ಪುಟ:Mysore-University-Encyclopaedia-Vol-2-Part-4.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸಿರಾಟ ಮಂಡಲದ ಅಂಗರಚನೆ

ಅಕ್ಕಪಕ್ಕಕ್ಕೆ ಆಡಬಲ್ಲದು.ಸ್ನಾಯುಗಳಿಂದ ಉದ್ದವಾಗಿ ಸಣ್ಣಗಾಗಬಲ್ಲುದು ಅಥವಾ ಕುರುಚಾಗ ಬಲ್ಲುದು. ಗಂಟಲಿನಲ್ಲಿ ಇದರ ಉದ್ದ ೨.೫ ಸೆಂ.ಮೀ. ಇದರ ಮೇಲೆ ಕಿವಿಯಿಟ್ಟು ಅಥವಾ ಕೊಳವೆಯ ಮೂಲಕ ಆಲಿಸಿದರೆ ಉಸಿರದುವುದನ್ನು ಕೇಳಬಹುದು.ಗಾಳಿಯಲ್ಲಿ ಬತ್ತದ ಪೈರು ಆಡುವಂತೆ ಸಣ್ಣ್ ಕೂದಲಂತಿರುವ ಭಾಗಗಳು ಇದರ ಲೋಳೆಪೊರೆಯ ಮೇಲೆ ಕಫದೊಡನೆ ಧೂಳನ್ನು ಮೇಲಕ್ಕೆ ತಲ್ಲುತ್ತದೆ.

ಮಹಾಧಮನಿ(ಅಯೋರ್ಟ) ಎಂಬ ದೊಡ್ಡ ರಕ್ತನಾಳ ಸಾಮಾನ್ಯವಾಗಿ ಸಿಫಿಲಿನ್ ಎಂಬ ಮೇಹರೋಗದಿಂದ ಉಬ್ಬಿ ಗಾಳಿಕೊಳವೆಯನ್ನು ಅದುಮುವುದರಿಂದ ಉಸಿರಾಟ ಕಷ್ಟವಾಗುವುದು. ಅನ್ನನಾಳವನ್ನು ಅದುಮುವುದರಿಂದ ನುಂಗುವುದು ಕಷ್ಟವಾಗುವುದು ಮತ್ತು ರೆಕರೆಂಟ್ ಲ್ಯಾರಿಂಜಿಯಲ್ ನರ್ವ್ ಎಂಬ ಧ್ವನಿನಾಳದ ನರವನ್ನು ಅದುಮುವುದರಿಂದ ಧ್ವನಿ ಸರಿಯಾಗಿ ಹುಟ್ಟದೆ ಗಂಟಲು ಕಟ್ಟಿದಂತಾಗುವುದು.

೫. ಉಸಿರ್ನಾಳದ ಶಾಖೆಗಳು(ಬ್ರೋಂಖೈ): ಎದೆಯ ಭಾಗದ ಉಸಿರ್ನಾಳ ೭.೫ ಸೆಂ.ಮೀ. ಇದೆ. ಇದು ಮೊದಲು ಬಲ ಮತ್ತು ಎಡ ಶಾಖೆಗಳಾಗಿ (ಪ್ರೈಮರಿ ಬ್ರೋಂಖೈ) ಒಡೆಯುತ್ತದೆ. ಬಲ ಶಾಖೆ ಬಲಪುಪ್ಫುಸದಲ್ಲೂ ಎಡಶಾಖೆ ಎಡಪುಪ್ಫುಸದಲ್ಲೂ ಎರಡೆರಡಾಗಿ ೨೦-೨೫ ಸಲ ಕವಲೊಡೆಯುತ್ತವೆ.

