ಉಪನಯನ ಬಡಿಯುವುದು ಮುಂತಾದ ಕೃತ್ಯಗಳಲ್ಲಿ ನಿರತರಾಗಿ ಸಂಗೀತ ಪಾಠ ಮುಂದುವರಿಯದಂತೆ ಅಡ್ಡಿ ಮಾಡಿದರು. ಅವರು ಸಂಗೀತಗಾರರಿಗೆ ಪರಿಹಾರ ಕೊಡಬೇಕೆಂದು ಒಂದು ಮೊಕದ್ದಮೆಯಲ್ಲಿ ತೀರ್ಮಾನವಾಯಿತು. (ಎಂ.ಎಸ್.ಆರ್.) - ಉಪನಯನ: ಆಚಾರ್ಯರ ಸಮೀಪಕ್ಕೆ ಉಪದೇಶಕ್ಕಾಗಿ ಆಗಮಿಸುವುದು (ಇನಿಷಿಯೇಷನ್), ಇದರಲ್ಲಿ ಮುಖ್ಯವಾದುದು ಗಾಯತ್ರಿ ಮಂತ್ರೋಪದೇಶ ಮತ್ತು ಬ್ರಹ್ಮಚರ್ಯವ್ರತ ದೀಕ್ಷೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರೆಂಬ ತ್ರಿವರ್ಣದವರಿಗೆ ಮಾತ್ರ ಈ ಸಂಸ್ಕಾರವುಂಟು. ವಟುವಿನ ವಯಸ್ಸನ್ನು ಮೂರು ವರ್ಣದವರಿಗೂ ಪ್ರತ್ಯೇಕವಾಗಿ ನಿಬಂಧಿಸಲಾಗಿದೆ. ಅವರ ಉಡುಗೆ ತೊಡುಗೆಯಲ್ಲೂ ವ್ಯತ್ಯಾಸವುಂಟು. ಈ ಸಂಸ್ಕಾರದಲ್ಲಿ ವಟುವಿಗೆ ಯಜ್ಯೋಪವೀತ ಧಾರಣೆ ಮಾಡಿಸಲಾಗುತ್ತದೆ. ಅನಂತರ ಬ್ರಹ್ಮಚಾರಿಯಾಗಿ ಆತ ಧರ್ಮವನ್ನು ಪಾಲಿಸಬೇಕು, ಭಿಕ್ಷೆಯಿಂದ ಜೀವಿಸಬೇಕು. ತ್ರಿಸಂಧ್ಯಾಕಾಲಗಳಲ್ಲಿ ಗಾಯತ್ರಿ ಮಂತ್ರಪೂರ್ವಕ ಸಂಧ್ಯಾವಂದನೆಯನ್ನಾಚರಿಸಬೇಕು. ಅರ್ಘವನ್ನು ಕೊಡಬೇಕು. ವೇದಾಧ್ಯ ಯನವೇ ವಟುವಿನ ಪ್ರಥಮ ಕರ್ತವ್ಯ. ಗುರುಕುಲವಾಸ, ಗುರುಶುಶೂಷೆ, ಗುರುಪತ್ನಿಯಲ್ಲಿ ಭಕ್ತಿ-ಇವಗಳನ್ನು ವಿಧಿಸಲಾಗಿದೆ, ವಿದ್ಯಾಭ್ಯಾಸಕ್ಕೆ ಕಾಲಾವಧಿಯನ್ನು ಗೊತ್ತು ಮಾಡಿದಂತೆ ತೋರುವುದಿಲ್ಲ, ಭಾರದ್ವಾಜರು 75 ವರ್ಷ ಬ್ರಹ್ಮಚಾರಿಗಳಾಗಿದ್ದರೂ ವೇದಗಳ ಅಧ್ಯಯನವನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ಮುಗಿಸಿದ್ದರಂತೆ, ಪ್ರಾಚೀನ ಕಾಲದಲ್ಲಿ ತಂದೆಯೇ ಗಾಯ, ಮಂತ್ರೋಪದೇಶ ಮಾಡುತ್ತಿರಬಹುದರಬ ಅಭಿಪ್ರಾಯವಿದೆ. ತೈತ್ತಿರೀಂಪು ಸಂಹಿತೆ, ಬ್ರಾಹ್ಮಣಗಳ ಕಾಲಕ್ಕೆ ವಟುವನ್ನು ಗುರುಕುಲವಾಸಕ್ಕೆ ಕಳುಹಿಸುವ ಸಂಪ್ರದಾಯ ಬಂದಿರ ಬಹುದು. ಉದ್ದಾಲಕ ಆರುಣಿ ತಾನೇ ಬ್ರಹ್ಮ ವಿದ್ಯಾಪಾರಂಗತನಾಗಿದ್ದರೂ ತನ್ನ ಪತ್ರ ಶ್ವೇತಕೇತುವನ್ನು ಮತ್ತೊಬ್ಬ ಗುರುವಿನಲ್ಲಿಗೆ ಕಳುಹಿಸಿಕೊಟ್ಟ ಕಥೆ ಇದೆ. ಉಪನಯನ ಸಂಸ್ಕಾರವನ್ನು ಆಪಸ್ತಂಬ ಗೃಹ್ಯ ಸೂತ್ರದಲ್ಲಿ ವಿವರವಾಗಿ ಹೇಳಿದೆ. ಧರ್ಮಸೂತ್ರಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯಲ್ಲಿ ಸ್ತ್ರೀಯರಿಗೂ ಉಪನಯನವಿತ್ತೆಂದು ಹೇಳಲಾಗಿದೆ. ಉಪನಯನಕ್ಕೂ ಮುಂಚೆ ಅಕ್ಷರಾಭ್ಯಾಸದೊಂದಿಗೆ ವಿದ್ಯಾರಂಭ ಸಂಸ್ಕಾರ ನಡೆದಿರಬೇಕು. ಉಪನಯನದಿಂದ ಪ್ರೌಢ ವಿದ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ. ಇತರ ಸಂಸ್ಕೃತಿಗಳಲ್ಲೂ ಉಪನಯನದಂತೆಯೇ ದೀಕ್ಷಾಪದ್ಧತಿ ಇದೆ. ಸಾಮಾಜಿಕವಾಗಿ ತನ್ನ ಕರ್ತವ್ಯಗಳನ್ನು ಅರಿಯಬೇಕಾದ ಆವಶ್ಯಕತೆಯನ್ನು ವಿದ್ಯಾರ್ಥಿಗೆ ಆಗ ತಿಳಿಸಲಾಗುತ್ತದೆ. ಉಪನಯನದ ಅನಂತರ ಅತಿ ಕಠಿಣವಾದ ಶಿಕ್ಷಣವನ್ನು ಕೊಡಲಾಗುವುದು. ಸಾಮಾಜಿಕ ಜೀವನ ಸುಗಮವಾಗುವುದಕ್ಕೆ ವಿದ್ಯಾಭ್ಯಾಸ ಕ್ರಮ ಎಷ್ಟು ಮಹತ್ತರವಾಗಿರಬೇಕೆಂಬುದನ್ನು ಭಾರತೀಯರು ಚೆನ್ನಾಗಿ ಅರಿತಿದ್ದರು. ಮಾನವಜೀವನ, ಪ್ರಾಣಿಜೀವನದ ಮಟ್ಟಕ್ಕೆ ಇಳಿಯದಿರ ಬೇಕಾದರೆ ಮಾನವನ ಬೌದ್ಧಿಕ ಬೆಳೆವಣಿಗೆಯೇ ಕಾರಣ. ಮಾನಸಿಕ ಶಿಕ್ಷಣದೊಂದಿಗೆ ಆತ್ಮಬಲ ಮತ್ತು ದೈಹಿಕಬಲಗಳ ಶಿಕ್ಷಣಕ್ಕೂ ಅಷ್ಟೇ ಗಮನಕೊಟ್ಟು ಗುರು ವಿದ್ಯಾರ್ಥಿಯನ್ನು ತರಬೇತು ಮಾಡಬೇಕು. ಇದಕ್ಕಾಗಿ ಗುರುವಿನ ಲಕ್ಷಣಗಳು ಹೇಗಿರಬೇಕೆಂಬ ನಿಬಂಧನೆಗಳನ್ನೂ ಉಪನಯನ ಸಂಸ್ಕಾರದಲ್ಲಿ ತಿಳಿಸಲಾಗಿದೆ. ತನ್ನ ಮಹತ್ತರವಾದ ಹೊಣೆಯನ್ನು