ಪುಟ:Mysore-University-Encyclopaedia-Vol-4-Part-1.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಚ-ದಪ್ಪ ಕವಚಗಳಿಂದ ಸಜ್ಜಾದ ಆರು ಸಾವಿರ ಕುದುರೆಗಳಿದ್ದುದು ಕಂಡುಬಂದಿತು.ಪ್ರಶ ಹದಿನಾರನೆಯ ಶತಮಾನದ ವೇಳೆಗೆ ಕುದುರೆ ಮನುಷ್ಯನಂತೆ ಅಕ್ರಮಣಕ್ಕಾಗಲಿ ಲಿತ್ಮರಕ್ಷಣೆಗಾಗಲಿ ತನ್ನ ಅಂಗಗಳನ್ನು ಲಿಡಿಸಲು ಅನುಕೂಲವಾಗಿಯೂ ಒಳ್ಳೆ ರಕ್ಷೆಯನ್ನು ಕೊಡಲು ಅರ್ಹವಾಗಿಯೂ ಇದ್ದ ಲೋಹಕವಚ ಸಿದ್ಧವಾಯಿತು.ಆ ಕವಚ ಸರಳವಾಗಿರುವ ಬದಲು ಅಂಚುಗಳು.ಉಬ್ಬುತಗ್ಗುಗಳು ಕೆತ್ತನೆಯ ಕೆಲಸಗಳು,ಕೊರೆದು ಮಾಡಿರುವ ಚಿತ್ರಗಳು ಹೀಗೆ ಎಲ್ಲ ವಿಧದಲ್ಲೂ ಅಕ್ಷರಶ್ಃ ಹೊಲಿಗೆ ಬಟ್ಟೆಗಳನ್ನೇ ಹೋಲುತ್ತಿತ್ತು.


ಆದರೆ ಹದಿನೇಳನೆಯ ಶತಮಾನದಲ್ಲಿ ಮದ್ದಿನ ಶಸ್ತ್ರಗಳು ಬಳಕೆಗೆ ಬಂದಾಗ,ಅದರಿಂದ ರಕ್ಷೆ ಪಡೆಯುವ ಸಾಧನವನ್ನೊದಗಿಸಲು ಕಮ್ಮಾರ ನಿರತನಾಗಬೇಕಾಯಿತು.ಆದ ಪ್ರಯುಕ್ತ ಈ ಶೃಂಗಾರಳನ್ನೆಲ್ಲ ತೊರೆದು ದಪ್ಪನಾಗಿರುವ ಲೋಹಫಲಕಗಳನ್ನು ನಿರ್ಮಿಸಬೇಕಾಯಿತು.ಈ ಪ್ರಕಾರ ಬಂದೂಕದವನಿಗೂ ಕಮ್ಮಾರನಿಗೂ ಒಂದು ಸ್ಪರ್ಧೆಯೇ ಏರ್ಪಟ್ಟಿತೆನ್ನಬಹುದು.ಈ ಸ್ಪರ್ಧೆ ಜಗದ್ಯುಧ್ದದಲ್ಲಿ ಬ್ರಿಟಿಷರೂ ಜರ್ಮನರೂ ಗುಂಡು ತೂರದ ಕವಚವನ್ನು ಕಂಡು ಹಿಡಿಯುವವರೆಗೂ ನಡೆಯಿತು.