ಪುಪ್ಫುಸಗಳು (ಶ್ವಾಸಕೋಶಗಳು;ಲಂಗ್ಸ್): ಬಲ ಮತ್ತು ಎಡ ಎಂದು ಎರಡು ಎದೆಯ ಇಕ್ಕೆಲಗಳಲ್ಲಿವೆ. ಉಸಿರೆಳೆದಾಗ ಗಾಳಿ ತುಂಬುವುದರಿಂದ ಇವು ಉಬ್ಬುತ್ತವೆ. ಉಸಿರ್ನಾಳದ ಪ್ರತಿ ಸಣ್ಣ ಕೊನೆಯ ಶಾಖೆಗೆ ಹಲವು ಸಣ್ಣ ಗಾಳಿ ಬುಡ್ಡೆಗಳು ಸೇರಿಕೊಂಡಿವೆ. ಬುಡ್ಡೆಗಳ ಮೇಲೆ ಸೂಕ್ಷ್ಮ ರಕ್ತನಾಳಗಳ ಬಲೆಯಿದೆ. ಬಲೆಯ ಕಣ್ಣುಗಳು ನಾಳಗಳಿಗಿಂತ ಚಿಕ್ಕವು. ಬಲೆಯನ್ನು ತೆಳುವಾಗಿ ಹರಡಿದ್ದೇ ಆದರೆ ಅದರ ವಿಸ್ತೀರ್ಣ ಸಾವಿರಾರು ಚದರಡಿಗಳಷ್ಟೆಂದು ಲೆಕ್ಕ ಹಾಕಲಾಗಿದೆ. ಅಂದರೆ ರಕ್ತ ಬಹಳ ತೆಳುವಾಗಿಯೂ ವಿಶಾಲವಾಗಿಯೂ ಪುಪ್ಫುಸಗಳಲ್ಲಿ ಹರಡಲ್ಪಟ್ಟು ಗಾಳಿಗೆ ಒಡ್ಡಲಾಗುತ್ತದೆ. ಗಾಳಿಗೂ ರಕ್ತಕ್ಕೂ ನಡುವೆ ಇರುವ ಪೊರೆ ಬಲು ತೆಳು. ಇದರ ಮೂಲಕ ಪುಪ್ಫುಸಕ್ಕೆ ಬರುವ ಮಲಿನ ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್(ಇಂಗಾಲಾಮ್ಲ) ಮತ್ತು ಉಷ್ಣ ಕ್ಷಣದಲ್ಲಿ ಗಾಳಿಯನ್ನು ಸೇರಿ ಗಾಳಿಯಲ್ಲಿ ಹೆಚ್ಚಿರುವ ಆಕ್ಸಿಜನ್(ಆಮ್ಲಜನಕ) ರಕ್ತವನ್ನು ಸೇರುತ್ತದೆ.ರಕ್ತ ಹೃದಯದ(ಹಾರ್ಟ್) ಬಲಹೃತ್ಕುಕ್ಷಿಯಿಂದ(ರೈಟ್ ವೆಂಟ್ರಿಕಲ್) ಹೊರಟು ಪುಪ್ಫುಸಗಳಲ್ಲಿ ಕಲ್ಮಷಗಳನ್ನು ಕಳೆದುಕೊಂಡು ಆಕ್ಸಿಜನ್ನನ್ನು ಪಡೆದು ಎಡಹೃತ್ಕರ್ಣ ಮತ್ತು ಅಲ್ಲಿಂದ ಎಡಹೃತ್ಕುಕ್ಷಿ ಸೇರಿ ಮಹಾಧಮನಿಯ(ಅಯೋರ್ಟ) ಶಾಖೆಗಳಲ್ಲಿ ದೇಹದ ಎಲ್ಲ ಭಾಗಗಳಿಗೂ ಹೋಗಿ ಬಲಹೃತ್ಕರ್ಣಕ್ಕೆ ಹಿಂತಿರುಗುತ್ತದೆ. ಬಲ ಪುಪ್ಫುಸದಲ್ಲಿ ಹತ್ತು ಮತ್ತು ಎಡ ಪುಪ್ಫುಸದಲ್ಲಿ ಒಂಬತ್ತು ಉಸಿರ್ನಾಳಗಳ ಗೊಂಚಲುಗಳಿವೆ(ಬ್ರೋಂಖೋ ಪಲ್ಮನರಿ ಸೆಗ್ಮೆಂಟ್ಸ). ಹಲವು ವೇಳೆ ಕ್ರಿಮಿರೋಗ ಒಂದು ಗೊಂಚಲಿನಲ್ಲೇ ಇರುವುದರಿಂದ ಅಷ್ಟನ್ನು ಮಾತ್ರ ಶಸ್ತ್ರಕ್ರಿಯೆಯಿಂದ ತೆಗೆದುಹಾಕಲು ಸಾಧ್ಯ. ದೊಡ್ಡ ಗೊಂಚಲುಗಳ ಸ್ಥಾನಗಳು ಪುಪ್ಫುಸಗಳ ಮೇಲೆ ಕಾಣುವುದಿಲ್ಲ.ಆದರೆ ಅವನ್ನು ಗುರುತಿಸಬಹುದು.

