ಪುಟ:Mysore-University-Encyclopaedia-Vol-2-Part-4.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಷಾಂಶು - ಉಷೆ ಶಾಶ್ವತಳಾದ ಈ ಉಷಸ್ಸಿನ ಸೊಬಗನ್ನು ನೋಡಿ ಆನಂದಿಸಿದ ಹಿಂದಿನವರೆಲ್ಲ ಕಣ್ಮನೆಯಾದರು. ಮುಂದಿನವರ ಗತಿಯೂ ಇಷ್ಟೆ. ಅದರೆ, ಈಕೆ ಮಾತ್ರ ನಿತ್ಯಳೂ ನಿತ್ಯತಾರುಣ್ಯ ಸೌಂದರ್ಯವುಳ್ಳವಳೂ ಆಗಿದ್ದು. ಲೋಕಯಾತ್ರೆಯಲ್ಲಿ ನಿತ್ಯ ಮತ್ತು ಅನಿತ್ಯ ತತ್ತ್ವಗಳೆರಡಕ್ಕೂ ಸಂಬಂಧಿಸಿದ್ದಾಳೆ. ಉಷಸ್ಸಿನ ಭೌತಿಕಸ್ವರೂಪವನ್ನು ತಕ್ಕಮಟ್ಟಿಗೆ ಎಲ್ಲರೂ ಅರಿಯಬಹುದು. ಆದರೆ ಇವಳ ಅಲೌಕಿಕವಾದ ದಿವ್ಯತ್ವವನ್ನರಿಯಲು ಸತ್ಯವಂತರೂ ಮೇಧಾವಿಗಳೂ ಮಂತ್ರ ತತ್ತ್ವವನ್ನರಿತವರೂ ಆದ ಅಂಗಿರಸಾದಿ ಋಷಿಗಳಿಂದ ಮಾತ್ರ ಸಾದ್ಯ ಅದಿತ್ಯನ ಸ್ವರೂಪವೆಷ್ಟು ಗಂಭೀರವೋ ಉಷಸ್ಸಿನ ಸ್ವರೂಪವೊ ಅಷ್ಟೇ ಗಂಭೀರ. ಜಗತ್ಪೂಜ್ಯವಾದ ದಿವ್ಯತತ್ವದ ಪ್ರತೀಕವಾದ್ದರಿಂದ ಇದಂ ಶ್ರೇಷ್ಟಂ ಜ್ಯೋತಿಷಾಂ ಜ್ಯೋತಿಃ ಎಂದು ಈಕೆಯನ್ನು ಪ್ರಶಂಸಿಸಲಾಗಿದೆ. ಈ ವರ್ಣನೆಗಳೆಲ್ಲವೂ ವೇದಾದಿ ಪ್ರಮಾಣ ಗ್ರಂಥಗಳಲ್ಲಿವೆ. ಉಷಾಂಶು: ೧. ರಹಸ್ಯ ಎಂಬ ಅರ್ಥದಲ್ಲಿ ಈ ಪದದ ಪ್ರಯೋಗವನ್ನು ಋಗ್ವೇದದಲ್ಲಿ ಕಾಣಬಹುದು(೧೦;೮೩.೭.) ಮನುಸ್ಕೃತಿಯ ಪ್ರಕಾರ ಇದು ಪ್ರಣವಾದಿ ತ್ರಿವಿಧ ಜಪಯಜ್ಯದ ಒಂದು ಬಗೆ. ಯತ್ಸಮೀಪಸ್ಥೋಪಿ ಪರೋ ನ ಶೃಣೋತಿ ತದುಪಾಂಶು ( ಯಾವುದು ಸಮೀಪದಲ್ಲಿದ್ದವರಿಗೂ ಕೇಳಿಸುವುದಿಲ್ಲವೋ ಅದೇ ಉಪಾಂಶು) ಎಂದು ಇದಕ್ಕೆ ವಿವರಣೆಯನ್ನು ಕೊಟ್ಟಿದ್ದಾರೆ. ಈ ಹೆಸರೂಲಳ್ಳ ಜಪದ ಕ್ರಮ ಹೀಗಿದೆ: ಜಿಹ್ವೋಷ್ಟೌ ಚಾಲಯೇತ್ ಕಿಂಚಿದ್ದೇವತಾಗತಮಾನಸಃ ನಿಜಶ್ರವಣಯೋಗ್ಯಃ ಸ್ಯಾದುಪಾಂಶುಃ ಸ ಜಪೇ ಸ್ಕ್ರತಃ ನಾಲಗೆ ತುಟಿಗಳನ್ನು ಸ್ವಲ್ಪ ಮಾತ್ರ ಚಲಿಸಿ, ಆಯಾ ದೇವತೆಯಲ್ಲಿ ಮಗ್ನವಾದ ಮನಸ್ಸಿನಿಂದ ಕೂಡಿ ತಾನು ಮಾತ್ರ ಆಲಿಸುವಷ್ಟು ಮಾಡಿದ ಜಪವೇ ಉಪಾಂಶು.ಉಪಾಂಶುಜಪ ವಾಚಿಕಜಪಕ್ಕಿಂತ ಹತ್ತರಷ್ಟು ಹತ್ತನೆಯ ಒಂದು ಭಾಗದಷ್ಟೂ