ಪುಟ:Mysore-University-Encyclopaedia-Vol-2-Part-4.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉರಿಲಿಂಗ ದೇವ - ಉರಿಶೀತ ಈ ಯಾಂತ್ರಿಕತೆಗೆ ಕಣದೀಂಟಿಕೆ(ಪೈನೊಸೈಟೋಸಿಸ್)ಎಂದು ಹೆಸರಿದೆ.ಒಳಪೊರೆಯ ಜೀವ ಕಣಗಳ ನಡುವಣ ತೆರಪುಗಳ ಮೂಲಕ ಸಾಗುವುದು ಮೂರನೆಯ ವಿಧಾನ.ಉರಿತದಲ್ಲಿ ಸಣ್ಣಸಣ್ಣ ವಸ್ತುಗಳೂ ಕರಗುವ ಜೋಲಂಟುಗಳೂ ದ್ರವವೂ ಈ ಅಗಲ ತೆರಪುಗಳಲ್ಲಿ ದಾಟುತ್ತವೆ.ಎಲ್ಲ ಬಗೆಗಳ ಬಿಳಿಕಣಗಳೂ ಒಳಪೊರೆಗೆ ಅಂಟಿಕೊಂಡ ಮೇಲೆ,ಈ ತೆರಪುಗಳ ಮೂಲಕ ಹೊರ ಬೀಳುತ್ತವೆ.ಇಷ್ಟಾದರೂ ಬಿಳಿಕಣಗಲು ಅಂಟಿಕೊಳ್ಳುವುದಕ್ಕೂ ಒಳಪೊರೆಯಿಂದ ಹೊರಕ್ಕೆ ನುಸುಳುವುದಕ್ಕೂ ಕಾರಣ ಕಾರಕ ವಸ್ತುಗಳು ಯಾವುದೆಂದು ಗೊತ್ತಿಲ್ಲ.ಉರಿತವೆದ್ದಿರುವ ಜಾಗದಲ್ಲಿ ಏಕಾಣುಜೀವಿಗಳ ಕಡೆಗೆ ಬಿಳಿಕಣಗಳು ಸೆಳೆದುಹೋಗುತ್ತವೆ.ಏಕಾಣುಜೀವಿಗಳನ್ನು ತಾಕಿದ ಕೂಡಲೆ ಅವನ್ನು ಸುತ್ತುವರಿದು ಕಬಳಿಸಿ ಅರಗಿಸಿಕೊಳ್ಳುವುದು.ಕಬಳಿಸುವಾಗ ಬಿಳಿಕಣಗೊಳಗೆ ಏಳುವ ಮುಚ್ಚರಗುಳ್ಳೆಯಲ್ಲಿ(ವ್ಯಾಕ್ಯುಯೋಲ್)ಏಕಾಣುಜೀವಿಗಳು ಸತ್ತು ಕರಗಿ ಹೋಗುವುದು ಸಾಮಾನ್ಯ.ಬಿಳಿಕನಗಳಲ್ಲಿನ ಸಣ್ಣ ಹರಳಂಥ ಕಣಗಳೇ ಏಕಾಣುಜೀವಿಗಳನ್ನು ಸಾಯಿಸಿ ಕರಗಿಸುವ ವಸ್ತುಗಳು.ಏಕಾಣುಜೀವಿ ಮಾರಕ ಬಲವಿರುವ, ಹಿಸ್ಟೋನ್ ಕೂಡ ಸೇರಿದಂತೆ ಹಲವಾರು ಕಾರಕಗಳೂ ಲಯ ದೊಳೆಯೂ(ಲೈಸೊಜೈಮ್)ಈ ಕಣಗಳ ತುಂಬ ಇರುವುವು.