ಪುಟ:Mysore-University-Encyclopaedia-Vol-4-Part-1.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲಾಮಂದಿರಗಳು

ಸುವ್ಯವಸ್ಥಿತವಾಗಿರದಿದ್ದರೂ ಇಲ್ಲಿ ಕಾಣುವ ಕೆಲವೇ ಸಂಖ್ಯೆಯ ಕಲಾಭಿಮಾನಿದೇವತೆಗಳು ಭಾರತೀಯರ ಸಾಹಿತ್ಯ, ಕಲೆ ಮತ್ತು ಸೌಂದರ್ಯೋಪಾಸನೆಗೆ ಸೂಕ್ತವಾದ ಪ್ರೇರಶಕ್ತಿಗಳೆನಿಸಿದ್ದಾರೆ.

ಕಲಾಮಂದಿರಗಳು: ಸಾರ್ವಜನಿಕರಿಗೆ ನಾಟಕ, ನೃತ್ಯ ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುವ ರಂಗಮಂದಿರ ಮತ್ತು ಸಭಾಂಗಣಗಳನ್ನೊಳಗೊಂಡ ಮಂದಿರಗಳಿಗೆ ಕಲಾಮಂದಿರಗಳೆನ್ನುವರು. ವಿವಿಧ ರೀತಿಯ ಚಿತ್ರಕಲೆ, ಶಿಲ್ಪ, ದಂತ, ಕಂಚು ಮೊದಲಾದವುಗಳಲ್ಲಿ ಮಾಡಿದ ಕುಶಲಕಲೆಯ ವಸ್ತುಗಳೇ ಕಲಾಕೃತಿಗಳು. ಸಾಮಾನ್ಯವಾಗಿ ಕಲಾಮಂದಿರವೆಂದರೆ ಕೇವಲ ಚಿತ್ರಗಳನ್ನು ಪ್ರದರ್ಶಿಸುವ ಸ್ಥಳವೆಂದು ತಿಳಿಯುತ್ತಾರೆ. ಆದರೆ ಕಲಾಮಂದಿರದಲ್ಲಿ ವಿವಿಧ ಪ್ರಕಾರಗಳ ಕಲಾವಸ್ತುಗಳು ಪ್ರದರ್ಶಿತವಾಗಿರುತ್ತವೆ. ಮಂದಿರಗಳನ್ನು ಸ್ಥಾಪಿಸುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಇತಿಹಾಸಪೂರ್ವಯುಗದ ಜನ ಸಹ ಕಲಾಕೃತಿಗಳಿಂದ ಮನೋರಂಜನೆ ಪಡೆಯುತ್ತಿದ್ದರಂಬುದು ಸ್ಪೇನ್ ದೇಶದ ಆಲ್ಟಮೀರ, ಫ್ರಾನ್ಸಿನ ಲೆ ಐಜೀಸ್, ಡಾರ್ಡಾನ್ ಮೊದಲಾದ ಸ್ಥಳಗಳಲ್ಲಿ ಕಾಣಬರುವ ಇತಿಹಾಸಪೂರ್ವ ಶಿಲಾಚಿತ್ರಣಗಳಿಂದ ವ್ಯಕ್ತವಾಗುತ್ತದೆ.ಮನುಷ್ಯ ನಾಗರಿಕನಾಗುತ್ತ ಬಂದಮೇಲೆ ಕಾಲಕೃತಿಗಳಿಂದ ರಾರಾಜಿಸುವ ಅರಮನೆಗಳನ್ನೂನಿರ್ಮಿಸುವುದು ಪ್ರಾರಂಭವಾಗಿ ಅವು ಕಲಾಮಂದಿರಗಳಂತೇ ಕಲೋಪಾಸಕರಿಗೆ ಆನಂದವನ್ನುಂಟುಮಾಡುವ ಉದ್ದೇಶವನ್ನು ಸಾಧಿಸಿದುವುದು. ಪಶ್ಚಿಮ ಪಾಕಿಸ್ತಾನದ ಮೊಹೆಂಜೋದಾರೊ ಮತ್ತು ಹರಪ್ಪ; ಭಾರತದ ಅಜಂತ, ಎಲ್ಲೋರ, ಸಿತ್ತನ್ನವಾಸಲ್ ಮತ್ತು ಲೇಪಾಕ್ಷಿ; ಚೀನದ ತುನ್- ಹುಅನ್ ಗವಿಗಳು; ಈಜಿಪ್ಪಿನ ಕಾರ್ನಾಕ್ ದೇವಾಲಯ, ರೋಂ ನಗರದ ಅಗ್ರಿಪನ ಪ್ಯಾಂಥಿಯಾನ್ ದೇಗುಲ್, ಇರಾನಿನ ಪರ್ಸೆಪೊಲಿಸ್ ಆರಮನೆಗಳು; ಆಥೆನ್ನ್ ನಗರದ ಪಾರ್ಥೆನಾನ್ ದೇವಾಲಯ, ಜಪಾನಿನ ಹೊರ್ಯೂಜಿ ಗುಡಿ ಮೊದಲಾದವುಗಳ ಕಲಾವೈಭವ ಪ್ರಾಚೀನಕಾಲದ ಜನ ಹೇಗೆ ಕಲೆಯಲ್ಲಿ ಸತತ ಆಸಕ್ತಿ ವಹಿಸಿ ಜನರ ಸಂತೋಷಕ್ಕಾಗಿ ತಮ್ಮ ಕಲಾಕೃತಿಗಳನ್ನು ದೇವಾಲಯಗಳಂಥ ಪ್ರಮುಖ ಕಟ್ಟಡಗಳಲ್ಲಿ ಜೋಡಿಸುತ್ತಿದ್ದರೆಂಬುದನ್ನು ಸೂಚಿಸುತ್ತದೆ. ದೃಗ್ಗೋಚರವಾದ ಈ ಕಲೆಗಳನ್ನು ಹೇಗೋ ಹಾಗೆ ಶ್ರವಣಗೋಚರವಾದ ಸಂಗೀತವೇ ಮೊದಲಾದ ಕಲೆಗಳನ್ನೂ ಈ ದೇವಾಲಯಗಳು ಪೋಷಿಸಿಕೊಂಡು ಬಂದಿಲ್ಲ.

