ಪುಟ:Mysore-University-Encyclopaedia-Vol-2-Part-3.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ತರ ಮೇರುವಲಯ

ಗೋಳುಗಳನ್ನು ಜೋಡಿಸಲು ಅನುಕೂಲವಾಗುವಂತೆ ಇದರಲ್ಲಿ ತಕ್ಕ ಜಾಗಗಳಿವೆ.ಸೂಚಿಬಿಲ್ಲೆಯ ವೃತ್ತಪಟ್ಟಿಯಲ್ಲಿ ೩೬೦ ಸಮಭಾಗಗಳಿವೆ.ಹಡಗಿನ ಚಲನ ದಿಕ್ಕಿನಲ್ಲಿ ಸೂಕ್ಷ್ಮ ಬದಲಾವಣೆ ಮಾಡುವುದು ಈಗ ಸಾಧ್ಯ.ಹಿಂದೆ ಯಾನ ಕೌಶಲ ಇಷ್ಟು ಸುಧಾರಿಸಿರಲಿಲ್ಲ.ಆದ್ದರಿಂದ ಆಗ ಸೂಚಿಬಿಲ್ಲೆಯಲ್ಲಿ ನಾಲ್ಕು ದಿಕ್ಕುಗಳನ್ನು ಮಾತ್ರ ತೋರಿಸುತ್ತಿದ್ದರು.ಯಾನಕೌಶಲ ಸುಧಾರಿಸದೆ ಪಟ್ಟಿಯ ದಿಕ್ಕುಗಳ ಸಂಖ್ಯೆ ಹೆಚ್ಚಿದರೆ ಅದು ಅರ್ಥಪೂರ್ಣವಾಗಿರುವುದಿಲ್ಲ.ಎಂಟು ಮತ್ತು ಮೂವತ್ತೆರಡು ದಿಕ್ಕುಗಳನ್ನು ತೋರಿಸುವುದು ಮಧ್ಯಕಾಲದಲ್ಲಿ ವಾಡಿಕೆಗೆ ಬಂತು.ಇವುಗಳಿಗೆ ಸೂಚಿ ಬಿಂದುಗಳೆಂದು(ಕಾಂಪಸ್ ಪಾಯಿಂಟ್ಸ್)ಹೆಸರು.(ಚಿತ್ರ ೪,೫)

ಉತ್ತರಮುಖಿಯ ಬೋಗುಣಿಯ ತಳ ತೂಕವಾಗಿದೆ.ಹೀಗಿರುವುದು ಅವಶ್ಯಕವೂ ಆಗಿದೆ.ಆದರೆ ಹಡಗು ವೇಗೋತ್ಕರ್ಷಗೊಂಡು ಚಲಿಸಲಾರಂಭಿಸಿದರೆ ಬೋಗುಣಿ ನಿಜವಾದ ಲಂಬದಲ್ಲಿ ನಿಲ್ಲುವುದಿಲ್ಲ.ಅದು ಗುರುತ್ವ ಮತ್ತು ಹಡಗಿನ ವೇಗೋತ್ಕರ್ಷಗಳ ಫಲಿತದ ಜಾಡಿನಲ್ಲಿ ನಿಲ್ಲುತ್ತದೆ.ಆಗ ಉತ್ತರಮುಖಿಯ ವಾಚನದಲ್ಲಿ ಲೋಪ ಉಂಟಾಗುತ್ತದೆ.ಸಾಧಾರಣ ವೇಗದಲ್ಲಿ ಚಲಿಸುವ ಹಡಗುಗಳಲ್ಲಿ ವೇಗೋತ್ಕರ್ಷದಿಂದ ವಾಚನದಲ್ಲಿ ಉಂಟಾಗುವ ಲೋಪ ಅಂಥ ಅಪಾಯಕ್ಕೇನೂ ದಾರಿ ಮಾಡಿಕೊಡುವುದಿಲ್ಲ.ಆದರೆ ವೇಗದಿಂದ ಚಲಿಸುವ ಹಡಗುಗಳಲ್ಲಿ ಇದನ್ನು ಕಡೆಗಣಿಸುವಂತಿಲ್ಲ.ಇದರ ನಿವಾರಣೆಗಾಗಿ ಗೈರೊಸ್ಕೋಪಿನ ನೆರವಿನಿಂದ ಯವಾಗಲೂ ಮಟ್ಟಸವಾಗಿಯೇ ನಿಲ್ಲುವ ಅಟ್ಟಣೆಯ ಮೇಲೆ ಜಿಂಬಾಲುಗಳನ್ನು ಜೋಡಿಸುತ್ತಾರೆ.ಇಂಥ ವ್ಯವಸ್ಥೆಯನ್ನುಳ್ಳ ಉತ್ತರ ಮುಖಿಗಳ ಹೆಸರು ಗೈರೊಕಾಂತ ದಿಕ್ಸೊಚಿಗಳು.

ವಿಮಾನಗಳ ಉತ್ತರಮುಖಿ:ವಿಮಾನಗಳು ಅತಿವೇಗದಿಂದ ಚಲಿಸುತ್ತವೆ,ಮತ್ತು ಉರುಟಣೆ ಹೊಡೆಯುತ್ತವೆ.ಆದ್ದರಿಂದ ಸಾಮಾನ್ಯ ಉತ್ತರಮುಖಿಗಳನ್ನು ಇಲ್ಲಿ ಉಪಯೋಗಿಸುವುದಕ್ಕಾಗುವುದಿಲ್ಲ.ಗೈರೊಕಾಂತ ದಿಕ್ಸೊಚಿಗಳನ್ನು ಉಪಯೋಗಿಸಬಹುದು.ಆದರೆ ಅವುಗಳ ಗಾತ್ರ ಮತ್ತು ತೂಕ ಹೆಚ್ಚು.ಅವುಗಳ ಸೂಚಿಬಿಲ್ಲೆಯ ಆವರ್ತಕಾಲವೂ ತಕ್ಕುದಾಗಿರುವುದಿಲ್ಲ.ಕಾಂತಸೂಜಿಗಳ ಕಟ್ಟಿಗೆ ಬದಲಾಗಿ ಹೆಚ್ಚು ಕಾಂತಮಹತ್ತ್ವವುಳ್ಳ ಗಿಡ್ಡಕಾಂತದಂಡಗಳನ್ನು ಸೂಚಿಬಿಲ್ಲೆಯಿಂದ ದ್ರವದಲ್ಲಿ ನೇತು ಹಾಕಿದರೆ ಆವರ್ತಕಾಲತಗ್ಗುತ್ತದೆ.ನೇತುಹಾಕಲು ಬಳಿಸುವ ಕಾಂತತೆಯಿಲ್ಲದ ತಂತಿಗಳಲ್ಲಿ ಹರಿಯುವ ಸುರುಳಿ(ಎಡ್ಡಿ)ವಿದ್ಯುತ್ ಪ್ರವಾಹದಿಂದ ಕಂಪನಗಳು ಅತಿಬೇಗ ಶಮನಗೊಳ್ಳುತ್ತವೆ.ಹೀಗಿದ್ದರೆ ವಿಮಾನ ಉರುಟಣೆ ಹೊಡೆದರೂ ಸೂಚಿಬಿಲ್ಲೆ ಕ್ಷಣಾರ್ಧದಲ್ಲಿ ತಿರುಗಿ ಸಮಸ್ಥಿತಿಗೆ ಬರುತ್ತದೆ.ಇಂಥ ಉತ್ತರಮುಖಿಗಳ ಹೆಸರು ಅನಿಯತಕಾಲಿಕ(ಎಪೀರಿಯಾಡಿಕ್)ಉತ್ತರಮುಖಿಗಳು.ವಿಮಾನ ಚಲನೆವೇಗ ಮತ್ತು ಉರುಟಣ ಸಾಮರ್ಥ್ಯ ಹೆಚ್ಚುತ್ತಲೇ ಹೋಗಿವೆ.ಗೈರೊಕಾಂತ ದಿಕ್ಸೊಚಿಯಾಗಲೀ ಅನಿಯತಕಾಲಿಕ ಉತ್ತರಮುಖಿಯಾಗಲೀ ಚಲನವೇಗ ಮತ್ತು ಉರುಟಣೆಯಲ್ಲಿ ಹೆಚ್ಚಿಳಿಕೆ ಇರುವ ವಿಮಾನಗಳಲ್ಲಿ ಉಪಯೋಗಕ್ಕೆ ಬರುವುದಿಲ್ಲ.ಇಲ್ಲಿ ಉಪಯೊಗಿಸುವ ಉತ್ತರಮುಖಿಯ ಹೆಸರು ಗೈರೋಪ್ಲಕ್ಸ್ ಗೇಟ್ ದಿಕ್ಸೊಚಿ.ಇದು ಗೈರೊಕಾಂತ ದಿಕ್ಸೊಚಿಯ ಅತಿ ಸುಧಾರಿತ ಮಾದರಿ.ಇದರಲ್ಲಿ ದಿಕ್ಸೊಚಕರಚನೆ ಸ್ಥಾಯೀ ಗೈರೊಸ್ಕೋಪಿನ ನೆರವಿನಿಂದ ಯಾವಾಗಲೂ ಮಟ್ಟಸವಾಗಿಯೇ ನಿಲ್ಲುತ್ತದೆ.ಉರುಟಣೆಯಿಂದ ಇದರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ.ಒಂದು ಎಲೆಕ್ಟ್ರಾನಿಕ್ ಉತ್ತೇಜಕ ದಿಕ್ಸೊಚಕ ರಚನೆಯ ಆವರಣದಲ್ಲಿ ಭೂಕಾಂತಮಟ್ಟ ಬಲವನ್ನು ವಿಶೇಷವಾಗಿ ಹೆಚ್ಚಿಸುತ್ತದೆ.ಆದ್ದರಿಂದ ದಿಕ್ಸೊಚಿಯ ಕೆಲಸ ಸಮರ್ಪಕವಾಗಿ ನಡೆಯುತ್ತದೆ.ಈ ಉಪಕರಣವನ್ನು ಭೂಕಾಂತ ಧ್ರುವಗಳಿಗೆ ೩೨೦ ಕಿ.ಮೀ. ಸಮೀಪವಿರುವಾಗಲೂ ನಿಶ್ಚಿಂತೆಯಿಂದ ಉಪಯೋಗಿಸಬಹುದು.ಬೇರೆ ಉತ್ತರಮುಖಿಗಳ ವಾಚಕಗಳಾದರೋ ಧ್ರುವಗಳಿಗೆ ೧,೯೨೦ ಕಿಮೀ. ಒಳಗೆ ಕರಾರುವಾಕ್ಕಾಗಿರುವುದಿಲ್ಲ. (ಎಸ್.ಎ.ಎಚ್)

