ಪುಟ:Mysore-University-Encyclopaedia-Vol-2-Part-3.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ಪಾದನ ವೆಚ್ಚ

ಅಂತಿಮವಾಗಿ ಆಸಕ್ತಿಯಿರುವುದು ಉತ್ಪನ್ನದ ಬೆಲೆಯಲ್ಲೇ ಹೊರತು ಉತ್ಪನ್ನದಲ್ಲಲ್ಲ.ಆದ್ದರಿಂದ ಅಂಚಿನ ಉತ್ಪನ್ನಘಟಕದ ಬೆಲೆಯ ದೃಷ್ಟಿಯಿಂದಲೇ ಆತ ಈ ಎಲ್ಲ ವಿಚಾರ ನಡೆಸುತ್ತಾನೆ.ಒಬ್ಬ ಕಾರ್ಮಿಕನನ್ನು ನೇಮಿಸಿಕೊಂಡರೆ ಆತನ ಶ್ರಮದಿಂದ ಲಭಿಸುವ ಉತ್ಪನ್ನದಿಂದ ದೊರಕುವ ಹುಟ್ಟೂವಳಿಯೇ ಅಂತಿಮವಾಗಿ ನಿರ್ಣಾಯಾಕವಾದದ್ದು.

ಮೇಲೆ ವಿವರಿಸಿದ ಸಮತೋಲ ಸ್ಥಿತಿಯಲ್ಲಿ ಭೌತಿಕ ಉತ್ಪನ್ನದ ಬದಲು ಅದರ ಹುಟ್ಟುವಳಿಯನ್ನು ಪರಿಗಣಿಸಿದರೂ ಈ ನಿಯಮ ಅಷ್ಟೇ ಸತ್ಯ.ಅಂತಿಮವಾಗಿ ಸಮತೋಲ ಘಟ್ಟದಲ್ಲಿ ಪ್ರತಿಯೊಂದು ಉತ್ಪಾದನ ಸಾಧನದ ಬೆಲೆಯೂ ಆದರಿಂದ ಲಭಿಸುವ ಅಂಚಿನ ಹುಟ್ಟುವಳಿ ಉತ್ಪನ್ನಕ್ಕೆ ಸಮನಾಗಿರುತ್ತದೆ.‍x1 ನ ಅಂಚಿನ ಹುಟ್ಟುವಳಿ ಉತ್ಪನ್ನ=‍x1ನ ಬೆಲೆ:x2ನ ಅಂಚಿನ ಹುಟ್ಟುವಳಿ ಉತ್ಪನ್ನ=x2ನ ಬೆಲೆ:x3ನ ಅಂಚಿನ ಹುಟ್ಟುವಳಿ ಉತ್ಪನ್ನ=x3ನ ಬೆಲೆ.......xn ನ ಅಂಚಿನ ಹುಟ್ಟುವಳಿ ಉತ್ಪನ್ನ=xn ನ ಬೆಲೆ.

ಒಂದು ಪದಾರ್ಥ ತಯಾರಿಸಲು ಅಗತ್ಯವಾದ ಶ್ರಮ ಹಾಗೂ ಬಂಡವಾಳಗಳ ಯಾವ ಯಾವ ಸಂಯೋಜನೆಯಿಂದ ಎಷ್ಟೆಷ್ಟು ಉತ್ಪತ್ತಿ ಪಡೆಯಬಹುದೆಂಬುದರ ಬಗ್ಗೆ ಒಂದು ಉತ್ಪಾದನ ಸಂಸ್ಥೆಗೆ ಸಂಬಂಧಿಸಿದ ಅಂಕಿಗಳನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.(ಉದಾಹರಣೆ:ಬಂಡವಾಳ ೫ ಘಟಕಗಳನ್ನು ಶ್ರಮದ ೨ ಘಟಕಗಳೊಂದಿಗೆ ಸಂಯೋಜಿಸಿದರೆ ಲಭಿಸುವ ಉತ್ಪನ್ನ ೪೪೮ ಘಟಕ).