ಉಪಾಧ್ಯಾಯ ನಿರ್ವಹಿಸಲೇಬೇಕು. ಉಪನಯನದಿಂದ ಎರಡನೆಯ ಜನ್ಮ ಪ್ರಾಪ್ತವಾಗುವುದೆಂಬ, ಅಂದರೆ ಬಾಲಕ ದ್ವಿಜನಾಗುವನೆಂಬ ಅಭಿಪ್ರಾಯವಿದೆ. ಶಿಷ್ಯನ ಶೀಲವನ್ನು ರೂಪಿಸುವ ಗುರು ಶೀಲವಂತನಾಗಿರಬೇಕು; ಶಿಷ್ಯನ ಮೇಲೆ ಪ್ರಭಾವ ಬೀರುವಷ್ಟು ಯೋಗ್ಯನಾಗಿರಬೇಕು. ಬ್ರಾಹ್ಮಣನಿಗೆ ವಸಂತ ಋತುವಿನಲ್ಲೂ ಕ್ಷತ್ರಿಯನಿಗೆ ಗ್ರೀಷ್ಮ ಋತುವಿನಲ್ಲೂ ವೈಶ್ಯನಿಗೆ ವರ್ಷ ಋತುವಿನಲ್ಲೂ ಅವರ ಸಾತ್ವಿಕ, ರಾಜಸ ಗುಣಗಳಿಗನುಸಾರವಾಗಿ ಉಪನಯನವನ್ನು ಮಾಡಬೇಕೆಂದು ನಿಯಮವಿದೆ. ಬ್ರಾಹ್ಮಣರು ಶಮದಮಗಳಿಂದ ತೇಜೋವಂತನಾಗಿ ಬಾಳಬೇಕೆಂಬುದು ಒಟ್ಟು ಅಭಿಪ್ರಾಯ. (ಎಸ್.ಎಸ್.ಆರ್.ಎಲ್.ಎಸ್.ಎ.) ಉಪನಾಟಕಗಳು: ಯುರೋಪಿನಲ್ಲಿ ಮಧ್ಯಯುಗದಲ್ಲಿ ಹುಟ್ಟಿದ ಒಂದು ಬಗೆಯ ಗೌಣ ನಾಟಕ (ಇಂಟರ್‌ಲೂಡ್). ಆ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ಮನರಂಜನೆಯನ್ನು ಬಯಸಿದಾಗ, ನಾಟಕವೃತ್ತಿ ಸಂಘಗಳು ಹೆಚ್ಚು ಸಂಖ್ಯೆಯಲ್ಲಿ ಬೆಳೆದಾಗ ಈ ಜಾತಿಯ ಕಿರುನಾಟಕಗಳು ಹುಟ್ಟಿದವು. ನೀತಿನಾಟಕದಿಂದ (ಮೊರಾಲಿಟಿ ಪ್ಲೇ) ಉಪನಾಟಕ ಹುಟ್ಟಿತಾ ದರೂ ಇದರಲ್ಲಿ ಧರ್ಮ ಅಥವಾ ನೀತಿಬೋಧೆಯ ಉದ್ದೇಶವಿರಲಿಲ್ಲ. ಪ್ರಶ. 15ನೆಯ ಮತ್ತು 16ನೆಯ ಶತಮಾನಗಳಲ್ಲಿ ರಚಿತವಾದ ಈ ಉಪನಾಟಕಗಳಲ್ಲಿ ಅನೇಕವು ವಿನೋದದಿಂದ ಕೂಡಿದ, ಸರಳ ಕಾವ್ಯಶೈಲಿಯಲ್ಲಿ ರಚಿತವಾದ, ಪುಟ್ಟ ವಿಡಂಬನ ದೃಶ್ಯಗಳು ಹಗುರವಾದ ಮನೋರಂಜನೆಯೇ ಇವುಗಳ ಉದ್ದೇಶ, ಭೋಜನಕೂಟಗಳಲ್ಲಿ ಔತಣಶಾಲೆಯ ನಡುಮನೆ ಯಲ್ಲಿ ಅಥವಾ ದೊಡ್ಡ ಉಪಾಹಾರ ಗೃಹಗಳ ಅಂಗಳದಲ್ಲಿ 4-5 ನಟರು ಕೂಡಿ ಈ ನಾಟಕಗಳನ್ನು ಅಭಿನಯಿಸುತ್ತಿದ್ದರು. ಅನೇಕ ವೇಳೆ, ಉದ್ದವಾದ ನೀತಿನಾಟಕದ ನಡುವೆ ಮೊರೆಯುತ್ತಿದ್ದ ವಿರಾಮದಲ್ಲಿ ಸಟ್ಟ ವೈವಿಧ್ಯವನ್ನು ತರಲು ಈ ಪುಟ್ಟ ವಿನೋದ ದೃಶ್ಯಗಳನ್ನು ಅಭಿನಯಿಸುತ್ತಿದ್ದುದರಿಂದ ಇವುಗಳಿಗೆ ಉಪನಾಟಕಗಳೆಂದು ಹೆಸರು ಬಂತು. ಉಪನಾಟಕಕ್ಕೆ ಒಳ್ಳೆಯ ಉದಾಹರಣೆಯೆಂದರೆ ಜಾನ್ ಹೇವುಡ್ (ಸು. 1497-1580) ರಚಿಸಿದ ದಿ ಫೋರ್ ಪೀಸ್. ಇದರಲ್ಲಿ ಪಕಾರದಿಂದ ಪ್ರಾರಂಭವಾಗುವ ಹೆಸರಿನ ನಾಲ್ಕು ಪಾತ್ರಗಳು ಬರುತ್ತವೆ. ಒಬ್ಬ ಯಾತ್ರಿಕ (ಪಾಮರ್), ಒಬ್ಬ ಕ್ಷಮಾಧಿಕಾರಿ (ಪಾರ್ಡನರ್), ಇನ್ನೊಬ್ಬ ಉಪನಿಷತ್‌ಗಳು ಸಣ್ಣಪುಟ್ಟ ಸಾಮಾನುಗಳನ್ನು ಮಾರುವ ವರ್ತಕ (ಪೆಡ್ಲರ್), ಮತ್ತೊಬ್ಬ ಅಳಲೇಕಾಯಿ ಪಂಡಿತ (ಅಪಾತಿಕರಿ). ಈ ನಾಲ್ವರೂ ತಮ್ಮಲ್ಲಿ ಯಾರು ಅತಿ ದೊಡ್ಡ ಸುಳ್ಳು ಹೇಳಬಲ್ಲರೆಂದು ಪಣ ತೊಡುತ್ತಾರೆ, ತಾಳ್ಮೆ ತಪ್ಪಿದ್ಧ ಯನ್ನೇ ತನ್ನ ಜೀವಮಾನದಲ್ಲಿ ತಾನು ಕಾಣೆನೆಂದು ಶ್ಲೇಷಾತ್ಮಕವಾದ ಅತಿ ದೊಡ್ಡ ಸುಳ್ಳನ್ನು ಹೇಳಿ ಯಾತ್ರಿಕ ಪಣವನ್ನು ಗೆಲ್ಲುತ್ತಾನೆ. ವಸ್ತುವನ್ನೂ ಅಳವಡಿಸಿಕೊಂಡವು. ಮೊಟ್ಟಮೊದಲು ಚರ್ಚಿನಲ್ಲಿ ಧರ್ಮ ಮತ್ತು ನೀತಿಬೋಧನೆ ಕೇವಲ ವಿನೋದವೇ ಮುಖ್ಯವಾಗಿರುವ ಈ ಗೌಣನಾಟಕಗಳು ಬರಬರುತ್ತ ಚಾರಿತ್ರಿಕ ಗೆಂದು ಉದ್ದೇಶಿಸಿದ ನಾಟಕರೂಪ ಕಾಲಕ್ರಮೇಣ ಚರ್ಚಿನ ಎಲ್ಲೆಯನ್ನುಲ್ಲಂಘಿಸಿ ಲೌಕಿಕ ಮನೋರಂಜನೆಯ ಸ್ವರೂಪವನ್ನು ಪಡೆಯಿತು. ಪ್ರಾಚೀನ ಪಾಶ್ಚಾತ್ಯ ನಾಟಕದ ಈ ಮೂಲರೂಪಗಳೇ ಮುಂದೆ ಎಲಿಜಬೆತ್ ಕಾಲದಲ್ಲಿ ವಿಪುಲವಾಗಿ ರಚಿತವಾದ ಉನ್ನತ ನಾಟಕಗಳಿಗೆ ನಾಂದಿಯಾದುವು. (ಎಚ್.ಕೆ.ಆರ್.) ಇಂಟರ್‌ಲೂಡ್, ನಾಟಕದ ವಿಕಾಸದಲ್ಲಿ ಒಂದು ಮುಖ್ಯ ಘಟ್ಟ ಮಿರಕಲ್, ಮೊರಾಲಿಟಿಗಳಲ್ಲಿ ಧರ್ಮ ಮತ್ತು ನೀತಿಗಳೇ ಪ್ರಧಾನವಾಗಿದ್ದವು. ಇದರಿಂದ ಉಪದೇಶವೇ ಮುಖ್ಯವಾಗಿತ್ತು. ಹೀಗಿದ್ದಷ್ಟು ಕಾಲ ನಾಟಕವು ಸ್ವತಂತ್ರವಾಗಿ ಬೆಳೆಯುವಂತಿರಲಿಲ್ಲ, ಮನುಷ್ಯ ಸ್ವಭಾವದಲ್ಲಿ ಆಸಕ್ತಿ ಬೆಳೆಯುವಂತಿರಲಿಲ್ಲ, ಇಂಟರ್‌ಡ್ ನಾಟಕಕಾರನ ಉಪದೇಶದ ಸಂಕೋಲೆಗಳನ್ನು ತೆಗೆದುಹಾಕಿತು, ಹಾಸ್ಯವನ್ನು ತಂದುಕೊಟ್ಟಿತು. ನಾಟಕ ಪ್ರಕಾರದ ವಿಜಯವನ್ನು ಸಾಂದ್ರ ಮಾಡಿಕೊಟ್ಟಿತು. ಅಲ್ಲದೆ ಅವರಿಗೆ ಮರಕಲ್ಪಗಳು, ಕೊಕ್ಕಲುಗಳನ್ನು ರಚಿಸುತ್ತಿದ್ದವರು ಕಥಾವಸ್ತುವಿಗೆ ಬೈಬಲನ್ನೂ ಸಂತರ ಜೀವನಗಳನ್ನೂ ಆಶಯಿಸುತ್ತಿದ್ದರು. ಹೀಗೆ ನಾಟಕಕಾರನು (ದ ಫೋ ಪೀಸ್ ನಾಟಕವು ತೋರಿಸುವಂತೆ) ತನ್ನ ಕಥಾವಸ್ತುವನ್ನು ತಾನೇ ಸೃಷ್ಟಿಸಲು ಪ್ರಾರಂಭಿಸಿದ. (ಎ.ಎಸ್.ಎಸ್.) ಉಪನಿಷತ್‌ಗಳು: ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್‌ಗಳಿಗೆ ವೇದಾಂತವೆಂಬ ಹೆಸರೂ ಈ ಹೆಸರಿನಿಂದ ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ರೂಢಿಯಲ್ಲಿದೆ. ಉಪನಿಷತ್‌ಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಮಾನವನನ್ನು ಅಮೃತತ ಒಂುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಮಹತ್ತ್ವವನ್ನು ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ. ತತ್ತ ದೃಷ್ಟಿಯಿಂದ ಹೇಗೋ ಸಾಹಿತ್ಯದೃಷ್ಟಿಯಿಂದಲೂ ಇವು ಅದ್ಭುತವಾಗಿದೆ. ಸಂಸ್ಕೃತ ಭಾಷೆಯನ್ನು ಎಷ್ಟು ವೀರ್ಯವತ್ತಾಗಿ ಗದ್ಯದಲ್ಲಿ ಬಳಸಬಹುದೆಂಬುದಕ್ಕೆ ಇವು ನಿದರ್ಶನಗ ರಾಗಿವೆ. ಕೆಲವು ಭಾಗಗಳಂತೂ ಸಿರಾಟದಲ್ಲಿಯೇ ಅತ್ಯುತ್ತಮವಾದುವೆನ್ನಬಹುದು ಋಗ್ವದಕ್ಕೆ ಐತರೇಯ, ಕೌಷೀತಕಿ ಉಪನಿಷತ್‌ಗಳೂ ಸಾಮವೇದಕ್ಕೆ ಛಾಂದೋಗ್ಯ ಮತ್ತು ಶೇಣಿ ಉಪನಿಷತ್‌ಗಳೂ ಕೃಷ್ಣ ವೇದಕ್ಕೆ ಈ ಶ್ವೇತಾಕ್ಷರದ, ತಂರ್ತಣೀಯ ತೈತ್ತಿರೀಯ ಮತ್ತು ಮಹಾ ನಾರಾಯಣೀಯ ಉಪನಿಷತ್‌ಗಳೂ ಶುಕ್ಲಯಜುರ್ವೇದಕ್ಕೆ ಬೃಹದಾರಣ್ಯಕ ಮತ್ತು ಈಶಾವಾಸ್ಕೋಪನಿಷತ್‌ಗಳೂ ಅಥರ್ವವೇದಕ್ಕೆ ಮುಂಡಕ, ಪ್ರಶ್ನೆ, ಮಾಂಡೂಕ್ಯ ಉಪನಿಷತ್‌ಗಳೂ ಸೇರಿವೆ. ಉಪನಿಷತ್‌ಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು 108 ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು 13. ಅವುಗಳಲ್ಲಿ ದಶೋಪನಿಷತ್‌ಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನೆ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ 13 ಉಪನಿಷತ್‌ಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ; ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ. ಉಪನಿಷತ್‌ಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು ಬೌದ್ಧ ಧರ್ಮಕ್ಕೆ ಹಿಂದಿನವು ಎಂಬಲ್ಲಿ ಒಮ್ಮತವಿದೆ. ಅಂದರೆ ಇವು ಪ್ರಶ.ಪೂ. 600ಕ್ಕೆ ಹಿಂದಿನವು. ಋಗ್ವದ ಸಂಹಿತೆಗಳ ಕಾಲಕ್ಕೆ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ ಋಗ್ವದದ ಕಾಲ ಸು. ಪ್ರ.ಶ.ಪೂ. 1200 ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್‌ಗಳ ಕಾಲವನ್ನು ಪ್ರಶ.ಪೂ. 1200 ಮತ್ತು ಪ್ರಶ.ಪೂ. 600ರ ಮಧ್ಯಕಾಲವನ್ನ ಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶಾಸ್ತ್ರಕ್ಕೆ
ಪುಟ:Mysore-University-Encyclopaedia-Vol-2-Part-3.pdf/೧೬೦
ಗೋಚರ