ಪುಟ:Mysore-University-Encyclopaedia-Vol-2-Part-4.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

829

೨೦ನೆಯ ಶತಮಾನ:ಇಪ್ಪತ್ತನೆಯ ಶತಮಾನದಲ್ಲಿ ಏರ್ಪಡಿಸಲಾದ ಅಂತರಾಷ್ಟ್ರೀಯ ಪ್ರದರ್ಶಣಗಳು ಅನೇಕಾನೇಕ.೧೯೧೫ರ ಸ್ಯಾನ್ ಫ್ಹ್ರಾನ್ಸಿಸ್ಕೋ ಪ್ರದರ್ಶನವಿಲ್ಲಿ ಉಲ್ಲೇಖನಾರ್ಹ.ಪನಮಾ ಕಾಲುವೆಯ ಪ್ರಾರಂಭೋತ್ಸವದ ಸವಿನೆನಪಿಗಾಗಿ ಪನಮಾ ಪಿಸಿಫಿಕ್ ಎಂದೇ ಇದರ ನಾಮಧೇಯ.ಕೈಗಾರಿಕೆಗೆ ಅತಿಯಾದ ಪ್ರಾಮುಖ್ಯ ನೀಡದೆ ಸಾಂಸ್ಕ್ರ್ತಿಕ ಮುಖವನ್ನೆ ಮುಣ್ದೆ ಮಾಡಿಕೊಂಡಿದ್ದ ಈ ಪ್ರದರ್ಶನವನ್ನು ತೊಡಗಿಸಿದಾಗ ಒಂದನೆಯ ಮಹಾಯುದ್ದ ನಡೆಯುತ್ತಿದ್ದಾದರೂ ಇದು ಅಯಶಸ್ವಿಯೇನೂ ಆಗಲಿಲ್ಲ.ಇಪ್ಪತ್ತು ಲಕ್ಷ ಡಾಲರ್ ಹೆಚ್ಚುವರಿಯಲ್ಲಿ ಮುಕ್ತಾಯಗೊಂಡ ಈ ಪ್ರದರ್ಶನಭುವಗಳ ಶಿಲ್ಪಗಳು ಮೂರಿಶ್-ಸ್ಪ್ಯಾನಿಷ್,ರೊಮನೆಸ್ಕ್ ಮತ್ತು ಇಟಾಲಿಯನ್ ಪುನರುಜ್ಜೀವನ ಶೈಲಿಗಳ ಸಂಗಮ. ಅಮೇರಿಕಾದ ಷಿಕಾಗೋ ನಗರ ಮತ್ತೆ ಅಂತರಾಷ್ಟ್ರೀಯ ಪ್ರದರ್ಶನವೊಂದರ(೧೯೩೩-೩೪) ನಿವೇಶನವಾಗಿತ್ತು.ಈ ನಗರಸ್ಥಾಪನೆಯ ಶತಾಬ್ದಿಯ ಸಮಯಕ್ಕೆ ಸರಿಯಾಗಿ ಇದನ್ನು ಏರ್ಪಡಿಸಲಾದ್ದರಿಂದ ಈ ನೂರು ವರ್ಷದ ತಾಂತ್ರಿಕ ಮತ್ತು ಶಿಲ್ಪೀಯ ಮುನ್ನಡೆಯ ನಿರೂಪಣೆಯೇ ಈ ಪ್ರದರ್ಶನದ ಮುಖ್ಯೋದ್ದೇಶ. ಕ್ರಿಯಾತ್ಮಕ ಶಿಲ್ಪವೇ ಇಲ್ಲಿನ ಭವನಗಳ ವೈಶಿಷ್ಟ್ಯವಾಗಿತ್ತು.ಸರಳ ಜ್ಯಾಮಿತಿತಯ ಆಕಾರ,ಶುದ್ದವರ್ಣಗಳ ನೇರ ಪ್ರಯೋಗ,ವೇಗದ ಯುಗದ ವೈಜ್ನ್ಯಾನಿಕ ಪ್ರಗತಿಯ ಮೂರ್ತರೂಪ ,ಬೃಹದ್ಗಾತ್ರದ ಚಲನಾತ್ಮಕ ಪ್ರೇಕ್ಷಕ ಸಮೂಹಕ್ಕೆ ಇಂತಿಷ್ಟೂ ತ್ರಾಸದಾಯಕವಾಗದಿರುವಂತೆ ನೇರ್ಪುಗೊಂಡ ಕಟ್ಟಡ ವಿನ್ಯಾಸ,ಏಕಪ್ರಕಾರವಾಡ ಬೆಳಕಿನ ನಿಯಂತ್ರಣ,ವಾತಾನುಕೂಲನ-ಈ ಲಕ್ಷಣಗಳಿಂದಾಗಿ ಇದು ಹಿಂದಿನ ಪ್ರದರ್ಶನಗಳಿಗಿಂತ ಭಿನ್ನವಾದ ಮಾರ್ಗದಲ್ಲಿ ಮೊದಲ ಹೆಜ್ಜೆಯಿಟ್ಟಿತು. ಇಡೀ ಅಮೇರಿಕವೇ ಅಭೂತಪೂರ್ವ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದಾಗ ಏರ್ಪಟ್ಟಿದ್ದರೂ ಇದು ಲಾಭದಾಯಕವಾಗಿ ಪರಿಣಮಿಸಿದ್ದಕ್ಕೆ ಪ್ರದರ್ಶನ ಸಂಚಾಲಕರು ಅನುಸರಿಸಿದ ಕೆಲವು ಉಪಾಯಗಳು ಮುಖ್ಯ ಕಾರಣ.ಪ್ರದರ್ಶನದ ಪ್ರವೇಶ ಪತ್ರಗಳನ್ನು ಮುಂಗಡವಾಗಿಯೇ ಮಾರಾಟ ಮಾಡಿದ್ದರಿಂದ ಪ್ರೇಕ್ಷಕರು ಪ್ರದರ್ಶನದ ಆರಂಭ ಕಾಲದಿಂದಲೂ ಅಧಿಕಾಧಿಕ ಸಂಖ್ಯೆಯಲ್ಲಿ ಇದನ್ನು ಸಂದರ್ಶಿಸುವಂತೆ ಮಾಡಿ ಅಂತ್ಯಕಾಲದ ತೊತ್ತಳದುಳಿತವನ್ನೂ ನಿರಾಶೆಯನ್ನೂ ನಿವಾರಿಸಿ ಇಡಿ ಪ್ರದರ್ಶನಾವಧಿಯ ಪ್ರವೇಶವನ್ನು ಕ್ರಮಗೊಳೀಸಲು ಸಾಧ್ಯವಾಯಿತು.ಪ್ರದರ್ಶನದ ಸಥಳವನ್ನು ಪರದರ್ಶಕರಿಗೆ ಮುಫತ್ತಾಗಿ ಕೊಡುವ ಬದಲು ಅದನ್ನು ಅವರಿಗೆ ಮಾರಾಟ ಮಾಡಿದ್ದು ಅದೇ ಪ್ರಥಮ.ಇಂಥ ಪ್ರದರ್ಶನಗಳು ಬೃಹತ್ ವ್ಯವಹಾರ ಸಂಸ್ಥೆಗಳ ಪ್ರಚಾರದ ಮಹಾಸಾಧನೆಗಳೆಂದು ಮನವರಿಕೆಯಾದದ್ದು ಇದರ ಯಶಸ್ಸಿಗೆ ಇನ್ನೊಂದು ಕಾರಣ. ನಾಳಿನ ಜಗತ್ತು:೨೦ನೆಯ ಶತಮಾನದ ಪ್ರಥಮಾರ್ಧದ ಕಾಲದಲ್ಲಿ ಅಮೇರಿಚ ಸಂಯುಕ್ತ ಸಂಸ್ಥಾನದಲ್ಲಿ ನಡೆದ ಅತ್ಯಂತ ಗಮನಾರ್ಹ ಅಂತರಾಷ್ಟ್ರೀಯ ಪ್ರದರ್ಶನವೆಂದರೆ ೧೯೩೯-೪೦ರಲ್ಲಿ ನ್ಯೂಯಾರ್ಕಿನಲ್ಲಿ ನೆಡೆದದ್ದು.ಆದರೂ ಆರ್ಥಿಕವಾಗಿ ಇದು ನಷ್ಟದಾಯಕವಾಯಿತು.ಅಮೇರಿಕಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ನನ ಅಧ್ಯಕ್ಷತಾ ಸ್ವೀಕಾರದ ನೂರೈವತ್ತನೆಯ ವಾರ್ಷಿಕೋತ್ಸವದ ಸವಿನೆನಪಿಗಾಗಿ ಏರ್ಪಟ್ಟ ಇದಕ್ಕೆ ನಾಳಿನ ಜಗತ್ತು ಎಂಬ ಧ್ಯೇಯ ವಾಕ್ಯ.ಅದರ ವಾಸ್ತು ಶಿಲ್ಪ ಅತ್ಯಂತ ನವ್ಯ.