ಪುಟ:Mysore-University-Encyclopaedia-Vol-4-Part-1.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕೇಸರಿ - ಕರ್ಣಾಟಕ ಸಂಗೀತ


ಕಾಬ್ ಎಂಬ ಬ್ರಿಟಿಷ್ ರೆಸಿಡೆಂಟ್ ಬೆಂಗಳೊರಿನ ಕಬ್ಬನ್ ಪಾರ್ಕಿನಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಂಬೇಕ್ರಾನಿಕಲ್,ಇಂಡಿಯನ್ ಪೇಟ್ರಿಯಟ್ ಮೊದಲಾದ ಪತ್ರಿಕೆಗಳ ಜೊತೆಗೆ ಕರ್ಣಾಟಕ ಪತ್ರಿಕೆಯೂ ಇದ್ದುದನ್ನು ನೋಡಿ ಕಿಡಿಕಿಡಿಯಾದನೆಂದು ಹೇಳಲಾಗಿದೆ.ಇದೊಂದು ವಿಷಪೂರಿತ ಪತ್ರಿಕೆಯೆಂದೂ ಇದನ್ನು ತರಿಸಕೊಡದೆಂದೂ ಆತನು ಸೂಚನೆ ನೀಡಿದ.ಪತ್ರಿಕೆ ಆ ಅವಮಾನವನ್ನು ಧೈರ್ಯವಾಗಿ ಎದುರಿಸಿತು.ಪರಕೀಯ ರೆಸಿಡೆಂಟನಿಗೆ ಸಂಸ್ಥಾನದ ವಿಷಯಗಳಲ್ಲಿ ಬಾಯಿಹಾಕಲು ಅಧಿಕಾರವಿಲ್ಲವೆಂದು ಅದು ಟೀಕಿಸಿತು.ರಾಜವಿರೋಧಿಯಾಗಿ ಬರೆಯುತಿದ್ದರಿಂದ ಅದು ದಿವಾನರ ಪತ್ರಿಕೆಯೆಂದು ಅರಮನೆಯವರು ಶಂಕಿಸಿದ್ದೊ ಉಂಟು.ಕರ್ಣಾಟಕ ಪತ್ರಿಕೆ ತನಗೆ ತೋರಿದ್ದನ್ನು ನಿರ್ಭಯವಾಗಿ ಬರೆಯಿತು.ಇದರಿಂದ ಆಗಿನ ದಿವಾನರು ಪತ್ರಿಕೆಯ ಸಂಪಾದಕರನ್ನು ಆಗಾಗ್ಗೆ ಕರೆಸಿಕೊಂಡು ಸಲಹೆ ಕೇಳುತಿದ್ದರು.ಬಿಗಿಯಾದ ವ್ರುತ್ತಪುತ್ರಿಕಾ ಕಾನೂನು ಜಾರಿಯಲ್ಲಿದ್ದ ಕಾಲವರು.ಈ ಪತ್ರಿಕೆಯನ್ನು ಮುಟ್ಟುಗೋಲು ಹಾಕಬೇಕೆಂದು ಹಲವು ಕಡೆಯಿಂದ ಒತ್ತಾಯ ಬಂದಿತ್ತದರೊ ಆಗಿನ ದಿವಾನರು ಪತ್ರಿಕೆಯನ್ನು ಸಹಾನುಭೂತಿಯಿಂದ ನೋಡುತಿದ್ದರು.ಕರ್ಣಾಟಕ ಪತ್ರಿಕೆಯ ಪ್ರಕಟಣೆ ನಿಂತದ್ದು ೧೯೨೨-೨೩ರ ಸುಮಾರಿನಲ್ಲಿ,ಆಗ ಆದಕ್ಕೆ ಚಂದಾದಾರದಿಂದ ಬರಬೇಕಾದ್ದ ಬರಬೇಕಾದ್ದ ಬಾಕಿಯ ಮೊತ್ತ ಸು.೮೦೦೦ ರೂಪಾಯಿ. ಕರ್ಣಾಟಕ ಕೇಸರಿ:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೊರಿನಿಂದ ಪ್ರಕಟವಾಗುತಿದ್ದ ಮಾಸಪತ್ರಿಕೆ.೧೯೨೮ರ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಎರಡು ವರ್ಷ ನಡೆತಿತು.ಸಂಪಾದಕರು ಮಂಜೇಶ್ವರ ಅನಂತರಾವ್.ಇದರಲ್ಲಿ ಕಥೆ,ಕವನ,ಪ್ರಬಂಧ,ನಾಟಕ,ಲೇಖನ,ಸಂಶೋಧನೆ,ಇತಿಹಾಸ ಮುಂತಾದ ವಿವಿಧ ಪ್ರಕಾರಗಳ ಲೇಖನಗಳಿದ್ದು,ಪತ್ರಿಕೆಯಲ್ಲಿ ೨೪ ಪುಟಗಳಿರುತ್ತಿದ್ದವು.ಬಿಡಿ ಸಂಚಿಕೆಯ ಬೆಲೆ ನಾಲ್ಕಾಣೆ;ವಾರ್ಷಿಕ ಚಂದಾ ಎರಡೂವರೆ ರೂಪಾಯಿ.ಮೊದಲ ಪುಟದಲ್ಲಿ ಸಾಮಾನ್ಯವಾಗಿ ಕವಿತೆಯೊಂದು ಪ್ರಕಟವಾಗುತಿತ್ತು.ಅದರ ಬದಿಯ ಪುಟ ಪ್ರಾಚೀನ ದೇವಾಲಯಗಳ ಚಿತ್ರಗಳಿಗೆ ಮೀಸಲು.

