ಪುಟ:Mysore-University-Encyclopaedia-Vol-2-Part-3.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖನಿಜ ಸಂಪತ್ತು:ಉತ್ತರ ಕೊರಿಯದಲ್ಲಿ ಹೇರಳವಾದ ಖನಿಜ ಸಂಪತ್ತಿದೆ.ಕಬ್ಬಿಣದ ಅದಿರು,ತಾಮ್ರ,ಸೀಸ,ಸತು,ಮಕ್ಸಿಕ,ತಂಗ್ ಸ್ಟನ್,ಚಿನ್ನ ಮುಖ್ಯ. ವ್ಯವಸಾಯ,ಸಾರಿಗೆ ವ್ಯವಸ್ಥೆ:ಉತ್ತರ ಕೊರಿಯಾದ ಒತು ಭೂಮಿಯ ೩/೫ ಭಾಗ ಮಾತ್ರ ವ್ಯವಸಾಯ ಯೂಗ್ಯ.ಬತ್ತ,ಗೂದಿ,ಬಾರ್ಲಿ,ಮೆಕ್ಕೆಜೋಳ ಮತ್ತು ಸೋಯ ಬೀನುಗಳು ಲೈಲ್ಲಿನ ಮುಖ್ಯ ಬೆಳೆಹತ್ತಿ,ಹೊಗೆಸೂಪ್ಪು,ನಾರು,ಹಣ್ಣುಗಳನ್ನು ಬೆಳೆಯುತ್ತರೆ.ಜಪಾನ್ ಮಾದರಿಯ ಬತ್ತದ ಬೇಸಾಯದಿಂದಾಗಿ ಅಕ್ಕಿಯ ಉತ್ಪಾದನೆ ಹೆಚ್ಚಾಗಿದೆ.೧೯೦೫ರಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನೀಯರ ಪ್ರೋತ್ಸಾಹದಿಂದ ಇಲ್ಲಿ ಹತ್ತಿ ಬೆಳೆಯಲಾಯಿತು.ಈಗ ಹತ್ತಿಯೂ ಇಲ್ಲಿನ ಒಂದು ಮುಖ್ಯ ವಾಣೆಜ್ಯ ಬೆಳೆ. ಉತ್ತರ ಕೊರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಸಂಪತ್ತಿರುವುದರಿಂದ ಕೈಗಾರಿಕೆಗಳು ಬೆಳೆದುವೆ.ಜಪಾನೀಯರ ಆಕ್ರಮಣ ಕಾಲದಲ್ಲಿ ರಸಾನಯವಸ್ತು,ಸಿಮೆಂಟ್,ಕಬ್ಬಿಣ,ಉಕ್ಕು,ವಿದ್ಯುತ್ತು ಮತ್ತು ಯಂತ್ರ ಕೈಗಾರಿಕೆಗಳು ಸ್ತಾಪಿತವಾದವು.ದ್ವಿತೀಯ ಯೂದ್ಧ ಮೂಗಿದು ಜಪಾನೀಯರು ಹಿನ್ನಡೆಯೂವಾಗ ಇಲ್ಲಿನ ಅನೇಕ ಕೈಗಾರಿಕೆಗಳನ್ನು ನಾಶ ಮಾಡಿದರು.ಕಮ್ಯುನಿಸ್ಟರ ಆದಳಿತದಲ್ಲಿ ಕೈಗಾರಿಕೀಕರಣವಾಗುತ್ತದೆ.ಇಲ್ಲಿ ಪ್ರಜಾಪ್ರಭುತ್ವವಾದಿ ಗಣರಾಗ್ಯದ ಸ್ಥಾಪನೆಯಾದಾಗ ಎಲ್ಲ ಕೈಗಾರಿಕೆಗಳೂ ರಾಷ್ಟ್ರೀಕರಣಗೊಂಡವು.ಉತ್ತರ ದಕ್ಷಿಣ ಕೊರಿಯ ಯೂದ್ಧದಿಂದ ಮತ್ತೆ ಇಲ್ಲಿನ ಅನೇಕ ಕೈಗಾರಿಕೆಗಳ ನಾಶವಾಯಿತು.ಯೋಜನಾತ್ಮಕ ಆರ್ಥಿಕ ಪ್ರಗತಿಗಾಗಿ ಇಲ್ಲಿನ ಸರ್ಕಾರ ಶ್ರಮಿಸುತ್ತಿದೆ.ವಿದ್ಯುತ್,ಧಾತು,ಕೈಗಾರಿಕೆ,ಯಂತ್ರರಚನೆ,ರಸಾಯನವಸ್ತು,ಜವಳಿ ಕೈಗಾರಿಕೆಗಳು ಮೂಖ್ಯ ಸುಮಾರು ಅರ್ಧದಷ್ಟು ಜನ ಈಗಲೂ ವ್ಯವಸಾಯ ನಿರತರು.