ಝಗಝಗಿಸುವ ಪ್ರತಿಯೊಂದು ಪ್ರವೇಶಚೌಕದಿಂದಲೂ ಪ್ರದರ್ಶನದ ರಸಸ್ಥಾನಗಳೆಡೆಗೆ ಹರಿದು ಸಂಗಮಿಸುವ ವೃಕ್ಷರಾಜಿತ ಮಾರ್ಗಸಮೂಹ ೭೨೮ ಅಡಿಯ,ತರಿಕೋನಾಕೃತಿಯ,ತುದಿಚೂಪಿನ ಶಲಾಕೆ-ಟ್ರೈಲಾನ್,೧೮೦ ಅಡಿ ವ್ಯಾಸದ ಸುತ್ತು ಗೋಳ,ಗೋಪುರ ಬರಲಿದ್ದ ಭವಿಷ್ಯದ ಪ್ರತೀಕ.ಇವೆಲ್ಲ ಪ್ರದರ್ಶನ ಸೊಬಗನ್ನು ಇಮ್ಮಡಿಸಿದ್ದವು.ಆದರೆ ದುರ್ದೈವ,ಪ್ರದರ್ಶನದ ಕಾಲಕ್ಕೆ ಸರಿಯಾಗಿ ಎರಡನೆಯ ಮಹಾಯುದ್ದ ಸಂಭವಿಸಿದ್ದರಿಂದ ಇದರ ದ್ವಿತೀಯ ವರ್ಷದಲ್ಲಿ ಅನೇಕ ರಾಷ್ಟ್ರಗಳು ಭಾಗವಹಿಸಲಾಗಲಿಲ್ಲ.ಆದರೂ ಇದನ್ನು ೪,೪೯,೩೨,೯೭೮ ಪ್ರೇಕ್ಷಕರು ಸಂದರ್ಶಿಸಿದರೆಂನುದು ಬಹು ದೊಡ್ದ ವಿಕ್ರಮ. ರಾಜತಾಂತ್ರಿಕ ಒಡಂಬಡಿಕೆ:೧೮೫೧ರಲ್ಲಿ ಲಂಡನ್ನಿನ ಸ್ಪಟಿಕ ಮಹಲಿನಲ್ಲಿ ನಡೆದ ಪ್ರಥಮ ವಿಶ್ವ ಪ್ರದರ್ಶನವಾದಾಗಿನಿಂದ ೧೯೨೮ರ ವರೆಗೆ ಯಾವ ರಾಷ್ಟ್ರವಾದರೂ ಯಾವಾಗ ಬೇಕಾದರೂ ಪ್ರದರ್ಶನವನ್ನು ಏರ್ಪಡಿಸಬಹುದಿತ್ತು.ಇಂಥವುಗಳಲ್ಲಿ ಕೆಲವು ನಿಜವಾಗಿಯೂ ಅಂತರಾಷ್ಟ್ರೀಯವೆನಿಸಿಕೊಂಡಿದ್ದುವಾದರೂ ಹಲವು ರಾಸ್ಟ್ರೀಯ ಲಕ್ಷಣಗಳುಲ್ಲ ಬೃಹತ್ ಪ್ರದರ್ಶನಗಳಾಗಿದ್ದವು.ಈ ಕ್ಷೇತ್ರದಲ್ಲೊಂದು ಸುವ್ಯವಸ್ಥೆಯೇರ್ಪಡಿಸೌವ ಉದ್ದೇಶದಿಂದ ೧೯೨೮ರಲ್ಲಿ ಪ್ಯಾರಿಸ್ಸಿನಲ್ಲಿ ೩೫ ರಾಷ್ಟ್ರಗಳು ರಾಜತಾಂತ್ರಿಕ ಒಪ್ಪಂದವೊಂದಕ್ಕೆ ಸಹಿ ಹಾಕಿದವು.ಅಂತರ ರಾಷ್ಟ್ರೀಯ ಪ್ರದರ್ಶನಗಳ ಮನ್ನಣೆ ಪ್ರೋತ್ಸಾಹ ಮುಂತಾದ ಪ್ರಶ್ನೆಗಳ ಬಗ್ಗೆ ವ್ಯವಹರಿಸಲು ಅಂತರರಾಷ್ಟ್ರೀಯ ಪ್ರದರ್ಶನ ಬ್ಯೂರೋವಿನ ಸ್ಥಾಪನೆಯಾಯಿತು.ಈ ಮಂಡಲಿಯ ಪ್ರಕಾರ ಪ್ರದರ್ಶನಗಳು ಎರಡು ಬಗೆ:ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಚಟುವಟಿಕೆಗಳನ್ನು ನಿರೂಪಿಸುವಂತದು ಸಾರ್ವತ್ರಿಕ ಅಥವಾ ಸಾಧಾರಣ ಪ್ರದರ್ಶನ.ಯಾವುದಾದರೂ ಒಂದೇ ಕ್ಷೇತ್ರಕ್ಕೆ ಸಂಬಂಧ ಪಟ್ಟದ್ದು ವಿಶೇಷ ಪ್ರದರ್ಶನ.