ಈ ಕೋಷ್ಟಕದಲ್ಲಿ ಗಮನಿಸಬಹುದಾದ ಅಂಶವೆಂದರೆ,ಒಂದು ನಿರ್ದಿಷ್ಟ ಸಂಖ್ಯೆಯ ವಸ್ತುವನ್ನು ಅನೇಕ ಸಂಯೋಜನೆಗಳ ಮೂಲಕ ತಯಾರಿಸಬಹುದೆಂಬುದು.ಇದರ ಆಧಾರದ ಮೇಲೆ ಕನಿಷ್ಠ ವೆಚ್ಚದಲ್ಲಿ ಪರಮಾವಧಿ ಹುಟ್ಟುವಳಿ ಉತ್ಪನ್ನ ತರುವ ಸಂಯೋಜನೆ ಯಾವುದೆಂಬುದನ್ನು ನಿರ್ಧರಿಸುವುದು ಸಾಧ್ಯ.ಮೇಲಿನ ಕೋಷ್ಟಕದ ಪ್ರಕಾರ ೩೪೬ ಘಟಕಗಳ ಉತ್ಪತ್ತಿಯನ್ನು ೪ ಬಗೆಯ ಸಂಯೋಜನೆಗಳಿಂದ ಪಡೆಯಬಹುದು:A ಶ್ರಮ ೧+ಬಂಡವಾಳ ೬;B ಶ್ರಮ ೨+ಬಂಡವಾಳ ೩:C ಶ್ರಮ ೩+ಬಂಡವಾಳ ೨ ಮತ್ತು D ಶ್ರಮ ೬+ಬಂಡವಾಳ ೧.(ಈ ನಾಲ್ಕು ಬಗೆಯ ಸಂಯೋಜನೆಗಳೂ ಸಾಧ್ಯವೆಂಬುದು ಅಧ್ಯಾಹಾರ).ಇವುಗಳಲ್ಲಿ ಕಡಿಮೆ ವೆಚ್ಚದ,ಆದರೆ ಹೆಚ್ಚು ಹುಟ್ಟುವಳಿ ತರುವ ಸಂಯೋಜನೆಯೊಂದನ್ನು ಆಯ್ದುಕೊಳ್ಳಬೇಕು.ಈ ಆಯ್ಕೆಗೆ ಈ ಅಂಗಗಳ ಬೆಲೆಯೇ ಆಧಾರ.ಬಂಡವಾಳದ ೧ ಘಟಕಕ್ಕೆ ೩ ರೂ. ಮತ್ತು ಶ್ರಮದ ೧ ಘಟಕಕ್ಕೆ ೨ ರೂ. ಬೆಲೆಯಿದ್ದರೆ ಆಗ ೧ನೆಯ ಸಂಯೋಜನೆಯ ವೆಚ್ಚ(ರೂ.೨+ರೂ.೧೮)ರೂ.೨೦. ಹೀಗೆಯೇ ಉಳಿದ ಸಂಯೋಜನೆಗಳಲ್ಲಿ ಕ್ರಮವಾಗಿ ರೂ.೧೩ ರೂ.೧೨ ಮತ್ತು ರೂ.೧೫ ಉತ್ಪಾದನ ವೆಚ್ಚ ತಗಲುತ್ತವೆ.ಇವುಗಳಲ್ಲಿ ಮೂರನೆಯ(C)ಸಂಯೋಜನೆಯೇ(ಶ್ರಮ ೩+ಬಂದವಾಳ ೨)ಅತ್ಯಂತ ಕಡಿಮೆ ವೆಚ್ಚದ್ದು(ರೂ.೧೨).ಇದನ್ನು ನಕ್ಷೆ ೧ರಲ್ಲಿ ತೋರಿಸಿದೆ.

(SS)ಎನ್ನುವುದು ಸಮೋತ್ಪನ್ನ ರೇಖೆ.ಈ ರೇಖೆಯ ಮೆಲಿನ ಯಾವ ಸಂಯೋಜನೆಯನ್ನು ತೆಗೆದುಕೊಂಡು ಉತ್ಪಾದನೆ ನಡೆಸಿದರೂ ಉತ್ಪನ್ನ ಒಂದೇ ಆಗಿರುತ್ತದೆ.ಶ್ರಮ ಹಾಗು ಬಂಡವಾಳಗಳ ಬೆಲೆ ತಿಳಿದರೆ.೧,೨,೩,೪ನೆಯ ಸಂಯೋಜನೆಗಳಿಗೆ(ಅಥವಾ SS)ರೇಖೆಯ ಯಾವುದೇ ಸಂಯೋಜನೆ)ತಗಲಬಹುದಾದ ಒಟ್ಟು ವೆಚ್ಚವನ್ನು ಲೆಕ್ಕ ಹಾಕಬಹುದು.ಅತ್ಯಂತ ಕಡಿಮೆ ವೆಚ್ಚದ ಸಂಯೋಜನೆಯನ್ನು ಆಯ್ದುಕೊಳ್ಳಲಿಕ್ಕಷ್ಟೆ ಇದು ಅತ್ಯಗತ್ಯ.ಶ್ರಮದ ಘಟಕದ ಬೆಲೆ ರೂ.೨ ಮತ್ತು ಬಂದವಾಳದ ಬೆಲೆ ರೂ.೩ ಎಂದು ಊಹಿಸಿಕೊಂಡಾಗ ಸಾಧ್ಯವಿರುವ ಎಲ್ಲ ಸಂಯೋಜನೆಗಳ ಸಮಾನ ವೆಚ್ಚ ರೇಖೆಗಳನ್ನು ನಕ್ಷೆ ೨ರಲ್ಲಿ ಕಾಣಿಸಿದೆ.

