ಪುಟ:Mysore-University-Encyclopaedia-Vol-4-Part-1.pdf/೩೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


                     ಕಸಾಯಿ ಖಾನೆ

ಕೋಲ್ಕತದಲ್ಲಿ, ನಗರದ ಕಸವನ್ನೆಲ್ಲ ಗುಡ್ಡೆ ಹಾಕಿ ಆಮೇಲೆ ಅದನ್ನು ಬೇಸಾಯಕ್ಕೆ ಬಿಟ್ಟುಕೊಡುವರು. ನೊಣ ಇಲಿಗಳು ಸೇರಿಕೊಂಡು ಕೆಟ್ಟವಾಸನೆ ಹರಡಿ, ಗಾಳಿಗೆ ಕಸ ಹಾರುವುದು ಇದರ ಮುಖ್ಯ ಕೆಡುಕು. ವಾಸದ ಮನೆಗಳಿಂದ ಆದಷ್ಟೂ ದೂರದಿಂದಲ್ಲಿ ಕಸವನ್ನು ಗುಡ್ಡೆಹಾಕಬೇಕು. ಜನಾರೋಗ್ಯ ಕೆಡಿಸಿ, ಗಲೀಜಾಗಿ, ಪರಿಸರವನ್ನೆಲ್ಲ ಬಹಳ ಹೊಲಗೆಡಿಸುವುದರಿಂದ ಎಂದಿಗೂ ಕಸವನ್ನು ಗುಡ್ಡೆ ಹಾಕಲೇಕೂಡದೆಂದು ವಿಶ್ವ ಆರೋಗ್ಯಸಂಸ್ಥೆಯ ಪರಿಣಿತರ ಸಮಿತಿಯೊಂದು ಎಚ್ಚರಿಸಿದೆ.

ಹಳ್ಳತುಂಬಿಕೆ: ಊರಿನಲ್ಲಿ ಸಾಕಷ್ಟು ಹಳ್ಳ, ಕೊಳ್ಳಗರಳಿದ್ದರೆ,ಕ್ರಮವಾಗಿ ಅವನ್ನು ಕಸದಿಂದ ತುಂಬಿ ಮುಚ್ಚಿಹಾಕುವ ಉಪಾಯವಿದು. ಕಸವನ್ನು ಪದರ ಪದರವಾಗಿ ೮ ಅಡಿಗಳ ಆಳಕ್ಕೆ ಹಾಕಿದಮೇಲೂ ಒಂದು ಅಡಿ ಮಂದಕ್ಕಾದರೂ ಮಣ್ಣನ್ನು ಹರವಬೇಕು. ಆಗ ನೊಣ. ಇಲಿಗಳ ಕಾಟ ತಪ್ಪಿ, ಕೆಟ್ಟವಾಸನೆ ಏಳದೆ ದೂಳಿಲ್ಲದಂತಿರುವುದು. ಕಸ ಜೈವಿಕವಾಗಿ ಚೆನ್ನಾಗಿ ಕೊಳೆತು, ವಾರದೊಳಗಾಗಿ ಒಳಗಿನ ಕಾವು ೬೦* ಸೆಂ. ಮಟ್ಟಕ್ಕ ಏರುವುದರಿಂದ ರೋಗಾಣುಗಳು ಸತ್ತು ಬೇಗನೆ ಗೊಬ್ಬರವಾಗುತ್ತದೆ. ಆಮೇಲೆ ೨-೩ ವಾರಗಳಲ್ಲಿ ಕಾವಿಳಿಯುತ್ತದೆ. ಸಾಮಾನ್ಯವಾಗಿ, ಪೂರಾ ಕೊಳೆತು ಒಣಗಿ ನಿರಪಾಯಕರ ಆಗಬೇಕಾದರೆ ಸುಮಾರು ೪-೬ ತಿಂಗಳು ಹಿಡಿಯುತ್ತವೆ. ೧೦,೦೦೦ ಜನರಿರುವ ಪಟ್ಟಣಕ್ಕೆ ಈ ವಿಧನಕ್ಕೆ ೧-೧.೫ ಎಕರೆಗಳಷ್ಟು ಜಾಗ ಬೇಕಾಗುತ್ತದೆ. ಇತ್ತೀಚೆಗೆ ಈ ಕೆಲಸಕ್ಕಾಗಿ ಬುಲ್ಡೋಜರುಗಳನ್ನು ಬಳಸುತ್ತಿದ್ದಾರೆ.

