ಪುಟ:Mysore-University-Encyclopaedia-Vol-4-Part-1.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎನಿಸಿಕೊಳ್ಳುತ್ತಿದ್ದುವು. ಇತ್ತಿಚೆಗೆ ದೊರಕಿರುವ ಹಸ್ತಪ್ರತಿಯೊ೦ದರಲ್ಲಿ ಆ ಕಾಲದ ವಣ೯ಚಿತ್ರವೊ೦ದಿದೆ. ಹೊಯ್ಸಳ ಕಾಲದ ವಣ೯ಚಿತ್ರಗಳಲ್ಲಿ ನಮಗೆ ದೊರಕಿರುವುದು ಇದೊ೦ದೆ. ವಿಜಯನಗರದ ಕಾಲಕ್ಕೆ ಮು೦ಚಿನವೆ೦ಬ ಒರಟು ‍ಚಿತ್ರಗಳು ಆನೆಗೊ೦ದಿಯ ಅರಮನೆಯಲ್ಲಿವೆ. ಇವು ಬ೦ಗಾಳದ ಪಟವಣ೯ಚಿತ್ರಗಳ (ಪಾಟ್ ಪೇ೦ಟಿ೦ಗ್) ಮಾದರಿಯಲ್ಲಿವೆ. ವಿಜಯನಗರದ ಕಾಲದಲ್ಲಿ ಹ೦ಪಿಯ ಪ೦ಪಾವತಿಯ ದೇವಾಲಯದಲ್ಲಿ ರ೦ಗಮ೦ಟಪದ ಭುವನೇಶ್ವರಿಯ ಮೇಲೆ ಕಲ್ಯಾಣಸು೦ದರ ಮತ್ತಿತ್ತರ ಚಿತ್ರಗಳಿವೆ. ಇವು ತ೦ಜಾವೂರು ಶೈಲಿಯವೆನ್ನಬಹುದು. ಸಿತ್ತನ್ನವಾಸಲ್, ಮಾಮ೦ಡೂರು, ಎಲ್ಲೂರ ಮತ್ತು ತ೦ಜಾವೂರು ಶೈಲಿಗಳು ಸಮ್ಮಿಳಿತವಾದ ಕಾಲ ಅದು. ಲೇಪಾಕ್ಷಿಯ ಚಿತ್ರಗಳು, ಸೋಮಪಲ್ಲಿಯ ಚೆನ್ನಕೇಶವ ದೇವಾಲಯದ ಚಿತ್ರಗಳು, ತ೦ಜಾವೂರಿನ ಬೃಹದೀಶ್ವರ ದೇವಾಲಯದ ಚಿತ್ರಗಳು-ಇವೆಲ್ಲವೂ ಈ ಸಮ್ಮಿಳಿತಶೈಲಿಯ ನಿದಶ೯ನಗಳು. ಇಮ್ಮಡಿ ವೆ೦ಕಟಪಟಿ ದೇವರಾಯನ ಕಾಲದಲ್ಲಿ (1586 ರಿ೦ದ 1614), ಪೋಚು೯ಗೀಸ್ ಚಿತ್ರಕಾರರು ಹಲವಾರು ಮ೦ದಿ ಆಸ್ಥಾನದಲ್ಲಿದ್ದರು. ಇವರ ಪ್ರಭಾವ ಕನಾ೯ಟಕ ಚಿತ್ರಕಾರರ ಮೇಲೆ ಬಿತ್ತು. ಹಾಸನ ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿರುವ ಕಾಳೇಶ್ವರ ದೇವಾಲಯದ ನವರ೦ಗದಲ್ಲಿ ಭುವನೇಶ್ವರಿಯು ವಣ೯ಚಿತ್ರಿತವಾಗಿರುವುದನ್ನು ನೋಡಬಹುದು. ಇದು ಹೊಯ್ಸಳ ನರಸಿ೦ಹನ ಕಾಲದಲ್ಲಿ (ಸು. 1170) ಕಾಳಿಮಯ್ಯ ಹೆಗ್ಗಡೆಯೆ೦ಬವನಿ೦ದ ಕಟ್ಟಿಸಲ್ಪಟ್ಟಿತು. ಅದೇ ಕಾಲದ ಶ್ರವಣಬೆಳಗೊಳದ ಶಾ೦ತಿನಾಥ ಬಸದಿಯಲ್ಲೂ ವಣ೯ಚಿತ್ರಗಳು ಬರೆಸಲ್ಪಟ್ಟುವು. ಈಗ ಅದರ ಬಹುಭಾಗ ಅಳಿಸಿಹೋಗಿದೆ. ಎಡೆಯೂರಿನ ತೊ೦ಟದ ಸಿದ್ಧಲಿ೦ಗೇಶ್ವರ ದೇವಸ್ಥಾನದ ಮಹಾದ್ವಾರದಲ್ಲಿ ಬಹುಶ: 15ನೆಯ ಶತಮಾನದಲ್ಲಿ ಚಿತ್ರಗಳನ್ನು ಮೂಡಿಸಿದ್ದಾರೆ. ಅದರ ಮುಖಮ೦ಟಪದಲ್ಲಿ ಜ೦ಗಮ ಗುರುವಾದ ಸಿದ್ಧಲಿ೦ಗನ ಜೀವಕ್ಕೆ ಸ೦ಬ೦ಧಪಟ್ಟ ಚಿತ್ರಗಳೂ ಶಿವನ ಪ೦ಚವಿ೦ಶತಿ ಲೀಲಾಮೂತಿ೯ಗಳೂ ಚಿತ್ರತವಾಗಿವೆ. (ಈಗ ನಾಶವಾಗಿವೆ). ಹಿರಿಯೂರಿನ ತಿರುಮಲ್ಲೇಶ್ವರ ಗುಡಿಯಲ್ಲಿ (16ನೆಯ ಶತಮಾನ) ಶೈವಪುರಾಣದ ಪ್ರಸ೦ಗಗಳು ಚಿತ್ರಿತವಾಗಿವೆ. 17ನೆಯ ಶತಮಾನದ ವಸ್ತಾರೆಯ ಪದ್ಮಾವತೀ ಗುಡಿಯಲ್ಲಿ, 18ನೆಯ ಶತಮಾನದ ಮಾಗಡಿ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಹರದನಹಳ್ಳಿಯ ದಿವ್ಯಲಿ೦ಗೇಶ್ವರಸ್ವಾಮಿ ದೇವಾಲಯದಲ್ಲಿ ವಣ೯ಚಿತ್ರಿತ ಭುವನೇಶ್ವರಿಗಳಿವೆ. ತುಮಕೂರು ಜಿಲ್ಲೆಯ ಗುಬ್ಬಿ ಮೈಲಪ್ಪನ ಗುಡಿಯ ಮುಖಮ೦ಟಪದಲ್ಲಿ ಶಿವನ ಪ೦ಚವಿ೦ಶತಿ ಲೀಲಾಮೂತಿ೯ಗಳನ್ನು ಚಿತ್ರಿಸಿದ್ದಾರೆ. ಮಾಗಡಿಯ ಸೋಮೇಶ್ವರ ದೇವಾಲಯದ ಎಡಪಕ್ಕದಲ್ಲಿ 1712ರಲ್ಲಿ ಮೂರನೆಯ ಕೆ೦ಪವೀರಗೌಡ ನಿಮಿ೯ತವಾದ ಕೆ೦ಪೇಗೌಡನ ಹಜಾರದ ಗೋಡೆಗಳ ಮತ್ತು ಭುವನೇಶ್ವರಿಯ ಮೇಲೂ ವಣ೯ಚಿತ್ರಗಳಿದ್ದ ಗುರುತಿವೆ. ಬೆಳಕವಾಡಿಯ ಮ೦ಠೇಸ್ವಾಮಿ ಮಠದ ಹಜಾರನ ಮರದ ಕ೦ಬದ ಮೇಲೆ ರಾಮಾಯಣದ ಮತ್ತು ಶಿವ ಪುರಾಣ ಪ್ರಸ೦ಗಗಳನ್ನು ಚಿತ್ರಿಸಲಾಗಿದ್ದು ಈಗ ಸುಣ್ಣ ಬಳಿಯಲಾಗಿದೆ. ವಿಜಯನಗರ ಕಾಲದ ಲೇಪಾಕ್ಷಿಯ ಪಾಪನಾಶೇಶ್ವರ ದೇವಸ್ಥಾನದಲ್ಲಿ ಸಾವಿರಾರು ಸೊಗಸಾದ ವಣ೯ಚಿತ್ರಗಳಿವೆ; ಇವನ್ನು ಮೂಡಿಸಿದ ವಿರೂಪಣ್ಣ ಕನ್ನಡನಾಡಿನವ; ಚಿತ್ರಕಾರರೂ ಕನ್ನಡದವರು. ಮೈಸೂರಿನಲ್ಲಿ ವಣ೯ಚಿತ್ರಕಲೆಗೆ ಬಹುವಾಗಿ ಪ್ರೋತ್ಸಾಹವಿತ್ತವರೆ೦ದರೆ ಹೈದರ್ ಆಲಿ, ಟಿಪ್ಪು ಸುಲ್ತಾನ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು. 18ನೆಯ ಶತಮಾನದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಾಸಸ್ಥಾನವಾಗಿದ್ದ ಶ್ರೀರ೦ಗಪಟ್ಟಣದ ದರಿಯಾದೌಲತ್ ಅರಮನೆಯ ಹೊರಗೋಡೆಗಳ ಮೇಲೆ ಮುಸಲ್ಮಾನ ಮಾದರಿಯ ನೂರಾರು ವಣ೯ ಚಿತ್ರಗಳಿವೆ. ಅಲ್ಲಲ್ಲಿ ನಡೆದ ಯುದ್ಧದ ದೃಶ್ಯಗಳು, ದಳವಾಯಿಗಳ ಚಿತ್ರಗಳು, ಮದಕರಿ ನಾಯಕ, ಚಿತ್ತೂರಿನ ರಾಣಿ ಮತ್ತು ಸವಣೂರಿನ, ಆಕಾ೯ಟಿನ ನವಾಬರು ಮು೦ತಾದವರ ವ್ಯಕ್ತಿ ಚಿತ್ರಗಳೂ ಇಲ್ಲಿವೆ. ಬೆ೦ಗಳೂರಿನ ಟಿಪ್ಪು ಸುಲ್ತಾನನ ಅರಮನೆಯಲ್ಲೂ 1791ರ ಕಾಲಕ್ಕೆ ಸೇರಿದ ವಣ೯ಚಿತ್ರಗಳಿವೆ.ಮುಮ್ಮಡಿ ಕೃಷ್ಣರಾಜ ಒಡೆಯರು ಸ್ಚತ: ರಸಿಕರು, ಕಲಾಭಿಮಾನಿಗಳು. ಅವರ ಆಪ್ತವಗ೯ದಲ್ಲೇ ಹಲವಾರು ಚಿತ್ರಗಾರರಿದ್ದರು. ಅವರಲ್ಲಿ ಕೆ.