ಪುಟ:Mysore-University-Encyclopaedia-Vol-4-Part-1.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜಾನಪದ


ಬಂದುಬಳಗವನ್ನು ಕುರಿತು, ತ್ಯಾಗಜೀವಿಗಳನ್ನು ಕುರಿತು ಸುಂದರ ತ್ರಿಪದಿಗಳನ್ನು ಗರತಿ ಹಾಡಿಕೊಳ್ಳುತ್ತಾಳೆ. ಬೀಸುವ ಪದಗಳಿಂದ ಆರಂಭವಾಗುವ ಗರತಿಯ ಸಾಹಿತ್ಯ ಹತ್ತು ಹಲವು ರೂಪದಲ್ಲಿ ಬದುಕಿನ ಬೇರೆ ಬೇರೆ ಸಂದರ್ಭಗಳಿಗನುಗುಣವಾಗಿ ಮೂಡಿ ಬರುತ್ತದೆ. ಮಕ್ಕಳನ್ನು ತೂಗುವಾಗ ಹಾಡುವ ಲಾಲಿಯ ಪದಗಳು,ತಿಂಗಳ ಮಾವನ ಪೂಜೆ,ಕೊಂತಿ ಪೂಜೆಗಳಲ್ಲಿ ವಿವಿದ ಮಟ್ಟಗಳಲ್ಲಿ ಹಾಡುವ ಸಂಪ್ರದಾಯದ ಪದಗಳು,ಮದುವೆ,ಒಸಗೆ ಮುಂತಾದ ¸ ಸಂದರ್ಭಗಳಲ್ಲಿ ಕ್ರಮವತ್ತಾಗಿ ಹಾಡುವ ಶಾಸ್ತ್ರದ ಪದಗಳು, ನಾಟಿ ಹಾಕುವಾಗ, ಕಳೆ ಕೀಳುವಾಗ, ಹಾಡುವ ಬಿಡಿಪದಗಳು- ಹೀಗೆ ಒಂದೊಂದು ಬಗೆಯಲ್ಲಿಯೂ ಅಪಾರ್ ಸಂಖ್ಯೆಯ ತ್ರಿಪದಿಗಳು ಹಳ್ಳಿಹಳ್ಳಿಗಳಲ್ಲೂ ಲಭ್ಯವಾಗುತ್ತವೆ. ಬ್ರಾಹ್ಮಣ ಸ್ತ್ರೀಯರು ಪರಂಪರಾನುಗತವಾಗಿ ಕಂಠಸ್ಥ ಸಂಪ್ರದಾಯದಲ್ಲಿ ಬಂದ ವಿಶಿ‍ಷ್ಟ ಸ್ವರೂಪದ ಜನಪದಗೀತೆಗಳನ್ನೂ ಕಥನಗೀತೆಗಳನ್ನೂ ಅನೇಕ ಮಟ್ಟುಗಳಲ್ಲಿ ಹಾಡುತ್ತಾರೆ. ಸಾಹಿತ್ಯ ಹಾಗೂ ಭಾಷಾದೃಷ್ಟಿಯಿಂದ್ ಇತರ ಜನಪದಸಾಹಿತ್ಯಕ್ಕಿಂತ ಇದು ಭಿನ್ನ ಸ್ತ್ರೀಯರ ಪದಗಳಲ್ಲಿ ಕೊರವಂಚಿಗಳು ಹಾಡುವ ಹೆಜ್ಜೆಯ ಪದಗಳನ್ನೇ ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕು. ಹಚ್ಚೆ ಹೊಯ್ಯುವ ಸಂಪ್ರದಾಯ್ ದಕ್ಷಿಣ ಕರ್ನಾಟಕದ ಎಲ್ಲ ಕಡೆಗಳಲ್ಲೂ ಕಾಣಬರುತ್ತದೆ. ಕೊರಮಿತಿಯರು ಈ ಹಚ್ಚೆಯ್ಱ ಕಲೆಯಲ್ಲಿ ನೈಪುಣ್ಯ ಸಾಧಿಸಿಕೊಂಡವರು. ಹಚ್ಚೆಯನ್ನು ಎಷ್ಟೋ ಹೊತ್ತಿನವರೆಗೆ ಹೊಯ್ಯುವಲ್ಲಿ ಚುಚ್ಚುವ ನೋವು ಕಾಣದಂತೆ ಸೊಗಸಾದ ಮಟ್ಟಿನಲ್ಲಿ ಹಚ್ಚೆಯನ್ನು ಕುರಿತ ಪದಗಳನ್ನೇ ಇವರು ಹಾಡುತ್ತಾರೆ. ಕೆಲವು ಕಥನ ಗೀತೆಗಳನ್ನೂ ಈ ಸಂದರ್ಭದಲ್ಲಿ ಹಾಡುವ ವಾಡಿಕೆಯುಂಟು. ಶಿಶುಪ್ರಾಸಗಳು ದಕ್ಷಿಣ ಕರ್ನಾಟಕದ ಜನಪದ ಸಾಹಿತ್ಯದ ಒಂದು ಅಂಗ. ಕೇವಲ ರಚನೆಯ ದೃಷ್ಱಿಯಿಂದ ಪರಿಶೀಲಿಸಬೇಕಾದ ಈ ಚುಟಿಕೆ ರೂಪದ ಸಾಹಿತ್ಯವನ್ನು ಅರಿಯದ ಮಕ್ಕಳಿಲ್ಲ. ಕಾಗೆ ಕಾಗೆ ಕವ್ವ ಯಾರು ಬತ್ತಾರವ್ವ ಮಾವ ಬತ್ತಾನವ್ವ ಹೀಗೆ ಕಾಗೆಯ ಕೂಗಿಗೊಂದು ಅರ್ಥವನ್ನು ಆರೋಪಿಸುವಂಥ ಯಾವುದೋ ನಂಬಿಕೆಯ ಸುಳುಹನ್ನೂ ಕೊಡುವಂಥ ರಚನೆಗಳು ಕಾಣಬಂದರೂ ಅವುಗಳ ಅರ್ಥ ಸ್ವಾರಸ್ಯಕ್ಕಿಂತ ರಚನಾಕೌಶಲ ಮೆಚ್ಚುವಂತಿರುತ್ತದೆ. ಬಹುಪಾಲು ಶಿಶುಪ್ರಾಸಗಳು ಮಕ್ಕಳ ಆಟಗಳ ಜೊತೆಯಲ್ಲಿ ಬೆರೆತು ಬೆಳೆದಿವೆ. ಪುರುಷರ ಗೀತೆಗಳಲ್ಲಿ ಕಗ್ಗದ ಪದಗಳು ತ್ರಿಪದೆ ರೂಪದಲ್ಲೇ ದೊರೆಯುತ್ತವೆ. ಶೃಂಗಾರ, ಹಾಸ್ಯ, ವಿಡಂಬನೆಗಳಿಗೆ ಸಂಬಂಧಿಸಿದಂತೆ ಅಪೂರ್ವ ಗೀತೆಗಳನ್ನು ಇಲ್ಲಿ ಕಾಣಬಹುದು. ಆಲೆ ಆಡಿಸುವಾಗ, ಕಪಿಲೆ ಹೊಡೆಯುವಾಗ, ಬ್ಂಡಿ ಓಡಿಸುವಾಗ, ಮಂದೆಗಳನ್ನು ತಡೆಯುವಾಗ ಇಂಥ ಪದಗಳು ಹೇರಳವಾಗಿ ಕೇಳಿಬರುತ್ತವೆ. ಪುರುಷರೇ ವಿಶೇಷವಾಗಿರುವ ಇಂಥ ಸಂದರ್ಭಗಳಲ್ಲಿ ಕೆಲಸದ ಬೇಸರವನ್ನೂ ರಾತ್ರಿಯ ಏಕತಾನ್ತೆಯನ್ನೂ ನಿವಾರಿಸಕೊಳ್ಳಲು ಅನೇಕ ಅಶ್ಲೀಲ ಗೀತೆಗಳೂ ಪ್ರೇಮಗೀತೆಗಳೂ ಅವತರಿಸುವುದು ಇಲ್ಲಿಯೇ. ಕೋಲಾಟ, ವೀರಮಕ್ಕಳ ಕುಣಿತ, ಬೀಸುಕಂಸಾಳೆ, ರಂಗದ ಕುಣಿತ, ಮುಂತಾದ ಕೆಲವು ಕನಪದ ನೃತ್ಯಗಳಲ್ಲೂ ಗೀತೆಗಳು ಅನಿವಾರ್ಯವಾಗಿ ಬರುತ್ತವೆ. ದಕ್ಷಿಣ ಕರ್ನಾಟಕದ ಕೋಲಾಟದ ಪದಗಳು ಆ ನೃತ್ಯದ‍ಷ್ಟೇ ಜನಪ್ರಿಯವಾದವು. ಭಕ್ತಿ, ಪ್ರೇಮ, ಸಾಮಾಜಿಕ ವಿಡ್ಂಬ್ನೆಯ ಹಿನ್ನಲೆಯಲ್ಲಿ ಈ ಹಾಡುಗಳ ಸೃಷ್ಟಿಯಾಗಿದೆ. ರಂಗದ ಕುಣಿತದಲ್ಲಿ, ದೇವರ ಉತ್ಸವ ಹೊರಟಾಗ ತಮ್ಮಟೆಯ ಗತ್ತನ್ನೂ ನಿಲ್ಲಿಸಿ ಆ ದೈವವನ್ನು ಕೊಂಡಾಡುವಲ್ಲಿ, ಸೋಮನ ಕುಣಿತದಲ್ಲಿ ಸಾಮಾನ್ಯವಾಗಿ ದೈವಸ್ತುತಿಪ್ರಧಾನ ಗೀತೆಗಳೇ ಹೆಚ್ಚಾಗಿ ಹಾಡಲ್ಪಡುತ್ತವೆ. ಅಂಟಿಕೆ - ಪಂಟಿಕೆ (ನೋಡಿ-ಅಂಟಿಕೆ ಪಂಟಿಕೆ೦ ಸಂಪ್ರದಾಯ ಮಲೆನಾಡಿನಲ್ಲಿ ದೀಪಾವಲಿಯ ಸಂದರ್ಭದಲ್ಲಿ ಕಾಣಬರುತ್ತದೆ. ಈ ಸಂದರ್ಭ ದಲ್ಲಿ ಮಲೆನಾಡಿನ ಯುವಕರು ಮನೆಯಿಂದ ಮನೆಗೆ, ಊರಿಂದ ಊರಿಗೆ ದೀವಳಿಗೆಯ ದೀಪವನ್ನು ಸಾಗಿಸುವಾಗ ಸುಂದರವಾದ ಗೀತೆಗಳನ್ನು ಹಾಡುತ್ತಾರೆ. ಒಳ್ಳೆಯ ಕಥನಗೀತೆಗಳೂ ಬಿಡಿಹಾಡುಗಳೂ ಅಂಟಿಕೆ-ಪ್ಂಟಿಕೆಯ ದೀಪದಾರಿಗಳಲ್ಲಿ ಉಳಿದುಬಂದಿವೆ. ಭಾಗವಂತಿಕೆ ಮೇಳ ದೀಪಾವಳಿಯಲ್ಲಿ ಬಯಲು ಸೀಮೆಯಲ್ಲಿ ಕಾಣಬರುವ ಒಂದು ವಿಶಿಷ್ಟ ಸಂಪ್ರದಾಯ. ವೈಷ್ಣವ ಸಂಪ್ರದಾಯ ಹೆಚ್ಚಾಗಿರುವ ಭಾಗಗಳಲ್ಲಿ ಈ ಮೇಳ ನಡೆಯುತ್ತದೆ. ಊರಿನ ದೇವರೊಡನೆ ಭಾಗವಂತಿಕೆ ಪದಗಳನ್ನು ಹೇಳಿಕೊಂಡು ಐರೂರು ಮೇಲೆ ಹೊರಡುವ ತಂಡವನ್ನು ದೀವಳಿಗೆಯ ದಂಡು ಎಂದು ಕರೆಯಲಾಗುತ್ತದೆ. ಇವರೆಲ್ಲ ಭಾಗವಂತಿಕೆ ಪದವನ್ನು ಹಾಡಬಲ್ಲ ಕುಶಲಿಗಳು, ಇವರ ಜೊತೆಗೆ ಕೋವಂಗೀಯ ವೇಷಧಾರಿಯೊಬ್ಬ ಸೇರಿಕೊಂಡು ಸೂತ್ರಧಾರನಾಗಿ ನಿಲ್ಲುತ್ತಾನೆ. ಭಾಗವಂತಿಕೆಯ ಪದಗಳಲ್ಲಿ ರಾಮಾಯಣ್, ಭಾರತ, ಭಾಗವತಗಳ ಕಥೆಗಳನ್ನೇ ಹಾಡಲಾಗುತ್ತದೆ. ಇಲ್ಲಿನ ಕೋಡ್ಂಗಿಯ ನೃತ್ಯ ಗಮನಾರ್ಹವಾದುದು. ಸಾಮೂಹಿಕವಾಗಿ ಹಾವುವ ತಂಡಗಲು ಕರ್ನಾಟಕದಲ್ಲಿ ವಿರಳವಾದರೂ ಭಾಗವಂತಿಕೆ ಮೇಳದಲ್ಲಿ ಇದೊಂದು ವೈಶಿಷ್ಟ್ಯವಾಗಿ ಉಲಿದು ಬಂದಿದೆ. ಮಾನೋಮಿಯ ಹರಕೆಯ ಪದಗಳು ಇತ್ತೀಚೆಗೆ ಮರೆಯಾಗುತ್ತಿವೆ. ನವರಾತ್ರಿಯ ಕಾಲದಲ್ಲಿ ಕೂಲಿಯ ಮಠದ ಮಕ್ಕಳು ಅಥವಾ ಯಕ್ಷಗಾನ ತಂಡದ ಉತ್ಸಾಹಿಗಳು ತಮ್ಮ ಆಯ್ಯಗಳ ಜೊತೆ ಊರಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶುಭಕಾಮನೆಗಳಿಂದ ಕೂಡಿದ ಚೌಪದಿಗಳನ್ನು ಹಾಡಿಕೊಂಡು ತಮಗೆ ಕಡಲೆ ಬೆಲ್ಲವನ್ನೂ ತಮ್ಮಯ್ಯಗಳಿಗೆ ಉಡುಗೊರೆಗಳನ್ನೂ ಕಾಣಿಕೆಯಾಗಿ ಪಡೆಯುತ್ತಿದ್ದರು. ದಕ್ಷಿಣ ಕರ್ನಾಟಕದ ಜನಪದ ನೃತ್ಯಗಳಲ್ಲಿ ಕೋಲಾಟ, ವೀರಮಕ್ಕಳ ಕುಣಿತ, ರಂಗದ ಕುಣಿತ, ವೀರಗಾಸೆ ಕುಣಿತ ಮುಂತಾದುವು ಸಾಮೂಹಿಕ ನೃತ್ಯಗಳು. ಈ ಯಾವ ನೃತ್ಯ್ಗಳಲ್ಲೂ ಪ್ರಧಾನವಾದ ವೇಷಭೂಷಣಗಳೇನೂ ಇಲ್ಲದಿದ್ದರೂ ಕಾಲಗೆಜ್ಜೆ, ತಲೆಯ ಪೇಟೆ, ನಡುವಿಗೆ ಸುತ್ತಿದ ವಸ್ತ್ರ, ನಿಲುವಂಗಿ, ವೀರಗಾಸೆಗಳು ಮುಖ್ಯವಾದುವು. ಕೋಲಾತದಲ್ಲಿ ಕೋಲುಗಳನ್ನು ಹೊರತು ಇನ್ನಾವ ವಾದ್ಯಗಳನ್ನೂ ಬಳಸುವುದಿಲ್ಲ. ರಂಗದ ಕುಣಿತಕ್ಕೆ ತಮ್ಮಟೆ ಪ್ರಧಾನ. ವೀರಮಕ್ಕಳ ಕುಣಿತದಲ್ಲಿ ತಮ್ಮಟೆ ಪ್ರಧಾನ್. ವೀರಮಕ್ಕಳ ಕುಣಿತದಲ್ಲಿ ತಮ್ಮಟೆಯ ಸ್ಥಾನದಲ್ಲಿ ಚಕ್ರವಾದ್ಯ ಕಾಣಿಸಿಕೊಳ್ಳುತ್ತದೆ. ವೀರಗಾಸೆ ಕುಣಿತದಲ್ಲಿ ವೀರಭದ್ರನ ಖಡ್ಗ ಹೇಳುವುದರ ಜೊತೆಗೆ ಕರಡೆ, ಸಮೇಳ ಮುಂತಾದ ವಾದ್ಯಗಳನ್ನು ಬಳಸಲಾಗುತ್ತದೆ. ಪಟಾಕುಣಿತ ದಕ್ಷಿಣ ಕರ್ನಾಟಕದ ಮತ್ತೊಂದು