ಪುಟ:Mysore-University-Encyclopaedia-Vol-2-Part-4.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯ. ಆಕ್ಸಿಅಸಿಟಲೀನ್ ಮಿಶ್ರಣ ಉರಿದಾಗ ನೇರಿಳೆಬಣ್ಣ ಕಂಡುಬರುವುದು. ಆದರೆ ಉಷ್ಣದ ಹೆಚ್ಚಿನ ಪ್ರಮಾಣದಲ್ಲಿರುವುದೇ (3600ಲಿ ಸೆ.) ಇದಕ್ಕೆ ಕಾರಣ. ಆನಿಲಗಳು ಉರಿಯುವಾಗ ಹೊರಸೂಸುವ ಉಷ್ಣಶಕ್ತಿಯನ್ನು ಅನೇಕ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಲೋಹ ಕೈಗಾರಿಕೆಯಲ್ಲಿ, ಬೆಸುಗೆಗೆ, ಕರಗಿಸಲು ಮತ್ತು ಕೊಯ್ಯಲು ಆಕ್ಸಿಅಸಿಟಲೀನ್, ಆಕ್ಸಿಹೈಡ್ರೋಜನ್ ಮುಂತಾದ ಅನಿಲ ಮಿಶ್ರಣಗಳನ್ನು ಉಪಯೋಗಿಸುತ್ತಾರೆ. ಪ್ರಯೋಗಶಾಲೆಯಲ್ಲಿ ಸೋಡಿಯಂ, ಪೊಟಾಸಿಯಂ ಮತ್ತು ಬೇರಿಯಂ ಮುಂತಾದ ಲೋಹಗಳನ್ನು, ಅತ್ಯಂತ ಅಲ್ಪಪ್ರಮಾಣದಲ್ಲಿದ್ದರೂ ಸಹ, ಬುನ್ಸೆನ್ ಬರ್ನರಿನ ಉರಿಯ ಸಹಾಯದಿಂದ ಪತ್ತೆ ಮಾಡಬಹುದು (ನೋಡಿ-ಜ್ವಾಲೆ).

ಉರಿಗಾಂ : ಕೋಲಾರ ಜಿಲ್ಲೆಯ ರಬರ್ಟ್ ಸನ್ ಪೇಟೆಯ ಒಂದು ಭಾಗ. ಮೊದಲು ಪ್ರತ್ಯೇಕ ಹಳ್ಳಿಯಾಗಿತ್ತು. ಕೋಲಾರದ ಚಿನ್ನದ ಗಣಿಯ ಮೊಟ್ಟ ಮೊದಲ ಸುರಂಗ ತೋಡಿದ್ದು ಇಲ್ಲಿ. ಮುಂದಿನ ಹತ್ತು ವರ್ಷಗಳಲ್ಲಿ ಈ ಸುತ್ತಿನ ಪ್ರದೇಶವೆಲ್ಲ ಅಭಿವೃದ್ಧಿ ಹೊಂದಿ ಹೊಸರೂಪ ತಳೆಯಿತಲ್ಲದೆ ರಾಬರ್ಟ್ ಸನ್ ಪೇಟೆಯೆಂಬ ಹೊಸನಗರ ಆವಿರ್ಭವಿಸಿದಾಗ ಅದರಲ್ಲಿ ಇದೂ ಲೀನವಾಯಿತು. ಉರಿಗಾಂಪೇಟೆ ಎಂದೂ ಇದನ್ನು ಕರೆಯುವ ವಾಡಿಕೆಯುಂಟು. ಇಲ್ಲೊಂದು ಪ್ರಥಮ ದರ್ಜೆಯ ಕಲಾ, ವಿಜ್ಜಾನ , ವಾಣಿಜ್ಯ ಕಾಲೇಜು ಸ್ಥಾಪಿತವಾಗಿದೆ. ಇತಿಹಾಸ ದೃಷ್ಟಿಯಿಂದಲೂ ಉರಿಗಾಂಗೆ ಪ್ರಾಶಸ್ತ್ಯವುಂಟು. ಹೊಯ್ಸಳ ದೊರೆ ರಾಮನಾಥನ (13ನೆಯ ಶತಮಾನ) ತಮಿಳು ಶಾಸನಗಳು ಇಲ್ಲಿವೆ. ಅವುಗಳ ಪ್ರಕಾರ ಇದರ ಹೆಸರು ಉರಿಗೈಯಂ.