ಇವನ್ನು ಇನ್ನೊಂದು ಬಗೆಯಾಗಿ ವಿಂಗಡಿಸುವುದೂ ಸಾಧ್ಯ.ಪ್ರದರ್ಶನದಲ್ಲಿ ಭಾಗವಹಿಸಲು ಆಹ್ವಾನಿತವಾದ ರಾಷ್ಟ್ರಗಳು ತಮ್ಮದೇ ಆದ ಪ್ರದರ್ಶನ ಮಂಟಪಗಳನ್ನು ಕಟ್ಟಬೇಕಾಗಿ ಬರಬಹುದು.ಈ ಬಗೆಯ ಕಡಾಯವಿಲ್ಲದ್ದು ಇನ್ನೊಂದು ಬಗೆ. ಪ್ರದರ್ಶನದ ನಿಯಂತ್ರಣದ ಸಲುವಾಗಿ ವಿಶ್ವವನ್ನು ಯುರೋಪ್,ಉತ್ತರ-ದಕ್ಷಿಣ ಅಮೇರಿಚ ಮತ್ತು ಉಳಿದ ಭಾಗ ಎಂದು ಮೂರು ವಲಯಗಳಾಗಿ ವಿಂಗಡಿಸಲಾಗಿದೆ:ಪ್ರಥಮ ಬಗೆಯ(ಆಹ್ವಾನಿತ ರಾಷ್ಟ್ರಗಳೇ ಪ್ರದರ್ಶನ ಮಂಟಪ ನಿರ್ಮಾಣ ಮಾಡಬೇಕಾಗಿಲ್ಲದ) ವಿಶ್ವ ಪ್ರದರ್ಶನವನ್ನು ಒಂದೇ ದೇಶದಲ್ಲಿ ಹದಿನೈದು ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಏರ್ಪಡಿಸುವಂತಿಲ್ಲ.ಒಂದೇ ವಲಯದಲ್ಲಿ ಒಂದನೆಯ ಬಗೆಯ ಎರಡು ಪ್ರದರ್ಶನಗಳ ನಡುವೆ ಕನಿಷ್ಠ ಪಕ್ಷ ಆರು ವರ್ಷಗಳ ಅವಧಿಯಾದರೂ ಇರಲೇಬೇಕು. ಅಮೇರಿಕಾದ ವಾಷಿಂಗ್ಟನ್ ಸಂಸ್ಥಾನದ ಸಿಯಾಟಲಿನಲ್ಲಿ ೧೯೬೨ರಲ್ಲಿ ನಡೆದ 'ಶತಮಾನ ೨೧ ಪ್ರದರ್ಶನವನ್ನು ಎರಡನೆಯ ವರ್ಗದ ಸಾರ್ವತ್ರಿಕ ಪ್ರದರ್ಶನವೆಂದು ಈ ಮಂಡಲಿ ಮನ್ನಣೆ ನೀಡಿತು.ಕೇವಲ ೭೪ ಎಕರೆ ಪ್ರದೇಶದಲ್ಲಿ ಇದು ಸಮಾವೇಶಗೊಂಡಿತು.ಆಕಾಶ ಯುಗದ ತಾಂತ್ರಿಕ ವೈಜ್ನ್ಯಾನಿಕ ಸಾಧನೆಯ ನಿರೂಪಣೆಯೇ ಇದರ ಉದ್ದೇಶ.ಅಮೇರಿಕ ಸಂಯುಕ್ತ ಸಂಸ್ಥಾನದ ವಿಜ್ನ್ಯಾನ ಮಂಟಪಕ್ಕೆ ಆರು ಎಕರೆ ನೆಲ ಮೀಸಲಾಗಿತ್ತು.ಆಕಾಶಕಲ್ಪಕವೊಂದನ್ನು ಇಲ್ಲಿ ನಿರ್ಮಿಸಲಾಗಿತ್ತು.ಬ್ರಿಟಿಷ್ ಮಂಟಪ ಬೇರೆ ತರ.ಇದು ಆ ರಾಷ್ಟ್ರದ ಇತಿಹಾಸದ ಒಂದು ಬಹು ದೊಡ್ಡ ಅಧ್ಯಾಯ:ಒಂದನೆಯ ಎಲಿಜಬೆತಳ ಕಾಲದವರೆಗಿನ ಬ್ರಿಟಿಷ್ ಸಾಧನೆಯ ನಿರೂಪಣ.೬೦೦ ಅಡಿ ಎತ್ತರದ ಆಕಾಶಸೂಚಿ ಎಂಬ ಉಕ್ಕಿನ ತ್ರಿಪಾದಿ ಸ್ಥಂಬವೇ ಈ ಪ್ರದರ್ಶನದ ಅತ್ಯದ್ಭುತ.ಈ ಗೋಪುರದ ಮೇಲ್ಪದಿಯಲ್ಲಿ ತಿರುಗುವ ಉಪಹಾರಗೃಹ.