ಉಳುವಿ ಉಳುಮೆಯ ಕೆಲಸಗಳಿಗಾಗಿ ಬಳಸುವ ಯಂತ್ರಗಳಲ್ಲಿ ಟ್ರ್ಯಾಕ್ಟರಿನದು ಬಲು ಮುಖ್ಯ ಪಾತ್ರ ಆಡು ಮುಟ್ಟದ ಗಿಡವಿಲ್ಲವೆನ್ನುವಂತೆ ಹೊಲದಲ್ಲಿ ಟ್ರ್ಯಾಕ್ಟರಿನಿಂದ ಮಾಡಲಾಗದ ಕೆಲಸವೇ ಇಲ್ಲವೆಂದು ಹೇಳಬಹುದು. ಬೀಜ ಬಿತ್ತಲು ನೆಲ ಹದಮಾಡುವುದರಿಂದ ಹಿಡಿದು ಬೆಳೆದ ಬೆಳೆಯ ಕೊಯ್ದು ಮಾಡಿ ಧಾನ್ಯವನ್ನು ಶೇಖರಿಸಿ ಮನೆಗೆ ತರುವವರೆಗಿನ ಎಲ್ಲ ಕೆಲಸಗಳಿಗೂ ಇದನ್ನು ಬಳಸಬಹುದು. ಟ್ರ್ಯಾಕ್ಟ ಮೊದಲು ಕಾಣಿಸಿಕೊಂಡದ್ದು ಅಮೆರಿಕದಲ್ಲಿ, ಸುಮಾರು 1880ರ ಹೊತ್ತಿಗೆ. ಆದರೆ ಟ್ರ್ಯಾಕ್ಟರ್' ಎಂಬ ಪದ ಬಳಕೆಗೆ ಬಂದದ್ದು 1906ರಿಂದೀಚೆಗೆ, ಮೊದಮೊದಲು ಇದನ್ನು ಭಾರ ಸಾಗಿಸಲಷ್ಟೇ ಉಪಯೋಗಿಸುತ್ತಿದ್ದರು. ಕಾಲ ಕಳೆದಂತೆ ಕೃಷಿ ಕೆಲಸಗಳಿ ಗಾಗಿಯೇ ಇದರ ಉಪಯೋಗ ಹೆಚ್ಚಿತ್ತು ಸಾಮಾನ್ಯವಾಗಿ ಕೃಷಿಕೆಲಸಗಳಲ್ಲಿ ಸಂದರ್ಭೋಚಿತ ವಾಗಿ ಉಳುವ, ಬಿತ್ತುವ, ಕೊಯ್ಯುವ, ಬೀಜಗಳನ್ನು ಬೇರ್ಪಡಿಸುವುದೇ ಮೊದಲಾದ ಕೆಲಸಗಳಿಗೆ ಬೇಕಾಗುವ ಯಂತ್ರಭಾಗಗಳನ್ನು ಟ್ರ್ಯಾಕ್ಟರಿನ ಹಿಂದೆ ಜೋಡಿಸಿ ಬಳಸುತ್ತಾರೆ. ಹೊಲದಲ್ಲಿ ಉಳಿದ ದಂಟು ಮತ್ತು ಹುಲ್ಲನ್ನು ರಾಶಿಹಾಕಲೂ ಇದನ್ನು ಉಪಯೋಗಿಸ ಬಹುದು. ಇದರ ಬಳಕೆಯಿಂದ ಕೃಷಿ ಕೆಲಸಗಳಿಗಾಗಿ ಖರ್ಚಾಗುವ ಅಪಾರ ಕೂಲಿಯನ್ನೂ ಕೆಲಸದ ವೇಳೆಯನ್ನೂ ತಗ್ಗಿಸಬಹುದು. ಒಬ್ಬ ಮನುಷ್ಯ 20 ಅಶ್ವ ಸಾಮರ್ಥ್ಯದ ಒಂದು ಟ್ರ್ಯಾಕ್ಟರನ್ನು ಉಪಯೋಗಿಸಿ 200 ಜನರ ಕೆಲಸವನ್ನು ನಿಭಾಯಿಸಬಲ್ಲ. ಭಾರತದಲ್ಲಿ ಇತ್ತೀಚೆಗೆ ರೈತರು ಆಧುನಿಕ ಯಂತ್ರಗಳನ್ನು ಬಳಸಲು ಸರ್ಕಾರ ಪತ್ತಾ ಸುತ್ತಿಗೆ ಬ್ಯಾಂಕುಗಳ ಮೂಲಕ ಟ್ರ್ಯಾಕ್ಟರುಗಳನ್ನು ಹಂಚುವ ವ್ಯವಸ್ಥೆ ಮಾಡಿದೆ. (20.00.00.) ಉಳುವಿ: ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ ತಾಲ್ಲೂಕಿನ ದಕ್ಷಿಣಕ್ಕೆ 32 ಕಿಮೀ. ದೂರದಲ್ಲಿ ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಗ್ರಾಮ. ಪುರಾತನ ಸ್ಥಳ, ದುರ್ಗಮ ಪ್ರದೇಶ. ಜನಸಂಖ್ಯೆ 73S (2001). ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಇಲ್ಲಿಗೆ ಬರಲು ಎರಡು ಅರಣ್ಯ ಮಾರ್ಗಗಳಿವೆ. ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ವೀರಶೈವ ಸಾಧುಗಳವಾಗಿರಬೇಕು. ಒಂದಕ್ಕೆ ಬಸವಣ್ಣನವರ ಸಹೋದರಿ ಚೆನ್ನಬಸವೇಶ್ವರ ದೇವಾಲಯ ಎನ್ನಲಾದ ಅಕ್ಕನಾಗಮ್ಮನ ಗವಿ ಎನ್ನುತ್ತಾರೆ. ವಡ್ಕಲದಲ್ಲಿ ಒಂದು ಹಳೆಯ ಕಟ್ಟಡವಿದೆ. ಇದರ ಬದಿಗೆ ಕೆರೆಯಿದ್ದು ಸದಾಕಾಲ ನೀರು ತುಂಬಿರುತ್ತದೆ. ಪೂರ್ವಕ್ಕೆ ಇನ್ನೊಂದು ಕೆರೆಯಿದೆ. ಇದರಲ್ಲಿ ಸದಾಕಾಲ ನೀರಗುಳ್ಳೆಗಳು ಮೇಲಕ್ಕೆ ಬರುತ್ತಿರುತ್ತವೆ. ಯಾತ್ರಿಕರು ಇಲ್ಲಿ ಮೀಯುತ್ತಾರೆ. ಉಳುವಿ ಶಬ್ದದ ಅರ್ಥ ನಾನು ಇಲ್ಲಿ ಉಳಿಯುವೆ ಎಂದಾಗುತ್ತದೆ. ಆದರೆ ಇದರ ಇತಿಹಾಸ ಸ್ಪಷ್ಟವಿಲ್ಲ. 12ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ನೀರಶೈವರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳವಿಯನ್ನು - 225 ಪ್ರವೇಶಿಸಿದರು. ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು. ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ವೀರಶೈವ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣ ಇಲ್ಲಿ ಲಿಂಗೈಕ್ಯನಾದ ಹೈದರಿನಿಗಿಂತ ಪೂರ್ವದಲ್ಲಿ ಈ ಪ್ರದೇಶವನ್ನು ಒಬ್ಬ ಹರಿಜನ ಆಳುತ್ತಿದ್ದ. ವೀರಭದ್ರ ಹೊಂಡದ ಹತ್ತಿರ ಇರುವ ಆತನ ಮನೆಯನ್ನು ಇಂದೂ ಗುರುತಿಸಬಹುದು. ಹೈದರ್ ಈತನನ್ನು ಗೆದ್ದು ಈ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ. ಈ ಟಿಪ್ಪುವಿನ ತರುವಾಯ ಬಾರೆ ಬಾಬುರಾವ್ ಎಂಬಾತ ಇಲ್ಲಿ ತುಂಬ ಪ್ರಭಾವ ಬೀರಿದ. ಆತ ಕಟ್ಟಿಸಿದ ಒಂದು