ಪುಟ:Mysore-University-Encyclopaedia-Vol-2-Part-3.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾಷ್ಕಂಟ್-ಸೈಬೀರಿಯ ರೈಲುಮಾರ್ಗದ ನಿರ್ಮಾಣದಿಂದ ಕೈಗಾರಿಕೆಯ ಬೆಳೆವಣಿಗೆ ಯಾಗಿದೆ. ಸೈಬೀರಿಯದಿಂದ ಗೋದಿ, ಮರ, ಅರಣ್ಯವಸ್ತುಗಳು ಮತ್ತು ಇತರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಈಗ ಹೆಚ್ಚು ಅನುಕೊಲಗಳನ್ನು ಕಲ್ಪಿಸಲಾಗಿದೆ. ಆಹಾರ ಕೈಗಾರಿಕೆ ಮತ್ತು ಜವಳಿ ಕೈಗಾರಿಕೆಗಳಿಗೆ ಪ್ರಥಮ ಸ್ಥಾನ ದೊರಕಿದೆ. ಕಬ್ಬಿಣ, ಉಕ್ಕು, ತೈಲ ಮತ್ತು ತಾಮ್ರ ಶುದ್ಥೀಕರಣ, ರಾಸಾಯನಿಕ ಗೊಬ್ಬರ ಹಾಗೊ ವ್ಯವಸಾಯೋಪಕರಣ ತಯಾರಿಕೆಗಳೊ ಮುಖ್ಯವಾಗುತ್ತಿವೆ. ಕೈಗಾರಿಕೆಗೆ ಅಗತ್ಯವಾದ ಶಕ್ತಿಯಲ್ಲಿ ಶೇ. ಭಾಗ ವಿದ್ಯುತ್ತು. ಇತ್ತೀಚಗೆ ಕೆಲವು ಕೈಗಾರಿಕೆಗಳಲ್ಲಿ ಕಲ್ಲಿದ್ದಲು, ಪಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳ ಉಪಯೋಗವೊ ಆಗುತ್ತಿದೆ.

ಸೋವಿಯತ್ ಮದ್ಯ ಏಷ್ಯನ್ ಗಂಅರಾಜ್ಯಗಳ 1/3ರಷ್ಟಿರುವ ಉಚ್ಬೆಕಿಸ್ತಾನದಲ್ಲಿ ಅವುಗಳ ಒಟ್ಟು ಜನಸಂಖ್ಯೆಯ 2/3ರಷ್ಟು ಮಂದಿ ಇದ್ದಾರೆ. ಉಳಿದವಕ್ಕಿಂತ ಇದು ಆರ್ಥಿಕವಾಗಿ ಹೆಚ್ಚು ಮುಂದುವರಿದಿರುವುದೇ ಇದಕ್ಕೆ ಮುಖ್ಯ ಕಾರಣ.


ಜನಸಂಖ್ಯೆ 81.05 ಲಕ್ಷದಲ್ಲಿ(2002) ಉಚ್ಬೆಕ್ ಜನರೇ ಹೆಚ್ಚು(ಶೇ.62.2) ಉಳಿದವರಲ್ಲಿ ರಷ್ಯನರು(ಶೇ.13.5) ಟಾರ್ಟರರು(ಶೇ.5.5), ಕಾಜೌಕರು(ಶೇ.4.1) ಕಾಲಿಕರು(ಶೇ.3.8) ಮತ್ತು ಕಾರಕಲ್ಪಾಕರು(ಶೇ.2.1). ಒಟ್ಟು ಜನಸಂಖ್ಯೆಯಲ್ಲಿ ನೊರಕ್ಕೆ 40ರಷ್ಟು ಮಂದಿ ನಗರ ಮತ್ತು ಕೈಗಾರಿಗಾ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಉಳಿದವರು ಕೃಷಿ, ಪಶುಪಾಲನೆ ಮುಂತಾದ ಕಸಬುಗಳಲ್ಲಿ ತೊಡಗಿ ಹಳ್ಳಿಗಲ್ಲಿ ಜೀವಿಸುತ್ತಾರೆ. 1914ಕ್ಕೆ ಮೊದಲು ಶೇ.97ರಷ್ಟು ಜನ ಅನಕ್ಷರಸ್ಥರಾಗಿದ್ದರು.1956ರ ವೇಳಗೆ ಅನಕ್ಷರಸ್ಥರ ಪ್ರಮಾಣ ಶೇ.22ಕ್ಕೆ ಇಳಿಯಿತು. ಶಾಲಾ ಕಾಲೇಜುಗಳಲ್ಲಿ ರಷ್ಯನ್ ಮತ್ತು ಉಜ್ಬೆಕ್ ಭಾಷೆಗಳು ಪ್ರಮುಖವಾದವುಗಳು. ತಾಷ್ಕಂಟ್, ಸಮರ್ ಕಂಡ್ ಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ.

