ಪುಟ:Mysore-University-Encyclopaedia-Vol-2-Part-4.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಋಗ್ವೇದ ಗೃಹಸ್ಥರು ನದೆಸಬೇಕಾದ ಕರ್ಮಗಳಲ್ಲಿ ಜಾತಕರ್ಮ, ನಾಮಕರಣ, ಚೌಲ್, ಉಪನಯನ, ವಿವಾಹ ಮತ್ತು ಅಂತ್ಯಕ್ರಿಯಗಳು ಮುಖ್ಯವಾದುವು. ನಾಮಕರಣದ ಕಾಲದಲ್ಲಿ ಪ್ರತಿಯೊಂದು ಮಗುವಿಗೂ ಎರಡು ಹೆಸರುಗಳನ್ನು ಕೊಡುತ್ತಿದ್ದರು. ಒಂದು ಹೆಸರು ತಂದೆ ತಾಯಿಗೆ ಮಾತ್ರ ತಿಳಿದ ಹೆಸರು. ಇದನ್ನು ಬಹುಗೋಪ್ಯವಾಗಿ ಕಾದಿಟ್ಟುಕೊಂಡಿರುತ್ತಿದ್ದರು. ಇದೇ ಮಗುವಿನ ನಿಜವಾದ ಹೆಸರು. ಈ ಹೆಸರಿನಲ್ಲಿ ಮಾಟ ಮುಂತಾದವುಗಳನ್ನು ಮಾಡಿದಾಗಲೇ ಆ ಮಗುವಿಗೆ ಅಪಾಯ ಉಂಟಾಗುತ್ತಿತ್ತಾದ ಕಾರಣ ಅವರು ಅದನ್ನು ಬಹಿರಂಗಪಡಿಸುತ್ತಿರಲಿಲ್ಲ. ಎರಡನೆಯ ಹೆಸರು ವ್ಯಾವಹಾರಿಕವದದ್ದು. ಚೌಲವನ್ನು ಬ್ರಾಹ್ಮಣರು ಮಗುವಿನ ಮೂರನೆಯ ವರ್ಷದಲ್ಲೂ ಕ್ಷತ್ರಿಯರು ಐದನೆಯ ವಯಸ್ಸಿನಲ್ಲೂ ವೈಶ್ಯರು ಏಳನೆಯ ವಯಸ್ಸಿನಲ್ಲೂ ನಡೆಸುತ್ತಿದ್ದರು. ಅವರವರ ಮನೆತನದ ಸಂಪ್ರದಾಯಕ್ಕನುಗುಣವಾಗಿ ಕೂದಲನ್ನು ಬಿಡಿಸುತ್ತಿದ್ದರು. ತಮ್ಮ ಪ್ರವರದಲ್ಲಿ ಎಷ್ಟು ಋಷಿಗಳನ್ನು ಸೇರಿಸಿಕೊಂಡಿದ್ದಾರೋ ಆ ಸಂಖ್ಯೆಗೆ ಅನುಗುಣವಾಗಿ ಕೂದಲನ್ನು ಬಿಡಿಸಿ ಗಂಟು ಹಾಕುತ್ತಿದ್ದರು. ಬ್ರಾಹ್ಮಣರು ಬಾಲಕನ ಎಂಟನೆಯ ವಯಸ್ಸಿನಲ್ಲೂ ಕ್ಷತ್ರಿಯರು ಹನ್ನೊಂದನೆಯ ವಯಸ್ಸಿನಲ್ಲು ವೈಶ್ಯರು ಹನ್ನೆರಡನೆಯ ವಯಸ್ಸಿನಲ್ಲೂ ಉಪನಯನವನ್ನು ನಡೆಸುತ್ತಿದ್ದರು. ಬ್ರಾಹ್ಮಣರು ಹದಿನಾರು ವರ್ಷಗಳೊಳಗೆ, ಕ್ಷತ್ರಿಯರು ಇಪ್ಪತ್ತೈದು