ಈ ಪ್ರಾಚೀನ ಕಲಾಕೃತಿಗಳ ವಾಸ್ತವಿಕ ಮಾದರಿಗಳಲ್ಲದೆ ಸಾಹಿತ್ಯದಲ್ಲೂ ಕಲಾಕೃತಿಗಳ ಹಾಗೂ ಚಿತ್ರಶಾಲೆಗಳ ಬಗ್ಗೆ ಉಲ್ಲೇಖಗಳಿವೆ. ಬಾಣಕವಿಯ ಕಾದಂಬರಿಯಲ್ಲಿ ವಿದಿಶಾ ನಗರವನ್ನು ವರ್ಣಿಸುವಾಗ ಸುರಾಸುರಸಿದ್ಧಗಂಧರ್ವವಿದ್ಯಾಧರೋರಗಾಧ್ಯಾ ಸಿತಾಭಿಃ ಚಿತ್ರಶಾಲಾಭಿರಲಂಕೃತಾ ಎಂದು ಹೇಳಿ,ಆ ನಗರದಲ್ಲಿ ದೇವಗಂಧರ್ವರೇ ಮೊದಲಾದವರ ಚಿತ್ರಗಳನ್ನೂ ಹಾಗೂ ವಿಗ್ರಹಗಳನ್ನೂ ಹೊಂದಿದ ಅನೇಕ ಚಿತ್ರಶಾಲೆಗಳಿದ್ದುವೆಂದು ತಿಳಿಸುತ್ತಾನೆ. ಇದೇ ರೀತಿವಿಷ್ಣುಧರ್ಮೋತ್ತರ,ಮಾನಸೋಲ್ಲಾಸ,ಮತ್ತು ಶಿಲ್ಪರತ್ನ ಮೊದಲಾದ ಕೃತಿಗಳಲ್ಲಿ ಸಹ ನರರಿಗೂ ನರಪಾಲಕರಿಗೂ ಆನಂದವನ್ನುಂಟುಮಾಡಲು ಕಲಾಕೃತಿಗಳನ್ನು ಸೃಜಿಸುವ ವಿಧಾನವನ್ನು ಕೂಲಂಕಷವಾಗಿ ವಿವರಿಸಿದ.

