ಪುಟ:Mysore-University-Encyclopaedia-Vol-4-Part-1.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕದ ಮೂತಿ೯ಶಿಲ್ಪ ಶಿಲ್ಪಕರುಣರಸಭರಿತವಾಗಿಯೂ ಇವೆ.ಶ್ರವಣಬೆಳಗೊಳ (ನೋಡಿ-ಶ್ರವಣಬೆಳಗೊಳ) ಮಠದ ೨ ಅಡಿಗಳೆತ್ತರದ ಕಂಚಿನ ಜಿನಮೂರ್ತಿ ಗಂಗರಾಜ ಮಾರಸಿಂಹನ ಸೋದರಿ ಕುಂದಣ ಸೋಮಿದೇವಿಯ ನಿರ್ಮಾಣವೆಂದು ಕಾಣುತ್ತದೆ.ಗಂಗಶಿಲ್ಪದ ಪ್ರಭಾವ ಕಂಬದಹಳ್ಳಿ(ನೋಡಿ- ಕಂಬದಹಳ್ಳಿ) ಆದಿನಾಥ ಬಸದಿ,ನಂದಿಯ ಭೋಗ ನಂದೀಶ್ವರ ಮತ್ತು ನರಸಮಂಗಲದ ರಾಮೇಶ್ವರ ದೇವಾಲಯಗಳ ಶಿಲ್ಪಗಳ ಮೇಲೂ ಕಂಡುಬರುತ್ತದೆ.

ಬಾದಾಮಿ ಚಳುಕ್ಯರ ಕಾಲದಲ್ಲಿ ಕರ್ಣಾಟಕದ ಶಿಲ್ಪಸಂಪ್ರದಾಯ ತನ್ನ ವಿಶಿಷ್ಟ ಶೈಲಿಯನ್ನು ಬೆಲೆಸಿಕೊಂಡಿತು.ಬಾದಾಮಿ(ನೋಡಿ-ಬಾದಾಮಿ)ಗುಹೆಗಳಲ್ಲಿನ ಶಿಲ್ಪಗಳು ರಮಣೀಯವಾಗಿವೆ. ೧ನೆಯ ಗುಹೆಯ ೧೮ ಕೈಗಳ ನಟರಾಜ,೨"೨"ಎತ್ತರ ಅರ್ಧನಾರೀಶ್ವರ,ಹಾರುತ್ತಿರುವ ಗಂಧರ್ವರು ಮನುಶ್ಯ ತಲೆಯ ಮೇಲೆ ೫ ಹೆಡೆಗಲುಳ್ಳ ಸುರುಳಿಯಾದ ದೇಹವುಳ್ಳ ನಾಗಶಿಲ್ಪಗಳು ನಾಜೂಕಾಗಿ ಕೆತ್ತಲ್ಪಟ್ಟಿವೆ.೨ನೆಯ ಗುಹೆಯಲ್ಲಿನ ಭವ್ಯ ಭೂವರಾಹ,ರಾಕ್ಷಸನೊಬ್ಬನನ್ನು ಮೆಟ್ಟುತ್ತಿರುವ ತ್ರಿವಿಕ್ರಮ ಶಿಲ್ಪಗಳೂ ೩ನೆಯ ಗುಹೆಯಲ್ಲಿನ ೧೧ ಅಡಿಗಲೆತ್ತರದ ನರಸಿಂಹ,ಹರಿಹರ,ಆಸನಸ್ಥ ವಿಷ್ಣುಶಿಲ್ಪಗಳೂ,ನಾಲ್ಕನೆಯ ಗುಹೆಯ ಪದ್ಮಾವತಿ,ಆದಿನಾಥ ಮತ್ತು ಮಾಲವೀಯತೆಗಳಿಂದ ಆವೃತನಾದ ಗೊಮ್ಮಟಮೂರ್ತಿಗಳೂ ಸತ್ವಪೂರ್ಣ ಸುಂದರಕೃತಿಗಳು.ಚಾಳುಕ್ಯರ ಕಲಾದೇಗುಲವೆನಿಸಿದ ಐಹೊಳೆಯಲ್ಲಿ (ನೋಡಿ-ಐಹೊಳೆ)ವಿಷ್ಣು ಮತ್ತು ಶಿವನ ಅನೇಕ ಅವತಾರಗಳು ಕೆತ್ತಲ್ಪಟ್ತಿವೆ.