ಪುಟ:Mysore-University-Encyclopaedia-Vol-2-Part-4.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಿನೊಡರ್ಮೇಟ

ಪ್ರಾಣಿಜಗತ್ತಿನಲ್ಲೇ ಕಂಡುಬರದಿರುವ ಒಂದು ರೀತಿಯ ವಿಚೆತ್ರವಾದ ಅಂಗ ಎಕಿಡರ್ಮೇಟ ವಂಶದಲ್ಲಿದೆ.ಇದೇ ಜಲಪರಿಚಲನಾಂಗ.ಈ ಅಂಗ ಸುವ್ಯವಸ್ಥಿತ ರೀತಿಯ ನಾಳಗಳನ್ನು ಆಂಬುಲ್ಯಾಕರಲ್ ಕಾಲುವೆಗಳ ತಳದಲ್ಲಿವೆ. ಈ ಕಾಲುವೆಗಳಲ್ಲಿ ನೀರು ಹರಿಯುತ್ತದೆ.ಜಲ ಪರಿಚಲನಾಂಗದ ಮುಖ್ಯಭಾಗಗಳೆಂದರೆ ಜಲರಂಧ್ರ ಕಲ್ಲುಗಾಲುವೆ,ಉಂಗುರ ಕಾಲುವೆ ಹಾಗೂ ನಳಿಕೆಪಾದಗಳು.ಜಲರಂಧ್ರ ಸಾಮಾನ್ಯವಾಗಿ ಪ್ರಾಣಿಯ ಅಬೋರಲ್ ಭಾಗದಲ್ಲಿರುತ್ತದೆ.ತಟ್ಟೆಯಂತಿರುವ ಶರೀರದ ಇಂಟರ್ ರೇಡಿಯಲ್ ಭಾಗದಲ್ಲಿ ಇದು ಇದೆ.ಜಲರಂಧ್ರವೇನಾದರೂ ವಿಭಾಗವಾಗಿ ಜಲ್ಲಡಿಯಂತಾಗಿದ್ದರೆ ಅದನ್ನು ಮ್ಯಾಡ್ರಿಪೊರೈಟ್ ಎನ್ನುತ್ತೇವೆ.ಈ ರಂಧ್ರ ಕಲ್ಲುಗಾಲುವೆಗೆ ಸಂಪರ್ಕ ಕಲ್ಪಿಸುತ್ತದೆ.ಈ ನಾಳದ ಗೋಡೆಗಳು ಸುಣ್ಣ ಮುಂತಾದ ಲೇಪನಗಳಿಂದಾಗಿ ಗಟ್ಟಿಯಾಗಿರುವುದರಿಂದ ಇದಕ್ಕೆ ಕಲ್ಲುಗಾಲುವೆಯೆಂದು ಹೆಸರು ಬಂದಿದೆ.ಈ ಕಲ್ಲುಗಾಲುವೆಯ ಉಂಗುರ ಕಾಲುವೆಗೆ ಸಂಪರ್ಕ ಕಲ್ಪಿಸುತ್ತದೆ.ಉಂಗುರ ಕಾಲುವೆಯಿಂದ ರೇಡಿಯಲ್ ಕಾಲುವೆಗಳು ಹೊರಟು ಆಂಬುಲ್ಯಾಕರಲ್ ಕಾಲುವೆಗಳೊಳಕ್ಕೆ ಪ್ರವೇಶಿಸುತ್ತವೆ.ರೇಡಿಯಲ್ ಕಾಲುವೆಗಳ ಇಕ್ಕೆಲದಲ್ಲಿ ಚಿಕ್ಕ ಚಿಕ್ಕ ನಾಳಗಳಂತಿರುವ ಅಡ್ಡಕಾಲುವೆಗಳಿವೆ.ಈ ಅಡ್ಡಕಾಲುವೆಗಳನ್ನು ನಳಿಕೆ ಪಾದಗಳಲ್ಲಿ ಕೊನೆಗೊಳ್ಳುತ್ತವೆ.