ಪುಟ:Mysore-University-Encyclopaedia-Vol-2-Part-4.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಷ್ಣವಲಯದ ವ್ಯವಸಾಯ ಹಳದಿ ಜ್ವರ, ಡೆಂಗೆ, ಕಾಳಜ್ವರ(ಕಾಲಾ ಅಚಾರ್) ಮಲೇರಿಯ, ಎಳೆಕೀಟ ಬೇನೆ(ಫೈಲೇರಿಯಾಸಿಸ್) ಇವು ಸೊಳ್ಳೆಗಳ ಕಡತದಿಂದಲೂ ಉಣ್ಣೆ ಹೇನುಗಳು ಕಡಿಯುವುದರಿಂದಲೂ ಸೊಕ್ಕಿನ(ಟೈಫಸ್) ಜ್ವರವೂ ಕ್ಯಾಸನೂರು ಕಾಡಿನ ಜ್ವರವೂ ಬರುತ್ತವೆ. ಸಣ್ಣ ಪ್ರಾಣಿಗಳಿಂದ ಹರಡುವ ರೋಗಗಳೂ ಹಲವಾರಿವೆ: ಇಲಿಗಳು ಪ್ಲೇಗನ್ನು ರೋಗಿಯಿಂದ ಚೆನ್ನಾಗಿರುವವರಿಗೆ ಹರಡುತ್ತದೆ. ಕುಂದಿಲಿ ಜ್ವರ(ಟ್ಯುಲೆರೀಮಿಯ) ಕುಂದಿಲಿಗಳಿಂದಲೂ ಪುರುಳಿಬೇನೆ(ಸಿಟ್ಟಕೋಸಿಸ್) ಗಿಣಿಗಳಿಂದಲೂ ಆಡು, ದನ, ಹಂದಿಗಳಿಂದ ಬ್ರೂಸೆಲ್ಲಬೇನೆಯೂ(ಬ್ರೂಸೆಲ್ಲ) ದನ ಕುರಿಗಳಿಂದ ನೆರಡಿ(ಆಂತ್ರಾಕ್ಸ್) ರೋಗವು ಹಂದಿಗಳಿಂದ ನೀರ್ದೋಟ್ಟು ಜಿಟ್ಟೆಯೂ(ಹೈಡ್ಯಾಟಿಡ್ ಸಿಸ್ಟ್) ಬಾವಲಿ, ನರಿ, ನಾಯಿ ಕಡಿತಗಳಿಂದ ನಾಯಿ ಹುಚ್ಚೂ(ಹೈಡ್ರೋಫೋಬುಯ) ಬರುವುವು. ರಕ್ತ ಕೊರೆ, ಆಹಾರ ಕೊರೆ: ಉಷ್ಣವಲಯದ ರಕ್ತಕೊರೆಗೆ (ಅನೀಮಿಯ) ಹಲವಾರು ಕಾರಣಗಳಿವೆ. ಬಡತನದೊಂದಿಗೆ ದೊಡ್ಡ ಕುಟುಂಬವಿದ್ದರೆ ಆಹಾರ ಸಾಕಷ್ಟು ಎಲ್ಲರಿಗೂ ಸಿಗದೆ, ಪುಷ್ಟಿಗೆಟ್ಟು, ಆಹಾರದಲ್ಲಿ ಇರಬೇಕಾದ ಕಬ್ಬಿಣ, ಪ್ರೋಟೀನುಗಳು, ಜೀವಾತುಘಳ ಕೊರತೆಯಿಂದ ಬರಬಹುದು. ಯೋಜನೆಯಿಲ್ಲದ ಕುಟುಂಬ ವೃದ್ಧಿಯಿಂದ ಹೆಂಗಸು ಬಡಕಲಾಗಿ ಕ್ಷಯದ ತೆರನ ಮೇಹ ರೋಗಗಳಿಗೆ ಈಡಾಗುವಳು. ಕರುಳುಗಳಲ್ಲಿ ಕೊಕ್ಕೆ ಹುಳುಗಳು ಸೇರಿಕೊಂಡು ಗುಣಿತವದ ಮೇಲೆ ಒಳಗೇ ರಕ್ತ ಹೀರಿಬಿಡುವುದದರಿಂದಲೂ ರಕ್ತ ಕೊರೆ ಆಗುವುದು ಸಾಮನ್ಯ. ರಕ್ತ ಕೊರೆಗೆ ಮಲೇರಿಯ ಒಂದು ಸಾಮಾನ್ಯ ಕಾರಣವಾಗಿತ್ತು. ಪ್ರೋಟಿನುಗಳ, ಮುಖ್ಯವಾಗಿ ಪ್ರಾಣಿಜನ್ಯ ಪ್ರೋಟೀನುಗಳ ಕೊರೆಯಿಂದ ಬಡ ಕೂಸುಗಳಲ್ಲಿ ಕ್ಷಾಷಿಯಾರ್ಕರ್ ಬರುತ್ತದೆ. ದೊಡ್ಡವರಲ್ಲಿ ಉಷ್ಣವಲಯದ ಭೇದಿ(ಸ್ಟ್ರೂ) ಈಲಿಯ ಅರಿಶಿನಾರಿಗೆ(ಲಿವರ್ ಸೆರೋಸಿಸ್) ಇವು ಹೆಚ್ಚು ಜೀವಾತುಗಳ ಮಿತಿಮೀರಿದ ಕೊರೆಯಿಂದೇಳುವ ಕಾಯಿಲೆಗಳೆಲ್ಲ ಉಷ್ಣವಲಯದಲ್ಲಿ ಅಪಾರ. ಬಡವರಲ್ಲೇ ಅಲ್ಲದೆ ಬಲ್ಲಿದರಲ್ಲೂ ಈ ಕೊರೆಗಳು ಕಾಣಬರುತ್ತವೆ. ಬಡಬಡಕಲು(ಬೆರಿಬೆರಿ), ಕಾರ್ದೋಗಲು (ಪೆಲ್ಲಾಗ್ರ), ಕೈಕಾಲು ಉರಿ, ಬಾಯಿಹುಣ್ಣು, ನರ ದುರ್ಬಲತೆಗಳೂ ನೀಚಗೊರೆ(ಸ್ಕರ್ವಿ) ಎಲುಮುರುಟು(ರಿಕೆಟ್ಸ್), ಪಾರಪಟಲ ಮೆತುವೆ(ಕೆರಾಟೊಮೆಲೇಸಿಯ) ಇವು ಜೀವಾತುಗಳ ಕೊರೆಯಿಂದಾದ ಕಾಯಿಲೆಗಳು. ಸುಣ್ಣಾಂಶದ ಕೊರೆಯಿಂದ ಎಲುಕಳಲು (ಆಸ್ಟಿಯೊಮೇಲೇಸಿಯ) ಬಸುರಿ, ಬಾಣಂತಿಯರಲ್ಲಿ ಹೆಚ್ಚು. ಪ್ರಪಂಚದ ಉಳಿದೆಡೆಗಳಲ್ಲಿ ಕಾಣಬರುವ ಗುಂಡಿಗೆ, ಕೀಲುರೋಗಗಳು ರಕ್ತನಾಳ ಬೇನೆಗಳು, ರಕ್ತದ ಒತ್ತದವೇರಿಕೆ, ಸಿಹಿಮೂತ್ರ, ಪುಪ್ಪುಸದ ಕಾಯಿಲೆಗಳು, ನರಗಳ ಬೇನೆ, ಏಡಿಗಂತಿಗಳು, ಇಲ್ಲೂ ಇವೆ. (ಆರ್.ಡಿ.