ಪುಟ:Mysore-University-Encyclopaedia-Vol-4-Part-1.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜಾನಪದ

ಕಥನಕವನಗಳು : ಹತ್ತಿ ಬಿಡಿಸುವಾಗಲೂ ಗೋದಿ ಕೀಳುವಾಗಲೂ ಹಾಡುವ ಸಂಪ್ರದಾಯದಲ್ಲಿ ವಿನೋದಕ್ಕಾಗಿಯೂ ದೇವರ ಭಕ್ತಿ-ನೈವೇದ್ಯವೆಂತಲೂ ಅನೇಕ ಕಥನಕವನಗಳನ್ನು ಹಾಡುತ್ತಾರೆ. ಶಿವಶರಣರ ಚರಿತ್ರೆಯ ಹಾಡುಗಳನ್ನು ವೀರಶೈವ ಮಹಿಳೆಯರು ಈ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಕೆಲವು ಸಹ ಹಂತಿಯ ಹಾಡುಗಳನ್ನೂ ಬಳಸುವುದಲ್ಲದೆ ಕಲ್ಪನಾರಮ್ಯವಾದ ಸುಂದರ ವರ್ಣನೆಗಳಿಂದ ಕೂಡಿದ ಅರ್ಜುನಜೋಗಿಯ ಹಾಡುಗಬ್ಬವನ್ನು ಹಾಡುತ್ತರೆ.

ಗದ್ದಗೀಮಠರು ಕೊಟ್ಟಿರುವ ಕೋಲುಪದಗಳು ಹೆಣ್ಣುಮಕ್ಕಳು ಕೋಟೆ ಕಟ್ಟಿ ಕೋಲುಹಾಕಿ ಹಾಡುವಂಥದು. ಇವುಗಳಲ್ಲಿ ಶಿವ, ಗಂಗೆ, ಗೌರಿಯರ ಸ್ವಾರಸ್ಯವಾದ ಕಥೆಗಳೂ ಮಲವೈ ಸೆಟ್ಟಿ, ಸಿರಿಯಾಳ-ಚೆಂಗಳೆ, ಬಸವಣ್ಣ, ಶ್ರೀಕೃಷ್ಣ ಇವರ ಚರಿತ್ರೆಗಳಲ್ಲದೆ ಕಿತ್ತೂರಿನ ಇತಿಹಾಸದ ಕಥೆಯೂ ಸೇರಿವೆ. ಸಣ್ಣ ಸೊಸೆ ಭಾಗೀರಥಿಯ ಹಾಡು, ಕೊರವಂಜಿ ಹಾಡು, ಬರದ ಹಾಡು, ಹರಿಗೋಲ ಹಾಡು, ಗುಣಸಾಗರವ್ವನ ಹಾಡು, ಹೇಮರೆಡ್ಡಿ ಮಲ್ಲಮ್ಮನ ಹಾಡು, ಕುಮಾರರಾಮನ ಹಾಡು, ಮಲ್ಲ-ಮಲ್ಲಾಂಇಯರ ಹಾಡುಗಳಲ್ಲದೆ ಇನ್ನೂ ಅನೇಕ ಪೌರಾಣಿಕ ಜನಪದ ಕಥೆನಕವನಗಳು ಹೆಣ್ಣು ಮಕ್ಕಳಲ್ಲಿ ಪ್ರಚಲಿತವಾಗಿವೆ.

ಕಥೆಗಳು : ಈ ನಾಡಿನಲ್ಲಿ ಕಥಾಸಾಹಿತ್ಯ ಬಹು ಸಮೃದ್ಧವಾಗಿವೆ ; ಆದರೆ ಸಂಗ್ರಹ ಹೆಚ್ಚಾಗಿಲ್ಲ. ಊರು, ಕೇರಿ, ಕೆರೆ-ಕೊತ್ತಳ, ಹೊಳೆ ಹಳ್ಳ, ಮನೆ, ಹೊಲಗದ್ದೆಗಳಿಗೂ ಕಥೆಗಳುಂಟು. ಬಸವಣ್ಣ ಪಟ್ಟೆ, ನೆಟ್ಟಗಲ್ಲ-ಚಾಹುರ, ಕಲ್ಗಗುತ್ತಿ, ಹೊಲ ಇವೆಲ್ಲ ಐತಿಹ್ಯದ ಮಾದರಿಗಳು. ದೇವಾಲಯದ ಸುತ್ತಲೂ ಕಥೆಗಳಿವೆ. ಉದಾ. ಉಗಾರದ ಪದ್ಮಾಂಬೆಯ ಕಥೆ. ಅನೇಕ ಪಾಳೆಯಗಾರರ ಐತಿಹಾಸಿಕ ಕಥೆಗಳಿವೆ.ಚಿಂಚಲಿ ಮಾಯಮ್ಮ, ಸವದತ್ತಿ ಎಲ್ಲಮ್ಮ, ಬಾದಾಮಿ ಬನಶಂಕರಿ ಮುಂತಾದ ದೇವತೆಗಳ ಮಹಿಮೆಗಳಲ್ಲಿ ಇತಿಹಾಸದ ಅಂಶಗಳುಳ್ಳ ಜನಪದ ಕಥೆಗಳು ಹಲವಿದೆ. ಅನೇಕ ಹೆಳವರು (ಹಳೆಯರು) ಹೇಳುವ ಹೊಗಳಿಕೆಗಳಲ್ಲಿ ಮನೆತನಗಳ ಕಥೆಗಳಿವೆ.