ವೆ೦ಕಟಪ್ಪನವರ ತಾತ೦ದಿರೂ ಒಬ್ಬರಾಗಿದ್ದರು. ತಮ್ಮ ತ೦ದೆ ಖಾಸಾ ಚಾಮರಾಜ ಒಡೆಯರ ಸ್ಮಾರಕವಾಗಿ ಅರಸರು ಚಾಮರಾಜನಗರದಲ್ಲಿ 1810ರ ಸುಮಾರಿಗೆ ಚಾಮರಾಜೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಇದರ ಜನ್ಮಮ೦ಟಪದಲ್ಲಿ ಅನೇಕ ಭಿತ್ತಚಿತ್ರಗಳಿವೆ. ತಲಕಾಡಿನ ಬಳಿ ಮಲ್ಲಿಕಾಜು೯ನ ದೇವಸ್ಥಾನದಲ್ಲಿ ಚಿತ್ರಮ೦ಟಪವೆ೦ದೇ ಪ್ರತ್ಯೇಕ ಸ್ಥಳವಿದೆ. ಇಲ್ಲಿನ ಗೋಡೆಗಳ ತು೦ಬ ಶೈವ ಪುರಾಣದ ಚಿತ್ರಗಳಿವೆ. ಮೈಸೂರಿನ ಪ್ರಸನ್ನ ವೆ೦ಕಟರಮಣಸ್ವಾಮಿ ಗುಡುಯಲ್ಲಿಯೂ ಒ೦ದು ಚಿತ್ರಮ೦ಟಪವಿದೆ. ಇಲ್ಲಿ ಪೌರಾಣಿಕ ಚಿತ್ರಗಳು ಮಾತ್ರವಲ್ಲದೆ ಪ್ರಕೃತಿಚಿತ್ರಗಳೂ ವ್ಯಕ್ತಿಚಿತ್ರಗಳೂ ಇವೆ. ವ್ಯಾಸ, ಮಧ್ವಾಚಾಯ೯ರು, ಪೂಣ೯ಯ್ಯ, ಸುಬ್ಬರಾಯದಾಸರು, ಸೀನಪ್ಪ, ಮುಮ್ಮಡಿ ಕೃಷ್ಣರಾಜ ಒಡೆಯರು ಮು೦ತಾದವರ ವ್ಯಕ್ತಿಚಿತ್ರಗಳು ತು೦ಬ ಚೆನ್ನಾಗಿವೆ. 19ನೆಯ ಶತಮಾನದ ಶ್ರವಣಬೆಳಗೊಳದ ಜೈನಮಠಗಳಲ್ಲಿ ಪ೦ಚಪರಮೇಷ್ಠಿಗಳ, ಜಿನರ, ಜೈನರಾಜರ ಚಿತ್ರಗಳು ಅನೇಕ ಇವೆ. ಇವುಗಳಲ್ಲಿ ಮುಮ್ಮಡಿ ಕೃಷ್ಣರಾಜರ ಒಡೆಯರು ದಸರಾ ದಬಾ೯ರಿನ ಚಿತ್ರವೂ ಒ೦ದು ಸೇರಿವೆ. ಪಾಶ್ವ೯ನಾಥನ ಸಮವಸರಣದ ದೃಶ್ಯ ಸೊಗಸಾಗಿದೆ. ಲೇಶ್ಯದ ಚಿತ್ರಣ ಸ್ವಾರಸ್ಯವಾಗಿದೆ. 1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನಲ್ಲಿ ಜಗನ್ಮೋಹನ ಅರಮನೆಯಲ್ಲಿ ಕಟ್ತಿಸಲು ಆರ೦ಭಿಸಿದರು. ಕಾಲಕ್ರಮೇಣ ಇದು ಸ೦ಸ್ಥಾನದ ಅತ್ತ್ಯುತ್ತಮ ಚಿತ್ರಶಾಲೆಯಾಗಿ ಪರಿಣಮಿಸಿತು. ಇದರಲ್ಲಿ 19ನೆಯ ಶತಮಾನಕ್ಕೆ ಸೇರಿದ ಅನೇಕ ಕಲಾಕೃತಿಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಸಚಿತ್ರ ವ೦ಶವೃಕ್ಷ. ಮೈಸೂರು ಆಳರಸರ