ಪುಟ:Mysore-University-Encyclopaedia-Vol-2-Part-4.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸಿರಾಟ ಸಾಮಾನ್ಯವಾದ ಉಸಿರಾಟ ಆಗಾಗ ತನ್ನ ದಾರಿಯಿಂದ ವಿಚಲಿತವಾಗಬಹುದು. ಆದರೆ ಅದರಿಂದ ಆರೋಗ್ಯ ಕೆಟ್ಟಿದೆಯೆಂದಾಗಲೀ ಕೆಟ್ಟಿಲ್ಲವೆಂದಾಗಲೀ ಖಚಿತವಾಗಿ ಹೇಳಗು ಬರುವುದಿಲ್ಲ. ಹೊಟ್ಟೆಯ ಉಚ್ಛ್ವಾಸದಲ್ಲಿ ಉಸಿರು ಹೊರಗೆ ಹೋಗುವಾಗಲೆಲ್ಲ ಹೊಟ್ಟೆ ಚಲಿಸುವುದು ಕಂಡುಬರುತ್ತದೆ. ಉಛ್ಹ್ವಾಸ ನಡೆದಾಲೆಲ್ಲ ಹೊಟ್ಟೆ ಮುಂದಕ್ಕೆ ಉಬ್ಬಿಕೊಳ್ಳುತ್ತದೆ. ನಿಶ್ವಾಸದಲ್ಲೆ ತಟ್ಟನೆ ಹಿಂದಕ್ಕೆ ಸೆಳೆದುಕೊಳ್ಳುತ್ತದೆ. ವಪೆ ಕುಗ್ಗುವುದರಿಂದಲೂ ಹೊಟ್ಟೆಯ ಗೋಡೆಯ ಸ್ಥಿತಿಸ್ಥಾಪಕ ಶಕ್ತಿಯಿಂದಲೂ ಹೀಗೆ ಆಗುತ್ತದೆ. ಉಸಿರಾಟದಲ್ಲಿ ಪಕ್ಕೆಲುಬುಗಳು ಹೆಚ್ಚಾಗಿ ಚಲಿಸುತ್ತವೆ, ಉಸಿರಾಡುವುದು ಕಷ್ಟವಾದಗ ಮಾತ್ರ ಇದು ಕಂಡುಬರುತ್ತದೆ. ಉಸಿರ್ನಾಳ ಮತ್ತು ಅದರ ಬೃಹತ್ ಶಾಖೆಯ ಮೇಲುಗಡೆ ಕೇಳಿಬರುವ ಗಂಟಲುಸಿರಾಟ ಪುಪ್ಫುಸ ಗಿಡಿದಿಕೊಂಡಾಗ ಉಂಟಾಗುತ್ತದೆ. ಉಸಿರಾಟವನ್ನು ಆಗಗೊಳಿಸುವ ಸಾಮನ್ಯ ಸ್ನಾಯುಗಳು ರಕ್ತಕ್ಕೆ ಸಾಕಾಗುವಷ್ಟು ಗಾಳಿಯನ್ನು ಒದಗಿಸಲು ಸೋತು ಸಹಾಯಕ ಸ್ನಾಯುಗಳು ನೆರವಿಗೆ ಒದಗಿ ಬರಬೇಕಾದ ಪ್ರಸಂಗದಲ್ಲಿ ಬಲವಂತದ ಉಸಿರಾಟ ತೋರುವುದು. ಕೆಲವು ವಿಷಯಗಳು ಪ್ರಯುಕ್ತವಾದಾಗ ಉಸಿರಾಟ ಕಿರಿದಾಗುತ್ತದೆ. ಚೈನ್ ಸ್ಟ್ರೋಕ್ ಉಸಿರಾಟ ಎಂದರೆ ದೊಡ್ಡ ದೊಡ್ಡ ಗೊರಕೆಗಳನ್ನು ಬಿಡುವುದು ಮತ್ತು ಸ್ವಲ್ಪ ಹೊತ್ತು ಉಸಿರಾಡದಿರುವುದು ಮಿದುಳು, ರಕ್ತ ಪರಿಚಲನಾಂಗವ್ಯೂಹ ಅಥವಾ ಮೂತ್ರಜನಕಾಂಗಗಳ ವ್ಯಾಧಿಗಳಾಲ್ಲೂ ಇದು ಸಾಮಾನ್ಯ.