ಪ್ರಾಚೀನ ಕಾಲದಲ್ಲಿ ಚಿತ್ರಶಾಲೆಗಳಿದ್ದುವೆಂಬುದಕ್ಕೆ ಸಾಹಿತ್ಯದಲ್ಲಿ ಉಲ್ಲೇಖಗಳಿದ್ದರೂ ವಿಶಿಷ್ಟ ಕಲಾಮಂದಿರಗಳನ್ನು ನಿರ್ಮಿಸುವ ಪದ್ಧತಿ ಯುರೋಪಿನಲ್ಲಿ ನಾನೂರು ವರ್ಷಗಳ ಹಿಂದೆ ಬೌದ್ಧಿಕ ಕ್ರಾಂತಿಯ ಕಾಲದಲ್ಲಿ ರೂಢಿಗೆ ಬಂದಂತೆ ಕಾಣುತ್ತದೆ. ಚಿತ್ರಕಲೆ, ಶಿಲ್ಪ ಮತ್ತು ವಾಸ್ತುಶಿಲ್ಪಗಳಲ್ಲಿ ಹಲವಾರು ನಿರ್ದಿಷ್ಟ ಪಂಥಗಳು ಹುಟ್ಟಿಕೊಂಡುದರಿಂದಲೂ ಈ ಪಂಥಗಳು ಸೃಜಿಸಿದ ಕಲಾಕೃತಿಗಳನ್ನು ಮತ್ತು ಅವುಗಳು ಶೈಲಿಗಳನ್ನು ರಕ್ಷಿಸಿ ಪ್ರದರ್ಶಿಸಬೇಕಾದ ಅನಿವಾರ್ಯತೆಯುಂಟಾದುದರಿಂದಲೂ ಈ ಕಲಾಪಂಥಗಳ ಆರ್ಶಗಳನ್ನು ಪ್ರಚಾರ ಮಾಡುವ ಉದ್ದೇಶದಿಂದಲೂ ಇಂಥ ಕಲಾಮಂದಿರಗಳು ಅಸ್ತಿತ್ವಕ್ಕೆ ಬಂದವು. ಈ ಉದ್ದೇಶಕ್ಕಾಗಿ ಅನೇಕ ಕಲಾಸಂಘಗಳು ಏರ್ಪಟ್ಟು, ಅವು ತಮ್ಮದೇ ಆದ ಕಲಾಮಂದಿರಗಳನ್ನು ಹೊಂದಿದ್ದುವು. ಹೀಗೆ ಯುರೋಪಿನ ಅನೇಕ ಪ್ರಮುಖ ನಗರಗಳಲ್ಲಿ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಯುರೋಪಿನ ಕಲಾಮಂದಿರಗಳನ್ನು ಆಯಾ ದೇಶದ ಅರಸುಮನೆತನಗಳೇ ಪೋಷಿಸಿಕೊಂಡು ಬಂದುವು. ಅರಮನೆಗಳು ಸಹ ಅಮೋಘ ಕಲಾಕೃತಿಗಳ ಭಂಡಾರಗಳಾದುವು. ತರುವಾಯದ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು, ನಗರಸಭೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಶ್ರೀಮಂತರು ಕಲಾಮಂದಿರಗಳನ್ನು ಏರ್ಪಡಿಸುವ ಪದ್ಧತಿ ಪ್ರಾರಂಭವಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಂತೂ ಖಾಸಗಿ ದಾನಶೀಲರ ನೆರೆವಿನಿಂದ ಹಲವಾರು ಘನವಾದ ಕಲಾಮಂದಿರಗಳು ಸ್ಥಾಪಿತವಾಗಿವೆ. ಇತ್ತೀಚೆಗೆ, ವಿಶ್ವದ ನಾನಾ ರಾಷ್ಟ್ರಗಳ ಸರ್ಕಾರಗಳು ತಮ್ಮ ನೇತೃತ್ವದಲ್ಲಿ,ಸಾರ್ವಜನಿಕರಿಗೆ ಒದಗಿಸುವ ಸೌಕರ್ಯಗಳ ಅಂಗವಾಗಿ, ಇಂಥ ಕಲಾವಿಭಾಗಗಳೊಂದಿರಗಳನ್ನು ಸ್ಥಾಪಿಸಿವೆ. ಸ್ವತಂತ್ರ ಭಾರತದಲ್ಲಿ ನವದೆಹಲಿಯಲ್ಲಿ ಕಲಾವಿಭಾಗಗಳೊಂದಿಗೆ ಒಂದು ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನೂ ಮದ್ರಾಸಿನಲ್ಲಿ ರಾಷ್ಟ್ರೀಯ ಕಲಾಮಂದಿರವನ್ನೂ ಸ್ಥಾಪಿಸಲಾಗಿದೆ.