ಸುಟ್ಟುಬೂದಿಗೊಳಸುವಿಕೆ: ಕಸಕ್ಕೆ ಉರಿಯಿಕ್ಕಿ‍ ಬೂದಿಗೊಳಿಸುವುದು (ಇನ್ ಸಿನರೇಷನ್) ಎಲ್ಲಕ್ಕಿಂತಲೂ ಹೀಗೆ ಮಾಡಬಹುದು. ಆಸ್ಪತ್ರೆಯಲ್ಲಿ ರಾಶಿಬೀಳುವ ಕಸವಂತೂ ತೀರ ಹಾನಿಕರವಾದ್ದರಿಂದ ಇದು ಬಲು ಚೆನ್ನಾದ ಕ್ರಮ. ಎಷ್ಟೋ ಸೇನಾಶಿಬಿರಗಳಲ್ಲೂ ದೊಡ್ಡ ನಗರಗಳಲ್ಲೂ ಇದು ಜಾರಿಯಲ್ಲಿದೆ. ಸಾಕಷ್ಟು ನುಣ್ಣನೆಯ ಕಸ, ಧೂಳು ಇರುವುದರಿಂದ ಬೂದಿಗೊಳಿಸುವ ವಿಧಾನ ನಮ್ಮಲ್ಲಿ ಜನಪ್ರಿಯವಾಗಿಲ್ಲ. ಧೂಳನ್ನು ಮೊದಲು ಜರಡಿ ಹಿಡಿದರೆ ಮಾತ್ರ ಆಗಬಹುದು. ಹಾಗೆ ಮಾಡಲು ಖಚು೯ ಸಿಬ್ಬಂದಿ ಹೆಚ್ಚುವುದಲ್ಲದೆ ಉರಿವ ಒಲೆಯಲ್ಲೂ ತಿರುವುತ್ತಿರಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬೇಸಾಯಕ್ಕೆ ಗೊಬ್ಬರ ಇಲ್ಲವಾಗುತ್ತದೆ. ಆದ್ದರಿಂದ ಬರೀ ಖಚಿ೯ನ ಈ ವಿಧಾನ ನಮ್ಮಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಸುಟ್ಟುಬೂದಿಗೊಳಿಸಿದಾಗ ಕಸದ ತೂಕ ಮೊದಲಿನ ಕಾಲು ಭಾಗಕ್ಕೆ ಇಳಿಯುತ್ತದೆ. ಕೊನೆಗುಳಿದ ಕಿಟ್ಟವನ್ನು ರಸ್ತೆ ಕಾಮಗಾರಿಗೆ ಬಳಸಬಹುದು. ಪುಡಿಮಾಡಿ ಸುಣ್ಣದೊಂದಿಗೆ ಸೇರಿಸಿ ಕಲ್ಲುಗಾರೆ ಮಾಡಬಹುದು.

