ಪುಟ:Mysore-University-Encyclopaedia-Vol-4-Part-1.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜನಪದ ಸಂಗೀತ ಮರಾಠಿ ಭಜನೆಯನ್ನು ಹೋಲುತ್ತದೆ.ವಾದ್ಯದ ನಾದ,ಪದಗಳ ಗುಂಗು,ತಾಳ ಕುಣಿತ-ಎಲ್ಲ ಸೇರಿದಾಗ ಹಾಡುವವರಿಗೂ ನೋಡುವವರಿಗೂ ಭಕ್ತಿಯ ಆವೇಶ ಬಂದಂತಾಗಿತ್ತದೆ. ಪಾಡ್ಡನ ಮತ್ತು ಓಬೇಲೆ ಪದ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯಲ್ಲಿ ಭೂತನನ್ನು ಕುರಿತು ಹಾಡುವ ಪದಗಳಿವು.ಸಾವಿನ ಸಮಯದಲ್ಲೂ ಹಾಡುವುದಿದೆ. ಹಾಡುವವರು ಭೂತ ಮೈಮೇಲೆ ಬಂದಂತೆ ಭಯಾನಕವಾಗಿ ಕುಣಿಯುತ್ತ ದನಿ ಗೈಯ್ಯುವರು. ಓಬೇಲೆ ಪದಗಳನ್ನು ನೇಜಿ(ನೆಲ್ಲು) ನೆಡುವಾಗ ಹೆಣ್ಣು ಮಕ್ಕಳು ಹಾಡುವ ವಾಡಿಕೆ. ದೋಣಿ ನಡೆಸುವಾಗಲೂ ಬಂದರಿನಲ್ಲಿ ಸಾಮಾನು ಹೊರುವಾಗಲೂ ಓಬೇಲೆ ಹಾಗೂ ಐಸಾ ಪದಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ. ತ್ರಿಪದಿ:ಹಳ್ಳಿಯ ಪದಗಳಲ್ಲಿ ತ್ರಿಪದಿಯ ಸ್ಥಾನ ಮಹತ್ತ್ವದ್ದು.ಹೆಣ್ಣು ಮಕ್ಕಳ ಹಾಡುಗಳಲ್ಲಿ ಬಹುಭಾಗ ಈ ಮಟ್ಟಿನಲ್ಲಿದೆ.ಹಾಲು ಜೇನು ಸುರಿದಂತೆ ಇದರ ಸವಿ. ಮಲ್ಲಿಗೆ ಮೊಗ್ಗು ಅರಳಿದಂತೆ ಇದರ ಪರಿಮಳ.ಮೂರೇ ಪಾದಗಳು ಕಂಡರೂ ಹಾಡುವಾಗ ನಡಿವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ.ಕುಟ್ಟುವಾಗ, ಬೀಸುವಾಗ,ಜೋಗುಳ ಹಾಡುವಾಗ,ಪೂಜೆ ಮಾಡುವಾಗ,ಜೀವನದ ರಸಸಮಯಗಳಲ್ಲಿ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ.ಒಬ್ಬರೋ ಇಬ್ಬರೋ ಹಲವರೋಹಡುವುದು ಉಂಟು.ರಾಗಗಳು ಒಂದೊಂದು ಕಡೆ ಒಂದೊಂದು ರೀತಿಯವಾಗಿರುತ್ತವೆ.ದಕ್ಷಿಣಾದಿ ಸಂಗೀತದ ಮಧ್ಯಮಾವತಿ,ಕಾಂಭೋಧಿ,ಆನಂದ ಭೈರವಿ,ನಾದನಾಮಕ್ರಿಯೆ,ನವರೋಜು ರಾಗಗಳು ಬಳಕೆಯಲ್ಲಿವೆ.ಆದರೂ ಎಲ್ಲಿಯೂ ಶಾಸ್ತ್ರೀಯ ಸಂಗೀತದ ಛಾಯೆ ಕಾಣದು. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು.ಇಡೀ ಕನ್ನಡ ನಾಡಿನಲ್ಲೆಲ್ಲ ತ್ರಿಪದಿಯ ಬೆಳೆ ಹುಲುಸಾಗಿ ಹಬ್ಬಿದೆ.ನಾಡು ನುಡಿ ಒಂದೇ ಎಂಬುದಕ್ಕೆ ತ್ರಿಪದಿಯು ಒಂದು ಆಧಾರ.ಇದರ ಸಾಹಿತ್ಯ ಮತ್ತು ಸಂಗೀತ ಹಿಂದಿನ ಮತ್ತು ಇಂದಿನ ಉತ್ತಮ ಕವಿಗಳಿಗೆ ಸ್ಫೂರ್ತಿ ಕೊಟ್ಟಿದೆ. ಹೂವಿನಾಗಿ ಹುದುಗ್ಯಾನ ಮಾಲ್ಯಾಗ ಮಲಗ್ಯಾನ ಮೊಗ್ಗಾಗಿ ಕಣ್ಣ ತೆರದಾನ-ಲಿಂಗಯ್ಯನ ನೋಡುತಲೆ ನಿದ್ದಿ ಬಯಲಾದೊ ಮುಂಗೋಳಿ ಕೂಗ್ಯಾವು ಮೂಡುಕೆಂಪೇರ್ಯಾವು ನಾರಾಯಣಸಾಮಿ ರಥವೇರಿ-ಬರುವಾಗ ನಾವೆದ್ದು ಕೈಯಾ ಮುಗಿದೇವು ಹೊತ್ತು ಮುಳುಗಿದರೇನು ಕತ್ತಲಾದರೇನು ಅಪ್ಪನಿನ ಗುಡಿಗೆ ಬರುವೇನು-ಮಾದಯ್ಯ ಮುತ್ತಿನ ಬಾಗಿಲು ತೆರದೀರು. ಮದುವೆಯ ಹಾಡುಗಳು:ಮದುವೆಯ ಸಂದರ್ಭದಲ್ಲಿನ ಎಣ್ಣೆಯೊತ್ತುವ ಹಾಡು, ಉರುಟಣಿ ಹಾಡು,ಸೋಬಾನೆ ಪದ,ಬೀಗಿತ್ತಿ ಹಾಸ್ಯದ ಪದಗಳು,ಆರತಿ ಪದಗಳು ಹೇರಳವಾಗಿ ಬಳಕೆಯಲ್ಲಿವೆ.ಇವಕ್ಕೆ ಒಂದೊಂದು ಉದಾಹರಣೆ ನೋಡಬಹುದು. ಎಣ್ಣೆಯೊತ್ತುವ ಪದ: ಎಣ್ಣೆಯನ್ನೊತ್ತಿದರು-ರಘುಕುಲತಿಲಕಗೆ ದಶರಥ ಸುತನಿಗೆ-ಧರ್ಮ ಪರಿಪಾಲನಿಗೆ ನಿರ್ಮಲರೂಪ ಶ್ರೀರಾಮಚಂದ್ರನಿಗೆ ಉರುಟಣೆ ಹಾಡು: ಉರುಟಾಣೆ ಹೇಳೊ ಹರಿಯೆ ಉರಗಶಯನದೊರೆಯೆ ನಂದಗೋಪಿ ಕುಮಾರ,ನತ ಜಗದುದ್ಧಾರ ನಂದನಂದನ ಸಿಂಧುಶಯನ ನೀಬಾರೊ ಬಂದಿರುವೆನು ಮಂಟಪದೊಳು- ಮರದಿಂದಲಿ ಸೋಬಾನೆ ಪದ: ಬಾಳೆಯಾ ಮರದ ಕೆಳಗೆ ಬಾವನ ಮಗಳು ಮೈನೆರೆದಳು ನಿಂಬಿಯ ಮರದ ಕೆಳಗೆ ರಂಭೆ ಮೈನೆರೆದಳು ಸೋಬಾನವೇ ಸೋಬಾನವೇ. ತಿಂಗಳುಮಾವನ ಪದ:ಹುಣ್ಣಿಮೆ ಹಬ್ಬದ ರಾತ್ರಿ ಬೆಳುದಿಂಗಳ ಆನಂದದಲ್ಲಿ ಕೂಡಿಕೊಂಡು ಹೆಣ್ಣುಮಕ್ಕಳ ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತು ತಿರುಗುತ್ತ ಈ ಪದಗಳನ್ನು ಹಾಡುವರು. ತಿಂಗಳು ತಿಂಗಳಿಗೆ ತಿಂಗಳು ಮಾವನ ಪೂಜೆ ಗರುಡನ ಪೂಜೆ ಗನಪೂಜೆ-ಕೋಲು ಮಲ್ಲಿಗೆ ಕೋಲೆ ತಿಂಗಳು