ಭೂವಿಜ್ಞಾನದಲ್ಲಿ:ಉತ್ತರಮುಖಿಯಲ್ಲಿ ಎರಡು ವಿಧ:೧ ಮೋಜಣಿಗೆ(ಸರ್ವೆ)ಉಪಯೋಗಿಸುವ ಉತ್ತರಮುಖಿ.೨ ಮುಪ್ಪಟ್ಟಿಯ(ಆಶ್ರಗ ಕಾಂಪಸ್).ಮೋಜಣಿಗಾರರ ಉತ್ತರಮುಖಿಯನ್ನು ಸಾಮಾನ್ಯವಾಗಿ ಗಣಿಮೊದಲಾದುವನ್ನು ಮೋಜಣಿ ಮಾಡುವಾಗ,ಕೆಲವುವೇಳೆ ಶೃಂಗಕೋನ ಮತ್ತು ಸಮತಲಕೋನಗಳನ್ನು ಅಳೆಯಲು ಉಪಯೋಗಿಸುತ್ತಾರೆ. (ಕೆ.ಸಿ.ಆರ್.)

ಸೈನ್ಯಖಾತೆಯಲ್ಲಿ:ನೆಲ ಪಡೆಯ ಸೈನಿಕರ ಶಿಕ್ಷಣವಿಭಾಗಗಳಲ್ಲಿ ಭೂಪಟವೀಕ್ಷಣೆ ಒಂದು ಮುಖ್ಯಾಂಶ.ಹೊಸನೆಲದಲ್ಲಿ ತನ್ನ ಇರವನ್ನು ದೃಢಪಡಿಸಿಕೊಳ್ಳಲು ತಾನು ಕಂಡ ಭಾಗದ ಸೈನಿಕಮಾಹಿತಗಳನ್ನು ವರಿಷ್ಠಾಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಯಪಡಿಸಲು ಈ ಶಿಕ್ಷಣ ಬಲು ಅವಶ್ಯ.ಇದರಲ್ಲಿ ಭೂಪಟದೊಡನೆ ಸೈನಿಕ ಬಳಸುವ ಇನ್ನೊಂದು ಅತಿಮುಖ್ಯ ಉಪಕರಣ ಉತ್ತರಮುಖಿ(ಪ್ರಿಸ್ ಮ್ಯಾಟಿಕ್ ಕಂಪಾಸ್).ಉಪಕರಣಕ್ಕೆ ಆಳವಡಿಸಿರುವ ಆಶ್ರಗ ಆಕಾರದ ಚೌಕಟ್ಟಿನೊಳಗೆ ಭೂತಕನ್ನಡಿ ಇದೆ.ನೋಡಬೇಕೆಂದಿರುವ ವಸ್ತುವನ್ನು ಈ ಭೂತಕನ್ನಡಿ ಮೂಲಕ ದೃಷ್ಟಿಸಿದಾಗ ವಸ್ತುವಿನ ಕಾಂತ ದಿಙ್ಮಾನ ಅದರೊಂದಿಗೇ ಕಾಣುತ್ತದೆ-ಆದ ಕಾರಣ ಉಪಕರಣದ ರಚನೆಯಲ್ಲಿನ ವೈಶಿಷ್ಟ್ಯ.ಹೀಗೆ ವಸ್ತು ಎಲ್ಲೇ ಇದ್ದರೂ ಅದರ ಕಾಂತ ದಿಙ್ಮಾನಚನ್ನು ಸೈನಿಕ ತನ್ನ ನೆಲೆಯಿಂದಲೇ ಅಳೆಯಬಲ್ಲ.ಇದನ್ನು ಮುಂದೆ ಕೆಲವು ಸುಲಭ ಗಣನೆಗಳಿಂದ ಬೇಕಾದಂತೆ ಪರಿವರ್ತಿಸಿಕೊಂಡು ಭೂಪಟದ ಮೇಲೆ ತನ್ನ ಇರವನ್ನು ಕಂಡುಕೊಳ್ಳಬಹುದು.ಇದರ ವಿಪರ್ಯಯಕ್ರಮವೂ ಬೇಕಾಗುತ್ತದೆ.ಎಂದರೆ,ಸೈನಿಕನ ನೆಲೆ ಮತ್ತು ಉದ್ದೇಶಿತ ಗುರಿಯ ನೆಲೆ ಭೂಪಟದ ಮೇಲೆ ಗೊತ್ತಿದೆ.ಆದರೆ ನೆಲದ ಮೇಲೆ ಗುರಿಗೆ ಸಾಗುವುದು ಹೇಗೆ?ಆಗ ಭೂಪಟದಲ್ಲಿ ಗುರಿಯ ದಿಙ್ಮಾನವನ್ನು ಅಳೆದು ಅದನ್ನು ಕಾಂತ ದಿಙ್ಮಾನಕ್ಕೆ ಸುಲಭ ಗಣನೆಗಳಿಂದ ಪರಿವರ್ತಿಸಿ ದೊರೆಯುವ ಬೆಲೆಗೆ ಉತ್ತರಮುಖಿಯನ್ನು ಅಳವಡಿಸಿ ಅದು ತೋರುವ ದಿಕ್ಕಿಗೆ ಗಮಿಸಬೇಕು.ಮೊದಲಿನ ಕ್ರಮದ ಹೆಸರು ನೆಲದಿಂದ ಭೂಪಟಕ್ಕೆ;ಎರಡನೆಯದರ ಹೆಸರು ಭೂಪಟದಿಂದ ನೆಲಕ್ಕೆ.