೨ ರಿಂದ ೧೮ ಕೈಗಳಿರುವ ನಟರಾಜ ಮೂರ್ತಿಗಳೂ ಗೋವರ್ಧನಧಾರಿಕೃಷ್ಣ,ರಾಮಾಯಣ,ಭಾಗವತ,ಹರಿವಂಶಗಳ ದೃಶ್ಯಗಳೂ ಶಿವ-ಪಾರ್ವತಿಯರ ಕಲ್ಯಾಣ ಮುಂತಾದ ಶಿಲ್ಪಗಳೂ ಜೀವಂತ ಸತ್ವಪೂರ್ಣ ಕೃತಿಗಳಾಗಿವೆ.ಈ ಶಿಲ್ಪಗಳ ಚಪ್ಪಟೆಯಾದ ಮುಖ,ತುಂಬುಗಲ್ಲ,ಚೈತನ್ಯ ಭರಿತ ಮುಖಭಾವಗಳಿಂದ ಇವನ್ನು ಸಮಕಾಲೀನ ಪಲ್ಲವ ಮತ್ತು ಕೃತಿಗಳಿಂದ ಪ್ರತ್ಯೇಕಿಸಬಹುದಾಗಿದೆ.ಇವರ ಮತ್ತೊಂದು ಕಲಾಕೇಂದ್ರವಾದ ಪಟ್ಟದಕಲ್ಲಿನ (ನೋಡಿ ಪಟ್ಟದಕಲ್ಲು)ಅನೇಕ ಶಿಲ್ಪಗಳು ಸದೃಢವಾಗಿಯೂ,ಸ್ಪುಟವಾಗಿಯೂ,ನಾಜೂಕಾಗಿಯೂ ಕೆತ್ತಲ್ಪಟ್ಟಿವೆ.ಇಲ್ಲಿನ ತ್ರೈಲೋಕೇಶ್ವರ ದೇವಾಲಯದ ಕಂಬಗಳಲ್ಲಿ ಪಂಚತಂತ್ರದ ಕಥೆಗಳು ನಿರೂಪಿತವಾಗಿವೆ.ವಿರೂಪಾಕ್ಷ ದೇವಾಲಯದ ಶಿವ,ನಾಗ ಮತ್ತು ರಾಮಾಯಣ ಶಿಲ್ಪಗಳ ವಿಷಯವಾಗಿ ಬರೆಯುತ್ತ ಪರ್ಸಿ ಬ್ರೌನ್ ಕಟ್ಟಡ ಶೈಲಿಯೊಂದಿಗೆ ಮಿಳಿತವಾದ ಈ ಶಿಲ್ಪಗಳು ಅಮೋಘವೆಂದಿದ್ದಾನೆ.ಈ ರೀತಿಯಾಗಿ ಚಳುಕ್ಯರ ಮೂರ್ತಿ ಶಿಲ್ಪದಲ್ಲಿ ಪೌರಾಣಿಕ ವ್ಯಕ್ತಿಗಳ,ದೇವ ದೇವಿಯರ ವಿಗ್ರಹಗಳನ್ನೂ ಸತ್ವಪೂರ್ಣವಾಗಿ ನಿರೂಪಿಸಲಾಗಿದೆ.

ರಾಷ್ಟ್ರಕೂಟರ ಕಾಲದಲ್ಲಿ ಶಿಲ್ಪಕಲೆ ವೃದ್ದಿ ಹೊಂದಿ ಆ ಕಾಲದ ಮಹೋನ್ನತ ನಿದರ್ಶನವಾಗಿ ಎಲ್ಲೋರದ(ನೋಡಿ- ಎಲ್ಲೋರ)ಕೈಲಾಸನಾಥ ಮಂದಿರದ ಶಿಲ್ಪಗಳು ಉಳಿದು ಬಂದಿವೆ.ಈ ಶೈವ ಮಂದಿರದಲ್ಲಿ ಅರ್ಧನಾರೀಶ್ವರ,ಹರಿಹರ,ಗಂಗಾ,ಯಮುನಾ ಮತ್ತು ಶಿವ-ಪಾರ್ವತಿಯರು ಪಗಡೆಯಾಡುವ,ರಾವಣನು ಕೈಲಾಸಮೆತ್ತುವ ಶಿಲ್ಪಗಳಿವೆ.ಇವುಗಳಲ್ಲಿ ಕಡೆಯ ಶಿಲ್ಪದಲ್ಲಿ ಕೈಲಾಸವನ್ನೇ ಎತ್ತಲು ಪ್ರಯತ್ನಿಸುವ ಆವೇಶಭರಿತ ರಾವಣ,ಭಯಗ್ರಸ್ತ ಪರ್ವತವಾಸಿಗಳು,ನಿಶ್ಚಲ ಶಾಂತಿಪೂರ್ಣ ಶಿವ ಇವುಗಳ ಚಿತ್ರಣ ಅಮೋಘವಾಗಿದೆ.ಮಾಮಲ್ಲಪುರದ ಶಿಲ್ಪಗಳ ಪ್ರಭಾವ ಇಲ್ಲಿ ಎದ್ದು ಕಾಣುತ್ತದೆ.