 ಎಂ.ಗೋವಿಂದ ಪೈ ಅವರ ಲಕ್ಷ್ಮಿ ಕಾಲ ವಿಚಾರ.ಶಿವರಾಮಕಾರಂತರ ವಿಜಯನಗರಕ್ಕೆ ಸಂಭಂದಿಸಿದ ಲೇಖನಮಾಲೆ,ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ನಿಜಗಲ್ಲಿನ ರಾಣಿ ಮೊದಲಾದ ಹಲವಾರು ಸಂಶೊಧಕ ಚಾರಿತ್ರಿಕ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕು ಕಂಡವು.ಐರೋಡಿ ಶಿವರಾಮಯ್ಯ,ಹೊಸಕೆರೆ ಚಿದಂಬರರಯ್ಯ,ಉಗ್ರಾಣ ಮಂಗೇಶರಾವ್,ಪಾಂಡೇಶ್ವರ ಗಣಪತಿರಾವ್,ಕಡೆಂಗೋಡ್ಲು ಶಂಕರಭಟ್ಟ,ಮಚ್ಚಿಮನೆ ಶಂಕರನಾರಾಯಾಣರಾವ್,ಬೆಳ್ಳೆ,ರಾಮಚಂದ್ರರಾವ್ ಮೊದಲಾದವರ ಲೇಖನಹಳಿರುತ್ತಿದ್ದುವು.ಪುತ್ತೊರಿನ ಹರಿಹರ ಪ್ರೆಸ್ಟಿನಲ್ಲಿ ಅ‍‍‍ಚ್ಚಾಗುತ್ತಿದ್ದ ಈ ಮಾಸ ಪತ್ರಿಕೆಯ ಪ್ರಸಾರ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಅಗಿದ್ದು ಆ ಭಾಗದ ಜನಪ್ರಿಯ ಪತ್ರಿಕೆಯೆನಿಸಿತ್ತು.
ಕರ್ಣಾಟಕ ಪ್ರಕಾಶಿಕಾ: ವಿದ್ವಾನ್ ಭಾಷ್ಯಂ ತಿರುಮಲಾಚಾರ್ಯಾರಿಂದ ಪ್ರಾರಂಭವಾದ (೧೮೬೫)ಕನ್ನಡ ಇಂಗ್ಲಿಷ್ ವಾರಪತ್ರಿಕೆ.ತಿರುಮಲಾಚಾರ್ಯರ ಮಗ ಭಾಷ್ಯಾಚಾರ್ಯಾರು ಪತ್ರಿಕೆ ನದೆಸುವುದರಲ್ಲಿ ತಂದೆಗೆ ಕೆಲಕಾಲ ಸಹಾಯ ಮಾಡಿದರು.ಅನಂತರ ಅವರು ಸರ್ಕಾರಿ ಗೆಜೆಟ್ಟಿನ ಕನ್ನಡ ಭಾಷಾಂತರಕಾರರಾಗಿ ಹೋದ ಮೇಲೆ (೧೮೬೬)ತಿರುಮಲಾಚಾರ್ಯಾರೊಬ್ಬರೇ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋದರು.೧೮೬೮ ವರೆಗೆ ಈ ಪತ್ರಿಕೆ ನದೆಯಿತು.