ಕವಚರಕ್ಷಿತ ರಥ(ಅರ್ಮರ್ ಕಾರ್): ದ್ವಂದ್ವ ಯುದ್ಧಗಳ ಕಾಲ ಮುಗಿದು ರಥಗಳು ಬಳಕೆಗೆ ಬಂದ ಮೇಲೆ ಅವುಗಳ ರಕ್ಷಣೆಗೆ ಲೋಹದ ಕವಚಗಳು ಬೇಕಾದುವು.ಈ ಪ್ರಕಾರವಾಗಿ ಭಾರವಾದ ಲೋಹಗಳ ಫಲಕಗಳಿಂದ ಸಜ್ಜುಗೊಳಿಸಿದ ರಥಗಳೂ ಹಡಗುಗಳೂ ತಯಾರಾದುವು.ಕರ್ನಲ್ ಡೇವಿಡ್ ಸನ್ ಎಂಬಾತ ೧೮೯೬ರಲ್ಲಿ ಅದನ್ನು ಪೆಟ್ರೋಲಿನಿಂದೋಡುವ ಮೂರು ಸಿಲಿಂಡರುಗಳ ಕಾರಿನ ಮೇಲೆ ಕಟ್ಟಿ ಅದಕ್ಕೆ ಕೋಲ್ವ ಮೆಷೀನ್ ಗನ್ನನ್ನು ಅಳವಡಿಸಿದಾಗ(ಅಮೆರಿಕದಲ್ಲಿ) ಈ ರಥ ಮೊದಲ ಬಾರಿಗೆ


ನಿರ್ಮಿತವಾಯಿತು.ಮೇಲಿನ ಅಧಿಕಾರಿಗಳು ಇದರಿಂದ ಎಷ್ಟು ಪ್ರೀತರಾದರೆಂದರೆ ತತ್ ಕ್ಷಣ ಅಮೆರಿಕನ್ ರಾಹುತ ಸೈನ್ಯದ ಐದು ರೆಜಿಮೆಂಟುಗಳಿಗೆ ಇವನ್ನು ಒದಗಿಸಿಕೊಡಬೇಕೆಂದು ಆ ಯನ್ನಿತ್ತರು,ಮತ್ತು ಈ ಹೊಸ ಸಲಕರಣೆಯನ್ನು ಸ್ಥಳ ಶೋಧನೆ ಮತ್ತು ಇತರ ಕರ್ತವ್ಯಗಳಿಗೆ ಹೇಗೆ ಬಳಸಬೇಕೆಂಬುದಕ್ಕೆ ನಿಯಮಗಳನ್ನು ಸ್ಥಳ ಶೋಧನೆ ಮತ್ತು ಇತರ ಕರ್ತವ್ಯಗಳಿಗೆ ಹೇಗೆ ಬಳಸಬೇಕೆಂಬುದಕ್ಕೆ ನಿಯಮಗಳನ್ನು ರಚಿಸದರು,ತದನಂತರ ಇಂಗ್ಲೆಂಡ್ ದೇಶ ಸಹ ಬೇಗನೆ ತನ್ನ ಪ್ರಥಮ ಕವಚರಕ್ಷಿತ ರಥವನ್ನು ನಿರ್ಮಿಸಿತು.ಇದರ ಮಾದರಿಗಳು ಹೆಚ್ಚು ಹೆಚ್ಚು ನಾಜೂಕಾದವು.ಇದು ಗುಪ್ತ ಶಸ್ತ್ರವಾಗಿರುವ ಘಟ್ಟವನ್ನು ಮೀರಿ ಯುದ್ಧದ ಸನ್ನಾಹದಲ್ಲಿದ್ದ ಎಲ್ಲ ರಾಷ್ಟ್ರಗಳೂ ನಿರ್ಮಿಸುವ ಹಂತ ತಲುಪಿತು.ಒಂದನೆಯ ಮಹಾಯುದ್ಧದಲ್ಲಿ ಇಟಲಿ ದೇಶದಲ್ಲಿ ಮೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಘನತರವಾದ ಕವಚರಕ್ಷಿತ ರಥಗಳಿದ್ದುವು.ಇಂದಿನ ಕವಚರಕ್ಷಿತ ರಥ ನಾಲ್ಕು ಚಕ್ರಗಳ ಮೇಲುರುಳುತ್ತದೆ ಮತ್ತು ಅದರಲ್ಲಿ ಎರಡು ಭಿನ್ನ ಒಳವ್ಯಾಸಗಳು(ಕ್ಮಾಲಿಬರ್) ಎರಡು ಮೆಷೀನ್ ಗನ್ನುಗಳಿವೆ.ಮೊದಲು ಊದ್ದೇಶಪಟ್ಟಿದ್ದಂತೆ,ಇದನ್ನು ಈಗಲೂ ಸ್ಥಳ ಸಮೀಕ್ಷೆಗೆ ಊಪಯೋಗಿಸುತ್ತಾರೆ.ಆದರೆ ಸಣ್ಣ ಸಣ್ಣ ಶತ್ರುಸೈನ್ಯವನ್ನು ಎದುರಿಸಲೂ ಇದನ್ನು ಬಳಸಬಹುದು.