ಉಸಿರಾಟ ಜರುಗುವ ಅನೇಕ ಪರಿಸ್ಥಿತಿಗಳಲ್ಲಿ ಒಳಕ್ಕೂ ಹೊರಕ್ಕೂ ಸರಿದಾಡುವ ಗಾಳಿಯ ಪರಿಮಾಣವನ್ನು ಅನಿಲಮಾಪಕದಿಂದ (ಗ್ಯಾಸೋಮೀಟರ್) ಅಳೆಯಬಹುದು. ಮನುಷ್ಯನ ವಿಷಯದಲ್ಲಿ ಯಾವುಸೋ ಒಂದು ರೂಪದ ಉಸಿರಾಟದ ಮಾಪಕವನ್ನು (ರೆಸ್ಪಿರೋಮೀಟರ್) ಉಪಯೋಗಿಸುತ್ತಾರೆ. ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳು ಒಳಗೆ ತೆಗೆದುಕೊಂಡಿರುವ ಗಾಳಿಯ ಪರಿಮಾಣವನ್ನೂ ಹೊರಕ್ಕೆ ಬಿಟ್ಟ ಗಾಳಿಯ ಪರಿಮಾಣವನ್ನು ತೋರಿಸುತ್ತದೆ. ಪ್ರಾಣಿಗಳ ವಿಷಯದಲ್ಲಿ ಇಂಥ ಮೌಲ್ಯಗಳಾನ್ನು ನಿರ್ದಿಷ್ಟವಾಗಿ ಕಂಡುಹಿಡಿದಿಲ್ಲ. ಏಕೆಂದರೆ ಇವನ್ನು ಇಂಥ ಪ್ರಯೋಗಗಳಿಗೆ ಗುರಿಮಾಡಿ ಪರಿಮಾಣಗಳನ್ನು ಖಚಿತವಾಗಿ ತೆಗೆದುಕೊಳ್ಳುವುದು ಕಷ್ಟ. ಈ ಸಂಖ್ಯೆಗಳು ಸರಾಸರಿ ಲೆಕ್ಕಗಳನ್ನು ಮಾತ್ರ ಹೇಳುತ್ತವೆ. ವ್ಯಕ್ತಿಶಃ ಇವು ಬಹಳಾವಾಗಿ ವ್ಯತ್ಯಾಸ ಹೊಂದಬಹುದು.

ಭಾರತದ ಗಾಳಿ: ಒಂದು ಉಸಿರಾಟದ ಪ್ರಕರಣದಲ್ಲಿ ಒಳಗೆ ತೆಗೆದುಕೊಂಡು ಅಥವಾ ಹೊರಗೆ ಬಿಟ್ಟ ಗಾಳಿಯ ಪರಿಮಾಣ. ಇದರ ಬೆಲೆಗಳು ಹೀಗಿವೆ: ಮನುಷ್ಯ ೫೦೦ ಮಿ.ಲೀ., ಕುದುರೆ ೬೦೦೦ ಮಿ.ಲೀ., ಹಸು ೩೮೦೦ ಮಿ.ಲೀ., ಆಡು ೩೧೦ ಮಿ.ಲೀ., ಕುರಿ ೨೦೦ ಮಿ.ಲೀ., ನಾಯಿ ೧೭೬ ಮಿ.ಲೀ., ಕೆಲಸವಿಲ್ಲದೆ ಕುಳಿತಿರುವಾಗ (ಸುಮಾರಾಗಿ) ಶರೀರದ ತೂಕಕ್ಕೆ ಅನುಗುಣವಾಗಿ ಭಾರತದ ಗಾಳಿ ಬದಲಾಯಿಸುತ್ತದೆ. ಅದನ್ನು ಈ ಕೆಳಗಣ ಸೂತ್ರದಲ್ಲಿ ನಿರೂಪಿಸಬಹುದು. ಭಾರತದ ಗಾಳಿ (ಮಿ.ಲೀ.)= ೦.