ಪುಟ:Mysore-University-Encyclopaedia-Vol-2-Part-4.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಕಾಪಿಂಡನಳು:ಮೊದಲನೆಯ ಬಳಗದ ಉಲ್ಕಾಕಲ್ಪಗಳಲ್ಲಿ ಪ್ರದಾನವದವು ಉಲ್ಕಾಪಿಂಡನಳು.ಉಲ್ಕಾಪಿಂಡವೆಂದ ಮಾತ್ರಕ್ಕೆ ಆಕಾಶದಿಂದ ಉಲ್ಕಾಕಲ್ಪವೊಂದು ಅವಿಭಕ್ತವಾಗಿ ಬಿದ್ದು ಭೂಮೇಲೆಯಲ್ಲಿ ಬಂಡೆಯಂತೆ ಉಳಿದುಕೊಳ್ಳಬೇಕೆಂದೇನಿಲ್ಲ.ವಾಯುಮಂಡಲದಲ್ಲಿ ಉಲ್ಕಾಕಲ್ಪಗಳು ಬಹುಮತ್ತಿಗೆ ನಶಿಸಿಹೋಗುತ್ತವೆ.ಹಾಗೂ ಅನೇಕವೆಳೆ ಛಿದ್ರಗೊಳ್ಲುತ್ತವೆ.ಅಲ್ಲದೆ ಕೆಲವು ವೇಳೆ ಉಲ್ಕಾಕಲ್ಪವೊಂದು ಸೆಕೆಂಡಿಗೆ ನಾಲ್ಕಾರು ಕಿಲೋಮೀಟರುಗಳಷ್ಟು ಅಧಿಕ ವೇಗದಿಂದ ಭೂಮೇಲ್ಮೈಯನ್ನು ಅಪ್ಪಳಿಸಬಹುದು.ಹಾಗಾದಲ್ಲಿ ಅದರ(ಹಾಗೂ ಅದು ತಾಗಿದ ಮಣ್ಣಿನ) ಬಹಳಷ್ಟು ಬಾಗವೆಲ್ಲ ಹಠಾತ್ತನೆ ಬಾಷ್ಟೀಕೃತವಾಗಿ ಅಸ್ಪೋಟಕವೇಗದಿಂದ ಎಲ್ಲೆಡೆಗಳಿಗೂ ಚದುರಿಹೋಗುವುದು.ಇಂಥ ಆಸ್ಪೋಟನೆಗಳ ಫಲವಾಗಿ ಭೂಮಿಯ ಮೇಲೆ ದೊಡ್ದ ಕುಳೆಗಳು(ಕ್ರೇಟರ್ಸ್) ಏರ್ಪಡಬಹುದು.ಈಶಾನ್ಯ ಆರಿಜೋನದಲ್ಲಿರುವ(ಉತ್ತರ ಅಮೆರಿಕ) ವರ್ತುಲಾಕಾರದ ಭಾರಿ ಕುಳೆಯೊಂದು ಸು.೧೦ ಸಹಸ್ರ ವರ್ಷಗಳ ಹಿಂದೆ ಈ ರೀತಿಯಲ್ಲಿ ಆಗಿರಬೇಕೆಂದು ನಂಬಲಾಗಿದೆ.ಅದರ ವ್ಯಾಸ ಒಂದುಕಾಲು ಕಿಲಒಮೀಟರುಗಳು ಮತ್ತು ಅಂಚಿನಿಂದ ತಳಭಾಗಕ್ಕಿರುವ ಆಳ ೧೭೫ ಮೀಟರುಗಳು.ಕುಳಿದು ಅಂಚು ಲೆರೆಯ ಪ್ರದೇಶದ ಸರಾಸರಿ ಭೂಮಟ್ಟದಿಂದ ಸು.