ಸಣ್ಣ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಇದರ ಸಮೀಪದಲ್ಲಿರುವ ಬಾಝರ ಕುಣಂಗ ಎಂಬ ಹಳ್ಳಿ ದೊಡ್ಡ ವ್ಯಾಪಾರಕೇಂದ್ರ ಉಳುವಿಯ ಮಹಾಮನೆ: ಚೆನ್ನಬಸವಣ್ಣನವರ ಸಮಾಧಿ ಇರುವ ಸ್ಥಳಕ್ಕೆ ಈ ಹೆಸರಿದೆ. ಕಲ್ಯಾಣದಲ್ಲಿದ್ದ ಬಸವಣ್ಣನವರ ಮನೆಯಲ್ಲಿ 1,96,000ಶರಣರಿಗೆ ಆಶ್ರಯ ನೀಡಿ ದಾಸೋಹ ನಡೆಸಿದ್ದರಿಂದ ಅದನ್ನು ಮಹಾಮನೆ ಎಂದು ಕರೆಯಲಾಯಿತೆಂದು ವೀರಶೈವ ಸಾಹಿತ್ಯ ಗ್ರಂಥಗಳು ಹೇಳುತ್ತವೆಯಷ್ಟೆ, ಅಂಥ ಕಟ್ಟಕಡೆಯ ದಾಸೋಹ ನಡೆದದ್ದು ಇಲ್ಲಿ. ಶಿವರಾತ್ರಿ ಅಮಾವಾಸ್ಯೆಯ ಪೂರ್ವದ ಪೂರ್ಣಿಮೆಯಂದೂ ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾರ್ಗಗಳು ಕಷ್ಟದಾಯಕವಾಗಿದ್ದರೂ ಯಾಂತ್ರಿಕರೂ ಜಾತ್ರೆಗೆ ಕಿಕ್ಕಿರಿದು ನೆರೆಯುತ್ತಾರೆ. 63ಶ್ ಟಕ ಮತ್ತು ಮಹಾರಾಷ್ಟ್ರಗಳಿಂದಲೂ ಸಹಸ್ತಗಟ್ಟಲೆ ಬಂದು ಸೇರುತ್ತದೆ. (ಬಿ.ಎಸ್.) ಉಳ್ಳೂರ್ -1949, ಮುರನ್ ಆಶಾನ್, ವಲ್ಕ್ಕ್ ಕಣಗಳಷ್ಟೇ ಶ್ರೇಷ್ಠರೂ ಅವರ ಸಮಕಾಲೀನರೂ ಆಗಿದ್ದ ಕವಿಗಳು ಉಳ್ಳೂ ಎಸ್.ಪರಮೇಶ್ವರಯ್ಯ ಅವರು. ಮಲೆಯಾಳ ಸಾಹಿತ್ಯದಲ್ಲಿ ಇವರ ಸ್ಥಾನ ದೊಡ್ಡದು. 1897ರಲ್ಲಿ ಪದವೀಧರರಾಗಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡು ಕೆಲಸದಲ್ಲಿದ್ದುಕೊಂಡೇ ಬಿ.ಎಲ್. ಮತ್ತು ಎಂ.ಎ. ಪದವಿಗಳನ್ನು ಪಡೆದುಕೊಂಡು ಸರ್ಕಾರದ ಅನೇಕ ಇಲಾಖೆಗಳಲ್ಲಿ ಕೆಲಸಮಾಡಿ ಕಡೆಯಲ್ಲಿ ಲ್ಯಾಂಡ್ ರೆವಿನ್ಯೂ ಇನ್ಸ್ ಪೆಕ್ಟರಾಗಿ ನಿವೃತ್ತರಾದರು. ವಲಿಯ ಕೋಯಿತ್ತಂಬುರಾನ್ ಕವಿಯ ಪ್ರಮುಖ ಅನುಯಾಯಿಯಾಗಿದ್ದುಕೊಂಡು ಸಾಹಿತ್ಯದಲ್ಲಿ ಅಭಿಜಾತ ಸಂಪ್ರದಾಯನಿಷ್ಠರಾಗಿದ್ದ ವರಿವರು. ದ್ವಿತೀಯಾಕ್ಷರ ಪ್ರಾಸದ ವಾದವಿವಾದದಲ್ಲಿ ಅವರು ಬಲು ದಿಟ್ಟ ನಿಲವನ್ನು ತಾಳಿದರು. ಉಮಾಕೇರಳವೆಂಬ ಮಹಾಕಾವ್ಯ ಆ ನಿಲುವಿನ ಫಲಶ್ರುತಿ, ಕಾಲಕ್ರಮದಲ್ಲಿ ಅವರ ಕಾವ್ಯ ಅನೇಕ ಪರಿವರ್ತನೆಗಳಿಗೆ ವಿಧೇಯವಾಯಿತು. ಇವರು ಕಾವ್ಯರಚನೆಗೆ ಪ್ರಾರಂಭ ಮಾಡಿದಾಗ ಕುಮಾರನ್ ಆಶಾನ್, ವಳ್ಳತ್ತೋಳ್ ಮೊದಲಾದ ಉತ್ಕೃಷ್ಟ ಕವಿಗಳು ತಮ್ಮ ಗಾನಸುಧೆಯಿಂದ ಮಲೆಯಾಳಿಗಳನ್ನು ತಣಿಸಿದ್ದರು. ಒಂದು ಕಾಲದಲ್ಲಿ ತಾವು ಅನುಪೇಕ್ಷಣೀಯವೆಂದು ಭಾವಿಸಿದ್ದ ದ್ವಿತೀಯಾಕ್ಷರ ಪ್ರಾಸ ಜನಾಭಿರುಚಿಯನ್ನನುಸರಿಸಿ ಅಗಣ್ಯವಾಗುತ್ತದೆಂಬುದನ್ನು ಕಂಡೊಡನೆಯೇ ಉಳ್ಳೂ ಅದನ್ನು ತ್ಯಜಿಸಿದರು. ವಳ್ಳತ್ತೋಳ್ ಕವಿ ದ್ರಾವಿಡ ವೃತ್ತಗಳಲ್ಲಿ ಕವಿತಾರಚನೆ ಮಾಡಿ ಕೇರಳೀಯರ ಪ್ರೀತಿಪಾತ್ರರಾಗಿರುವುದನ್ನು ಮನಗಂಡು ಅವರು ಆ ಬಗೆಯ ಕಾವ್ಯ ನಿರ್ಮಿತಿಯನ್ನೂ ಮಾಡಿದರು. ಉಮಾಕೇರಳದ ಬಳಿಕ ಇವರು ರಚಿಸಿದ ಕಾವ್ಯಗಳೆಲ್ಲ ಸಂಕಲಿತವಾಗಿ ಹೊರಬಂದಿವೆ. ಅರುಣೋದಯಂ, ತಾರಾಹಾರಂ, ಕಿರಣಾವಲಿ, ರತ್ನಮಾಲಾ, ಮಣಿಮಂಜೂಷ, ಹೃದಯ ಕೌಮುದಿ, ತರಂಗಿಣಿ, ಕಲ್ಪಶಾಖಿ, ಅಮೃತಧಾರ, ದೀಪಾವಲಿ, ಚಿತ್ರಶಾಲ, ತಹೃದಯ- ಎಂಬುವೇ ಆ ಸಂಕಲನಗಳು. ಇವಲ್ಲದೆ ಕರ್ಣಭೂಷಣಂ, ಪಿಂಗಳ, ಭಕ್ತಿದೀಪಿಕ ಮೊದಲಾದ ಖಂಡಕಾವ್ಯಗಳನ್ನು ಇವರು ರಚಿಸಿದ್ದಾರೆ. ಸುಜಾತೋದ್ವಾಹಂ ಚಂಪೂ, ಮಂಗಳಮಂಜರಿ, ವಂಜೀಶಗೀತ ಮುಂತಾದ ಹಳೆಯ ಬಗೆಯ ಕಾವ್ಯಗಳ ರಚನೆಯೂ ಅವರಿಂದ ನಡೆದಿದೆ. ತಾರಾಹಾರವೆಂಬ ಕವನ ಸಂಗ್ರಹದಲ್ಲಿ ಬರುವ 'ಮಣಿತ್ತುಳ್ಳಿ' (ಮಳೆಹನಿ) ಎಂಬ ಕವನ ಉಳ್ಳೂರರ ಕಲಾವೈಭವಕ್ಕೆ ಪರಮ ಸಾಕ್ಷಿಯಾಗಿದೆ. ಆಕಾಶದಿಂದ ನೆಲಕ್ಕೆ ಬೀಳಲಿರುವ ಮಳೆಯ ಹನಿಯನ್ನು ಅನೇಕಾನೇಕ ಸೌಂದರ್ಯ ಪ್ರತೀಕಗಳೊಡನೆ ಉಳ್ಳೂ ಉಪಮಿಸುತ್ತಾರೆ, ಉಪ್ಪೇಕ್ಷಿಸುತ್ತಾರೆ. 'ವೀಣ ಪೂ' (ಬಿದ್ದ ಹೂ) ಕವನದಲ್ಲಿ ಕುಮಾರನ್ ಆಶಾನ್ ಮಾಡಿರುವಂತೆ ಮಳೆಹನಿಯ ಮೂಲಕ ಮನುಷ್ಯ ಜೀವನವನ್ನು ಚಿತ್ರೀಕರಿಸಲು ಯತ್ನಿಸಿದ್ದಾರೆ. (ಕೆ.ಕೆ.ಎಸ್.)
ಪುಟ:Mysore-University-Encyclopaedia-Vol-2-Part-4.pdf/೬೬
ಗೋಚರ