ನಳಿಕೆಪಾದದ ಬುಡದಲ್ಲಿ ಆಂಪುಲ್ಲ ಎಂಬ ಚೀಲದಂಥ ರಚನೆಯಿದೆ.ಈ ಆಂಪುಲ್ಲದಿಂದ ನಾಳದಂಥ ರಚನೆ ಹೊರಚಾಚಿದೆ.ಈ ನಾಳದ ತುದಿಯಲ್ಲಿ ಅಂಟು ಸಿಂಬಿಯಿದೆ. ಈ ಸಿಂಬಿಯ ಮಧ್ಯೆ ಸೂಕ್ಮ್ಸ್ ರಂಧ್ರವಿದೆ.ನಳಿಕೆಪಾದದ ಆಂಪುಲ್ಲದೊಳಗೆ ಒಂದು ಕವಾಟವಿದೆ.ಇದು ನೀರನ್ನು ಹಿಂದಕ್ಕೆ ಹೋಗದಂತೆ ತಡೆಗಟ್ಟುತ್ತದೆ.ಎರಡು ರೇಡಿಯಲ್ ಕಾಲುವೆಗಳ ಮಧ್ಯೆಯಿರುವ ಉಂಗುರ ಗಾಲುವೆಯ ಭಾಗದಲ್ಲಿ ಪೋಲಿಯನ್ ವೆಸಿಕಲ್ ಮತ್ತು ಟೀಡ್ ಮನ್ ಬಾಡಿಗಳೆಂಬ ರಚನೆಗಳಿವೆ.ನೀರು ಜಲರಂಧ್ರ ಅಥವಾ ಮ್ಯಾಡ್ರಿಪೊರೈಟ್ ರಂಧ್ರದ ಮೂಲಕ ಕಲ್ಲುಗಾಲುವೆಗೆ ಬರುತ್ತದೆ.ಕಲ್ಲುಗಾಲುವೆಯಿಂದ ಉಂಗುರಗಾಲುವೆಯನ್ನು ತಲುಪಿ ಅಲ್ಲಿಮ್ದ ರೇಡಿಯಲ್ ಕಾಲುವೆಗಳಿಗೆ ಹರಿಯುತ್ತದೆ.ಈ ಕಾಲುವೆಗಳಿಂದ ಅಡ್ಡಕಾಲುವೆಗಳ ಮೂಲಕ ನಳಿಕೆಪಾದಗಳ ಆಂಪಲ್ಲ ಭಾಗವನ್ನು ತಲಪುತ್ತದೆ.ಆಂಪಲ್ಲ ತುಂಬಿದಮೇಲೆ ಸಂಕುಚಿಸುತ್ತದೆ.ಇದರಿಂದಾಗಿ ನೀರು ಆಂಪಲ್ಲು ಮುಂದಿರುವ ನಾಳದ ಮೂಲಕ ಬಿರುಸಿನಿಂದ ಹೊರ ಹೊಮ್ಮುತ್ತದೆ.ಈ ಕ್ರಿಯೆಯಿಂದಾಗಿ ಜೀವಿ ಮೆಲ್ಲನೆ ಚಲಿಸಲು ಸಾಧ್ಯವಾಗುತ್ತದೆ.ಇದಲ್ಲದೆ ಜಲಪರಿಚಲನೆಯಿಂದ ಉಸಿರಾಟಕ್ಕೂ ಅನುಕೂಲವಾಗುತ್ತದೆ.ನೀರಿನಲ್ಲಿರುವ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡನ್ನು ಜೀವಿ ಹೊರಹಾಕುತ್ತದೆ.ಇದಲ್ಲದೆ ಆಹಾರ ಸಂಗಹಣೆಗೂ ಈ ನಾಳಿಕೆ ಪಾದಗಳು ಸಹಾಯಮಾಡುತ್ತದೆ.ಓಫಿಯುರಾಯ್ಡಿಯ ಹಾಲೊಥು ರಾಯ್ಡಿಯ ಮತ್ತು ಕ್ರೈನಾಯ್ಡಿಯಗಳಲ್ಲಿ ಮ್ಯಾಡ್ರಿಪೊರೈಟ್ ರಂಧ್ರ ಓರಲ್ ಭಾಗದಲ್ಲಿವೆ.

