ಪುಟ:Mysore-University-Encyclopaedia-Vol-2-Part-4.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉರುಗುಗೊರಲು - ಉರುಗ್ವೇ

  ಸಾಂಕ್ರಾಮಿಕವನ್ನು ಚೆನ್ನಾಗಿ ಎದುರಿಸಲು ಅಮೆರಿಕದಲ್ಲಿ ಹೆಚ್ಚಿನ ಯತ್ನಗಳಾದವು. ಗೊತ್ತಾದ ಲಸಿಕೆಯನ್ನು ಮೊದಲೇ ಹೇರಳವಾಗಿ ತಯಾರಿಸಿ ಇಟ್ಟುಕೊಂಡಿದ್ದರು. ಓಳೆಯ ಬಲವಿರುವ ಲಸಿಕೆ ಹಾಕಿದಾಹಗ ಶೇ.೮೦ ಮಂದಿಗೆ ಹತ್ತದಂತೆ ತಡೆಯುವುದು ಸಾಧ್ಯವಾಯಿತು. ರೋಗದಿಂದ ನರಳುವವರ ಸಂಖ್ಯೆ ಇಳೆಯಿತು(ನೋಡಿ-ಏಕಾಣುಜೀವಿಕ; ಸೋಂಕಿನ- ರೋಗಗಳು; ಕೈಗಾರಿಕಾ-ವೈದ್ಯ; ನೆಗಡಿ)
  ಉರುಗುಗೊರಲು: ಯಾವ ಕಾರಣದಿಂದಲಾದರೂ ಕತ್ತನ್ನು ಸೊಟ್ಟವಾಗಿ ಇರಿಸಿಕೊಡಿದ್ದು ಅತ್ತಿತ್ತ ಆಡಿಸಿದಂತೆ ಇರುವಿಕೆ(ರೈ ನೆಕ್),ಕತ್ತು ಹಿಡಿದಂತಿರಬಹುದು, ಇಲ್ಲವೇ ಸೆಡೆತುಕೊಂಡಿರಬಹುದು. ಹಿಡಿದಂತಿರುವ ಸೊಟ್ಟಕತ್ತು ಹುಟ್ಟುತ್ತಲೇ ಬಂದಿರುವುದು. ಅಂತೂ ಎಳೆತನದಲ್ಲೇ ಹೀಗಾಹಗಿರುವುದಾದರೂ ಹಸುಗೊಸಿನಲ್ಲಿ ಕೊರಳು ಅಷ್ಟಾಗಿ ಬೆಳೆಯದೆ ಮೋಟಾಗಿರುವುದರಿಂದ ಆಗ ಸುಲಭವಾಗಿ ಗೊತ್ತಗದಿರಬಹುದು. ಇಲ್ಲಿ ಮುಖ್ಯವಾಗಿ ತಲೆಯನ್ನು ಒಂದು ಪಕ್ಕಕ್ಕೆ ಬಾಗಿಸಿ ಗಲ್ಲವನ್ನು ಇನ್ನೊಂದು ಪಕ್ಕಕ್ಕೆ ತಿರುಗಿಸಿ ತಲೆವಾಲುವಂತೆ ಮಾಡುವ ಸ್ನಾಯುವಾದ ಎದೆ ಎಲುಬುಚೂಚುಕಂದ(ಸ್ಪರ್ನೊಮ್ಯಾಸ್ಟಾಯ್ಡ್) ಮೊಟಕಾಗಿ ಬಿರುಸಾಗಿ ಬಿರಿಸಿಕೊಂಡು, ಮುಟ್ಟಿದರೆ ಕಡ್ಡಿಯಂತೆ ಗಡುಸಾಗಿ ತೋರುವುದು. ಇದಕ್ಕೆ ಸಂಬಂಧಿಸಿದ ಅಕ್ಕಪಕ್ಕದ ಕೂಡಿಸುವ ಊತಕದ ಬೆಳೆವಣಿಗೆಯೂ ಕೊಂದಿರುವುದು. ಹೀಗಾಗುವುದರ ಸರಿಯಾದ ಕಾರಣ ಗೊತ್ತಿಲ್ಲ. ಹೆರಿಗೆ ಆಗುವಾಗಿನ ಅಪಾಯ ಪೆಟ್ಟುಗಳಿಂದ ಆ ಸ್ನಾಯು ಹಾಗೆ ಬಿರುಸಾಗಿ ಮುದುರಿಕೊಳ್ಳುವುದೆಂಬ ಒಂದು ಅಭಿಪ್ರಾಯವಿದೆ. ಎಳೆಗೂಸಿನಲ್ಲೇ ಕೊರಳಿನ ಸ್ನಾಯುಗಳ ಅರನಾರಿ(ಪಾರ್ಶ್ವವಾಯು, ಲಕ್ವ, ಪೆರ್ಯಲಿಸಿಸ್) ಆಗುವುದು ಕಾರಣವೆಂದು ಮತವಿದೆ. ಇದಕ್ಕೆ ಕುಮ್ಮಕ್ಕಾಗಿ ಸೊಟ್ಟಕತ್ತು ಬಾಗಿರುವ ಪಕ್ಕಫ಼ ಮೊಗ ಚೆನ್ನಗಿ ಬೆಳೆಯದಿರುವುದು. ಇಂಥ ಸೊಟ್ಟ ಕತ್ತನ್ನು ಸರಿಪಡಿಸುವ ಒಂದು ಉಪಾಯ ಶಸ್ತ್ರಕ್ರಿಯೆಯಿಂದ ಆ ಸ್ನಾಯುವನ್ನು ಕತ್ತರಿಸಿ ಬಿಡಿಸುವುದು. ಆಗ ಸೊಟ್ಟಕತ್ತು ನೆಟ್ಟಗಾಗಿ ಸರಾಗವಾಗಿ ಆಡಿಸಬಹುದು. ಆದರೆ ತೀರ ಎಳೆಯದರಲ್ಲೇ ಹೀಗೆ ಮಡದಿದ್ದಲ್ಲಿ ಮೊಗದ ಅಸಮರೊಪ(ಎಸಿಮೆಟ್ರಿ)ಹಾಗೇ ಉಳಿಯಬಹುದು. ಶಸ್ತ್ರಕ್ರಿಯೆ ಆದಮೇಲೆ ಇನ್ನೊಂದು ಪಕ್ಕದ ಸ್ನಾಯುಗಳಿಗೆ ಬಲಬರುವ ತನಕ ತಲೆಯನ್ನು ಎದುರು ಕಡೆಗೆ ಕೆಲಕಾಲ ಎಳೆದಿಟ್ಟಿರಬೇಕಾಗುತ್ತದೆ.
  ಸೆಡೆತದಿಂದಾದ ಸೊಟ್ಟಕತ್ತಿಗೆ ಒಂದು ಪಕ್ಕದ ಸ್ನಾಯುಗಳ ಮಿತಿಮೀರಿದ ಎಳೆತವೇ ಕಾರಣ. ಈ ಸೆಡತ ಬಿಟ್ಟು ಬರಬಹುದು; ಇಲ್ಲವೇ ಎಡಬಿಡದೆ ಇರಬಹುದು. ಆಳವಾದ ಗಾಯವಾಗಿ ಕಲೆಗಟ್ಟುವುದು, ಕೊರಳೆನ ಬೆನ್ನೆಲುಬುಗಳ ರೋಗಗಳು, ಹಾಲುರಸ ಗ್ರಂಥಿಗಳ ಉರಿತ, ಮೆಂದಡಿಕೆಯುರಿತ(ಟಾನ್ಸಿಲೈಟಿಸ್), ಕಣ್ಣಿನ ನೋಟದ ವ್ಯತ್ಯಾಸ, ಕೀಲುವಾತ(ರುಮ್ಯಾಟಿಸಂ) ಖೋರಾಲೀಣಾ ಗ್ರಂಥಿಗಳ ಊತ, ಗಂಟಲ ಹಿಂದುಗಡೆ ಗೋಡೆಯಲ್ಲಿ ಏಳುವ ಕುರು, ಕಿರ್ಮಿದುಳಿನ(ಸೆರಿಬೆಲಂ) ಗಂತಿಗಳು ಮುಖ್ಯಕಾರಣಗಳು; ಉನ್ಮಾದದಲ್ಲೂ(ಹಿಸ್ಟೀರಿಯ) ಚಳಿಗೊಡ್ಡಿದ್ದರಿಂದಲೂ ಕೊರಳಿನ ಬೆನ್ನೆಲುಬುಗಳ ಉರುಗು ಗೊರಲಾಗಬಹುದು, ಕ್ಷಯರೋಗದಿಂದಲೂ ಆಗುವುದು ಸಾಮನ್ಯ.
  ಉರುಗ್ವೇ:ದಕ್ಷಿಣ ಅಮೇರಿಕದ ಅತಿಪಟ್ಟ ಸ್ವತಂತ್ರದೇಶ. ಇದರ ವಿಸ್ತೀರ್ಣ ೧೭೭೫೦೮ ಚ.ಕಿಮೀ. ದಕ್ಷಿಣೋತ್ತರವಾಗಿ ೫೩೦ ಕಿಮೀ. ಉದ್ದ ಮತ್ತು ಪೂರ್ವ ಪಶ್ಚಿಮಮವಾಗಿ ೪೮೦ ಕಿಮೀ. ಅಗಲವಾಗಿದೆ. ಉತ್ತರದಲ್ಲಿ ಬ್ರೆಜಿಲ್, ದಕ್ಷಿಣದಲ್ಲಿ ರಿಯೊ ದೆ ಲ ಪ್ಲಾಟಾ ನದಿಯ ಅಳಿವೆ, ಪಶ್ಚಿಮದಲ್ಲಿ ಉರುಗ್ವೇ ಣಾಡೀ, ಫ್ಫೋಋವಾಡಾಳ್ಳೀ ಆಟ್ಲಾಂಟಿಕ್ ಸಾಗರ- ಇವು ದೇಶದ ಮೇರೆಗಳು.
  ಮೇಲ್ಮೈ ಲಕ್ಷಣ: ಈ ದೇಶದ ದಕ್ಷಿಣ ಭಾಗ ಬ್ರೆಜಿಲಿಯನ್ ಪ್ರಸ್ಥಭೂಮಿಯ ಕೊನೆಯಾದ್ದರಿಂದ ಇಲ್ಲಿ ಹಲವಾರು ಪುಟ್ಟ ಬೆಟ್ಟಗಳಿವೆ. ಕರಾವಳಿಯ ಉದ್ದಕ್ಕೂ ಕಡಲುಬ್ಬರದಿಂದಾದ ಸರೋವರಗಳೂ ಸೈಕತ ಗುಡ್ಡಗಳೂ ಸಾಮಾನ್ಯ. ಈ ಭಾಗದಲ್ಲಿ ಹರಿಯುವ ನದಿಗಳ ದಡಗಳು ಎತ್ತರವಿಲ್ಲ. ಉತ್ತರಾರ್ಧದ ಪ್ರದೇಶ ಹೆಚ್ಚು ವೈವಿದ್ಯಮಯ. ಇಲ್ಲಿ ಕಂದರಗಳೂ ತಗ್ಗಿನ ಪ್ರಸ್ಥಭೂಮಿಗಳೂ ವಿಶಾಲ ಕಣಿವೆಗಳೂ ಇವೆ. ಆದರೆ ಒಟ್ಟೆನಲ್ಲಿ ಈ ದೇಶದ ಯಾವ ಭಾಗವೂ ೬೧೦ಮೀ. ಗಿಂತ ಎತ್ತರವಾಗಿಲ್ಲ. ಕರಾವಳಿ ಪ್ರದೇಶ ಮತ್ತು ಒಳನಾಡಿನ ತಗ್ಗು ಪ್ರದೇಶಗಳೆಂದು ವಿಂಗಡಿಸಬಹುದು. ಎರಡನೆಯ ಪ್ರದೇಶವು ಒಟ್ಟು ಭೌಗೋಳಿಕ ಪ್ರದೇಶದಲ್ಲಿ ೪/೫ ಭಾಗವನ್ನಾದರಿಸಿದ ವಿಸ್ತಾರವಾದ ಭಾಗ.
  ಉರುಗ್ವೇಯಲ್ಲೇ ಹರಿಯುವ ದೊಡ್ಡನದಿಗಳು ಯಾವುವೂ ಇಲ್ಲ. ರಿಯೋನೇಗ್ರೊ ಅತ್ಯಂತ ದೊಡ್ಡದು. ಇದರ ಆಧೊಕೆಳಭಾಗ ಮಾತ್ರವೇ ನೌಕಾಸಂಚಾರ ಯೋಗ್ಯ. ಉಳಿದ ನದಿಗಳಲ್ಲಿ ಸಣ್ಣಪುಟ್ಟ ನೌಕೆಗಳು ಯಾನ ಮಾಡಬಹುದಷ್ಟೇ. ರೀಯಾನೇಗ್ರೊವನ್ನು ಬಿಟ್ಟರೆ ಹೆಸರಿಸಬಹುದಾದ ಉಳಿದ ನದಿಗಳೆಂದರೆ ಸಾಂತಾಲೂಸಿಯಾ, ಕ್ವೀಗ್ವೆರಿ ಮತ್ತು ಸೆಬೊಲಾಟಿ. ಉರುಗ್ವೇಯ ಪಶ್ಚಿಮದಂಚಿನಲ್ಲಿ ಹರಿಯುವ ಉರುಗ್ವೇ ನದಿಯ ಮೇಲೆ ಅದರ ಮುಖದಿಂದ ಪೈಸಾಂಡೂ ನಗರದವರೆಗೆ ಜಹಜು ಸಂಚಾರಾವಕಾಶವುಂಟು. ಅಲ್ಲಿಂದ ಮುಂದೆ ಸಣ್ಣ ನೌಕೆಗಳು ಸಾಲ್ಟೊವರೆಗೂ ಹೋಗಿ ಬರುತ್ತವೆ.
  ವಾಯುಗಣ: ಉರುಗ್ವೇಯದು ಸಮಶೀತೋಷ್ಣ ವಾಯುಗಣ ದಕ್ಶಿಣಾರ್ಧ ಗೋಳದಲ್ಲಿರುವುದರಿಂದ ಇಲ್ಲಿ ಜನವರಿ-ಫೆಬ್ರವರಿಗಳಲ್ಲಿ ಬೇಸಿಗೆಯ ಹವಾಗುಣ ಇರುತ್ತದೆ. ಆಗಿನ ಸರಾಸರಿ ಉಷ್ಣತೆ ೨೨ ಸೆ.(ಸು.೭೧ ಫ್ಯಾ.). ಜುಲೈ ತಿಂಗಳು ಇಲ್ಲಿ ಅತ್ಯಂತ ಚಳಿ. ಆಗಿನ ಉಷ್ಣತೆ ೧೦ಸೆಂ.ಗ್ರೇ. (೫೦ ಫ್ಯಾ.) ಕರಾವಳಿಯ ಮಂಜು ಬೀಳುವುದಿಲ್ಲ. ವರ್ಷದುದ್ದಕ್ಕೂ ದಿನದಿನವೂ ಹವಾಗುಣ ಬದಲಾಗುತ್ತಿರುತ್ತದೆ. ಝಂಝಾವಾತದ ಕೇಂದ್ರಗಳು ಈ ದೇಶದ ಮೂಲಕ ಹಾದು ಹೋಗುವುದೇ ಈ ಪವನಚಾಂಚಲ್ಯಕ್ಕೆ ಮುಖ್ಯಕಾರಣ. ಉತ್ತರದ ಉಷ್ಣಮಾರುತಗಳು ಥಟ್ಟನೆ ಅಧೃಶ್ಯವಾಗಿ, ನೈರುತ್ಯದ ಚಳಿಗಾಗಿ ಬೀಸಿ ಉಷ್ಣಮಾಪಕದ ಪಾದರಸ ಕುಸಿಯುವುದು ಸಾಮಾನ್ಯ.
