ಪುಟ:Mysore-University-Encyclopaedia-Vol-4-Part-1.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಕ್ಯುಲಿಯಾನಿಡೀ

ಕನ್ನಡ ಪತ್ರಿಕೋದ್ಯಮದಲ್ಲಿಯೂ ಇವರದು ಮಹತ್ವದ ಹೆಸರು. ಇವರು ಹವ್ಯಕ ಸುಬೊಧ ಎಂಬ ವಾರ ಪತ್ರಿಕೆಯನ್ನೂ (೧೮೮೫) ಹಿತೋಪದೇಶ (೧೮೮೮) ಎಂಬ ಮಕ್ಕಳ ಮಸಪತ್ರಿಕೆಯನ್ನೂ ಪ್ರಾರಂಭಿಸಿದರು. ಇವು ಆ ಕಾಲಕ್ಕೆ ಬಹಳ ಜನಪ್ರಿಯ ಪತ್ರಿಕೆಗಳೆನ್ನಿಸಿ ಕೊಂಡಿದ್ದವು. ನಿರ್ಭಿಡೆ ವ್ಯಕ್ತಿತ್ವದ ವೆಂಕಟರಮಣಶಾಸ್ತ್ರಿಯವರಿಂದ ಅಂದಿನ ಬ್ರಿಟಿಸಷರ ಆಡಳಿತ ನೀತಿ ಮತ್ತು ಅಧೀಕಾರಿಗಳ ದುರ್ವರ್ತನೆಗಳು ಕಟುಟೀಕೆಗೆ ಒಳಗಾದವು. ಅರಣ್ಯ ಇಲಾಖೆಯ ಅವ್ಯವಹಾರಗಳನ್ನೆಲ್ಲ ಬಯಲಿಗೆಳೆದಿದ್ದರಿಂದಾಗಿ ಪ್ರಾಯಸಶಃ ಇವರ ಮೀಲೆ ಖಟ್ಲೆ ಜರುಗಿ ಪತ್ರಿಕೆಯನ್ನು ಮುಟ್ಟುಗೊಲು ಹಾಕಿಕೊಳ್ಳಲಾಯಿತು. ಇವರಿಗೆ ಜೈಲು ಶಿಕ್ಷೆ ವಿಧಿಸಲ್ಪಟ್ಟಿತು. ಹೀಗೆ ರಾಜಕೀಯ ಕಾರಣಕ್ಕಾಗಿ ಶಿಕ್ಷೆಗೊಳಗಾದ ಕನ್ನಡ ಲೇಖಕರಲ್ಲಿ ವೆಂಕಟರಚಿತ್ರಗಳನ್ನು ಮೊದಲು ಬಳಸಿದವರು ಇವರು. ತಮ್ಮ ಜೀವಿತದ ಕೊನೆಯ ಕೆಲವು ಕಾಲ ಪುಣೆಯಲ್ಲಿ ವೈದ್ಯಕೀಯ ವೃತ್ತಿ ನಡೆಸಿ, ಹುಟ್ಟೂರಿಗೆ ಮರಳಿ ಆನಂತರ ಅಲ್ಲಿಯೇ ನಿಧನರದರು.

