ಪುಟ:Mysore-University-Encyclopaedia-Vol-4-Part-1.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಲಟಭಟ್ಟ-ಕಲ್ಲನ್ನು ತಗಯುವುದು

ಪ್ರಮುಖವಾಗಿ ಇದು ಅತ್ಯಂತ ರುಚಿಯಾದ ಬೇಸಗೆ ಹಣ್ಣೆಂದು ಪ್ರಸಿದ್ಧವಾಗಿದೆ. ಇದರ ರಸ ಬಹಳ ತಂಪುಗೊಳಿಸುವ ಹಾಗೂ ಚೇತೋಹಾರಿಯಾದ ಪಾನೀಯವೆಂದು ಹೆಸರಾಗಿದೆ. ರಾಜಸ್ತಾನದ ಕೆಲವೆಡೆಗಳಲ್ಲಿ ಇದರ ಕಾಯಿಗಳನ್ನು ತರಕಾರಿಯಾಗಿಯೂ ಉಪಯೋಗಿಸುವುದುಂಟು. ಕೆಲವು ಪ್ರದೇಷಗಳಲ್ಲಿ ಸಹಿತಿಂಡಿ ಮಾಡಲೂ ಉಪ್ಪಿನ ಕಾಯಿಯಾಗಿಯೂ ಇದನ್ನು ಬಳಸುವ ರೂಢಿಯಿದೆ. ಕಿರ್ಬತ್ ಎಂದು ಕರೆಯಲಾಗುವ ಒಂದು ಸ್ವಾಭಾವಿಕ ತಳಿಯ ಕಲ್ಲಂಗಡಿಯ ಬೀಜಕ್ಕೆ ತಂಪುಗೊಳಿಸುವ ಮತ್ತು ಮೂತ್ರೋತ್ತೇಜಕ ಗುಣಗಳಿವೆ. ಹಣ್ಣಿನ ರಾಸಾಯನಿಕ ಸಂಯೋಜನೆ ಹೀಗಿದೆ:ತೇವಾಂಶ ಶೇ. ೯೫.೭; ವ್ರೋಟೀನು ಶೇ. ೦.೨; ಕೊಬ್ಬು ಶೇ.೦.೨; ಕಾರ್ಬೋಹೈಡ್ರೇಟುಗಳು ಶೇ. ೩.೩; ಲವಣಾಂಶ ಶೇ. ೦.೩; ಹಾಗೂ ಪ್ರತಿ ೧೦೦ ಗ್ರಾಂ ಹಣ್ಣಿಗೆ ೧೧ ಮಿ.ಗ್ರಾಂ ಕ್ಯಾಲಿಯಂ, ೧೨ ಮಿ.ಗ್ರಾಂ. ರಂಜಕ, ೭.೯ ಮಿ.ಗ್ರಾಂ. ಕಬ್ಬಿಣ. ೪೨ ಮಿ.ಗ್ರಾಂ ಗಂಧಕ ಇತ್ಯಾದಿ ಮತ್ತು ೦.೧೬ ಮಿ.ಗ್ರಾಂ ವಿಟಮಿನ್ ಬಿ ಹಾಗೂ ೧ ಮಿ.ಗ್ರಾಂ ವಿಟಮಿನ್ ಸಿ. ಕಲ್ಲಂಗಡಿಗೆ ಪ್ಯೂಸೇರಿಯಂ ಆಕ್ಸಿನ್ಪೋರಂ ಎಂಬ ಬೂಷ್ಟು ತಗುಲಿ ಸೊರಗು ರೋಗವನ್ನು(ವಿಲ್ಟ್) ಉಂಟುಮಾದುತ್ತದೆ.ಹಂಬಿನ ತುದಿಗಳು ಬಾಡಿ ಕಾಂಡ ಕಂದುಬಣ್ಣಕ್ಕೆ ತಿರುಗುವುದು ಈ ರೋಗದ ಮುಖ್ಯಲಕ್ಷಣ. ಇದರಿಂದಾಗಿ ಇಳುವರಿ ಕಡಿಮೆಯಾಗುತ್ತದೆ. ರೋಗ ನಿರೋಧಕ ತಳಿಗಳನ್ನು ಬೆಳೆಸುವುದರಿಂದ ಈ ರೊಗವನ್ನು ತಡೆಗಟ್ಟಬಹುದು. ಇದಲ್ಲದೆ ಹಲವಾರು ಬಗೆಯ ಜೀರುಂಡೆಗಳು, ಕತ್ತರಿ ಹುಳುಗಳು, ತಿಗಣೆಗಳು ಮತ್ತು ಉಣ್ಣೆಗಳೂ ಕಲ್ಲಂಗಡಿಗೆ ತಗುಲಿ ನಷ್ಟವನ್ನುಂಟುಮಾಡಬಲ್ಲವು. (ಡಿ.ಎಂ.; ಎಸ್.ಕೆ.ಟಿ.; ಟಿ.ಎನ್.ಎಸ್) ಕಲ್ಲಟ ಭಟ್ಟ:೯ನೆಯ ಶತಮಾನದ ಆದಿಭಾಗದಲ್ಲಿದ್ದ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಈತ ಕಾಶ್ಮೀರರಾಜ ಅವಂತಿವರ್ಮನ (೮೫೫-೮೮೩) ಕಾಲದಲ್ಲಿದ್ದನೆಂದು ರಾಜತರಂಗಿಣಿ ಗ್ರಂಥದಿಂದ ತಿಳಿದುಬರುತ್ತದೆ. ಅಲ್ಲಿ ಈತನನ್ನು ಸಿದ್ಧನೆಂದು ಕರೆಯಲಾಗಿದೆ. ಶೈವಕ್ಕೆ ಮೂಲವಾದ ಶಿವಸೂತ್ರಗಳನ್ನು ಉದ್ದವಿಸಿ ಶೈವಮತವನ್ನು ಕಾಶ್ಮೀರದಲ್ಲಿ ಪುನರುತ್ಥಾನಗೊಳಿಸಿದ ಮಸುಗುಪ್ತನಿಗೆ ಮುಖ್ಯ ಶಿಷ್ಯನಾದ ಈತ ಶಿವಸೂತ್ರಗಳಲ್ಲಿರುವ ಗುಪ್ತ ತತ್ವಗಳನ್ನು ಪ್ರಚಾರಮ ಮಾಡಿದ್ದಲ್ಲದೆ ಸ್ಪಂದಕಾರಿಕೆಗೆ ಸ್ಪಂದಸರ್ವಸ್ವ ಎಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. ಈತನ ಸ್ಪಂದವೃತ್ತಿಗಳನ್ನು ಸ್ಪಂದಾಮೃತದ ನಿಷ್ಯಂದ(ಪ್ರವಾಹ)ಗಳೆಂದು ಹೊಗಳಿದ್ದಾರೆ. ಇಷ್ಟೇ ಅಲ್ಲದೆ ಶಿವಸೂತ್ರಗಳನ್ನು ವಿವರಿಸಿ ತತ್ತ್ವಾರ್ಥಚಿಂತಾಮಣಿ ಮತ್ತು ಮಧುವಾಹಿಣಿ ಎಂಬ ಗ್ರಂಥಗಳನ್ನು ಈತ ರಚಿಸಿದ್ದಾನೆ. (ಜೆ.