ಮಾವನಿಗೆ ನಿನ ಪೂಜೆ ಗಂಗೆ ದಡದಾಗೆ ತಿಂಗಳು ಮಾವನ ತಂಗೇರೇಳು ಮಂದಿ ಬಂಗಾರದೋಲೆ ಬಳೆಯೋರು-ಕೋಲು ಮಲ್ಲಿಗೆ ಕೋಲೆ ಹೊಂದೇರ್ ಹಕ್ಕಿ ಬಂದಾವಕ್ಕ ಗರಗರನಾಡಿ ನಿಂದಾವಕ್ಕ ಕಾಮಾನೂರಾ ಹೊಳೆಯಿಂದಾ ಕುಂತು ನಿಂತು ಬರುತ್ತಿದ್ದ ಕಾಮನ್ ಯಾರೇ ತಡೆದೋರು ಭೀಮನ್ ಯಾರೇ ತಡೆದೋರು ಬಾರಯ್ಯ ಬೆಳುದಿಂಗಳೇ ನಮ್ಮೂರ ಹಾಲಿನಂಥ ಬೆಳುದಿಂಗಳೇ. ಮಾನವಮಿ ಪದ:ನವರಾತ್ರಿ ನಾಡಹಬ್ಬದಲ್ಲಿ ಮಕ್ಕಳ ಹರಕೆ ಪದ ಹಾಡುವ ಸಂಪ್ರದಾಯ ಹಿಂದಿನಿಂದ ಬಂದಿದೆ.ಚೌಪದಿಯಲ್ಲಿ ನಾಲ್ಕು ಸಾಲು ಬರುತ್ತದೆ. ಆಶ್ವೀಜ ಶುದ್ಧ ಮಾನವಮಿ ಬರಲೆಂದು ಲೇಸಾಗಿ ಹರಿಸಿದೆವು ಬಾಲಕರು ಬಂದು ಈಶ ನಿಮಗಧಿಕ ಸೌಖ್ಯ ಕೊಡಲೆಂದು ಶಾಶ್ವತದಿ ಹರಸಿದೆವು ನಾವಿಂದು ಬಂದು. ಮಳೆ ಹೊಯ್ದು ಬೆಳೆಬೆಳೆದು ಇಳೆ ತಣಿಯಲೆಂದು ತಿಳಿಗೊಳಗಳುಕ್ಕಿ ಗೋಗಳು ಕರೆಯಲೆಂದು ನಳಿನಮುಖಿಯರು ಸುಪುತ್ರರ ಪಡೆಯಲೆಂದು ಇಳೆಯೊಳಗೆ ಹರಿಸಿದೆವು ಬಾಲಕರು ಬಂದು ಅಂತೂ ಲಾವಣಿ.ತ್ರಿಪದಿಗಳು ಹಳ್ಳಿಯ ಹಾಡಿನಲ್ಲಿ ಮಹತ್ತ್ವದ ಸ್ಥಾನ ಪಡೆದಿವೆ. ಹೀಗೆಯೆ ಸಾಂಗತ್ಯ ಮತ್ತು ರಗಳೆಗಳಿಗೂ ಜನಪದ ಸಂಗೀತವೇ ಮೂಲವಾಗಿದ್ದಿರಬಹುದು. ಅಲ್ಲದೆ ಶ್ರಮಜೀವಿಗಳ ಹಾಡುಗಳು,ಹಂತಿ ಪದ,ಡೊಳ್ಳು ಪದ, ಮದುವೆ ಹಾಡು, ಜುಂಜಪ್ಪನ ಪದ.ಸುವ್ವಿ ಪದ,ಲಾಲಿ ಪದ,ಉತ್ತರೆ ಮಳೆ ಹಾಡು,ಕೊರವಂಜಿ ಹಾಡು, ಕಣಿ ಹೇಳೋ ಹಾಡು,ಹಚ್ಚೆ ಕಟ್ಟಿಸಿಕೊಳ್ಳುವ ಹಾಡು-ಈ ಮೊದಲಾದವೂ ಇವೆ.ಜಾತ್ರೆ ಮತ್ತು ಪರಿಷೆಯ ಮಹಾಮೇಳಗಳಲ್ಲಿ ಕೊಂಬು,ಕಹಳೆ,ಉರುಮೆ,ಡೊಳ್ಳು,ಮದ್ದ್ಲಲೆ, ಕರಡೆ ವಾದ್ಯಗಳ ಸೊಲ್ಲು ಮುಗಿಲು ಮುಟ್ಟುತ್ತದೆ.ಅವಕ್ಕೆ ಅನುಸರಿಸಿ ಜನ ಹಾಡುತ್ತಾರೆ, ಕುಣಿಯುತ್ತಾರೆ;ನಂದಿಕೋಲು ಕುಣಿಸುತ್ತಾರೆ;ಮನಬಂದಂತೆ ಪದ ಹಾಡುತ್ತಾರೆ;ಜಯಕಾರ ಮೊಳಗಿಸುತ್ತಾರೆ. ಕಥನಗೀತಗಳು:ನಾಡಿನ ವೀರಾಗ್ರಣಿಗಲ್ ಹಾಗೂ ವೀರಮಾತೆಯರ ಮಹಾತ್ಯಾಗಜೀವಿಗಳ ಚರಿತೆಯನ್ನು ಸುಲಭವಾಗಿ ಹಾಡುವಂತೆ ರಚನೆ ಮಾಡಿದ್ದಾರೆ.