ಉತ್ತರಮೇರು ವಲಯ:ಸ್ಥೂಲವಾಗಿ ಉತ್ತರ ಅಕಾಂಕ್ಷ ೬೬*೩೩ ಗೆ ಉತ್ತರದಲ್ಲಿ, ಉತ್ತರಮೇರುವಿನ ಮೇಲೆ ಹಾಗೂ ಅದರ ಸುತ್ತಮುತ್ತ ಇರುವ ಪ್ರದೇಶ(ಆರ್ಕ್ ಟಿಕ್ ರೀಜನ್ಸ್).ಉತ್ತರ ಶೀತವಲಯವೆಂದೂ ಕರೆಯುವುದಿದೆ.೬೬*೩೧ ಉತ್ತರ ಆಕಾಂಕ್ಷವಾದ ಉತ್ತರಮೇರು ವೃತ್ತ ಇಅದ್ರ ಭೌಗೋಳಿಕ ಮೇರೆಯೇನೂ ಅಲ್ಲ.ಉತ್ತರಮೇರುವಿನಿಂದ ಹಿಡಿದು ವೃಕ್ಷಬೆಳವಣಿಗೆಯ ಉತ್ತರದ ಅಂಚಿನವರೆಗೆ,ಒಂದೇ ಬಗೆಯ ಸ್ವಾಭಾವಿಕ ಲಕ್ಷಣಗಳಿರುವ ಪ್ರದೇಶಗಳಾದ ಗ್ರೀನ್ ಲೆಂಡ್,ಸ್ವಿಟ್ಸ್ ಬರ್ಗನ್,ಇತರ ಉತ್ತರಮೇರು ದ್ವೀಪಗಳು,ಸೈಬೀರಿಯದ ಉತ್ತರದ ಸಮುದ್ರತೀರ,ಅಲಾಸ್ಕ ಹಾಗೂ ಕೆನಡಗಳ ಉತ್ತರದ ಅಂಚು,ಲ್ಯಾಬ್ರಡಾರ್ ತೀರ,ಐಸ್ ಲೆಂಡಿನ ಉತ್ತರಾರ್ಧ,ಉರೋಪಿನ ಆರ್ಕ್ ಟಿಕ್ ಸಮುದ್ರತೀರ-ಇಷ್ಟು ಇದರ ವ್ಯಾಪ್ತಿ.

ಈ ಭೂಪ್ರದೇಶಗಳ ನಡುವೆ ಇರುವ ಖಂಡಾಂತರ ದಿಣ್ಣೆಯ ಮೇಲೆ ಅನೇಕ ದ್ವೀಪಗಳಿವೆಯಾದರೂ ಉತ್ತರಮೇರು ಬೋಗುಣಿಯಲ್ಲಿ ಯಾವ ದ್ವೀಪಗಳೂ ಕಂಡುಬಂದಿಲ್ಲ.

ಉತ್ತರಮೇರುವಿನ ಭೂಪ್ರದೇಶಗಳು ಬೆಟ್ಟಗುಡ್ಡಮಯವಾಗಿವೆ.ಇವುಗಳ ಮೈಮೇಲೆಲ್ಲ ಕಿಗ್ಗಲು ರಾಶಿರಾಶಿಯಾಗಿ ಹರಡಿದೆ.ವಿಚ್ಛಿದ್ರ ಸಮುದ್ರತೀರಗಳಲ್ಲಿ ಅಲ್ಲಲ್ಲಿ ಮುಖಜಭೂಮಿಗಳೇರ್ಪಟ್ಟಿವೆ.

ವಾಯುಗುಣ:ಉತ್ತರಮೇರು ವೃತ್ತವನ್ನು ಸಾಮಾನ್ಯವಾಗಿ ಸಮಶೀತೋಷ್ಣ ಹಾಗೂ ಶೀತಾವಯಲಗಳ ಎಲ್ಲೆಯ ರೇಖೆಯನ್ನಾಗಿ ಪರಿಗಣಿಸಬಹುದಾದರೂ ಬೇಸಿಗೆಯಲ್ಲಿ ೨೭* ಫ್ಯಾ.ಗಿಂತಲೂ ಚಳಿಗಾಲದಲ್ಲಿ ೦*ಸೆ.ಗಿಂತಲೂ ಕಡಿಮೆ ಉಷ್ಣತೆಯಿರುವ ಭಾಗಗಳು ವೈಜ್ಞಾನಿಕ ಹಾಗೂ ಸೈನಿಕ ಕಾರ್ಯಚರಣೆ ನಡೆಸುವವರ ದೃಷ್ಟಿಯಿಂದ ಶೀತಪ್ರದೇಶ.ನಾಲ್ಕು ತಿಂಗಳ ಬೇಸಗೆ ಹೊಂದಿದ್ದು ೨೭*ಸೆ.(೫೦* ಫ್ಯಾ.)ಉಷ್ಣತೆಯಿದ್ದರೆ ಅಂಥ ಪ್ರದೇಶ ಉಪಮೇರು(ಸಬ್-ಆರ್ಕ್ ಟಿಕ್)ವಲಯವೆನಿಸುತ್ತದೆ.