ಪುಟ:Mysore-University-Encyclopaedia-Vol-4-Part-1.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜಾನಪದ

ವಿಡಂಬನಾತ್ಮಕ ಲಾವಣೆಹಳಲ್ಲಿ ಜೀವನ ಸಂಗೀತದ "ಅಷ್ಟರ ಮಾತಿದು" ಎಂಬುದು ನವನಾಗರಿಕತೆಯ ವಿಡಂಬನೆ. ಬಸರಿದ್ದೀನ್ಹೆಸರನ್ನೇನಿಡೂನ, ನೂಲೊ ಲ್ಯಾಕ ಚೆನ್ನೀ(ಮಲ್ಲಿಗೆ ದಂಡೆ). ಖಾಜ್ಯಾಭಾಯಿಯ "ಅಪಸ್ವರದ ಲಾವಣಿಯ ಕಥೆ-ಇವು ಸಾಕಷ್ಟು ಪ್ರಸಿದ್ಧವಾಗಿವೆ.

ಮಾಂತ್ರಿಕ ಲಾವಣೆಗಳು, ಮುದ್ದುಮಾಟಗಳ ಸಲುವಾಗಿ ಬಳಕೆಯಾದುವು. ಇಲ್ಲಿ ಇದ್ದಂತಿಲ್ಲ. ಈ ವಿಭಾಗದಲ್ಲಿ ವೇದಾಂತದ ಹಾಗೂ ಸ್ತುತಿಯ ಲಾವಣೆಗಳನ್ನು ಹೇಳಬಹುದು. "ನಿರಾಕಾರದಾಗ ನೀರಿನ ಹೊರತು ಇದ್ದಿದ್ದಿಲ್ಲ ವಿನಾ", "ಅಚಿತ್ರ ಮಿಕಾ ಒಂದು ಕಂಡೆನಲಾ" ಎಂಬ ಲಾವಣೆಗಳಲ್ಲದೆ ಗುರುವಿನ ಮಹತ್ತ್ವದ ಲಾವಣೆಗಳೂ ಇಲ್ಲಿ ಕಾಣಸಿಗುತ್ತವೆ.

ದೇವುಡು ಅವರು ಸವಾಲ್ ಲಾವಣೆ ಎಂಬ ಪ್ರಶ್ನೋತ್ತರ ಲಾವಣೆಗಳನ್ನೂ ಝಡಿತಿ ಎಂಬ ಅದರ ಉಪಜಾತಿಯನ್ನೂ ಹೇಳಿದ್ದಾರೆ.

ರಂಗು ಎಂಬ ಶೃಂಗಾರಲಾವಣೆಗಳು ಬಹಳ ಸೋಗಸಾದುವು. ಉದಾ, ಸಂಪಗಿತೆನೆಯಂಥ ಹುಡುಗ, ಕರಿಹುಡುಗಿ ಇತ್ಯಾದಿ. ಗದ್ದಗೀಮಠದ ದುಂದುಮೆ ಪದಗಳಲ್ಲಿಯೂ ಇವುಗಳ ಲಕ್ಷಣಗಳನ್ನು ಗುರುತಿಸಬಹುದು. (ಲಾವಣೆ ಹಾಡುವಾಗ ಸೂರಿನವನು ಜೀಜೀ ಅಥವಾ ಗೀಗೀ ಎನ್ನುವ ಪದ್ಧತಿಯಿದೆ).