೦೦೭೪ * ತೂಕ (ಗ್ರಾಂ). ಕುಂಭಕದಲ್ಲಿನ ಪೂರಕ ಶ್ವಾಸದ ಪ್ರಮಾಣ: ಒಂದು ಸಾಮಾನ್ಯವಾದ ಉಸಿರೆಳೆತದ ತರುವಾಯ ಶಕ್ತಿಯಿದ್ದಷ್ಟು ಆಳವಾಗಿ ಉಸಿರೆಳೆದುಹೊಂಡಾಗ ಒಳಕ್ಕೆ ಸೇರುವ ಗಾಳಿಯ ಪರಿಮಾಣ. ಇದರ ಬೆಲೆಗಳು ಹೀಗಿವೆ. ಮನುಷ್ಯ ಸುಮಾರು ೨೦೦೦ ಮಿ.ಲೀ., ಕುದುರೆ ೧೨೦೦ ಮಿ.ಲೀ., ಕುರಿ ೩೪೦-೧೧೪೦ ಮಿ.ಲೀ., ಶಕ್ತಿಯಿದ್ದಷ್ಟು ಒಳಗೆಳೆದುಕೊಂಡು ಶಕ್ತಿಯಿದ್ದಷ್ಟು ಹೊರಹಾಕುವ ಗಾಳಿಗಳ ಪರಿಮಾಣದ ಹೆಸರು ಪುಪ್ಫುಸದ ಪ್ರಾಣ ತ್ರಾಣ. ಇದರ ಬೆಲೆಗಳು ಹೀಗಿವೆ. ಮನುಷ್ಯ ೩೭೦೦ ಮಿ.ಲೀ., ಕುದುರೆ ೩೦೦೦೦ ಮಿ.ಲೀ., ಕುರಿ ೮೦೦-೧೫೪೦ ಮಿ.ಲೀ.,

ಉಳಿಕೆಯ ಗಾಳಿ: ಕುಂಭದ ಗಾಳಿಯನ್ನು ಹೊರಹಾಕಿದ ಮೇಲೆ ಪುಪ್ಫುಸಗಳು ಮುಸುರಿಹೋಗುವುದಿಲ್ಲ: ಅವುಗಳಲ್ಲಿ ತಕ್ಕಷ್ಟು ಗಾಳಿ ಇದ್ದೇ ಇರುತ್ತದೆ. ಇದಕ್ಕೆ ಉಳಿಕೆಗಾಳಿ ಎಂದು ಹೆಸರು. ಅದು ಮನುಷ್ಯನಲ್ಲಿ ಸರಾಸರಿ ೧೫೦೦ ಮಿ.ಲೀ., ನಷ್ಟಿದೆ. ಕುದುರೆಯಲ್ಲಿ ಸುಮಾರು ೧೨೦೦ ಮಿ.ಲೀ., ಶ್ವಾಸನಾಳ ತೆರೆದ ಬಳಿಕ ಪುಪ್ಫುಸಗಳು ಮುದುರಿಕೊಂಡು ಅನಂತರ ಆ ಕೋಶಗಳಲ್ಲಿ ಉಳಿದುಕೊಂಡಿರುವ ಗಾಳಿಯ ಹೆಸರು ಕನಿಷ್ಠ ಮಿತಿಯ ಗಾಳಿ (ಮಿನಿಮಮ್ ಏರ್). ಈ ಗಾಳಿ ಇರುವುದರಿಂದಲೇ ಪುಪ್ಫಸಗಳನ್ನು ನೀರಿನಲ್ಲಿ ಇರಿಸಿದಾಗ ಮುಳುಗದೆ ತೇಲುತ್ತವೆ.

ಮಿನಿಟ್ ಪರಿಮಾಣ: ಒಂದು ಮಿನಿಟಿನಲ್ಲಿ ನಡೆಯುವ ಉಸಿರಾಟದ ಸಂಖ್ಯೆಯಿಂದ ಭಾರತದ ಗಾಳಿಯನ್ನು ಗುಣಿಸಿದರೆ ಉಸಿರಾಟದ ಮಿನಿಟ್ ಪರಿಮಾಣ ದೊರೆಯುತ್ತದೆ. ನಾಯಿಗಳಲ್ಲಿ ಇದರ ಸರಾಸರಿ ಸುಮಾರು ೪೦೦೦.