ಕಲಾಮಂದಿರಗಳಲ್ಲಿ ಅನೇಕ ಬಗೆಗಳಿವೆ. ಕೆಲವು ಕಲಾಮಂದಿರಗಳು ಲಂಡನ್ ನಗರದ ಬ್ರಿಟಿಷ್ ಮ್ಯೂಸಿಯಂ ವಸ್ತುಸಂಗ್ರಹಾಲಯದ ಕಲಾವಿಭಾಗಗಳ ಮಾದರಿಯಲ್ಲಿ ಎಲ್ಲ ದೇಶಗಳ ಪ್ರಾಚೀನ ಕಲಾಕೃತಿಗಳಿಗೆ ಅವಕಾಶವಿತ್ತಿವೆ. ಕೆಲವು, ಪ್ರಾಚೀನ ನಾಗರಿಕತೆಗಳಿಗೆ ಸಂಬಂಧಪಟ್ಟ ಕಲೆಗಳಿಗೆ ಮಾತ್ರ ಮೀಸಲಾಗಿವೆ. ಅಂಥ ಕಲಾಮಂದಿರಗಳಲ್ಲಿ ಒಂದಾದ ಶಿಕಾಗೊ ನಗರದ ಓರಿಯಂಟಲ್ ಇನ್ ಸಿಟ್ಯೂಟಿನಲ್ಲಿ ಮೆಸಪೊಟೇಮಿಯ ಮತ್ತು ಈಜಿಪ್ಪ್ಗಗಳ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕೆಲವು ಕಲಾಮಂದಿರಗಳಲ್ಲಿ ಮುಖ್ಯವಾಗಿ ಒಂದೇ ದೇಶದ ಎಲ್ಲಾ ಕಾಲಗಳಿವೆ ಸಂಬಂಧಪಟ್ಟ ಕಲೆಯನ್ನು ಪ್ರಗರ್ಶಿಸುತ್ತಾರೆ. ಚೆನ್ನೈ ರಾಷ್ಟ್ರೀಯ ಕಲಾಮಂದಿರ ಈ ಮಾದರಿಯದು. ಕೇವಲ ಚಿತ್ರಕಲೆಯ ಗುಂಪಿಗೆ ಸೇರಿದವು ಅಮ್ಸ್ಪರ್ ಡ್ಯಾಂ ನಗರದ ರಿಜಕ್ಸ್ ಮ್ಯೂಸಿಯಂ ಭವನ ಮತ್ತು ವ್ಯಾಟಿಕನ್ ನಗರದ ಕಲಾಮಂದಿರ. ಮತ್ತೆ ಕೆಲವು ಕಲಾಮಂದಿರಗಳು ಶಿಲೆ ಅಥವಾ ಲೋಹಶಿಲ್ಪದ ಮಾದರಿಗಳನ್ನೇ ಪ್ರದರ್ಶಿಸುತ್ತವೆ. ಉದಾ: ತಂಜಾವೂರಿನ ಕಲಾಮಂದಿರಗಳಲ್ಲಿ ಚೋಳರ ಕಾಲದ ಕಂಚಿನ ಮೂರ್ತಿ ಶಿಲ್ಪದ ಅದ್ಬುತ ಮಾದರಿಗಳಿವೆ. ಹಲವು ಕಲಾಮಂದಿರಗಳು ಆಧುನಿಕ ಕಲಾವಸ್ತುಗಳನ್ನು ಸಂಗ್ರಹಿಸಿವೆ. ಹೀಗೆ ಇನ್ನೂ ಅನೇಕ ವಿಧಗಳಲ್ಲಿ ಕಲಾಮಂದಿರಗಳು ವರ್ಗೀಕೃತವಾಗಿವೆ.

ವಿಶ್ವದ ಪ್ರಸಿದ್ಧ ಕಲಾಮಂದಿರಗಳಲ್ಲಿ ಗಮನಾರ್ಹವಾದ ಕೆಲವನ್ನು ಮುಂದೆ ವಿವರಿಸಲಾಗಿದೆ.