ಕರ್ಕ್ಯುಲಿಯಾನಿಡೀ: ಗೋದಿ,ಅಕ್ಕಿ ಹಿಟ್ಟು ಮುಂತಾದುವಕ್ಕೆ ಹತ್ತುವ ಕುಟ್ಟೆ ಹುಳುಗಳು ಅಥವಾ ವಾಡೆ ಹುಳುಗಳು ಎಂದು ಕರೆಯಲ್ಪಡುವ ಸೊಂಡಿಲು ಕೀಟಗಳ ಕುಟುಂಬ. ಇವು ಕೀಟರ್ವದ ಕೋಲಿಯಪ್ಪಿರ ಗಣ್ಣಕ್ಗಕೆ ಸೇರಿವೆ. ಇತರ ಜೀರುಂಡೆಗಳೊದಡೆನೆ ಹೋಲಿಕೆಯಿದ್ದರೂ ಕೆಲವು ಗುಣ್ಣಲಕ್ಷಣಗಳಲ್ಲಿ ಇವು ಬಿನ್ನವಾಗಿದೆ.ಈ ಕುಟುಂಬದ ಕೀಟಗಳ ತಲೆಯ ಮುಂಭಾಗ ಕೊಕ್ಕಿನ ಅಥವಾ ಸೊಂಡಿಲಿನ ಹಾಗಿರುವುದರಿಂದ ಇವನ್ನು ಸೊಂಡಿಲು ಕೀಟಗಲು(ವೀವಿಲ್ಸ್) ಎಂದು ಕರೆಯುವುದುಂಟು. ಇವುಗಳಲ್ಲಿ ಹಲವಾರು ಜಾತಿಗಳಿವೆ. ವಿವಿಧ ಜಾತಿಗಳಲ್ಲಿನ ಸೊಂಡಿಲ ಗಾತ್ರ, ಆಕಾರ ಮತ್ತು ಉದ್ದಗಳಲ್ಲಿ ವೈವಿಧ್ಯವಿದೆ. ಅನೇಕ ಪ್ರಭೇದಗಳಲ್ಲಿ ಸೊಂಡಿಲು ಸಾಮಾನ್ಯವಗಿದೊಡ್ಡದು. ಕುಡಿಮೀಸೆ ಸೊಂಡಿಲಿನ ಮಧ್ಯಪ್ರಧೇಶದಿಂದ ಹುಟ್ಟುತ್ತದೆ. ಕೆಲವು ಬಗೆಯ ಕೀಟಗಳಲ್ಲಿ ಸೊಂಡಿಲು ಬಹಳ ತೆಳ್ಳಗೆ ಕೀಟದ ಉದ್ದದಷ್ಟು ನೀಳವಾಗಿದೆ.

ಸೊಂಡಿಲು ಕೀಟಗಳು ಕಾಯಿ,ಹಣ್ಣು ಮತ್ತು ಸಸ್ಯಕಾಂಡಗಳು ಆಳವಾದ ರಂದ್ರಗಳನ್ನು ಕೊರೆಯುತ್ತದೆ.ಇಂಥದಲ್ಲೆ ಹೆಣ್ಣು ಕೀಟೆ ಮೊಟ್ಟೆಗಳನ್ನಿಡುತದೆ. ಮೊಟ್ಟೆಗಳಿಂದ ಹೊರಬಂದ ಡಿಂಬಗಳು (ಲಾರ್ವ) ಸಾಮಾನ್ಯವಾಗಿ ಮೊಗ್ಗು, ಬೀಜ, ಕಾಯಿ ಮತ್ತು ಕಾಂಡಗಳ ಒಳಗೇ ಇದ್ದು ಅವನ್ನು ತಿಂದು ಬೆಳೆಯುತ್ತೆವೆ. ಸೊಂಡಿಲು ಉಗ್ರಾಣಗಳಲ್ಲಿ ಶೇಖರಣೆ ಮಾಡುವ ದವಸಗಳನ್ನೂ ತಿಂದು ಹಾಳುಮಾಡುತ್ತವೆ.

ತೊಂದರೆಗೊಳಗಾದಾಗ ಈ ಕೀಟಗಳು ತಮ್ಮ ಕುಡಿಮೀಸೆ ಮತ್ತು ಕಾಲುಗಳನ್ನು ಮುದುಡಿ, ಚಲಿಸದೆ ನೆಲದ ಮೇಲೆ ಬಿದ್ದುಕೊಂಡಿದ್ದು ಸತ್ತಹಾಗೆ ನಟಿಸುತ್ತವೆ. ಅನುಕರಿಸುತ್ತವೆ. ಚಲಿಸದೆ ಬಿದ್ದಿರುವಾಗ ಎವನ್ನು ಗುರುತಿಸುವುದು ಕಷ್ಟ.

     ಈ ಕುಟುಂಬದಲ್ಲಿ ಕೆಳಗೆ ಸೂಚಿಸಿರುವ ೧೩ ಉಪಕುಟುಂಬಗಳಿವೆ.

೧. ಸೈಲಾಡಿನೀ ; ತೆಳುವಾದ ಉದ್ದನೆಯ ಇರುವೆಗಳಂತಿರುವ ಕುಟ್ಟೆ ಹುಳುಗಳು ಇದಕ್ಕೆ ಸೇರಿವೆ. ಇವುಗಳ ಡಿಂಬಗಳನ್ನು ಸಿಹಿಗೆಣಸು ರಂಧ್ರ ಹುಳು ಎನ್ನುತ್ತಾರೆ. ಎವು ಸಿಹಿಗೆಣಸನ್ನು ಕೊರೆದು ಬೇರುಹಳನ್ನೂ ಗಿಡಗಳನ್ನೂ ನಾಶಗೊಳಿಸುತ್ತವೆ. ಅನೇಕ ವೇಳೆ ಇವು ಗೆಣಸಿನ ಗೆಡ್ಡೆಯಲ್ಲಿದ್ದು ಗೆಣಸು ಮಾರುಕಟ್ಟೆಗೆ ಬಂದಾಗ ಪ್ರೌಢಾವಸ್ಥೆ ತಲುಪಿ ಹೊರಬರುತ್ತವೆ.