ಸೈನಿಕರನ್ನು ಮತ್ತು ನಾವಿಕರನ್ನು ಒಯ್ಯುವುದಕ್ಕೂ ಇತರ ಕೆಲಸಗಳಿಗೂ ಫಲಕಗಳಿಂದ ಸಜ್ಜುಗೊಳಿಸದ ಟ್ರಕ್ಕುಗಳು ಇವೆ.ಇದೇ ಪರಿಯಲ್ಲಿ ,ಪ್ರಯಾಣಿಕರ ಬಂಡಿಗಳನ್ನು ದಾರಿಹೋಕರ ಕಾಟದಿಂದ ತಪ್ಪಿಸಿಕೊಳ್ಳುವುದುಕ್ಕಾಗಿ,ಸಜ್ಜುಗೂಳಿಸುತ್ತಾರೆ.ದಾರಿಗಳ್ಳರ ಮತ್ತು ಪುಂಡರ ಗುಂಪುಗಳ ಹಾವಳಿ ಈವರೆಗೆ ಅಮೆರಿಕದಲ್ಲಿ ಸರ್ವೇಸಾಧಾರಣವಾಗಿತ್ತು.ಇದೇ ಲೋಹ ಫಲಕಗಳಿಂದ ರಕ್ಷಿತವಾಗಿ ರೈಲ್ವೆಟ್ರೇನುಗಳೂ ಇವೆ.ತುಪಾಕಿ ಗುಂಡುಗಳು ಮತ್ತು ಷಾರ್ಪ್ ನೆಲ್ಲುಗಳ ಹೊಡೆತವನ್ನು ತಡೆಯಲು ತಕ್ಕವಾಗಿರುವ ಹಗುರವಾಗಿ ಲೋಹ ಫಲಕಗಳನ್ನು ಇವಕ್ಕೆ ಜೋಡಿಸಿರುತ್ತಾರೆ,ಮತ್ತು ಸಮಯ ಬಂದಾಗ ಶತ್ರುಗಳನ್ನು ಹೊಡೆಯುವುದಕ್ಕೆ ಅನುಕೂಲವಾಗಿರುವಂತೆ ಗನ್ನುಗಳನ್ನು ತಕ್ಕ ತಕ್ಕ ಎಡೆಗಳಲ್ಲಿ ಜೋಡಿಸಿರುತ್ತಾರೆ.


ಕವಚಫಲಕಗಳು(ಆರ್ಮರ್ ಪ್ಲೇಟ್ಸ್):ಷಾರ್ಕ್ ಜಲಚರಗಳಿಂದಾಗಲಿ ಇರಿತವೇ ಮುಂತಾದ ಶತ್ರುವಿನ ಹೊಡೆತಗಳಿಂದಾಗಲಿ ಶಸ್ತ್ರ ಪ್ರಯೋಗದಿಂದಾಗಲಿ ಒಡೆದುಹೋಗದಂತೆ ಹಡಗುಗಳ ಹೊರಮೈಗೆ ತಕ್ಕ ರಕ್ಷಣೆಗಳನ್ನು ಒದಗಿಸುವ ವಿಧಾನ ಪೂರ್ವಕಾಲದವರಿಗೂ ಗೊತ್ತಿತ್ತು.ಪ್ರಶ.ಪೂ.೨೫೦ರಷ್ಟು ಹಿಂದೆ ಸಹ ಚಾಪೆಗಳನ್ನು ಮತ್ತು ದಪ್ಪ ಹಗ್ಗಗಳನ್ನು ಹಡಗಿನ ಸುತ್ತು ಇಳಿಯಬಿಡುತ್ತಿದ್ದುರು.ಆ ಬಳಿಕ ಕಂಚಿನ ಸರಪಣಿಗಳನ್ನು ತೂಗುಬಿಡುತ್ತಿದ್ದರು.ಇನ್ನೂ ಸ್ವಲ್ಪ ಕಾಲದ ಮೇಲೆ ಚರ್ಮವನ್ನು ಹೊದೆಸುತ್ತಿದ್ದರು ನೆಪೋಲಿಯನ್ನನ ಯುದ್ಧಗಳ ಕಾಲಕ್ಮೆ ಬುಲೆಟ್ಟುಗಳೂ ಷೆಲ್ಲೂಗಳೂ ಹಡಗಿನ ಗೋಡೆಗಳನ್ನು ಕೊರೆದು ಒಳಕ್ಕೆ ತೂರದ ಹಾಗೆ ಮಾಡಲು ಸಮರ ನೌಕೆಗಳಿಗೆ ಎರಡು ಅಡಿಗಳ ದಪ್ಪದ ಓಕ್ ಹಲಗೆಗೆಳನ್ನು ಜೋಡಿಸುತಿದ್ದರು.