ಇದಲ್ಲದೆ ಇಲ್ಲಿರುವ ಹಿಂದೂ ಮತ್ತು ಜೈನ ಗುಹೆಗಳ ಶಿಲ್ಪಗಳೂ ಗಮನಾರ್ಹ.ಈ ಶೈಲಿಗೆ ಸೇರಿದ ಕೊನೆಯ ನಿರ್ಮಾಣವೆಂದರೆ ಬೊಂಬಾಯಿ ಬಳಿಯ ಎಲಿಫೆಂಟ(ನೋಡಿ- ಎಲಿಫೆಂಟ್) ದ್ವೀಪದ ಶಿಲ್ಪಗಳು.ಇಲ್ಲಿನ ಗುಹಾಂತರ ದೇವಾಲಯದಲ್ಲಿ ಬ್ರುಹದಾಕಾರದ ಮತ್ತು ಶಿವನ ಮೂರ್ತಿಗಳಿವೆ.ಇವುಗಳಲ್ಲಿ ಉತ್ತರ ದ್ವಾರದ ಎದುರಿರುವ ತ್ರಿಮೂರ್ತಿಶಿಲ್ಪ ಅಮೋಘವಾದುದು;ಮಧ್ಯದಲ್ಲಿ ಶಿವಮಹಾದೇವ.ಎರಾಡದಲ್ಲಿ ಅಘೋರ ಭೈರವ ಮತ್ತು ಬಲಭಾಗದಲ್ಲಿ ಶಾಂತ ಉಮೆಯ ಮುಖಗಳಿರುವ ಈ ಇವೆ ತ್ರಿಮೂರ್ತಿಶಿಲ್ಪ ಜಗತ್ತಿನ ಶ್ರೇಷ್ಟ ಕಲಾಕೃತಿಗಳಲ್ಲೊಂದು.

ಆನಂತರ ಕಾಲದಲ್ಲಿ ಕಲ್ಯಾಣದ ಚಾಳುಕ್ಯರ ಆಶ್ರಯದಲ್ಲಿ ನಿರ್ಮಿತವಾದ ಹಲವಾರು ದೇವಾಲಯಗಳಲ್ಲಿನ ವಿಗ್ರಹಗಳು ಗಮನಾರ್ಹವಾಗಿವೆ.ಬಳ್ಳಿಗಾವೆಯ ಐದು ದೇವಾಲಯಗಳಲ್ಲಿ ಕೆಲವು ಉತ್ತಮ ಶಿಲ್ಪಗಳಿವೆ ಇವು ತಳಹದಿಯೆಂದು ಪಿ.ವೆಂಕೋಬರಾಯರು ತಿಳಿಸುತ್ತಾರೆ.ಇಲ್ಲಿನ ತ್ರಿಪುರ ಸಂಹಾರ,ನಾಗಕನ್ಯೆಯರು,ನರ್ತಕಿಯರು ಮತ್ತು ಪಂಚತಂತ್ರದ ಶಿಲ್ಪಗಳೂ ಸತ್ವಪೂರ್ಣವಾಗಿವೆ.ಬಳ್ಳಾರಿ,ಧಾರವಾಡ ಮತ್ತು ಹೈದರಾಬಾದು ಕರ್ಣಾಟಕ ಜಿಲ್ಲೆಗಳ ದೇವಾಲಯಗಳ ಬಾಗಿಲುವಾಡಗಳ ಶಿಲ್ಪಗಳು ಸುಂದರವಾಗಿವೆ.ಲೊಕ್ಕುಂಡಿಯ ಕಾಶೀವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಇಟಗಿಯ(ನೋಡಿ-ಇಟಗಿ)ಮಹಾದೇವ ಮಣ್ದಿರಗಳಲ್ಲಿನ ಕತ್ತನೆ ಕೆಲಸ ಅಸಾಧಾರಣವಾಗಿವೆ. ಕುರುವತ್ತಿ ದೇವಾಲಯದ ಮದನಿಕೆ ವಿಗ್ರಹಗಳು ಮೋಹಕವಾಗಿವೆ.ಇಲ್ಲಿನ ಗೋಪುರದಲ್ಲಿನ ಕಪಿಗಳ ಗುಂಪು ಆಕರ್ಷಕವಾಗಿದೆ.ಬಳ್ಳಿಗಾವೆಯ ಗಂಡಭೇರುಂಡ ಸ್ತಂಭದ ಮೇಲಿನ ಅರ್ಧ ಮಾನವ, ಅರ್ಧ ಪಕ್ಷಿಯಾಕಾರದ ಗಂಡಭೇರುಂಡ ವಿಗ್ರಹ ನೈಜ ಸೌಂದರ್ಯದ ಪ್ರತೀಕವಾಗಿದೆ.