ಎಂ) ಉಷ್ಣವಲಯದ ವ್ಯವಸಾಯ: ಕರ್ನಾಟಕ ಸಂಕ್ರಾಂತಿ (ಟ್ರಾಪಿಕಲ್ ಅಗ್ರಿಕಲ್ಚರ್) ವ್ರುತ್ತಕ್ಕೂ ಮಕರ ಸಂಕ್ರಾಂತಿ ವೃತ್ತಕ್ಕೂ ನಡುವೆ ಇರುವ ಪ್ರದೇಶವಾದ ಉಷ್ಣವಲಯದಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಕೃಷಿಕಾರ್ಯಮ್ ಪಷುಪೋಷಣೆ (ಟ್ರಾಪಿಕಲ್ ಅಗ್ರಿಕಲ್ಚರ್) ಭೂಮಿಯ ಒಟ್ಟು ನೆಲದ ವಿಸ್ತೀರ್ಣದಲ್ಲಿ ಸುಮಾರು ಕಾಲು ಭಾಗ ಉಷ್ಣವಲಯದಲ್ಲಿದೆ. ಇಡೀ ವಿಶ್ವದ ಪ್ರಜಾಸಂಖ್ಯೆಯ ಮೂರರಲ್ಲೊಂದು ಭಾಗ ವಾಸಿಸುವುದು ಈ ವಲಯದಲ್ಲಿ. ಈ ಜನರಲ್ಲಿ ಬಹುಸಂಖ್ಯಾತರಿಗೆ ಬೇಸಾಯದಿಂದಲೇ ಜೀವನ. ಆದ್ದರಿಂದ ಉಷ್ಣವಲಯದ ವ್ಯವಸಾಯದ ಪ್ರಾಮುಖ್ಯ ಎಷ್ಟೆಂದು ಹೇಳಬೇಕಾಗೇ ಇಲ್ಲ. ಉಷ್ಣವಲಯದ ವಾಯುಗುಣವನ್ನು ಎಷ್ಟು ಖಚಿತವಾಗಿ ಗುರುತಿಸಬಹುದೋ ಅಷ್ಟೇ ಕಚಿತವಾಗಿ ಇಲ್ಲಿನ ಬೇಸಾಯವನ್ನೂ ಗುರುತಿಸುವುದು ಸಾಧ್ಯ. ಉಷ್ಣವಲಯದ ಬೇಸಾಯ ಪ್ರದೇಶಕ್ಕೂ ಅಧಿಕ ಅಕ್ಷಾಂಶದ ಪ್ರದೇಶಕ್ಕೂ ನಡುವೆ ಸಾಮಾನ್ಯವಾಗಿ ಪರ್ವತಶ್ರೇಣಿಗಳೂ ಮರುಭೂಮಿಗಳೂ ಅಡ್ಡ ಹಾಯ್ದಿವೆಯಾದ್ದರಿಂದ ಈ ಬೇಸಾಯ ಪ್ರದೇಶ ಇತರ ವಾಯುಗುಣಗಳ ವ್ಯವಸಾಯ ಪ್ರದೇಶಗಳಿಗಿಂತ ಪ್ರತ್ಯೇಕವಾಗಿದೆ. ಅದರೆ ಬ್ರೆಜಿಲ್, ಭಾರತ, ಚೀನಗಳಲ್ಲಿ ಈ ಬಗೆಯ ಪ್ರತ್ಯೇಕತೆ ಇಲ್ಲವಾದ್ದರಿಂದ ಅಲ್ಲಿ ಇದು ಎಲ್ಲಿ ಕೊನೆಗೊಳ್ಳೂವುದೆಂದು ನಿಷ್ಪಷ್ಟವಾಗಿ ನಿರ್ಣಯಿಸುವುದು ಕಷ್ಟಸಾಧ್ಯ. ಉಷ್ಣವಲಯದ ಬೆಳೆಗಳೂ ಬೇಸಾಯ ಪದ್ಧತಿಗಳೂ ಈ ವಲಯದ ಹೊರಗಿನ ಪ್ರದೇಶಗಳಲ್ಲೂ ಅಲ್ಲಲ್ಲಿ ಕಂಡುಬರುವುದುಂಟು. ಉಷ್ಣವಲಯದ ಹವಾಗುಣ ಪ್ರಾಣಿಗಳಿಗೂ ಸಸ್ಯಗಳಿಗೂ ಬಲು ಉತ್ತೇಜಕ. ಇವು ಇಲ್ಲಿ ವರ್ಣವೈವಿಧ್ಯಪೂರಿತವಾಗಿವೆ. ಆದರೆ ಒಂದೊಂದು ಪ್ರದೇಶದಲ್ಲೂ ಹಲವಾರು ಅಥವಾ ಎಲ್ಲ ಬಗೆಯ ಬೆಳೆ ತೆಗೆಯುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಅನುಗುಣವಾದ ಪರಿಸರ(ಎನ್ವಿರಾನ್ಮೆಂಟ್) ಇಲ್ಲಿ ಕಂಡು ಬರುವುದಿಲ್ಲ. ಉಷ್ಣತೆಯೇನೋ ಇಲ್ಲಿ ಅನುಕೂಲಕರ. ಎತ್ತರ ಪ್ರದೇಶಗಳಲ್ಲಿ ಸಮಶೀತೋಷ್ಣವಲಯದ ಫಸಲು ತೆಗೆಯಬಹುದು. ಏನೂ ಬೆಳೆಯದಷ್ಟು ಚಳಿಯಿರುವ ಎತ್ತರ ಪ್ರದೇಶ ಬಲು ಕಡಿಮೆ, ಮಾರಕ ಹಿಮ ಬೀಳುವ ಸ್ಥಳಗಳೂ ಅತ್ಯಲ್ಪ: ಉಷ್ಣವಲಯ ಪ್ರದೇಶದಲ್ಲಿ ವರ್ಷಪೂರ್ತಿ ಉಷ್ಣತೆಯ ವ್ಯತ್ಯಾಸ ಕಡಿಮೆ. ಹಗಲು ರಾತ್ರಿಗಳು ಉಷ್ಣದ ಅಂತರ ಕೆಲವೆಡೆಗಳಲ್ಲಿ ಹೆಚ್ಚು. ಹೆಚ್ಚು ಮಲೆ ಬೀಳುವ ಪ್ರದೇಶದಲ್ಲಿ ಮಳೆಯ ಹೊಡೇತದಿಂದ ನೆಲದ ಲವಣಾಂಶ ಕೊಚ್ಚಿ ಹೋಗಿರುವುದುಂಟು. ಮಳೆಯ ನೀರಿನಿಂದ ಎಲೆ, ಮೊದಲಾದವು ಕೊಳೆತು ಗಿಡದ ಬೇರಿಗೆ, ಸೇರುತ್ತದೆ. ಅನೇಕ ಕಡೆಗಳಲ್ಲಿ ವರ್ಷವೆಲ್ಲ ಮಳೆ. ಹೆಚ್ಚಾಗಿ ಮಳೆ ಬೀಳುವಲ್ಲಿ ಗಿಡಗಂಟೆ ಸೊಂಪಾಗಿ ಬೆಳೆದಿರುವುದುಂಟು. ಆದರೆ ಬೇಸಾಯಕ್ಕೆ ಅನುಕೂಲ ಕಡಿಮೆ. ಅಧಿಕ ಮಳೆ ಮತ್ತು ಹೆಚ್ಚು ಉಷ್ನತೆಯಿರುವುದರಿಂದ ಸಸ್ಯಗಳು ವರ್ಷವಿಡೀ ಬೆಳೆಯುತ್ತಲೇ ಇರಲು ಅನುಕೂಲವಿದೆ. ಅಂಥ ಪ್ರದೇಶಗಳಲ್ಲಿ ದಟ್ಟಕಾಡುಗಳು ಬೆಳೆಯುವುದು ಸಹಜ.ಬೆಳೆಸಿನ ತೀವ್ರತೆ ಸಮಶೀತೋಷ್ಣವಲಯಕ್ಕಿಂತೆ ಹೆಚ್ಚು. ಇಲ್ಲಿ ನೆಲದ ಮೇಲೆ ಹರಡುವ ಎಲೆ ಕಸಕಡ್ಡಿಗಳು ಬಹುಕಾಲ ಹಾಗೇ ಉಳಿಯದೆ ಸೋಕ್ಶ್ಮಾಣುಗಳ ಸಹಾಯದಿಂದ ಸಸ್ಯ ಆಹಾರಾಂಶಗಳಾಗಿ ಮಾರ್ಪಾಟಾಗಿ, ಅದೇ ಸಸ್ಯಗಳ ಬೆಳೆವಣಿಗೆಗೆ ಪೋಷಕವಾಗುತ್ತದೆ. ಇದರಿಂದಲೇ ಫಲವತ್ತು ಕ್ಷಯಿಸದೆ ಹಾಗೇ ಉಳಿದಿರುವಂತೆ ತೋರಿ, ಅಲ್ಲಿಯ ಭೂಪ್ರದೇಶ ಅತ್ಯಂತ ಫಲವತ್ತೆಂಬ ಭ್ರಮೆಯಾಗುತ್ತದೆ. ಆದರೆ ಅದು ನಿಜವಲ್ಲ, ಫಲವತ್ತು ದಟ್ಟವಾಗಿ ಮರ ಗಿಡಗಳನ್ನು ಬೆಳೆಸಿದರೆ ಮಾತ್ರ ಸಾಧ್ಯ ಅವನ್ನು ಕಡಿದು ನಾಶಪಡಿಸಿದಲ್ಲಿ ಗೊಬ್ಬರವಾಗಲು ಸಾಕಾದಷ್ಟು ಸಾವಯವ ಸಾಮಗ್ರಿ ದೊರಕದೆ ಯಾವುದೇ ಬೆಳೆಸು ಕುಂಠಿತವಾಗುತ್ತದೆ. ಆದ್ದರಿಂದಲೇ ಅನೇಕ ವ್ಯವಸಾಯ ಯೋಜನಗಳು ಇಲ್ಲಿ ನಿಷ್ಫಲವಾಗುತ್ತವೆ. ಅತೀವ ಮಳೆ ಮತ್ತು ಉಷ್ಣತೆ, ಕೀಟ ಮತ್ತಿತರ ಉಪದ್ರವಕಾರಿಗಳ ವೃದ್ಧಿಗೆ ಅನುಕೂಲವಾಗಿ ಜನ ಮತ್ತು ಜಾನುವಾರುಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಉಷ್ಣವಲಯದಲ್ಲಿ ಜ್ವಾಲಾಮುಖಿಗಳಿಂದ ಉತ್ಪನ್ನವಾದ ಜಾವಾದ ಕೆಲಭಾಗ, ಫಿಲಿಪೀನ್ಸ್, ಮಧ್ಯ ಅಮೆರಿಕ ಮುಂತಾದೆಡೆ ಆಡಿಯಲ್ಲಿ ಲಾವಾರಸದ ಕಲ್ಲುಗಳಿಂದ ಮೇಲಿನ ಪೋಷಕಾಂಶಗಳು ತೂರಿ ಹೋಗದೆ ಫಲವತ್ತಾಗಿ ಉಳಿದು ಉತ್ತಮ ವ್ಯವಸಾಯ ಯೋಗ್ಯ ಪ್ರದೇಶಗಳಾಗಿವೆ. ಅಲ್ಲದೆ ಅದೇ ಪ್ರದೇಶದಲ್ಲಿ ಎತ್ತರಕ್ಕೆ ಹೋದಂತೆ ವಾಯುಗುಣ ಮಾರ್ಪಟ್ಟು ಸಮಶೀತೋಷ್ಣವಾಗಿ, ಉಷ್ಣವಲಯದಲ್ಲಿದ್ದರೂ ಸಮಶೀತೋಷ್ಣವಲಯಕ್ಕೆ ಒಗ್ಗುವ ಸಸ್ಯಗಳೇ ಬೆಳೆಯುತ್ತವೆ. ಆದರೆ ಅಲ್ಲಿನ ಹಗಲು ರಾತ್ರಿಗಳ ಹವಾಗುಣಗಳ ಅಂತರ ಹೆಚ್ಚಾಗಿರುವುದರಿಂದ ಸ್ವಲ್ಪ ಮಾರ್ಪಾಟು ಹೊಂದಿರುತ್ತವೆ. ಇದರಿಂದಲೇ ಈ ಪ್ರದೇಶದಲ್ಲಿ ಬೆಳೆಯ ವೈವಿಧ್ಯ ಅಧಿಕ, ತೆಂಗು, ಅಡಿಕೆ, ಕೋಕೋ, ಕಬ್ಬು, ಸಣಬು, ಮನಿಲಾ ಮತ್ತು ಇತರ ನಾರುಗಳು, ವಿವಿಧ ಔಷಧ ಸಸ್ಯಗಳು, ಕೀಟನಾಶಕ ಗಿಡಗಳು ಮೆಣಸು, ಲವಂಗ, ಜಾಯಿಕಾಯಿ, ದಾಲ್ಚಿನ್ನಿ ಮುಂತಾದ ಸಂಬಾರ ಪದಾರ್ಥಗಳೂ, ವಿವಿಧ ಎಣ್ಣೆ ಉತ್ಪಾದಕ ವ್ರುಕ್ಷ ಮತ್ತು ಸಸ್ಯಗಳೂ ಬತ್ತ ಮುಂತಾದ ಧಾನ್ಯಗಳೂ ವಿಪುಲವಾಗಿ ಬೆಳೆಯುತ್ತವೆ. ಮನೆಗೆ ಉಪಯುಕ್ತವಾದ ವಿವಿಧ ಜಾತಿ ಮರಗಳು-ಬೀಟೆ, ಸಾಗುವಾನಿ, ಮಹಾಗನಿ-ಇಲ್ಲಿ ಹೆಚ್ಚು ರಬ್ಬರ್, ಗಟಪರ್ಚ, ಡೆಕಲ್ ಅಂಬು, ರಾಳ, ಅರಗು ಮುಂತಾದವು ಇಲ್ಲಿನ ಮುಖ್ಯ ಉತ್ಪನ್ನು ಪರಂಗಿಗಳು, ಬಾಳೆ, ಅನಾನಸ್, ದೂರಿಯಾನ್, ಮಾಂಗೊಸ್ಟೀನ್, ಮಾವು, ಹಲಸು ಮುಂತಾದ ಬಹು ಜನಪ್ರಿಯ ಹಣ್ಣುಗಳ ವೈವಿಧ್ಯ ಉಷ್ಣವಲಯದಲ್ಲಿ ಮಾತ್ರ ಸಾಧ್ಯಃ ಹಾಗು ಅನುಕೂಲತೆ ಏರ್ಪಡಿಸಿದಲ್ಲಿ ಹತ್ತಿ, ಮುಸಿಕಿನ ಜೋಳ, ತಂಬಾಕು, ಸಿಸಾಲ ನಾರು ಇತ್ಯಾದಿ ಬಹು ಸಮರ್ಪಕವಾಗಿ ಬೆಳೆಯುತ್ತವೆ. ಇಲ್ಲಿನ ಹಿಂದುಳಿದ ವ್ಯವಸಾಯ ಮಾರ್ಗವೆಂದರೆ ಒಂದು ಪ್ರದೇಶವನ್ನು ಗುರುತಿಸಿ ಅಲ್ಲಿ ಕಾಡು ಕಡಿದು ಒಣಗಿಸಿ ಸುಟ್ಟು ಮಳೆ ಬಂದಾಗ ಮೇಲ್ಮಣ್ಣನ್ನು ಕೆದಕಿ ಬೆಳೆ ಇಡುವುದು. ಇಲ್ಲಿನ ಬೆಳೆ ಸಾಮಾನ್ಯವಾಗಿ ನಾರು ಸಂಬಂಧವಾದದ್ದು ಅಥವಾ ಹೊಗೆಸೊಪ್ಪು ಕಡಿದಾದ ಕಣಿವೆಗಳಲ್ಲೂ ಬದು ಹಾಕೀ ಇದೇ ಮಾರ್ಗ ಅನುಸರಿಸುವರು. ಇನ್ನೂ ಬೇರು ಮುಂತಾದವು ಇರುವುದರಿಂದ ನೇಗಿಲ ಉಪಯುಕ್ತತೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲಿ ಜನ ಮತ್ತು ಭೂಪ್ರದೇಶದ ಅಭಾವವಿಲ್ಲವೋ ಅಲ್ಲಿ ಮಾತ್ರ ಈ ಪದ್ಧತಿ ಅನುಸರಿಸಲು ಸಾಧ್ಯ. ಒಂದೆರಡು ಬೆಳೆ ತೆಗೆದು ಫಲವತ್ತು