ಪುಟ:Mysore-University-Encyclopaedia-Vol-2-Part-3.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ಖನನ ಲಂಬಮಾನ ಉತ್ಖನನ ಉತ್ತಮವಾದ ಮಾರ್ಗ.ಉತ್ಖನನ ನಡೆಸಬೇಕಾದ ನಿವೇಶನ ಬಹಳ ವಿಸ್ತಾರವಾಗಿದ್ಧು,ನಿವೇದ್ಶನದಲ್ಲಿ ಆನೇಕಾನೇಕ ದೇವಾಲಯಗಳು,ಗೋಡೆಗಳು,ಕಟ್ಟಡಗಳು ಮುಂತಾದುವಿದ್ದರೆ,ಆಗ ಸಮತಲ ಉತ್ಖನನವನ್ನು ಮಾಡಬೇಕು.ಅಡ್ದಕೊಯ್ತದಿಂದ ಈ ಕಟ್ಟಡಗಳು ಪೂರ್ಣವಾಗಿ ನಮಗೆ ಗೋಚರವಾಗುವುದಿಲ್ಲ. ಅವುಗಳ ಪೂರ್ಣಸ್ವರೂಪವನ್ನು ತಿಳಿಯಬೇಕಾದರೆ,ಅವನ್ನು ಭೂಮಿಯಲ್ಲಿದ್ದ ಹಾಗೆಯೇ ಮಣ್ಣಿನಿಂದ ಬೇರ್ಪಡಿಸಬೇಕು. ಇಂಥ ಸಮತಲ ಉತ್ಖನನಗಳನ್ನು ಪ್ರಾರಂಭಿಸುವುದಕ್ಕೆಮೊದಲು,ಅವಶೇಷಗಳಸ್ವರೂಪ,ಪದರಗಳಸ್ವರೂಪ,ಅವಶೇಷಯುತ ಪದರಗಳ ಆಳ ಮುಂತಾದವನ್ನು ತಿಳಿಯಲು ಲಂಬಮಾನ ಉತ್ಖನನ ಮಾಡಬೇಕಾಗತ್ತದೆ. ಸಮತಲ ಉತ್ಖನನವನ್ನು ಸಮಾನ್ಯವಾಗಿ ತೋಡು ಅಥವಾ ಕಂದಕ (ಟ್ರೆಂಚ್) ವಿಧಾನದಿಂದ ಮಾಡುವುದೇ ಹೆಚ್ಚು ಸುಲಭವೂ ವೈಜ್ನಾನಿಕವೂ ಆಗಿದೆ.ಉತ್ಖನನವನ್ನು ನಡೆಸಬೇಕಾದ ನಿವೇಶನದಲ್ಲಿ ಪ್ರಾಯೋಗಿಕ ಲಂಬಮಾನ ಉತ್ಖನನದಿಂದ ಪದರಗಳ ವಿನ್ಯಾಸವನ್ನು ತಿಳಿದ ಅನಂತರ,ಎಲ್ಲಿ ಅವಶೇಷಗಳು ಸಿಕ್ಕುವ ಸೂಚನೆಗಳು ಇರುತ್ತವೆಯೊ ಅಲ್ಲಿ ಸಾಮಾನ್ಯವಾಗಿ೧.೮*೧.೨ಮೀ ಅಳತೆಯ ತೋಡುಗಳನ್ನು ಅಗೆಯಬೇಕು.ಅದಕ್ಕೆ ಮುಂಚೆ ನೆಲದ ಮೇಲೆ ಅಳತೆಯನ್ನು ಗುರುತಿಸಿಕೊಂಡು,ಅನಂತರ ಕಂದಕದ ಎರಡು ಕಡೆಗಳಲ್ಲು ಗುಳಿಯ ಹೊರ ಅಳತೆಗಿಂತ ಸ್ವಲ್ಪ ದೂರದಲ್ಲಿ ಗೂಟಗಳನ್ನು ಸಮಾನಾಂತರದಲ್ಲಿ ಭೂಮಿಯೊಳಗೆ ನೆಡಬೇಕು.