ಕಂಟಕಚರ್ಮಿಗಳ ನರಮಂಡಲ ಕೆಳಮಟ್ಟದ್ದು.ಶರೀರದಲ್ಲಿ ನರಗಳ ಜಾಲಂದ್ರವಿದೆ.ಈ ಪ್ರಾಣಿಗಳಲ್ಲಿರುವ ನರಗಳ ಜಾಲಂದ್ರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.ಈ ಮೂರು ಭಾಗಗಳು ಶರೀರದಲ್ಲಿ ಹಂತಹಂತವಾಗಿವೆ. ಅವು ಎಕ್ಟೊನ್ಯೂರಲ್ ಹಂತ.ಹೈಪೊನ್ಯೂರಲ್ ಹಂತ.1.ಎಕ್ಟೂನ್ಯೂರಲ್ ಹಂತ,ಜಾಲಂದ್ರ ಓರಲ್ ಭಾಗದಲ್ಲಿ ಅನ್ನನಾಳದ ಸುತ್ತಲೂ ಒಂದು ನರಮುಡಿಯನ್ನು ಹೊಂದಿದೆ.ಈ ನರಮುಡಿಯಿಂದ ನರಗಳು ಶರೀರದ ಪಂಚಭುಜಗಳಿಗೂ ಪಸರಿಸಿವೆ.ಪ್ರತಿ ಭುಜದಲ್ಲಿರುವ ನರ ಅಂಬುಲ್ಯಾಕ್ರದೊಳಗಿದ್ದು ಬಾಹುವಿನ ತುದಿಯವರೆಗೂ ಪಸರಿಸಿದೆ.ನರದಲ್ಲಿ ಅಲ್ಲಲ್ಲಿ ಗಂಟುಗಳಂಥ ಗ್ಯಾಂಗ್ಲಿಯಾಗಳಿವೆ.2.ಹೈಪೊನ್ಯೂರಲ್ ಹಂತ ಅಂದರೆ ಒಳದರ್ಮದ ಭಾಗದಲ್ಲಿದೆ.3.ಎಂಟೊನ್ಯೂರಲ್ ಹಂತ ಆಬೋರಲ್ ಭಾಗದಲ್ಲಿದೆ.ಇವು ರಚನೆಯಲ್ಲಿ ಎಂಟೊನ್ಯೂರಲ್ ನರಜಲಾಂದ್ರವನ್ನೇ ಹೋಲುತ್ತವೆ.ಈ ವಂಶದಲ್ಲಿ ಚೆನ್ನಾಗಿ ಬೆಳೆದಿರುವ ಜ್ೞಾನೇಂದ್ರಿಯಗಳಿಲ್ಲ.

ಎಕಿನೊಡರ್ಮ ಪ್ರಾಣಿಗಳಲ್ಲಿ ವಿಶಾಲವಾದ ದೇಹಾಂತರವಕಾಶವಿದೆ.ಈ ದೇಹಾಂತರಾ ವಕಾಶಕ್ಕೆ ಸೀಲಾಂ ಎಂದು ಹೆಸರು.ಈ ಪ್ರಾಣಿಗಳ ಸೀಲಾಂ ಎಂಟಿರೋಸೀಲಸ್ ರೀತಿಯಲ್ಲಿ ಬೆಳೆಯುತ್ತದೆ.ಈ ಅವಕಾಶದೊಳಗೆ ಜೀರ್ಣಾಂಗಗಳು,ಜನನಾಂಗಗಳು ಇವೆ.ಕ್ರೈನಾಯ್ಡಿಯ ವರ್ಗದಲ್ಲಿ ಮಾತ್ರ ಈ ದೇಹಾಂತರವಕಾಶದೊಳಗೆ ಬಲೆಯಾಕಾರಕ್ಕೆ ಬೆಳೆದ ಸಂಯೋಜಕ ಅಂಗಾಂಶದ ಬೆಳೆವಣಿಗೆಯಿದೆ.ಸೀಲಾಂ ಅಥವಾ ದೇಹಾಂತರವಕಾಶ ಮಧ್ಯದರ್ಮ ಮೂಲದಿಂದ ಹುಟ್ಟಿಬರುವ ಎಪಿಥೀಲಿಯಂ ಕೋಶಗಳ ಲೇಪನವನ್ನು ಹೊಂದಿರುತ್ತದೆ.ಇದಕ್ಕೆ ಪೆರಿಟೋನಿಯಂ ಎಂದು ಹೆಸರು.ಈ ಪೆರಿಟೋನಿಯಂ ಲೇಪನ ಜೀರ್ಣಾಂಗಗಳ ಹೊರಭಾಗದಲ್ಲೂ