ಅದರಲ್ಲಿ ಕೆರೆಗೆ ಹಾರ ಎಂಬ ನೀಳ್ಗವನದಲ್ಲಿ ಕರುಣರಸ ಮಡುಗಟ್ಟಿ ನಿಂತಿದೆ.ಒಂದು ಹಳ್ಳಿಯ ಮಲ್ಲನಗೌಡರು ಕೆರೆ ಕಟ್ಟಿಸಿದಾಗ ನೀರು ನಿಲ್ಲಲಿಲ್ಲ. ಬಲಿ ಕೊಡಬೇಕೆಂದು ಜೋಯಿಸರು ಸಲಹೆ ಕೊಟ್ಟರು.ಕಿರಿಯ ಸೊಸೆ ಭಾಗೀರಥಿ ಮುಂದೆ ಬಂದು ಕೆರೆಗೆ ಆಹಾರವಾಗುತ್ತಾಳೆ.ಗಂಗೆ ಒಡಮೂಡುತ್ತಾಳೆ.ಅಂಥ ಹೆಂಡತೆಯನ್ನು ಕಳೆದುಕೊಂಡು ಗಂಡನೂ ಪ್ರಾಣಾರ್ಪನೆ. ಸಾವಿರ ಕೊಟ್ಟರೂ ಸಿಗಲಾರದ ಸತಿ ನೀನು ಬಿಟ್ಟನು ಕಣ್ಣೀರ,ಹಾರಿದ ಕೆರೆ ನೀರಿನಾಗ. ಈ ಪದ ಖಂಡಜಾತಿ ಚಾಪು ತಾಳದಲ್ಲಿದೆ.ಏಕನಾದದ ಜೊತೆಯಲ್ಲಿ ಹಾಡಿದರೆ ಬಹು ಸ್ವಾರಸ್ಯವಾಗಿರುತ್ತದೆ. ಕೆರೆಗೆ ಹಾರದಂತೆಯೇ ಗೋವಿನ ಕಥೆ ಮತ್ತೊಂದು ಅಮರವಾದ ಪದ ಧರಣಿ ಮಂಡಲ ಮಧ್ಯದೊಳಗೆ,ಮೆರೆಯುತಿಹ ಕರ್ನಾಟದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು ಕೊಟ್ಟ ಭಾಷೆಗೆ ತಪ್ಪಲಾರೆನು!ಕೆಟ್ಟ ಯೋಚನೆ ಮಾಡಲಾರೆನು ನಿಷ್ಠೆಯಿಂದಲಿ ಪೋಪೆನಲ್ಲಿಗೆ!ಕಟ್ತಕಡೆಗಿದು ಖಂಶಿತ ಸತ್ಯವೆಂಬುದು ತಾಯಿತಂದೆ,ಸತ್ಯವೆಂಬುದು ಬಂಧುಬಳಗವು ಸತ್ಯವಾಕ್ಕಕ್ಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು. ಪುಣ್ಯಕೋಟಿ ಎಂಬ ಗೋವು ಹುಲಿರಾಯನಿಗೆ ಭಾಷೆ ಕೊಟ್ಟು,ಅದರಂತೆ ನಡೆದು ಹುಲಿರಾಯನನ್ನು ಸೋಲಿಸಿದ ಕಥೆಯಿದು. ದಾಸರಪದ ಮತ್ತು ವಚನಗಳೂ ಜನಪ್ರಿಯವಾಗಿ ನಾಡಿನಲ್ಲೆಲ್ಲ ಹಬ್ಬಿವೆ;ವೇದ, ಪುರಾಣಗಳ ತಿರುಳನ್ನು ತಿಳಿಗಲ್ಲಡದಲ್ಲಿವು ಸಾರಿವೆ.ಹಾಡಿಕೊಳ್ಳಲು ಯೋಗ್ಯವಾಗಿವೆ. ಇವುಗಳ ಹಾಡುಗಾರಿಕೆಯೇ ಒಂದು ಬಗೆಯ ಸಂಪ್ರದಾಯವಾಗಿದೆ.ರಾಗ,ಭಾವ,ಲಯ ಪ್ರಧಾನವಾದ ಇವಕ್ಕೆ ಸಂಗೀತದಲ್ಲೂ ಸಾಹಿತ್ಯಲ್ಲೂ ಹಿರಿಯ ಸ್ಥಾನವೇರ್ಪಟ್ಟಿದೆ. ಆವ ಕುಲವಾದರೇನ ಅವನಾದರೇನು ಆತ್ಮಭಾವ ಅರಿತಮೇಲೆ ಮನುಜಾ ತಲ್ಲಣಿಸದಿರು ಕಂಡ್ಯ ತಾಳು ಮನವೆ