ತಾಷ್ಕಂಟ್ ರಾಜಧಾನಿ, ಅತಿ ದೊಡ್ಡ ನಗರ, ಕೈಗಾರಿಗೆ ಮತ್ತು ವಾಣಿಜ್ಯ ಕೇಂದ್ರ, ಚಿರ್ಚಿರ್ ನದಿಯ ದಡದಲ್ಲಿರುವ ಈ ನಗರ ಸಮುದ್ರಮಟ್ಟದಿಂದ 333ಮೀ.ಎತ್ತರದಲ್ಲಿದೆ. ಇದೊಂದು ಪ್ರಮುಖ ರೈಲು ನಿಲ್ದಾಣ. ಜನಸಂಖ್ಯೆ 21,24000 (2002).ಸಮರ್ ಕಂಡ್ ಉಜ್ಬೆಕಿಸ್ತಾನದ ಹಳೆಯ ರಾಜಧಾನಿ. ಈ ಐತಿಹಾಸಿಕ ನಗರವೀಗ ಹೊಸ ರೊಪುತಳೆದಿದೆ. ಹತ್ತಿ, ಉಣ್ಣೆ ಮತ್ತು ಯಂತ್ರೋಪಕರಣ ಕೈಗಾರಿಕೆಗಳ ಜೊತೆಜೊತೆಗೆ ಮುಸ್ಲಿಮರ ಪುರಾತನ ಮಸೀದಿಗಳೊ ಪ್ರಶ.ಪೊ. 5ನೆಯ ಶತಮಾನಕ್ಕೆ ಸೇರಿದ ವೀಕ್ಷಣಾಲಯವೊ ಇವೆ.

ಬುಖಾರ ಪುರಾತನ ನಾಗರಿಕತೆಯ ಕೇಂದ್ರ ಹಳೆಯ ನಗರದ ಸುತ್ತಲೊ ಇಟ್ಟಿಗೆಗಳಿಂದ ಕಟ್ಟಿದ ಕೋಟಯೊ ಹತ್ತಿ, ಉಣ್ಣೆ ಮತ್ತು ರೇಷ್ಮೆ ಗಿರಿಣೆಗಳೊ ಇವೆ. ಸ್ವಾಭಾವಿಕ ಅನಿಲಗಳ ದೊಡ್ಡ ನಿಕ್ಷೇಪವಿರುವುದು ಈ ನಗರದ ಸಮೀಪದಲ್ಲೇ.

ಇತಿಹಾಸ: 13ನೆಯ ಶತಮಾನದಲ್ಲಿ ದ್ಥಾಪಿತವಾಗಿ, ರಷ್ಯದ ಬಹು ಭಾಗವನ್ನೊ ಮಂಗೊಂಡು, ಗೋಲ್ಡನ್ ಹೋರ್ಡ್ ಅಥವಾ ಸ್ವರ್ಣದಳವೆಂದು ಪ್ರಸಿದ್ದವಾಗಿದ್ದ ಪಶ್ಚಿಮ ಮಂಗೋಲ್ ಚಕ್ರಾಧಿಪತ್ಯದ ಮುಖ್ಯನಾಗಿದ್ದ ಖಾನ್-ಉಜ್ಬೆಕ್-ನಿಂದ(1312-42) ಉಜ್ಬೆಕರಿಗೆ ಈ ಹೆಸರು ಬಂದಿದೆ. ಉಜ್ಬೆಕರ ಪೊರ್ವ ಚರಿತ್ರೆಗೆ(ನೋಡಿ - ಗೋಲ್ಡನ್ ಹೋರ್ಡ್: ತುರ್ಕಿಸ್ತಾನ)

