ಪುಟ:Mysore-University-Encyclopaedia-Vol-4-Part-1.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಕರ್ನಾಟಕ ಚಿತ್ರಕಲೆ"

ವಂಶಾವಳಿಯನ್ನು ಚಿತ್ರಿಸುವ ಸಂತಾನಾಂಬುಜ, ವಿಜಯದಶಮಿಯಂದು ನಡೆದ ಮಮ್ಮಡಿ ಕೃಷ್ಣರಾಜ ಒಡೆಯಾರ್ ಜಂಬೂ ಸವಾರಿ ( ಇದರಲ್ಲಿ ರಾಜರು ಆರು ಆನೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದಾರೆ), ಇವುಗಳಲ್ಲದೆ ಕಿತ್ತೂರು, ಗೊತ್ತಗಾಲ, ಚಟ್ಟನಹಳ್ಳಿಗಲ್ಲಿ ನಡೆದ ಹುಲಿಶಿಕಾರಿ, ಚಾಮರಾಜನಗರದ ಕಾಡಿನಲ್ಲಿ ಪಟ್ಟದಾನೆಯಾದ ಕೆಂಪನಂಜಯ್ಯನನ್ನು ಹಿಡಿದ ದೃಶ್ಯ, ಕೃಷ್ಣರಾಜ ಒಡೆಯಾರ್ ಚದುರಂಗದಾಟವನ್ನು ಆಡುತ್ತಿರುವ ದೃಶ್ಯಗಳು, ವಸಂತೋತ್ಸವದ ದೃಶ್ಯ, ದೇವೀಸಾಯುಜ್ಯ, ಶ್ರೀಕಂಠಸಾಯುಜ್ಯ ಎಂಬ ಆಟಗಳು ಸೊಗಸಾದ ಬಣ್ಣಗಳಲ್ಲಿ ಚಿತ್ರಿತವಾಗಿವೆ. ಅಲ್ಲದೆ, ರಣಜಿತ್ ಸಿಂಗ್, ಕೊಡಗಿನ ವೀರರಾಜೇಅರಸು,ಪೇಷ್ವೇಗಳು, ನಾನಾ ಫಡ್ನವೀಸ್, ಕೇರಳ ಮತ್ತು ತಿರುವಾಂಕೂರಿನ ರಾಜರು, ಅರಮನೆ ಅಧಿಕಾರಿಗಳು, ಪರಕಾಲ ಮಠದ ಸ್ವಾಮಿಗಳು, ಮಹಾರಾಜರ ಭಂದುಗಳು ಹೀಗೆ ನೂರಾರು ವ್ಯಕ್ತಿ ಚಿತ್ರಗಳಿವೆ.

ನಾಲ್ವಡಿ ಕೃಷ್ಣರಾಜ ಒಡೆಯರೂ ಚಿತ್ರಕಲೆಯ ಪಕ್ಷಪಾತಿಗಳು. ಅವರ ಆಸ್ಥಾನದಲ್ಲಿ ಕೆ. ವೆಂಕಟಪ್ಪ, ಕೇಶವಯ್ಯ ಮುಂತಾದ ನಿಪುಣ ಕಲೆಗಾರರಿದ್ದರು. ಈಚೆಗೆ ನಾಡಿನ ಲಲಿತಕಲಾ ಅಕೆಡಮಿಯವರಿಂದ ಪುರಸ್ಕೃತರಾದ ಕೆ.ವೆಂಕಟಪ್ಪ ಅವರು ಕಲ್ಕತ್ತೆಯ ಕಲಾಶಾಲೆಯಲ್ಲಿ ಪರ್ಸಿಬ್ರೌನ್ ಮತ್ತು ಅವನೀಂದ್ರನಾಥ ಠಾಕೂರರ ಬಳಿ ಏಳು ವರ್ಷಗಳು ಅಭ್ಯಾಸ ಮಾಡಿದ ನಂತರ ಆಸ್ಥಾನ ಕಲಾವಿದರಾಗಿದ್ದುಕೊಂಡು ನೂರಾರು ಅತ್ಯುತ್ತಮ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಇವುಗಳಲ್ಲಿ ನೀಲಗಿರಿಯ ದೃಶ್ಯಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆಯೆಂದು ತಗ್ನರ ಮತ. ಇವರು ದಂತದ ಮೇಲೆ ತಮ್ಮ ಗುರು ಅವನೀಂದ್ರನಾಥರ ಮತ್ತು ತಮ್ಮ ಆಶ್ರಯದಾತ ಕೃಷ್ಣರಾಜೆ ಒಡೆಯರ್ ಪ್ರತಿ ಕೃತಿಗಳನ್ನು ನೈಜವಾದ ವರ್ಣಗಳಲ್ಲಿ ಚಿತ್ರಿಸಿದ್ದಾರೆ. ಮೊಗಲರ ಕಾಲಕ್ಕೇ ಅಸ್ತಂಗತವಾಗಿದ್ದ ಈ ಕ್ಲಿಷ್ಟ ಕಲೆಯನ್ನು ವೆಂಕಟಪ್ಪನವರು ಪುನರುಜ್ಜೀವನಗೊಳಿಸಿದ್ದಾರೆ. ಇವರು ವರ್ಣಚಿತ್ರ್ಕಾರರಲ್ಲದೇ ಉತ್ತಮ ಶಿಲ್ಪಿಯೂ, ನಿಪುಣ ವೈಣಿಕರೂ ಆಗಿದ್ದರು.