ಸುಟ್ಟುಬೂದಿಗೊಳಿಸುವ ದೊಡ್ಡ ಒಲೆಗಳಲ್ಲಿ ಹಲವು ಬಗೆಗಳಿವೆ. ಅವುಗಳಲ್ಲಿ ಉರಿ ಇಟ್ಟಿಗೆಗಳಿಂದ ಕಟ್ಟಿರುವ ಒಲೆ, ಪಕ್ಕದಿಂದ ಕಸವನ್ನು ಒಳಕ್ಕೆ ಸುರಿವ ಕಂಡಿಗಳು,ಹೊಗೆ ಹೋಗಲು ನೇರವಾದ ಎತ್ತರದ ಕೊಳವೆ, ಬೂದಿ ಕೆಳಕ್ಕೆ ಬೀಳುವಂತೆ ಜಾಲರಿ, ಕೆಳಗೆ ಬಿದ್ದ ಬೂದಿಯನ್ನು ಹೊರಗೆಳೆವ ಕಂಡಿ ಇರುತ್ತವೆ. ಮುಖ್ಯವಾಗಿ, ಸರಾಗವಾಗಿ ಒಳಕ್ಕೆ ಗಾಳಿತೂರಿ ಹೊಗೆಯೇಳದಂತೆ ಎಲ್ಲವೂ ಉರಿದುಹೋಗುವಂತಿರಬೇಕು. ಒಳಗಿನ ಉರಿಯ ಕಾವು ೬೭೫' ಸೆಂ. ಗಿಂತಲೂ ಹೆಚ್ಚಿದ್ದರೆ ಮಾತ್ರ ಹಾಗಾಗುತ್ತದೆ.

ಕಾಂಪೋಸ್ಟ ಗೊಬ್ಬರ: ಬರಿಯ ಕಸವನ್ನೋ, ಮಲಮೂತ್ರ ಇಲ್ಲವೇ ರೊಚ್ಚನ್ನು ಕೂಡಿಸಿಯೋ ವಿಲೇವಾರಿ ಮಾಡುವ ಜೈವಿಕ ವಿಧಾನವೆದು. ಏಕಾಣು ಜೀವಿಗಳ ಚಟುವಟಿಕೆಯಿಂದ ಜೈವಿಕ ವಸ್ತುಗಳು ಒಡೆಯುವುದರಿಂದ ನೆಲಕ್ಕೆ ಸಾರ ವತ್ತಾದ, ಹಾನಿಕರವಲ್ಲದ, ವಾಸನೆಯಿಲ್ಲದ ಗೊಬ್ಬರ ಒದಗುತ್ತದೆ ಕಾಂಪೋಸ್ಟಗೊಬ್ಬರ ತಯಾರಿಸಲು ೩ ವಿಧಾನಗಳಿವೆ.

ನೊಣದ ಹಾವಳಿ, ತಿರೊವಿಹಾಕಿದಾಗ ಕಾವಿನ ಇಳಿತ, ಸಿಬ್ಬಂದಿಯ ದುಬಾರಿ ವೆಚ್ಚ ಹಚ್ಚುವುದರಿಂದ ಹಳೆಯ ಇಂದೋರಿನ ವಿಧಾನ ಈಗ ಎಲ್ಲೂ ಜಾರಿಯಲ್ಲಿಲ್ಲ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭಾರತೀಯ ಬೇಸಾಯದ ಸಂಶೋಧನ ಸಂಸ್ಥೆಯ ವತಿಯಿಂದ ನಡೆಸಿದ ಶೋಧನೆಗಳಿಂದ ಗಾಳಿಗೊಡ್ಡಿಯೋ ಗಾಳಿಗೊಡ್ಡದೆಯೋ ಕಾಂಪೋಸ್ಟ ಗೋಬ್ಬರ ತಯಾರಿಸುವ ಬೆಂಹಳೂರು ವಿಧಾನ ಪಟ್ಟಣಗಳ ಕಸ, ಮಲಮೂತ್ರಗಳ ವಿಲೇವಾರಿಗೆ ಒಳ್ಳೆಯದು. ಇದು ಚೆನ್ನಾಗಿ ಆಗಬೇಕಾದರೆ, ಕಸದಲ್ಲಿ ಸಾಕಷ್ಟು ಸಾರಜನಕ, ರಂಜಕಲವಣಗಳು ಇರಲೇಬೀಕು. ಚೆನ್ನಾಗಿ ಕಾಂಪೋಸ್ಟಗೊಬ್ಬರ ಆಗುವಂತೆ ಸಗಣಿ ಗಂಜಳಗಳನ್ನು ಹಾಕಬೇಕು. ಇದಕ್ಕೆ ಬಿಸಿ ಹುದುಗೇಳಿಸುವ ಕ್ರಿಯಾಗತಿ ಎಂದು ಹೆಸರಾದೆ. ಕಸದ ಪ್ರಮಾಣಕೆ ತಕ್ಕಂತೆ ೩' ಆಳ, ೫'-೮' ಅಗಲ, ೧೫'-೩೦' ಉದ್ದದ ಗುಂಡಿಗಳನ್ನು ತೊಡಬೀಕು. ಕೊಳೆಯುವುದು ತಡವಾಗುವುದರಿಂದ, ೩'ಗೂ ಆಳ ಮೀರಿ ಅಗೆಯಬಾರದು. ಗುಂಡಿಗಳು ಊರಿಗೆ ಆರೆ ಮೇಲಿ ಆಚೆಯಾದರೂ ಇರಬೇಕು. ಅಗಳಿನ ತಳದಲ್ಲಿ ಅಧ೯ ಅಡಿ ದಪ್ಪಕ್ಕೆ ಕಸವನ್ನು ಮೊದಲು ಹರಡಬೇಕು. ಇದರ ಮೇಲೆ, ಸುಮಾರು ೨" ದಪ್ಪಕ್ಕೆ ಮಲವನ್ನೂ ಹಾಕಬೇಕು. ಆಮೇಲೆ, ಹೀಗೇ ಕಸ, ಮಲಗಳನ್ನು ಅಷ್ಟೇ ಮಮದದ ಪದರಗಳನ್ನು, ನೆಲದ ಮಟ್ಟದ ಮೇಲುಗಡೆ ಅಡಿ ಎತ್ತರಕ್ಕೆ ಬರೊವ ತನಕ ಹಾಕುತ್ತ ಹೋಗಬೇಕು. ಕೊನೆಯ ೯" ದಪ್ಪದ ಪದರ ಕಸದ್ದಾಗಿರಬೇಕು. ಅಗೆದು ರಾಸಿ ಬಿದ್ದಿರೊವ ಮಣ್ಣನ್ನು ಇದರಮೇಲೆ ಹಾಕಿ ಮುಚ್ಚಬೇಕು. ಇಷ್ಟೆಲ್ಲ ಸರಿಯಾಗಿ ಮಾಡಿದರೆ, ಇದರಮೇಲೆ ಯಾರಾದರೂ ಓಡಾಡಿದರೆ ಕಾಲುಗಳು ಹೊತುಹೋಗವು. ವಾರದೊಳಗಾಗಿ ಏಕಾಣುಜೀವಿಗಳ ಚಟುವಟಿಕೆಯಿಂದ ಈ ಕಾಂಪೋಸ್ಟಗೊಬ್ಬರದ ಒಳಗಿನ ಕಾವು ೬೦' ಸೆಂ.ಗೆ ಏರಿ ೨-೩ ವಾರಗಳೂ ಹಾಗೇ ಇರುವುದರಿಂದ ಕಸವೂ ಮಲವೂ ಕೊಳೆತು ಎಲ್ಲ ರೋಗಾಣುಗಳೂ ಪರಪಿಂಡಿ ಜೀವಿಗಳೂ ಸಾಯುತ್ತವೆ. ನಾಲ್ಕಾರು ತಿಂಗಳಲ್ಲಿ ಪೂರಾ ಕೊಳೆತು ನೇರವಾಗಿ ಜಮೀನಿಗೆ ಹಾಕಲು ಬರುವ ವಾಸನೆಯಿಲ್ಲದ ಹಾನಿಕರವಲ್ಲದ ಒಳ್ಳೆಯ ಗೊಬ್ಬರದ ಪುಡಿಯಾಗಿರುವುದು.ಲಕ್ಷ ಜನರಿಗೂ ಹೆಚ್ಚಾಗಿರುವ ನಗರಗಳಿಗೆ ಈ ವಿಧಾನ ತರವಲ್ಲ.ದೊಡ್ಡ ಪುರಸಭೆಗಳು ಮಾತ್ರ ಮಲ ಮೂತ್ರಾದಿಗಳನ್ನು ಹೊರಸಾಗಿಸಲು ಒಳಚರಂಡಿ ಏಪಾ೯ಡು ಮಾಡುವುದೇ ಸರಿ.

