ಪುಟ:Mysore-University-Encyclopaedia-Vol-4-Part-1.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಗ್ಯಾಸೆಟಿಯರ್

  ಸೇರಿದಾಗ ಕರೆಗಂಟೆ ಬಾರಿಸುತ್ತಿದ್ದರು. ಹುಡುಗರ ಶಿಸ್ತು ನಿಯಮ ಪಾಲನೆ ಎಲ್ಲರನ್ನು ಅಚ್ಚರಿಗೊಳಿಸಿತು. ಸೆಪ್ಟೆಂಬರ್ ೨೮ರಂದು ಅಮಲ್ದಾರರು ತಕ್ಕ ಸಿಬ್ಬಂದಿಯೊಡನೆ ಈ ಸ್ವತಂತ್ರ್ಯ ಹಳ್ಳಿಗಳಿಗೆ ಬಂದರು. ಊರಿನ ಕರೆಗಂಟೆ ಬಾರಿಸಿತು. ಎಲ್ಲರೂ ಕಲೆತರು.ಅಮುಲ್ದಾರರಿಗೆ ಧರಿಸಲು ಖಾದಿ ಟೋಪಿ ಕೊಟ್ಟರು. ಅವರು ಶಾಂತರಾಗಿದ್ದರೂ ಅವರೊಂದಿಗೆ ಇದ್ದ ಪೋಲೀಸ್ ಅಧಿಕಾರಿಗೆ ಇದು ಸಹಿಸಲಿಲ್ಲ. ಲಾಠಿ ಹೊಡೆತ ಪ್ರಾರಂಭವಾಯಿತು. ಕಾಳಗವೇ ನಡೆಯಿತು. ಪೋಲೀಸ್ ಅಧಿಕಾರಿ, ಅಮಲ್ದಾರ ಇಬ್ಬರೂ ಸಾವಿಗೆ ಈಡಾದರು. ಸ್ವಲ್ಪ ಕಾಲದಲ್ಲೇ ಹೆಚ್ಚು ಪೋಲೀಸರಲ್ಲದೆ ಒಂದು ಸೈನ್ಯದ ತುಕಡಿಯೂ ಬಂದಿತು . ಇವರು ಅಮಾನುಷ ರೀತಿಯಲ್ಲಿ ಆ ಹಳ್ಳಿಯವರ ಮೇಲೆ ಸೇಡು ತೀರಿಸಿಕಂಡರು . ನಲವತ್ತೊಂದು ಮಂದಿ ನ್ಯಾಯಸ್ಥಾನದಲ್ಲಿ ವಿಚಾರಣೆಗೊಳಗಾದರು . ಅವರಲ್ಲಿ ಐದು ಜನಕ್ಕೆ ಮರಣದಂಡನೆ ವಿಧಿಸಲಾಯಿತು.
  ಹೈದಾರಾಬಾದ್ ಕರ್ನಾಟಕವೂ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ೧೮೫೭ರ ಸಂಗ್ರಾಮದಲ್ಲಿ ಕೊಪ್ಪಳದ ಮುಂಡರಗಿ ಭೀಮರಾವ್,ಸುರಪುರದ ವೆಂಕಟಪ್ಪನಾಯಕ ಮುಂತಾದವರು ಬ್ರಿಟಿಷರೊಂದಿಗೆ ಹೋರಾಡಿ ಮಡಿದಿದ್ದರು. ತಿಲಕರ ರಾಜಕೀಯ ಆಂದೋಲನದಿಂದ ಈ ಜಾಗೃತಿ ಬೆಳೆಯಿತು.ಗಾಂಧೀಜಿಯವರ ಅಸಹಕಾರ ಚಳವಳಿಯ ಸಮಯದಲ್ಲಿ ಖಚಿತವಾಗತೊಡಗಿತು.