1917ರಲ್ಲಿ ರಷ್ಯನ್ ಕ್ರಾಂತಿ ಸಂಭವಿಸಿದಾಗ ಉಜ್ಬೆಕ್ ಜನ ರಷ್ಯನ್ ತುರ್ಕಿಸ್ತಾನದ ಸೀರ್ ದಾರ್ಯಾ, ಸಮರಕಂಡ್, ಫರ್ಗನ, ಬುಖಾರ, ಚೀನಗಳಲ್ಲಿ ಹಂಚಿಹೋಗಿದ್ದರು. ಅವರದೊ ಒಂದು ರಾಷ್ಟ್ರವೆಂಬ ಕಲ್ಪನೆಯಿರಲಿಲ್ಲ; ತಾಷ್ಕೆಂಟಿನಲ್ಲಿ ತುರ್ಕಿಸ್ತಾನದ ತಾತ್ಕಾನಿಧಿ ಸಭೆಯೊ ಸ್ಥಾಪಿತವಾದುವು.1917 ಡಿಸೆಂಬರಿನಲ್ಲಿ ಮುಸ್ಲಿಮರು ಕಾಕಾಂಟನಲ್ಲಿ ರಾಷ್ಟ್ರೀಯ ಸಮ್ಮೇಳನವೊಂದನ್ನು ನಡಸಿ ಸ್ಥಾಪಿಸಿದ ಮುಸ್ಲಿಂ ಸರ್ಕಾರ 1918ರ ಫೆಬ್ರವರಿಯಲ್ಲಿ ತಾಷ್ಕಂಟಿನಿಂದ ಬಂದ ಸೈನ್ಯದಿಂದ ಉರುಳಿಬಿತ್ತು. ಆಗ ಆ ಸುತ್ತಿನಲ್ಲಿ ಪ್ರಬಲನಾಗಿದ್ದ ರಷ್ಯನ್ ಪ್ರತಿಕ್ರಾಂತಿ ವೀರ ಅಡ್ಮಿರಲ್ ಕಾಲ್ಚಾಕನ ಸೈನಿಕ ಕಾರ್ಯಾಚರಣೆಯಿಂದಾಗಿ ತುರ್ಕಿಸ್ತಾನದ ಮೇಲೆ ರಷ್ಯನ್ ಹ್ತೋಟಿಯಿರಲಿಲ್ಲ. 1919ರ ವಸಂತಕಾಲದಲ್ಲಿ ರಷ್ಯದ ಕೆಂಪುಸೇನೆ ಕಾಲ್ಚಾಕನನ್ನು ಸೋಲಿಸಿದ ಫಲವಾಗಿ ಆ ವರ್ಷದ ಕೊನೆಯ ವೇಳೆಗೆ ಇಡೀ ತುರ್ಕಿಸ್ತಾನ ಸೋವಿಯತ್ ಒಕ್ಕೊಟದ ವ್ಯಾಪ್ತಿಗೆ ಒಳಪಟ್ಟಿತು.