ಫಾಸ್ಫೆಟೇಸ್ ಪೆಪ್ಟಿಡೇಸ್,ಪೆರಾಕ್ಸಿಡೇಸ್,ನ್ಯೂಕ್ಲಿಯೋಸೈಡೇಸುಗಳೇ ಮುಂತಾದ ಬೇರೆ ದೊಳೆಗಳು ಬಿಳಿಕಣಗಳ ಈ ಸಣ್ಣ ತಾಣಗಳಲ್ಲಿ ಇರುತ್ತವೆ.ತೀನಿಕಣತೆ ಆಗುವಾಗ ಈ ಕಣಗಳು ಇಲ್ಲವಾಗುತ್ತವೆ.ಇವುಗಳ ದೊಳೆಗಳು ಜೀವಕಣದೊಳಕ್ಕೆ ಬಂದು ಕರಗಿಸುವ ಮುಚ್ಚರಗುಳ್ಳೆಯ ಒಳಹೋಹುವುವು.ಈ ದೊಳೆಗಳಲ್ಲಿ ಬಹುಪಾಲಿನವು ಆಮ್ಲಗಳಲ್ಲಿದ್ದಾಗ ಚೆನ್ನಾಗಿ ಕೆಲಸ ಮಾಡುತ್ತವೆ.ಬಿಳಿಕಣದೊಳಗೆ ಗ್ಲೂಕೋಸ್ ಕೊಂಚ ಪಾಲು ಹಾಲಿನಾಮ್ಲವಾಗಿ(ಲ್ಯಾಕ್ಟಿಕ್ ಆಸಿಡ್)ಜೀವವಸ್ತುಕರಣವಾಗುವುದರಿಂದ ಸಾಮಾನ್ಯವಾಗಿ ಮುಚ್ಚರಗುಳ್ಳೆಯಲ್ಲಿ ಆಮ್ಲ ಗುಣವಿರುವುದು.ನಡುಬೀಜಕ ಬಿಳಿಕಣಗಳಲ್ಲೂ ಎಸ್ಟರೇಸುಗಳು.ಲೈಪೇಸುಗಳೂ ಸೇರಿದಂತೆ ದೊಳೆಗಳು ಇರುವುವು. ಜೀವಕಣದೊಳಗಣ ಅರಗಣೆಯಲ್ಲಿ ಇವೂ ಪಾಲ್ಗೊಳ್ಳುತ್ತವೆ.ಬಿಳಿಕಣಗಳು ಹಾಳಾಗಿ ಒಡೆದಾಗ ಅರಗಿ ಉಳಿದ ವಸ್ತುಗಳೂ ಅವುಗಳ ದೊಳೆಗಳು ಉರಿತವೆದ್ದಿರುವ ಜಾಗದಲ್ಲಿ ಬೀಳುವುದರಿಂದ,ಆ ತಾವಿನಲ್ಲಿ ಕೀವನ್ನು ಕರಗಿಸಿ,ರಕ್ತನಾಳಗಳ ಪ್ರತಿಕ್ರಿಯೆಯನ್ನು ಮುಂದುವರಿಸುತ್ತ ನೇರ್ಪಾಟನ್ನು ಚೋದಿಸುತ್ತವೆ.

ಉರಿತಿದ ಬದಲಿಕೆ:ರಕ್ತನಾಳಗಳೇ ಇರದ ಕೆಳಮಟ್ಟದ ಪ್ರಾಣಿಗಳಲ್ಲಿ ವಲಸೆ,ತೀನಿಕಣತೆ,ಜೀವಕಣದ ರಸಸುರಿತ,ನೇರ್ಪಾಟಿನ ತೆರನ ಕೇವಲ ಜೀವಕಣದ ಪ್ರತಿಕ್ರಿಯೆಯಾಗಿ ಉರಿತ ತೋರುವುದು.ಮೇಲ್ತರದ ಪ್ರಾಣಿಗಳಲ್ಲಿ ಸಿಕ್ಕಿನ ರಕ್ತನಾಳಗಳ ಮಂಡಲ ಇರುವುದರಿಂದ ವಿಶೇಶಿಕ ಕಾಪಿಡುವ ಜೀವಕಣಗಳನ್ನೂ ರಾಸಾಯನಿಕ ವಸ್ತುಗಳನ್ನೂ ಗಾಯವಾಗಿರುವ ಜಾಗಕ್ಕೆ ಬೇಗನೆ ಸಾಗಹಾಕುವಂತಿರಬೇಕು.

