ಪುಟ:Mysore-University-Encyclopaedia-Vol-2-Part-4.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಿನೊಡರ್ಮೇಟ ಇರುತ್ತದೆ. ಸೀಲಾಂನೊಳಕ್ಕೆ ಚಾಚಿಕೊಂಡಿರುವ ಈ ಅಂಗಗಳಿಗೆ ಮಿಸೆಂಟರಿಗಳು ಆಸರೆಯಾಗಿವೆ. ಬಹಳ ಎಕಿನೊಡರ್ಮ ಜೀವಿಗಳಲ್ಲಿ ಶುದ್ಧಿಕರಣಕ್ರಿಯೆ ಮತ್ತು ಉಸಿರಾಡುವ ಕ್ರಿಯೆಗಳಿಗೆ ಪ್ರತ್ಯೇಕವಾದ ಅಂಗಗಳಿಲ್ಲ. ಹಾಲೊಥುರಾಯ್ಡಿಯ ವರ್ಗದಲ್ಲಿ ಮಾತ್ರ ಉಸಿರಾಡಲು ಪ್ರತ್ಯೇಕವಾದ ಅಂಗವಿದೆ. ಮಿಕ್ಕವುಗಳಲ್ಲಿ ಉಸಿರಾಟಕ್ಕೆ ಸಂಪೂರ್ಣ ಶರೀರವೇ ಸಹಕರಿಸ ಬೇಕಾಗುತ್ತದೆ. ರಕ್ತಪರಿಚಲನಾಂಗದಲ್ಲಿ ನಿರ್ದಿಷ್ಟ ರೀತಿಯ ರಕ್ತನಾಳಗಳಿಲ್ಲದೆ ದೇಹಾಂತರಾವಕಾಶದಲ್ಲಿರುವ ಕೆಲವು ಕಾಲುವೆಗಳಲ್ಲಿ ರಕ್ತ ತುಂಬಿಕೊಂಡಿವೆ. ಈ ಕಾಲುವೆಗಳಲ್ಲಿ ನಾಳಗಳಿಲ್ಲ.

ಅನ್ನನಾಳದಲ್ಲಿ ಬಾಯಿ ಮತ್ತು ಗುದದ್ವಾರಗಳಿವೆ(ಕೆಲವು ಓಫಿಯೋರಾಯ್ಡಿಯ ಆಸ್ಟೆರಾಯ್ಡಿಯ ಜೀವಿಗಳಲ್ಲಿ ಗುದದ್ವಾರವೆ ಇಲ್ಲ). ಅನ್ನನಾಳ ಸಾಮಾನ್ಯವಾಗಿ ಸುರುಳಿ ಸುತ್ತಿಕೊಂಡಿರುತ್ತವೆ. ಬಾಯಿ ಓರಲ್ ಭಾಗದ ಮಧ್ಯೆಯೂ ಗುದದ್ವಾರ ಅಬೋರಲ್ ಭಾಗದ ಮಧ್ಯೆ ಅಥವ ಮಧ್ಯದಿಂದ ಸ್ವಲ್ಪ ಅತ್ತಕಡೆ ಇರುತ್ತದೆ. ಕ್ರೈನಾಯ್ಡಿಯಗಳಲ್ಲಿ ಬಾಯಿ ಮತ್ತು ಗುದದ್ವಾರಗಳು ಓರಲ್ ಭಾಗದಲ್ಲಿಯೇ ಇದೆ. ಬಹಳ ಇರ್ರೆಗ್ಯುಲರ್ ಎಕಿನಾಯ್ಡಿಯ ಮತ್ತು ಓಫಿಯುರಾಯ್ಡಿಯಗಳಲ್ಲಿ ಅನ್ನನಾಳ ಸುರುಳಿ ಸುತ್ತಿಕೊಂಡಿರದೆ ನೇರವಾಗಿ ಕೊಳವೆಯಂತೆಯೇ ಇವೆ. ಇವುಗಳಲ್ಲಿ ಜಠರ ಬಹಳ ದೊಡ್ಡದು. ಆಸ್ಟಿರಾಯ್ಡಿಯದಲ್ಲಿ ಜಠರ ಐದು ಭಾಗಗಳಿಗೂ ಪಸರಿಸಿದೆ. ಈ ಜಠರ ಭಾಗಗಳ ಜೊತೆ ಸೊಂಪಾಗಿ ಬೆಳೆದ ಜಠರ ಗ್ರಂಥಿಗಳಿವೆ.