ಅದರ ತುರ್ಕಿಸ್ತಾನದ ಜನಕ್ಕೊ ರಷ್ಯಕ್ಕೊ ನಡುವಿಣ ಸಂಬಂಧ ಸೌಹಾರ್ದಯುತ ವಾಗಿರಲಿಲ್ಲ. ಇದರಿಂದ ಲೆನಿನ್ ಕಳವಳಗೊಂಡ. ತಾಷ್ಕೆಂಟಿನಲ್ಲಿ ಆಧಿಕಾರ ವಹಿಸಿಕೊಳ್ಳಲು ತುರ್ಕಿಸ್ತಾನ ನಿಯೋಗವೊಂದನ್ನು ಕಲಿಸಿದ. ಇದು ನಾನಾ ಸುಧಾರಣೆಗಳನ್ನು ಜಾರಿಗೆ ತಂದು ಮುಸ್ಲಿಮರ ಮನವೊಲಿಸಿಕೊಳ್ಳಲು ಯತ್ನಿಸಿತು. ಮೊದಮೊದಲು ಈ ಹೊಸ ಆಡಳಿತದ ವಿರುದ್ದವಾಗಿ ಬಂಡಾಯವೆದ್ದಿತ್ತಾದರೊ ಕ್ರಮೇಣ ಎಲ್ಲವೊ ಶಾಂತವಾಯಿತು. ಬುಖಾರ, ಖಿವಾ ರಾಜ್ಯಗಳು ಕ್ರಮೇಣ ಸಮಾಜವಾದಿ ಗಣರಾಜ್ಯಗಳಾದುವು(1924).

1924ರಲ್ಲಿ ತುರ್ಕಿಸ್ತಾನ, ಖೀವಾ, ಬುಖಾರ ಗಣರಾಜ್ಯಗಳ ರದ್ದಾಗಿ ಆವುಗಳ ಸ್ಥಾನದಲ್ಲಿ ಸ್ಥಾಪಿತವಾದ ಗಣರಾಜ್ಯಗಳು ಐದು: ಉಜ್ಬೆಕಿಸ್ತಾನ್, ತಾಜಿಕಿಸ್ತಾನ್, ಕಿರ್ಗಿಷ, ಟರ್ಕ್ಮೆನಿಸ್ತಾನ್, ಮತ್ತು ಕಾಜಾಕ್ ಸ್ತಾನ್. 1936ರಲ್ಲಿ ಉಜ್ಬೆಕಿಸ್ತಾನಕ್ಕೆ ಕಾರಕಲ್ಪಾಕ್ ಪ್ರದೇಶವನ್ನೂ 1956ರಲ್ಲಿ ಕಾಜಾಕಿಸ್ತಾನದ ಕೆಲವು ಪ್ರದೇಶಗಳನ್ನೂ ಸೇರಿಸಿದ್ದರಿಂದ ಇದರ ವಿಸ್ತೀರ್ಣ ಹೆಚ್ಚಿತು. 1937-38ರಲ್ಲಿ ಇಲ್ಲಿ ನಡೆದಿತ್ತೆಂದು ಹೇಳಲಾದ ಒಳಸಂಚೊಂದು ಬಯಲಾಗಿ ಈ ರಾಜ್ಯದ ಮುಖ್ಯಮಂತ್ರಿಯೂ ಉಜ್ಬೆಕ್ ಕಮ್ಯೂನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿಯೂ ಸೇರಿ ಅನೇಕರು ಮರಣದಂಡನೆಗೆ ಗುರಿಯಾದರು.

ಉಜ್ಬೆಕಿಸ್ತಾನದ ಸಂಸ್ಕೃತಿ ಪುರಾತನವಾದದ್ದು. ಸಮರಖಂಡ್, ಬುಖಾರಗಳಲ್ಲಿ ಅನೇಕ ಇಸ್ಲಾಮೀ ಶಿಲ್ಪಗಳಿವೆ. ಈಚೆಗೆ ಪಾಶ್ಚಾತ್ಯ ಶೈಲಿಗೆ ಹಳೆಯ ಸಂಪ್ರದಾಯದ ಶೈಲಿ ಬೆರೆಸುವ ಪ್ರಯತ್ನ ಸಾಗಿದೆ. ಅನೇಕ ಭವ್ಯ ಭವನಗಳ ನಿರ್ಮಾಣವಾಗುತ್ತಿವೆ.