ಇನ್ನಷ್ಟು ಹೆಚ್ಚಿಗೆ ವಿಶೇಶಿಕರಣದೊಂದಿಗೆ ನರಗಳ,ಒಳಸುರಿಕ ಗ್ರಂಥಿಗಳ ಮಂಡಲಗಳ ತೆರನ ಬೇರೆ ಹತೋಟಿ ಯಾಂತ್ರಿಕತೆಗಳೂ ಒದಗಿವೆ.ಅಡ್ರಿನಲ್ ಗ್ರಂಥಿಗಳ(ನೋಡಿ)ಒಳಸುರಿಕ ಜೋದನಿಕಗಳು(ಹಾರ್ಮೋನ್ಸ್)ಉರಿತವನ್ನು ಬದಲಿಸಬಲ್ಲವು.ಉದಹರಣೆಗೆ ಅಡ್ರಿನಲಿನನ್ನು ಬೇಕಾದೆಡೆಯಲ್ಲಿ ಚುಚ್ಚಿ ಹೊಗಿಸಿದರೆ ರಕ್ತ ತುಂಬಿಕೊಳ್ಳುವುದನ್ನು ತಪ್ಪಿಸಿ ಸೊನೆವುದನ್ನೂ ಒಂದಿಷ್ಟು ತಗ್ಗಿಸಬಹುದು.ಅಡ್ರಿನಲ್ ರಗಟೆಯ(ಕಾರ್ಟೆಕ್ಸಾ)ಜೋದನಿಕವಾದ ೧೭-ಹೈಡ್ರಾಕ್ಸಿಕಾರ್ಟಿಸೋನ್ ಎಷ್ಟು ಕಾಲಬೇಕಾದರೂ ಉರಿತದ ಪ್ರತಿಕ್ರಿಯೆಯ ಎಲ್ಲ ಹಂತಗಳನ್ನೂ ಅಣಗಿಸಬಲ್ಲದು.ರೋಗಕಾರಕಗಳು ಬದಕಿರುವ ವಿಷಮ ಏಕಾಣುಜೀವಿಗಳಾಗಿರದಿದ್ದಲ್ಲಿ,ಚಿಕಿತ್ಸೆಯಲ್ಲಿ ಈ ಚೋದನಿಕಗಳು ಚನ್ನಾಗಿ ಅನುಕೂಲಿಸುತ್ತವೆ.ಅದರೆ ಏಕಾಣುಜೀವಿಗಳಿದಾದ ಸೋಂಕಿನಲ್ಲಿ ಉರಿತದ ಪ್ರತಿಕ್ರಿಯೆಯ ಒಂದು ಪಾಲನ್ನೋ ಅಲ್ಲವನ್ನೋ ಅಣಗಿಸುವುದರಿಂದ ಕೆಡುಕೂ ಅಗಬಹುದು.

ಉರಿತದಲ್ಲಿ ಕೀಲಿಯಂತಿರುವ ಕೆಲವು ಮೂಲವಸ್ತುಗಳೇ ಇಲ್ಲವಾಗುವುದರಿಂದ ಏಳುವ ಕೆಡಕಿನ ಪರಿಣಾಮಗಳನ್ನು ಕೆಲವರಲ್ಲಿ ಕಾಣಬಹುದು.ಕೆಲವರು ತಲತಲಾಂತರವಾಗಿ ರೋಧವಸ್ತುಗಳನ್ನು ತಯಾರಿಸುವ ಬಲವೇ ಇಲ್ಲವಾಗಿರುವವರು.ಇಂಥವರು ಸೋಂಕುಗಳಿಗೆ ಬಲು ಸುಲಭವಾಗಿ ಈಡಾಹಗುವರು.ರಕ್ತದಲ್ಲಿ ಬಿಳಿಕಣಗಳ ಕೊರೆ ಅತಿಯಾಗಿರುವ ಹರಳುಕಣಾಭಾವದಲ್ಲಿ(ಎಗ್ರಾನುಲೋಸೈಟೋಸಿಸ್)ಸೋಂಕನ್ನು ತಡೆವ ಬಲ ಕುಗ್ಗಿರುವುದು.