೧೯೭೩ರಲ್ಲಿ ಪುನರ್ಜನ್ಮ ಹೊಂದಿದ 'ಕರ್ಣಾಟಕ ಪ್ರಕಾಶಿಕಾ'ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯ ಲೇಖನವನ್ನು ಒಳಗೊಂಡಿತ್ತು.ಅದರಲ್ಲಿ 'ತಂತೀ ವರ್ತಮಾನ ಸಂಗ್ರಹ' 'ಹೆಜೆಟ್ಟಿನ ಸಾರಾಂಶ' ಒಳದೇಶ ಮತ್ತು ತಾಲೂಕಿನ ವ್ರುತ್ತಂತ,'ನೈಮಿತ್ತಿಕ ವಿಶಯನ್ಯಾಸವು' ಮುಂತಾದ ವಿಷಯಗಳು ಇರುತ್ತಿದ್ದವು.ಅನೇಕ ಕನ್ನಡ ಮತ್ತು ಸಂಸ್ಕ್ರುತ ವಿದ್ವಾಂಸರು ಇದಕ್ಕೆ ಲೇಖನಗಳು ತುಂಬ ಪ್ರಭಾವಶಾಲಿಯಾಗಿದ್ದುವು.ಮೈಸೂರಿಗರ ಹಿತಕ್ಕಾಗಿ ಈ ಪತ್ರಿಕೆ ಹೋರಾಡಿತು.ಅಂದಿನ ರಾಜ್ಯಾಡಳಿತವನ್ನು ಟೀಕಿಸುವ ಧೈರ್ಯ ತೋರಿತು.ಅದರ ರಾಜಕೀಯ ಧೋರಣೆಯಿಂದಾಗಿ ವಿಚಾರ ಸ್ವಾತಂತ್ರ್ಯ ತೋರಿದ ಅದ್ಯಪತ್ರಿಕೆ ನಿಂತು ಹೋಯಿತು.

ಭಾಷ್ಯಂ ತಿರುಮಲಾಚಾರ್ಯರು ೧೮೭೭ರಲ್ಲಿ ನಿಧನರಾದರು.ಆಗ ಭಾಷ್ಯಾಚಾರ್ಯರ ಮಗ ವೆಂಕಟಾಚಾರ್ಯರು ಇದರ ಸಂಪಾದಕರಾದರು.ಟಿ.ಸಿ. ಶ್ರೀನಿವಾಸಚಾರ್ಯರು ಇದರ ಮಾಲೀಕರಾದರು.ಕೆಲಕಾಲನಂತರ ಮಾಲೀಕರೂ ಸಂಪಾದಕರೊ ಪ್ಳೇಗಿನಿಂದ ನಿಧನರಾದರುದರಿಂದ(೧೮೯೮)ಪತ್ರಿಕೆ ನಿಂತು ಹೋಯಿತೆಂದೂ ಹೇಳಲಾಗುತ್ತದೆ.

   ಕರ್ಣಾತಕ ಪ್ರಕಾಶಿಕಾ ಆರಂಭಕ್ಕೆ ಮುನ್ನ ಭಾಷ್ಯಂ ಬಂಧುಗಳು ೧೮೫೯ರ ಜೂನ್ನನಲ್ಲಿ 'ಮೈಸೂರು ವ್ರುತ್ತಾಂತ ಬೋಧಿನಿ'ಯನ್ನು ಆರಂಭಿಸಿದರು.ಇದು ಮೈಸೂರಿನ ಆದ್ಯಪತ್ರಿಕೆ.ಕನ್ನಡದ ಪ್ರಥಮ ಪತ್ರಿಕೆ 'ಮಂಗಳೂರಿನ ಸಮಾಚಾರ' ಪ್ರಕಟಿಸಿದ ಹರ್ಮನ್ ವೊಗ್ಲಿಂಗ್ ಅನಂತರ ಭಾಷಂ ಬಂಧುಗಳೇ ಕನ್ನಡ ಪತ್ರಿಕೋದ್ಯಮದ ಆದ್ಯರು.