ಉಸಿರಾಟದ ಪುನರಾವರ್ತನೆ: ಒಂದು ಮಿನಿಟಿನಲ್ಲಿ ಎಷ್ಟು ಸಲ ಉಸಿರಾಡುತ್ತದೆ ಎಂಬುದರ ಲೆಕ್ಕ. ವಿಶ್ರಾಂತಿಯಲ್ಲಿರುವ ಉನ್ನತಸ್ತರದ ಪ್ರಾಣಿಗಳಲ್ಲೂ ಮನುಷ್ಯನಲ್ಲೂ ಪುನರಾವರ್ತನ ಸಂಖ್ಯೆಗಳು ಹೀಗಿವೆ: ಕುದುರೆ ೮-೧೬; ನಾಯಿ ೧೦-೩೦; ಎತ್ತು ೧೦-೩೦; ಬೆಕ್ಕು ೨೦-೩೦; ಕರವೆ ಹಸು ೧೮-೨೮; ಕೋಳಿ ೧೫-೩೦; ಕುರಿ ಮತ್ತು ಆಡು ೧೨-೨೦; ಮನುಷ್ಯ ೧೨-೨೦; ಹಂದಿ ೮-೧೮. ಉಸಿರಾಟದ ಪುನರಾವರ್ತನೆ ಅನೇಕ ಬದಲಾವಣೆಗಳಿಗೆ ಆಕರವಾಗಿದೆ. ಇವು ದೇಹದ ಗಾತ್ರ, ವಯಸ್ಸು, ವ್ಯಾಯಾಮ, ಭಾವೋದ್ರೇಕ, ಪರಿಸರದ ಉಷ್ಣಮಾನ, ಗರ್ಭಧಾರಣೆ, ಹೊಟ್ಟೆ ತುಂಬುವ ಜಾಗದ ಅಳತೆ, ಅದರಲ್ಲೂ ಮೇಲುಕು ಹಾಕುವ ಪ್ರಾಣಿಗಳಾಲ್ಲಿ ಮೊದಲು ಹೊಟ್ಟೆಯ ಪರಿಮಾಣ ಮುಂತಾದ ಅಂಶಗಳನ್ನು ಅವಲಂಬಿಸಿದೆ.

ಮನುಷ್ಯರಲ್ಲಿ ಉಸಿರಾಟ: ಉಚ್ಛ್ವಾಸ ಗಾಳಿಯಲ್ಲಿನ ದೂಳಿನ ದೊಡ್ಡ ಕಣಗಳನ್ನು ಮೂಗಿನ ಹುದಲುಗಳು ತಡೆದು ಸೋಸಿ ಒಳಬಿಡಿತ್ತವೆ. ಗಂಟಲು ಕುಳಿಯ (ಫ಼್ಯಾರಿಂಕ್ಸ್) ಮೂಲಕ ಇದು ಸಾಗುವಾಗ ಬೆಚ್ಚಗಾಗಿ ತೇವಗೂಡಿ ಉಸಿರ್ನಾಳಕ್ಕೆ ಬರುವ ಹೊತ್ತಿಗೆ ಇದರಲ್ಲಿ ನೀರಿನ ಆವಿ ತುಂಬಿರುವುದು.