ಜನನಾಂಗ ಬಹಳ ಸರಳರೀತಿಯದು. ಒಂದೇ ಒಂದು ಜನನಾಂಗವಿದ್ದು ಅದು ಶರೀರದ ಸೌಷ್ಟವಕ್ಕೆ ತಕ್ಕಂತೆ ತನ್ನ ಸ್ಥಾನವನ್ನಲಂಕರಿಸಿಕೊಂಡಿದೆ. ಇದರ ರಂಧ್ರ ಜಲರಂಧ್ರ; ಗುದದ್ವಾರವಿರುವ ಇಂಟರ್ ರೇಡಿಯಸ್ ಭಾಗದಲ್ಲಿದೆ. ಹಾಲೊಥುರಾಯ್ಡಿಯ ವರ್ಗದಲ್ಲಿ ಈ ಸ್ಥಿತಿ ಇಂದಿಗೂ ಇದೆ. ಆದರೆ ಇಂದಿನ ಮಿಕ್ಕ ಎಕಿನೊಡರ್ಮಗಳಲ್ಲಿ ಶರೀರದ ಸಮ್ಮಿತಿಗೆ ತಕ್ಕಂತೆ ಸಮ್ಮಿತೀಯ ಜನನಾಂಗಗಳಿವೆ. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಎಂಬ ಭೇದ ಈ ಪ್ರಾಣಿಗಳಲ್ಲಿದೆ. (ಕೆಲವು ಹಾಲೊಥುರಾಯ್ಡಿಯ ಮತ್ತು ಓಫಿಯುರಾಯ್ಡಿಯಗಳಲ್ಲಿ ದ್ವಿಲಿಂಗತ್ವವೂ ಇದೆ). ಆದರೆ ಗಂಡು ಹೆಣ್ಣುಗಳನ್ನು ಬಾಹ್ಯವಾಗಿ ಗುರುತಿಸಲಾಗುವುದಿಲ್ಲ. ಜನನಾಂಗಗಳಲ್ಲಿ ಉತ್ಪತಿಯಾಗುವ ರೇತಸ್ಸು ಮತ್ತು ಮೊಟ್ಟೆಗಳು ನೀರಿಗೆ ಬೀಳುತ್ತವೆ. ನಿಷೇಚನೆ ನೀರಿನಲ್ಲಿಯೇ ನಡೆಯುತ್ತದೆ. ನಿಷೆಚನೆಗೊಂಡ ಮೊಟ್ಟೆ ಬೆಳೆದು ಒಂದು ಲಾರ್ವಾವಾಗುತ್ತದೆ. ಎಕಿನೊಡರ್ಮ ವಂಶದ ಪ್ರತಿಜೀವಿಯ ಬೆಳೆವಣಿಗೆಯಲ್ಲೂ ಲಾರ್ವಾಸ್ಥಿತಿ ಇದ್ದೇ ಇರುತ್ತದೆ. ಈ ವಂಶದ ಲಾರ್ವಾ ಜೀವಿಗಳು ಸಮಪಾರ್ಶ್ವಸ್ಥಿತಿಯನ್ನು ಹೊಂದಿರುತ್ತವೆ. ಆದರೆ ಈ ಸಮ್ಮಿತಿ ಲಾರ್ವಾ ಬೆಳೆದಂತೆ ಮಾಯವಾಗುತ್ತಾ ಬಂದು ರೂಪಾಂತರಗೊಂಡು ವಯಸ್ಕ ಜೀವಿಯಾಗುತ್ತದೆ. ಈ ವಯಸ್ಕಜೀವಿಗಳಲ್ಲಿ ತ್ರಿಜ್ಯೀಯ ಸಮ್ಮಿತಿ ಇದೆ.

ಈಗ ಹೇಳಿರುವ ಎಲ್ಲಾ ಗುಣಲಕ್ಷಣಗಳು ಇಂದು ಬದುಕಿರುವ ಕಂಟಕ ಚರ್ಮಿಗಳಿಗೆ ಅನ್ವಯಿಸುತ್ತದೆ. ಹಿಂದಿದ್ದ ಜೀವಿಗಳು ತಮ್ಮ ಹೊರಕವಚ ಶರೀರದಿಂದಾಗಿ ಪಳೆಯುಳಿಕೆಗಳಾಗಿ.