ಕಡಿಮೆಯಾದೊಡನೆ ಅಲ್ಲಿ ಪುನಃ ಕಾಡು ಎಬ್ಬಿಸಿ, ಬೇರೊಂದು ಸ್ಥಳವನ್ನು ಆರಿಸಿ ಅದೇ ಮಾರ್ಗವನ್ನುನುಸರಿಸುತ್ತರೆ. ಎರಡು ಮೂರು ವರ್ಷಕ್ಕಿಂತ ದೀರ್ಘಕಾಲ ಅದನ್ನು ಅನುಸರಿಸಬೇಕಾದಲ್ಲಿ ಗೊಬ್ಬರ ಒದಗಿಸಬೇಕಾಗುತ್ತದೆ. ಕಡಿಮೆ ಮಳೆ ಬೀಳುವ-ವರ್ಷದಲ್ಲಿ ಸ್ವಲ್ಪಕಾಲ ಒಣಹವೆ ಇರುವ-ಕಡೆಗಳಲ್ಲೂ ಫಲವತ್ತಿನ ಅಭಾವ, ಕ್ರಿಮಿಕೀಟ ಮುಂತಾದ ಎಲ್ಲ ಪ್ರತಿಕೂಲಗಳೂ ಇವೆ. ಜತೆಗೆ ನೀರಾವರಿಯ ಸೌಲಭ್ಯವಿಲ್ಲದೆ ವರ್ಷವೆಲ್ಲ ಬೆಳೆಯ ಕೆಲಸ ನಡೆಸುವುದು ಇಲ್ಲ್ಲಿ ಸಾಧ್ಯವಿಲ್ಲ. ಪಶುಸಂಪತ್ತಿನ ವೃದ್ಧಿಗೆ ಅಡಚಣೆಯೂ ಅನೇಕ ರೋಗಗಳ ಹಾವಳಿಯೂ ಇಲ್ಲುಂಟು. ಉಷ್ನವಲಯದಲ್ಲಿ ಅನೇಕ ಪ್ರಾಣಿಗಳನ್ನು ಸಾಕುತ್ತಾರೆ. ಅನೇಕ ಕಡೆಗಳಲ್ಲಿ ಹಂದಿಯೇ ಊರಿನ ಜಾಡಮಾಲಿ. ಕೋಳಿ, ಆಡು, ಕುರಿ(ಎತ್ತರದ ನೆಲದಲ್ಲಿ ಕಡಿಮೆ ಮಳೆ ಬೀಳುವೆಡೆಯಲ್ಲಿ), ಹಸು, ಎಮ್ಮೆ ಇವು ಸಾಮಾನ್ಯ. ಕುದುರೆಯನ್ನು ಬೇಸಾಯಕ್ಕೆ ಉಪಯೋಗಿಸುವುದು ಅಮೆರಿಕ ಹಾಗು ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ. ನೀರು ಹರಿಯುವ ತಗ್ಗು ಪ್ರದೇಶದಲ್ಲಿ ಬತ್ತ ಬೆಳೆಯುತ್ತಾರೆ. ಮೇಲಿನಿಂದ ಹರಿದು ಬರುವ ನೀರಿನಲ್ಲೂ ಆಹಾರಂಶವಿದ್ದು ಬತ್ತ ಚೆನ್ನಗಿ ಬೆಳೆಯುತ್ತದೆ. ಇದಕ್ಕೆ ಹೆಚ್ಚಿನ ಗೊಬ್ಬರವನ್ನೂ ಒದಗಿಸಲಾಗುತ್ತದೆ. ಸ್ವಲ್ಪ ಇಳಿಜಾರಾದ ವಿಸ್ತಾರ ಪ್ರದೇಶಗಳಲ್ಲಿ ಹೆಚ್ಚಾಗಿ ಮುಸುಕಿನ ಜೋಳ, ಗೋಧಿ, ಜೋಳ, ಹತ್ತಿ, ಮುಂತಾದುವನ್ನೂ ಬೆಳೆಯಲಾಗುತ್ತದೆ. ಇಲ್ಲಿ ಪೋಟ ನೇಗಿಲಿನ ಬಳಕೆಯಿದೆ.