ಯಂತ್ರದ ನೆರವಿನಿಂದ ಕಾಂಪೋಸ್ಟ ಗೊಬ್ಬರವನ್ನು ಬೇಗನೆ ತಯಾರಿಸುವ ವಿಧಾನ ಹೆಚ್ಚಾಗಿ ಜಾರಿಗೆ ಬರುತ್ತಿದೆ.ದೊಡ್ಡ ಪ್ರಮಾಣಗಳಲ್ಲಿ ಕಚ್ಚಾವಸ್ತುಗಳನ್ನು ಪುಡಿಮಾಡಿ ವಿಂಗಡಿಸಿ ಉತ್ಪನ್ನವನ್ನು ತಯಾರಿಸಿ ಪಡೆವ ವಿಧಾನವಿದು. ಅರೆದು ಪುಡಿಮಾಡುವಾಗ ಅಡ್ಡಿಬರುವ ಚಿಂದಿಬಟ್ಟೆ, ಮೂಳೆ, ಲೋಹ, ಗಾಜು ಮುಂತಾದವನ್ನು ಮೊದಲು ಕಸದಿಂದ ಬೇಪ೯ಡಿಸಬೇಕು. ಉಳಿದುದನ್ನು ೨" ಮೀರದ ದಪ್ಪದ ಚೂರುಗಳಾಗಿ ಯಂತ್ರ ಪುಡಿಮಾಡುತ್ತದೆ. ಕಚರ, ರೊಚ್ಚು, ರಾಡಿ ಇಲ್ಲವೇ ಮಲಮೂತ್ರಗಳೊಂದಿಗೆ ತಿರುಗುವ ಯಂತ್ರದಲ್ಲಿ ಪುಡಿಮಾಡಿದ್ದನ್ನು ಬೆರಸಿ ಕಾವಿನಲ್ಲಿಡಬೇಕು. ಇಲ್ಲಿ ಇಂಗಾಲದ ಪ್ರಮಾಣ, ಕಾವು, ತೇವ, ಕ್ಷಾರಾಮ್ಲಾಂಕ, ಗಾಳಿಗೊಡ್ಡಿಕೆ ಇವನ್ನು ಚೆನ್ನಾಗಿ ಗಮನವೆಟ್ಟು ಹತೋಟಿಯಲ್ಲಿರಿಸಬೇಕು. ನಾಲ್ಕಾರು ವಾರಗಳಲ್ಲೇ ಕಾಂಪೋಸ್ಟ ಗೊಬ್ಬರ ತಯಾರಾಗಿರುತ್ತದೆ. ಹಾಲೆಂಡು, ಜಮ೯ನಿ, ಇಸ್ರೇಲ್ ಮುಂತಾದ ಮುಂದುವರಿದ ಕೆಲವು ದೇಶಗಳಲ್ಲಿ ಈ ವಿಧಾನ ಜಾರಿಯಲ್ಲಿದೆ. ಭಾರತದಲ್ಲೂ ೫ ಲಕ್ಷಕ್ಕಿಂತ ಹೆಚ್ಚು ಜನರಿರುವ ಕೆಲವು ನಗರಗಳಲ್ಲಿ ಇದನ್ನು ಜಾರಿಗೆ ತರುವ ಯೋಜನೆಯಿದೆ.