೨. ಬೆಲೆನೀ : ಇದರ ಒಂದೇ ಒಂದು ಪ್ರಭೇದವಾದ ಇಕ್ಥಿಸಿರಸ್ ನೊವಬೊ ರೇಸಿಯಸ್ಸಿಸ್ ಎಂಬ ಕೀಟ ಓಕ್, ಹಿಕರಿ ಮತ್ತು ಬೀಚ್ ಮರಗಳ ಕೊಂಬೆ ಮತ್ತು ಎಲೆಗಳಲ್ಲಿರುತ್ತದೆ. ಇದರ ಡಿಂಬಗಳು ಕೊಂಬೆಗಳನ್ನು ಕೊರೆಯುತ್ತವೆ. ಇದರ ಉದ್ದ ೧೨-೧೮ ಮಿಮೀ. ಬಣ್ಣ ಮಿರುಗುವ ಕಪ್ಪು.

೩. ರಿಂಖಿಟಿನೀ (ಸಿಂಬಿನೀ) : ಈ ಕುಟುಂಬದ ಕೀಟಗಳ ಮ್ಯಾಂಡಿಬಲ್^ನ ಹೊರ ಮತ್ತು ಒಳ ಅಂಚಿನ ಮೇಲೆ ಹಲ್ಲುಗಳಿರವುದರಿಂದ ಇವನ್ನು ಹಲ್ಲು ಮೂಗಿನ ಸೊಂಡಿಲು ಕೀಟ ಎಂದು ಕರೆಯುವುದುಂಟು. ಇವುಗಳ ಉದ್ದ ೧.೫-೬.೫ಮಿಮೀ. ಇವು ಸಾಧಾರಣವಾಗಿ ಕುಳ್ಳಾದ ಗಿಡಗಳ ಮೇಲಿರುತ್ತವೆ. ರಿಂಖೈಟಿನ್ ಬೈಕಲರ್ ಎಂಬ ಪ್ರಭೇದದ ಕೀಟಗಳು ಸಾಮಾನ್ಯವಾಗಿ ಗುಲಾಬಿಗಿಡಳಲ್ಲಿರುತ್ತವೆ. ಇದರ ಮೇಲ್ಮೈ ಕೆಂಪಾಗಿಯೂ ಇರುತ್ತದೆ. ಮಿಕ್ಕ ಪ್ರಭೇದಗಳು ಮೊಗ್ಗು, ಕಾಯಿ ಮತ್ತು ಹಣ್ಣುಗಳಲ್ಲಿ ಮೊಟ್ಟೆಯಿಡುತ್ತವೆ.

೪.ಅಟ್ಟೆಲಾಬಿನೀ : ರೂಢಿಯಲ್ಲಿ ಈ ಕುಟುಂಬದ ಕೀಟವನ್ನು ಎಲೆಸುರುಳಿ ಮಾಡುವ ಸೊಂಡಿಲು ಕೀಟ ಎನ್ನುತ್ತಾರೆ. ಮೊಟ್ಟೆಯನ್ನು ಎಲೆಯ ಮೇಲೆ ಅದನ್ನು ಚಮತ್ಕಾರವಾಗಿ ಸುರುಳಿಸುತ್ತಿ ಎಲೆಯ ತೊಟ್ಟನ್ನು ಕಡಿದು ಅದನ್ನು ಕೆಳಗೆ ಬೀಳಿಸುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ಎಲೆಯ ಒಳಭಾಗವನ್ನು ತಿಂದು ಬೆಳೆಯುತ್ತದೆ. ಕೀಟದ ಉದ್ದ ೩-೬ಮಿಮೀ.

೫. ಆಕ್ಸಿಕೊರಿನಿನೀ (ಅಲ್ಲೊಕೊರಿನಿನೀ): ಇದರಲ್ಲಿ ಒಂದೇ ಒಂದು ಪ್ರಭೇದವಿದೆ. ಈ ಕುಟ್ಟೆಹುಳು ಆರೋರೊಟ್ ಗಿಡದಲ್ಲಿ ಜೀವಿಸುತ್ತದೆ.