ಊತ್ತಮವಾದ ಫಿರಂಗಿಗಳು ಊಪಯೋಗಕ್ಕೆ ಬಂದ ತರುವಾಯ ಲೋಹ ಫಲಕಗಳು ಬೇಕಾದವು.೧೮೫೯ರ ಹೊತ್ತಿಗೆ ಲೋಹ ಫಲಕಗಳನ್ನು ಹೆಚ್ಚು ಅಭೇದ್ಯವಾಗುವಂತೆ ಮಾಡಲು ಪ್ರಯೋಗಗಳು ನಡೆದವು.ಊತ್ತಮಗೊಳಿಸಿದ ಫಿರಂಗಿಗಳ ಗುಂಡು ಮತ್ತು ಷೆಲ್ಲುಗಳು ಹೊಡೆತವನ್ನು ತಡೆಯಲು ಮೆತು ಕಬ್ಬಿಣದ ಅಥವಾ ಊಕ್ಕಿನ ಹಲಗೆಗಳು ಹೆಚ್ಚು ಊಪಯುಕ್ತವಾಗಿ ಕಂಡವು.ಗ್ಲೋಯರೇ ಎಂಬ ಫ್ರೆಂಚ್ ಹಡಗನ್ನು ಮೊದಲನೆಯದರಿಂದ ಮಾಡಿದ್ದರು.ಅದಕ್ಕೆ ೪ ೩/೪" ದಪ್ಪದ ಕಬ್ಬಿಣದ ಪಕ್ಕಗಳಿದ್ದವು.ಸಮುದ್ರದಲ್ಲಿ ಮೊದಲು ತೇಲಿದ ಕವಚರಕ್ಷಿತ ನೌಕೆಯಿದು.೧೮೬೧ರಲ್ಲಿ ಕಾರ್ಯರಂಗಕ್ಕಿಳಿದ ವಾರಿಯರ್ ಎಂಬ ಬ್ರಿಟಿಷ್ ಹಡಗು ಎರಡನೆಯದು;ಇವುಗಳ ಅನಂತರ ದೊಡ್ಡ ಒಳವ್ಯಾಸವುಳ್ಳ ಫಿರಂಗಿಗಳನ್ನು ಅಳವಡಿಸಿದ ಕವಚರಕ್ಷಿತ ನೌಕೆಗಳು ರೂಪಗೊಂಡವು.


ಕವಚ(ಭಾರತದಲ್ಲಿ):ಕವಚ ಧಾರಣಿ ಭಾರತದಲ್ಲಿ ಇತಿಹಾಸಪೂರ್ವ ಕಲ್ಪದಲ್ಲೂ ವಾಡಿಕೆಯಲ್ಲಿತ್ತೆಂಬುದು ಋಗ್ವೇದದಲ್ಲಿ(೧-೨೫-೧೩)ವರುಣನನ್ನು ಹಿರಣ್ಯಯದ್ರಾಪಿ ಅಂದರೆ ಬಂಗಾರದ ಕವಚವನ್ನು ತೊಟ್ಟವನೆಂದು ವರ್ಣಿಸಿರುವುದರಿಂದ ವಿಶದವಾಗುತ್ತದೆ.ನಮ್ಮ ಪುರಾಣಗಳಲ್ಲಿ ಹಾಗೂ ಮಹಾಕಾವ್ಯಗಳಲ್ಲಿ ಕವಚದ ಸಮಾನವಾಚಕಗಳಾದ ವರೂಥ,ಚರ್ಮ,ವರ್ಮ,ತ್ರಾಣ,ಇತ್ಯಾದಿ ಶಬ್ದಗಳು ಮೇಲಿಂದ ಮೇಲೆ ಊಕ್ತವಾಗಿವೆಯಷ್ಟೇ ಅಲ್ಲದೆ ಆ ಕಾಲದ ಭಾರತೀಯರು ಅಯಸ್,ಪಾರಸವ,ಕಾಂಚನ,ವಜ್ರ,ಚರ್ಮ ಇತ್ಯಾದಿಗಳಿಂದಾದ ದೃಢ ಅಥವಾ ಮೃದುವಾದ ಕವಚಗಳನ್ನು ಧರಿಸುತ್ತಿದ್ದರೆಂದು ಅದೇ ಮೂಲಗಳಿಂದ ತಿಳಿದುಬರುತ್ತದ.