ಉರಿಗೆದರು (ಬಸರು ನಂಜು): ಬಸುರಿನಲ್ಲೋ ಹೆರಿಗೆಯಲ್ಲೋ ಹೆರಿಗೆಯ ನಂತರದ 24 ಗಂಟೆಗಳಲ್ಲೋ ಕಾಣಿಸಿಕ್ಕೊಳುವ ಸೆಳವಿನ ಬಸುರು ರಕ್ತನಂಜು (ಎಕ್ಲಾಂಪ್ಸಿಯ). ಮೈಯಲ್ಲಿ ಉಬ್ಬರ ಕಾಣಿಸಿಕೊಂಡು ರಕ್ತ ಒತ್ತಡವೇರಿ ಕೋಳೆಮೂತ್ರದೊಂದಿಗೆ (ಅಲ್ಬುಮಿನೂರಿಯ) ಮುಖ್ಯವಾಗಿ ಸೆಳವು ಬರುವುದು. ಬೆಗನೆ ಚಿಕಿತ್ಸೆ ಆಗದಿದ್ದಲ್ಲಿ ಕೂಸಿಗೂ ಬಸುರಿಗೂ ಮಾರಕ (ನೋಡಿ- ಹೆರಿಗೆ-ವಿಜ್ನಾನ).

ಇದಕ್ಕೆ ಮುಕ್ಯ ಕಾರಣ ಜರಾಯುವಿನಲ್ಲಿರುವ ತೀವ್ರ ವ್ಯತ್ಯಾಸ. ಹೇಗೆ ಬರುತ್ತದೆ ಎಂದು ಇದುವರೆಗೂ ತಿಳಿದಿಲ್ಲ. ಸದ್ಯಕ್ಕೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲ. ಗರ್ಭಿಣಿಗೆ ಸಂಪೂರ್ಣ ವಿಶ್ರಾಂತಿ, ಉಪ್ಪು/ಖಾರ/ಮಸಾಲೆಯನ್ನು ಕಡಿಮೆ ಕೊಡುವುದು ಹಾಗೂ ಕೆಲವು ಔಷಧಿಗಳನ್ನು ಅನುಸರಿಸಲಾಗುತ್ತದೆ. ಆದರೂ ಬಾರದಂತೆ ತಡೆಯುವ ಅಥವಾ ಬಂದ ಮೇಲೆ ಪೂರ್ಣ ಉಪಶಮನಕ್ಕಾಗಿ ಯಾವುದೇ ಚಿಕಿತ್ಸೆ ಇಲ್ಲ.

ಉರಿತ: ವೈದ್ಯಶಾಸ್ತ್ರದಲ್ಲಿ ಪೆಟ್ಟು, ಗಾಯಗಳಿಗೆ ಪ್ರತಿಕ್ರಿಯೆಯಾಗಿ ಜೀವಿಯ ಊತಕದಲ್ಲಿ (ಟಿಷ್ಯು) ತೋರುವ ಒಂದು ಸ್ಥಿತಿ. ಪರಿಸರಕ್ಕೆ ಹೊದಿಕೊಂಡು ಬದುಕಿರಳೊಸುಗ ಜೀವಿಗಳಲ್ಲಿ ಹೊಮ್ಮುವ ತೊಡಕಿನ ಯಾಂತ್ರಿಕತೆಯಿದು (ಇನ್ಪ್ಲಮೇಷನ್). ಕೆಂಪಗೆ ಊದಿಕೊಂಡು ಕಾವೇರಿ ಉರಿಯುವುದರರಿಂದ ಈ ಹೆಸರು. ಭೌತ, ಜೈವಿಕ ಪ್ರಪಂಚದಲ್ಲಿ ತಾಕುವ ಪೆಟ್ಟುಗಳು ಹೊರ ವಸ್ತುಗಳ ದಾಳಿಗಳನ್ನು ಎದುರಿಸುವುದರಲ್ಲಿ, ಚೋದನೆಗೆ (ಸ್ಟಿಮ್ಯೂಲೆಷನ್). ಮರುವರ್ತನೆ, ನುಂಗಣೆ, ಅರಗಣೆ, ಹೊಸ ವಸ್ತುಗಳ ತಯಾರಿಕೆ ಮುಂತಾದ ಹುಟ್ಟುಗುಣಗಳು ಇದರಲ್ಲಿ ಕಾಣಬರುತ್ತವೆ. ಜೀವಕಣಗಳಲ್ಲಿ ನಿಜಗೆಲಸಗಳು ಹಂಚಿಹೋಗಿ, ಅಮೀಬದಿಂದ ಹಿಡಿದ ಮಾನವನ ತನಕ ಈ ವಿಧಾನ ಇನ್ನೂ ಜಟಿಲವಾಗುತ್ತ ಬಂದಿದೆ. ಬೇರೆ ಎಲ್ಲ ಯಾಂತ್ರಿಕತೆಗಳ ಹಾಗೇ ಇದರ ಆಚರಣಿಗೂ ಮಿತಿಗಳಿವೆ. ಮಿತಿ ಮೀರಿದರೆ ಇದು ನಡೆಯುವುದೇ ಇಲ್ಲ. ಇತರ ಯಾಂತ್ರಿಕತೆಗಳಂತೆ ಇದೂ ಅಡ್ಡಾದಿಡ್ಡಿ ಆಗಬಹುದು. ಹಾಗಾದಾಗಲೇ ರೋಗ ಕಾಣಿಸಿಕೊಳ್ಳುತ್ತದೆ. ಉರಿತ ಇಲ್ಲದಿದ್ದರೆ, ಯಾವ ಪ್ರಾಣಿಯೂ ಉಳಿಯುತ್ತಿರಲಿಲ್ಲ. ಇದು ಸುಗಮವಾಗಿ ನಡೆಯುತ್ತಿದ್ದರೆ, ಜೇವಿಯು ತನ್ನತನವನ್ನೂ ಪೂರ್ಣತೆಯನ್ನೂ ಉರಿತದ ಯಾಂತ್ರೀಕತೆ ಖಚಿತಗೊಳಿಸಲು ನೆರವಾಗುವುದು.

ಸಾಮಾನ್ಯ ಮಾದರಿ: ಉರಿತದ ಚರಿತ್ರೆಯನ್ನು ರೋಗಶಾಸ್ತ್ರದ ಚರಿತ್ರೆಯೆಂದೇ ತಿಳಿಯಬಹುದು. ಕೀವುಗೂಡುವುದೇ ಮೊದಲಾದ ಉರಿತದ ಕೆಲವು ಮೊಗಗಳನ್ನು ಪ್ರ.ಶ.ಪೂ. 2000 ವರ್ಷಗಳ ಹಿಂದೆಯೇ ಈಜಿಪ್ಪಿನ ಆಪುಕರಡುಗಳನ್ನು (ಪಪೈರಸ್) ನಮೂದಿಸಿದೆ. ಉರಿತದಲ್ಲಿ ಎದ್ದು ಕಾಣುವ ಲಕ್ಷಣಗಳಾದ, ಕೆಂಪೇರಿಕೆ (ರೂಬರ್) ಊತ (ಟ್ಯೂಮರ್), ಕಾವು (ಕ್ಯಾಲರ್ ), ನೋವು (ಡೊಲರ್)- ಇವನ್ನು ರೋಗವೆಂದು ತಿಳಿದು ಒಂದನೆಯ ಶತಮಾನದಲ್ಲಿ ಸೆಲ್ಸಸ್ ಬಣ್ಣಿಸಿದ. ಇವಷ್ಟೇ ಅಲ್ಲದೆ . ಉರಿತವೆದ್ದ ಭಾಗದ ನಿಜಗೆಲಸವೂ ಕೆಟ್ಟಿರುವುದೆಂದು ಸೂಚಿಸಿ, ಗಾಯ ಪೆಟ್ಟುಗಳಿಂದ ಉರಿತ ಏಳಬಹುದೆಂದು, 3ನೆಯ ಶತಮಾನದಲ್ಲಿ ಗ್ಯಾಲನ್ ವಿವರಿಸಿದ್ದರೂ ಯಾವ ಪೆಟ್ಟಿನಿಂದಲಾದರೂ ಒಂದೆಡೆಯ ಊತಕದಲ್ಲಿ ಏಳುವ ಮುಖ್ಯವಾದ ಸಾಮಾನ್ಯ ಪ್ರತಿಕ್ರಿಯೆಯೇ ಉರಿತವೆಂದು ಮೊಟ್ಟಮೊದಲು ಅನುಮಾನವಿಲ್ಲದತೆ 18ನೆಯ ಶತಮಾನದಲ್ಲಿ ಗುರುತಿಸಿದವ ಜಾನ್ ಹಂಟರ್. ಮೇಲ್ತರದ ಪ್ರಾಣಿಗಳಲ್ಲಿ ಆಗುವ ಉರಿತದ ಮುಖ್ಯಕ್ರಮಗತಿಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು; ಕೆರಳಿಕೆ ಕಾರನವಾದ ಕಾರಕವನ್ನು ಹಾಳುಮಾಡಿ ತೆಗೆದುಹಾಕುವ ರಕ್ತನಾಳಗಳ ಬದಲಾವಣೆಗಳು; ಸೊನೆ (ಎಕ್ಸುಡೇಟ್) ಸುರಿತ: ಹಾಳಾದ ಭಾಗಗಳ ಆಮೇಲಿನ ನೇರ್ಪಾಟು (ರಿಪೇರಿ), ಮೊದಲ ಕೆಲಸವನ್ನು ಅಲೆದಾಡುವ ಜೀವಕಣಗಳೂ ಎರಡನೆಯದನ್ನು ಊತಕದವೂ ಮಾಡುವುವು.