ವರ್ಷಗಳೊಳಗೆ, ವೈಶ್ಯರು ಇಪ್ಪತ್ತುನಾಲ್ಕನೆಯ ವರ್ಷಗಳೊಳಗೆ ಉಪನಯನ ಮಾಡಬೇಕು. ಹಾಗಿ ಉಪನಯನವಾಗದವ ಕರ್ಮಭ್ರಷ್ಟನಾಗಿ ಕುಲದಲ್ಲಿನ ತನ್ನ ದರ್ಜೆಯನ್ನು ಕಳೆದುಕೊಳ್ಳುತ್ತಿದ್ದ. ಉಪನಯನ ಪ್ರತಿಯೊಬ್ಬನ ಹೊಸ ಹುಟ್ಟಿಗೆ ದಾರಿ. ಒಬ್ಬೊಬ್ಬನೂ ವಿದ್ಯೆಯ ಮೂಲಕ ರೂಪಿಸಿಕೊಂಡ ಅತ್ಮನೇ ಅವನ ನಿಜವಾದ ಆತ್ಮ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಸ್ನಾತಕನಾಗಿ ಹೊಸ ರೀತಿಯ ಉಡುಪನ್ನು ತೊಡುತ್ತಿದ್ದ. ದೇಹವನ್ನು ಅಲಂಕರಿಸೊಕೊಳ್ಳುತ್ತಿದ್ದ. ದೇಹಕಾಂತಿ ಕೆಡದಂತೆ ಅದನ್ನು ಮಳೆಬಿಸಿಲುಗಳಿಂದ ರಕ್ಷಿಸಿಕೊಳ್ಳುತ್ತಿದ್ದ. ಕಾಲಿಗೆ ಅಪಾಯವಾಗದಂತೆ ಪಾದರಕ್ಷೆಯನ್ನು ಮೆಟ್ಟುತ್ತಿದ್ದ. ಇಂಥವ ಗೃಹಸ್ಥನಾಗಲು ತನ್ನ ಗುರುಹಿರಿಯರ ಮಾತಾಪಿತೃಗಳ ಒಪ್ಪಿಗೆ ಪಡೆದು ಅವರ ನೆರವಿನಿಂದ ಕನ್ಯೆಯನ್ನು ಪಡೆಯಬಹುದಾಗಿತ್ತು. ಕ್ಷತ್ರಿಯನಿಗೆ ಗಂಧರ್ವ ಅಥವಾ ಸ್ವಯಂವರ ರೀತಿಯ ವಿವಾಹ ಶ್ರೇಷ್ಠ. ವೈಶ್ಯ ತನ್ನ ಐಶ್ವರ್ಯದಿಂದ ಕನ್ಯೆಯನ್ನು ಪಡೆಯಬಹುದು.ಇದು ಎಲ್ಲಕಿಂತಲೂ ಕೆಳದರ್ಜೆಯ ವಿವಾಹ ಕ್ರಮ. ಬ್ರಾಹ್ಮಣ ತನ್ನ ವರ್ಣದ ಕನ್ಯೆಯನ್ನಲ್ಲದೆ ಕ್ಷತ್ರಿಯ, ವೈಶ್ಯೆ ಅಥವಾ ಶೂದ್ರಕೆನ್ಯೆಯೊಬ್ಬಳನ್ನು ಮದುವೆಯಾಗಲೂ ಅವಕಾಶವಿತ್ತು. ಕ್ಷತ್ರಿಯ ತನ್ನ ವರ್ಣದವಳ ಜೊತೆಗೆ, ವೈಶ್ಯೆ ಅಥವಾ ಶೂದ್ರ ವರ್ಣದ ಕನ್ಯೆಯನ್ನು ಪಡೆಯಬಹುದಾಗಿತ್ತು. ವೈಶ್ಯ ತನ್ನ ವರ್ಣದ ಕನ್ಯೆಯನ್ನಲ್ಲದೆ ಶೂದ್ರ ಕನ್ಯೆಯೊಬ್ಬಳನ್ನು ಪಡೆಯಬಹುದಾಗಿತ್ತು. ವಿವಾಹ ಹೆಣ್ಣಿನ ಮನೆಯಲ್ಲಿ ನಡೆಯುವ ಸಂಪ್ರದಾಯವಿತ್ತು. ಈ ಸಂದರ್ಭದಲ್ಲಿ ಹೆಣ್ಣಿನ ಮನೆಯ ನಾಲ್ಕು ಅಥವಾ ಎಂಟು ಸುಮಂಗಲಿಯರು ಹೆಣ್ಣು ಗಂಡುಗಳ ಸುತ್ತ ನರ್ತನ ಮಾಡುತ್ತಿದ್ದದ್ದು ಗಮನಾರ್ಹ ವಿಷಯ. ಅವರಿಗೆ ವರನ ಕಡೆಯವರು ಉಡುಗೊರೆ ಅಥವಾ ಸುವರ್ಣವನ್ನು ಕೊಡುತ್ತಿದ್ದರು. ಮದುವೆಯಾದ ಆನಂತರ ಹೆಣ್ಣನ್ನು ಗಂಡನ ಮನೆಗೆ ಕರೆದುಕೊಂಡು ಬಂದು ಮದುವೆಯಾದ ನಾಲ್ಕನೆಯ ದಿನ ನಿಷೇಕವನ್ನು ಏರ್ಪಡಿಸುತ್ತಿದ್ದರು. ಮದುವೆಯಾದ ಹೆಣ್ಣು ತನ್ನ ಮಾವನ ಮತ್ತು ಗಂಡನ ಮನೆಯನ್ನು ಸೇರಿದಾಗ ಆ ಮನೆಯ ಯಜಮಾನಿಯಾಗುತ್ತಿದ್ದಳು. ಮಾವನಿಗೂ ನಾದಿನಿಗೂ ಮೈದುನನಿಗೂ ಒಡತಿಯಾಗುತ್ತಿದ್ದಳು. ಮುದಿತನದವರೆಗೂ ಗಂಡನೊಡನೆ ಬಾಳಬೇಕೆಂಬುದು ಅವಳ ಮಹದಾಶಯ. ಹತ್ತು ಗಂಡುಮಕ್ಕಳನ್ನು ಪಡೆದ ಮೇಲೆ ಅವಳು ತನ್ನ ಗಂಡನನ್ನು ಹನ್ನೊಂದನೆಯ ಮಗುವಿನಂತೆ ಪಾಲಿಸಿ ಪೋಷಿಸುವಂತಾಗಲೆಂದು ಇಂದ್ರನನ್ನು ಪ್ರಾರ್ಥಿಸುವ ಒಂದು ಮಂತ್ರವಿದೆ. ಒಟ್ಟಿನಲ್ಲಿ ಋಗ್ವೇದ ಕಾಲದ ಕುಟುಂಬ ಜೀವನ ಆಶಾಪೂರ್ಣವಾದದ್ದು. ಒಂದು ರೀತಿಯಲ್ಲಿ ಅದು ತುಂಬುಜೀವನ. ಹಾಡು, ನೃತ್ಯದಿಂದ ತುಂಬಿದ ಜೀವನ. ಮದುವೆಯ ಕಾಲದಲ್ಲಿ ನೃತ್ಯ ಅದರ ಒಂದು ಮುಖ್ಯ ಅಂಗವಾಗಿತ್ತೆಂಬುದನ್ನು ಗಮನಿಸಿದ್ದೇವೆ. ಈ ಕಲೆಗಳು, ಕುಟುಂಬದ ಹೆಣ್ಣುಮಕ್ಕಳ ದಿನಚರಿಯ ವಿನೋದಗಳಾಗಿದ್ದವು. ಕವನಗಳನ್ನು ಕಟ್ಟುವುದು, ಹಾಡುಗಳನ್ನು ಹಾಡುವುದು ತನ್ನ ಮನೆಯ ಒಂದು ಕಸುಬೆಂದು ಋಗ್ವೇದದ ಒಂದು ಸೂಕ್ತದಲ್ಲಿ ಒಬ್ಬ ಹೇಳಿಕೊಂಡಿದ್ದಾನೆ. ನೃತ್ಯ ಕೇವಲ ಹೆಣ್ಣುಮಕ್ಕಳ ವಿನೋದ ಮಾತ್ರವಾಗಿರಲಿಲ್ಲ. ಗಂಡಸರೂ ಕೋಲಿನ ನೃತ್ಯದಲ್ಲಿ ಭಾಗವಹಿಸುತ್ತಿದ್ದರು. ನಾಟ್ಯಮಾಡುವ ಗಂಡಸನ್ನು ವಿನೃತಹಿನೆಂದೂ ಹೆಣ್ಣನ್ನೂ ವಿನೈತುಹಿವೆಂದು ಕರೆಯುತ್ತಿದ್ದರು. ಹೆಂಗಸರು ಜರಿಯ ಸೀರೆಯನ್ನುಟ್ಟು ಕಂಚುಕವನ್ನು ಧರಿಸದೆ ನರ್ತಿಸುತ್ತಿದ್ದರು. ಹಾಸ್ಯರೂಪವಾದ ನೃತ್ಯವೂ ರೂಢಿಯಲ್ಲಿತ್ತು. ಋಗ್ವೇದ ಪದ್ಯಗಳು ಬಹುತೇಕ ದೇವತೆಗಳ ಸ್ತೋತ್ರಕ್ಕೆ ಮೀಸಲಾಗಿದ್ದರೂ ಕೆಲವು ಸ್ತೋತ್ರಗಳು ಕೇವಲ ವಿವರಣೆಗಳಾಗಿರದೆ, ಭಾವಪ್ರದವಾಗಿಯೂ ವರ್ಣಯುಕ್ತವಾಗಿಯೂ ಇವೆ. ಉಪಸ್ಸನ್ನು ವರ್ಣಿಸುವ ಸ್ತೋತ್ರಗಳು ಕಾವ್ಯದಂತೆ ರಮ್ಯವಾಗಿವೆ. ಜೂಜುಗಾರನ ಅಳಲು ಎಂಬ ಒಂದು ಮಂತ್ರ ಇಂದಿನ ಭಾವಗೀತೆಯನ್ನ ಹೋಲುತ್ತದೆ. ಇವುಗಳ ಛಂದಸ್ಸಿನಲ್ಲಿ ಇರುವ ಅಧ್ಭುತವಾದದ್ದು. ಕೇವಲ ಶಬ್ದದಿಂದಲೇ ಅತಿಶಯ ಭಾವಪ್ರಕಾಶನ ಮಾಡುವ ಶಕ್ತಿ ಬಹುಶ: ಅನೇಕ ಕಾವ್ಯಗಳಲ್ಲಿ ಕೂಡ ಇರುವುದಿಲ್ಲ. ಇವುಗಳಲ್ಲದೆ ಲೋಕಾನುಭವಗರ್ಭಿತವಾದ ಪದ್ಯಗಳೂ ಹಾಡುಗಳೂ ವೇದದ ಕಾಲದಲ್ಲಿ ಯಥೇಚ್ಛವಾಗಿ ಇವೆ. ವಿವಾಹ ಕಾಲದಲ್ಲಿ ಹೆಂಗಸರು ಹಾಡುಗಳನ್ನು ಹೇಳುತ್ತಿದ್ದರು. ಅಶ್ವಮೇಧದ ಕಾಲದಲ್ಲಿ ಪುರೋಹಿತರು ನಾಲ್ಕು ದಿವಸಗಳ ಕಾಲ ಕೆಲವು ವೇಳೆ ಒಂದು ವರ್ಷದ ಪರ್ಯಂತ ಹಿಂದಿನ ರಾಜರ ಕಥೆಗಳನ್ನು ಹೇಳುತ್ತಿದ್ದರು. ಇವಕ್ಕೆ ಪರಿಪಾಲ್ಯ ಅಖ್ಯಾಯನಗಳೆಂದು ಹೆಸೆರು. ರಾಜವಂಶದವನೊಬ್ಬ ತಾನೇ ಕಟ್ಟಿದ ಮೂರು ಗಾಥೆಗಳನ್ನು ತಂತಿ ವಾದ್ಯದ ಶ್ರುತಿಗೆ ಸೇರಿದಂತೆ ಹಾಡುತ್ತಿದ್ದ. ಅಂಥ ಸಾಹಿತ್ಯ ಜನರ ಬಾಯಿಯಲ್ಲಿ ಮಾತ್ರ ಜೀವಂತವಾಗಿದ್ದ ಸಾಹಿತ್ಯ. ಅವುಗಳ ಆಯಸ್ಸು ಒಂದೆರಡು ತಲೆಮಾರುಗಳಿಗೆ ನಿಗದಿಯಾದದ್ದು. ಬರವಣಿಗೆ ಮತ್ತು ಅಚ್ಚಿನ ಸೌಕರ್ಯವಿರುವ ಈಗಿನ ಕಾಲದಲ್ಲೂ ಜನ ಕಟ್ಟಿದ ಕಥೆಗಳಲ್ಲಿ ಹಾಡುಗಳಲ್ಲಿ ಮತ್ತು ಕವನಗಳಲ್ಲಿ ಉಳಿಯುವವು ಬಹು ಸ್ವಲ್ಪ. ಋಗ್ವೇದದಲ್ಲಿ ಕೆಲವು ಸಂಭಾಷಣಾ ರೂಪದ ಸೂಕ್ತಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುದು ಊರ್ವಶಿ-ಪುರೂರವಸರದು. ಇದೇ ನಾಟಕಪ್ರಕಾರದ ಮೂಲವಾಗಿ ತೋರುತ್ತದೆ. ಯಜುರ್ವೇದದ ಕಾಲಕ್ಕಾಗಲೆ ನಾಟಕ, ನಾಟ್ಯಗಳನ್ನು ವೃತ್ತಿಯಾಗುಳ್ಳ ನಟರ ವರ್ಗವೊಂದು ಸೃಷ್ಟಿಯಾಗಿತ್ತು. ಋಗ್ವೇದದಲ್ಲಿ ಹೆಸರಿಸಿರುವ ಮೂವತ್ತು ಕಲೆಗಳಲ್ಲಿ ಹಾಡು, ಕವಿತೆ, ನೃತ್ಯ, ಗೀತ, ವೇಣುವಾದನ, ಶಂಖನಾದ, ಕೊಂಬನ್ನು ಊದುವುದು, ನಗಾರಿ ಬಾರಿಸುವುದು, ಕೋಲಾಟ, ವಾಸ್ತುಶಿಲ್ಪ-ಇವು ಮುಖ್ಯವಾದುವು. ಇವುಗಳಲ್ಲದೆ ರತ್ನ ಮತ್ತು ಚಿನ್ನದ ಒಡವೆಗಳನ್ನು ಮಾಡುವುದು, ಜರತಾರಿ ಬಟ್ಟೆಗಳನ್ನು ನೇಯುವುದು, ಕಸೂತಿ ಕೆಲಸ, ಹೂ ಕಟ್ಟುವುದು, ಕಾಡಿಗೆ ಮಾಡುವುದು, ರಥಗಳ ನಿರ್ಮಾಣ, ಹಗ್ಗ ಹೊಸೆಯುವುದು, ಚರ್ಮವನ್ನು ಹದ ಮಾಡಿ ಹೊಲೆಯುವುದು, ಕಮ್ಮಾರನ ಮತ್ತು ಕಂಬಾರನ ಕಲೆ, ಬಿಲ್ಲನ್ನು ತಯಾರಿಸಿವುದು, ಕುದುರೆಯನ್ನು ಪಳಗಿಸುವುದು ಮುಂತಾದ ಉಪಯುಕ್ತ ಕಲೆಗಳು ವಿಶೇಷವಾಗಿ ಪ್ರಚಾರದಲ್ಲಿದ್ದವು. ಸಂಗೀತಕ್ಕಾಗಿ ಉಪಯೋಗಿಸುತ್ತಿದ್ದ ವಾದ್ಯಗಳು ಮೂರು-ಮೃದಂಗ, ಕೊಳಲು ಕರ್ಕರಿ ಎಂಬ ತಂತಿ ವಾದ್ಯ. ಆಗಿನ ಕಾಲದವರೆಗೆ ಏಳು ಸ್ವರಗಳೂ ಮತ್ತು ಅವುಗಳ ಆರೋಹಣ ಅವರೋಹಣ ವಿಧಾನವೂ ತಿಳಿದಿತ್ತೆಂದು