ಗೊಂದಲಿಗರೂ ಕಿಂದರಿಜೋಗಿಗಳೂ ಒಂದು ಬಗೆಯ ಚಂಪೂ ರೂಪದಲ್ಲಿ ಕಥೆ ಹೇಳುತ್ತ ಪ್ರಾಚೀನ ಜನಪದ ಕಥೆಗಳನ್ನು ಕಾದಿಟ್ಟುಕೊಂಡ ಬಂದಿದ್ದಾರೆ.

ಪಂಡಿತ ಕವಲಿ, ಸಿಸು ಸಂಗಮೇಶ, ಮೇವುಂಡಿ ಮಲ್ಲಾರಿ ಇತ್ಯಾದಿ ಅನೇಕರು ಶಿಶು ಸಾಹಿತ್ಯ ಕಥೆಗಳನ್ನು ಬರೆದು ಪ್ರಕಟಿಸಿದಾರೆ. ಉಷಾ ಮಿರ್ಜಿಯವರ ಹಾಗೂ ವಾಡೇದ ಅವರ ಜನಪದ ಕಥೆಗಳು ಪ್ರಕಟವಾಗಿವೆ.

ಬೆಟಗೇರಿ ಕೃಷ್ಣಶರ್ಮರು ಉಲ್ಲೇಖಿಸಿದ ಹೇನೆಯ ಕಥೆ. ಸಿಂಪಿ ಲಿಂಗಣ್ಣನವರ ಹಿಟ್ಟಿನ ಗೊಂಬೆಯ ಕಥೆ, ಚೋಟಪ್ಪನ ಕಥೆ, ಮಿರ್ಜಿ ಅಣ್ಣಾರಾಯರು ಹೇಳಿದ ಒಂಟೆ ಮೇಲಿನ ಶಹಣ್ಯಾನ ಕಥೆ, ನೆಲಗಡಲೆ ಕಾಲಿನ ಕಥೆ. ಗದ್ದಗೀಮಠರು ತಿಳಿಸಿದ ಕರಿಗಡುಬಿನ ಕಥೆ-ಇವು ಉತ್ತರ ಕರ್ನಾಟಕದ ಕಥಾಸಂಪತ್ತಿನ ಮುನ್ಸೂಚನೆ ಕೊಡುತ್ತವೆ.

ಹೆಗಡೆಯವರ ಸಂಗ್ರಹದಲ್ಲಿನ ಬಣಜಿಗರ ಹೆಣ್ಣಿನ ಕಥೆ, ಬಾಂಬಿ ರಾಕ್ಷಸಿ, ಆನೆ ಹೊಡೆದ ಮಹಾರಾಜನ ಕಥೆ, ಬೆಳ್ಳಿಕಟ್ಟೆ ಚಿನ್ನದ ಗಿಡದ ಕಥೆ, ರುದ್ರಶೇಖರ ಮಹಾರಾಜನ ಕಥೆ ಮುಂತಾದುವು ಉತ್ತರ ಕರ್ನಾಟಕದ ಕಥೆಹಳಾಗಿವೆ.

ಒಗಟುಗಳು : ಶಂ. ಬಾ. ಜೋಶಿಯವರ ಒಡಪುಗಳು ಪ್ರಕಟವಾಗಿವೆ (೧೯೪೬). ಗದ್ದೀಮಠರು ಹೇಳಿರುವ ಕೆಲವು ಒಗಟುಗಳು ಕೃಷ್ಣರುಕ್ಮಿಣಿಯರು ಒಗಟುಗಳನ್ನು ಹೋಲುತ್ತವೆ. ಬೆಟೆಗೇರಿಯವರು ಅನೇಕ ಸ್ವಾರಸ್ಯ ಒಗಟುಗಳನ್ನು ಹೇಳಿದ್ದಾರೆ. [ನೆಲ್ಲನೊಳಿಗಿನ ಮರಿ (ಚುರುಮರಿ), ರಾಟೆಯ ಕುರಿತಾದ ಅಡ್ರಂಗಿ ಜುಡ್ರಂಗಿ ಒಗಟು ಇತ್ಯಾದಿ]. ಈಶ್ವರಚಂದ್ರ ಚಿಂತಾಮಣಿಯವರ "ಗರತಿಯರ ಮನೆಯಿಂದ" ಸಂಕಲನದಲ್ಲಿ ಒಳ್ಲೆಯ ಒಗಟುಗಳಿವೆ.