ಪುಪ್ಫುಸದ ಮೇಲ್ಭಾಗ ಸಣ್ಣಗಿದೆ. ಕೆಳಭಾಗ ಅಗಲವಾಗಿದೆ. ಇದು ಉಬ್ಬಿ ಕುಗ್ಗಲು ಇದರ ಸುತ್ತಲೂ ೨ ಪದರಗಳ ಅಳ್ಳೆಪೊರೆಯ ಚೀಲವಿದೆ(ಪ್ಲೂರಲ್ ಸ್ಯಾಕ್). ಹೊರಪೊರೆ ಎದೆಯ ಭಿತ್ತಿಗೆ ಮತ್ತು ತಡಿಕೆಗೆ ಅಂಟಿಕೊಂಡಿದೆ. ಒಳಪೊರೆ ಪುಪ್ಫುಸಕ್ಕೆ ಅಂಟಿಕೊಂಡಿದೆ. ಪೊರೆಗಳ ನಡುವೆ ತೆಳುವಾಗಿ ಹರಡಿದ ಅಂಟು ನೀರಿದೆ. ಇದರಿಂದ ಒಳಪೊರೆ ಹೊರಪೊರೆಯ ಮೇಲೆ ನುಣ್ಣಗೆ ಉಜ್ಜಲು ಅನುಕೂಲವಾಗುತ್ತದೆ.

ಬಲಪುಪ್ಫುಸದಲ್ಲಿ ಮೂರು ಮತ್ತು ಎಡಪುಪ್ಫುಸದಲ್ಲಿ ಎರಡು ಹಾಲೆಗಳಿವೆ(ಲೋಬ್ಸ್). ಪುಪ್ಫುಸದ ಹೊರಪಕ್ಕ ಉಬ್ಬಿದೆ. ಒಳಪಕ್ಕ ಸುಮಾರಾಗಿ ಚಪ್ಪಟೆಯಾಗಿ ಹೃದಯ,ಅನ್ನನಾಳ,ಉಸಿರ್ನಾಳ ಮತ್ತು ದೊಡ್ಡ ರಕ್ತನಾಳಗಳಿರುವ ಎದೆಯ ಮಧ್ಯದ ತಡಿಕೆಯ(ಮೀಡಿಯಾಸ್ಟೈನಂ) ಮೇಲೆ ನುಣ್ಣಗೆ ಉಜ್ಜುತ್ತದೆ. ಒಳಪಕ್ಕದ ಮಧ್ಯೆಯಿರುವ ಪುಪ್ಫುಸನಾಭಿಯಲ್ಲಿ(ಹೈಲಂ ಆಫ್ ಲಂಗ್) ಉಸಿರ್ನಾಳದ ಬಲ ಅಥವಾ ಎಡಶಾಖೆ ಶುದ್ಧ ಮತ್ತು ಮಲಿನ ರಕ್ತನಾಳಗಳು ಹಾಯುತ್ತವೆ. ಪುಪ್ಫುಸದ ತಳ ವಪೆಯ ಮೇಲೆ ಆಡುತ್ತದೆ. ನಾಭಿಯ ಮಟ್ಟದಿಂದ ಕೆಳಕ್ಕೆ ಉಸಿರ್ನಾಳಗಳ ೨/೩ ಭಾಗದಷ್ಟಿದೆ.

ಪುಪ್ಫುಸಗಳಲ್ಲಿ ರೋಗವಿರುವ ಸ್ಥಳಗಳನ್ನು ಈಗಿನ ಮೂರು ವಿಧಾನಗಳಿಂದ ಕಂಡುಹಿಡಿಯಬಹುದು:-

೧.ಎದೆಯ ಎಕ್ಸಕಿರಣಚಿತ್ರಗಳನ್ನು ಪರೀಕ್ಷಿಸುವುದು. ೨.ಬ್ರಾಂಕೋಸ್ಕೋಪ್ ಎಂಬ ಕೊಳವೆಯಂತಿರುವ ದುರ್ಬೀನಿನ ಮೂಲಕ ಉಸಿರ್ನಾಳಗಳ ಬಾಯಿಯನ್ನು ನೇರವಾಗಿ ಕಣ್ಣಿನಿಂದ ನೋಡುವುದು. ೩.ಬ್ರಾಂಕೋಗ್ರಾಮ್ ಉಸಿರ್ನಾಳಗಳಲ್ಲಿ ಎಕ್ಸಕಿರಣಗಳು ಕೂರಲಾಗದ ವಿಶೇಷದ್ರವವನ್ನು (ಸಾಧರಣವಾಗಿ ಸ್ವಲ್ಪ ಅಯೋಡೀನನ್ನು ಕರಗಿಸಿದ ಗಸಗಸೆ ಎಣ್ಣೆ) ತುಂಬಿ ಎದೆಯ ಎಕ್ಸಕಿರಣ ಚಿತ್ರಗಳನ್ನು ತೆಗೆದು ಪರೀಕ್ಷಿಸುವುದು.