ಜನಪ್ರಿಯ ನೃತ್ಯ ಈ ಕುಣಿತವೂ ರಂಗದ ಕುಣಿತದ ಗತ್ತನ್ನೇ ಪಡೆದಿದ್ದರೂ ಉದ್ದವಾದ ಆಲಂಕೃತಗಳುಗಳನ್ನು (ಇದನ್ನು ಬಿರಡೆಕುಣಿತ ಎನ್ನುವುದುಂಟು) ಹಿಡಿದು ಕುಣಿಯುವುದು ಇಲ್ಲಿನ ಒಂದು ವೈಶಿಷ್ಟ್ಯ. ಇಬ್ಬ್ರು ಅಥವಾ ಒಬ್ಬರು ಕುಣಿಯುವ ಜನಪದ ನೃತ್ಯಗಳಲ್ಲಿ ಸೋಮನ ಕುಣಿತ, ನ್ಂದಿಕೋಲು ಕುಣಿತ್, ಲಿಂಗದ ಬೀರರ ಕುಣಿತ, ಪೂಜಾ ಕುಣಿತ, ಕರಗ ಕುಣಿತಗಳು ಮುಖ್ಯವಾದುವು. ಸೋಮನ ಕುಣಿತದಲ್ಲಿ ದೊಡ್ಡ ಮುಖವಾಡಗಳನ್ನು ಧರಿಸಿ, ಬಣ್ಣದ ವ್ಸ್ತ್ರದ ಕಾಸೆಯನ್ನು ಹಾಕಿ ತಮ್ಮಟೆ ಮತ್ತು ಇತರ ವಾದ್ಯಮೇಳಗಳ ಹಿನ್ನಲೆಯಲ್ಲಿ ಕುಣಿಯಲಾಗುವುದು.ನ್ಂದಿಕೋಲು ಕುಣಿತ ಅತ್ಯಂತ ಕಷ್ಟಸಾಧ್ಯವಾದುದು, ಸಾಹಸಯುತವಾದುದು. ಭಾರವಾದ ಅನೇಕ ಗಗ್ಗರ ನಂದಿಗಳಿಂದ ಕೂಡಿದ ಎತ್ತರವಾದ ಕೋಲುಗಳನ್ನು ನಾಲ್ಕಾರು ಜನರ ನೆರವಿನಿಂದ ಒಬ್ಬರು ಎತ್ತಿಹಿಡಿದು ತಮ್ಮಟೆಯ ಗತ್ತಿಗೆ ಕುಣಿಯುವ ವೈಖರಿ ರೋಮಾಂಚಕಾರಿಯಾದುದು. ಲಿಂಗದ ಬೀರರು ಲೋಹದ ಅನೇಕ ಬಿರುದಾವಳಿಗಳನ್ನು ಧರಿಸಿ ಒಂದು ಕೈಯಲ್ಲಿ ಖಡ್ಗವನ್ನು ಹಿವಿದು ವೀರಭದ್ರನ ಹಲಗೆಯನ್ನು ಧರಿಸಿ ಖಡ್ಗವನ್ನು ಹೇಳಿಕೊಂಡು ಕುಣಿಯುತ್ತಾರೆ. ವಿಶಿ‍ಷ್ಟವಾದ ಆಬರಣಗಳ ಸೊಗಸು ಇಲ್ಲಿ ಗಮನಾರ್ಹವಾದುದು. ಪೂಜಾ ಕುಣಿತ ಏಳು ಅಥವಾ ಒಂಬತ್ತು ಕಳಸಗಳ ದೇವತೆಯ್ ಪೂಜೆಯನ್ನು ಕಳಸದ ಮೇಲೆ ಡರಿಸಿ ಕುಣಿಯುವ ಮತ್ತೊಂದು ಕೈಶಲಪೂರ್ಣ ನೃತ್ಯ. ನೆತ್ತಿಯ ಮೇಲೆ ಚಚ್ಚೌಕವಾದ ವಿಸ್ತಾರವಾದ ಭಾರವಾದ ಪೂಜೆಯನ್ನು ಹೊತ್ತು, ಎರಡೂ ಕೈಗಳನ್ನು ಬಿಟ್ಟು ಕುಣಿಯುವ ಒಬ್ಬನ ಜೊತೆಗೆ, ಒನಕೆಯನ್ನು ನೆತ್ತಿಯ ಮೇಲಿಟ್ಟು