ಇತಿಹಾಸ ಕಲ್ಪದ ಬೇರೆ ಬೇರೆ ಯುಗಗಳಲ್ಲಿ ಭಾರತದಲ್ಲಿ ಬಳಸಲಾಗುತ್ತಿದ್ದ ವಿವಿಧ ಕವಚಗಳನ್ನು ಕುರಿತು ತಿಳಿದುಕೊಳ್ಳುವಲ್ಲಿ ಸಾಹಿತ್ಯ ಕೃತಿಗಳು ಹಾಗೂ ಪ್ರಾಚೀನ ನಾಣ್ಯಗಳು ಸ್ವಲ್ಪ ಮಟ್ಟಿಗೆ ಸಹಾಯ ನೀಡುತ್ತವೆ.ಆಯುಧಾಗಾರದ ಅಧ್ಯಕ್ಷರು ಅವರಣಗಳನ್ನು(ಅಂದರೆ ಕವಚ)ಶಸ್ತ್ರಕಲಾನಿಪುಣರಿಂದ ತಯಾರಿಸಿಡಬೇಕೆಂದು ಸೂಚನೆ ನೀಡುವ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಕ್ಷಿಸುವಂಥ ಪಟ್ಟ:ತಲೆ,ಎದೆ,ಬೆನ್ನು ಮತ್ತು ಕೈಗಳ ಬಿಡಿ ಬಿಡಿ ಭಾಗಗಳಿಂದ ಕೂಡಿದ ಕವಚ;ಸೊಂಟ ಮತ್ತು ಬೆನ್ನನ್ನು ಮಾತ್ರ ಮರೆ ಮಾಡುವಂಥ:ಸೂತ್ರಕ,ಶಿರಸ್ತ್ರಾಣ,ಕಂಠತ್ರಾಣ;ಎದೆ,ಬೆನ್ನನ್ನುಗಳಿಗೆ ಕವಚವಾದ ಕೂರ್ಪಾಸ;ಮೊಳಕಾಲಿನ ವರೆಗಿನ ಕಂಚುಕ;ಹಿಂಗಾಲು ಹಿಮ್ಮಡಿ ವರೆಗಿನ ವಾರವಾಣ;ಕೈಗಳ ರಕ್ಷಣೆಗಾದ;ನಾಗೋದಾರಿಕಾ ಎಂಬೀ ನಾನಾ ಬಗೆಯ ಕವಚಗಳ ಪ್ರಸ್ತಾಪದೊಂದಿಗೆ ಕಬ್ಬಿಣವೇ ಮೊದಲಾದ ಲೋಹಗಳಿಂದಾದ,ಕೋಷ್ಟವಲ್ಲಿ ಇತ್ಯಾದಿ ಬಳ್ಳಿಗಳಿಂದಾದ,ಚರ್ಮ,ಮರ,ಕೊಂಬುಗಳಿಂದಾದ ಇನ್ನೂ ಹಲವು ಬಗೆಯ ಕವಚಗಳ ಪ್ರಸ್ತಾಪವೂ ಕಂಡುಬರುತ್ತದೆ.ಯುದ್ಧಾಶ್ವಗಳಿಗೂ ಆನೆಗಳಿಗೂ ಚರ್ಮದಿಂದಾದ ಕವಚಗಳನ್ನು ತೊಡಿಸಲಾಗುತ್ತಿತ್ತೆಂದು ಶುಕ್ರನೀತಿಯಿಂದ ತಿಳಿದುಬರುತ್ತದೆ.