ನಕ್ಷೆ ೩ರಲ್ಲಿ ೧ ಮತ್ತು ೨ನೆಯ ನಕ್ಷೆಗಳನ್ನು ಹೊಂದಿಸಲಾಗಿದೆ.ಸಮೋತ್ಪನ್ನ ರೇಖೆಯನ್ನು ಸಮಾನ ವೆಚ್ಚರೇಖೆ ಯಾವಡೆಯಲ್ಲಿ ಸ್ಪರ್ಶಿಸುತ್ತದೋ ಅದೇ ಆ ಉತ್ಪಾದನ ಮಟ್ಟದ ಕನಿಷ್ಠ ವೆಚ್ಚದ ಬಿಂದು.

ಇದೇ ಆ ಪರಿಸ್ಥಿತಿಯಲ್ಲಿ ಆ ಉತ್ಪತ್ತಿ ಮಟ್ಟಕ್ಕೆ ಅನುಗುಣವಾದ ಸಮತೋಲ ಬಿಂದು ಅಷ್ಟೇ ಅಲ್ಲ,ವೆಚ್ಚ ಹಾಗೂ ಉತ್ಪಾದನ ರೇಖೆಗಳ ಓಟಗಳು(ಸ್ಲೋಪ್)Cಯಲ್ಲಿ ಸಮ.ಇದು ಆ ಉತ್ಪಾದನ ಮಟ್ಟಕ್ಕೆ ಸಂಬಂಧಿಸಿದಂತೆ ಅತ್ಯಂತ ಕನಿಷ್ಠ ವೆಚ್ಚದ ಸಾಧನ ಸಂಯೋಜನೆ(ಶ್ರಮ ೩+ಬಂಡವಾಳ ೨).ಸಮೋತ್ಪಾದನ ರೇಖೆ o ಬಿಂದುವಿನ ಕಡೆಗೆ ಉಬ್ಬಿರುತ್ತದೆಯೆಂಬುದೂ ಗಮನಿಸಬೇಕಾದ ಅಂಶ.ನೋಡಿ-ಉತ್ಪಾದನ-ಮಟ್ಟ-ರೇಖೆಗಳು. (ಸಿ.ಕೆ.ಆರ್)

ಉತ್ಪಾದನ ವೆಚ್ಚ:ಸರಕುಗಳು ಕಾರ್ಖಾನೆಯಲ್ಲಿ ತಯಾರಾಗಿ ಮಾರಾಟಕ್ಕೆ ಸಿದ್ಧವಾಗುವ ಘಟ್ಟದ ವೆರೆಗೂ ತಗಲುವ ವೆಚ್ಚ(ಪ್ರೊಡಕ್ಷನ್ ಕಾಸ್ಟ್).ತಯರಿಕೆಯ ಘಟ್ಟದಲ್ಲಿ,ಆಡಳಿತ ಘಟ್ಟದಲ್ಲಿ,ಸರಕು ಮಾರಾಟ ಮತ್ತು ವಿತರಣೆಯ ಘಟ್ಟಗಳಲ್ಲಿ,ತಗಲುವ ಒಟ್ಟು ವೆಚ್ಚವನ್ನು ನಿಯಂತ್ರಿಸುವ ಹಾಗೂ ಕಡಿಮೆ ಮಾಡುವ ದೃಷ್ಟಿಯಿಂದ ಒಟ್ಟು ವೆಚ್ಚವನ್ನು ಅನೇಕ ಭಾಗಗಳಿಗೆ ವಿಂಗಡಿಸುತ್ತಾರೆ.ಪ್ರತ್ಯಕ್ಷ ಸಾಮಗ್ರಿ(ಡೈರೆಕ್ಟ್ ಮೆಟೀರಿಯಲ್),ಪ್ರತ್ಯಕ್ಷ ಶ್ರಮ(ಕೂಲಿ)ಮತ್ತು ಪ್ರತ್ಯಕ್ಷ ಖರ್ಚುಗಳು ಮೂಲ ವೆಚ್ಚವೆಂದೂ(ಪ್ರೈಮ್ ಕಾಸ್ಟ್)ಪರೋಕ್ಷ ಸಾಮಗ್ರಿ,ಪರೋಕ್ಷ ಶ್ರಮ ಮತ್ತು ಪರೋಕ್ಷ ಖರ್ಚುಗಳು ಮೇಲುವೆಚ್ಚವೆಂದೂ(ಕಾಸ್ಟ್ ಓವರ್ ಹೆಡ್)ವಿಂಗಡಿಸಲಾಗಿದೆ.ಸರಕು ತಯಾರಿಕೆಯ ಘಟ್ಟದಲ್ಲಿ ಸಂಭವಿಸಿದ ಮೇಲುವೆಚ್ಚವನ್ನು ಉತ್ಪಾದನ ಮೇಲುವೆಚ್ಚವೆಂದೂ(ವರ್ಕ್ಸ್ ಆನ್-ಕಾಸ್ಟ್)ಆಡಳಿತ ಸಂಬಂಧವಾಗಿ ಮಾಡಿದ ಮೇಲುವೆಚ್ಚವನ್ನು ಆಡಳಿತ ಮೇಲುವೆಚ್ಚ