ಉಸಿರ್ನಾಳ ಎಡಕ್ಕೂ ಬಲಕ್ಕೂ ಪಂಗುಸಿರ್ನಾಳ (ಬ್ರಾಂಕ್ಸ್) ಮೂಖ್ಯ ಕಾಂಡಗಳಾಗಿ ಕವಲೊಡೆದು ಮತ್ತು ಕವಲೊಡೆಯುತ್ತ ದ್ವಿತೀಯಕ ಪಂಗುಸಿರ್ನಾಳಗಳು, ನವಿರುಸಿರ್ನಾಳಗಳು (ಬ್ರಾಂಹಿಯೋಲ್ಸ್) ಪುಪ್ಫುಸದ ಮೊದಲ ಕಿರಿಹಾಲೆಗೆ (ಲಾಬ್ಯೂಲ್) ಹೋಗುವ ಉಸಿರಾಟದ ನವಿರುಸಿರ್ನಾಳಗಳಿಗೆ ಕೊನೆಗೊಳ್ಳುತ್ತವೆ. ಈ ಕಿರಿಹಾಲೆಯೇ ಕೆಲಸಮಾಡುವ ಪುಪ್ಫುಸದ ಘಟಕ. ಗಾಳಿಗೂ ರಕ್ತಕ್ಕೂ ನಡುವೆ O2, CO2 ವಿನಿಮಯವಾಗುವ ಸುಮಾರು ೩೦ ಕೋಟಿ ಗಾಳಿಗೂಡುಗಳಿಗೆ ಒಳಗೆ ಗಾಳಿ ಹಂಚಿಕೆಯಾಗುತ್ತದೆ. ಒಂದು ಮಿ.ಮೀ. ಗಾತ್ರದಲ್ಲಿ ೫-೧೦ ಇರುವ ಗಾಳಿಗೂಡುದಳು ಮುಖ್ಯವಾಗಿ ಗಾಳಿಯಲ್ಲಿ ತೂಗಿಬಿದ್ದಿರುವ ಲೋಮನಾಳಗಳ ಕಟ್ಟುಗಳು, ಇದರ ಮೇಲ್ಮೈಯ ತುಂಬ ಮುಚ್ಚಿರುವುದು. ಈ ರಕ್ತನಾಳಗಳ ಒಟ್ಟು ಉದ್ದವನ್ನು ೨೪೦೦ ಕ್.ಮೀ. ಎಂದು ಲೆಕ್ಕ ಹಾಕಿದೆ. ವಿಸರಣೆಗೊಳ್ಳುವ ಮೇಲ್ಮೈ ೪೫ ಚದರ ಮೀಟರುಗಳಷ್ಟು ಹರಡಿದ್ದರೂ ಅದರ ದಪ್ಪ ಒಬ್ಬನಲ್ಲಿ ೦.೫-೨.೫ ಮೈಕ್ರಾನುಗಳಷ್ಟು (ಮಿಲಿಮೀಟರಿನ ಸಾವಿರ ಅಂಶ) ಇರುವುದು ಆರಾಮವಾಗಿರುವಾಗ ಒಂದೊಂದು ಲೋಮನಾಳದಲ್ಲಿ ೦.೯ ಸೆಕೆಂಡಿಗೊಂದು ಬಾರಿ ಹೊಸ ರಕ್ತ ಬರುವುದು. ದುಡಿಯುತ್ತಿರುವಾಗ ಸೆಕೆಂಡಿಗೆ ೩ ಬಾರಿ ಬರುತ್ತದೆ. ಸುಮ್ಮನಿದ್ದಾಗ ಪುಪ್ಫುಸಗಳ ಮೂಲಕ ರಕ್ತ ಮಿನಿಟಿಗೆ ೫ ಲೀಟರೂ ಜೋರಾಗಿ ಗರಡಿ, ಸಾಮು ಮಾಡುವಾಗ ಇದರ ನಾಲ್ಕೈದರಷ್ಟಕ್ಕೂ ಪ್ರವಹಿಸುವುದು. ವಿಶ್ರಾಂತಿ ಪಡೆಯುತ್ತಿರುವಾಗ ಗಾಳಿಗೂಡುಗಳಿಗೆ ನುಗ್ಗುವ ಗಾಳಿ ೪ ಲೀ: ಅಂಗ ಸಾಧನೆಯಲ್ಲಿ ಇದು ೧೦೦ ಲೀಟರುಗಳನ್ನು ಮೀರುವುದು (ನೋಡಿ-ಉಸಿರಾಟದ-ಮಂಡಲದ-ಅಂಗರಚನೆ)

ಪುಪ್ಫುಸದಲ್ಲಿ ಆಕ್ಸಿಜನ್ ಮತ್ತು ಇಂಗಾಲದ ಡೈಆಕ್ಸೈಡ್ ವಿಸರಣೆ; ಮನುಷ್ಯನ ಪುಪ್ಫುಸಗಳಲ್ಲಿ ಗಾಳಿಯಲ್ಲಿರುವ O2 ಪ್ರಮಾಣ ರಕ್ತದಲ್ಲಿನ ಅದೇ ಪ್ರಮಾಣಕ್ಕಿಂತ ಸದಾ ಹೆಚ್ಚು ಎಂದು ಪ್ರಯೋಗಗಳಿಂದ ತಿಳಿದಿದೆ. ವಿಸರ್ಜಿಸಲಾಗುವ CO2 ಅನ್ನು ಕುರಿತು