೪೦ ಮೀ. ಗಳಷ್ಟು ಎತ್ತರದಲ್ಲಿದೆ. ಕುಳಿ ಹೊಸದಾಗಿ ಉತ್ಪನ್ನವಾದಾಗ ಪರಿಮಾಣಗಳು ಇನ್ನೂ ಅಧಿಕವಾಗಿನ್ನಿರವುದರಲ್ಲಿ ಸಂಶಯವಿಲ್ಲ.ಇಂಥ ಕುಳಿಗೆ ಕಾರಾಣಭೂತವಾದ ಉಲ್ಕಾಕಲ್ಪ ಲಕ್ಷಾಂತರ ಟನ್ನುಗಳಷ್ಟು ತೂಕದ್ದೂ ಲಕ್ಷಾಂತರ ಘನಮೀಟರುಗಳಷ್ಟು ಗಾತ್ರಾದ್ದೂ ಆಗಿತ್ತೆಂದು ಅಂದಾಜು ಮಾಡಲಾಗಿದೆ.ಅದೇ ಅರಿಜೋನ ಕುಳಿಯ ನೆರೆಯಲ್ಲಿ ದೊರೆಕಿರುವ ಉಲ್ಕಾದ್ರವ್ಯವೆಲ್ಲ ಚಿಕ್ಕ ಚಿಕ್ಕಚೂರುಗಳ ರೂಪದಲ್ಲಿದೆ.ಅವುಗಳ ಪೈಕಿ ೬೦೦ ಕಿಲೋಗ್ರಾಂ ತೂಕದ್ದೆ ಅತಿ ದೊಡ್ಡದು.ಉಳಿದ ಉಲ್ಕಾದ್ರವ್ಯದ ಭಾರಿ ಬಂಡೆಯೊಂದು ಕುಳಿಯ ನೆಲದೊಳಗಡೆ ಹುದುಗಿದೆಯೊಂದು ಭಾವಿಸಲು ಸಾಕಷ್ಟು ಆಧಾರಗಳೇನಿಲ್ಲ.

  ತಮ್ಮ ಮೂಲಗಾತ್ರಕ್ಕೆ ಹೋಲಿಸಿದಾಗ ಸಾಕಷ್ಟು ದೊಡ್ಡ ಅವಶೇಷಗಳನ್ನು ಭೂಮಿಯ ಮೇಲೆ ಉಳೆಸುವ ಉಲ್ಕಾಕಲ್ಪಗಳು ಸೆಕೆಂಡಿಗೆ ಒಂದು ಕಿಲೋಮೀಟರಿಗಿಂತ ಕಡಿಮೆ ಸಾಪೇಕ್ಷ ವೇಗಗಳಿಂದ ಭೂ ಮೇಲ್ಮೈಗೆ ತಾಕುತ್ತವೆ.ನೂರಾರು ಟನ್ ತೂಕದ ಈ ಬಗೆಯ ಉಲ್ಕಾಕಲ್ಪವೊಂದರ ಅವಶೇಷಗಳು ಸಿಖೋತ್-ಆಲಿನ್ ಪರ್ವತಗಳ(ಆಗ್ನೇಯ ಸೈಬೀರಿಯ,ಸೋವಿಯತ್ ರಷ್ಯ) ಪಡುವಣ ಚಾಚಿನ ಪ್ರದೇಶದಲ್ಲಿ(೧೯೪೭ ಫೆಬ್ರವರಿ ೧೨ರಂದು ಬೆಳಗ್ಗೆ ಹತ್ತುವರೆ ಗಂಟೆ ಹೊತ್ತಿಗೆ) ಬಿದ್ದವು(ಆಕಾಶದಲ್ಲಿ ಈ ಉಲ್ಕಾಪಿಂಡಕ್ಕೆ ಸಂಬಂಧಿಸಿದ ಅಗ್ನಿಗೋಳದ ಪ್ರಕಾಶ ಸೂರ್ಯನನ್ನೆ ಮೀರಿದಸಿತ್ತು.)ಆ ಸ್ಥಳದಲ್ಲಿ ದೊರೆತೆ ಅಧಿಕ ಸಂಖ್ಯೆಯ ಉಲ್ಕಾವಶೇಷಗಳ ಪೈಕಿ ಅತಿ ದೊಡ್ಡದು ಒಂದುಮುಕ್ಕಾಲು ಟನ್ ತೂಗುತ್ತದೆ.ದಾಖಲೆಯಲ್ಲಿರುವ ಬಿಡಿ ಉಲ್ಕಾವಶೇಷಗಳ ಪೈಕಿ ಅತಿ ಡೊಡ್ದದು ನೈಋತ್ಯ ಆಫ್ರಿಕದ ಗ್ರೂಚ್ ಫಾಂಟೇನ್ ಜಿಲ್ಲೆಯಲ್ಲಿ(ಭಾಗಶಃ ನೆಲದಲ್ಲಿ ಹುದುಗಿಕೊಂಡು) ಬಿದ್ದಿದೆ:ಪಶ್ಚಿಮ ಹೋಬಾ ಎಂಬ ಹೆಸರಿನ ಈ ಉಲ್ಕಾಪಿಂಡದ ಅಂದಾಜು ತೂಕ ಐವತ್ತು ಟನ್ನುಗಳು.ಗ್ರೀನ್ಲೆಂಡಿನಲ್ಲಿ ಬಿದ್ದಿದ್ದ ೩೧ ಟನ್ ತೂಕದ ಎರಡನೆಯ ಅತಿ ದೊಡ್ಡ ಉಲ್ಕಾಪಾತವನ್ನು ಇಂದು ಅಮೇರಿಕನ್ ಮ್ಯೂಸಿಯಂ-ಹೇಡನ್ ಪ್ಲಾನೆಟೇರಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ; ಅದರ ಹೆಸರು ಆಹ್ನಿಗಿಟೋ.ಹೋಬಾ ಮತ್ತು ಆಹ್ನಿನಿಟೋನಳು ಭೂಮಿಗೆ ಯಾವಾಗ ಬಿದ್ದುವೆಂದು ಬಗ್ಗೆ ಧಾಖಲೆಗಳಿಲ್ಲ.

ಉಲ್ಕಾಪಿಂಡ ಪೈಕಿ ಅಯೋಲ್ಕಗಳು ಮತ್ತು ಶಿಲೋಲ್ಕಗಳು ಎಂಬ ಎರಡು ವರ್ಗಗಳನ್ನು ಗುರುತಿಸಬಹುದು.ಮತ್ತು ನಿಕಲ್(೫-೨೦% ಭಾಗ) ಲೋಹಗಳ ಮಿಶ್ರಣ್ವಾಗಿರುತ್ತದೆ.ಮೇಲೆ ಉಲ್ಲೇಖಿಸಿರುವ ಉಲ್ಕಾಪಿಂಡಗಳೆಲ್ಲವೂ ಈ ವರ್ಗಕ್ಕೆ ಸೇರಿದವು; ಅವುಗಳ ಸಾಂದ್ರತೆ ಘನಸೇಂಟಿಮೀಟರಿಗೆ ೮-೯ ಗ್ರಾಂಗಳಷ್ಟು.ಶಿಲೋಲ್ಕಗಳಾದರೋನ ಆಮ್ಲಜನಕ.ಸಿಲಿಕಾನ್,ಮೆಗ್ನೀಸಿಯಂ,ಕಬ್ಬಿಣ,ಅಲ್ಯುಮಿನಿಯಂ,ಕ್ಯಾಲ್ಸಿಯಂ,ಸೋಡಿಯಂ ಮುಂತಾದ ದಾತುಗಳನ್ನೊಳಗೊಂಡಿದ್ದು ಸ್ಥೂಲವಾಗಿ ಭೂಮಿಯ ಮೇಲಿರುವ ಕಲ್ಲುಗಳನ್ನು ಹೋಲುತ್ತವೆ;ಇವುಗಳ ಸಾಂದ್ರತೆ ಘನಸೆಂಟಿಮೀಟರಿಗೆ ೨-೩ ಗ್ರಾಂಗಳಷ್ಟು