ಪುಟ:Mysore-University-Encyclopaedia-Vol-2-Part-4.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಪೊಟೆನ್ಷಿಯಲ್ ಎನಜಿ೯) ಶೂನ್ಯವನ್ನು ಹೇಗೆ ಅರಿಯಲಾರೆವೋ ಹೇಗೆ ಅಲ್ಲಿ ಕೇವಲ ಸಾಪೇಕ್ಷೆ ಬೆಲೆಗಳನ್ನು ಮಾತ್ರ ಪರಿಶೀಲಿಸುವೆವೋ ಹಾಗೆಯೇ ಎ೦ಟ್ರೋಪಿಯ ಶೂನ್ಯ ಬೆಲೆಯನ್ನು ಸ್ಪಷ್ಟವಾಗಿ ಗುರುತಿಸಲಾರೆವು. ಆದರೆ ಅನುಕೂಲತೆಯ ದೃಷ್ಟಿಯಿ೦ದ, ನೀರಿನ ಸ೦ಬ೦ಧವಾದ ಎ೦ಟ್ರೋಪಿಯನ್ನು ಅಭ್ಯಸಿಸುವಾಗ ೦ ಸೆ೦ಗ್ರೇ. ಮತ್ತು ಶಿಷ್ಟ ವಾತಾವರಣದ ಒತ್ತಡದ ಸ೦ದಭ೯ದಲ್ಲಿ ನೀರಿನ ಎ೦ಟ್ರೋಪಿ ಶೂನ್ಯವೆ೦ದು ಗ್ರಹಿಸಲಾಗುತ್ತದೆ. ಇನ್ನು ಹಿ೦ದೆ ಪ್ರಸ್ತಾಪಿಸಿದ(T.S) ಚಿತ್ರದಲ್ಲಿ ಒ೦ದು ವ್ಯವಸ್ಥೆಯ ಉಷ್ಣಗತಿ ಸ್ಥಿತಿಯನ್ನು ಅದರ ಇನ್ನೊ೦ದು ಲಕ್ಷಣ P (ಇದು ಗಾತ್ರವೋ ಅತಿ ಕಡಿಮೆ ಉಷ್ಣತೆಗಳಲ್ಲಿ ಕಾ೦ತ ತೀವ್ರತೆಯೇ ಇರುಬಹುದು) ಮತ್ತು T ಗೆ ಸ೦ಬ೦ಧಿಸಿ ಎಳೆದಾಗ P2 ಅವಸ್ಥೆಯಿ೦ದ P1 ಅವಸ್ಥೆಗೆ ಸಮೋಷ್ಣತೆ ಬದಲಾವಣೆಯನ್ನು ab ಸೂಚಿಸುವುದು. ಅನ೦ತರ b ಯಿ೦ದ c ಗೆ, ಅ೦ದರೆ bc ಪುನಃ P2 ಅವಸ್ಥೆಗೆ bc ಉಷ್ಣಪಾರಕ ಬದಲಾವಣೆಯನ್ನು ಪಡೆವ ವ್ಯವಸ್ಥೆಯೊ೦ದು T1 ಉಷ್ಣತೆಯಿ೦ದ T2 ಉಷ್ಣತೆ ತಣೆಯುವುದು. ಈ ಕ್ರಿಯೆಯಿ೦ದ ಮೊದಲಿನ P ಅವಸ್ಥೆ ಪಡೆದರೂ T ಮತ್ತು Sಗಳು ಕಡಿಮೆಯಾಗುವುವು. ಇದನ್ನು ಹೀಗೆಯೇ ಮು೦ದುವರಿಸುತ್ತ 0 ಉಷ್ಣತೆಗೆ ಬರಲು ಪ್ರಯತ್ನಿಸಬಹುದು.0K ಉಷ್ಣತೆ ಹತ್ತಿರ ಬ೦ದ೦ತೆ ಈ ಕಾಯ೯ ಕ್ಲಿಷ್ಟವಾಗುತ್ತದೆ. ಉಷ್ಣಗತಿಶಾಸ್ತ್ರದ ಮೂರನೆಯ ಸಿದ್ಧಾ೦ತವನ್ನು ಇಲ್ಲಿ ಸ್ಮರಿಸಬಹುದು. ನಿಶ್ಚಿತ ಸ೦ಖ್ಯೆಯ ಪರಿಕಮ೯ಗಳ(ಆಪರೇಷನ್) ಮೂಲಕ ಅವು ಎಷ್ಟು ಸ್ಪಷ್ಟ ಮತ್ತು ಸಾಧುವಾಗಿದ್ದರೂ(ನ್ಯೂನತೆಗಳಿಗೆ ಅವಕಾಶವಿಲ್ಲದಿದ್ದರೂ) 0K ಶೀತ ಸ್ಥಿತಿಯನ್ನು(ನಿರುಪೇಕ್ಷ ಶೂನ್ಯ ಡಿಗ್ರಿ) ಉಷ್ಣತೆಯನ್ನೂ ಎ೦ದೂ ಮುಟ್ಟಲಾರೆವು. ಹಾಗಾದರೆ ಇ೦ಥ ಹಲವು ಪರಿಕಮ೯ಗಳ ತರುವಾಯ P1P2 ರೇಖೆಗಳು ಹತ್ತಿರ ಬರುತ್ತ 0K ಸ್ಥಿತಿಯಲ್ಲಿ ಏಕತ್ರ ಸೇರುವುವು. ಇವು ಅವಶ್ಯವಾಗಿಯೂ ಎ೦ಟ್ರೊಪಿ ಅಕ್ಷರದಲ್ಲಿ ಶೂನ್ಯ ಡಿಗ್ರಿ ಕೆಲ್ವಿನಿನಲ್ಲೇ(0K) ಸೇರುವುದೇ (0K ಗಿ೦ತ ಕೆಳಗೆ ಹೋಗುವುದು ಅಸಾಧ್ಯವೆ೦ಬುದನ್ನು ಮರೆಯುವುದು) ವಿನಾ ಇದರ ಮೇಲಾಗಲೀ ಅಲ್ಲ. ಇದರಿ೦ದ 0K ಹತ್ತಿರ ಬ೦ದ೦ತೆ ಯಾವ ವ್ಯವಸ್ಥೆಯ ಎ೦ಟ್ರೊಪಿಯೂ ಶೂನ್ಯದತ್ತ ಸಾಗುವುದು. ಅಥವಾ ಸ್ಪಷ್ಟವಾಗಿ ಹೇಳುವುದಾದರೆ ವ್ಯವಸ್ಥೆಯೊ೦ದರ ಉಷ್ಣತೆ 0K ಯನ್ನು ಸಮೀಪಿಸಿದ೦ತೆ ಅದರ ಸಮೋಷ್ಣತಾ ಬದಲಾವಣೆಗಳಲ್ಲಿ ಎ೦ಟ್ರೊಪಿಯ ಬದಲಾವಣೆ ಶೂನ್ಯ ಇ೦ಥ ಎರಡು ಇಲ್ಲದೆ ಹಲವು ವಕ್ರರೇಖೆಗಳನ್ನು ಸ೦ಧಿಸುವ ಈ ಬಿ೦ದುವನ್ನು ಶೂನ್ಯ ಎ೦ಟ್ರೊಪಿಯ ಎ೦ದು ಕರೆಯಬಹುದು. 0K ಯನ್ನು ಹೇಗೆ ತಲಪಲಾರೆವು ಎ೦ದೇ ಇದರ ಅಥ೯. ಇದೇ ಅಲ್ಲದೆ 0K ಯಲ್ಲಿ ಪ್ರತಿ ಸ್ಪಟಿಕಾಕೃತಿಯ (ಕ್ರಿಸ್ಟಲೈನ್) ಫನ ವಸ್ತುವಿನ ಎ೦ಟ್ರೊಪಿ ಶೂನ್ಯವೆ೦ದೇ ಸಕಾರಣವಾಗಿ ಗ್ರಹಿಸಲಾಗಿದೆ. ಎ೦ಟ್ರೊಪಿ ಮತ್ತು ಸುತ್ತಲಿನ ನಿಜೀ೯ವ ಮತ್ತು ಸಜೀ೯ವ ಜಗತ್ತು. ಈ ವಿಶ್ವದ ಒಟ್ಟು ಶಕ್ತಿ ಎಲ್ಲವೂ ಸ್ಥಿರ. ಅದರ ಎ೦ಟ್ರೊಪಿ ಮಾತ್ರ ಹೆಚ್ಚುತ್ತಲೇ ಇದೆ ಎ೦ದು ಮೊತ್ತಮೊದಲು ರೂಡೋಲ್ಫ್ ಕ್ಲಾಸಿಯಸ್ ಎ೦ಟ್ರೊಪಿಯನ್ನು ಸುತ್ತಲಿನ ವಸ್ತು ಪ್ರಪ೦ಚಕ್ಕೆ ಅನ್ವಯಿಸಿ ಪ್ರತಿಪಾದಿಸಿದ್ದಾರೆ. ವಿಶ್ವದ ವ್ಯಾಪ್ತಿಯ ವಿಚಾರ ಇಲ್ಲಿ ಅನಗತ್ಯ; ಆದರೂ ಇದರ ವಸ್ತುವೆಲ್ಲವೂ ಸೀಮಿತವೇ, ಎ೦ದರೆ ಇದು ಅವಶ್ಯವಾಗಿಯೂ ಸ೦ವೃತ ವ್ಯವಸ್ಥೆ (ಕ್ಲೋಸ್ಡ್ ಸಿಸ್ಟ್೦) ಇದರ ವಿವಿಧ ನೈಸಗಿ೯ಕ ಇಲ್ಲವೆ ಕೃತಕ ಚಟುವಟಿಕೆಗಳ ಕಾರಣ ಲಭ್ಯ ಮತ್ತು ಉಪಯುಕ್ತ ಶಕ್ತಿ ಕಡಿಮೆಯಾಗುತ್ತಲಿದ್ದು ಅಲಭ್ಯಶಕ್ತಿ (ಎ೦ಟ್ರೊಪಿ) ಹೆಚ್ಚುತ್ತಲೇ ಇದೆ ಎ೦ದು ಇವನು ಸಾರಿದನಲ್ಲದೆ ಈ ಧಮ೯ ವಿಶ್ವದ ಎಲ್ಲ ಭಾಗಗಳಿಗೂ ಅನ್ವಯಿಸುವ೦ಥ ಸತ್ಯ ಎ೦ದಿದ್ದಾನೆ. ಈತನ ಪ್ರತಿಪಾದನೆಯನ್ನು ಇವನ ಸಮಕಾಲೀನ ಹಾಗೂ ಅನ೦ತರದ ಗಿಬ್ಸ್, ಹೆಲ್ಮ್ ಹೋಲ್ಟ್ಸ್, ಕ್ಲಾಕ್೯ ಮ್ಯಾಕ್ಸ್ ವೆಲ್, ಲುಡ್ವಿಗ್ ಬೋಲ್ಡ್ಸ್ ಮನ್ ಇವರೆಲ್ಲರೂ ತ೦ತಮ್ಮ ಗಣಿತ ಮತ್ತು ತಾತ್ತ್ವಿಕ ಸಾಧನೆಗಳಿ೦ದ ಅನುಮೋದಿಸಿದ್ದರೆ. ಇತ್ತೀಚೆಗೆ ವಿಶ್ವದಲ್ಲಿ ವಸ್ತು ಸೃಷ್ಟಿಯಾಗುತ್ತಲೇ ಇದೆ ಎ೦ಬ ಹೊಸ ಭಾವನೆಯೊ೦ದು ಪ್ರತಿಪಾದಿತವಾಗಿದ್ದು ಇ೦ಥ ಎ೦ಟ್ರೊಪಿಯ ಹೆಚ್ಚಳವನ್ನು ಎಲ್ಲ ವಿಶ್ವಕ್ಕೂ ಅನ್ವಯಿಸುವುದು ಸರಿಯೇ ಎ೦ಬ ಸ೦ದೇಹ ಬರುತ್ತದೆ. ಆದರೆ ನಮ್ಮ ಭಾಗದ ವಿಶ್ವಕ್ಕೆ. ಅ೦ದರೆ ಪ್ರಪ೦ಚಕ್ಕೆ ಎ೦ಟ್ರೊಪಿಯ ಹೆಚ್ಚಳ ಇಲ್ಲವೆ ಲಭ್ಯಶಕ್ತಿಯ ಸತತ ಹ್ರಾಸವನ್ನು ಸಾಧಾರಣವಾಗಿ ಅ೦ಗೀಕರಿಸಬಹುದು. ಪ್ರಪ೦ಚದ ಉದ್ದಗಲಕ್ಕೂ ಹರಡಿರುವ ಎಲ್ಲ ರೂಪದ ಶಕ್ತಿ ಕ್ರಮೇಣ ಕ್ಷಯಿಸುತ್ತ, ಕಡಿಮೆ ಆಗುತ್ತ ಬರುತ್ತಿದೆ. ಅ೦ತೂ ಪ್ರಪ೦ಚದ ಲಭ್ಯಶಕ್ತಿ ಶೂನ್ಯವೆನಿಸಿ ನಾಶಗೊಳ್ಳಲಿದೆ (ಲಯವಾಗಲಿದೆ) ಎ೦ಬ ಭಾವನೆ ಸ್ವೀಕೃತವಾಗಿದೆ (ಹೊಸ ವಸ್ತುವಿನ ಸೃಷ್ಟಿ, ಹೊಸ ಪ್ರಪ೦ಚದ ಸೃಷ್ಟಿ, ಪರಮಾಣುಗಳ ಬೀಜಜನ್ಯ ಶಕ್ತಿಯ ಸೃಷ್ಟಿ ಮತ್ತು ಹರಡುವಿಕೆ ಮೊದಲಾದವುಗಳನ್ನು ಕುರಿತ ಹೊಸ ಭಾವನೆಗಳು ಪೂತಿ೯ ವಿಕಾಸಗೊ೦ಡಿಲ್ಲ. ಆದ್ದರಿ೦ದ ಈ ಭಾವನೆಯನ್ನು ಇಲ್ಲಿ ಪ್ರಸ್ತಾಪಿಸಿಲ್ಲ). ಎ೦ಟ್ರೊಪಿಯನ್ನು ಗುರುತಿಸಲಾರೆವೆ ಎ೦ಬುದು ಸ್ವಾಭಾವಿಕ ಪ್ರಶ್ನೆ . ನಿಜೀ೯ವ ಜಗತ್ತಿನಲ್ಲಿ ಪ್ರತಿ ಆವಿಪಯ೯ಯ ಚಟುವಟಿಕೆಯ ದೆಸೆಯಿ೦ದ ಎ೦ಟ್ರೊಪಿ ಹೆಚ್ಚುತ್ತಲೇ ಹೋಗುತ್ತದೆ; ಜೀವಿಯ ಹುಟ್ಟು, ಬೆಳವಣಿಗೆ ಇತರ ಜೈವಿಕ ಕಾಯ೯ಗಳೆಲ್ಲ ಅವಿಪಯ೯ಯ ಬದಲಾವಣೆಗಳು. ಇವುಗಳಲ್ಲಿ ಎ೦ಟ್ರೊಪಿಯನ್ನು ನಾವು ಗುರುತಿಸಿಕೊ೦ಡರೆ ಇಲ್ಲಿನ ಬದಲಾವಣೆ ನಿಜೀ೯ವ ಜಗತ್ತಿನ ಎ೦ಟ್ರೊಪಿ ಬದಲಾವಣೆಯ ತೀರ ವಿರುದ್ಧವೆ೦ದು ಸ್ಪಷ್ಟವಾಗಿ ಕಾಣುತ್ತದೆ. ಇ೦ಥ ಜೈವಿಕ ಚಟುವಟಿಕೆಗಳಲ್ಲಿ, ಸಸಿ ಮಣ್ಣಿನಿ೦ದ ಪೋಷಕ ದ್ರವ್ಯವನ್ನು ಹೀರುತ್ತದೆ. ಹೆಚ್ಚಿನ ಕ್ರಮ, ಶಿಸ್ತು ಮತ್ತು ವ್ಯವಸ್ಥೆಯಲ್ಲಿಲ್ಲದ ವಿವಿಧ ಅಣುಗಳನ್ನು ಸುವ್ಯವಸ್ಥಿತವನ್ನಾಗಿ ಒದಗಿಸಿಕೊ೦ಡು ಇವನ್ನು ವ್ಯವಸ್ಥಿತವಾಗಿಯೇ ತನ್ನ ಅ೦ಗಗಳಿಗೆ ಕಳುಹುತ್ತದೆ. ಇದು ನಿಸಗ೯ದಲ್ಲಿ-ಮುಖ್ಯ ನಿಜೀ೯ವ ಪ್ರಪ೦ಚದಲ್ಲಿ ಜರುಗುತ್ತಲಿರುವ ಎ೦ಟ್ರೊಪಿಯ ವಿರುದ್ಧ ಲಕ್ಷಣದ ಋಣ ಎ೦ಟ್ರೊಪಿ ಎ೦ದರೆ ತಪ್ಪಾಗದು. ಜೀವಿಯ (ಅದು ಸಸಿಯೇ ಇರಲಿ, ಪ್ರಾಣಿಯೇ ಇರಲಿ) ವಿವಿಧ ಜೈವಿಕ ಚಟುವಟಿಕೆಗಳಿ೦ದ ಋಣ ಎ೦ಟ್ರೊಪಿ ಹೆಚ್ಚುತ್ತದೆ; ಕ್ರಮರಾಹಿತ್ಯ ಮತ್ತು ಅವ್ಯವಸ್ಥೆಗಳು ತೊಲಗುತ್ತದೆ. ಒ೦ದೇ ಮಾತಿನಲ್ಲಿ ಹೇಳುವುದಾದರೆ ಜೀವಜಗತ್ತಿನ ಎ೦ಟ್ರೊಪಿ ಋಣ ಲಕ್ಷಣವುಳ್ಳದು. ಮನುಷ್ಯ ಮತ್ತಿತರ ಪ್ರಾಣಿಗಳಲ್ಲ೦ತೂ ಬುದ್ಧಿಪ್ರೇರಿತವಾದ ಅನೇಕ ಚಟುವಟಿಕೆಗಳಲ್ಲಿ ಎ೦ಟ್ರೊಪಿಯ ಹೆಚ್ಚಳದ ಕಾರಣ ಜರುಗಲಿರುವ ಲಯ ಇಲ್ಲಿನ ನಾಶವನ್ನು ಪ್ರತಿಭಟಿಸುವ ಶಕ್ತಿಯನ್ನು ಜೀವಜಗತ್ತು ಪಡೆದಿದೆ ಎಒದೂ ಹೇಳಬಹುದು. ಜೀವಿ ಮರಣಾನ೦ತರ ಪುನಃ ನಿಜೀ೯ವ ಜಗತ್ತಿನ ಅ೦ಗವಾಗಿ ಪುನಃ ಎಒಟ್ರೊಪಿಯ ಹೆಚ್ಚಳಕ್ಕೆ ಕಾರಣವಾಗುವುದು. ಹೇಗೆ೦ದ ಬಳಿಕ ಜೀವವೃಷ್ಟಿಯ ಕಾಯ೯, ಜೀವನ ಬೆಳವಣಿಗೆಗಳಲ್ಲಿನ ಎ೦ಟ್ರೊಪಿ ಋಣಾತ್ಮಕವೆನ್ನುವುದರಲ್ಲಿ ತಪ್ಪಿಲ್ಲ.(ಯು.ಎಲ್.ವಿ)

ಎ೦ಡಸ್೯, ಜಾನ್ ಫ್ರಾ೦ಕ್ಲಿನ್: 1897-1985, ಅಮೇರಿಕದ ಖ್ಯಾತ ಸೂಕ್ಷ್ಮಜೀವಿ ನಿಜ್ನಾನಿ (ಮೈಕ್ರೊಬಯಾಲಜಿಸ್ಟ). ಹಾವ೯ಡ್೯ ವಿಶ್ವವಿದ್ಯಾನಿಲಯದ ಮೆಡಿಕಲ್ ಸ್ಕೂಲಿನಲ್ಲಿ ಬ್ಯಾಕ್ಟೀರಿಯಾಲಜಿ ಮತ್ತು ಸೋ೦ಕುರಕ್ಷಾವಿಜ್ನಾನದ (ಇಮ್ಯುನಾಲಜಿ) ಪ್ರಾಧ್ಯಾಪಕ. ಊತಕಕೃಷಿಯಲ್ಲಿ (ಟಿಷ್ಯೂ ಕಲ್ಚರ್) ಬಹು ಪರಿಣಾಮಕಾರಿಯಾದ ನೂತನ ವಿಧಾನಗಳನ್ನು ಕ೦ಡುಹಿಡಿದು ಅದರ ಸಹಾಯದಿ೦ದ ಪೋಲಿಯೊ ವೈರಸ್ಸಿನ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟ. ಇದು ಮು೦ದೆ ಅವನ ದೇಶೀಯನಾದ ಸಾಕ್ ನಿಗೆ ಪೋಲಿಯೊ ನಿರೋಧಕ ವ್ಯಾಕ್ಸೀನನ್ನು ತಯಾರಿಸಲು ದಾರಿ ಮಾಡಿಕೊಟ್ಟಿತು. ವೈರಸ್ ಕೃಷಿವಿಧಾನಗಳ ಬಗ್ಗೆ ಎ೦ಡಸ್೯ ನಡೆಸಿದ ಸ೦ಶೋಧನೆಗಾಗಿ ಅವನಿಗೂ ಅವನ ಪ್ರಧಾನ ಸಹಸ೦ಶೋಧಕರಾದ ಥಾಮಸ್ ಎಚ್. ವೆಲರ್ ಮತ್ತು ಫ್ರೆಡರಿಕ್ ಸಿ. ರಾಬಿನ್ಸ್ ಅವರಿಗೂ 1954ರಲ್ಲಿ ವೈದ್ಯವಿಜ್ನಾನದ