ಅಂಥ ರೋಗಿಗಳಲ್ಲಿ ಉರಿತವಾದರೆ ಕೀವಿಲ್ಲದ,ಕೇವಲ ರಕ್ತತುಂಬಿಕೂಡು ಊತಕ ಅಳಿಗೊಳೆತ ಅಗುತ್ತದೆ.ಹಲವರಲ್ಲಿ ಉರಿತವೆದ್ದಾಗ ಪ್ರತಿಕ್ರಿಯೆ ಎಲ್ಲೊ ಕೊಂಚವಾಗಿದ್ದರೆ,ಕೆಲವರಲ್ಲಿ ಇದೇ ವಿಪರ್ರೀತವಾಗಿರುವುದು ಇವರು ಹೇರೀಡುವಳಿಯವರು.ಕರಡ ಜ್ವರದಿಂದ ನರಳುವವರು ಬಹುಮಟ್ಟಿಗೆ ಕೀಲುವಾತದ ಜ್ವರ,ಕೀಲುರಿತಗಳ(ಆರ್ತ್ರೈಟೆಸ್)ರೋಗಿಗಳು-ಇಂಥವರಲ್ಲಿ ಈ ತೆರನ ಪ್ರತಿಕ್ರಿಯ ಕಾಣುವುದು. (ಡಿ.ಎಸ್.ಎಸ್)

ಉರಿಲಿಂಗ ದೇವ:ಸು.೧೧೭೦,ಬಸವಾಡಿ ಮಹಾಶರಣರಲ್ಲಿ ಒಬ್ಬ.ಶರಣಸತಿ,ಲಿಂಗಪತಿ ಹೊಂದಿದ್ದ ನೈಷ್ಟಿಕ ಬ್ರಹ್ಮಚಾರಿ,ಆಚಾರ್ಯಪುರುಷ.ಕಾಶ್ಮೀರದಿಂದ ಬಂದು ಕಲ್ಯಣದಲ್ಲಿ ನೆಲೆಸಿದ ಮಹಾಪಂಡಿತ ಶಿವಲೆಂಚಣ್ನನ ಮಗನೆಂದು ನೀಲಕಂಠಾಚಾರ್ಯನ(ಸು.೧೪೮೫)ಅರಾಧ್ಯಚಾರಿತ್ರದಲ್ಲಿ ಹೇಳಿವೆ.ಈತ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಕಂದಹಾರ್(ಕಂಧಾರ್,ಕೊದಾಪುರ)ಪಟ್ಟಣದಲ್ಲಿ ಮಠಾಧಿಪತಿಯಾಗಿದ್ದ.ಮಹಾಕ್ರಾಂತಿಕಾರ.ಗೋದಾವರರೀ ತೀರಪ್ರದೇಶದಲ್ಲಿ ವೀರಶೈವ ಜಾಗ್ರತಿಯ ಗುರುತರ ಹೊಣೆ ಹೊತ್ತು ಅನೇಕರಿಗೆ ವೀಶೈವೋಪದೇಶ ಮೂಡಿದ.ಕಲ್ಯಾಣದಲ್ಲಿ ಬಸವಾದಿ ಪ್ರಮಥರು ಹರಳಯ್ಯ ಮತ್ತು ಮಧುವರಸರಿಗೆ ಲಿಂಗದೀಕ್ಷೆಯಿತ್ತು ಶರೀರಸಂಬಂಧ ಮಾಡಿಸಿದರೆ ಪೆದ್ದಣ್ನ(ನೋಡಿ-ಉರಿಲಿಂಗ-ಪೆದ್ದಿ)ಮತ್ತು ಕಾಳವ್ವೆಯರೆಂಬ ಅಸ್ಪ್ರಶ್ಯರಿಗೆ ಉರಿಲಿಂಗದೇವ ವೀರಶೈವೋಪ ದೇಶವಿತ್ತು ಶಿವಾನುಭವ ಶಾಸ್ತ್ರಕೋವಿದತರನ್ನಾಗಿಸಿದ.ಅಷ್ಟೆ ಅಲ್ಲದೆ ಪೆದ್ದಣ್ಣನಿಗೆ ಮಠಾಧ್ಯಕ್ಷ ಪದವಿಯನ್ನು ದಯಪಾಲಿಸಿದ.