ಈ ಕಂದಕದಲ್ಲಿ ಅಗೆತ ಮುಗಿದ ಅನಂತರ ಅದರ ಪಕ್ಕದಲ್ಲಿ ಇದೇ ರೀತಿ ಗುಳಿಯನ್ನು ತೋಡಿ ಉತ್ಖನನವನ್ನು ಮುಂದುವರಿಸಿಕೊಂಡು ಹೋಗಬೇಕು.ನಿವೇಶನದ ಎಲ್ಲ ಕಡೆಯಲ್ಲೂ ಅಲ್ಲಲ್ಲಿ ಈ ರೀತಿ ತೋಡುಗಳನ್ನು ತೆಗೆಯುವುದರಿಂದ ಎಲ್ಲಿಯಾದರೂ ಅವಶೇಷಗಳಲ್ಲಿ ಬದಲಾವಣೆಯಿದ್ದರೆ ಅದು ಒಂದಲ್ಲ ಒಂದು ಗುಳಿಯಿಂದ ಹೊರಬರುತ್ತದೆ. ಸಾಮಾನ್ಯವಾಗಿ ಒಂದೊಂದು ತೋಡಿಗೆ ಒಬ್ಬೊಬ್ಬ ಉತ್ಖನನ ಸಹಾಯಹಕಾಧಿಕಾರಿಯಿರಬೇಕು.ಪ್ರತಿಯೊಂದು ತೋಡನ್ನು ಗುರುತಿಸುವುದಕ್ಕೂ ಅದಕ್ಕೆ ಒಂದು ಸಂಖ್ಯ ಕೊಡಭೇಕು.ಪ್ರತಿಯೊಂದು ತೋಡಿನಲ್ಲಿ ದೊರಕುವ ಅವಶೇಷಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಬೇಕು.ಉತ್ಖನನದಲ್ಲಿ ಅಗೆಯುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯವಾದದ್ದು ಅವಶೇಷಗಳ ಕರಾರುವಾಕ್ಕು ದಾಖಲೆ. ಒಂದು ಎವಶೆಷವನ್ನು ಮಣ್ಣಿನ ಪದರದಿಂದ ಹೊರತೆಗೆದ ಮೇಲೆ ಆ ದಾಖಲೆ ಎಲ್ಲಿ,ಹೇಗೆ,ಎಷ್ಟು ಆಳದಲ್ಲಿತ್ತು ಎಂಬುದು ಮರೆತುಹೋಗುತ್ತದೆ.ವೈಜ್ನಾನಿಕವಾಗಿ ತ್ರಿವಿ ಮಿತೀಯ (ಗಾತ್ರ)ದಾಖಲೆಗಳು ಈಗ ಹೆಚ್ಚಾಗಿ ಬಳಕೆಯಲ್ಲಿವೆ.ಒಂದು ಅವಶೇಷ ಖಚಿತವಾಗಿಬ ಎಲ್ಲಿ ದೊರೆಯಿತು ಎಂಬುದನ್ನು ತಿಳಿಯಲು ಇದು ಆಗಲೇ ಸೂಚಿಸಿದ್ದಗಿದೆ.