ಪುಟ:Mysore-University-Encyclopaedia-Vol-2-Part-4.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಳುಮೆಯ ಸಾಧನಗಳು

    ಮಾಡಲು ಯಂತ್ರ ಸಾಧನಗಳನ್ನು ಉಪಯೊಳೆಗಿಸಿಕೊವಳ್ಳಬಹುದೇ ಎಂಬ ವಿಷಯೆದತ್ತ

ಜನರ ಗಮನ ಹರಿಯಿತು. ಈ ರೀತಿ ವ್ಯವಸಾಯೋತ್ಪನ್ನದ ವೆಚ್ಚ ಇಳಿಸಿಕೊಳ್ಳುವ ಸಾಧ್ಯಾಸಾಧ್ಯತೆಯನ್ನು ಕುರಿತ ಚಿಂತನೆ ಹೈಂರಿಭವಾಯಿತು.

    ಉಳುಮೆಯ ಮಖ್ಯ ಉದ್ದೇಶ ಬೀಜ ಮೊಳೆಯುವುದಕ್ಕೆ ಹದವಾದ, ಸಡಿಲವಾದ,

ಮೆತ್ತನೆಯ ಮಣ್ಣನ್ನು ಒದೆಗಿಸುವುದೇ ಆಗಿದೆ. ಹಾಗೆ ಮಾಡಿದಾಗ ಮೊಳೆತ ಬೀಜ ಸೆಸಿಯುಗಿ ಬೆಳೆದು ಫಲಕೊಡಲು ಅನುಕೂಲವಾದ ಸನ್ನಿವೇಶೆ ಏರ್ಪಡುತ್ತದೆ. ಪ್ರಾಸಂಗಿಕವಾಗಿ ನೆಲದೆಲ್ಲಿನ ಕಳೆಗಳೊ, ಕೊಳೆಗಳೂ ಹೊರಬಂದು ಮಣ್ಣಿನಲ್ಲಿ ಸೇರಿ ಕೊಳೆತು ಗೊಬ್ಬರವಾಗುತ್ತೆವೆ. ಬಿದ್ದೆ ನೀರು ಹರಿದು ಹೋಗೆದೆ ಇಂಗಿ ಮಣ್ಣಿನ ತೇವವನ್ನು ಹೆಚ್ಚಸುತ್ತದೆ. ಹಾಕಿದ ಗೊಬ್ಬರ, ಸುಣ್ಣ. ಜಿಪ್ಸಂ, ಮೊದಲಾದವು ಮಣ್ಣೆನಲ್ಲಿ ಚೆನ್ನಾಗಿ ಬೆರೆಯುತ್ತವೆ. ಮಿಗಿಲಾಗಿ ಉತ್ತ ಮಣ್ಣಿನಲ್ಲಿ ಗಾಳಿ ಚೆನ್ನಾಗಿ ಆಡುತ್ತೆದೆ. ಗಾಳಿಯಾಡುವುದರಿಂದ ಮೇಲ್ಮೃಯಲ್ಲಿನ ತೇವೆ ಆರಿ ಮಣ್ಣಿನ ಶಾಖ ಹೆಚ್ಚುತ್ತದೆ. ಹದವಾದ ಶಾಖ ಉರಿಟಾದಲ್ಲಿ ಮಾತ್ರ ಬೀಜ ಮೊಳೆತು ಸಸ್ಯ ಬೆಳೆಯುವುದು ಸಾಧ್ಯ ಬೇಸಾಯದ ನೆಲ ಸಡಿಲವಾಗಿ ಮಣ್ಣು ಹುಡಿ ಹುಡಿಯುಗಿದ್ದು ಹರಳು ಹರಳಾಗಿದ್ದು. ಬೀಜ ಮೊಳೆಯುವುದಕ್ಕೆ. ಸಸ್ಯೆ ಬೆಳವಣಿಗೆಗೆ ಹೆದವಾಗಿದ್ಧಾಗ ಅಂಥ ನೆಲ ಸಬ್ಬೆಯಲ್ಲಿದೆ ಎನ್ನುತ್ತಾರೆ. ಆ ಮಣ್ಣನ್ನು ಬೆರಳುಗಳ ಮಧ್ಯದಲ್ಲಿ ತೆಗೆದುಕೊಂಡು ಉಜ್ಜಿದಾಗ. ಅದು ಮೆದುವಾಗಿದ್ದು, ಪುಡಿಯಾಗುತ್ತದೆ. ಮಣ್ಣು ಸಡಿಲವಾಗಿರುವುದರಿಂದ ಕಣಗಳ ಮಧ್ಯೆದ ಅಂತರ ಹೆಚ್ಚುತ್ತದೆ. ಹದವಾದ ಕಣಜೋಡಣೆ ಇದ್ದು ಕಣಾ೦ತರ ಸಾಕಷ್ಟಿರುವುದರಿರಿದ. ಗಾಳಿ ಆಡಲು ತೇವೆ ಉಳಿಯಲು ಸೆಹಾಯವಾಗುತ್ತದೆ. ಬಿದ್ದ ನೀರು ಮಣ್ಣಿನೊಳೆಗೆ ಇಳಿದು ಇಂಗುವುದರಿಂದ ಮಣ್ಣು ಕೊಚ್ಚಿ ಹೋಗುವುದು ತಪ್ಪುತ್ತದೆ. ಉತ್ತು ಸಡಿಲವಾದ ಮಣ್ಣಿನಲ್ಲಿ ಸಂಯೂಕ್ತ ಕಣಗಳು ಮತ್ತು ಹುಡಿಮಣ್ಣು ಎರಡು ಇರುತ್ತವೆ. ಇಂಥ ಪರಿಸ್ಥಿತಿ ಸಸ್ಯದ ಬೆಳವಣಿಗೆಗೆ ಹಿತಕರ. ಬೇರು ಹರಡುವುದಕ್ಕೆ, ಗಾಳಿ ತೂರುವುದಕ್ಕೆ, ಸೂಕ್ಷ್ಮಜೀವಿಗಳ ಹಾಗು ರಾಸಾಯನಿಕ ಕ್ರಿಯೆಯಿಂದ ಬಿಡುಗಡೆಯಾಗಿ ಸಸ್ಯಕ್ಕೆ ಒದಗುವ ಪೋಷಕಾಂಶಗಳ ಹೀರುವಿಕೆಗೆ, ಕಣಾಂತರ ಹೆಚ್ಚಿದಷ್ಟೂ ಸಹಕಾರಿ. ಉಳುವುದರಿಂದ, ಕ್ರಿಮೀಕೀಟಗಳ ಮ್ಪ್ಟ್ಟೆಗಳು ನಾಶವಾಗುತ್ತವೆ.

    ಮಣ್ಣಿನ ಸೆಬ್ಬೆ ಅಥವಾ ಹದ, ಮಣ್ಣಿನ ಗುಣ ಮತ್ತು ಪೈರಿಗೆಅನುಗುಣವಾಗಿ ವ್ಯತ್ಯಾಸವಾಗುತ್ತದೆ. ರಾಗಿ, ಈರುಳ್ಳಿ, ಮಸಾಲೆಸೊಪ್ಪು ಮುಂತಾದ ಸಣ್ಣ ಬೀಜವುಳ್ಳ ಪೈರುಗಳಿಗೆ ಬಹಳ ಮೃದುವಾದ ಭೂಮಿ ಬೇಕು. ಈ ಬೇಜಗಳು ಒರಟುಭೂಮಿಯಲ್ಲಿ ಮೊಳೆಯುವುದಿಲ್ಲ. ಅದೇ ಜೋಳ, ಹತ್ತಿ, ಕಡಲೆಗಳ ಬೀಜ ಮೊಳೆಯಬೇಕಾದರೆ ಹೊರಟು ಭೂಮಿ ಅಗತ್ಯ. 
    ಕೆಂಪು ಮಣ್ಣು ಗೋಡು ಅಥವಾ ಮರಳಿನಿಂದ ಕೂಡಿರುತ್ತದೆ. ಆದ್ದರಿಂದ ಸುಲಭವಾಗಿ ಹಿಡಿಯಾಗುತ್ತದೆ.ಮೊದಲ ಮಳೆಯಲ್ಲೇ ಈ ಮಣ್ಣಿನಲ್ಲಿ ಭಿತ್ತನೆ ಸಾಧ್ಯ. ಕಪ್ಪು ಮಣ್ಣಿನಲ್ಲಿ ಜೇಡಿ ಹೆಚ್ಚು. ನೆಲ ಹೆಂಟೆ ಹೆಂಟೆಯಾಗಿದ್ದಾಗ  ಬಿದ್ದ ಮಳೆ ವ್ಮೇಲ್ಮೈಯಲ್ಲಿ ನಿಂತು ಒಳಗೆ ಇಳಿಯುವುದು ಸಾಧ್ಯ. ಪದೆ ಪದೆ ಉತ್ತು ಮೇಲ್ಮೈ ತುಂಬಾ ಹದವಾಗಿದ್ದರೆ, ಮಳೆ ಆದಮೇಲೆ ಮಣ್ಣಿನ ಮೇಲ್ಮೈ ಗಟ್ಟಿಯಾಗುತ್ತದೆ. ಮುಂದೆ ಬಿದ್ದ ಮಳೆ ಮಣ್ಣಿನೆಒಳಗೆ ಇಳಿಯದೆ ಮೇಲೆ ಹರಿದು ಆಳಾಗುತ್ತದೆ. 
