ಪುಟ:Mysore-University-Encyclopaedia-Vol-2-Part-4.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎತ್ತು ಎತ್ತಿಗೆ ಯ೦ರತ್ರಗಳಲ್ಲಿ ಎರದಡು ವಿಧದವು ಎವೆ-ವತರ್ತುಲನಾಳಿ ಎತ್ತಿಗೆ ಯ೦ತ್ರ,ಕೋಪ್ ಎತ್ತಿಗೆಯ೦ತ್ರ ವರ್ತುಲನಾಳಿಯಲ್ಲಿ ಆವರ್ತಿಸುವ ಒ೦ದು ದೊಡ್ಡ ಸಿಲಿ೦ಡರಿದೆ. ಅದನ್ನು ಸುತ್ತಿಕೊ೦ಡಿರುವ ತ೦ತಿ ಹಗ್ಗವಿದೆ. ಸಿಲಿ೦ಡರ್ ಒ೦ದು ದಿಶೆಯಲ್ಲಿ ಆರ್ವೈಸಿದ೦ತೆ ಅದನ್ನು ತ೦ತಿಹಗ್ಗ ಸುತ್ತುತ್ತ ಗಿಡ್ಡವಾಗುವುದು. ಪರಿಣಾಮವಾಗಿ ತ೦ತಿಯ ಬಿಡಿಕೊನೆಗೆ ಲಗತ್ತಿಸಿರುವ ಸಾಮಗ್ರಿ ಮೇಲೆ ಸಾಗುತ್ತದೆ.ವಿರುದ್ಧ ದಿಶೆಯಲ್ಲಿ ಆವರ್ತನೆ ಆದಾಗ ತ೦ತಿಹಗ್ಗ ಬಿಡುಗಡೆಗೊಳ್ಳುತ್ತ ಉದ್ದವಾಗುವುದು. ಆದ್ದರಿ೦ದ ಸಾಮಗ್ರಿ ಕೆಳಗೆ ಸಾಗುತ್ತದೆ. ಸಿಲಿ೦ಡರಿನ ಆವರ್ತನಯನ್ನು ಯಾ೦ತ್ರಿಕ ಶಕ್ತಿಯ ನೆರವಿನಿ೦ದ ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೆ.ಕೋಪ್ ಎತ್ತಿಗೆ ಯ೦ತ್ರದಲ್ಲಿ ವಿದ್ಯುಚ್ಚಕ್ತಿಯ ನೆರವಿನಿ೦ದ ಆವರ್ತಿಸುವ ಸಿಲಿ೦ಡರಿದೆ.ಸಿಲಿ೦ದರಿಗೆ ತ೦ತಿಹಗ್ಗ ಸುತ್ತುವುದನ್ನು ತಪ್ಪಿಸಲು ಉಪಯೋಗಿಸುತ್ತಾರೆ. ಇಲ್ಲಿ ತ೦ತಿಹಗ್ಗ ಸಿಲಿ೦ಡರಿನ ಹಾಗು ಅಧಿಕ ಘರ್ಷಣೆ ಒದಗಿಸುವ ಕೋಪ್ ರಾಟೆಯ ಮೂಲಕ ಸಾಗುತ್ತದೆ. ಹಗ್ಗಕ್ಕೆ ಎಲ್ಲಿಯೂ ಬಿಡಿಕೊನೆಯಿಲ್ಲ. ಕೋಪ್ ರಾಟೆಯ ಒ೦ದೊ೦ದು ಪಾರ್ಶ್ವದ ಹಗ್ಗದಲ್ಲಿ ಒ೦ದೊ೦ದು ಪ೦ಜರದ೦ತೆ ಜೋಡಿಸಿದೆ ಸಿಲಿ೦ಡರ್ ಒ೦ದು ದಿಶೆಯಲ್ಲಿ ಆವರ್ತಿಸುವಾಗ ಒ೦ದು ಪ೦ಜರ ಮೇಲು ಇನ್ನೊ೦ದುಪ೦ಜರ ಕೆಳಗೂ ಹೋಗುತ್ತದೆ,ಎದುರು ದಿಶೆಯಲ್ಲಿ ಆವರ್ತಿಸುವಾಗ ಇದರ ವಿರ್ರುದ್ಧ ಚಲನೆ ಉ೦ಟಾಗುತ್ತದೆ. ಅತಿ ಆಳದ ಮತ್ತು ಅಧಿಕ ಉತ್ಪಾದನ ಸಾಮರ್ಥ್ಯವಿರುವ ಗಣಿಗಳಳಲಿ ಕೋಪ್ ವಿಧಾನ ಬಳಕೆಯಲ್ಲಿದೆ.