ಒಂದು ಅವಶೇಷ ದೊರಕಿದ ಸ್ಥಳದಿಂದ,ಯಾವುದಾದರೂ ಒಂದು ಗೂಟಕ್ಕೆ ಇರುವ ಉದ್ದ ಮತ್ತು ಅಗಲಗಳೆಷ್ಟ ಎಂಬುದನ್ನು ಅಳೆಯಬೇಕು.ಅನಂತರ ಆ ತೋಡಿನ ಒಳಕ್ಕೆ ತೂಗುಗುಂಡನ್ನು ಬಿಟ್ಟು ಅದರ ಮೇಲ್ಬಗದಿಂದ ವಸ್ತು ಎಷ್ಟು ಅಳದಲ್ಲಿದೆಯೆಂಬುದನ್ನು ನೋಡಬೇಕು.ಇದಕ್ಕೆ ಕೋನಮಾಪಕವನ್ನು ಬಳಸಬೇಕು.ಇದರಿಂದ ಉದ್ದ ಅಗಲ ಮತ್ತು ಆಳ ಈ ಮೂರು ಅಳತೆಗಳೂ ದೂರಕುತ್ತವೆ.ದಾಖಲೆಗಳಲ್ಲಿ ಪ್ರತಿಯೊಂದು ವಸ್ತುವಿಗ್ಪಗೂ ಒಂದು ಕ್ರಮ,ತ್ರಿಗಾತ್ರ ಅಳತೆಗಳು,ಮಣ್ಣಿನ ಪದರ,ಅನಂತರ ವಸ್ತುವಿನ ವರ್ಣನೆ,ಕೊನೆಯದಾಗಿ ನಕ್ಷೆಗಳು-ಇವಿಷ್ಟನ್ನೂ ಬರೆದಿಡಬೇಕು.ಉತ್ಖನನಗಳಲ್ಲಿ ಸಾಮಾನ್ಯವಾಗಿ ಮಡಕೆಯ ಚೂರುಗಳು ಹೇರಳವಾಗಿ ದೊರೆಯುತ್ತವೆ.ಇವುಗಳನ್ನು ಅವುಗಳ ಪದರಕ್ರಮದಂತೆ ಸರಿಯಾಗಿ ಜೋಡಿಸಿ,ಚೆನ್ನಾಗಿ ತೊಳೆದು,ಅವುಗಳ ಮೇಲೆ ಗುರುತು ಮಾಡಿ ಅನಂತರ ಚೀಲಗಳಲ್ಲಿ ಹಾಕಿಡಬೇಕು.ನಾಣ್ಯಗಳನ್ನು ಉತ್ಖನನ ಸ್ಥಳದ ಪ್ರಯೋಗಶಾಲೆಯಲ್ಲಿ ರಾಸಾಯನಿಕ ವಸ್ತುಗಳಿಂದ ಶುಚಿಮಾದಡಿ ಅನಂತರ ಕಾಗದದ ಚೀಲಗಳಲ್ಲಿ ಹಾಕಿ,ಅವು ದೊರಕಿದ ಸ್ಥಳ ಮುಂತಾದ ವಿವರಗಳನ್ನು ಬರೆಯಬೇಕು.ಬಹು ಪ್ರಾಚೀನಕಾಲದ ಮೂಳೆಗಳು ಬಹು ಸೂಕ್ಶ್ಮ :ಗಾಳಿ ಸೋಕಿದರೆ ಪುಡಿಯಾಗುವ ಸಂಭವವುಂಟು.ಅಂಥ ಮೂಳೆಗಲಿಗೆ ಮೇಣದ ದ್ರವ ಹಚ್ಚಿ ಗಾಳಿ ಸೋಕದಂತೆ ಮಾಡಿ,ಅನಂತರ ಭದ್ರವಾಗಿಟ್ಟು.ರಾಸಾಯನಿಕವಿಧಾನದಿಂದ ಶುಚಿಮಡಿಬೇಕು.ಇದೇ ರೀತಿ ಪ್ರತಿಯೊಂದು ವಸ್ತುವನ್ನೂ ಬಹು ಜಾಜ್ರತೆಯಿಂದ ಹೊರತೆಗೆಯಬೇಕು. ಉತ್ಖನನದಲ್ಲಿ ಛಾಯಾಗ್ರಹಣದ ಪಾತ್ರ ಅತ್ಯಂತ ಮಹತ್ತ್ವದ್ದು.