೬. ಟ್ರ್ಯಾಖಿಗೋನಿನೀ :ಈ ಕುಟುಂಬದ ಕೀಟಗಳು ನೆಲಗಪ್ಪೆ ಆಕಾರವಿರುವುದರಿಂದ ಇವಕ್ಕೆ ನೆಲಗಪ್ಪೆ ಸೊಂಡಿಲು ಕೀಟಗಳೆಂದು ಹೆಸರು. ಎಲೆಯ ಕೆಳಭಾಗದಲ್ಲೇ ಚಲಿಸುವುದು ಈ ಕೀಟಗಳ ವಿಶೇಷ ಗುಣ.

೭. ಟೀರೋ ಕೋಲಿನೀ : ಇದಕ್ಕೆ ಸೇರಿದ ಕೀಟಗಳು ಮೊಟಕು ರೆಕ್ಕೆಯವು. ಸಣ್ಣ ಓಕ್ ಮರಗಳಲ್ಲಿ ಸಾಧಾರಣವಾಗಿ ಕಾಣಬರುತ್ತವೆ.

೮. ಎಪಿಯೋನಿನೀ : ಈ ಕುಟುಂಬದ ಕೀಟಗಳು ಬಹಳ ಸಣ್ಣ ಗಾತ್ರದವು. ಉದ್ದ ಸುಮಾರು ೪.೫ ಮಿಮೀ ಅಥವಾ ಇನ್ನೂ ಕಡಿಮೆ. ಅನೇಕ ಪ್ರಭೇದಗಳು ಅವರೆ ಜಾತಿಯ ಸಸ್ಯಗಳಲ್ಲಿ ಕಾಣಬರುತ್ತವೆ. ಡಿಂಬಗಳು ಈ ಸಸ್ಯಗಳ ಬೀಜ, ಕೊಂಬೆ ಮತ್ತು ಇತರ ಭಾಗಗಳನ್ನು ಕೊರೆದು ಅವುಗಳಲ್ಲಿರುತ್ತವೆ. ಇನ್ನು ಕೆಲವು ಪ್ರಭೇದಗಳು ಬೇರೆ ಗಿಡಮರಗಳಲ್ಲಿರುವುದುಂಟು.

೯. ಕಕ್ಯೂರ್ಲಿಯೋನಿನೀ : ಈ ಕುಟುಂಬದ ಸೊಂಡಿಲು ಕೀಟಗಳು ಕಕ್ಯೂರ್ಲಿಯಾನಿಡೀ ವರ್ಗಕ್ಕೆ ಸೇರಿದ ಜೀರುಂಡೆಗಳ ಪ್ರತಿರೂಪೀ ಉದಾಹರಣೆಗಳು. ಇವು ಅನೇಕ ರೀತಿಯಲ್ಲಿ ಉತ್ತಮ ಬೆಳೆಗಳ ಮತ್ತು ಹೆಣ್ಣಿನ ಮರಗಳ ಪಿಡುಗುಗಳಾಗಿದ್ದು ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಇವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿದೆ.ಉದಾಃ ಕೋನೊಟ್ರೇಚಲಸ್ ನೆಸುಫಾರ್ ಎಂಬ ಪ್ರಭೇದ ಪ್ಲಮ್ ಹಣ್ಣಿನ ಕುಟ್ಟೆಹುಳು. ಇದು ಮಿಕ್ಕ ಕೆಲವು ಹಣ್ಣುಗಳಲ್ಲೂ ಪಿಡುಗಾಗಿರುವುದು. ಆನ್ತ್ರೊನೊಮಸ್ ಗ್ರಾಂಡಿಸ್ ಎಂಬ ಪ್ರಭೇದ ಹತ್ತಿಗಿಡಗಳ ಮೇಲೆ ವಾಸಿಸುವುದು. ಎಕಾರ್ರ್ನ್ ಮತ್ತು ಗಟ್ಟಿಕಾಯಿಗಳ (ನಟ್) ಕೀಟಗಳಲ್ಲಿ ನೀಳವಾದ ಸೊಂಡಿಲಿರುತ್ತದೆ.

೧೦. ಥೆಸೆಸ್ಟರಿನೀ (ಬ್ರೈಸೆಪೈನೀ) ; ಇವು ಎಮ್ಮೆ ಮುಸುಡಿ ಕೀಟಗಳು. ದನಕರುಗಳು ಸೆಗಣೆ ಕೆಳಗಡೆ ಇವುಗಳ ವಾಸ.