ಹೇಳಬಹುದು. ರಾಜ, ರಾಜ್ಯವ್ಯವಸ್ಥೆ: ವೇದಕಾಲದಲ್ಲಿ ರಾಜಕೀಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಿರ್ದಿಷ್ಟವಾಗಿ ತಿಳಿಯುವುದು ಕಷ್ಟ ಏಕೆಂದರೆ ಉಲ್ಲೇಖಿಸಬೇಕೆಂಬುದು ವೇದಕರ್ತೃಗಳ ಉದ್ದೇಶವಾಗಿರಲ್ಲಿಲ್ಲ. ಆದ್ದರಿಂದ ಅಲ್ಲಲ್ಲಿ ಪ್ರಾಸಂಗಿಕವಾಗಿ ಬರುವ ಕೆಲವು ಸೂಚನೆಗಳಿಂದ ಈ ವಿಷಯಗಳನ್ನು ತಿಳಿಯಬಹುದಾಗಿಗೆ. ಜನ, ವಿಶಃ ಗ್ರಾಮ-ಈ ಮೂರು ಅಂದಿನ ರಾಜ್ಯದ ಮುಖ್ಯ ವಿಭಾಗಗಳಾಗಿದ್ದುವು.ಜನ ಎಂದರೇ ಇಡೀ ರಾಜ್ಯದ ಪ್ರಜೆಗಳು, ಬೇರೆ ಬೇರೆ ಸಜಾತರ ಗುಂಪಿಗೆ ವಿಶಃ ಎಂಬ ಹೆಸರಿದ್ದಿರಬಹುದು. ವಿಶರು ಎಂದರೆ ಯೋಧಪತಿಗಳು, ವಿಶಃಪತಿ ಎಂದರೆ ಸೈನ್ಯಾಧಿಪತಿ ಎಂದು ಅರ್ಥೈಸುವವರೂ ಇದ್ದಾರೆ. ವಿಶರ ಗುಂಪಿಗಿಂತ ಸಣ್ಣದು ಗ್ರಾಮ, ಹಲವು ಸಂಸಾರಗಳಿಂದ ಕೂಡಿದ್ದು. ಇವರೆಲ್ಲರೂ ಸಜಾತರೋ ಅಲ್ಲವೋ ಎಂಬುದು ಖಚಿತವಾಗಿ ತಿಳಿಯದು. ಗ್ರಾಮಣಿಗಳು ಎಂದರೆ ಗ್ರಾಮನಾಯಕರ ಸಜಾತರು. ಸಮಾನದ ಒಪ್ಪಿಗೆಯಿಂದ ಆಯ್ದು ಬಂದವರು ಎಂದು ಕೆಲವು ಕಡೆ ಹೇಳಿದೆ. ಸಂಸಾರದ ಮುಖ್ಯಸ್ಥನೇ ಕುಲಪ. ಜನರನ್ನು ಉಲ್ಲೇಖಿಸುವಾಗ ಅನು, ಪುರು, ದ್ರುದಹ್ಯು, ಯದು, ತುರ್ವಶ, ಭರತರು, ಮದ್ರರು, ಯಾದವರು-ಮುಂತಾದ ಪುರಾಣ ಪ್ರಸಿದ್ಧರ ಹೆಸರುಗಳು ಬರುತ್ತವೆ. ಸಾಮಾನ್ಯವಾಗಿ ಒಂದೊಂದು ಜನಕ್ಕೂ ಒಬ್ಬೊಬ್ಬ ರಾಜನಿದ್ದ. ಅಲ್ಲಲ್ಲಿ ಅನೇಕ ರಾಜಮನೆತನಗಳನ್ನು ಹೆಸರಿಸಲಾಗಿದೆ. ರಾಜರಲ್ಲಿ ಮೊದಲನೆಯವ ಮನು. ಆನಂತರ ಇಕ್ಷ್ವಾಕು, ಪುರೂರವ, ಇಲಾ, ಪುರು-ಹೀಗೆ ಮನುವಂಶಪರಂಪರೆ ಬೆಳದಿದೆ. ರಾಜತ್ವ ಹೇಗೆ ಹುಟ್ಟಿತು ಎಂಬ ಪ್ರಶ್ನೆಗಳಿಗೆ ಸೂಕ್ತಗಳಲ್ಲಿ ಸ್ಪಷ್ಟ ಉತ್ತರ ದೊರೆಯುತ್ತದೆ. ದೇವತೆಗಳು ನಾಯಕನಿಲ್ಲದೆ ತಮಗೆ ಮತ್ತೆ ಮತ್ತೆ ಸೋಲಾಗುತ್ತಿದಯೆಂದು ತಿಳಿದಮೇಲೆ ಇಂದ್ರನನ್ನು ತಮ್ಮ ರಾಜನನ್ನಾಗಿ ಮಾಡಿಕೊಂಡು ವಿಜಯಿಗಳಾದರು. ಆರ್ಯರು ಮನುವನ್ನು ತಮ್ಮ ರಾಜನನ್ನಾಗಿ ಪಡೆದಾಗ ಅವರಿಗೆ ಯುದ್ಧದಲ್ಲಿ ಜಯ ಲಭಿಸಿತು. ಹೀಗೆ ಯುದ್ಧದ ಫಲವಾಗಿ ರಾಜತ್ವ ಹುಟ್ಟಿತೆಂದು ತೋರುತ್ತದೆ. ರಾಜತ್ವ ವಂಶಪಾರಂಪರ್ಯವೇ ಎಂಬ ವಿಷಯದಲ್ಲಿ ಎರಡು ಅಭಿಪ್ರಾಯಗಳಿವೆ. ಅವನು ಜನರಿಂದ ಆಯ್ಕೆಯಾಗಿ ರಾಜನಾಗುತ್ತಿದ್ದನೆಂದೂ ವಂಶಪಾರಂಪರ್ಯಾವಾಗಿ ಅವನಿಗೆ ಪಟ್ಟ ಪಭಿಸುತ್ತಿತ್ತೆಂದೂ ಹೇಳಲಾಗಿದೆ. ಋಗ್ವೇದ ಕಾಲದಲ್ಲಿ ರಾಜನ ಆಯ್ಕೆ ಬಳಕೆಯಲ್ಲಿತ್ತೆಂದು ಕಾಣುತ್ತದೆ. ರಾಜನಾದ ಮೇಲೆ ಆತ ತನ್ನ ಕೆಲಸವನ್ನು ನೆರವೇರಿಸಲು ಸಭೆ ಮತ್ತು ಸಮಿತಿಗಳ ನೆರವನ್ನು ಪಡೆಯುತ್ತಿದ್ದಂತೆ ಕೆಲವು ಸೂಕ್ತಗಳಲ್ಲಿ ಸೂಚನೆಯಿದೆ. ಇಲ್ಲಿ ಸಭೆಯಂದರೆ ಹಳ್ಳಿಯ ಜನರ ಸಭೆಯೆಂದು ಜಿಮ್ಮರ್ ಎಂಬ ಪಂಡಿತ ಅಭಿಪ್ರಾಯಪಡುತ್ತಾನಾದರೂ ಲಡ್ವಿಗ್ ಎಂಬ ಇನ್ನೊಬ್ಬ ಪಂಡಿತ ಅದು ಶ್ರೀಮಂತರ ಸಭೆ ಎಂದು ಹೇಳಿರುವ ಅಭಿಪ್ರಾಯ ಗ್ರಾಹ್ಯವಾಗಿದೆ. ಅದು ಋಗ್ವೇದ ಕಾಲದಲ್ಲಿ ಗೌರವಸ್ಥರ, ಪ್ರಮುಖರ ಸಭೆಯಾಗಿದ್ದಿರಬೇಕು. ಬಹುಶಃ ರಾಜ್ಯಾಭಿಷೇಕ ಕಾಲದಲ್ಲಿ, ದೇಶಕ್ಕೆ ವಿಪತ್ತು ಉಂಟಾದ ಕಾಲದಲ್ಲಿ ಇಡೀ ಜನರ ಯೋಗಕ್ಷೇಮವನ್ನು ಕುರಿತು ಮಂತ್ರಾಲೋಚನೆ ನಡೆಸಬೇಕಾದ ಸಮಯದಲ್ಲಿ ಸಮಿತಿ ಸೇರುತ್ತಿತ್ತೆಂದು ತೋರುತ್ತದೆ. ಯುದ್ಧಕಾಲದಲ್ಲಂತೂ