ವಿರೋಧಿಗಳು ಈತ ವಾಸಿಸುತ್ತಿದ್ದ ಚಪ್ಪರಕ್ಕೆ ಬೆಂಕಿ ಹಾಕಿ ಸುಟ್ಟರು.ಆದರು ಈತ ಧೃತಿಗೆದಲಿಲ್ಲಿ.ತನ್ನ ಶಿಷ್ಯಕೋಟಿ ಸಮೇತನಾಗಿ ಈತ ಅಗಾಗ ಕಲ್ಯಾಣಪಟ್ಟಣಕ್ಕೆ ಹೋಗಿ ಬರುತ್ತಿದ್ದನೆಂದು ಹಲವು ಗ್ರಂಥಗಳಿಂದ ತಿಲಿಯುತ್ತದೆ.ಈತ ರಚಿಸಿದ ೨೯ ವಚನಗಳು ಉಪಲಬ್ಧವಿವೆಯೆಂದೂ ವಚನಗಳ ಕೊನೆಯಲ್ಲಿ ಉರಿಲಿಂಗದೇವ ಎಂಬ ಮುದ್ರಿಕೆ ಇದೆಯೆಂದೂ ಕವಿಚರಿತಕಾರರು ತಿಲಿಸುತ್ತಾರೆ. (ಜೆ.ಎಸ್.ಪಿ.ಎಂ.)

ಉರಿಲಿಂಗ ಪೆದ್ದಿ:ಸು.೧೧೮೦.ಉರಿಲಿಂಗ ದೇವನ(ನೋಡಿ-ಉರಿಂಗ-ದೇವ)ಶಿಷ್ಯ ಆಂಧ್ರ ಪ್ರದೇಶದವ.ಪೂರ್ವಶ್ರಮದಲ್ಲಿ ಪೆದ್ದಣ್ಣನೆಂಬ ಹೆಸರು ಹೊಂದಿದ್ದು ಕುಪ್ರಸಿದ್ಧ ಕಳ್ಳನಾಗಿದ್ದ.ಉರಿಲಿಂಗದೇವ ನಂದವಾಡದ ಸೂರಯ್ಯನಿಗೆ ವೀರಶೈವೋಪದೇಶ ಕಳ್ಳತನಕ್ಕಾಗಿ ಅದೇ ಮನೆಗೆ ಹೋಗಿದ್ದ ಪೆದ್ದಣ್ಣ ಕುತೂಹಲದಿಂದ ದೀಕ್ಷಾರ್ಯವನ್ನು ನೋಡಿ ಮನಃಪರಿವರ್ತನೆಗೊಂದನಂತೆ.ಅಂದಿನಿಂದ ಹನ್ನೆರಡು ವರ್ಷಕಾಲ ಉರಿಲಿಂಗದೇವನ ಮಠಕ್ಕೆ ಯಾರಿಗೂ ತಿಲಿಯದಂತೆ ಸೌದೆ ತಂದು ಹಾಕುತ್ತಿದ್ದನಂತೆ.ಒಮ್ಮೆ ಉರಿಲಿಂಗದೇವನಿಗೆ ಸೆಕ್ಕಿಬಿದ್ದು ಉರುವಲಿನ ಬೆಲೆ ತೆಗೆದುಕೋ ಎಂದು ಒತ್ತಾಯಪದಿಸಿದಾಗ ಸೂರಯ್ಯನಿಗೆ ಕೊಟ್ಟಂಥ ದೀಕ್ಷೆಯನ್ನು ನನಗೂ ಕೊಡಿ-ಎಂದು ಬೇಡಿದನಂತೆ.ಅಂದಿನಿಂದ ಗುರು ಹೋದ ಬೊಂದ ಕಡೆಯಲ್ಲೆಲ್ಲಾ ದೀಕ್ಷೆಗಾಗಿ ಕಾಡತೊಡಗಿದಾಗ ಗುರುವಿಗೆ ಬೇಸರವಾಗಿ ಫೇದಗಡಿ ಜಾ ಜಾದಗಡಿ ಜೆ.ತೆಗೆದುಕೋ ಈ ಕಲ್ಲನ್ನು,ಹೊರಟು ಹೋಗು-ಎಂದು ಹೇಳಿ ಒಂದು ಕಲ್ಲು ತೆಗೆದು ಎಸೆದನಂತೆ.