     ಭೂಮಿಯನ್ನು ಉಳಬೇಕಾದರೆ ಒಂದೇ ಹದವಾದ ತೇವದ ಮಟ್ಟ ಅಗತ್ಯ. ಆಗಿದ್ದರೆ ಮಾತ್ರ ಮಣ್ಣು ಹುಡಿ ಹುಡಿ ಯಾಗುತ್ತದೆ. ಉಳಿಮೆಯ ಶ್ರಮವೂ ಹೆಚ್ಚಿರುವುದಿಲ್ಲ. ಈ ಹದ ಕಂಡು ಕೊಳ್ಳುವುದಕ್ಕೆ ಕೈಯಿಂದ ಹುಂಡೆ ಮಡಿ.ಎದೆ ಎತ್ತಿರದಿಂದ ಕೆಳಗೆ ಬಿಡಬೇಕು, ಅದು ಪುಡಿಪುಡಿಯಾದಲ್ಲಿ, ಉಳಿಮೆಗೆ ಹದ ಸರಿಯಾಗಿರುತ್ತದೆ. ತೇವ ಹೆಚ್ಚಾಗಿದ್ದರೆ ಹುಂಡೆಮಣ್ಣು ಚಪ್ಪಟೆಯಾಗುತ್ತದೆ. ತೇವ ತೀರ ಕಡಿಮೆಯಾಗಿದ್ದಾಗ ಹುಂಡೆ ಕಟ್ಟುವುದು ಆಗುವುದಿಲ್ಲ. ರೈತರು ಅನುಭವದಿಂದ ಉಳಿಮೆಗೆ ಹದವಾದ ತೇವ ಇದೆಯೆ ಇಲ್ಲವೆ ಎನ್ನುವುದನ್ನು ನಿರ್ಧರಿಸಬಲ್ಲರು.
     ಮೊದಲ ಉಳುಮೆ: ಪೈರು ಕ್ಪ್ಯಿಲಾದ ಮೊದಲ ಮುಂದಿನ ಬಿತ್ತನೆಯವರೆಗಿನ ಎಲ್ಲಾ ಉಳುಮೆ ಕೆಲಸಗಳಿಗೆ ಪೂರ್ವ ಭೂಮಿ ಉಳುಮೆ ಎನ್ನುತ್ತಾರೆ. ಇದರ ಮುಖ್ಯ ಉದ್ದೇಶ ಭೂಮಿ ಸಡಿಲವಾಗಿದ್ದು ಹುಡಿ ಹುಡಿ ಯಾಗಿದ್ದು. ಬೀಜ ಮೊಳೆತು ಸಸ್ಯ ಬೆಳೆಯುವುದಕ್ಕೆ ಹಿತಕರ ವಾತಾವರಣ ಕಲ್ಪನೆ. ಈ ಕೆಲಸಕ್ಕೆ ಹೊರದೇಶಗಳಲ್ಲಿ ವಿವಿದ ಸಲಕರಎಗಳನ್ನು ಬಳಸುತ್ತಾರೆ. ಬಾರವಾದ ನೇಗಿಲಿನಿಂದ ಭೂಮಿಯನ್ನು ಉತ್ತು ಮಣ್ಣನ್ನು ಹೆಂಟೆ ಹ್ಂಟೆಯಾಜಿ ಮಾಡುತ್ತಾರೆ. ಆನಂತರ ಕುಂಟೆ ಹೊಡೆದು ಹೆಂಟೆಯನ್ನು ಹೊಡೆದು ಭೂಮಿ ಹಸನು ಮಾಡುತ್ತಾರೆ. ಕುಂಟೆ ಹಲ್ಲುಗಳು ಮಣ್ಣಿನ ಒಳಗಡೆ ಇಖ್ಳಿದು ಹೆಂಟೆ ಸಣ್ಣ ಸಣ್ಣ ಚೂರುಗಳಾಗುತ್ತವೆ. ಆನಂತರ ಹಲುಬೆ ಹೊಡೆದು ಮಣ್ಣನ್ನು ಹದ ಮಾಡುತ್ತಾರೆ. ಕೆಲ ಸಂದರ್ಭದಲ್ಲಿ ರೋಣಗಳನ್ನು ಹಾಯಿಸಿ ಹಂಟೆ ಪುಡಿಮಾಡಿ ಬಿತ್ತನೆಗೆ ನೆಲ ಹದ ಮಾಡುತ್ತಾರೆ. ಈ ವಿವಿದ ಮುಟ್ಟುಗಳ ಬಳಕೆಯ ಉದ್ದೇಶ್ ಹಂತ ಹಂತವಾಗಿ ಮಣ್ಣನ್ನು ಕೃಷಿ ಮಾಡಿಒ ಅದನ್ನು ಹದಕ್ಕೆ ತರವುದೆ ಆಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಉಳುಮೆಗೆ ಮುಖ್ಯ ಸ್ಥಾನ್ ಅ ನೇಜಲು. 
