳನ್ನಾಳುತ್ತ ರಾಜರೊಂದಿಗೆ ಸಹವರ್ತಿಸುತಿದ್ದ.ಇದರಿಂದ್ದ ನಗರಗಳು ಬೆಳೆದಿದ್ದುವು.ಆಟೋ ೧ ರೋಮನ್ ಸಾಮ್ರಾಟನಾದ;ಉತ್ತರ ಇಟಲಿಯನ್ನು ಜರ್ಮನಿಯನ್ನು ಒಂದೇ ಆಡಳಿತದ ಅಡಿಗೆ ತಂದ.ಅಲ್ಲಿಂದ ಮುಂದೆ ಜರ್ಮನಿಯ ಪ್ರಭುಗಳಿಂದ ದೊರೆಯಾಗಿ ಆಯ್ಕೆಯಾದವನೇ ಇಟಲಿಯ ಚಕ್ರವರ್ತಿಯು ಆಗುತ್ತಿದ್ದ.ಆಟೊ ಇಟಲಿಯನ್ನು ಒಟ್ಟುಗೂಡಿಸಲಿಲ್ಲ.ಏಕೆಂದರೆ ಆತನೂ ತನ್ನ ಉತ್ತರಾಧಿಕಾರಿಗಳೂ ದಕ್ಷಿಣದಲ್ಲಿ ತಮ್ಮ ಅಧಿಕಾರವನ್ನು ಸರಿಯಾಗಿ ಸ್ಥಾಪಿಸಲಿಲ್ಲ.ಉತ್ತರ ಹಾಗೂ ದಕ್ಷಿಣ ಇಟಲಿಗಳ ನಡುವೆ ಸಂಬಂಧ ಕಲ್ಪಿಸುವುದೂ ಉತ್ತರದವರ ಮೇಲೆ ಪರಕೀಯರ ಆಡಳಿತ ತರುವುದೂ ಅವರ ಉದ್ದೇಶವಾಗಿತ್ತು.ಅವರು ತಮ್ಮ ಹಿತಗಳ ದೃಷ್ಟಿಯಿಂದಲೇ