ಲಾವಣೆಕಾರರ ಹೆಸರುಗಳು ಅವುಗಳ ಕೊನೆಗಿರುವುದು ಇಲ್ಲಿನ ಪರಂಪರೆಯ ವೈಶಿಷ್ಟ್ಯ. ಮಹಾಲಿಂಗಪುರದ ರಾಣಿ-ಕುಬಣ್ಣ, ಹಲಸಂಗಿಯ ಖಾಜ್ಯಾಭಾಯಿ, ಸಿದ್ಧು-ಶಿವಲಿಂಗ ಮತ್ತು ಸಂಗೂರಾಯಪ್ಪ, ತೇರದಾಳದ ಗೋಪಾಳ ದುರ್ದುಂಡಿ ಮತ್ತು ನೇಮಣ್ಣ ಹಾಗೂ ಜನವಾಡದ ನಾನಾಸಾಹೇಬ- ಇವರು ಶ್ರೇಷ್ಠ ಲಾವಣೆಕಾರರು. ಚಾಂದಕೋಟೆಯ ಗುಡುಸಾಹೇಬ, ಕೋರಹಳ್ಳಿಯ ಸಿದುರಾಮ ತಳವಾದ ಮತ್ತು ಕೆರೂರಿನ ಸತ್ಯಪ್ಪ ಈ ಮೂವರ ಹೆಸರುಗಳನ್ನು ಸಿಂಪಿ ಲಿಂಗಣ್ಣನವರು ಸೂಚಿಸಿದ್ದಾರೆ. ಎಲ್.ಆರ್.ಹೆಗಡೆಯವರು ಸಂಗ್ರಹದಲ್ಲಿ ಹೊಸ್ತಾನ ಹುಸೇನ ಸಾಹೇಬ ಮತ್ತು ರಾವುಕುವಣ್ಣರ ಹೆಸರುಗಳಿರುವ ಲಾವಣಿಗಳಿವೆ.

ದುಂದುಭಿ ಪದಗಳು : ದುಂದುಭಿ ಮತ್ತು ದುಂದುಮೆ ಪದಗಳು ಹೋಳಿಯಲ್ಲಿ ಹಾಡುವ ಪದಗಳಾದರೂ ಇವುಗಳ ತಾಳ-ಲಯ, ಗತಿ, ರಾಗ ಬೇರೆ (ಗದ್ದಗೀಮಠ), ಕಲಿಕಾಲ ಹೋಳಿ, ಮಲ್ಲಸರ್ಜ ದುಂದುಭಿಗಳು ಮಲ್ಲಸರ್ಜನ ದುಂದುಮೆಯೂ ಉಂಟು. ಕುಮಾರರಾಮನ ದುಂದುಮೆ ಬಹಳ ಸೊಗಸಾಗಿದೆ.

ಕಂಬಿಯ ಪದಗಳ : ಇವನ್ನು ಕಂಬಿ ಕೋಲುಗಳನ್ನು ಹಿಡಿದು ಯಾತ್ರೆಗೆ ಹೊರಟ ಶ್ರೀಗಿರಿ ಮಲ್ಲಯ್ಯನ ಭಕ್ತರು ಶಿವರಾತ್ರಿ ಹಾಗು ಯುಗಾದಿಗಳಲ್ಲಿ ಹಾಡುವರು. (ನೋಡಿ-ಕಂಬಿಯ ಪದಗಳು)

ಹಂತಿಯ ಪದಗಳು : ಇವು ಬೈಲುಸೀಮೆಯ ಸುಗ್ಗಿಯ ಹಾಡುಗಳು, ಜಾತಿಗರ ಚೌಡಯ್ಯ, ಕಿನ್ನರಿ ಬೊಮ್ಮಯ್ಯ, ಮಾದರ ಚೆನ್ನಯ್ಯ, ಮೇದಾರ ಕೇತಯ್ಯ, ಬಿಜ್ಜ ಮಹಾದೇವಿ, ಬೇಡರ ಕನ್ನಯ್ಯ, ಕುಂಬಾರ ಗುಂಡಯ್ಯ ಮೊದಲಾದ ಶರಣರ ಚರಿತ್ರೆಗಳನ್ನೂ ಎತ್ತುಗಳ ಮೇಲೆಯೂ ಬಸವಣ್ಣನವರ ಕಟ್ಟಿದ ಹಾಡುಗಳನ್ನೂ ಹಂತಿ ಹೊಡೆಯುವಾಗಳೂ ಏತ (ಮೊಟ್ಟೆ) ಕಾಯಕದಲ್ಲಿಯೂ ಹೇಳುವರು. ನಡುವೆ ಹಾಸ್ಯದ ಹಾಡುಗಳನ್ನೂ ಪ್ರಣಯಗೀತೆಗಳನ್ನೂ ಅನುಭವದ ಸೂತ್ರಕಥೆಗಳನ್ನೂ ಹಾಡುವರು. ಹಂತಿಯ ಪದಗಳ ಶ್ರೇಷ್ಠಕವಿ ಸಾವಳಿಗೇಶ.