ಕರ್ನಾಟಕ ಭಾಷೋಜ್ಜೀವಿನಿ ಸಭಾ: ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ಮೈಸೂರಿನಲ್ಲಿ ಕನ್ನಡಾದ ಅಭಿವ್ರುದ್ದಿಗೆಂದೇ ಸ್ಥಾಪಿತವಾದ(೧೮೮೭)ಒಮ್ದು ಸಂಘ.ಚಾಮರಾಜ ಒಡೆಯರ್ ಇದರ ಸ್ಥಾಪಕರು.ಇವರ ರಾಜ್ಯಾಭೀಷೇಕ ೧೮೮೧ ಮಾರ್ಚ್ ೧ ರಂದು ಜರುಗಿತು.ಆ ಬಹಳ ಇವರು ಹಲವು ಸಾಂಸ್ಕ್ರುತಿಕ,ಸಾರ್ವಜನಿಕ ಹಾಗೂ ಶೈಕ್ಶಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.ಮಹಾರಾಜ ಕಾಲೇಜಿನ ಪ್ರಗತಿ, ಸ್ತ್ರೀ ವಿದ್ಯಾಭ್ಯಾಸ ,ಸಮ್ಸ್ಕ್ರುತ -ಕನ್ನಡಗಳ ಪೋಷಣೆ ಇವರ ಉದ್ದೇಶವಾಗಿತ್ತು.ಸಮ್ಸ್ಕ್ರುತ ಭಾಷೆ -ವಿದ್ಯಾಭ್ಯಾಸಗಳ ಪುನರುಜ್ಜೇವನಕ್ಕೆ ಸರಸ್ವತೀ ಪ್ರಾಸಾದವೆಂಬ ಸಂಸ್ಕ್ರತ ಮಹಾಪಾಟಶಾಲೆಯನ್ನು ಸ್ಥಪಿಸಿದರು.ಯುವಕರ,ವಿದ್ಯರ್ಥಿಗಳ ಜ್ಗ್ಯಾನವಿಕಾಸಕ್ಕೆ ಇಂಗ್ಲಿಷ್ ವಿದ್ಯೆಯೊಂದೇ ಅಗತ್ಯವೆಂಬುದು ಒಡೆಯರ ಅಭಿಪ್ರಾಯವಾಗಿತ್ತು.ಪಾಶ್ಚಾತ್ಯ ವಿದ್ಯೆ ಕನ್ನಡದ ಮೂಲಕ ದೊರೆಯಬೇಕು ಪಾಶ್ಚಾತ್ಯ ಜ್ಗ್ನ್ಯಾನಶಾಖೆಗಳ ಅಧ್ಯಯನ-ಬೋಧನೆ ಕನ್ನಡದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಇವರು ಕರ್ಣಾಟಕ ಭಾಷೋಜ್ಜೇವಿನಿ ಸಭಾದ ಕಾರ್ಯಕ್ರಮಗಳನ್ನು ಪ್ರೊತ್ಸಾಹಿಸಿದರು.ಆ ಸಭೆ ಕರ್ಣಾಟಕ ವಿದ್ಯಾವರ್ಧಕ ಸಂಘ,ಕನ್ನಡ ಸಾಹಿತ್ಯ ಪರಿಷತುಗಳಿಂತ ಹಳೆಯದು.ಇದರ ಚಟುವಟಿಕೆಗಳಲ್ಲಿ ಎಂ.ಶಾಮರಾವ್ ಮುಂತಾದ ಮಹನೀಯರು ಪಾಲ್ಗೊಂಡಿದ್ದರು.

  ಕರ್ಣಾಟಕ ಸಂಗೇತ:ದಕ್ಷಿಣಾದ ಸಂಗೇತ ಎಂದೊ ಹೆಸರಿನ ಈ ಪದ್ಡತಿ ಭಾರತೇಯ ಸಂಗೆತದ ಎರಡು ಮುಖ್ಯ ಪ್ರಕಾರಗಳಲ್ಲಿ ಒಂದು.ಇನೊಂದು ಉತ್ತರಾದಿ (ಹಿಂದುಸ್ತಾನ).ಕರ್ಣಾಟಕ ಸಂಗೇತ ಈಗ ದಕ್ಷಿಣ ಕರ್ಣಾಟಕ ಮತ್ತು ಪಕ್ಕದ ತಮಿಳುನಾಡು, ಆಂಧ್ರಪ್ರದೇಶ್ ಮತ್ತು ಕೇರಳದಲ್ಲಿ ವಿಶೆಷವಾಗಿ ಅಛಾರದಲ್ಲಿದೆ.