    ಬತ್ತದವ್ ಗದ್ದೆಗಳಲ್ಲಿ 5-8 ಸೆಂ. ಮೀ ಆಳದ ನೀರು ಯಾವಗಲೂ ನಿಲ್ಲುವುದು ಅಗತ್ಯ. ಮೊದಲ ಬಾರಿ ನೀರು ಕಟ್ಟಿ ಉಳುಮೆ ಆದ ಮೇಲೆ, ಪುನಹ ನೀರು ನಿಲ್ಲಿಸಿ ತುಳಿದು ಕೆಸರು ಮಾಡುತ್ತಾರೆ. ಹೀಗೆ ಮಾಡುವುದರಿಂದ, ನೇಗಿಲು ಆಳಕ್ಕಿಂತ ಕೆಳಗಿರುವ ಮಣ್ಣು ಇನ್ನೂ ಹೊತ್ತು, ನೀರು ಬಸಿಯುವುದು ಕಡಿಮೆಯಾಗುತ್ತದೆ. ಗದ್ದೆಯ್ತಲ್ಲಿ ನೀರು ನಿಲ್ಲುಯ್ವುದು ಅಸಾಧ್ಯವಾಗುತ್ತದೆ. ಮೊದಲ ಉಳುಮೆಯ ಸಮಯದಲ್ಲಿಯೇ ಹೊಂಗೆ ಮುಂತಾದ ಹಸಿರೆಲ್ ಗೊಬ್ಬರಗಳನ್ನು ಭೂಮಿಯಲ್ಲಿ ಸೇರಿಸುತ್ತಾರೆ. ಅದು ಎರಡು ಮೂರು ವಾರಗಳಲ್ಲಿ ಕೊಳೆತು ಮಣ್ಣಿನಲ್ಲಿ ಸೇರುತ್ತದೆ.
    ಭೂ ಸಾಗುವಳಿ; ಸಾಗುವಳಿಗೆ ಬಳಸುವ ಉಪಕರಣೆಗಳನ್ನು ಕೆಲಸದ ಉದ್ದೇಶದ ಅಧಾರದ ಮೇಲೆ ಮುಖ್ಯವಾಗಿ ಮೂರು ಗುಂಪು ಮಾಡಬಹುದು; ೧. ಗಡುಸಾದ ನೆಲವನ್ನು ಸಡಿಲ ಮಾಡಿ ಹೆಂಟೆಯನ್ನು ಬಿಡಿಸುವಂಥವು. ೨. ಹೆಂಟೆಯನ್ನು ಹೊಡೆದು ಹುಡಿಮಾಡುವಂತವು. ೩. ಪುನಃ ಮೇಲ್ಮಣ್ಣನ್ನು ಪೈರಿಗೆ ಅಗತ್ಯವಾದಂತ ಸಮವಾಗಿ ಹರಡುವಂಥವು ಇಲ್ಲವೆ ಮಟ್ಟ್ಸಮಾಡಿ ಒತ್ತುಗೂಡಿಸುವಂಥವು. ಮೊದಲ ಕೆಲಸಕ್ಕೆ ಹೆಚ್ಚಿನ ಶ್ರಮ ಅಗತ್ಯ. ಇದಕ್ಕೆ ನೇಗಿಲನ್ನು ಬಳಸುತ್ತಾರೆ. ಆನಂತರ ಹರಗಿ ಇಲ್ಲವೆ ಕುಂಟೆ ಹೊಡೆದು ಹೆಂಟೆಯನ್ನು ಪುಡಿ ಮಾಡಬಹುದು.