ಭಾರತ: ಮುಂಬಯಿ, ಕೋಲ್ಕತ, ಚೆನ್ನೈ, ನವದೆಹಲಿ, ಅಲಹಾಬಾದ್, ಗ್ವಾಲಿಯರ್, ಜಯಪುರ್, ಹೈದರಾಬಾದು,ಮೈಸೂರು,ತಿರುವನಂತಪುರ್,ಲಕ್ನೊ, ವಾರಣಸಿ ಮೊದಲಾದ ಸ್ಥಳಗಳಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳಲ್ಲಿ ಕಲಾಮಂದಿರಗಳು ಹಾಗೂ ಕಲಾವಿಭಾಗಗಳಿವೆ.

ಕೋಲ್ಕತ ನಗರದ ಇಂಡಿಯನ್ ಮ್ಯೂಸಿಯಂ ವಸ್ತುಸಂಗ್ರಹಾಲಯದ ಕಲಾವಿಭಾಗದಲ್ಲಿ ಬಾರ್ಹುತ್ ನಿಂದ ಸಂಗ್ರಹವಾಗಿರುವ ಶುಂಗ ಕಾಲದ ಪ್ರಸಿದ್ಧ ಶಿಲ್ಪಗಳೂ ಗಾಂಧಾರ ಶಿಲ್ಪಗಳೂ ಪ್ರದರ್ಶಿತವಾಗಿವೆ. ಈ ನಗರದ ವಿಕ್ಟೋರಿಯ ಮೆಮೊರಿಯಲ್ ವಸ್ತುಸಂಗ್ರಹಾಲಯದಲ್ಲಿ ಉತ್ತರ ಭಾರತದ ಸೂಕ್ಷ್ಮವಾದ ವರ್ಣಚಿತ್ರಗಳೂ ೧೯ನೇ ಶತಮಾನದ ಯುರೋಪಿನ ಚಿತ್ರಕಾರರ ತೈಲಚಿತ್ರಗಳೂ ಇವೆ, ಮುಂಬಯಿ ನಗರದ ಪ್ರಿನ್ನ್ ಆಫ್ ವೇಲ್ಸ್ ಮ್ಯೂಸಿಯಮಿನ ಕಲಾವಿಭಾಗ ಪಶ್ಚಿಮ ಭಾರತದ ರಾಜಸ್ತಾನದ ಸೂಕ್ಷ್ಮ ವರ್ಣಚಿತ್ರಗಳು ಮತ್ತು ಬಾದಾಮಿ ಚಳುಕ್ಯರ ರಾಷ್ಟ್ರಕೂಟರ ಹಾಗೂ ಇನ್ನಿತರ ರಾಜವಂಶಗಳ ಕಾಲದ ಶಿಲ್ಪಗಳ ಶ್ರೇಷ್ಠ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ.

ಚೆನ್ನೈನ ಸರ್ಕಾರಿ ವಸ್ತುಸಂಗ್ರಹಾಲಯದ ಕಲಾವಿಭಾಗದಲ್ಲಿ ವಿಶ್ವಪ್ರಸಿದ್ಧವಾದ ಅಮರಾವತಿ ಶಿಲ್ಪ ಸಂಪ್ರದಾಯದ ವಿಗ್ರಹಳೇ ಅಲ್ಲದೆ ದಕ್ಷಿಣ ಭಾರತದ ಕಲ್ಲಿನ ಮತ್ತು ಕಂಚಿನ ವಿಗ್ರಹಗಳ ಅತ್ಯುತ್ತಮ ಮಾದರಿಗಳೂ ಸಂಗ್ರಹವಾಗಿವೆ. ಈ ವಸ್ತು ಸಂಗ್ರಹಾಲಯವಲ್ಲದೇ ಈ ನಗರದಲ್ಲಿ ನಿಜಕ್ಕೂ ಕಲಾದೇಗುಲವೆನಿಸಿರುವ ರಾಷ್ಟ್ರೀಯ ಕಲಾಮಂದಿರ ಇದೆ. ಅದರಲ್ಲಿ ಅತ್ಯುತ್ತಮ ಮಾದರಿಯ ಕಂಚಿನ ವಿಗ್ರಹಗಳು, ಪ್ರಾಚೀನ ಹಾಗೂ ಆಧುನಿಕ ಕಾಲಗಳ ಚಿತ್ರಗಳು, ಮರ, ದಂತ ಮತ್ತು ಲೋಹಗಳಲ್ಲಿ ತಯಾರಿಸಿದ ಕಲಾವಸ್ತುಗಳು ಶೇಖರವಾಗಿವೆ.