  ಈ ಕಾರಣದಿಂದಾಗಿ ಉರುಗ್ವೇಯಲ್ಲಿ ನಿಶ್ಚಿತವಾದ ಮಳೆಗಾಲವಾಗಲಿ ಒಣಹವೆಯ ಬೇಸಿಗೆ ಋತುವಾಗಲಿ ಇಲ್ಲ. ಎಪ್ರಿಲ್-ಮೇ ತಿಂಗಳುಗಳಲ್ಲಿ ಗರಿಷ್ಥ ಮಳೆ ಬೀಳುತ್ತದೆ. 
  ಚಳಿಗಾಲದಲ್ಲೂ ಮಳೆಯುಂಟು. ಸಮುದ್ರದೆಡೆಯಿಂದ ದೂರದೂರ ಸಾಗಿದಂತೆ ಮಳೆಯ ಪರಿಣಾಮ ಕಡಿಮೆ, ಆದರೆ ಎಲ್ಲೂ ಅನಾವೃಷ್ಟಿಯಿಲ್ಲ. ಬೇಸಿಗೆಯಲ್ಲಿ ಗುಡುಗು ಸೆಡೆಲುಗಳ ಆರ್ಭಟ ಹೆಚ್ಚು.
  ಸ್ವಾಭಾವಿಕ ಸಸ್ಯ ಪ್ರಾಣಿವರ್ಗ: ಎತ್ತರವಾದ ಹುಲ್ಲಿನ ಬೆಳೆ ಎಲ್ಲೆಲ್ಲೂ ಸಾಮಾನ್ಯವಾಗಿದೆ. ಸ್ವದೇಶೀ ಪರದೇಶೀ ವೃಕ್ಷಗಳೂ ಹರಡಿವೆ. ಇವು ನದಿಗಳ ಕೆಳ ಪ್ರದೇಶಗಳಲ್ಲಿ ಹೆಚ್ಚು ಸಾಂದ್ರ ಆಲ್ಡರ್, ಆಲೊ(ಕತ್ತಾಳೆ ಜಾತಿ), ಪಾಪ್ಲರ್, ಅಕೇಸಿಯ, ವಿಲೊ, ಯೂಕಲಿಪ್ಟಸ್- ಇವು ಮುಖ್ಯ ಮರಗಳು. ತಾಳೆಜಾತಿಯ ಮರಗಳು ಶುದ್ಧ ಸ್ವದೇಶಿ. ಕಣಿವೆಗಳಲ್ಲೂ ಹುಲ್ಲುಗಾವಲುಗಳಲ್ಲೂ ಬಣ್ಣ ಬಣ್ಣದ ನಸುಗಂಪಿನ ಹೂಗಿಡಗಳು ಅಸಂಖ್ಯಾತ.