೫ ಗೊಬ್ಬರದ ಗುಂಡಿಗಳು: ಭಾರತದ ಹಳ್ಳಿಗಳಲ್ಲಿ ಕಸವನ್ನು ಎತ್ತಿ ಸಾಗಿಸಿ ವಿಲೇವಾರಿ ಮಾಡುವ ಬೇರೆ ಏಪಾ೯ಡುಗಳಿಲ್ಲ. ಮನೆಗಳ ಸುತ್ತಮುತ್ತಲೂ ಎಲ್ಲೆಂದರಲ್ಲಿ ಕಸವನ್ನು ಚೆಲ್ಲುವುದರಿಂದ ಜಮೀನು ಬಹಳ ಕೆಡುತ್ತದೆ. ಒಂದೊಂದು ಮನೆಯವರೂ ಗೊಬ್ಬರದ ಗುಂಡಿಯಗಳನ್ನು ತೋಡಿ ಕಸಹಾಕುವುದರಿಂದ ಹಳ್ಳಿಗಳ ಈ ಕೆಡುಕಿನ ಗಲೀಜನ್ನು ತಪ್ಪಿಸಬಹುದು. ಕಲಗಚ್ಚು, ಅಡುಗೆಮನೆರೊಚ್ಚು, ಗಲೀಜು, ಸಗಣಿ, ಹುಲ್ಲು, ಸೊಪ್ಪುಸದೆ, ಕಡ್ಡಿಗಳನ್ನು ಗುಂಡಿಗಳೊಳಕ್ಕೆ ಹಾಕಿದ ಮೇಲೆ ದಿನವೂ ಮಣ್ಣಿನಿಂದ ಮುಚ್ಚಬೇಕು. ಒಂದನ್ನು ಹಾಗೆ ಮುಚ್ಚಿಹಾಕಿರುವಾಗ ಇನ್ನೊಂದನ್ನು ಬಳಸುವಂತೆ, ಎರಡು ಗುಂಡಿಗಳಿದ್ದರೆ ಅನುಕೂಲ. ಐದಾರು ತಿಂಗಳಲ್ಲಿ ಒಳ‍್ಳೆಯ ಗೊಬ್ಬರ ತಯಾರಾಗಿರುತ್ತದೆ. ಹಳ್ಳಿಗಳಲ್ಲಿ ಈ ವಿಧಾನ ಪರಿಣಾಮಕಾರಿ, ಅಲ್ಲದೆ ಸರಳ ಎನ್ನಬಹುದು. ಅಬಾಸಗಣಿಯನ್ನು ಒಂದು ಮುಚ್ಚು ಗುಂಡಿಯಲ್ಲಿ ಮುಚ್ಚಿಟ್ಟು ಕೊಳೆಯಿಸುವುದರಿಂದ ಏಳುವ ಅನಿಲದಿಂದ(ಗೋಬರ್ ಗ್ಯಾಸ್) ಮನೆಯ ದೀಪ, ಒಲೆಗಳನ್ನು ಉರಿಸಬರುವುದೇ ಅಲ್ಲದೇ ಕೊನೆಗೆ ಹಸನಾದ ಗೊಬ್ಬರವೂ ದೊರೆಯುತ್ತದೆ.

೬ ನೀರಿನಲ್ಲ ಸುರಿತ:ಕೆರೆ,ಕುಂಟೆ,ಕೊಳಗಳಲ್ಲಾಗಲೀ ಸಣ್ಣ ಹೊಳೆ,ನದಿಗಳಲ್ಲಾಗಲೀ ಊರಿನ ಕಸವನ್ನು ಸುರಿಯಲೇಬಾರದು.ಅದು ಕೊಳೆತು ನಾರುತ್ತ ಗಲೀಜಿಗೆ ಕಾರಣವಾಗುವುದು.ಬೆಗನೆ ದೂರ ಸಾಗುವಂತಿದ್ದು ಅದರಿಂದ ಕೆಟ್ಟ ವಾಸನೆ ನಗರದೊಳಕ್ಕೆ ಬಾರದಿದ್ದಲ್ಲ ಮಾತ್ರ ಸಮುದ್ರ,ದೊಡ್ಡ ನದಿಗಳ ದಧದಲ್ಲರುವ ನಗರದೊಳಕ್ಕೆ ಬಾರದಿದ್ದಲ್ಲಿ ಮಾತ್ರ ಸಮುದ್ರ, ದೊಡ್ಡ ನದಿಗಳ ದಡದಲ್ಲಿರುವ ನಗರಗಳ ಕಸವನ್ನು ಹರಿದ ನೀರಿಗೆ ಸುರಿದು ಚೆಲ್ಲಬಹುದು.