ಸಾಧ್ಯವಾದಷ್ಟು ಧಾರಾಳವಾಗಿ ಛಾಯಾಚಿತ್ರಗಲನ್ನು ತೆಗೆಯಬೇಕಾದುದು ಬಹು ಮುಖ್ಯ.ಮೊದಲೇ ಸೂಚಿಸಿದಂತೆ ಉತ್ಖನನಪೂರ್ವ ಪರಿಸ್ಥಿತಿಯನ್ನು ಮತ್ತೆ ನೋಡಲು ಅವಕಾಶವೇ ಇರುವುದಿಲ್ಲ.ವಸ್ತುಗಳು ಮಣ್ಣಿನ ಪದರಗಳಲ್ಲಿ ಅಂಟಿಕೊಂಡಂತೆ ಚಿತ್ರಗಲನ್ನು ತೆಗೆಯುವುದರಿಂದ ಅನೇಕ ವಿಷಯಗಳು ಹೊರಬೀಳುತ್ತವೆ.ಪದರವಿನ್ಯಾಸಗಳು,ಕಂದಕಗಳು ಮುಂತಾದವನ್ನು ವಿವರವಾಗಿ ಅಧ್ಯಯನಮಾಡಲು ಛಾಯಾಚಿತ್ರಗಳು ಸಹಾಯಕವಾಗುತ್ತವೆ.ಅದರಲ್ಲೂ ಸ್ಮಶನದಲ್ಲಿ ಹೆಣಗಳನ್ನು ಹೂಳುವ ದಿಕ್ಕು,ಸುತ್ತಮುತ್ತಲೂ ಇಡುವ ಪದಾರ್ಥಗಳ ದಿಕ್ಕು ಮುಂತಾದವನ್ನು ಅಧ್ಯಯನ ಮಾಡಲು ಛಾಯಚಿತ್ರಗಳು ಬಹು ಆವಶ್ಯಕವಾದುವು.ಪುರಾತತ್ತ್ವಛಾಯಗ್ರಹಣ ಒಂದು ವಿಶಿಷ್ಟ ಕಲೆ.ಇದು ಕೇವಲ ಛಾಯಗ್ರಹಣ ಮಾತ್ರವಲ್ಲ.ಆದ್ದರಿಂದ ಅವಶೇಷಗಳು,ಪದರಗಳು ಮುಂತಾದುವು ಸಮರ್ಪಕವಾಗಿ ದಾಖಲೆಯಾಗಲು ಬೇಕಾದ ಎಲ್ಲ ಗುಣಗಳಿಂದಲೂ ಕೂಡಿರುವ ಛಾಯಚಿತ್ರಗಳು ಪುರಾತತ್ತ್ಯಕ್ಕೆ ಆವಶ್ಯಕ.ಅಳತೆಕೋಲಿಲ್ಲದೆ ಛಾಯಚಿತ್ರಗವನ್ನು ತೆಗೆಯಲೆಬಾರದು ಎಂಬ ನಿಯಮವನ್ನು ಗಮನಿಸಬೇಕು.ಒಂದು ವಸ್ತು ಎಷ್ಟು ದೊಡ್ಡದ್ದಗೆದೆಯೆಂಬುದು ಆ ವಸ್ತುವಿನ ಪಕ್ಕದಲ್ಲಿ ಅಳತೆಕೋಲವನ್ನು ಇಟ್ಟು ಛಾಯಾಚಿತ್ರ ತೆಗೆಯುವುದರಿಂದ ಗೊತ್ತಾಗುತ್ತದೆ.ಛಾಯಾಚಿತ್ರಕ್ಕೆ ಪ್ರತ್ಯೇಖಾವಾಗಿ ಒಂದು ದಾಖಲೆಯನ್ನು ಬರೆದಿಡಬೇಕು.ಅಲ್ಲಿ ಚಿತ್ರ ತೆಗೆದ ವಸ್ತುವಿನ ಪ್ರತಿಯೊಂದು ವಿಚಾರವನ್ನೂ