ಗಾದೆಗಳು : ಕಿಟ್ಟೆಲರ ಅರ್ಥಕೋಶದಲ್ಲಿ ಇಲ್ಲಿನ ಅನೇಕ ಗಾದೆಗಳಿವೆ. ಬೈಲುಸೀಮೆಯ ಗಾದೇಗಳನ್ನೇ ಪ್ರತ್ಯೇಕವಾಗಿ ಸಂಗ್ರಹಿಸಿ ಪ್ರಕಟಿಸುವ ಅಗತ್ಯ ಇನ್ನೂ ಇದೆ.

ಜಾನಪದ ರಂಗಭೂಮಿ : ದೊಡ್ಡಾಟ್, ಸಣ್ಣಾಟ, ಕಿಳ್ಳಿಕ್ಯಾತರ ಆಟ, ಮೂಡಲ ಪಾಯ-ಇತ್ಯಾದಿ ಅನೇಕ ವೈವಿಧ್ಯದ ಆಟಗಳಿವೆ. ಸಂಗ್ಯಾ-ಬಾಳ್ಯ ಒಂದು ಜನಪ್ರಿಯ ನಾಟಕ.

ಉತ್ತರ ಕರ್ನಾಟಕ ಜಾನಪದ ಪ್ರಭಾವ ದಕ್ಷಿಣ ಕರ್ನಾಟಕದ ಕರಪಾಲದವರು, ಚೌಟಿಗೆ(ಚೌಡಿಕೆ)ಯವರು, ಗೊರವರು ಹಾಗೂ ಇತರರ ಮೇಲೆ ಗಾಢವಾಗಿದೆ. ದಕ್ಷಿಣದ ಲಾವಣಿಗಳು ಉತ್ತರ ಕನ್ನಡದಲ್ಲಿಯೂ ಪ್ರಚಾರದಲ್ಲಿದೆ.

ಉತ್ತರ ಕನ್ನಡ ಜಿಲ್ಲೇ : ಉತ್ತರ ಕನ್ನಡ ಜಿಲ್ಲೆಯ ಇಲ್ಲಿನ ಸಾಹಿತ್ಯಸಂಗ್ರಹ ವಿಠೋಬ ವೆಂಕನಾಯಕ ತೊರ್ಕೆಯವರಿಂದ ೧೯೩೩ರಲ್ಲಿಯೇ ಪ್ರಾರಂಭವಾದರೂ ಇನ್ನೂ ಬಹುಪಾಲು ಜಾನಪದದ ಸಂಗ್ರಹವಾಗಿಲ್ಲ. ತೊರ್ಕೆಯವರ "ಹಳ್ಳಿಯ ಹಾಡುಗಳು" ಹೆಣ್ಣುಮಕ್ಕಳು ಬತ್ತ ಕುಟ್ಟುವಾಗ ಹಾಗೂ ಬಾಲರನ್ನಾಡಿಸುವಾಗ ಹಾಡುವ ಸುಂದರ ತ್ರಿಪದಿಗಳ ಸಂಗ್ರಹ. ಮ. ಗ. ಶೆಟ್ಟಿಯವರ ಒಕ್ಕಲಿಗರ ಹಾಡು (೧೯೩೮) ಬೆಳಂಬಾರ ಭಾಗದ ಸುಗ್ಗಿ ಕುಣಿತದ ಪದಗಳನ್ನು ಒಳಗೊಂಡಿದೆ. ಅವರು ಉತ್ತರ ಕನ್ನಡದ ದೇಸಿ ಶಬ್ದಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಿ ಜೀವನ ಪತ್ರಿಕೆಯಲ್ಲಿ ಹಿಂದೆ ಪ್ರಕಟಿಸಿದ್ದರು. ಆತ್ಮಾರಾಮ, ವೆಂಕಟರಮಣ ಕೆರೇಕೈ, ಭಾಗೀರಥಿಬಾಯಿ ಬಳಗುಂಡಿ, ಬಾಳೆಗದ್ದೆ ಶಿವರಾಮ ಹೆಗಡೆ, ಸಾವಿತ್ರೀಬಾಯಿ, ಸುಬ್ರಾಯ ಜೋಶಿ ಮೂಲೆಮನೆ, ಜಾಗನಳ್ಲೀ ಗಣಪತಿ ಹೆಗಡೆ, ಸುಬ್ರಾಯ ಹೆಗಡೆ ಗಂಗಾಜಿ, ರಾಮಚಂದ್ರ ಭಟ್ಟ ಕಡತೋಕಾ ಇತ್ಯಾದಿ ಜನ ಹಾಡುಗಳನ್ನು ರಚಿಸಿಯೋ ಶೇಖರಿಸಿಯೋ ಜಾನಪದದ ಪೋಷಣೆ ಮಾಡಿದ್ದಾರೆ.

