ಪುಟ:Mysore-University-Encyclopaedia-Vol-4-Part-1.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಲಿನ ಆಯುಧಗಳು ಮಾನವ ನಿರ್ಮಿಸಿ ಉಪಯೋಗಿಸಿದ್ದಿರಬಹುದಾದರೂ ಪ್ರಕೃತಿಯಲ್ಲಿ ಬೇಗ ನಾಶಹೊಂದುವ ಮೂಳೆ ಮರಗಳ ಅಯುಧೋಪಕರಣಗಳು ದೊರಕಿಲ್ಲ, ನಮಗೆ ದೊರಕಿರುವ ಅತ್ಯಂತ ಪ್ರಾಚೀನವಾದವು ಕಲ್ಲಿನ ಆಯುಧಗಳು. ಆದುದರಿಂದ ಮಾನವನ ಉಗಮಮ ಮತ್ತು ವಿಕಾಸಗಳ ಅಧ್ಯಯನಕ್ಕೆ ಕಲ್ಲಿನ ಆಯುಧಗಳು ಮುಖ್ಯ ಆಧಾರಗಳಾಗಿವೆ.ಕತ್ತರಿಸುವ ಮತ್ತು ಚೂಪಾದ ಆಯುಧಗಳನ್ನು ನಿರ್ಮಿಸುವ ಮೊದಲು ಮಾನವ ದೀರ್ಘಕಾಲದವರೆಗೂ ವಿವಿಧ ಹಣ್ಣು, ಗೆಡ್ಡೆಗೆಣಸು, ಬೇರು ಮತ್ತು ಎಲೆಗಳನ್ನೂ ಸಣ್ಣಪ್ರಾಣಿಗಳು, ಕೀಟಗಳು ಮತ್ತು ಜಲಚರಗಳನ್ನೂ ತಿನ್ನುತ್ತಿದ್ದಿರಬೇಕು. ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲಲೂ ಹಾಗೆ ಕೊಂದ ಪ್ರಾಣಿಗಳ ಚರ್ಮ ಸುಲಿದು ಮಾಂಸವನ್ನು ಬೇರ್ಪಡಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿ ತಿನ್ನಲೂ ಬೇಕಾದ ಬಲವಾದ ಹಲ್ಲು, ಉಗುರುಗಳೂ ಇವನಿಗಿರಲಿಲ್ಲ. ಆದುದರಿಂದ ಈತ ಆಯುಧ ನಿರ್ಮಾಣದ ಅನಂತರವೇ ಮಾಂಸವನ್ನು ಮುಖ್ಯ ಆಹಾರವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಯಿತು. ಅತ್ಯಂತ ಪುರಾತನವಾದ ಕಲ್ಲಿನ ಆಯುಧಗಳನ್ನು ಉಂಡೆಕಲ್ಲಿನ ಆಯುಧಗಳೆಂದು ಕರೆಯಲಾಗಿದೆ. ಸರಳ ರೀತಿಯ ಈ ಆಯುಧಗಳನ್ನು ಪ್ಲಿಸ್ಟೊಸೀನ್ ಏಷ್ಯ ಖಂಡಗಳಲ್ಲಿ ಬಳಸುತ್ತಿದ್ದರು. ನದೀಕಣಿವೆಗಳಲ್ಲಿ ದೊರಕುವ ಉಂಡೆಕಲ್ಲುಗಳ ಒಂದು ಮುಖದಿಂದ ೩-೪ ಚಕ್ಕೆಗಳನ್ನು ತೆಗೆದು ಡೊಂಕಾದ ಅಂಚುಳ್ಳ ಕಲ್ಲುಮಚ್ಚು ಮುಂತಾದ ಭಾರವಾದ ಆಯುಧಗಳನ್ನು ನಿರ್ಮಿಸುತ್ತಿದ್ದರು. ಪ್ರಾರಂಭದೆಶೆಯ ಈ ಉಂಡೆ ಕಲ್ಲಿನ ಆಯುಧಗಳನ್ನು ಪ್ರಾಕೃತಿಕವಾಗಿ ಒಡೆದ ಮುರುಕು ಕಲ್ಲುಗಳಿಂದ ಪ್ರತ್ಯೇಕಿಸುವುದು ಕಷ್ಟಸಾಧ್ಯವಾದರೂ ಕ್ರಮೇಣ ಮಾನವನಿರ್ಮಿತ ಆಯುಧಗಳು ವಿಶಿಷ್ಟ ರೂಪರೇಷೆಗಳನ್ನು ಪಡೆದುಕೊಂಡವು. ಅಲ್ಲದೆ ಇವು ಹೆಚ್ಚು ಸಂಖ್ಯೆಯಲ್ಲಿ ದೊರಕುತ್ತಯಾದುದರಿಂದ ಇವನ್ನು ಸುಲಭವಾಗಿ ಗುರುತಿಸುವುದು ಸಾಧ್ಯವಾಯಿತು. ಅನಂತರ ಕಾಲದಲ್ಲಿ ಈ ಸರಳ ರೀತಿಯ ಉಂಡೆಕಲ್ಲಿನ ಡೊಂಕು ಅಂಚಿನ ಆಯುಧಗಳಿಂದ ಕಊಶಲ್ಯಪುರ್ಣವೂ ನೇರ ಮತ್ತು ನಿರ್ದಿಷ್ಟ ಆಕಾರವೂ ಅದ ಕೈಗೊಡಲಿ ರೂಪಿತವಾಗಿ, ಪೂರ್ವಶಿಲಾ ಯುಗದಲ್ಲಿ ಅತ್ಯಂತ ಪ್ರಮುಖವಾಗಿದ್ದ ಕೈಗೊಡಲಿ ಸಂಸ್ಕೃತಿ ಹುಟ್ಟಿಕೊಂಡಿತು. ಬಹುಕಾಲದವರೆಗೂ ಉಂಡೆಕಲ್ಲಿನ ಮಚ್ಚುರತಿಗಳು ಉಳಿದುಬಂದರೂ ಕ್ರಮೇಣ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿತವಾಗುತಿದ್ದ ಕೈಕೊಡಲಿಗಳು ಸಾಧಾರಣವಾಗಿ ಚೂಪಾದ ಮೊನೆ ಹೊಂದಿದ್ದು, ತ್ರಿಕೋನಾಕಾರ ಅಥವಾ ಅಂಡಾಕಾರವಾಗಿರುತ್ತಿದ್ದುವು. ಕೆಲಕಾಲಾನಂತರ ಅಗಲವಾದ ಮತ್ತು ಹರಿತವಾದ ಅಂಚುಗಳಿದ್ದ ಕ್ಲೀವರ್ ಕೊಡಲಿಗಳೂ ಬಳಕೆಗೆ ಬಂದುವು ಇವಲ್ಲದೆ ಆ ಕಾಲದ ಪಾನರು ಭೋಥಾಸ್ ಎಂಬ ಗುಂಡುಕಲ್ಲುಗಳನ್ನು ಚರ್ಮದ ಚೀಲಗಳಲ್ಲಿ ಸುತ್ತಿ ಚರ್ಮದ ದಾರದ ತುದಿಗೆ ಕಟ್ಟಿ ಓಡುತ್ತಿದ್ದ ಬೇಟೆ ಪ್ರಾಣಿಗಳ ಕಾಲುಗಳಿಗೆ ಸುತ್ತಿಕೊಳ್ಳುವಂತೆ ಎಸೆಯುತಿದ್ದರು. ಈಗಲೂ ಕೆಲ ಹಿಂದುಳಿದ ಜನರಲ್ಲಿ ಈ ರೀತಿಯ ಬೇಟೆಯ ಪದ್ಧತಿ ಉಳಿದು ಬಂದಿದೆ. ಮತ್ತೆ ಆಯುಧನಿರ್ಮಾಣದಿಂದ ಬಂದ ಚಕ್ಕೆಕಲ್ಲುಗಳಿಂದ ಮಾಡಿದ ಈತರ ಆಯುಧಗಳನ್ನು ಇವರು ಬಳಸುತ್ತಿದ್ದುದಕ್ಕೆ ಹಲವಾರು ಮಾಹಿತಿಗಳು ಕಂಡು ಬಂದಿವೆ. ಪ್ರಾರಂಭದೆಶೆಯ ಚಕ್ಕೆಕಲ್ಲಿನಾಯುಧಗಳಿಗೆ ನಿರ್ದಿಷ್ಟ ಆಕಾರಗಳಿಲ್ಲದಿದ್ದುದರಿಂದ ಸಂಶೋಧಕರು ಅವುಗಳಿಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಕೆಲಕಾಲಾನಂತರ ಚಕ್ಕೆಕಲ್ಲಿನಾಯುಧಗಳೇ ಮುಖ್ಯವಾಗಿದ್ದ ಸಂಸ್ಕೃತಿಗಳು ಹುಟ್ಟಿಕೊಂಡುದರಿಂದ ಅವುಗಳ ಪ್ರಾಮುಖ್ಯತೆ ಬೆಳಕಿಗೆ ಬಂದಿತು. ಕೈಕೊಡಳಲಿಗಳನ್ನು ಕಲ್ಲಿನ ಮಧ್ಯಭಾಗ ಅಥಾವ ತಿರುಳಿನಿಂದ ಮಾಡುತ್ತಿದ್ದುದರಿಂದ ಅವನ್ನು ಆಯುಧಗಳೆಂದು ಕ್ಲಾಕ್ಟೋನಿಯನ್ ಲೆವಾಲ್ವಾಸಿಯನ್ ಮೌಸ್ಟೀರಿಯನ್ ಮುಂತಾದ ಸಂಸ್ಕೃತಿಗಳನ್ನು ಚಕ್ಕೆಕಲ್ಲಿನ ಆಯುಧ ಸಂಸ್ಕೃತಿಗಳೆಂದೂ ಕರೆಯುತ್ತಾರೆ. ಆದರೆ ಕೈಕೊಡಲಿ ಸಂಸ್ಕೃತಿಗಳೊಂದಿಗೆ ತಿರುಳ್ಗಲ್ಲಿನ ಆಯುಧಗಳೂ ಉಪಯೋಗದಲ್ಲಿದ್ದ ಅಂಶವನ್ನು ಗಮನಿಸಿದಾಗ ಈ ರೀತಿಯ ಪ್ರತ್ಯೇಕತೆ ಸರಿಯಾಗಲಾರದು. ಈ ಎರಡು ಗುಂಪಿನ ಸಂಸ್ಕೃತಿಗಳು ಯುರೋಪಿನಲ್ಲಿ ಬಹುಮಟ್ಟಿಗೆ ಸಮಕಾಲಿನವಾಗಿದ್ದು ಪರಸ್ಪರವಾಗಿ ಪ್ರಭಾವಗೊಂಡಿದ್ದುವು. ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲದ ಲೆವಾಲ್ವಾಸಿಯನ್ ಸಂಸ್ಕೃತಿಯಲ್ಲಿ ಸಣ್ಣಗಾತ್ರದ ಕೈ ಗೊಡಲಿಗಳೂ ನಿರ್ಮಿತವಾಗುತ್ತಿದ್ದುವು. ಕ್ಲಾಕ್ಟೋನಿಯನ್ ಸಂಸ್ಕೃತಿಯಿಂದ ಹುಟ್ಟಿಕೊಂಡ ಮೌಸ್ಟೀರಿಯನ್ ಸಂಸ್ಕೃತಿಯಲ್ಲಿ ಹೃದಯಾಕಾರದ ಸಣ್ಣ ಕೈಕೊಡಲಿಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದುವು. ಪೂರ್ವಶಿಲಾಯುಗದ ಕೊನೆಯ ಭಾಗದಲ್ಲಿ ಆಯುಧ ತಯಾರಿಕೆ ಕೌಶಲ್ಯಪೂರ್ಣವಾಯಿತು. ಹಲವಾರು ರೀತಿಯ ವಿಶಿಷ್ಟವಾದ ಆಯುಧ, ಉಳಿ, ಭಲ್ಲೆಯ ಮೊನೆ, ಬಾಣದ ಮೊನೆ ಮುಂತಾದ ವೈಶಿಷ್ಟ್ಯಪಪೂರ್ಣ ಆಯುಧಗಳು ಇತರ ಸಾಧಾರಣ ರೀತಿಯ ಆಯುಧಗಳೊಂದಿಗೆ ತಯಾರಾಗುತ್ತಿದ್ದವು. ಬ್ಲೂರಿಯನ್ ಮರ, ದಂತ, ಮೂಳೆ ಮತ್ತು ಕೊಂಬುಗಳಿಂದ ಉತ್ತಮ ರೀತಿಯ ಆಯುಧೋಪಕರಣಕಗಳನ್ನು ತಯಾರಿಸಲು ಸಾಧ್ಯವಾಯಿತು. ಅಲ್ಲದೆ ಕೆತ್ತನೆಯ ಕಲೆಯೂ ಬೆಲೆತಯುವಂತಾಯಿತು. ಈ ಕಾಲದ ಆಯುಧಗಳು ಸಾಧಾರಣವಾಗಿ ಸಣ್ಣವಾಗಿದ್ದು ಅವನ್ನು ಸುಲಭವಾಗಿ ಸ್ಥಳದಿಂದ ಹೊತ್ತುಕೊಂಡು ಹೋಗಬಹುದಾಗಿತ್ತು. ಅನಂತರದ ಕಾಲದಲ್ಲಿ ೧ರಿಂದ ೩-೪ ಅಂಗುಲಗಳ ಉದ್ದ, ೨ ರಿಂದ ೪ ಅಂಗುಲ ಅಗಲವಿರುತ್ತಿದ್ದ ಸೂಕ್ಷ್ಮ ಶಿಲಾಆಯುಧಗಳ ರೂಢಿಗೆ ಬಂದವು. ಆ ಕಾಲದ ಮಾನವ ಆಯುಧ ನಿರ್ಮಾಣ ಕಲೆಯಲ್ಲಿ ಪರಿಶ್ರಮಪಡೆದಿದ್ದನೆಂಬುದನ್ನೂ ಇವು ಸೂಚಿಸುತ್ತವೆ. ಮರ ಮೂಲೆಗಳ ಹೊರ ಕಟ್ಟಿನಲ್ಲಿ ಕಲ್ಲಿನ ಕೂರಲಗುಫಲಕ ಮೊನೆಗಳನ್ನು ಜೋಡಿಸಿ ಪರಿಣಾಮಕಾರಿಯಾದ ಆಯುಧಗಳನ್ನು ತಯಾರಿಸಿ ಕುಯ್ಯಲು, ಕತ್ತರಿಸಲು, ಹೆರೆಯಲು ಮತ್ತು ಇನ್ನೂ ಹಲವಿಧ ಕಾರ್ಯಗಳಿಗೆ ಅವನ್ನು ಮಧ್ಯಶಿಲಾಯುಗ ಕಾಲದಲ್ಲಿ ಉಪಯೋಗಿಸುತ್ತಿದ್ದರು. ನವಶಿಲಾಯುಗದ ಕಾಲದಲ್ಲಿ ಉಜ್ಜಿ ನಯಗೊಳಿಸಲಾಗುತ್ತಿತ್ತು. ಹೀಗೆ ನಯಹಗೊಳಿಸಿದ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದವು. ಇಂಥ ಮರಗಳನ್ನು ಕತ್ತರಿಸಿ ವ್ಯವಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುವುದಲ್ಲದೆ, ಮರದ ದಿಮ್ಮಿಗಳಿಂದ ಗುಡಿಸಲುಗಳನ್ನು ನಿರ್ಮಿಸಲು ಸಾಧ್ಯವಾಯಿತು. ಇದರಿಂದ ಮಾನವ ಪ್ರಾಕೃತಿಕ ವಸತಿಗಳಾದ ಪರ್ವತಗುಹೆ, ಗುಹಾಮುಖ ಅಥವಾ ತಾನು ನಿರ್ಮಿಸಿದ ಚರ್ಮದ ಗುಡಾರಗಳನ್ನು ತ್ಯಜಿಸಿ, ತನಗೆ ಅನುಕೂಲಕರವಾದ ಸ್ಥಳಗಳಲ್ಲಿ ಸುಭದ್ರವಾದ ವಸತಿಗಳನ್ನು ಸ್ಥಾಪಿಸಿಕೊಂಡು ನೆಲೆನಿಂತು ಜೀವನ ನಡೆಸಲು ಮತ್ತು ಇದರಿಂದ ವ್ಯವಸಾಯ ಪದ್ಧತಿ, ಪಶುಪಾಲನೆ, ಅವಶ್ಯವಾದ ಗೃಹೋಪಕರಣಗಳ ನಿರ್ಮಾಣ ಮುಂತಾದ ಉಪಯುಕ್ತ ಕಲೆಗಳನ್ನು ಬೆಳೆಸಿಕೊಂಡು ತನ್ನ ಅಲೆಮಾರಿಜೀವನ ಕೊನೆಗಾಣಿಸಲು ಸಾಧ್ಯವಾಯಿತು. ತಯಾರಿಕೆಯ ವಿಧಾನಗಳು; ಹಲವಾರು ಲಕ್ಷವರ್ಷಗಳಿಂದ ೩-೪ ಸಾವಿರ ವರ್ಷಗಳ ಹಿಂದಿನ ವರೆಗೂ ರೂಢಿಯಲ್ಲಿದ್ದ ಈ ಶಿಲೋಪಕರಣಗಳನ್ನು ಮಾಡುತ್ತಿದ್ದ ವಿಧಾನಗಳನ್ನು ಪ್ರತ್ಯಕ್ಷಪ್ರಮಾಣಗಳಿಂದ ಶ್ರುತಪಡಿಸುವುದು ಅಸಾಧ್ಯ. ಆದರೂ ಆಯುಧಗಳ ತಯಾರಿಕೆಗೆ ಬಳಸಲಾದ ವಸ್ತುಗಳು, ಆಯುಧಗಳ ಆಕಾರ, ಅವುಗಳ ಮೇಲೆ ಕಂಡುಬರುವ ಕೈಚಳಕ ಮುಂತಾದ ಅಂಶಗಳನ್ನು ಪುರಾತತ್ವಜ್ನರು ಪರಿಶೀಲಿಸಿದ್ದಾರಲ್ಲದೆ ಈಗಲೂ ಪ್ರಪಂಚದ ಹಲಮೂಲೆಗಳಲ್ಲಿ ಶಿಲಾಯುಗ ಸಂಸ್ಕೃತಿ ಮಟ್ಟದಲಿ ವಾಸಿಸುತ್ತಿರುವ ಆದಿಮ ಜನಾಂಗಗಳು ಆಯುಧ ತಯಾರಿಸುವ ರೀತಿಗಳನ್ನು ಅಭ್ಯಾಸ ಮಾಡಿದ್ದಾರೆ. ಇವುಗಳ