ಕಸದ ಸಾಗಣೆ ಚೇನ್ನಾಗಿರಬೇಕಾದರೆ ಜನರ ತಿಳಿವಳಿಕೆಯೂ ಚೆನ್ನಾಗಿರಬೇಕು. ತಮ್ಮ ಮನೆಗಳ ಹೊರತಾಗಿ ಆಚಿನ ಪರಿಸರದ ಚೊಕ್ಕತನಕ್ಕೆ ಗಮನ ಹರಿಸುವುದರಲ್ಲಿ ಯಾರಿಗೂ ಆಸಕ್ತಿ ಇರದು. ಅಲ್ಲದೆ, ನಗರಸಭೆಗಳೂ ಕಡಿಮೆ ಖಚಿ೯ನಲ್ಲಿ ಕಸ ಸಾಗಣೆ ಉಪಾಯಗಳನ್ನೇ ಹಿಡಿದಿರುವುದರಿಂದ, ಆರೋಗ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ನಗರ ತಿಳಿವಳಿಕೆಗಾಗಿ ಎಡೆಬಿಡದ ಪ್ರಚಾರ ನಡೆಯುತ್ತಿರಬೇಕು. (ಡಿ.ಎಸ್.ಎಸ್)

ಕಸಾಯಿ ಖಾನೆ: ಮಾಂಸಾಹಾರ ಒದಗಿಸಲು ಪ್ರಾಣಿಗಳನ್ನು ವಧೆಮಾಡುವ ಮನೆ(ಸ್ಲಾಟರ್ ಹೌಸ್). ಇದು ಸಾಮಾನ್ಯವಾಗಿ ಊರ ಹೊರಗೆ ಇರುತ್ತದೆ. ಇಂಥ ಅಬಾಟ್ವಾರ್ ಎಂಬ ಹೆಸರು ರೂಢಿಯಲ್ಲಿದೆ. ಇಂದಿನ ಕಸಾಯಿ ಖಾನೆಯಲ್ಲಿ ಪ್ರಾಣಿಗಳ ವಧೆಗೆ ಬೇಕಾದ ಆಧುನಿಕ ಉಪಕರಣಗಳನ್ನು ಜೋಡಿಸಿರುತ್ತಾರೆ. ಮಧ್ಯದ ಹಜಾರಿನಲ್ಲಿ ಪ್ರಾಣಿಗಳ ಮುಂಡವನ್ನು ತೂಗುಹಾಕಿ ಅದರಿಂದ ಮಾಂಸವನ್ನು ಬೇಪ೯ಡಿಸುವ ಉಪಕರಣಗಳನ್ನು ಸಜ್ಜು ಮಾಡಿರುತ್ತಾರೆ. ಅದರ ಎದುರು ಭಾಗದಲ್ಲಿ ಶೀತಳ ಗೂಡುಗಳಿರುತ್ತವೆ. ಇವುಗಳಲ್ಲಿ ಮಾಂಸವನ್ನು ದಾಸ್ತಾನು ಮಾಡಿ ಹದ ಮಾಡುತ್ತಾರೆ. ಈ ಹಜಾರದಲ್ಲಿ ಒಂದು ಬಾಗಿಲು ಮಾರುಕಟ್ಟೆಯಿಂದ ತಂದ ಧನಗಳ ದೊಡ್ಡಿಗೆ ಹೋಗುತ್ತದೆ. ಖಸಾಯಿ ಖಾನೆಯ ನೆಲ ಎಲ್ಲೆಡೆಯಲ್ಲೂ ನೀರು ಇಂಗದಂತೆ ಹಸನಾಗಿರಬೇಕು.