ಪುಟ:Mysore-University-Encyclopaedia-Vol-2-Part-4.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸಿರಾಟ ಹೇಳುವಾಗ ಈ ಹೇಳಿಕೆ ವಿಪರ್ಯಯವಾಗುತ್ತದೆ. ಆದ್ದರಿಂದ ಮನುಷ್ಯನ ಉಸಿರಾಟದಲ್ಲಿಯೂ ವಿಸರಣೆಯೇ ಮೋಲಕಾರಣ ಎಂದು ರುಜುವಾತಾದಂತಾಯಿತು. ಗೊತ್ತಾದ ಉಷ್ಣತೆಯಲ್ಲಿ ಒಂದು ಅನಿಳದ ಸಾಂದ್ರತೆಯನ್ನು ಆಂಶಿಕ ಒತ್ತಡಗಳಲ್ಲಿ ವಾರ್ಷಿಯಲ್ ಪ್ರೆಷರ್ಸ್) ಪಾದರಸದ ಮಿಲಿಮೀಟರುಗಳಲ್ಲಿ ಹೇಳುವುದು ವಾಡಿಕೆ.ವಿರಾಮದಲ್ಲಿ ಪುಪುಸದಲ್ಲಿನ ಗಾಲಿಯಲ್ಲಿರುವ 02ವಿನ ಬಳಕೆ ಏರಿದಂತೆಲ್ಲ ಈ ವಿಸರಣೆಯ ಓಟ (ಗ್ರೇಡಿಯಂಟ್) ಹೆಚ್ಚುತ್ತ ಜೋರಾದ ವ್ಯಾಯಾಮದಲ್ಲಿ 50 ಮಿಮೀ.ಗೆ ಏರಬಹುದು. ಇಷ್ಟು ದೊದ್ದ ಸರಾಸರಿ ಓಟ ಇದ್ದರೂ ಪುಪ್ಪುಸದಿಂದ ಹೊರಡುವ ರಕ್ತದಲ್ಲಿನ O2 ಆಂಶಿಕ ಒತ್ತಡ ಎಂದಿನಂತೆ ಪುಪ್ಪುಸದಲ್ಲಿನ ಗಾಳಿಯಲ್ಲಿ ಇರುವುದಕ್ಕಿಂತ ಕೇವಲ ಕೆಲವೇ ಮಿ.ಮೀ.ಗಳಷ್ಟು ಕಡಿಮೆ ಇರುತ್ತದೆ. ಏಕೆಂದರೆ ಪುಪ್ಪುಸದ ಲೋಮನಾಳದಲ್ಲಿನ O2ರ ಸರಾಸರಿ ಆಂಶಿಕ ಒತ್ತಡ ನಡುವೆ ಎಲೋ ಇರುವುದು.

ಮನುಷ್ಯನಲ್ಲಿ ಉಸಿರಾಟದ ಕ್ರಿಯಾತಂತ್ರ: ಎದೆಗೂಡಿನ ಪೊಳ್ಳಿನ ಘನಗಾತ್ರದ (ವಾಲ್ಯೂಂ) ವ್ಯತ್ಯಾಸಗಳಿಂದ ಪುಪ್ಪುಸದ ಒಳಕ್ಕೂ ಹೊರಕ್ಕೂ ಗಾಳಿ ಸಾಗುತ್ತದೆ. ಪುಪ್ಪುಸಗಳು ಮಾತ್ರ ತಾವಾಗಿಯೇ ಕುಗ್ಗುವುದೂ ಇಲ್ಲ, ಹಿಗ್ಗುವುದೂ ಇಲ್ಲ. ಹಾಗೆಯೇ ಬಿಟ್ಟರೆ ಅವು ಮುದುರುವ ಸ್ವಭಾವದವು. ಎದೆಗೂಡಿನ ಪೊಳ್ಳು ಹೇಗೆ ಆಡಿದರೆ ಇವು ಹಾಗೆ ಆಡುತ್ತವೆ. ಆದ್ದರಿಂದಲೇ ಉಸಿರಾಡಲು ಶಕ್ತಿ ಇರುವುದಿಲ್ಲ ಪುಪ್ಪುಸಗಳ ಹೊರಗಿರುವ ಸ್ನಾಯುಗಳಲೇ. ಎದೆಗೂಡು ಪೊಳ್ಳಿನ ತಳದಲ್ಲಿರುವ ಬಲವಾದ ಸ್ನಾಯುಪದರವಾದ ವಪೆ,ಎದೆಗೂಡು ಒಡಲು ಇವುಗಳ ಅನೇಕ ಸ್ನಾಯುಗಳೇ ಅವು. ಒಂದೊಂದು ಸಲದ ಉಚ್ಛಾವಸದಲ್ಲೂ ಸುಮಾರು ಅರೆ ಲೀಟರಿನಷ್ಟು ಗಾಳಿ ಒಳಹೋಗುವುದು. ಉಸಿರೆಳೆದುಕೊಳ್ಳುವಾಗ ಎರಡು ಯಾಂತ್ರಿಕ ಕೆಲಸಗಳಾಗುತ್ತೆವೆ. ಮೊದಲಾಗಿ ವಪೆಯ (ಫ್ರೆನಿಕ್)ನರದ ಮೂಲಕ ಇಳಿದು ಬರುವ ಆಘಾತಗಳು (ಇಂಪಲ್ಸಸ್) ವಪೆ ಕುಗ್ಗಿ ಕೆಳಸರಿಯುವಂತೆ ಮಾಡುವುವು. ವಪೆಯ ಕುಗ್ಗು ಅರೆಯಂಗುಲ ವಪೆಯೆ ಮೇಲ್ಮೆ ಸಲೆ 250 ಚ.ಸೆಮೀ.

ಆದ್ದರಿಂದ ಸುಮಾರು 300ಮಿ. ಲೀಗಳಷ್ಟು ಗಾಳಿ ಈ ವಿಧಾನದಿಂದ ಒಳಹೋಗುವುದು. ಎರಡನೆಯಾಗಿ ಕಶೇರು ಸ್ತಂಭಕ್ಕೆ ಅಂಟಿರುವ ಸ್ನಾಯುಗಳ ಹಲವಾರು ಜೋಡಿಗಳು ಮುಂದಕ್ಕೂ ಕೆಳಗಡೆಗೂ ಚಾಚಿ ಪಕ್ಕೆಲುಬುಗಳಿಗೆ ತಗುಲಿಕೊಂಡು ,ಉಸಿರೆಳೆದುಕೊಳ್ಳುವಾಗ ಪಕ್ಕೆಲುಬುಗಳನ್ನು ಮೇಲೆತ್ತಿ ಎದೆಗೂಡಿನ ಒಳಗಣ ಘನಗಾತ್ರವನ್ನು ಹೆಚ್ಚಿಸುವುದು, ಈವಿಧಾನದಲ್ಲಿ ಸಮಾರು 2೦೦ಮಿ.ಲೀ. ಗಾಲಿ ಓಳಸೇರುತ್ತದೆ. ಪಕ್ಕೆಲುಬುಗಳು ಕಮಾನಾಗಿ ಬಾಗಿರುವಿಕೆ, ಅವುಗಳ ಒಟ್ಟು ರಚನೆ ಇತ್ಯಾದಿಗಳಿಂದಾಗಿ ಒಳಗಿನ ಗಾತ್ರ ಆದಷ್ಟು ಹೆಚ್ಚಾಗಿರುವಂಧ ಏರ್ಪಾಡಿದೆ. ಅಲ್ಲದೆ ಪಕ್ಕೆಲುಬುಗಳನ್ನು ಮೇಲೆತ್ತಿದರೆ ಎದೆಗೂಡಿನ ಮುಂದು ಹಿಂದಣ ವ್ಯಾಸ ಹೆಚ್ಚಿ ಅದರ ಅಗಲ ಜಾಸ್ತಿಯಾಗುವುದು. ಇವಲ್ಲ ಏರ್ಪಾಡುಗಳ ಆದಷ್ಟು ಹೆಚ್ಚು ಪ್ರಮಾಣದ ಗಾಳಿ ಎಳಸೇರಲು ಸಹಕಾರಿಗಳಗಿವೆ. ಒಬ್ಬ ಆರೋಗ್ಯವಂತ ಮನುಷ್ಯನಲ್ಲಿ ಉಚ್ಛ್ವಾಸ ಮುಗಿದೊಡನೆ ಮಿದುಳಿನಲ್ಲಿರುವ ಉಸಿರಾಟ ನಿಯಂತ್ರಣ ಕೇಂದ್ರ ತನ್ನ ಕೆಲಸವನ್ನು ನಿಲ್ಲಿಸುತ್ತದೆ. ತತ್ ಕ್ಷಣ ಪುಪ್ಪುಸಗಳ ಕುಗ್ಗು ಸೆಳೆತದಿಂದ ಎದೆಗೂಡು ಕುಸಿದು ಮುದುರುತ್ತದೆ: ಎಂದರೆ ನಿಶ್ವಾಸಕ್ಕೆ ಎಡೆ ಮಾಡಿಕೊಡುತ್ತದೆ.