ಡೊಳ್ಳಿನ ಪದಗಳು : ಬೀರೇದೇವರ ಸ್ತುತಿಪದಗಳೂ ಗದ್ಯಪದ್ಯಾತ್ಮಕವಾದ ಸಾಂಖ್ಯತೊಂಡನ ಕಥೆ. ರಘುಪತಿಯ ಕಥೆಗಳೂ ಕುರುಬರಿಂದ ಹೇಳಲ್ಪಡುತ್ತವೆ.

ಹೋಳಿಯ ಪದಗಳು : ಹುಬ್ಬಳ್ಳಿ ಮಂಗ್ಯಾನ ದುಂದುಮೆಯಂಥ ಶೃಂಗಾರ ಪದಗಳು ಬಳಕೆಯಲ್ಲಿವೆ. ಹರಿಜನರೂ ಕಸಬಿಯರೂ ಒಟ್ಟಾಗಿ, ಗಂಡು ಹೆಣ್ಣುಗಳು ಕೈಗೆ ಕೈ ಕೊಟ್ಟು ಹಾಡುವ ಈ ಶೃಂಗಾರದ ಪದಗಳಲ್ಲಿ ಆಶ್ಲೀಲತೆ ಇಣಕಿ ಹಾಕಿದರೆ ಆಶ್ವರ್ಯವೇನಿಲ್ಲ.

ಕರ್ಬಲಾ ಪದಗಳು : ಮೊಹರಂ ಹಬ್ಬದಲ್ಲಿ ಹೇಳುವ ಹಸನ್ ಮತ್ತು ಹುಸೇನರ ಬಲಿದಾನದ ಕಥಾನಕಗಳಿವು. ಅಲವಿ ಪದಗಳೆಂದೂ ಕರೆಯುವರು. ಇವುಗಳಲ್ಲಿ ಆಡುಮಾತಿನ ಸರಳಸೌಂದರ್ಯವೂ ಶೌರ್ಯ ಮತ್ತು ಶೋಕದ ಪರಿಣಾಮಕಾರಿಯಾದ ಭಾವನೆಗಳೂ ಇವೆಯೆಂದು ಬಿ. ಎ. ಸನದಿಯವರು ಅಭಿಪ್ರಾಯಪಡುತ್ತಾರೆ.

ಜೋಗಿಯರು, ಗೊಂದಲಿಗರು : ಮಹಾಭಾರತದ ಕಥಾನಕಗಳನ್ನು ಹಾಡುವ ಕಿಂದರಿಜೋಗಿಗಳು ಬೇರೆ, ಸವದತ್ತಿಯ ಅಥವಾ ಕೊಕಟನೂರಿನ ಎಲ್ಲಮ್ಮನ ಮಹಿಮೆಯನ್ನು ಬಿತ್ತರಿಸುವ ಜೋಗಿಯರು ಬೇರೆ. ಎಲ್ಲಮ್ಮ ಜೋಗಿಯರು ಎನ್ನೂ ಇತರ ಅದ್ಭುತರಮ್ಯ ಕಥೆಗಳನ್ನು ಹಾಡುತ್ತಾರೆ.

ಗೊಂದಲಿಗರು ಕೊಲ್ಲಾಪುರದ ತುಳಜಾಭವಾನಿಯ ಮಹಿಮೆಗಳನ್ನು ಹಾಡಿ ಕಥೆಗಳನ್ನು ವಿಸ್ತರಿಸಿ ರಾತ್ರಿ ಮೊದಲ್ಗೊಂಡು ಬೆಳಗಿನವರೆಗೆ ಕುಣಿಯುವರು. ಜೋಗಿಯರೂ ಗೊಂದಲಿಗರೂ ಕೆಲವು ಸಾರಿ ಒಂದೇ ಕಥೆ ಹೇಳಿದರೂ ಹಾಡುವ ದನಿಯಲ್ಲಿಯೂ ಚೌಡಿಕೆವಾದ್ಯದಲ್ಲಿಯೂ ಭೇದವಿದೆ. ಅಡವಿಗೆ ಗುರಿಯಾದ ರಾಜ ರಾಣಿಯರ ಕಥೆಗಳು ಹೆಚ್ಚಾಗಿ ಬರುವುದುಂಟು. ಗೊಂದಲಿಗರಲ್ಲಿ ಬಳಕೆಯಲ್ಲಿರುವ ಚಿತ್ರಶೇಖರ-ರಾಜಶೇಖರ ಕಥೆಯೂ ಜೋಗಿಗಳಲ್ಲಿ ಬಳಕೆಯಲ್ಲಿರುವ ಲೋಹಿತ ಕುಮಾರ-ಬಸಂತಕುಮಾರರ ಕಥೆಯೂ ಒಂದೇ. ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇತ್ಯಾದಿ ಕನ್ನಡ ವೀರರ ಕಥೆಗಳೂ ಅದ್ಭುತರಮ್ಯ ಅಂಶಗಳನ್ನು ಸೇರಿಸಿ ಹಾಡತೊಡಗಿದ್ದಾರೆ.