ರಕ್ತನಾಳಗಳ ಬದಲಾವಣೆಗಳು: ಜೀವಿಗಳಲ್ಲಿ ಗಾಯಗಳನ್ನು (ಲೀಷನ್ಸ್) ಮಾಡಿ ಸೂಕ್ಷ್ಮದರ್ಶಕ, ರಾಸಾಯನಿಕ ಪ್ರಯೋಗಗಳನ್ನು ನಡೆಸಿ ಪಡೆದ ತಿಳಿವಳಿಕೆಯಿಂದ ಉರಿತದ ಕ್ರಮಗತಿ ಬಹುಮಟ್ಟಿಗೆ ಗೊತ್ತಾಗಿದೆ. ಕಪ್ಪೆಯ ನಾಲಗೆ, ಕಾಲುಗಳ ಜಾಲಗಳು, ಕರುಳು ನಡುಪೊರೆಗಳಂಥ (ಮೆಸಂಟರಿ) ಸಿಲುವಿನ (ಪಾರದರ್ಶಕ) ರಚನೆಗಟ್ಟುಗಳನ್ನು ಇದಕ್ಕಾಗಿ 19ನೆಯ ಶತಮಾನದ ನಡುವಿನಲ್ಲಿ ಜರ್ಮನ್ ಪ್ರಾಯೋಗಿಕರೋಗಶಾಸ್ತ್ರಜ್ನ ಜೆ.ಎಫ್.ಕಾನ್ ಹೀಮ್ ಬಳಸಿದ. ಉರಿತ ಎಬ್ಬಿಸಲು ಬೆಳ್ಳಿಯ ನೈಟ್ರೇಟು, ಜಾಪಾಳದೆಣ್ಣೆ ತೆರನ ವಸ್ತುಗಳನ್ನು ಹಚ್ಚಿದ. ಇದರಿಂದ ಕೆರಳಿದ ಮೇಲೆ ಆಗುವ ರಕ್ತನಾಳಗಳ ಬದಲಾವಣೆಗಳ ಸಾಲನ್ನು ಸೂಕ್ಷ್ಮದರ್ಶಕದಿಂದ ಕಂಡ. ರಕ್ತನಾಳಗಳು ಮುಖ್ಯವಾಗಿ ಹಿಗ್ಗುತ್ತವೆ; ಆಮೇಲೆ ಸಿರಗಳು, ಕೊನೆಗೆ ಲೋಮನಾಳಗಳು ಹಿಗ್ಗಿದಂತೆಲ್ಲ, ಎಲ್ಲ ರಕ್ತನಾಳಗಳಲ್ಲೂ ರಕ್ತ ಹರಿವಿನ ವೇಗ ಏರುವುದು, ಆಮೇಲೆ ರಕ್ತದ ಹರಿವು ಮೊದಲಿಗಿಂತ ನಿಧಾನವಾದರೂ ರಕ್ತನಾಳಗಳು ಹಿಗ್ಗಿಕೊಂಡೇ ಇರುತ್ತವೆ. ಲೋಮನಾಳಗಳು ಇನ್ನೂ ಚೆನ್ನಾಗಿ ಎದ್ದು ತೋರುವುವು. ಕೆಲವು ತಾಸುಗಳು ಕೆಳದ ಮೇಲೆ ಎಲ್ಲ ರಕ್ತ ನಾಳಗಳಲ್ಲೂ ಅಸಹಜವಾಗಿ ರಕ್ತ ತುಂಬಿಕೊಂಡ ಹಾಗೆ ತೋರುತ್ತದೆ. ರಕ್ತದ ಹರಿವಿನ ಪದರಗಳಲ್ಲಿ ಎಷ್ಟೋ ಬಿಳಿಯ ರಕ್ತಕಣಗಳಿದ್ದು ರಕ್ತನಾಳಗಳ ಗೋಡೆಗಳಿಗೆ ಅಂಟಿಕೊಂಡಿರುತ್ತವೆ. ಅಲ್ಲದೆ ಕೆಂಪು ರಕ್ತಕಣಗಳು ರಾಶಿ ಬಿದ್ದಿರುವುದು ಕಾಣುವುದು. ಕೆಲವು ರಕ್ತನಾಳಗಳಲ್ಲಿ ಸದ್ಯಕ್ಕೆ ರಕ್ತದ ಹರಿವು ನಿಂತುಬಿಡಬಹುದು. ಬಿಳಿ ಕಣಗಳು (ಊಕೊಸೈಟ್ಸ್) ಒಳಪೊರಗೆ (ಎಂಡೋತೀಲಿಯಂ) ತಾಸುಗಟ್ಟಲೆ ಅಂಟಿಕೊಂಡೇ ಇರಬಹುದು. ಕಿವುಚಿಕೆ, ಗಿಲ್ಲುವುದು, ಒತ್ತಡ ಇವುಗಳ ತೆರನ ಮೆಲುಪಿನ ಗಾಯವಾದ ಮೇಲೆ, ರಕ್ತದ ಹರಿವು ಬೇಗನೆ ಮುನ್ನಿನಂತಾಗಿ, ಅಂಟಿಕೊಂಡಿದ್ದ ಬಿಳಿಕಣಗಳು ಜಾಗ ಬಿಟ್ಟು ಮುಂದೆ ಸಾಗುತ್ತವೆ. ಇನ್ನೂ ಬಲವಾದ ಗಾಯವಾದರೆ , ರಕ್ತನಾಳಗಳ ಬದಲಾವಣೆಗಳು ಹಾಗೇ ಉಳಿಯುತ್ತವೆ. ಕೆಲವು ರಕ್ತನಾಳಗಳಲ್ಲಿ ಕೂಡುಕರಣಿಕೆಯಿಂದ (ತ್ರಾಂಬೋಸಿಸ್) ಅಡಚಣೆಯಾಗಬಹುದು. ಉರಿತ ಎದ್ದಾಗಲೆಲ್ಲಾ ರಕ್ತನಾಳಗಳ ಬದಲಾವಣೆಗಳು ಆಗಲೇಬೇಕೆಂದಿಲ್ಲ. ಕಣ್ಣಿನ ಮುಂದುಗಡೆ ಇರುವ ಕೋಡುಪೋರೆಯಲ್ಲಿ (ಕಾರ್ನಿಯ) ರಕ್ತನಾಳಗಳೇ ಇರದಿದ್ದರೂ ಅಲೆಯುವ ಬಿಳಿಕಣಗಳು ಅಲ್ಲಿಗೂ ನುಗ್ಗುತ್ತವೆ.

ಸೊನೆ ಸುರಿತ: ಉರಿತದ ವಿಶೇಷ ಲಕ್ಷಣಗಳಲ್ಲಿ ಒಂದಾದ ಸೊನೆ ಸುರಿತಕ್ಕೂ ಸಣ್ಣ ರಕ್ತನಾಳಗಳ ಒಳಪೊರೆಯಲ್ಲಾಗುವ ಬದಲಾವಣೆಗಳಿಗೂ ಸಂಬಂಧವಿದೆ. ಗಾಯವಾದ ತಾವಿನಲ್ಲಿ ಕಂಡುಬರುವ, ಸಾಮಾನ್ಯವಾಗಿ ಜೀವಕಣಗಳೂ ಜೀವಕಣದ ಚೂರುಗಳೂ ಸೇರಿರುವ, ಜೋಲಂಟು (ಕಲಾಯ್ಡ್) ಕೂಡಿದ ದ್ರವ ತುಂಬಿದುದೇ ಸೊನೆ. ಜೋಲಂಟೂ ಜೀವಕಣಗಳೂ ಬಹುಮಟ್ಟಿಗೆ ರಕ್ತದಿಂದಲೇ ಬಂದವು. ಕೆಲವಂತೂ ಊತಕದ ಸಾರಾಂಶದಿಂದ