ಆರ್.) ಕಲ್ಲನ್ನು ತೆಗೆಯುವುದು: ಭೂಗರ್ಭದಿಂದ ಕಲ್ಲನ್ನು ತೆಗೆಯುವ ಕಲೆ (ಸ್ಟೋನ್ ಕ್ವಾರಿಯಿಂಗ್). ಹಿಂದೆ ಕಲ್ಲನ್ನು ತೆಗೆಯುತ್ತಿದ್ದ ಒರಟಾದ ಕ್ರಮಗಳು ಹೋಗಿ ಈಗ ದಕ್ಷವಾದ ಯಾಂತ್ರಿಕ ವಿಧಾನಗಳು ಬಂದಿವೆ. ವ್ಯಾಪಾರಕ್ಕಾಗಿ ತೆಗೆಯುವ ಕಲ್ಲುಗಳು:೧ ಅಗ್ನಿಜನ್ಯ, ೨ಜಲಜ, ೩ ಪರಿವರ್ತಿತ-ಈ ವರ್ಗಗಳಿಗೆ ಸೇರಿವೆ. ಮೊದಲನೆಯ ವರ್ಗದಲ್ಲಿ ಗ್ರಾನೈಟ್ ಮುಖ್ಯವಾದದ್ದು. ಎರಡನೆಯ ವರ್ಗದಲ್ಲಿ ಸುಣ್ಣಕಲ್ಲುಗಳು, ಮರಳುಕಲ್ಲುಗಳು, ಷೇಲುಗಳು ಸೇರಿವೆ. ಇದು ಪದರ ಪದರವಾಗಿರುತ್ತವೆ. ಮೂರನೆಯ ವರ್ಗದಲ್ಲಿ ಮೊದಲ ಎರಡು ವರ್ಗಗಳ ಕಲ್ಲುಗಳು ಪರ್ವತಗಳ ಸೃಷ್ಟಿಯಲ್ಲಿ ಪ್ರಚಂಡವಾದ ಒತ್ತಡಕ್ಕೆ ಸಿಕ್ಕಿ ಮಾರ್ಪಾಡಾಗಿರುತ್ತವೆ. ಕಲ್ಲಿನ ಕೈಗಾರಿಕೆಯಲ್ಲಿ ಮುಖ್ಯವಾಗಿ ತೆಗ್ರ್ಯುವ ಕಲ್ಲುಗಳು:೧ ಕಮಾನಿನ ಕಲ್ಲುಗಳು, ೨ ಕಟ್ಟಡದ ಕಲ್ಲುಗಳು, ೩ ಕಲ್ಲಿನ ಜಲ್ಲಿ. ನೆಲದ ಮೇಲಿರುವ ಗಟ್ಟಿಯಾದ ಗ್ರಾನೈಟಿನ ಬಂಡೆಗಳನ್ನು ಅವುಗಳಿಂದ ಅಲ್ಲಲ್ಲಿ ಸಣ್ಣ ಕುಳಿಗಳನ್ನು ಮಾಡಿ ಸುತ್ತಿಗೆಗಳಿಂದ ಹೊಡೆದು ಸೀಳಿ ದಿಮ್ಮಿಗಳನ್ನು ತೆಗೆಯುತ್ತಾರೆ. ದಿಮ್ಮಿಗಳನ್ನು ಕಮಾನಿನ ಕಲ್ಲಿನ ಅಳತೆಗೆ ಉಳಿಗಳಿಂದ ನಯವಾಗಿ ಮಾಡುತ್ತಾರೆ. ಕಟ್ಟಡವನ್ನು ಕಟ್ಟುವ ಅಳತೆಗಲ್ಲುಗಳನ್ನು ಈಗಲೂ ಅಂದವಾಗಿ ಹೊರಮುಖವುಳ್ಳ ದೊಡ್ಡ ಮನೆಗಳನ್ನು, ಕಚೇರಿಗಳನ್ನು ನಿರ್ಮಿಸಲು(ಒಳ್ಳೆಯ ಕಲ್ಲು ಸಿಕ್ಕುವ ಕಡೆಗಳಲ್ಲಿ) ಬಳಸುತ್ತಿದ್ದಾರೆ. ಎಲ್ಲಾ ಬಂಡೆಗಳಿಂದಲೂ ಲಕ್ಷಣವಾದ ಅಳತೆಗಳನ್ನು ತೆಗೆಯಲಾಗುವುದಿಲ್ಲ. ಬಣ್ಣದಲ್ಲಿಯೂ ಕಲ್ಲು ಏಕರೀತಿಯದಾಗಿರಬೇಕು. ಎಲ್ಲ ಕಲ್ಲುಗಳಲ್ಲಿಯೂ ಸಂಧಿಗಳಿರುತ್ತವೆ(ಜಾಯಿಂಟ್ಸ್). ಇದು ತೀರ ಹತ್ತಿರವಾಗಿದ್ದರೆ ದೊಡ್ಡ ಕಲ್ಲುಗಳನ್ನು ಸೀಳುವುದಕ್ಕಾಗುವುದಿಲ್ಲ. ಕಲ್ಲನ್ನು ಸೀಳಲು ಅನುಕೂಲವಾದ ಬಂಡೆ ದೊರೆತಮೇಲೆ ಮೇಲಿನ ಮಣ್ಣನ್ನು ತೊಡಿ ತೆಗೆದು ಕಲ್ಲು ಹೊರಕ್ಕೆ ಕಾಣುವ ಹಾಗೆ ಮಾಡಬೇಕು. ಈ ಕೆಲಸದಲ್ಲಿ ದೈನಮೇಟಿನಂಥ ಸ್ಫೋಟಕಗಳಿಂದ ಪ್ರಯೋಜನವಿಲ್ಲ. ಅವಶ್ಯವಾದ ಕಡೆ ಕರಿಯ ಮದ್ದನ್ನು ಉಪಯೋಗಿಸಿ ದಿಂಡುಗಳನ್ನು ಒಡೆದು ಅವನ್ನು ಸೀಳಿ ಅಳತೆಗಲ್ಲುಗಳನ್ನು ತೆಗೆಯಬೇಕು. ಸಾಮಾನ್ಯವಾಗಿ ಕರಿಯ ಮದ್ದನ್ನೂ ಬಳಸದೆ ಬಂಡೆಯ ಒಂದು ಮುಖವನ್ನು ೩'-೪' ಆಳದ ವರೆಗೂ ಆಂಚಿನಿಂದ ಸುಮಾರು ೩' ದೂರದಲ್ಲಿ ಹತ್ತಿರ ಹತ್ತಿರವಾಗಿ ಕುಳಿಗಳನ್ನು ಹಾಕಿ ಮಧ್ಯದ ದಿಓಡನ್ನು ಅವುಗಳಿಂದ ಸೀಳುತ್ತಾರೆ. ಆಮೇಲೆ ಬೇಕಾದ ಅಳತೆಗೆ ಕಲ್ಲುಗಳನ್ನು ತೆಗೆಯುತ್ತಾರೆ. ಕೈಯಿಂದ ಕೆಲಸಮಾಡುವಾಗ ದಿಮ್ಮಿಗಳು ಚಿಕ್ಕದಾಗಿರುತ್ತವೆ. ಯಂತ್ರಗಳನ್ನು ಉಪಯೋಗಿಸಿದಾಗ ದೊಡ್ಡ ಅಳತೆಯ ದಿಮ್ಮಿಗಳನ್ನು ತೆಗೆದು ಆಮೇಲೆ ಒತ್ತಡದ ಗಾಳಿಯಿಂದ ಕುಳಿಗಳನ್ನು ತೋಡಿ ಬೇಕಾದ ಅಳತೆಗೆ ಅವುಗಳಿಂದ ಗುರುತುಮಾಡಿಸೀಳಿಕೊಳ್ಳುತ್ತಾರೆ. ದಿಂಡುಗಳನ್ನು ಲಾರಿಗಳ ಮೇಲೆ ಕೆಲಸದ ಹತ್ತಿರಕ್ಕೆ ಸಾಗಿಸಿ ಇಷ್ಟವಾದ ಅಳತೆಯಲ್ಲಿ , ರೀತಿಯಲ್ಲಿ, ನಯವಾಗಿ ಮಾಡುತ್ತಾರೆ. ಗುಂಡಾದ ಕಂಬಗಳನ್ನು ಚರಿಕೆಯ ಯಂತ್ರದಿಂದ ತಯಾರಿಸಬಹುದು. ಚಪ್ಪಡಿಗಳನ್ನು ಉಜ್ಜಿ ಯಾವ ನಯಕ್ಕೆ ಬೇಕಾದರೂ ಇಳಿಸಿಕೊಳ್ಳಬಹುದು. ಹಿಂದೆ ಕಡಪದ ಕಲ್ಲುಗಳನ್ನು ಮಾಡು, ನೆಲ, ಮಹಡಿಯ ಮೆಟ್ಟಲು-ಇವುಗಳಿಗೆ ಧಾರಾಳವಾಗಿ ಬಳಸುತ್ತಿದ್ದರು. ಭದ್ರಕಾಂಕ್ರೀಟು ಬಂದಮೇಲೆ ಇದನ್ನು ಮಾಡಿಗೆ ಬಳಸುವುದು ನಿಂತುಹೋಗಿದೆ. ನೆಲಕ್ಕೆ ಸಿಮೆಂಟ್ ಕಾಂಕ್ರೀಟನ್ನೂ ಅನೇಕ ಮಾದರಿಗಳ ನೆಲದ ಹಂಚುಗಳನ್ನೂ ಉಪಯೋಗಿಸುತ್ತಾರೆ. ಗಾಳಿ ಮಳೆಗಳಿಗೆ ಒಡ್ಡಿದಾಗ ಕಲ್ಲು ಶಿಥಿಲವಾಗುತ್ತದೆ. ಇಲ್ಲವೆ ಬಣ್ಣ ಕೆಡುತ್ತದೆ. ಆದರೆ ಕಲ್ಲಿನ ಗುಣ ಶ್ರೇಷ್ಠವಾಗಿದ್ದರೆ ಅದು ಮಾಸುವುದಿಲ್ಲ. ಹಿಂದೆ ಭಾರತದಲ್ಲಿ ಗ್ರಾನೈಟ್ ಕಲ್ಲಿನಿಂದಲೂ ದೇವಾಲಯಗಳಲ್ಲಿ ಕೊರೆದಿರುವ ವಿಗ್ರಹಗಳೂ ಕಂಬಗಳೂ ಸಾವಿರಾರು ವರ್ಷಗಳ ಮೇಲೂ ಕೆಡದೆ ಇರುವುದನ್ನು ಈಗಲೂ ನಾವು ನೋಡುತ್ತಿದ್ದೇವೆ. ಕಟ್ಟಡದ ಕಲ್ಲು ಕೆಡಲು ಮುಖ್ಯವಾದ ಕಾರಣಗಳು ಇವು: ೧ ನೀರು ಗಡ್ಡೆಕಟ್ಟುವಷ್ಟು ಶೈತ್ಯ, ಇಲ್ಲವೆ ಫನೀಭವಿಸಿದ ಮಂಜು. ಈ ಸ್ಥಿತಿಯಲ್ಲಿ ಸಿಕ್ಕಿಕೊಂಡ ನೀರು ಗಡ್ಡೆಕಟ್ಟಿದಾಗ ವಿಸ್ತಾರವಾಗಿ ಕಲ್ಲಿನ ಕಣಗಳನ್ನು ಸಡಲಿಸುತ್ತದೆ. ೨ ಮರಳುಗಲ್ಲಿನಲ್ಲಿ ಗಟ್ಟಿಯಾದ ಸಿಲಿಕದ ಕಣಗಳನ್ನು ಬಿಗಿದಿರುವ ಅಂಟಿನ ಸಾಮಗ್ರಿ ಬಲಿಷ್ಠವಾಗಿಲ್ಲದೆ ಇರುವಾಗ ಕಲ್ಲಿನ ರಚನೆಯೇ ಶಿಥಿಲವಾಗಬಹುದು. ೩ ಮಳೆಯಲ್ಲಿಯೂ ಗಾಳಿಯಲ್ಲಿರುವ ತೇವದಲ್ಲಿಯೂ ಗಂಧಕದ ಆಮ್ಲಗಳು ಕೊಂಚ ಇರುತ್ತವೆ. ಅದು ಸಣ್ಣಕಲ್ಲಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟನ್ನು ಬಹಳ ನಿಧಾನವಾಗಿ ಕೊರೆಯುತ್ತವೆ. ೪ ದೂಳು ಮತ್ತು ಮರಗಳನ್ನು ಹೊತ್ತುತರುವ ಗಾಳಿಯೂ ಒಂದು ಕಾರಣ. ಮರಳು ಗಾಳಿ ಹೆಚ್ಚಾದ ಈಜಿಪ್ಪಿನಲ್ಲಿರುವ ಸ್ವಿಂಕ್ಸ್ ವಿಗ್ರಹ ಈ ರೀತಿಯಲ್ಲಿ ಸ್ವಲ್ಪ ಸವೆದು ಹೋಗಿದೆ. ೫ ಭಾರತದ ಹಳೆಯ ದೇವಸ್ಥಾನಗಳಲ್ಲಿ, ಕಲ್ಲಿನ ಗೋಪುರದ ಸಂದುಗಳಲ್ಲಿ ಹಕ್ಕಿಗಳು ಬೀಳಿಸಿದ ಬೀಜಗಳಿಂದ ಮಳೆಗಾಲದಲ್ಲಿ ಹುಟ್ಟುವ ಗಿಡಗಳಿಂದಲೂ ಕಲ್ಲುಹೂವಿನಿಂದಲೂ ಹೆಚ್ಚಿನ ಘಾಸಿ ಉಂಟಾಗುತ್ತದೆ. ಕಟ್ಟಡಗಳನ್ನು ನೋಡಿಕೊಳ್ಳುವ ಸಿಬ್ಬಂದಿಯಿರುವ ಕಡೆ ಇವನ್ನು ತೆಗೆಯಬಹುದು. ಆದರೆ ಮೊಲೆಯಲ್ಲಿರುವ ಕಲಾಕೃತಿಗಳೆಷ್ಟೋ ಈ ಕಾರಣದಿಂದ ಉರುಳಿಹೋಗಿವೆ.

ಒಂದೇ ಸಮವಾಗಿ ಶತಮಾನಗಳಿಂದ ಬಿಸಿಲನ್ನೂ ಗಾಳಿಯನ್ನೂ ಎದುರಿಸಿ ನಿಂತಿರುವ ಶ್ರವಣಬೆಳಗೊಳದ ಗೋಮಟೇಶ್ವರ ವಿಗ್ರಹದಲ್ಲಿ ಕೆಲವು ಕಡೆ ಬಹಳ ತೆಳುವಾದ ಪದರಗಳು ಹೊರಬರುತ್ತಿವೆ. ಅದಕ್ಕೆ ಬಣ್ಣವನ್ನು ಬಳಿಯುವ ಹಾಗಿಲ್ಲ. ಸೋಡಿಯಮ್ ಸಿಲಿಕೇಟ್ ಇರುವ ರಾಸಯನಿಕಗಳನ್ನು ಬಳಿದಾಗ ಅದು ಸುಣ್ಣದೊಂದಿಗೆ ಸೇರಿ ನೀರಿನಲ್ಲಿ ಕರಗದೆ ಇರುವ ಕ್ಯಾಲ್ಸಿಯಂ ಸಿಲಿಕೇಟ್ ಆಗಿ ಸಣ್ಣ ರಂಧ್ರಗಳನ್ನೂ ಪದರಗಳನ್ನೂ ತುಂಬುತ್ತದೆ.