ಹಾವೇರಿ ಕಡೆಯ ಗೊರವರು ಮೈಲಾರಲಿಂಗನ ಅವತಾರ ಕಥೆಯನ್ನು ಹೇಳುತ್ತಾರೆ.

ಹೆಂಗಸರ ಹಬ್ಬದ ಹಾಡುಗಳು : ಅರಳೆಲೆ ಬಸವನ ಹಬ್ಬದಲ್ಲಿನ ಕೋಲುಹಾಡು ಮತ್ತು ಇತರ ಹಾಡುಗಳು, ಗುಳ್ಳವ್ವನ ಪೂಜೆಯ ಹಾಡು, ನಾಗರಪಂಚಮಿಯ ಜೋಕಾಲಿಯ ಹಾಡು, ಭಾದ್ರಪದ ಶುದ್ಧ ಅಷ್ಟಮಿಯ ಜೋಕುಮಾರನ ಪೂಜೆಯ ಹಾಡು ಮತ್ತು ಗುರ್ಚಿಯ ಹಾಡು ಈ ಭಾಗದಲ್ಲಿ ವಿಶಿಷ್ಟವಾದುವು. ಬನ್ನಿಹಬ್ಬ, ಶೀಗಿ ಹುಣ್ಣಿಮೆ, ಗೌರೀಹಬ್ಬ, ದೀವಳಿಗೆ, ಶಿವರಾತ್ರಿ, ಹೋಳಿ, ಯುಗಾದಿ ಮುಂತಾದ ಹಬ್ಬಗಳ ಹಾಡುಗಳು ಉತ್ತರ ಕರ್ಣಾಟಕದ ಜಾನಪದದ ವೈವಿಧ್ಯ, ವೈಪುಲ್ಯಗಳನ್ನು ತೋರಿಸುತ್ತವೆ.

ವಾರದ ಹಾಡುಗಳು : ಎಲ್ಲ ವಾರಗಳಿಗೂ ಪ್ರತ್ಯೇಕ ಹಾಡುಗಳಿವೆ. ಮಂಗಳ ಗೌರಿಯ ಹಾಡು, ಶುಕ್ರವಾರದ ಹಾಡು ಇತ್ಯಾದಿ. ರವಿವಾರ ರಾಮನ ಹಾಡು, ಸೂರ್ಯನ ಹಾಡು. ವೈಷ್ಣವರು ಗುರುವಾರ ಶ್ರೀ ರಾಘವೇಂದ್ರ ಗುರುಗಳ ಹಾಡು ಹೇಳುತ್ತಾರೆ.

ಕೆಲಸದ ಹಾಡುಗಳು : ಜಾನಪದದಲ್ಲಿ ಗರತಿಯರು ಬೇಯಿಸುವಾಗಲೂ ಕುಟ್ಟುವಾಗಲೂ ತೊಟ್ಟಿಲು ತೂಗುವಾಗಲೂ ಹಾಡುವ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹವಾಗಿವೆ. ಜಾನಪದದ ತನಿಕೆನೆಯಾಗಿ ಇವುಗಳಲ್ಲಿ ಭಾವ, ಸಂಸ್ಕೃತಿ ಒಡ ಮೂಡಿವೆ. ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಇವುಗಳಲ್ಲಿ ಕಂಗೊಳಿಸುತ್ತವೆ.