ಹೊಯ್ಸಳರ ಕಾಲದ ಮಂದಿರಗಳಲ್ಲಿ ಮೂರ್ತಿಶಿಲ್ಪ ಕಲೆ ಅತ್ಯಚ್ಚಶೃಂಗ ಮುಟ್ಟುತ್ತದೆ.ಇವರು ಉಪಯೋಗಿಸಿದ ನಯವಾದ ಬಳಪಕಲ್ಲಿನ ಶಿಲ್ಪಗಳು ವರ್ಣನಾತೀತವಾದುದೆಂದೂ ಬೆಂಜಮಿನ್ ರೋಲಂಡ್ ಹೇಳುತ್ತಾನೆ.೮೦ಕ್ಕೂ ಮೀರಿದ ಹೊಯ್ಸಳ ಕಾಲದ ಗುಡಿಗಳಲ್ಲಿ ಬೇಲೂರು(ನೋಡಿ-ಬೇಲೂರು),ಹಳೇಬೀಡು(ನೋಡಿ-ಹಳೇಬೀಡು),ಸೋಮನಾಥಪುರ(ನೋಡಿ-ಸೋಮನಾಥಪುರ) ಮಂದಿರಗಳ ಶಿಲ್ಪಗಳು ಹೆಚ್ಚು ಪ್ರಖ್ಯಾತವಾದುವು.ಚಿನ್ನಬೆಳ್ಳಿಯ ಕುಸುರಿ ಕೆಲಸಕ್ಕೆ ಹೋಲಿಸಲಾಗಿರುವ ಹಳೇಬೇಡಿನ ಕೆತ್ತನೆ,ಜೀವಚಿತ ಸೌಂದರ್ಯಖನಿಗಳೆನಿಸಿರುವ ಬೇಲೂರಿನ ಶಿಲಾಬಾಲಕೆಯರು,ದೇವದೇವಿಯರ, ಪ್ರಾಣಿಪಕ್ಷಿಗಳ ಹೂ ಬಳ್ಳಿಗಳ ಶಿಲ್ಪಗಳು ,ಕರ್ಣಾಟಕ ರೂವಾರಿಗಳ ದಿವ್ಯಕೌಶಲದ ಪ್ರತೀಕಗಳಾಗಿವೆ.ಹೊಯ್ಸಳ ಮಂದಿರಗಳಲ್ಲಿ ಕೆತ್ತಿರುವ ನೂರಾರು ಆನೆಗಳು ಸತ್ವಪೂರ್ಣ,ನೈಜ,ವೈವಿಧ್ಯಮಯ ಶಿಲ್ಪಗಳು.ಹೊರಗೋಡೆಗಳ ಮೇಲೆ ಕೆತ್ತಿರುವ ದೇವತಾ ಮೂರ್ತಿಗಳು ಅಧ್ಬುತವಾಗಿವೆ.ಪ್ರಾಯಶ ಹೊಯ್ಸಳ ರಾಣಿ,ನಾಟ್ಯ ಪ್ರವೀಣೆ ಶಾಂತಲೆಯ ಪ್ರಕೃತಿಗಳೆನಿಸಿರುವ,ಅಥವಾ ನಾಟ್ಯ ಮೋಹಿನಿಯ ವಿವಿಧ ಭಂಗಿಗಳಾಗಿರಬಹುದಾದ ಶಿಲಾಬಾಲಿಕೆಯರ ಪ್ರತಿಮೆಗಳು ಮಾನವ ಕೈಚಳಕದ ಅನುಪಮ ಕೃತಿಗಳು.ಪರ್ಸಿಬ್ರೌನ್ ಹೊಯ್ಸಳ ಮಂದಿರಗಳನ್ನು ವಾಸ್ತುಶಿಲ್ಪಗಳೆನ್ನುವುದಕ್ಕಿಂತ ಅನ್ವಯಿಕ ಕಲಾರೀತಿಯೆಂದು ಹೊಗಳಿದ್ದಾನೆ.ಆ ಮಂದಿರಗಳ ನವರಂಗಗಳ ಭುವನೇಶ್ವರಿ,ಕಂಬ,ಅವುಗಳ ಮೇಲಿನ ಕೆತ್ತನೆ,ಹೊರಗೋಡೆಗಳ ಮೇಲಿನ ಅಲಂಕರಣ ಇವುಗಳಿಗೆ ಹೋಲಿಕೆಗಳಿಲ್ಲ.ಈ ಕಾಲದ ಜೈನಶಿಲ್ಪಗಳೂ ಗಮನಾರ್ಹ.ಬಸ್ತಿಹಳ್ಳಿಯಲ್ಲಿ ಪಾರ್ಶ್ವ,ಆದಿ ಮತ್ತು ಶಾಂತಿನಾಥರ ವಿಗ್ರಹಗಳಿದ್ದು,ಮೊದಲನೆಯದು ಮತ್ತು ಮೂರನೆಯದು