ಈಚಿನವರಲ್ಲಿ ವೆಂಕಟಪ್ಪನವರದಲ್ಲದೇ ಮೈಸೂರು ವೀರಪ್ಪ ಮತ್ತು ಸುಬ್ಬುಕೃಷ್ಣ, ಬೆಳಗಾಂವಿಯ ಕೆ. ಎಸ್. ಕುಲಕರ್ಣಿ, ಗೋವದ ಲಕ್ಷ್ಮಣ ಪೈ, ದಕ್ಷಿಣ ಕನ್ನ್ಡ ಜಿಲ್ಲೆಯ ಕೆ.ಕೆ.ಹೆಬ್ಬಾರ್, ಹುಬ್ಬಳ್ಳಿಯ ಆರ್.ಎಸ್. ಮಿಣಜಿಗಿ, ಕಮಡೋಳಿ ಮುಂತಾದ ಚಿತ್ರಕಾರರೂ ಕರ್ಣಾಟಕಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

ಕರ್ಣಾಟಕ ಶಲಿಯ ಚಿತ್ರಕಲೆಯ ಉಗಮ ಅಜಂತ ಗುಹಾಂತರ್ದೇವಾಲಯಗಳಲ್ಲಿ ಎಂಬುದು ನಿರ್ವಿವಾದ. ಪ್ರ.ಶ.ಪೂ. ೧ ನೆಯ ಶತಮಾನದಲ್ಲಿ ಅಜಂತದ ಗುಹೆಗಳಲ್ಲಿ ಭೋದಿಸತ್ವಯಾನಕ್ಕೆ ಸೇರಿದ ಭೌದ್ಧಬಿಕ್ಶುಗಳು ವಾಸಿಸುತ್ತಿತ್ತು. ತಮ್ಮ ಯೋಗಾಭ್ಯಾಸ ಧ್ಯಾನ ಕ್ರಿಯಗಳಿಗೆ ಸಹಕಾರಿಯಾಗಿ ಭಿತ್ತಿಚಿತ್ರಗಳನ್ನು ಮೂಡಿಸಿದರು. ಈ ಭಿತ್ತಿಚಿತ್ರಗಳಲ್ಲಿ ಸಾಂಕೇತಿಕ ಅರ್ಥವೇ ಹೆಚ್ಚು ಆ ವೇಳೆಗಾಗಲೇ ಅಭಿಜಾತ ಚಿತಶೈಲಿ ಬಳಕೆಯಲ್ಲಿದ್ದು ಪ್ರೌಡದಶೆಯನ್ನು ಮುಟ್ಟಿತೆಂದು ತಿಳಿದುಬರುತ್ತದೆ. ವರ್ಣಗಳ ನಿರ್ಮಾಣ , ಮೆರುಗು ಕೊಡುವ ಪದ್ಧತಿ, ಸ್ಥೂಳರೇಖೆಗಳನ್ನು ರೂಪಿಸಿ ಒಳಭಾಗಗಳನ್ನು ಸ್ಪಷ್ಟವಾಗಿ ವಿವಿಕ್ತವಾಗಿ ಬಣ್ಣಗಳಿಂದ ತುಂಬಿಸುವ ಸಂವಿಧಾನ ಇವಿ ಇಲ್ಲಿ ಕಾಣುತ್ತವೆ. ರೇಖಾಚಿಯ್ತ್ರದ ಹಿರಿಮೆತಯನ್ನೂ ಲತಾವಿನ್ಯಾಸದ ಭಂಗಿಗಳನ್ನೂ ಆ ಭಿಕ್ಷುಕಲಾವಿದರು ಚೆನ್ನಾಗಿ ಅರಿತಿದ್ದರು.

ಇವು ಕನ್ನಡ ಕಲಾವಿದರ ಕೈಚಳಕವೆಂಬುದನ್ನು ಸೂಚಿಸಲು ಅಜಂತ ೧ನೆಯ ಗುಹೆಯಲ್ಲಿ ಗೋಡೆಯ ಮೇಲೆ ಬಿಡಿಸಿರುವ ೨ನೆಯ ಪುಲಕೇಶಿಯ ಒಡ್ಡೋಲಗದ ಚಿತ್ರಣ ನೆರವಗುತ್ತದೆ. ಬಾದಾಮಿಯಲ್ಲಿ ಕಾಣುವ ಚಿತ್ರಶೈಲಿಗೂ ಇಲ್ಲಿ ಕಾಣುವ ಚಿತ್ರಶೈಲಿಗೂ ತುಂಬ ಸಾಮ್ಯವಿದೆ. ಎರಡೂ ಕಡೆಯ ಕಲಾವಿದರು ಒಂದೇ ಸಂಪ್ರದಾಯಕ್ಕೆ ಸೇರಿದವರು. ಇದು ಹೇಗೇ ಇರಲಿ , ಕರ್ನಾಟಕದ ರಾಜಪರಂಪರೆಯಲ್ಲಿ ಪ್ರಮುಖವಾದ ಚಾಳುಕ್ಯ ಅರಸರ ಉಲ್ಲೇಖವಂತೂ ನಿರ್ವಿವಾದವಾದ ನಿದರ್ಶನ. ಚಾಳುಖ್ಯ ಚಕ್ರೇಶ್ವರನೆಂದು