ಉಸಿರಾಟದ ವ್ಯವಸ್ಧೆಯ ಕೆಲವುಭಾಗಗಳಲ್ಲಿನ ಜಳಸ್ಧಿತಿ ಒತ್ತಡಗಳನ್ನು (ಹೈದ್ರೋಸ್ಪ್ಯಾಟಿಕ್ ಪ್ರೆಷರ್ಸ್) ಉಚ್ಛ್ವಸಿಸಿದ ಅಧವ ನಿಶ್ವಸಿಸಿದ ಗಾಳಿಯ ಘನಗಾತ್ರ ಮತ್ತು ಗಾಲಿ ಪ್ರವಹಿಸುವದರ ಇವುಗಳೊಡನೆ ಅಳೆದು ಉಸಿರಾಟದ ಕ್ರಿಯಾತಂತ್ರವನ್ನು ನಿರ್ಧಾರಿಸಿದ್ದಾರೆ.ಇದರಿಂದ ಪುಪ್ಪುಸಗಳ ಹಲವಾರು ಗುಣಗಳನ್ನು ಪರಿಮಾಣಾತ್ಮಕವಾಗಿ ತಿಳಿತಲು ಸಾಧ್ಯವಾಗಿದೆ.

ಪುಪ್ಪುಸದ ಘನಗಾತ್ರಗಳು 70 ಕಿ.ಗ್ರಾಂ. ತೂಕದವನ ಪುಪ್ಪುಸದಲ್ಲಿ 5.25 ಲೀ.ಗಳಷ್ಟು ಗಾಳಿ ಹಿಡಿಯುತ್ತದೆ. ಇದು ಓಟ್ಟು ಪುಪ್ಪುಸದ ಗಾತ್ರ ಇದನ್ನು ಬೇರೆ ಬೇರೆ ಭಾಗಗಳಗಿ ವಿಂಗಡಿಸಲಾಗಿದೆ.

ಜೀವಾಳದ ಗಾತ್ರ (ವೈಟಲ್ ಕೆಪ್ಯಾಸಿಟಿ) ಮತ್ತಿತರ ಪುಪ್ಪುಸದ ಘನಗಾತ್ರಗಳ ಅಳತೆ ಪುಪ್ಪುಸದ ರೋಗಗಳಲ್ಲಿ ಮುಖ್ಯವಾದ ನಿದಾನದ ವಿಧಾನ.

ಡಾಲ್ಟನ್ನನ ಆಶಿಂಕ ಒತ್ತಡಗಳ ನಯಮ ಮತ್ತು ಉಸಿರಾಟಕ್ಕೆ ಆದರೆ ಅನ್ವಯ: ದೇಹದೋಳಗೆ ಆನಿಲವಿನಿಮಯವನ್ನು ಅರ್ಧವಿಸಲು ಅನಿಲಗಲ ಕೆಲವು ಭೌತ ಗುಣಗಳನ್ನು ಅರಿಯಬೇಕು. O2 ರಂಧ ಒಂದು ಅನಿಲ ಹೀಮೋಗ್ಲೋಬಿನ್ಗಳೊಡನೆ ಕೂಡಿ ಅಲ್ಲಿ ವಿಸರಣೆಗೊಂಡು ಊತಕಗಳವರೆಗೂ ಸಾಗಿತೇ ಇಲ್ಲವೇ ಎಂಬ ಅಂಶ ಆ ಅನಿಲದ ಅನುಸಾಂದ್ರತೆಯನ್ನು ಅವಲಂಬಿಸಿದೆ.

ವಾತಾವರಣದ ಗಾಳಿಯನ್ನು ವಿಶ್ಲೇಷಿಸಲಾಗಿದೆ. ಅದರಲ್ಲಿರುವ ಬೇರೆ ಬೇರೆ ಅನಿಳಗಳ ಘನಗಾತ್ರಗಳನ್ನು 100 ಘನಗಾತ್ರಗಳ ಒಣಗಾಳಿಯ ಪ್ರಮಾಣದಲ್ಲಿ ಅಳೆದಿದ್ದರೆ. ಈ ಪ್ರಕಾರ 02 20.94%. CO2 0.03%, ನೈಟ್ರೋಜನ್ ಇತ್ಯಾದಿ ಅನಿಲಗಳ 79.03a5 ಇವೆಯೆಂದು ತಿಳಿದಿದೆ, ಈ ಸೇಕಡಾ ಸಂಖ್ಯೆಗಳು ಭೂಮಿಯ ಎಲ್ಲೆಡೆಗಲಲ್ಲಿಯೂ