ಕನ್ನಡ,ಸಂಸ್ಕ್ರುತ,ತೆಲುಗು,ತಮಿಳು ಮುಂತಾದ ಎಲ್ಲ ಭಾಷ್ಗಳ ಸೇವೆಯನ್ನೂ ಪಡೆದು ಗಾಯನ,ವಾದನ,ನಾಟ್ಯ,ನರ್ತನ,ರಸಭಾವಾ,ಅಲಂಕಾರ,ಛಂಧಸ್ಸು,ಧೃವಗಾನ ಮೊದಲಾದ ಎಲ್ಲಾ ಅಂಗಗಳೊಡನೆ ಬೆಳೆದಿರುವ ಈ ಸಂಗೇತ ಪದ್ಡತಿಗೆ ಕನ್ನಡಿಗರ ಕೊಡುಗೆ ಪ್ರಮುಖವಾದುದು.ಕರ್ಣಾತಕ ಸಂಗೇತ ಶಾಸ್ತ್ರಜ್ನ್ಯರ ಕಾಣಿಕೆ,ಪ್ರಾಚೀನ ಕಲದಿಂದ ಈ ನಾಡಿನಲ್ಲಿ ದೊರೆತ ವಿಶೇಷ ಪ್ರೊತ್ಸಾಹ ಇವು ಕರ್ಣಾಟಕ ಸಂಗೇತ ರೂಪುಗೊಳ್ಳಲು ಮೂಖ್ಯ ಕಾರಣ.ಇದರಿಂದಲೇ ಈ ಪ್ರಕಾರಕ್ಕೆ ಕರ್ಣಾಟಕದ ಹೆಸರು ಜೊತೆಗೊಡಿಕೊಂಡಿದೆ.
 ಉಗುಮ-ವಿಕಾಸ:ಸಾಮವೇದದಿಂದ ಆರಂಭವಾಗಿ ದತ್ತಿಲ,ಕೋಹಿಲ,ಭರತ ಮೊದಲಾದವರ ಗ್ರಂಥಗಳಲ್ಲಿ ಶಾಸ್ತ್ರೀಯವಾಗಿ ನಿರೊಪಿತವಾಗಿರುವ ಸಂಗೇತ ಪದ್ದತಿ;ಭಾರತೇಯ ಸಂಗೇತ ಪದ್ದತಿಗಳಿಗೆ ಆಧಾರವಾಗಿದೆ.ಬಹುಶಃ ದಕ್ಷಿಣ ಭಾರತದಲ್ಲಿಯೂ ಸ್ಥಳೀಯ ಸಂಗೀತ ರೀತಿಯೊಂದು ಬಲಾಕೆಯಲ್ಲಿದ್ದು ಇದನ್ನೊ ಒಳಗೊಂಡು ಮುಂದಿನ ಭಾರತೀಯ ಸಂಗೀತ ಮಾರ್ಗ ಬೆಳೆದಂತೆ ತೋರುತ್ತದೆ.ಉದಾಹರಣೆಗೆ ಭರತನ ನಾಟ್ಯಶಾಸ್ತ್ರದಲ್ಲಿ ಸು.೪ನೆಯ ಶತಮಾನ ಗಾಯನವಾದನ ರಸ ಅಲಂಕಾರ ಮುಂತಾದ ಎಲ್ಲ ಸಂಗೀತಗಳಿಗೊದ ಸಾಮಾನ್ಯವಾದ ವಿಷಯಗಳಿದ್ದರೆ ಸು.೪-೫ನೆಯ ಶತಮಾನದಲ್ಲಿದ್ದ ಮತಂಗನ ಬೃಹದ್ದಶೀ ಎಂಬ ಪ್ರಮಾಣ ಗ್ರಂಥ ದಕ್ಶಿಣ ಭಾರತದ ಸಂಗೀತವನ್ನು ವಸ್ತುವಾಗಿ ಗ್ರಹಿಸಿ,ಭರತ ಹೇಳುವ ಸಂಗೀತ ಜಾತಿಗಳ ಬದಲು ರಾಗ ಸಂಗೀತತದ ವಿಷಯವನ್ನು ಮೊಟ್ಟಮೊದಲಿಗೆ ಪ್ರತಿಪಾದಿಸುತ್ತದೆ.ರಾಗಗಳನ್ನು ಶುದ್ಡ,ಸಂಕೀಣವೆಂದು ವಿಭಾಗ ಮಾಡಿ ಶುತ್ರಿ,ಸ್ವರ,ವರ್ಣ,ಅಲಂಕಾರ ಮುಂತಾದ ಹಲವು ವಿವರಗಳನ್ನು ಮತಂಗ ನಿರೊಪಿಸಿದ್ದನೆ.ಅನೇಕ ವಾದ್ಯಗಳ ವಿಚಾರವಾಗಿ ತುಂಬ ಸ್ವಾರಸ್ಯವಾದ ವಿವರಗಳನ್ನು ನೀಡುತ್ತಾನೆ.ಬಹುಶಃ ಇವನು ಕನ್ನಡ ನಾಡಿನವರು.ಇವನ ಗ್ರಂಥದಲ್ಲಿ ಕನ್ನಡ ಪ್ರಬಂಧಗಳನ್ನೊ ಹೇಳಿದ.