  ಜನವಸತಿ ಇರುವ ಪ್ರದೇಶಗಳೆಲ್ಲೆಲ್ಲ ವನ್ಯಮೃಗಗಳು ಬಹುಮಟ್ಟಗೆ ಅದೃಶ್ಯವಾಗಿವೆ. ಅಮೆರಿಕನ್ ಉಷ್ಟ್ರಪಕ್ಷಿಯೂ ಈಗ ವಿರಳ. ಸಿಂಹ, ಚಿರತೆ, ನರಿ, ಜಿಂಕೆ, ಕಾಡುಬೆಕ್ಕು, ನೀರುಹಂದಿ, ಆರ್ಮಡಿಲೊ-ಇವು ಇಲ್ಲಿನ ಕೆಲವು ಚತುಷ್ಟಾದಿ ಪ್ರಾಣಿಗಳು, ರಣಹದ್ದು, ನಾಡಕಾಗೆ, ಉದ್ದ ತೋಕೆಯ ಸಣ್ಣಗಿಳಿ, ಬಿಲವಾಸಿ ಗೂಬೆ, ಕೆಂಪುಹಕ್ಕಿ, ಝೇಂಜಕಾರದ ಹಕ್ಕಿ ಇವನ್ನೂ ಇಲ್ಲಿ ಕಾಣಬಹುದು. ಚೇಳು ವಿರಳ; ಆದರೆ ದೊಡ್ಡದು. ಜೇಡಗಳು ಸಾಮಾನ್ಯ, ವಿಷಪೂರಿತ ಹಲ್ಲಿ, ಆಮೆ,, ಎಅಲೆಯ ಮೇಲೆ ಸೆಲುಬೆಯ ಗುರುತಿರುವ ಭಯಂಕರ ವಿಷಸರ್ಪ. ಗಿಲಿಕೆ ಹ್ಹವು ಇವು ಇಲ್ಲಿನ ಪ್ರಾಣಿಲೋಕದ ಇತರ ಪ್ರಜೆಗಳು. ಉರುಗ್ವೇ ನದಿಯ ಶಿರೋಭಗ ಮೊಸಳೆಗಳ ಸಾಮ್ರಾಜ್ಯ.
   ಜನ, ಜೀವನ: ಶೇ.೫೦ರಷ್ಟು ಜನ ವ್ಯವಸಾಯಗಾರರು. ದಕ್ಷಿಣಭಾಗದಲ್ಲಿ ಜನಸಂಖ್ಯೆ ಹೆಚ್ಚು. ದೇಶದ ೮೩%ರಷ್ಟು ಪ್ರದೇಶದಲ್ಲಿ ಹುಲ್ಲುಗಾವಲಿರುವ ಬುರುಗ್ವೇಯನ್ನು ಜಗತ್ತಿನ ಅತೆ ಉತ್ತಮ ಮೇವಿನಭೂಮಿ ಎನ್ನುತ್ತಾರೆ. ೧೮೪೦ರ ಆನಂತರ ಬ್ರಿಟಿಷರು ಮೆರಿನೊ ಕುರಿಗಳನ್ನು ಇಲ್ಲಿಗೆ ತಂದು ಸಾಕಿದರು. ಅವುಗಳಿಂದ ಉಣ್ಣೆ ಮತ್ತು ಮಾಂಸ ತೆಗೆದು ರಫ್ತು ಮಾಡುತ್ತಾರೆ. ಶೀತಕ ಯಂತ್ರ ಬಂದ ಮೇಲೆ ಮಾಂಸದ ಉದ್ಯೋಗ ಭರದಿಂದ ಸಾಗಿದೆ. ಉ ರುಗ್ವೇ ನದಿಯ ಮೇಲಿನ ಪೈಸಾಂಡೂ, ಸಾಲ್ಟೊ, ಮತ್ತು ರಿಯೊ ನೇಗ್ರೊ ನದಿಯ ಮೇಲಿರುವ ಮರ್ಸೇದೇಸ್ ಪಟ್ಟಣಗಳಲ್ಲಿ ಮಾಂಸ ಕೈಗಾರಿಕೆ ಪ್ರಬಲ.