ಕುಮಟೆಯ ಜಿ.ಆರ್.ಹೆಗಡೆಯವರು ದೊಡ್ಡ ಪ್ರಮಾಣದಲ್ಲಿ ಜಾನಪದ ಸಂಕಲನ ಮಾಡಿದ್ದಾರೆ. ಗ್ರಾಮಜೀವನ ಮತ್ತು ಇತರ ಪತ್ರಿಕೆಗಳಲ್ಲಿ ಹಲವು ಹಾಡುಗಳನ್ನು ಮತ್ತು ವಿಮರ್ಶೆ ಲೇಖನಗಳನ್ನು ಪ್ರಕಟಿಸಿದ್ದಾರೆ. ಎಲ್.ಆರ್.ಹೆಗಡೆಯವರು ಸಂಗ್ರಹಿಸಿದ ಹಾಡುಗಳಲ್ಲಿ ತಿಮ್ಮಕ್ಕನ ಪದಗಳು ಎಂಬ ಸಂಕಲನ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದೆ. ನೂರಾರು ಕಥನಕವನಗಳೂ ಬಿಡಿಹಾಡುಗಳೂ ಜನಪದ ಕಥೆಗಳೂ ಇವರ ಸಂಗ್ರಹದಲ್ಲುಂಟು.

ಗೋಕರ್ಣದ ಕೆ.ಜಿ.ಶಾಸ್ತ್ರಿಯವರು, ಗೌರೀಶ ಕಾಯ್ಕಿಣಿಯವರು ಹಾಡು-ಕಥೆಗಳನ್ನು ಸಂಗ್ರಹಿಸಿದ್ದಾರೆ. ಹೊನ್ನಾವರದ ಎನ್.ಆರ್.ನಾಯ್ಕ ದಂಪತಿಗಳು ದೊಡ್ಡ ಪ್ರಮಾಣದಲ್ಲಿ ತ್ರಿಪದಿಗಳನ್ನು, ಇತರ ಜಾನಪದ ಸಾಹಿತ್ಯವನ್ನು ಸಂಗ್ರಹಿಸುತ್ತಿದ್ದಾರೆ. ಅಂಕೋಲ ತಾಲ್ಲೂಕಿನ ಕೆಲವು ಪ್ರಾಧ್ಯಾಪಕರೂ ವಿದ್ಯಾರ್ಥಿಹಳೂ ಸಾಮೂಹಿಕವಾಗಿ ಜಾನಪದ ಸಂಗ್ರಹದ ಪ್ರಯೋಹವನ್ನು ಮಾಡಿದ್ದಾರೆ. ಆರ್.ಎಸ್.ಪಂಚಮುಖಿಯವರ "ಕರ್ನಾಟಕ ಜಾನಪದ ಗೀತಗಳು" ಗ್ರಂಥದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಾಡುಗಳೇ ಆಧಿಕವಾಗಿವೆ. ಗೋಕರ್ಣದ ಸಣ್ಣಭಡತಿ ಗಣಪಕ್ಕೆ, ಪನ್ನಿ ಲಕ್ಷೀಬಾಯಿ, ಭಟಕಳದ ಶಾಂತೀಬಾಯಿ ಮುಂತಾದ ಕಳೆದ ಶತಮಾನದ ಹೆಂಗಳೆಯರ ಸಾಹಿತ್ಯವನ್ನು ಸರೋಜಿನಿ ಮಹಿಷಿಯವರು ಕಲೆಹಾಕಿದ್ದಾರೆ. ಮತಿಘಟ್ಟ ಕೃಷ್ಣಮೂರ್ತಿಯವರ "ನಾಡಪದಗಳು" ಗ್ರಂಥದಲ್ಲಿಯೂ ಈ ಜಿಲ್ಲೆಯ ಕೆಲವಿ ಹಾಡುಗಳಿವೆ.

ಇಲ್ಲಿನ ಜಾನಪದದಲ್ಲಿನ ಹವ್ಯಕರ ಹಾಡುಗಳು ಹೆಚ್ಚಾಗಿ ಹೆಂಗಸರು ಹೇಳುವಂಥವು. ಇವು ಮದುವೆ, ಮುಓಜಿ, ಹಬ್ಬಹರಿದಿನಗಳು, ಹಾಗೂ ಶಿಶು ಸಂಗೋಪನೆ ಮುಂತಾದ