ಮಾತ್ರ ೧೯೪೮ ಫೆಬ್ರವರಿ ೧೮ರಂದು ನೆಬ್ರಾಸ್ಕದಲ್ಲಿ ಬಿದ್ದ ಒಂದು ಟನ್ ತೂಕದ ಭಾರಿ ಶಿಲೋಲ್ಕವನ್ನು ನವ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ಸಂಗ್ರಹಿಸಲಾಗಿದೆ.ಉಲ್ಕಾಪಿಂಡಗಿಳಲ್ಲಿ ಗೋಚರಿಸುವಂಥ ಅಂತರಿಕ ರಚನಾ ವಿನ್ಯಾಸಗಳು ಅದೇ ರಸಯನಿಕ ಘಟಕಗಳೂ ಭೂಮೇಲ್ಮೈ ಬಳಿ ರೂಪಿಸಲು ಶಖೈಆವೀರವ ಘನಕಾಯನಳಲ್ಲಿ ಕಂಡುಬಾರದೆ ಇರುವುದರಿಂದ ಅಯೋಲ್ಕ ಶಿಲೋಲ್ಕಗಳೆಗೂ ಭೂಮಿಯ ಮೇಲಿರುವ ಸ್ಥಳೇಯ ಶಿಲೆಗಳಿಗೂ ಭೇಧ ಗುರುತಿಸಲು ಸಾಧ್ಯಾವಾಗುವುದು.ಉಲ್ಕಾಕಲ್ಲುಗಳು ಪ್ರಾಯಶಃ ಭೂಮೇಲ್ಮೈಯಲ್ಲಿರುವ ದುರ್ಬಲವಾದ ಗುರುಕ್ಷೇತ್ರದಲ್ಲಿ ರೂಪು ತಳೆದಿರಬೇಕೆಂಬುದು ಕೆಲವು ವಿ‌‍‌‍‍‍‌ಜ್ಜಾನಿಗಳ ಊಹೆಯಾಗಿದೆ. ಅನೇಕ ಶಿಲೋಲ್ಕಗಳು ಕಾಂಡ್ರ್ಯೋಲುಗಳೆಂಬ ವಿವಿಧ ಖನಿಜಾಂಶಗಳಗಳನ್ನೂಳಗೊಂಡ ಪುಟ್ಟ ಪುಟ್ಟ ಗೋಳಾಕೃತಿಯ ಘಟಕಗಳಿಂದ ರಚಿತವಾಗಿದೆ.ಇಂಥ ಶಿಲೋಲ್ಕಗಳಿಗೆ ಕಾಂಡ್ರೈಟುಗಳೆಂದು ಹೆಸರು.ಕಾಂಡ್ರೈಟುಗಳ ಪೈಕಿ ಇಂಗಲಭರಿತ ಉಲ್ಕಾಶಿಲೆಗಳೆಂಬ(ಕರ್ಬನೇಶಿಯಸ್ ಮೇಟಿಯೊರೈಟ್ಸ್) ಒಂದು ಚಿಕ್ಕ ಉಪವರ್ಗವುಂಟು.ಇವುಗಳಲ್ಲಿ ಜೇವರಾಸಾಯನಿಕ ರಚನೆಗಲೀಗೆ ಮೂಲಭೂತವಾದ ಕೆಲವು ಇಂಗಾಲಯುತ ಬೃಹದಣುಗಳೂ ಪತ್ತೆಯಾಗಿರುವುದರಿಂದ ಇಂಗಾಲಯೂತ ಉಲ್ಕಾಶಿಲೆಗಳೂ ವೈಜ್ಜಾನಿಕ ಕುತೂಹಲವನ್ನು ಕೆರಳೆಸಿವೆ.(ಅರ್ಥ ಕಿಲೋಗ್ರಾಂ ಅವಶೇಷ ತೂಕವಿದ್ದ ಒಂದು ಐಂಗಾಲಿಕ ಉಲ್ಕಾಶಿಲೆ ಭಾರತದ ಹರಿಪುರದಲ್ಲಿ ೧೯೨೧ರ ಜನವರಿ ೧೭ರಂದು ಬಿತ್ತು)ಅನುಕೂಲ ಸನ್ನಿವೇಶಗಳು ದೊರೆತೊಡನೆ ಜೀವವನ್ನು ಅಂಕುರಗೊಳಿಸುವಂಥ ಜೀವರಾಸಾಯನಿಕ ಅಣುಸಮುದಾಯಗಳ ಹಂಚಿಕೆ ವಿಶ್ವದಲ್ಲಿ ಸಾಕಷ್ಟು ವ್ಯಾಪಕವಾಗಿರಬಹುದಾದ ಸಾಧ್ಯತೆಯನ್ನು ಈ ಇಂಗಲಭರಿತ ಉಲ್ಕಾ ಶಿಲೆಗಳು ಸೂಚಿಸಿವೆ. ಇಂದಿಗೂ ರಹಸ್ಯಮಯವಾಗಿ ಉಳಿದುಕೊಂಡಿರುವ ಸಹಸ್ರರು ಟನ್ ಮೂಲ ತೂಕದ ಒಂದು ಭಾರಿ ಉಲ್ಕಾಕಲ್ಪ ತುಂಗಷ್ಟ ನದಿಯ(ಮಧ್ಯ ಸೈಬೀರಿಯ,ರಷ್ಯ) ಅರಣ್ಯ ಫ್ರದೇಶದಲ್ಲಿ ೧೯೦೮ರ ಜೂನ್ ೩೦ರಂದು ಬೆಳಗ್ಗೆ ೭ ಗಂಟೆ ಹೊತ್ತಿಗೆ ಬಿತ್ತು.ಅದು ಬಿದ್ದ ಸ್ಥಳ ಅದೃಷ್ಟವಶಾತ್ ನಿರ್ಜನವಾಗಿದ್ದರೂ ಹಗಲಿನಲ್ಲೇ ಗುಡುಗುತ್ತ ಕಾಣಿಸಿಕೊಂಡ ಅಗ್ನಿಗೋಳದ ಉಜ್ಜ್ವಲ ಪ್ರಕಾಶದಿಂದಲೂ ಅದು ಭೂಮಿಗೆ ಬಡಿದಾಗ ಉಂಟಾದ ಧಕ್ಕೆಯಿಂದಲೂ ನೂರಾರು ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದ ಸೈಬೀರಿಯದ ರೈತರು ತಲ್ಲಣಿಸಿಹೋದರು.ಜನರ ಅಂಧಶ್ರದ್ಧೆಯ ಫಲವಾಗಿ ಈ ಘಟನೆಯ ಬಜಗ್ಗೆ ಕೂಡಲೇ ಯಾವ ಸ್ಥಳ ಪರೀಕ್ಷೆಗಳೂ ನಡೆಯಲಿಲ್ಲ.೧೯೨೭ರ ತರುವಾಯ ಈ ಉಲ್ಕಾಕಲ್ಪ ಬಿದ್ದ ಪ್ರದೇಶವನ್ನು ಅಮೂಲಾಗ್ರವಾಗಿ ಶೋಧಿಸಿದವರಿಗೆ ಮಣ್ಣಿನಲ್ಲಿ ಬೆರೆತ ಉಲ್ಕಾದೊಳಿಯ ವಿನಾ ಬೇರಾವ ವಿಶೇಷಗಳೂ ದೊರಕಲಿಲ್ಲ.ಬಿದ್ದ ಉಲ್ಕಾಕಲ್ಪ ಕೂಡಲೇ ಸಂಪೂರ್ಣವಾಗಿ ಬಾಷ್ಪೀಕೃತವಾಗಿರಬೇಕೆಂದು ಇದರಿಂದ ವ್ಯಕ್ತವಾಗುವುದು.ಅಯೋಲ್ಕ