ಪುಟ:Mysore-University-Encyclopaedia-Vol-2-Part-4.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದಿಗೂ ಸಿಕ್ಕುತ್ತವೆ. ಇವುಗಳ ಅಭ್ಯಾಸದಿಂದ ಈ ವಂಶದ ಬಹಳ ವಿಚಾರಗಳನ್ನು ಪೂಣ‍ವಾಗಿ ಅರಿಯಲು ಅನುಕೂಲವಾಗಿದೆ.

ವಗೀ‍ಕರಣ ಎಕಿನೊಡಮ‍ ವಂಶವನ್ನು ಎರಡು ಉಪವಂಶಗಳಾಗಿ ವಗೀ‍ಕರಿಸಲಾಗಿದೆ. ೧. ಪೆಲ್ ಮೆಟೋಜೋವ ೨. ಎಲ್ಯುಥಿರೋಜೋವ.

ಉಪವಂಶ ೧ ಪೆಲ್ ಮೆಟೋಚೋವ ಃ ಕೇವಲ ಒಂದು ವಗ‍ವನ್ನು ಬಿಟ್ಟರೆ ಈ ವಂಶಕ್ಕೆ ಸೇರಿದ ಇತರ ವಗ‍ಗಳು ಇಂದು ಬದುಕಿಲ್ಲ. ಅವುಗಳ ಪಳೆಯುಳಿಕೆಗಳು ಮಾತ್ರ ಇವೆ. ಈ ಉಪವಂಶದ ಪ್ರಾಣೀಗಳು ಸಸ್ಯಗಳಂತೆ ನೆಲಕ್ಕಂಟಿಕೊಂಡು ಬೆಳೆಯುತ್ತವೆ. ನೇರವಾಗಿ ಅಬೋರಲ್ ಭಾಗವೇ ನೆಲಕ್ಕಂಟಿಕೊಂಡಿರಬಹುದು ಅಥವಾ ಈ ಭಾಗದಲ್ಲಿ ತೊಟ್ಟಿನಂಥ ರಚನೆಯಿದ್ದು ಅದರ ಸಹಾಯದಿಂದ ಇವು ನೆಲಕ್ಕಂಟಿಕೊಂಡಿರಬಹುದು. ಈ ತೊಟ್ಟಿನಂಥ ರಚನೆ ಸುಣ್ಣಮಿಶ್ರಿತ ತಟ್ಟಿಗಳನ್ನೊಳಗೊಂಡಿರುತ್ತದೆ. ಓರಲ್ ಭಾಗ ಮೇಲ್ಮುಖವಾಗಿರುತ್ತದೆ. ಶರೀರದಲ್ಲಿ ಗಟ್ಟಿಯಾದ ಪೆಟ್ಟಿಗೆಯಂಥ ಥೀಕ ಅಥವಾ ಟೆಸ್ಟ್ ಇದೆ. ಓರಲ್ ಭಾಗದಲ್ಲಿ ಬಾಯಿ ಮತ್ತು ಗುದದ್ವಾರಗಳೆರಡೂ ಇವೆ. ಅಂಬುಲ್ಯಾಕ್ರಗಳು ಆಹಾರವನ್ನು ಸಂಗ್ರಹಿಸುವ ಕಾಲುವೆಗಳಾಗಿವೆ. ಓರಲ್ ಭಾಗದಲ್ಲಿ ಚೆನ್ನಾಗಿ ಬೆಳೆದ ಬಾಹುಗಳಿವೆ. ಅಂಬುಲ್ಯಾಕ್ರಗಳು ಈ ಬಾಹುಗಳ ತುದಿಯವರೆಗೂ ಪಸರಿಸಿವೆ. ಈ ಕಾಲುವೆಗಳಲ್ಲಿರುವ ನಳಿಕೆಪಾದಗಳು ಆಹಾರವನ್ನು ಹಿಡಿಯಲು ಸಹಕರಿಸುತ್ತವೆ. ಎಂಟೊನ್ಯೂರಲ್ ನರಮಂಡಲ ಅಥವಾ ಅಬೋರಲ್ ನರಮಂಡಲ ಚೆನ್ನಾಗಿ ಬೆಳೆದಿದೆ. ಈ ಉಪವಂಶದಲ್ಲಿ ಐದು ವಗ‌‌ಗಳಿವೆ. ಕ್ರೈನಾಯ್ಡಿಯ : ಈ ವಗ‍ ಇಂದು ಬದುಕಿರುವ ಹಾಗೂ ನಾಶವಾಗಿರುವ ಪ್ರಾಣಿಗಳೆರಡನ್ನೂ ಒಳಗೊಂಡಿವೆ. ಈ ಪ್ರಾಣಿಗಳು ನೆಲಕ್ಕೆ ತೊಟ್ಟಿನಿಂದ ಅಂಟಿಕೊಂಡಿರುತ್ತವೆ. ಓರಲ್ ಭಾಗ ಮೇಲ್ಮುಖವಾಗಿರುತ್ತದೆ. ಶರೀರ ಪಂಚಮುಖವನ್ನು ಹೊಂದಿದೆ. ಥೀಕ ರಂಧ್ರಗಳಿಲ್ಲದ ತಟ್ಟೆಗಳನ್ನೊಳಗೊಂಡಿದೆ. ಬದುಕಿರುವ ಪ್ರಾಣಿಗಳ ಬಾಹುಗಳು ಚಲಿಸುತ್ತವೆ. ಬಾಹುಗಳು ನಾನಾ ಭಾಗಗಳಾಗಿ ಚೆಲ್ಲೊಡೆದಿವೆ. ಇವುಗಳಲ್ಲಿ ಸಂಯುಕ್ತ ಎಲೆಯಲ್ಲಿರುವವಂಥ ರಚನೆಗಳಿವೆ. ಬಾಹುಗಳ ತುದಿಯವರೆಗೂ ಅಂಬುಲ್ಯಾಕ್ರ ಇದೆ. ಬಾಯಿ ಓರಲ್ ಭಾಗದ ಮಧ್ಯೆ ಇದೆ. ಗುದದ್ವಾರ ಮಧ್ಯಭಾಗದಿಂದ ಸ್ವಲ್ಪ ಅತ್ತಕಡೆ ಇರುತ್ತದೆ. ಅಡೋವಿಷಿಯನ್ ಕಾಲದಿಂದ ಇಂದಿನವರೆಗೂ ಇವು ಪಸರಿಸಿವೆ. ಈ ವಗ‍ದಲ್ಲಿ ನಾಲ್ಕು ಗಣಗಳಿವೆ.