ಪೆದ್ದಣ್ಣನ ಶುದ್ಧ ಭಕ್ತಿಯಿಂದ ಕಲ್ಲು ಲಿಂಗವಾಯಿತು.ಶ್ರದ್ಧೆಯಿಂದ ಮಾತು ಮಂತ್ರವಾಯಿತು.ಅದೇ ಊರಿನ ಅರಸ ನಂದರಾಜ ಕೆರೆಯೊಂದನ್ನು ತೆಗೆಸುತ್ತಿದ್ದು,ಬಂಡೆ ಸಿಕ್ಕಿ ಅದನ್ನು ತೆಗೆಯದ ಹೊರತು ನೀರು ಬರುವುದಿಲ್ಲೆವೆಂದು ತಿಳಿದು ಉರಿಲಿಂಗದೇವನಿಗೆ ಶರಣಾದ.ಗುರುವಿನ ಅಪ್ಪನೆಯಂತೆ ಪೆದ್ದಣ್ಣ ಅ ಬಂಡೆಯನ್ನು ಒಡೆದನೆಂದೂ ಅವನ ಇಷ್ಟಲಿಂಗವೇ ಲಿಂಗದೀಕ್ಷೆ ಕೋಟ್ಟು ಉರಿಲಿಂಗ ಪೆದ್ದಿಯೆಂದು ನಾಮಕರಣ ಮಾಡಿ,ಮುಂದೆ ಆತನನ್ನೇ ತನ್ನ ಪೀಠಕ್ಕೆ ಕುಳ್ಳಿರಿಸಿದ.ಈ ಕಥೆ ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯ,ಬ್ಸವಕವಿಯ ಮಹಾಲಿಂಗಲೀಲೆಗಳಲ್ಲಿ ಸೂಚೆತವಾಗಿದೆ.ಪೆದ್ದಿ ಗೃಹಸ್ಥ.ಈತನ ಸತಿ ಪ್ರಸಿದ್ಧ ಶರಣೆ ಹಾಗೂ ವಚನಕಾರ್ತಿಯಾದ ಕಾಳವ್ವೆ.ಈತನ ವಚನಗಳಿಂದ ಈತ ಮಹಾವಿದ್ವಾಂಸನೂ ಹಲವಾರು ಶಾಸ್ತ್ರಪಾಂಡಿತ್ಯವನೂ ವೇದವಿದ್ಯಾವೈದುಷ್ಯ ಪ್ರಪೂರ್ಣನೂ ಶಿವಾನುಭವ ಚರ್ಯಾಕಾಂಡ ಪಂಡಿತನೂ ಅಗಿದ್ದುದು ಕಂಡುಬರುತ್ತದೆ.ಕೆಲವು ವಚನಗಳು ೨-೩ ಪುಟಗಳಷ್ಟು ದೀರ್ಫವಾಗಿದ್ದು ವೇದ,ಶಾಸ್ತ್ರ,ಪುರಣ,ಆಗಮ,ಉಪನಿಷತ್ ಮೊದಲಾದ ಧರ್ಮಗ್ರಂಥಗಳ ಪ್ರಮಾಣವಾಕ್ಯ ಭೂಯಿಷ್ಠವಾಗಿವೆ.ಇವನದು ಜ್ಞಾನೋಪಾಸನೆಯ ತೈಜಸ ಜೀವನ.ಇವನ ವಚನಗಳಲ್ಲಿ ಉರಿಲಿಂಗ ಪೆದ್ದ ಪ್ರಿಯ ವಿಶ್ವೇಶ್ವರ ಎಂಬ ಅಂಕಿತವಿದೆ.ವಚನ ರಚನೆಯಲ್ಲಿ ಈತ ಗುರುವನ್ನು ಮೀರಿಸಿದ ಶಿಷ್ಯ ಲಿಮ್ಗಲೀಲಾವಿಲಾಸಚಾರಿತ್ರ,ಗುಬ್ಬಿಮಲ್ಲಣಾರ್ಯ ಗಣಭಾಷ್ಯರತ್ನಮಾಲಾ,ಅರ್.