   ಕರ್ಣಾಟಕದಲ್ಲಿ ಬಹು ಹಿಂದಿನಿಮ್ದಲೂ ಸಂಗೀತಕ್ಕೆ ವಿಶೇಷವಾದ ಮುನ್ನಣೆ ಯಿತ್ತೆಂಬುದು ಹಲವು ಶಾಸನ ಸಾಹಿತ್ಯ ಉಲ್ಲೇಖಗಳಿಂದ ತಿಳಿಯುತ್ತದೆ.ತಾಳಗುಂದ ಶಾಸನದಲ್ಲಿ ಕದಂಬ ಶಾಂತಿವರ್ಮನ ವೈಭವವನ್ನು ವರ್ಣಿಸುತ್ತ ಅವನ ಮನೆ ಸಂಗೀತದ ಧ್ವನಿಯಿಂದ ತುಂಬಿಹೋಗಿದ್ದಿತೆಂದು ಹೇಳಿದೆ (ನಾನಾ ವಿಧ ದ್ರವಿಣಸಾರಸಮುಚ್ಚಯೇಷು ದ್ವಿಪೇಂದ್ರಮದವಾಸಿಕಗೋಪುರೇಷು ಸಂಗೀತವಲ್ಗು ನಿನದೇಷು ಗೃಹೇಷು).ಪಟ್ಟದಕಲ್ಲಿನ ದೇವಸ್ಥಾನದ ಕಂಬದ ಮೇಲಿನ ಸು.೮೫೨ರ ಶಾಸನವೊಂದರಲ್ಲಿ ಒಬ್ಬ ಶ್ರೇಶ್ಟ ನಟನ ಪ್ರಶಂಸೆಇದೆ.ಸ್ತ್ರೇಯರ ವಿದ್ಯಾಭ್ಯಾಸದಲ್ಲಿ ಸಂಗೀತ,ನರ್ತನ ಮುಂತಾದ ಕಲೆಗೆ ಹೆಚ್ಚು ಪ್ರಾಧ್ಯಾನವಿದ್ದುದು ತಿಳಿಯಬರುತ್ತದೆ.ಉದಯಸಿಂಹ ಎಂಬವನ್ನು ಕದಂಬ ಗೀತ ವಾದ್ಯ ನೃತ್ಯ ವೀಣು ವೀಣಾರವ್ ಸಂಗತ ಪಾಟಕ ವಿಜ್ರಂಭಿತ ಆಸ್ಥಾನ ಕಾವ್ಯನಾಟಕ ವಿಚಾರ ಪ್ರಸಮ್ಗನಾಗಿದ್ದನೆಂದು ೧೦೧೭ರ ಒಂದು ಶಾಸನ ಹೊಗಳಿದೆ.ಹೊಯ್ಸಳ ವಿಷ್ಟುವರ್ಧನನ ಪತ್ನಿ ಶಾಂತವೆಯನ್ನು ಅನೇಕ ಶಾಸನಗಳು ಸಂಗೀತವಿದ್ಯಸರಸ್ವತಿ,ವಿಚಿತ್ರನರ್ತನ ಪಾತ್ರ ಶಿಖಾಮಣಿ,ಸಕಳಕಳಾಗಮಾನೂನೆ,ಗೀತವಾದ್ಯನೃತ್ಯಸೊತ್ರಧಾರೆ ಎಂದು ವರ್ಣಿಸಿವೆ.ಹಲವು ಆಗ್ರಹಾಅರಗಳ ಮಹಾಕನರು ಸಂಗೀತಕಲಾ ನಿಪುಣರಾಗಿದ್ದುದನ್ನೊ ದೇವಾಲಯಗಳಲ್ಲಿ ಗೀತವಾದ್ಯ ನೃತ್ಯದವರಿಗಗಿ ದತ್ತಿಗಳನ್ನು ಕೊಟ್ಟದನ್ನೊ ಶಾಸನಗಳಲ್ಲಿ ಹೇಳಿದೆ.