ಅರ್.ದಿವಾಕರರ ವಚನ ಶಾಸ್ತ್ರರಹಸ್ಯಗಳಲ್ಲಿ ಈತನ ವಚನಗಳು ಉದ್ಧ್ರತವಾಗಿವೆ.ಪಾಲ್ಕುರಿಕೆಯ ಸೋಮನಾಥನ(ಸು.೧೧೯೫)ಸಹಸ್ರಗಣನಾಮದಲ್ಲಿ ೩೫೦ ಅಮರಗಣಗಳಲ್ಲಿ ಬಸವ,ಚನ್ನಬಸವರ ಹೆಸರುಗಳ ಜೊತೆ ಉರಿಲಿಂಗ ಪೆದ್ದಿಯಹೆಸರಿದೆ.ಫ.ಗು.ಹಳಕಟ್ಟಿಯವರು ಈತನ ೧೪೯ ವಚನಗಳುನ್ನು ಸಂಗ್ರಹಿಸಿದ್ದಾರೆ(೧೯೩೬).ತನ್ನ ಗುರುವಿನ ಮರಣದಿಂದ ಬೇಸರಹೊಂದಿದ ಪೆದ್ದಿ ಕಲ್ಯಣ ಪಟ್ಟಾಣಕ್ಕೆ ಬಂದು ತನ್ನ ಕೊನೆಯ ದಿನಗಳನ್ನು ಅಲ್ಲೇ ಕಳೆದಂ ಕಾಣುತ್ತದೆ.ಅಲ್ಲಿ ಇವನದೊಂದು ಮಠವೂ ಸಮಾಧಿಯೂ ಇದೆಯೆಂದು ಹೇಳುತ್ತಾರೆ.ಕಲ್ಯಾಣ ಸೇಡಮದ ಹತ್ತಿರದ ಕೊರಳಿ,ಬೇವಿನ ಚಿಂಚೋಳಿ ಮತ್ತು ಭಕ್ತರೆಂದೂ ಮಠಾಧಿಕಾರಿಯಾದದ್ದು ಭಾರತದ ಇತಿಹಾಸದಲ್ಲೇ ಒಂದು ಕ್ರಾಂತಿಕಾರಕ ಘಟನೆ. (ಜೆ.ಎಸ್.ಪಿ.ಎಂ.)

ಉರಿಶೀತ:ಅಲಸಿಕೆ,ಜ್ವರ,ಸ್ನಾಯುಗಳಲ್ಲಿ ನೋವು ಚಳುಕು,ಮೂಗು ಕಟ್ಟುವಿಕೆ,ಕಣ್ಣುರಿ,ತಲೆನೋವು ಇವು ಇದ್ದಕ್ಕಿದ್ದ ಹಾಗೆ ತೋರುವ ವಿಷಕಣದ(ವೈರಸ್)ಬೇನೆ(ಇನ್ ಫ್ಲೂಯೆಂಜ಼).ಇದನ್ನು ಫ್ಲೂ ಎನ್ನುವುದೂ ಉಂಟು.ನೆಗಡಿಯ ಪ್ರಭಾವದಿಂದ(ಇನ್ ಫ್ಲೂಯೆನ್ಸ್)ಇದು ಬರುವುದೆಂದು.ಇನ್ ಫ್ಲೂಯೆಂಜ಼ ಎಂಬ ಇಟಾಲಿಯನ್ ಪದವನ್ನು ಬಳಸಿದವ ಜನ್ ಹಕ್ಸಹ್ಯಂ(೧೭೪೩).ಬಿರುಗಾಳಿಗಳು ಉರಿಶೀತವನ್ನು ಹೊತ್ತು ತರುವುವೆಂದು ೧೮೯೦ರ ತನಕ ನಂಬಿಕ ಇತ್ತು.ಒಂದಿಷ್ಟು ಕೆಮ್ಮು,ಗಂಟಲ ನೋವು ತೋರಿ,೩-೪ ದಿನಗಳಲ್ಲಿ ಇಳಿದು ಹೋಗುವುದೇ ಸಾಮಾನ್ಯ.ಅಷ್ಟಕ್ಕೇ ನಿಲ್ಲದೆ,ರೋಗ